Monday, February 16, 2026
Monday, February 16, 2026
Home Blog Page 1735

ಬಾಯಿ ಕ್ಯಾನ್ಸರ್ ಕಾರಕ 114 ವಂಶವಾಹಿ ಪತ್ತೆ

0

ನಗರದಲ್ಲಿರುವ ಸರ್ಕಾರಿ ನೇತೃತ್ವದ ಐಬ್ಯಾಬ್ ಸಂಸ್ಥೆಯು ಎಚ್.ಸಿ.ಜಿ. ವೈದ್ಯತಜ್ಞರ ಸಹಯೋಗದಲ್ಲಿ ಮಹತ್ವದ ಸಂಶೋಧನೆ ನಡೆಸಿ ಬಾಯಿಯ ಕ್ಯಾನ್ಸರ್ ಗೆ ಕಾರಣವಾಗುವ 114 ವಂಶವಾಹಿನಿ ರೂಪಾಂತರಗಳನ್ನು ಪತ್ತೆಹಚ್ಚಲಾಗಿದೆ. ಇದರಿಂದ ಬಾಧಿತರು ಬದುಕುಳಿಯುವ ಸಾಧ್ಯತೆಯನ್ನು ಶೇ 90ರಷ್ಟು ನಿಖರತೆಯೊಂದಿಗೆ ಊಹಿಸುವ ಜೊತೆಗೆ ಪರಿಣಾಮಕಾರಿ ನಿರ್ದಿಷ್ಟ ಜೀವಕೋಶ ಕೇಂದ್ರಿತ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗಲಿದೆ.

ವಿಶ್ವ ಕ್ಯಾನ್ಸರ್ ಜಾಗೃತಿ ದಿನವಾದ ಶುಕ್ರವಾರ ವಿಧಾನಸೌಧದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು, ಜಿನೋಮಿಕ್ಸ್ (ವಂಶವಾಹಿನಿ ಅನುಕ್ರಮಣಿಕೆ ವಿಶ್ಲೇಷಣೆ) ಆಧಾರಿತವಾಗಿ ನಡೆದಿರುವ ಈ ಸಂಶೋಧನೆಯು ಬಾಯಿ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಪಟ್ಟಂತೆ ಹೊಸ ಆಶಾಕಿರಣಗಳನ್ನು ಮೂಡಿಸಿದೆ ಎಂದರು.

ಐಟಿ/ಬಿಟಿ ಇಲಾಖೆಯಿಂದ ಸ್ಥಾಪಿತವಾಗಿರುವ ‘ಐಬ್ಯಾಬ್’ನಲ್ಲಿರುವ (ಇನ್ಸ್ ಟಿಟ್ಯೂಟ್ ಆಫ್ ಬಯೋಇನ್ಫರ್ಮ್ಯಾಟಿಕ್ಸ್ ಅಂಡ್ ಅಪ್ಲೈಡ್ ಬಯೋಟೆಕ್ನಾಲಜಿ- ಜೈವಿಕ ಚಹರೆಗಳು ಮತ್ತು ಆನ್ವಯಿಕ ಜೈವಿತ ತಂತ್ರಜ್ಞಾನ ಸಂಸ್ಥೆ) ಅತ್ಯಾಧುನಿಕ ಜೀನೋಮಿಕ್ಸ್ ವ್ಯವಸ್ಥೆ ಬಳಸಿ ನಡೆಸಿದ ಸಂಶೋಧನೆ ಇದಾಗಿದೆ. ಇದರ ಜೊತೆಗೆ ಸುಧಾರಿತ ಮಷೀನ್ ಲರ್ನಿಂಗ್ ಮತ್ತು ಬಯೋಇನ್ಫರ್ಮ್ಯಾಟಿಕ್ಸ್ ಉಪಯೋಗಿಸಿಕೊಂಡು ಈ ಅಧ್ಯಯನ ನಡೆದಿದೆ ಎಂದು ಸಚಿವರು ವಿವರಿಸಿದರು.

ನಮ್ಮ ದೇಶದಲ್ಲಿ ಬಾಯಿಯ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾಗಿದ್ದರೂ ( ಒಟ್ಟಾರೆ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 30ರಷ್ಟು) ಭಾರತದ ರೋಗಿಗಳನ್ನೇ ಆಯ್ಕೆ ಮಾಡಿಕೊಂಡು ನಡೆಸಲಾಗಿರುವ ಮೊತ್ತಮೊದಲ ವಿಸ್ತೃತ ಅಧ್ಯಯನ ಇದಾಗಿದೆ. ಇದೇ ವೇಳೆ, ಈ ಅಧ್ಯಯನದ ದತ್ತಾಂಶಗಳನ್ನು ಪಾಶ್ಚಿಮಾತ್ಯ ವಂಶವಾಹಿ ಅಧ್ಯಯನಗಳ ಜೊತೆ ತುಲನೆ ಮಾಡಿ ವಿಶ್ಲೇಷಿಸಲಾಗಿದೆ. ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳು ಈ ಸಂಶೋಧನೆಯ ಬಗ್ಗೆ ಒಳ್ಳೆಯ ಮಾತುಗಳನ್ನಾಡಿವೆ. ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕೆಯಲ್ಲಿ ಈ ಕುರಿತು ಅಧ್ಯಯನ ವರದಿ ಪ್ರಕಟಗೊಂಡಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಬಾಯಿಯ ಕ್ಯಾನ್ಸರ್ ಗೆ ಕಾರಣವಾಗುವ 114 ವಂಶವಾಹಿನಿ ರೂಪಾಂತರಗಳ ಪೈಕಿ 35 ರೂಪಾಂತರಗಳು ಆಂಕೋಜೀನ್ ಗಳಾದರೆ, 11 ಟ್ಯೂಮರ್ ಸಪ್ರೆಸರ್ ಗಳಾಗಿದ್ದು, 2 ಡಿಎನ್ಎ ದುರಸ್ತಿ ವಂಶವಾಹಿನಿಗಳಾಗಿವೆ ಎಂಬುದನ್ನು ಗುರುತಿಸಲಾಗಿದೆ. ಈ ಅಧ್ಯಯನದಲ್ಲಿ ಕ್ಯಾನ್ಸರ್ ಬಾಧೆಯಿಂದ ಬದುಕುಳಿಯುವ ಸಾಧ್ಯತೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪ್ರಮುಖ ವಂಶವಾಹಿನಿಗಳನ್ನು ಕೂಡ ಗುರುತಿಸಲಾಗಿದೆ ಎಂದರು.

ಈ ಸಂಶೋಧನೆಯಲ್ಲಿ IRAK1 ವಂಶವಾಹಿನಿಯ ಹೊಸ ರೂಪಾಂತರವನ್ನು ಪತ್ತೆಹಚ್ಚಲಾಗಿದೆ. ಇದು ಪರಿಣಾಮಕಾರಿಯಾದ ನಿರ್ದಿಷ್ಟ ಜೀವಕೋಶ ಕೇಂದ್ರಿತ ಚಿಕಿತ್ಸೆಗೆ ಅನುವು ಮಾಡಿಕೊಡಲಿದೆ. ಇದಕ್ಕಾಗಿ ಔಷಧ ಕಂಪನಿಗಳೊಂದಿಗೆ ಸಹಭಾಗಿತ್ವ ಸಾಧಿಸುವ ಆಲೋಚನೆಗಳು ನಡೆದಿವೆ. ಇದು ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಕರ್ನಾಟಕ ರಾಜ್ಯದ ಮಹತ್ವದ ಕೊಡುಗೆಗೆ ಕಾರಣವಾಗುವ ಸಾಧ್ಯತೆಗಳಿವೆ. ಕ್ಯಾನ್ಸರ್ ವಂಶವಾಹಿನಿ ಅನುಕ್ರಮಣಿಕೆಗೆ ಕುರಿತಾದ ರಹಸ್ಯವನ್ನು ಬೇಧಿಸುವ ಮೂಲಕ ಜನರ ಜೀವ ಉಳಿಸಲು ಸಹಕಾರಿಯಾಗಲಿದೆ ಎಂದರು.

ಎಚ್.ಸಿ.ಜಿ. ಕ್ಯಾನ್ಸರ್ ಕೇಂದ್ರದ ಡೀನ್ ಡಾ.ವಿಶಾಲ್ ರಾವ್ ಅವರು ಮಾತನಾಡಿ, ಸರ್ಕಾರದ ನೆರವು ಇಲ್ಲದೆ ಕೇವಲ ಖಾಸಗಿ ಆಸ್ಪತ್ರೆಗಳು ಮಾತ್ರವೇ ಇಂತಹ ದೊಡ್ಡಮಟ್ಟದ ಸಂಶೋಧನೆಯನ್ನು ನಡೆಸಲು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರವು ಐಬ್ಯಾಬ್ ಮೂಲಕ ಚಿಕಿತ್ಸಕರು ಹಾಗೂ ಸಂಶೋಧಕರು ಒಂದೆಡೆ ಸೇರಿ ಅಧ್ಯಯನದಲ್ಲಿ ಪಾಲ್ಗೊಳ್ಳಲು ಅನುಕೂಲ ಮಾಡಿಕೊಟ್ಟಿದ್ದರಿಂದ ಈ ಮಹತ್ವದ ಸಂಶೋಧನೆ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಇದುವರೆಗೆ ಬಾಯಿ ಕ್ಯಾನ್ಸರ್ ಗೆ ಎಷ್ಟೇ ಉತ್ತಮ ಚಿಕಿತ್ಸೆ ಕೊಟ್ಟರೂ ಶೇ 50ರಷ್ಟು ಪ್ರಕರಣಗಳಲ್ಲಿ ರೋಗ ಮರುಕಳಿಸುತ್ತಿತ್ತು. ಆದರೆ ಈ ಸಂಶೋಧನೆಯು ರೋಗ ಮರುಕಳಿಸಿದಂತೆ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಐಬ್ಯಾಬ್ ನ ಪ್ರೊಫೆಸರ್ ವಿಭಾ ಚೌಧರಿ ಹೇಳಿದರು.

ಎಚ್.ಸಿ.ಜಿ.ಯ ಡಾ.ಆನಂದ್ ಸುಭಾಷ್, ವಂಶವಾಹಿನಿ ಅಧ್ಯಯನ ತಜ್ಞ ಡಾ.ಸತೀಶ್ ಕುಣಿಗಲ್, ಸಮಾಲೋಚಕ ಬಾಲಸುಬ್ರಮಣ್ಯಂ, ಡಾ.ಸಾಗರ್ , ಐಟಿ/ಬಿಟಿ ಇಲಾಖೆಯ ಪ್ರಧಾನ ವ್ಯವಸ್ಥಾಪಕಿ ಡಾ.ಕೃಪಾಲಿನಿ ಮತ್ತಿತರರು ಹಾಜರಿದ್ದರು.

ಅಲೆಕ್ಸ್ ಕ್ರೂಜ್ಏರ್ ಇಂಡಿಯಾ ಸಿಇಓ

0

ಇತ್ತೀಚಿಗೆ ಟಾಟಾ ಅಂಗಳಕ್ಕೆ ಮರಳಿರುವ ಏರ್ ಇಂಡಿಯಾದ ನೂತನ ಸಿಇಒ ಆಗಿ ಬ್ರಿಟಿಷ್ ಏರ್ ವೇಸ್ ನ ಮಾಜಿ ಸಿಇಸಿ ಮತ್ತು ಅಧ್ಯಕ್ಷರಾದ ಅಲೆಕ್ಸ್ ಕ್ರೂಜ್ ನೇಮಕವಾಗುವ ಸಾಧ್ಯತೆ ಇದೆ. ಅಲೆಕ್ಸ್ ಕ್ರೂಜ್ ಅವರು ಕಡಿಮೆ ದರದ ಏರ್ ಲೈನ್ಸ್ ನಿರ್ವಹಣೆಯಲ್ಲಿ ಪರಿಣತಿ ಸಾಧಿಸಿದ್ದಾರೆ. 2020 ರ ತನಕ 5 ವರ್ಷಗಳಲ್ಲಿ ಬ್ರಿಟಿಷ್ ಏರ್ ವೇಸ್ ನ ಸಿಇಓ ಆಗಿದ್ದರು. ಅದಕ್ಕೂ ಮುಂಚೆ ಸ್ಪಾನಿಷ್ ಮೂಲದ ಕಡಿಮೆ ವೆಚ್ಚದ ಏರ್ಲೈನ್ ಒಂದರ ಸಿಇಒ ಆಗಿದ್ದರು.

ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬ್ರಿಟಿಷ್ ಏರ್ ವೇಸ್ 2020ರ ಅಕ್ಟೋಬರ್ ತಿಂಗಳಿನಲ್ಲಿ 13,000 ಹುದ್ದೆಗಳನ್ನು ಕಡಿತಗೊಳಿಸಿತ್ತು. ಅದೇ ಸಂದರ್ಭದಲ್ಲಿ ಕ್ರೂಜ್ ಪದತ್ಯಾಗ ಮಾಡಿದ್ದರು. ಲಿಂಕ್ಡ್ ಇನ್ ಕಥೆ ಪ್ರಕಾರ ಅವರಿಗೆ ಒಬ್ಬ ಹೂಡಿಕೆದಾರ. ಅವರು ಐಇಎಸ್ಇ ಬಿಸಿನೆಸ್ ಸ್ಕೂಲ್ ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದರು. ಹೊಸ ತಂಡದ ಸಾರಥ್ಯ ವನ್ನು ಸ್ವತಃ ಗ್ರೂಪ್ ಅಧ್ಯಕ್ಷ ಎನ್. ಚಂದ್ರಶೇಖರನ್ ವಹಿಸುವ ಸಾಧ್ಯತೆ ಇದೆ.

ಏರ್ ಇಂಡಿಯಾದಲ್ಲಿ ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಒದಗಿಸುವುದು. ಸಕಾಲಕ್ಕೆ ವಿಮಾನಗಳ ಹಾರಾಟ, ನಷ್ಟವನ್ನು ಕಡಿಮೆ ಮಾಡುತ್ತಾ ಲಾಭದ ಹಳಿಗೆ ತರುವುದು ಮುಖ್ಯವಾಗಿದೆ.

ಟಾಟಾ ಸಮೂಹ ಈಗ ಏರ್ ಇಂಡಿಯಾ, ಏರ್ ಇಂಡಿಯ ಎಕ್ಸ್ಪ್ರೆಸ್, ವಿಸ್ತಾರ ಮತ್ತು ಏರ್ ಏಷ್ಯಾ ಇಂಡಿಯಾ ಏರ್ಲೈನ್ಸ್ ಸಂಸ್ಥೆಗಳನ್ನು ಹೊಂದಿದೆ. ಇದರಲ್ಲಿ ಒಂದನ್ನು ವಿಲೀನಗೊಳಿಸುವ ಸಾಧ್ಯತೆ ಇದೆ.

ಗಾಯಕ ಎಂ ವೆಂಕಟೇಶ್ ಕುಮಾರ್ ಅವರಿಗೆ ಕಾಳಿದಾಸ ಸಮ್ಮಾನ್

0

ಮಧ್ಯಪ್ರದೇಶ ಸರ್ಕಾರವು ನೀಡುವ ಪ್ರತಿಷ್ಠಿತ ‘ಕಾಳಿದಾಸ ಸಮ್ಮಾನ್’ ಪ್ರಶಸ್ತಿಗೆ ಖ್ಯಾತ ಹಿಂದೂಸ್ತಾನಿ ಸಂಗೀತ ಗಾಯಕ ಪಂ. ವೆಂಕಟೇಶ್ ಕುಮಾರ್ ಅವರು ಭಾಜನರಾಗಿದ್ದಾರೆ.

ಪಂ. ವೆಂಕಟೇಶ್ ಕುಮಾರ್ ಅವರು ಹಿಂದೂಸ್ತಾನಿ ಗಾಯನ ಮಾತ್ರವಲ್ಲದೆ, ಭಜನೆಗಳು ಕೀರ್ತನೆಗಳು ಹಾಗೂ ವಿಶೇಷವಾಗಿ ದಾಸರಪದ ಮತ್ತು ವಚನಗಳನ್ನು ಹಾಡುವ ಮೂಲಕ ಜನರಿಂದ ಸೈ ಎನಿಸಿಕೊಂಡಿದ್ದಾರೆ.

ಧಾರವಾಡದ ವಿಶ್ವವಿದ್ಯಾಲಯದಲ್ಲಿ ಸಂಗೀತ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ವೆಂಕಟೇಶ್ ಕುಮಾರ್ ಅವರು ಆಕಾಶವಾಣಿಯ ‘ಎ’ ಶ್ರೇಣಿಯ ಕಲಾವಿದರು ಆಗಿದ್ದಾರೆ. ದೇಶ ಮತ್ತು ವಿದೇಶಗಳಲ್ಲಿ ಪ್ರತಿಷ್ಠಿತ ಸಂಗೀತ ಮೇಳಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇವರದ್ದು.

ವೆಂಕಟೇಶ್ ಕುಮಾರ್ ಅವರ ಸಂಗೀತ ಸಾಧನೆಗೆ ಪದ್ಮಶ್ರೀ, ಸಂಗೀತ ಅಕಾಡೆಮಿ ಪುರಸ್ಕಾರಗಳು, ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಹಲವಾರು ಪುರಸ್ಕಾರಗಳು ಲಭಿಸಿವೆ.

ಕರ್ನಾಟಕದ ಟ್ಯಾಬ್ಲೋ ಗೆ ದ್ವಿತೀಯ ಬಹುಮಾನ

0

73 ನೇ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ವಿಷಯಾಧಾರಿತ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಎರಡನೇ ಬಹುಮಾನ ಲಭಿಸಿದೆ.

ಜನವರಿ 26ರಂದು ನಡೆದ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಅತ್ಯುತ್ತಮ ಸ್ತಬ್ಧಚಿತ್ರ ಮತ್ತು ಅತ್ಯುತ್ತಮ ಕವಾಯಿತು ಫಲಿತಾಂಶಗಳನ್ನು ಪ್ರಕಟಿಸಲಾಗಿದೆ. ಉತ್ತರಪ್ರದೇಶದ ಸ್ತಬ್ಧಚಿತ್ರಗಳು ಮೊದಲನೆ ಬಹುಮಾನ ಪಡೆದುಕೊಂಡಿದೆ. ಅತ್ಯುತ್ತಮ ಪೆರೇಡ್ ಮತ್ತು ಕವಾಯತ್ ವಿಜೇತರನ್ನು ತೀರ್ಮಾನಿಸಲು ಇದೇ ಮೊದಲ ಬಾರಿಗೆ ಆನ್ಲೈನ್ ಮೂಲಕ ಸಾರ್ವಜನಿಕರಿಂದ ಅಭಿಪ್ರಾಯವನ್ನು ಕೇಳಲಾಗಿತ್ತು. 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ವಿವಿಧ ಸಚಿವಾಲಯಗಳು ಹಾಗೂ ಸೇನಾಪಡೆಗಳ ಒಟ್ಟು 25 ಸ್ತಬ್ಧಚಿತ್ರಗಳನ್ನು ಪೆರೇಡ್ ನಲ್ಲಿ ಪ್ರದರ್ಶಿಸಲಾಗಿತ್ತು.

“ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿದ ಕರ್ನಾಟಕದ ಸ್ತಬ್ಧಚಿತ್ರ ‘ಸಾಂಪ್ರದಾಯಕ ಕರಕುಶಲ ವಸ್ತುಗಳ ತೊಟ್ಟಿಲು’ 2ನೇ ಸ್ಥಾನ ಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ. ಈ ಗೌರವ ನಮ್ಮೆಲ್ಲರನ್ನು ವೋಕಲ್ ಫಾರ್ ಲೋಕಲ್ ಆಗಲೂ ಪ್ರೇರೇಪಿಸಲಿ. ನಮ್ಮ ರಾಜ್ಯದ ಕರಕುಶಲ ಕರ್ಮಿಗಳಿಗೆ ಹೆಚ್ಚಿನ ಅವಕಾಶ ಸೃಷ್ಟಿಸಲಿ” ಎಂದು ಸಿಎಂ ಬೊಮ್ಮಾಯಿ ಅವರು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಕರಕುಶಲ ಅಭಿವೃದ್ಧಿ ನಿಗಮವು ಹಿರಿಯ ಕುಶಲಕರ್ಮಿ ಶಶಿಧರ ಅಡಪ ಅವರ ಮಾರ್ಗದರ್ಶನದಲ್ಲಿ ಈ ಬಾರಿಯ ರಾಜ್ಯದ ಸ್ತಬ್ಧಚಿತ್ರ ಸಿದ್ಧಗೊಳಿಸಿಗಿತ್ತು. ಈ ಸ್ತಬ್ಧಚಿತ್ರದಲ್ಲಿ ಕಾವೇರಿ ಎಂಪೋರಿಯಂನ ಆನೆ, ಉಡುಪಿಯ ಯಕ್ಷಗಾನ ಗೊಂಬೆಗಳು, ಬಿದಿರಿ ಕಲೆ, ನವಿಲಿನ ಮೂರ್ತಿ, ಬಾಗಿನ ಹಿಡಿದ ಕಮಲಾದೇವಿ ಚಟ್ಟೋಪಾಧ್ಯಾಯ, ಉಡುಪಿಯ ಉಪ್ಪುಂದದ ಯಕ್ಷಗಾನ ಗೊಂಬೆಗಳು ಹಾಗೂ ಕಿನ್ನಾಳ ಹುಡುಗಿ ಗೊಂಬೆಯನ್ನು ಒಳಗೊಂಡಿದೆ. ಸ್ತಬ್ಧಚಿತ್ರ ತಯಾರಿಕೆಯಲ್ಲಿ ಮೈಸೂರು ರೇಷ್ಮೆ, ಇಳಕಲ್ ಸೀರೆ, ಬಿದಿರು, ತಾಳೆ, ಬೆತ್ತ ಬಳಸಲಾಗಿತ್ತು.

‘ವಂದೇ ಭಾರತಂ’ ನೃತ್ಯ ತಂಡವು ವಿಶೇಷ ಬಹುಮಾನ ಪಡೆದಿದೆ. ಹುಬ್ಬಳ್ಳಿಯ ಮಯೂರ ಭರತ ನೃತ್ಯ ಅಕಾಡೆಮಿ ನೃತ್ಯ ಪಟುಗಳು ಈ ತಂಡದಲ್ಲಿ ಭಾಗವಹಿಸಿದ್ದರು.

“ಈ ಬಾರಿಯ ಗಣರಾಜ್ಯೋತ್ಸವದಲ್ಲಿ ರಾಜ್ಯದ ಸ್ತಬ್ಧಚಿತ್ರದಲ್ಲಿನ ಇಳಕಲ್ ಸೀರೆ ಕುರಿತಂತೆ ಕೆ-ಲೈವ್ ಮಾಧ್ಯಮವು ಇಳಕಲ್ ಸೀರೆಯ ತಯಾರಿಕೆಯ ವಿನ್ಯಾಸ ಕುರಿತಂತೆ ಯೂಟ್ಯೂಬ್ ವಿಶೇಷ ಕಾರ್ಯಕ್ರಮ” ನಿರ್ಮಿಸಿದ್ದನ್ನು ಸ್ಮರಿಸಬಹುದಾಗಿದೆ.

ಮೇಘಾಲಯದ ಮಹಿಳೆಯರ ಸಹಕಾರ ಸಂಘ ಹಾಗೂ ರಾಜ್ಯದ ಸುವರ್ಣ ಮಹೋತ್ಸವ ಸಂಭ್ರಮ ಬಿಂಬಿಸುವ ಸ್ತಬ್ಧಚಿತ್ರಕ್ಕೆ ತೃತೀಯ ಸ್ಥಾನ ಲಭಿಸಿದೆ.

ಕ್ಯಾನ್ಸರ್ ಗೆ ಜನೌಷಧ ಕೇಂದ್ರದಲ್ಲಿ ಔಷಧಿ ಲಭ್ಯ – ಸಿಎಂ ಬೊಮ್ಮಾಯಿ

0

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜ್ಯದ ಎಲ್ಲಾ ಪ್ರಾದೇಶಿಕ ವಲಯಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸಲಾಗುವುದು. ಜನೌಷಧ ಕೇಂದ್ರಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಔಷಧಿ ದೊರೆಯುವಂತೆ ಕ್ರಮಕೈಗೊಳ್ಳಲಾಗುವುದೆಂದು ಈ ವೇಳೆ ತಿಳಿಸಿದರು.

“ಕಿದ್ವಾಯಿ ಸಂಸ್ಥೆಯ ಆಧುನೀಕರಣಕ್ಕಾಗಿ 2 ಪೆಟ್ ಸ್ಕ್ಯಾನ್ ಮೆಷಿನ್ ಖರೀದಿಗೆ ಕ್ರಮಕೈಗೊಳ್ಳಲಾಗುತ್ತಿದೆ. ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚುವ ಪೆಟ್ ಸ್ಕ್ಯಾನ್ ಪರೀಕ್ಷೆ ಖಾಸಗಿ ಆಸ್ಪತ್ರೆಯಲ್ಲಿ 25,000 ರೂಂ. ಗಳವರೆಗೆ ವೆಚ್ಚವಾಗುತ್ತದೆ. ಬಡ ರೋಗಿಗಳಿಗೆ ಸಹಾಯ ಒದಗಿಸುವ ಉದ್ದೇಶದಿಂದ ಸರ್ಕಾರ ಈ ದುಬಾರಿ ಸ್ಕ್ಯಾನ್ ಸೌಲಭ್ಯವನ್ನು ಕೇವಲ 8ರಿಂದ 10 ಸಾವಿರದೊಳಗೆ ನೀಡಲು ತೀರ್ಮಾನಿಸಲಾಗಿದೆ” ಎಂದು ಸಿಎಂ ಬೊಮ್ಮಾಯಿ ಅವರು ತಿಳಿಸಿದರು.

“ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್ ಸೇರಿದಂತೆ ಯಾವುದೇ ರೀತಿಯ ಕ್ಯಾನ್ಸರ್ ಗೆ ಚಿಕಿತ್ಸೆ ಲಭ್ಯವಿದ್ದು, ಯಾರು ಧೃತಿಗೆಡಬೇಕಾಗಿಲ್ಲ. ಚಿಕಿತ್ಸೆ ನಂತರ ಆರೋಗ್ಯಕರ ಜೀವನ ನಡೆಸಬಹುದಾಗಿದೆ. ತಾಲೂಕು ಮಟ್ಟದ ಆಸ್ಪತ್ರೆಯಿಂದ ಹಿಡಿದು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಿಂದ ಒಂದು ವರ್ಷ ಕಾಲ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್ ನಿವಾರಣೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು” ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಹೇಳಿದರು.

ಸಿನಿಮಾ ಮತ್ತು ರಂಗಮಂದಿರ ಶೇ.100ರಷ್ಟು ಭರ್ತಿಗೆ ಅವಕಾಶ

0

ಚಿತ್ರಮಂದಿರ, ರಂಗಮಂದಿರ ಜಿಮ್ ,ಈಜುಕೊಳ ಸಾಮರ್ಥ್ಯಕ್ಕೆ ಶೇಕಡ 100ರಷ್ಟು ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪ್ರವೇಶದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಇಟ್ಟಿರಬೇಕು ಹಾಗೂ ಥರ್ಮಲ್ ಸ್ಕ್ಯಾನ್ ಮೂಲಕ ಪ್ರತಿಯೊಬ್ಬರಿಗೂ ಪರೀಕ್ಷೆ ಮಾಡಬೇಕು. ಎಲ್ಲ ವ್ಯಕ್ತಿಗಳು ಕಡ್ಡಾಯವಾಗಿ ಎನ್ -95 ಮಾಸ್ಕ್ ಧರಿಸಬೇಕು.
ಪ್ರದರ್ಶನದ ಸಮಯ ಸೇರಿದಂತೆ ಎಲ್ಲಾ ಸಮಯದಲ್ಲೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಎಂದು ಸರ್ಕಾರ ಸೂಚಿಸಿದೆ.

ಚಿತ್ರಮಂದಿರ, ರಂಗಮಂದಿರ, ಜಿಮ್, ಈಜುಕೊಳ ಇವುಗಳ ಸಾಮರ್ಥ್ಯವನ್ನು ಶೇ.50ರಷ್ಟು ಬಳಕೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಈಗ ಇಲ್ಲಿಗೆ ಹೋಗುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕೆಂದು ಸೂಚಿಸಲಾಗಿದೆ.

ಪ್ರತಿ ಪ್ರದರ್ಶನದ ನಂತರ ಸಭಾಂಗಣ ಮತ್ತು ವಿಶ್ರಾಂತಿ ಕೊಠಡಿಗಳನ್ನು ಸ್ವಚ್ಛಗೊಳಿಸಬೇಕು.
ಕೋವಿಡ್ ಮಾರ್ಗಸೂಚಿಯನ್ವಯ ಎಸಿ ಬಳಸಬೇಕೆಂದು ತಿಳಿಸಲಾಗಿದೆ. ಜಿಮ್, ಯೋಗ, ಮತ್ತು ಈಜು ಕೇಂದ್ರದಲ್ಲಿ ಪ್ರತಿಯೊಬ್ಬರ ನಡುವೆ ಆರು ಅಡಿ ಭೌತಿಕ ಅಂತರ ಕಾಯ್ದುಕೊಳ್ಳಬೇಕು. ಪ್ರತಿ ಬ್ಯಾಚ್ ಮುಗಿದ ನಂತರ ವಿಶ್ರಾಂತಿ ಕೊಠಡಿಯನ್ನು ಸ್ವಚ್ಛಗೊಳಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಸಂಘಟಕರು ಈ ಎಲ್ಲದರ ಮೇಲ್ವಿಚಾರಣೆ ನಡೆಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಕನ್ನಡದ ಪ್ರಥಮ ರಾಜಮನೆತನದ ಶಾಸನ ಸೊರಬ ತಲಗುಂದದಲ್ಲಿ ಪತ್ತೆ

0

ಶಿವಮೊಗ್ಗದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಆರ್ ಶೇಜೇಶ್ವರ ಮತ್ತು ಚುರ್ಚಿಗುಂಡಿ ಮಂಜಪ್ಪ ಅವರು ಸೊರಬ ತಾಲೂಕಿನ ತಲಗುಂದ ಗ್ರಾಮದಲ್ಲಿ ಕ್ಷೇತ್ರ ಕಾರ್ಯ ಕೈಗೊಂಡಿದ್ದರು.

ಪ್ರಸ್ತುತ ಊರಿನ ಈಶ್ವರ ದೇವಾಲಯದ ಆವರಣದಲ್ಲಿ ಕರ್ನಾಟಕವನ್ನು ಆಳಿದ ರಾಜ್ಯದ ಪ್ರಥಮ ಕನ್ನಡ ಮನೆತನವಾದ ಕದಂಬ ಅರಸರ ರವಿವರ್ಮನ ಕಾಲದ ಶಾಸನವು ಪತ್ತೆಯಾಗಿದೆ.

ಕಲ್ಲಿನ ಮೇಲಿರುವ ಶಾಸನವು 143 ಸೆಂ.ಮೀ ಉದ್ದ ಹಾಗೂ 49 ಸೆಂ.ಮೀ ಅಗಲವಿದ್ದು, ಬ್ರಾಹ್ಮಿ ಲಿಪಿ ಹಾಗೂ ಸಂಸ್ಕೃತ ಬಾಷೆಯ ಏಳು ಸಾಲಿನಿಂದ ಕೂಡಿದೆ.
ಶಾಸನವು ಅಲ್ಲಲ್ಲಿ ಸ್ವಲ್ಪ ಮಸುಕಾಗಿದೆ.
ಬನವಾಸಿ ಕದಂಬರ ರವಿವರ್ಮನಿಗೆ ಸಂಬಂಧಿಸಿದಂತೆ ಇದುವರೆಗೂ 10 ಶಾಸನಗಳು ಮಾತ್ರ ಕಂಡುಬಂದಿವೆ.
ಈಗ ದೊರೆತಿರುವ ಶಾಸನವು ಸೇರಿ 11 ಶಾಸನಗಳು ಕಂಡುಬದಂತಾಗಿವೆ. ರವಿವರ್ಮನು ಬನವಾಸಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಕ್ರಿ.ಶ. 485 ರಿಂದ ಕ್ರಿ.ಶ. 519ರವರೆಗೆ ಸುಮಾರು 34 ವರ್ಷಗಳು ಆಳ್ವಿಕೆ ಮಾಡಿದ್ದು ಈ ಶಾಸನದಲ್ಲಿ ಹಾರಿತಿಯ ಪುತ್ರರಾದ ಮಾನವ್ಯಸ ಗೋತ್ರಕ್ಕೆ ಸೇರಿದ ಚರ್ಚೆಯಲ್ಲಿ ಪ್ರಸಿದ್ಧರಾದ ಕದಂಬ ವಂಶದ ಮೃಗೇಶವರ್ಮನ ಮಗನಾದ ಮಂಡಲದ ಅಧಿಪತಿಯಾದ ರವಿವರ್ಮನು ದೇವತೆಗಳಿಂದ ಪೂಜಿಸಲ್ಪಟ್ಟು ಪ್ರಸಿದ್ದನಾಗಿದ್ದು ಮುಚ್ಚುಂಡಿಯ ಗ್ರಾಮದಲ್ಲಿ ಆರನೇ ಒಂದು ಭಾಗನ್ನು ದಾನ ನೀಡಿದ್ದಾರೆ.
ದಾನ ನೀಡಿದ ಗ್ರಾಮವು ಶಿಕಾರಿಪುರ ತಾಲ್ಲೂಕಿನ ಅಗ್ರಹಾರ ಮುಚ್ಚಡಿ ಅಥವಾ ಮಾಯಿತಮ್ಮನ ಮುಚ್ಚಡಿ ಆಗಿರಬಹುದಾಗಿದೆ. ಈ ಶಾಸನವು ಕ್ರಿ.ಶ. 5-6ನೇ ಶತಮಾನದ್ದಾಗಿದೆ. ಈ ಶಾಸನದ ಹತ್ತಿರ ಕದಂಬ ಅರಸರ ಕಾಲದ ಸಿಂಹ ಶಿಲ್ಪವು ಸಹ ದೊರೆತಿದೆ.

ಇದರ ಅಕ್ಕಪಕ್ಕದಲ್ಲಿಯೇ ಇತರೆ ಶಾಸನಗಳು, ಶಿವಲಿಂಗಗಳು, ಸಪ್ತಮಾತೃಕೆ ಶಿಲ್ಪಗಳು ಕಂಡುಬರುತ್ತವೆ.

ಈ ಶಾಸನವನ್ನು ಪತ್ತೆ ಹಚ್ಚುವಲ್ಲಿ ಗ್ರಾಮಸ್ಥರಾದ ಮೇಘರಾಜ್, ಮಲ್ಲಿಕಾರ್ಜುನ ,ಶಾಸನವನ್ನು ಓದಿಕೊಟ್ಟ ಡಾ.ಜಗದೀಶ ಮತ್ತು ನಾಗರಾಜ ರಾವ್ ಮೈಸೂರು ಸಹಕರಿಸಿದ್ದಾರೆ.

ಕನ್ನಡದ ಕಬೀರ ಇಬ್ರಾಹಿಂ ಸುತಾರ ಇನ್ನಿಲ್ಲ

0

ಇಬ್ರಾಹಿಂ ಎನ್. ಸುತಾರ ಅವರು ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದಲ್ಲಿ ಮೇ 10,1940ರಲ್ಲಿ ಜನಿಸಿದರು. ವೈದಿಕ, ವಚನ ಮತ್ತು ಸೂಫಿ ಪರಂಪರೆಗಳ ಕುರಿತು ಭಜನೆ, ಪ್ರವಚನ, ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆ ಉಂಟು ಮಾಡಿದ ತತ್ವಪದಕಾರ ಮತ್ತು ಪ್ರವಚನಕಾರಾಗಿದ್ದರು. ಇವರಿಗೆ 2018ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
1995ರಲ್ಲಿ ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿಯೂ ಇವರಿಗೆ ಸಂದಿದೆ.

ಇವರ ತಂದೆ ನಬೀಸಾಬ್ ಮತ್ತು ತಾಯಿ ಅಮೀನಾಬಿ‌.
ಬಡತನದಿಂದಾಗಿ ಇವರು ಮೂರನೇ ತರಗತಿಯವರೆಗೆ ಮಾತ್ರ ಕಲಿತರು. ನಂತರ ನೇಕಾರಿಕೆ ಕಲಿತು ಬದುಕು ಸಾಗಿಸತೊಡಗಿದರು.

ಬಾಲ್ಯದಲ್ಲಿ ಇವರು ನಮಾಜ್ ಮತ್ತು ಕುರಾನ್ ಕಲಿತರು.
ನಂತರ ವಿವಿಧ ಧರ್ಮಗಳ ಬಗ್ಗೆ ತಿಳಿಯುವ ಆಸಕ್ತಿಯಿಂದ ಭಜನಾ ಸಂಘ ದಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಮೂಲಕ ವಿವಿಧ ಧರ್ಮಗಳ ಕುರಿತು ಅಪಾರ ಜ್ಞಾನವನ್ನು ಪಡೆದರು. ಭಗವದ್ಗೀತೆಯ ವಿವಿಧ ಶ್ಲೋಕಗಳನ್ನು ಸರಾಗವಾಗಿ ಉಚ್ಛರಿಸುವ ಚಾಕಚಕ್ಯತೆಯನ್ನು ಸಹ ಪಡೆದರು.

ಉಪನಿಷತ್ತಿನ ಸಾರ ಅರಿತುಕೊಂಡ ಇವರು ರಂಜಾನ್ ವೇಳೆ ಮುಂಜಾನೆ ಜನರನ್ನು ಎಬ್ಬಿಸಲು ಹಳ್ಳಿಗಳಿಗೆ ಹಾಡುತ್ತಾ ಹೋಗುತ್ತಿದ್ದ ತಂಡದಲ್ಲಿ ಸಂಚರಿಸಿ ಜೀವನಾನುಭವ ಪಡೆದುಕೊಂಡರು. ಮಹಾಲಿಂಗಪುರದಲ್ಲಿ ಬಸವಾನಂದ ಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ ಪ್ರತಿ ವರ್ಷ ಒಂದು ತಿಂಗಳು ಕಾಲ ಬೆಳಿಗ್ಗೆ ಹಾಗೂ ಸಂಜೆ ನಡೆಯುತ್ತಿದ್ದ ಪ್ರವಚನ ಕೇಳುತ್ತಿದ್ದರು. ‘ಅಲ್ಲಿನ ಧಾರ್ಮಿಕ ಚಿಂತನೆಗಳು ನನ್ನಲ್ಲಿನ ತಿಳಿವಳಿಕೆ ವಿಸ್ತರಿಸಲು ನೆರವಾಯಿತು’ ಎಂದು ಸುತಾರ ಸ್ಮರಿಸಿಕೊಳ್ಳುತ್ತಿದ್ದರು.

ಹಿಂದೂ ಮುಸ್ಲಿಂ ಭಾವೈಕ್ಯತೆ ಶ್ರೇಷ್ಠ ಪ್ರವಚನ, ಸೂಫಿ ಸಂತರಾಗಿದ್ದ ಸುತಾರ್ ಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
ಇಬ್ರಾಹಿಂ ಸುತಾರ ಅವರ ಮಾತುಗಳು ಮತ್ತು ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಹೆಚ್ಚು ವೈರಲ್ ಆಗಿವೆ.

ಇವರ ಭಜನೆ ತತ್ವಪದಗಳ ಸುರುಳಿಗಳು ಬಿಡುಗಡೆ ಆಗಿವೆ. ‘ನಾವೆಲ್ಲಾ ಭಾರತೀಯರು’ ಎಂಬುದು ಅವರ ಕವನ ಸಂಕಲನವಾಗಿ ಹೊರಹೊಮ್ಮಿದೆ.
ಇವರು ಹೃದಯಾಘಾತದಿಂದ ನಮ್ಮನ್ನಗಲಿದ್ದಾರೆ.
ಸಮಾಜದಲ್ಲಿ ಸಾಮರಸ್ಯದ ಬೀಜ ಬಿತ್ತಲು ಶ್ರಮಿಸಿದ ಅವರ ದಿವ್ಯಾತ್ಮಕ್ಕೆ ದೇವರು ಶಾಂತಿ ನೀಡಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕಂಬನಿ ಮಿಡಿದಿದ್ದಾರೆ.

ಇಂತಹ ಹಿರಿಯ ಜ್ಞಾನಿ ಇಂದು ನಮ್ಮೊಂದಿಗಿಲ್ಲ .ಆದರೆ, ಅವರ ಆದರ್ಶ ಮತ್ತು ಚಿಂತನೆಗಳು ಸರ್ವ ಧರ್ಮ ಸಮಾನತೆಯನ್ನು ಸಾರುವಲ್ಲಿ ಎಂದೆಂದಿಗೂ ಹಚ್ಚ ಹಸುರಾಗಿರುತ್ತವೆ. ಇಂತಹ ನೂರಾರು ಇಬ್ರಾಹಿಂ ಸುತಾರ ಅವರು ಹುಟ್ಟಿ ಬರಲಿ ಎಂದು ಆಶಿಸೋಣ.

Shimoga News – Friday, 4 February 2022

0

Book Your Advertisement Now in Shimoga News.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Shimoga News
Send a Whatsapp message Startto this contact to get started. That’s it! We will send you your daily dose of positive Shimoga News on Whatsapp!

Why Keelambi Media Lab Pvt Ltd in Shimoga News ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

Shimoga News

KLIVE Android App on Google Play Store

Shimoga News

Download the most loved Klive App for your Android phone or tablet.

ಪ್ರೊ ಕಬಡ್ಡಿ ಲೀಗ್ ಪ್ಯಾಂಥರ್ಸ್ ಗೆ ಜಯ

0

ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೋತ ಹೊರತಾಗಿಯೂ ದಬಾಂಗ್ ದೆಹಲಿ ತಂಡ ಪ್ರೊ ಕಬಡ್ಡಿ ಲೀಗ್ ನ 8ನೇ ಆವೃತ್ತಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ವೈಟ್ ಫೀಲ್ಡ್ ನ ಶೆರಾಟಾನ್ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ನಡೆದ ಮೊದಲ ಹಣಾಹಣಿಯಲ್ಲಿ ದಬಾಂಗ್ ತಂಡ 30ರಿಂದ 36 ಅಂಕಗಳ ಅಂತರದಿಂದ ಜೈಪುರ ತಂಡಕ್ಕೆ ಶರಣಾಗಿ ಟೂರ್ನಿಯಲ್ಲಿ 5ನೇ ಸೋಲಿಗೆ ಒಳಗಾಯಿತು.

ಒಟ್ಟಾರೆ 54 ಅಂಕ ಹೊಂದಿರುವ ದೆಹಲಿ ತಂಡ ಅಂಕಪಟ್ಟಿಯಲ್ಲಿ ಲೀಗ್ ಲೀಡರ್ ಆಗಿ ಮುಂದುವರಿದಿದೆ. ಈಚೆ ಏಳನೇ ಜಯಸಿ ದಾಖಲಿಸಿದ ಪಿಂಕ್ ಪ್ಯಾಂಥರ್ಸ್ ಒಟ್ಟು 45 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಪ್ರಥಮಾರ್ಧದ ಅಂತ್ಯಕ್ಕೆ 21ರಿಂದ 15ರಲ್ಲಿ ಮೇಲುಗೈ ಸಾಧಿಸಿದ ಜೈಪುರ ತಂಡ, ದ್ವಿತೀಯಾರ್ಧದಲ್ಲಿ ಎದುರಲ್ಲಿ ತಂಡದಿಂದ 15 ರಿಂದ 15 ರಲ್ಲಿ ಸಮಬಲದ ಹೋರಾಟ ಎದುರಿಸಿತ್ತಾದರೂ ಅಂತಿಮವಾಗಿ ಆರು ಅಂಕಗಳಿಂದ ಗೆಲುವಿನ ಕೇಕೆ ಹಾಕಿತು. ಜೈಪುರ ಪರ ಆಲ್ರೌಂಡರ್ ದೀಪಕ್ ಹೂಡಾ 12ಅಂಕ ಕಲೆಹಾಕಿದರೆ, ದಬಾಂಗ್ ಪರ ಏಕಾಂಗಿ ಹೋರಾಟ ನಡೆಸಿದ ವಿಜಯ್ 16 ಅಂಕಗಳಿಸಿ ಗಮನ ಸೆಳೆದಿದ್ದಾರೆ