Saturday, October 17, 2026
Saturday, October 17, 2026

ಕನ್ನಡದ ಪ್ರಥಮ ರಾಜಮನೆತನದ ಶಾಸನ ಸೊರಬ ತಲಗುಂದದಲ್ಲಿ ಪತ್ತೆ

Date:

ಶಿವಮೊಗ್ಗದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಆರ್ ಶೇಜೇಶ್ವರ ಮತ್ತು ಚುರ್ಚಿಗುಂಡಿ ಮಂಜಪ್ಪ ಅವರು ಸೊರಬ ತಾಲೂಕಿನ ತಲಗುಂದ ಗ್ರಾಮದಲ್ಲಿ ಕ್ಷೇತ್ರ ಕಾರ್ಯ ಕೈಗೊಂಡಿದ್ದರು.

ಪ್ರಸ್ತುತ ಊರಿನ ಈಶ್ವರ ದೇವಾಲಯದ ಆವರಣದಲ್ಲಿ ಕರ್ನಾಟಕವನ್ನು ಆಳಿದ ರಾಜ್ಯದ ಪ್ರಥಮ ಕನ್ನಡ ಮನೆತನವಾದ ಕದಂಬ ಅರಸರ ರವಿವರ್ಮನ ಕಾಲದ ಶಾಸನವು ಪತ್ತೆಯಾಗಿದೆ.

ಕಲ್ಲಿನ ಮೇಲಿರುವ ಶಾಸನವು 143 ಸೆಂ.ಮೀ ಉದ್ದ ಹಾಗೂ 49 ಸೆಂ.ಮೀ ಅಗಲವಿದ್ದು, ಬ್ರಾಹ್ಮಿ ಲಿಪಿ ಹಾಗೂ ಸಂಸ್ಕೃತ ಬಾಷೆಯ ಏಳು ಸಾಲಿನಿಂದ ಕೂಡಿದೆ.
ಶಾಸನವು ಅಲ್ಲಲ್ಲಿ ಸ್ವಲ್ಪ ಮಸುಕಾಗಿದೆ.
ಬನವಾಸಿ ಕದಂಬರ ರವಿವರ್ಮನಿಗೆ ಸಂಬಂಧಿಸಿದಂತೆ ಇದುವರೆಗೂ 10 ಶಾಸನಗಳು ಮಾತ್ರ ಕಂಡುಬಂದಿವೆ.
ಈಗ ದೊರೆತಿರುವ ಶಾಸನವು ಸೇರಿ 11 ಶಾಸನಗಳು ಕಂಡುಬದಂತಾಗಿವೆ. ರವಿವರ್ಮನು ಬನವಾಸಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಕ್ರಿ.ಶ. 485 ರಿಂದ ಕ್ರಿ.ಶ. 519ರವರೆಗೆ ಸುಮಾರು 34 ವರ್ಷಗಳು ಆಳ್ವಿಕೆ ಮಾಡಿದ್ದು ಈ ಶಾಸನದಲ್ಲಿ ಹಾರಿತಿಯ ಪುತ್ರರಾದ ಮಾನವ್ಯಸ ಗೋತ್ರಕ್ಕೆ ಸೇರಿದ ಚರ್ಚೆಯಲ್ಲಿ ಪ್ರಸಿದ್ಧರಾದ ಕದಂಬ ವಂಶದ ಮೃಗೇಶವರ್ಮನ ಮಗನಾದ ಮಂಡಲದ ಅಧಿಪತಿಯಾದ ರವಿವರ್ಮನು ದೇವತೆಗಳಿಂದ ಪೂಜಿಸಲ್ಪಟ್ಟು ಪ್ರಸಿದ್ದನಾಗಿದ್ದು ಮುಚ್ಚುಂಡಿಯ ಗ್ರಾಮದಲ್ಲಿ ಆರನೇ ಒಂದು ಭಾಗನ್ನು ದಾನ ನೀಡಿದ್ದಾರೆ.
ದಾನ ನೀಡಿದ ಗ್ರಾಮವು ಶಿಕಾರಿಪುರ ತಾಲ್ಲೂಕಿನ ಅಗ್ರಹಾರ ಮುಚ್ಚಡಿ ಅಥವಾ ಮಾಯಿತಮ್ಮನ ಮುಚ್ಚಡಿ ಆಗಿರಬಹುದಾಗಿದೆ. ಈ ಶಾಸನವು ಕ್ರಿ.ಶ. 5-6ನೇ ಶತಮಾನದ್ದಾಗಿದೆ. ಈ ಶಾಸನದ ಹತ್ತಿರ ಕದಂಬ ಅರಸರ ಕಾಲದ ಸಿಂಹ ಶಿಲ್ಪವು ಸಹ ದೊರೆತಿದೆ.

ಇದರ ಅಕ್ಕಪಕ್ಕದಲ್ಲಿಯೇ ಇತರೆ ಶಾಸನಗಳು, ಶಿವಲಿಂಗಗಳು, ಸಪ್ತಮಾತೃಕೆ ಶಿಲ್ಪಗಳು ಕಂಡುಬರುತ್ತವೆ.

ಈ ಶಾಸನವನ್ನು ಪತ್ತೆ ಹಚ್ಚುವಲ್ಲಿ ಗ್ರಾಮಸ್ಥರಾದ ಮೇಘರಾಜ್, ಮಲ್ಲಿಕಾರ್ಜುನ ,ಶಾಸನವನ್ನು ಓದಿಕೊಟ್ಟ ಡಾ.ಜಗದೀಶ ಮತ್ತು ನಾಗರಾಜ ರಾವ್ ಮೈಸೂರು ಸಹಕರಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...