Monday, February 16, 2026
Monday, February 16, 2026
Home Blog Page 1736

ಐಎಎಸ್ ಮತ್ತು ಐಎಫ್ಎಸ್ ಪರೀಕ್ಷೆಗಳಿಗೆ ಯುಪಿಎಸ್ ಸಿ ಅಧಿಸೂಚನೆ

0

ಕೇಂದ್ರ ಲೋಕಸೇವಾ ಆಯೋಗವು ನಾಗರಿಕ ಸೇವಾ ಪರೀಕ್ಷೆ ಮತ್ತು ಭಾರತೀಯ ಅರಣ್ಯ ಸೇವಾ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿದೆ.

ದೇಶದ ಅತ್ಯಂತ ಪರಿಷ್ಟಿತ ಪರೀಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಎರಡೂ ಹುದ್ದೆಗಳಿಗೆ ಒಂದೇ ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತದೆ. ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಸಲ್ಲಿಸಲು ಫೆಬ್ರವರಿ 22 ಕೊನೆಯ ದಿನವಾಗಿದೆ. ಮಹಿಳೆಯರು, ಪುರುಷರು ಮಾತ್ರವಲ್ಲ ತೃತೀಯಲಿಂಗಿ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಈ ಬಾರಿ 816 ನಾಗರಿಕ ಸೇವಾ ಹುದ್ದೆಗಳಿಗೆ ಮತ್ತು 152 ಭಾರತೀಯ ಅರಣ್ಯಾಧಿಕಾರಿ ಸೇವಾ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಯುಪಿಎಸ್ ಸಿ ಅಧಿಸೂಚನೆಯಲ್ಲಿ ತಿಳಿಸಿದೆ. ವೇಳಾಪಟ್ಟಿಯಲ್ಲಿ ಪ್ರಕಟಿಸಿರುವಂತೆ ಜೂನ್ 5ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ. 296 ಹುದ್ದೆಗಳಲ್ಲಿ 34 ಹುದ್ದೆಗಳನ್ನು ವಿಕಲಚೇತನರಿಗೆ ಮೀಸಲಿಡಲಾಗಿದೆ. ಬೆಂಗಳೂರು ಮೈಸೂರು ಹಾಗೂ ಧಾರವಾಡ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಅರಣ್ಯಾಧಿಕಾರಿ ಸೇವೆಗಳಿಗೆ ನವೆಂಬರ್ ತಿಂಗಳಿನಲ್ಲಿ ಮುಖ್ಯ ಪರೀಕ್ಷೆ ನಡೆಯಲಿದೆ. ನಾಗರಿಕ ಸೇವಾ ಹುದ್ದೆಗಳಿಗೆ ಮುಖ್ಯ ಪರೀಕ್ಷೆ ಯಾವಾಗ ನಡೆಯಲಿದೆ ಎಂದು ಸೂಚನೆಯಲ್ಲಿ ಸ್ಪಷ್ಟಪಡಿಸಿಲ್ಲ. ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಸಂದರ್ಶನ ನಡೆಸಿ ಅನಂತರ ನೇಮಕ ಮಾಡಿಕೊಳ್ಳಲಾಗುತ್ತದೆ.

ಯಾವುದೇ ಪದವೀಧರರು ಐಎಎಸ್ ಬರೆಯಬಹುದು. ಆದರೆ ಅರಣ್ಯಾಧಿಕಾರಿ ಸೇವಾ ಬುದ್ಧಿಗಳ ಪರೀಕ್ಷೆ ಬರೆಯಲು ಇಚ್ಚಿಸುವ ಅಭ್ಯರ್ಥಿಗಳು ಪಶುಪಾಲನಾ ಮತ್ತು ಪಶುವೈದ್ಯ ವಿಜ್ಞಾನ ಅಥವಾ ಸಸ್ಯಶಾಸ್ತ್ರ ಅಥವಾ ರಸಾಯನಶಾಸ್ತ್ರ ಅಥವಾ ಭೂವಿಜ್ಞಾನ ಶಾಸ್ತ್ರ ಅಥವಾ ಗಣಿತ ಸಂಖ್ಯಾಶಾಸ್ತ್ರ, ಪ್ರಾಣಿಶಾಸ್ತ್ರ ಇವುಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಪದ್ಧತಿ ಅಥವಾ ಕೃಷಿ ವಿಜ್ಞಾನ ಅಥವಾ ಅರಣ್ಯ ಶಾಸ್ತ್ರದಲ್ಲಿ ಪದವಿ ಅಥವಾ ಇಂಜಿನಿಯರಿಂಗ್ ಪದವಿ ಪಡೆದಿರಬೇಕು. ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿರುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ ಮತ್ತು ಗರಿಷ್ಠ ವಯಸ್ಸಿನ ಮಿತಿ 32 ವರ್ಷವಾಗಿದೆ.

ಪ್ರತ್ಯೇಕ ಬಲೂಚಿಸ್ತಾನಕ್ಕೆ ಹೋರಾಟ

0

ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿರುವ ಎರಡು ಸೇನಾ ನೆಲೆಗಳ ಮೇಲೆ ಬಲೂಚಿಸ್ತಾನ ಲಿಬರೇಷನ್ ಆರ್ಮಿ ಸಂಘಟನೆಯ ಉಗ್ರರು ದಾಳಿ ನಡೆಸಿದೆ.

ಪಾಕಿಸ್ತಾನದ ನೂರು ಸೈನಿಕರನ್ನು ಹತ್ಯೆಗಯ್ಯಲಾಗಿದೆ ಎಂದು ಮಾಹಿತಿ ದೊರಕಿದೆ. ಇನ್ನೊಂದೆಡೆ ಗುಂಡಿನ ಚಕಮಕಿಯಲ್ಲಿ 4 ಸೈನಿಕರು ಮೃತಪಟ್ಟಿದ್ದಾರೆ. ಯೋಧರ ಗುಂಡಿಗೆ 15 ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಪಾಕ್ ಸರ್ಕಾರ ತಿಳಿಸಿದೆ.

ಪಂಜ್ಗುರ್ ಮತ್ತು ನೋಶ್ಕಿ ಜಿಲ್ಲೆಗಳಲ್ಲಿ ಎರಡು ನೆಲೆಗಳ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಇದಕ್ಕೆ ಪಾಕ್ ಸೈನಿಕರು ಸಹ ಪ್ರತಿ ದಾಳಿ ನಡೆಸಿದ್ದಾರೆ.

ಉಗ್ರರ ವಿರುದ್ಧದ ಹೋರಾಟದಲ್ಲಿ ಸೇವೆಗೆ ಭಾರಿ ಮುನ್ನಡೆ ದೊರೆತಿದೆ. ನೋಶ್ಕಿ ಯಲ್ಲಿ ಒಂಬತ್ತು ಉಗ್ರರು ಮತ್ತು ನಾಲ್ವರು ಸೈನಿಕರು ಮೃತಪಟ್ಟಿದ್ದಾರೆ. ಪಂಜ್ಗುರ್ ನಲ್ಲಿ ಆರು ಉಗ್ರರ ಹತ್ಯೆ ಮಾಡಲಾಗಿದೆ ಎಂದು ಗೃಹಸಚಿವ ಶೇಕ್ ರಶೀದ್ ಅಹಮದ್ ತಿಳಿಸಿದ್ದಾರೆ.

ಪಾಕಿಸ್ತಾನದ ಎರಡು ನೆಲೆಗಳನ್ನು ದ್ವಂಸ ಮಾಡಿದ್ದೇವೆ. ನೆಲೆಗಳು ನಮ್ಮ ನಿಯಂತ್ರಣದಲ್ಲಿಯೇ ಇವೆ. ನಮಗೆ ಪ್ರತಿರೋಧ ಒಡ್ಡುವ ಲ್ಲಿ ಸೈನಿಕರು ವಿಫಲರಾಗಿದ್ದಾರೆ. ಇನ್ನು ಕಾರ್ಯಾಚರಣೆ ಮುಂದುವರಿಯುತ್ತಿದೆ ಎಂದು ಬಿಎಲ್ಎ ಹೇಳಿಕೊಂಡಿದೆ.

ಪ್ರತ್ಯೇಕ ಬಲೂಚಿಸ್ತಾನಕ್ಕಾಗಿ ಬಿಎಲ್ಎ ಹೋರಾಡುತ್ತಿದೆ. ಕಳೆದ ವಾರವಷ್ಟೇ ಪಾಕ್ ನೆಲೆಗಳ ಮೇಲೆ ದಾಳಿ ಮಾಡಿ 10 ಸೈನಿಕರ ನಾವು ಹತ್ಯೆಗೈದಿದ್ದಾರೆ.

ಮಾಲಿನ್ಯ ಮಹಾನಗರಗಳ ಪಟ್ಟಿಗೆ ದೆಹಲಿ ಜೊತೆ ಚೆನೈ ಸೇರ್ಪಡೆ

0

2021 ರ ಭಾರತೀಯ ನಗರಗಳ ಪೈಕಿ ಚೆನ್ನೈ ನಗರದ ಗಾಳಿಯ ಗುಣಮಟ್ಟವು ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸುವ ಮಿತಿಗಳನ್ನ ಐದು ಪಟ್ಟು ಮೀರಿದೆ.
ಚೆನ್ನೈ ನಗರದ ಗಾಳಿಯ ಗುಣಮಟ್ಟವು ದೇಶದ ಅತ್ಯಂತ ಕಲುಷಿತ ನಗರಗಳಲ್ಲಿ ಒಂದಾಗಿದೆ ಎಂದು ಜನವರಿಯಲ್ಲಿ ಬಿಡುಗಡೆಯಾದ ಎನ್‌ಜಿಒ ಗ್ರೀನ್‌ಪೀಸ್ ಇಂಟರ್‌ನ್ಯಾಷನಲ್ ವರದಿ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯು PM 2.5 (ಫೈನ್ ಪಾರ್ಟಿಕ್ಯುಲೇಟ್ ಮ್ಯಾಟರ್) ಮಟ್ಟಗಳಿಗೆ ಅನುಮೋದನೆ ನೀಡಿದೆ.
ಆದರೆ ಚೆನ್ನೈ ನಗರವು ಈ ಮಿತಿಗಳನ್ನು ಸಹ ಮೀರಿ 5 ಮೈಕ್ರೋಗ್ರಾಂ (FPM) ಆಗಿದೆ.

ನವೆಂಬರ್ 2020 ರಿಂದ ನವೆಂಬರ್ 2021 ರವರೆಗೆ ನಗರದ ವಾರ್ಷಿಕ ಸರಾಸರಿ ಗಾಳಿಯ ಗುಣಮಟ್ಟವು 27 ಮೈಕ್ರೋಗ್ರಾಂ (FPM) ಆಗಿದೆ.
ಚೆನ್ನೈ ಸುಮಾರು 30 ನಗರ ಪ್ರದೇಶಗಳನ್ನು ಹೊಂದಿರುವ ದೊಡ್ಡ ಪಟ್ಟಣವಾಗಿದೆ.
ಈ ಪ್ರದೇಶದಲ್ಲಿ ಗಾಳಿಯು ಪ್ರಮಾಣದಲ್ಲಿ ಕಲುಷಿತವಾಗಲು ಕೈಗಾರಿಕೆಗಳಿಂದ ಹೊರಸೂಸುವ ಕಾರ್ಬನ್, ರಸ್ತೆ, ಕಟ್ಟಡ ಕಾಮಗಾರಿಗಳ ದೂಳು, ವಾಹನಗಳಿಂದ ಹೊರಸೂಸುವ ಕಾರ್ಬನ್ ಮುಂತಾದವುಗಳು ಗಂಭೀರ ಸಮಸ್ಯೆಯನ್ನು ಉಂಟು ಮಾಡಿವೆ.
ಈ ರೀತಿಯ ಮಾಲಿನ್ಯದ ನಿಖರವಾದ ಮೂಲವನ್ನು ಗುರುತಿಸುವುದು ಮಾಲಿನ್ಯದ ನಿಯಮಗಳನ್ನು ಉತ್ತಮವಾಗಿ ಜಾರಿಗೊಳಿಸಲು ಸಹಾಯ ಮಾಡುತ್ತದೆ ಎಂದು ಕರಾವಳಿ ಸಂಪನ್ಮೂಲ ಕೇಂದ್ರದ ಸಂಯೋಜಕ ಪೂಜಾ ಕುಮಾರ್ ಹೇಳಿದರು.
ಉತ್ತರ ಚೆನ್ನೈನಲ್ಲಿ ಕೈಗಾರಿಕೆಗಳು ಮತ್ತು ಉಷ್ಣ ಸ್ಥಾವರಗಳು ಮಾಲಿನ್ಯದ ಮೂಲಗಳಾಗಿವೆ. ಚೆನ್ನೈ ಮೂಲದ ಮತ್ತೊಂದು ಸಂಶೋಧನಾ ಕೇಂದ್ರವು ಪರಿಸರ ಸಂಶೋಧನೆಯಲ್ಲಿ ತೊಡಗಿದೆ. ಇದಲ್ಲದೆ, ಜನಸಂಖ್ಯೆ ಮತ್ತು ಪ್ರದೇಶದ ಬೆಳವಣಿಗೆಗೆ ಅನುಗುಣವಾಗಿ ನಗರವು ಮೇಲ್ವಿಚಾರಣಾ ವ್ಯವಸ್ಥೆಯನ್ನು ನಡೆಸುತ್ತಿಲ್ಲ ಎಂದು ಅವರು ಹೇಳಿದರು.
ಇಲ್ಲಿಯವರೆಗೆ ನಾವು ದೆಹಲಿಯೇ ಅತ್ಯಂತ ಕಲುಷಿತ ನಗರ ಎಂದು ಮಾತುಗಳಲ್ಲಿ ಪ್ರಕಟವಾಗಿತ್ತು. ಆದರೆ ಈಗ ನಮ್ಮ ರಾಜ್ಯದ ಹತ್ತಿರ ಇರುವ ಚೆನ್ನೈ ನಗರವು ಈ ಪಟ್ಟಿಗೆ ಸೇರಿದೆ ಎನ್ನುವುದು ನಮ್ಮನ್ನ ಈಗ ಕಳವಳಕ್ಕಿಡು ಮಾಡಿದೆ.

ಕೋವಿಡ್ ಲಸಿಕೆ ಸಂಗ್ರಹಣೆ ಹಾಳಾಗದೇ ಸಂರಕ್ಷಿತವಾಗಿದೆ-ಕೇಂದ್ರ ಸರ್ಕಾರ

0

ಕೋವಿಶೀಲ್ಡ್ ಲಸಿಕೆಯ 50 ಲಕ್ಷ ಡೋಸ್ ಗಳು ಮಾಸಾಂತ್ಯದ ವೇಳೆಗೆ ಹಾಳಾಗುತ್ತದೆ ಎಂಬ ಕುರಿತು ಮಾಧ್ಯಮಗಳ ವರದಿಯನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ.

ಕೊರೋನಾ ನಿರೋಧಕ ಲಸಿಕೆ ಅಭಿಯಾನದ ಆರಂಭದಲ್ಲಿಯೇ ಲಸಿಕೆಗಳ ಅವಧಿ ಮುಗಿಯುವ ಮುನ್ನವೇ ನೀಡುವ ಮತ್ತು ಹಾಳಾಗದಂತೆ ನೋಡಿಕೊಳ್ಳುವ ಕುರಿತು ಆಯಾ ರಾಜ್ಯಗಳಿಗೆ ಸೂಚಿಸಲಾಗಿದೆ. ಇದರಿಂದಾಗಿ ಲಸಿಕೆಗಳ ಅವಧಿ ಮುಗಿಯುವ ಪ್ರಮಾಣ ತೀರ ಕಡಿಮೆಯಾಗಿದೆ. ಹಾಗಾಗಿ ಮಾಸಾಂತ್ಯದ ವೇಳೆಗೆ 50ಲಕ್ಷ ಡೋಸ್ ಗಳ ಅವಧಿ ಮುಗಿಯುತ್ತದೆ ಎಂಬ ಕುರಿತು ಮಾಧ್ಯಮಗಳ ವರದಿ ಸುಳ್ಳು ಮಾಹಿತಿಯಿಂದ ಕೂಡಿದೆ. ಜನರ ದಾರಿ ತಪ್ಪಿಸುವ ರೀತಿಯಲ್ಲಿ ವರದಿ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಗಳ ಸಂಗ್ರಹ ಮತ್ತು ವಿತರಣೆಗೆ ಸಮರ್ಪಕವಾಗಿ ವ್ಯವಸ್ಥೆ ಮಾಡಲಾಗಿದೆ. ಆಯಾ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕುರಿತು ನಿರ್ದೇಶನ ನೀಡಲಾಗಿದೆ. ಲಸಿಕೆಗಳ ಅವಧಿ ಮುಗಿಯುವ ಮುನ್ನವೇ ಜನರಿಗೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿಯನ್ನು ತಿಳಿಸಿದೆ.

ಶಾಲೆಗೆ ಅಟ್ಯಾಕ್ ಮಾಡಿದ ಸಲಗ

0

ಸಲಗಕ್ಕೆ ಶಾಲೆಯಲ್ಲೇನು ಕೆಲಸ?

ಹೌದು! ಗಂಡಾನೆಗೆ ಸ್ಕೂಲಿಗೆ ಹೋಗುವ ಆಸೆ ಬಂತೆ? ಅಂತ ನೀವು ಕೇಳಬಹುದು.
ಆದರೆ ಅದಕ್ಕೆ ಉತ್ತರ ಹೌದು ಅಂತ ಹೇಳಲು ಆನೆ ಭಾಷೆ ಬಲ್ಲವರು ಮಾತ್ರ ಏನಾದರೂ ಅರ್ಥ ಹೇಳಿಯಾರು. ಒಂದಂತೂ ನಿಜ.
ಸಲಗವೊಂದು ಶಾಲೆಯ ಆವರಣಕ್ಕೆ ನುಗ್ಗಿ ಒಂದೆರಡು ಗಂಟೆ ಪುಟ್ಟ ವಿದ್ಯಾರ್ಥಿಗಳನ್ನ,
ಶಿಕ್ಷಕ ಸಿಬ್ಬಂದಿಯನ್ನ ಅಧೀರಗೊಳಿಸಿ,ಅಂಗೈಲ್ಲಿ ಜೀವ ಹಿಡಿದುಕೊಳ್ಳುವಂತೆಮಾಡಿದ ಘಟನೆ.

ಎಲ್ಲಿ? ಯಾವಾಗ? ಅಂತ ನಿಮ್ಮಲ್ಲಿ ಕುತೂಹಲ ಮೂಡೋದು ಸಹಜ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಾಗಪುರ ಹಾಡಿಯ ಶಾಲೆಯ
ಪರಿಸರದಲ್ಲಿ ಒಂಟಿ ಸಲಗ ಒಂದಿಷ್ಟು ಗಂಟೆ ರಾಜಾರೋಷ ಅಡ್ಡಾಡಿದೆ.

ಗುರುವಾರ ಅಂದರೆ ಫೆಬ್ರವರಿ ಮೂರನೇ ತಾರೀಖಿನಂದು ಸಲಗ ನಡೆಸಿದ ತಾಜಾ
ಪೌರುಷ ಪ್ರದರ್ಶನ ಪುರಾಣ.
ಅಂಥಾದ್ದೇನು ಪೌರಷ ಅಂದ್ರೆ…ಒಂದು ಮೋಟಾರು ಬೈಕು, ಮಕ್ಕಳ ಸೈಕಲ್ಲು ಸ್ಟ್ಯಾಂಡು, ಅಷ್ಟೇ ಅಲ್ಲ ಸನಿಹದ ಮನೆಯೊಂದನ್ನು ತನ್ನ
ಕೋರೆದಾಡಿಗಳಿಂದ ಜಖಂಗೊಳಿಸಿದೆ.

ಅಂದು ಹಾಜರಾಗಿದ್ದ 129 ಮಕ್ಕಳು ಬೆಳಗಿನ ಪ್ರಾರ್ಥನೆಗೆ ಸಾಲಾಗಿ ನಿಂತಿದ್ದರು.
ಸಮೀಪದ ನಾಗರಹೊಳೆ ಅರಣ್ಯದಿಂದ ಈ ಸಲಗ ಮಹಾಶಯ ಮಕ್ಕಳೊಂದಿಗೆ ತಾನೂ ಬೆರೆಯಬೇಕೆಂಬ ಅಥವಾ ತನ್ನ ತುಂಟಾಡವನ್ನ ಎಳೆಯರು ನೋಡಲಿ ಅಂತಲೋ ದಂತಗಳನ್ನ ತೋರಿಸಿ, ಸೊಂಡಿಲು ಬೀಸುತ್ತಾ
ಬಂದ ಗಜರಾಜ. ತೀರ ಸಣ್ಣಾನೆಯಲ್ಲ ಅಂತ ನೋಡಿದವರು ಹೇಳುತ್ತಾರೆ.
ಸಾಲಾಗಿ ಮಕ್ಕಳು ನಿಂತಿದ್ದಾರೆ.ಅಷ್ಟರಲ್ಲಿ ಹಾಡಿಯ ಮಂದಿಗೆ
ಸೊಂಡಿಲು ಬೀದಿ,ದಪದಪ ಹೆಜ್ಜೆ ಹಾಕುತ್ತಾ ಬಂದ ಸಲಗವನ್ನ ನೋಡಿ ಕೂಗಿದರು. ಇನ್ನೇನು ಶಾಲಾ ಕಾಂಪೌಡಿನ ಮುಖ್ಯ ದ್ವಾರದ ಬಳಿ ಬರುತ್ತಿದ್ದಂತೇ ಗ್ರಾಮಸ್ಥರ ಕೂಗು ಕೇಳಿ ಶಿಕ್ಷಕ ರಾಮಚಂದ್ರಪ್ಪ ಜಾಗೃತರಾದರು.ತಕ್ಷಣ ಅಷ್ಟೂ ಮಕ್ಕಳನ್ನ ಸುರಕ್ಷಿತವಾಗಿ ಶಾಲಾ ತರಗತಿ ಕೊಠಡಿಯೊಳಕ್ಕೆ ಸರಸರನೆ ಕಳಿಸಿ ಬಾಗಿಲ ಬೋಲ್ಟು ಒಳಗಿನಿಂದ ಹಾಕಿ ಭದ್ರಪಡಿಸಿದರು.

ಆಗ ಸಮಯ,ಬೆಳಗ್ಗೆ ಒಂಬತ್ತೂ ಮುಕ್ಕಾಲಾಗಿತ್ತು. ಹೀಗೆ ನುಗ್ಗಿದ ಸಲಗವನ್ನ ಕಂಡ ಮಕ್ಕಳು ಸುಮ್ಮನೆ ಕೂರುತ್ತಾರೆಯೆ?
ಶಾಲಾ ಗೇಟನ್ನ ಒಂದೇಏಟಿಗೆ ಬಿಸಾಕಿ ಬಂದ ಬಿರುಸಿಗೆ ಎಲ್ಲರೂ ಹೌಹಾರಿದರು.
ಈ ನಾಗಪುರ ಗ್ರಾಮವು ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಅರವತ್ತು ಕಿಮೀ ದೂರದ ಫಾಸಲೆಯಲ್ಲಿದೆ.
ಸುಮಾರು ಹನ್ನೊಂದುವರೆಯ ತನಕ ಶಾಲೆಯ ಕೊಠಡಿಗಳು, ಅರಚುತ್ತಿದ್ದ ಬಾಯಿಗಳು ಬೀಗ ಹಾಕಿ ಕೊಂಡು ಮೌನಾಧ್ಯಾನದಲ್ಲಿದ್ದವು.
ಸದ್ಯ ಸಲಗ ಶಿಕ್ಷಕರೊಬ್ಬರ ಬೈಕನ್ನ ಹಾಳು ಮಾಡಿದೆ. ಸೈಕಲ್ ಸ್ಡ್ಯಾಂಡನ್ನ ಅಪ್ಪಚ್ಚಿ ಮಾಡಿದೆ. ಶಾಲಾಪರಿಸರದ ಹೊರಗಿದ್ದ ಮನೆಗೂ
ತಿವಿದು ಹತ್ತಿರದ ಕಾಡೊಳ ಹೊಕ್ಕು ಮಾಯವಾಗಿದೆ.
“ಇಷ್ಟು ಬಿಟ್ಟರೆ ಮತ್ತೇನನ್ನೂ ಹಾನಿ ಮಾಡಿಲ್ಲ ಎಂದು ಬರೆಯಿರಿ”ಅಂತ
ಮುಖ್ಯೋಪಾಧ್ಯಾಯರಿಗೆ ಹೇಳಿದಂತೆ ‌ ಬಾಲ ಬೀಸುತ್ತ ಮಕ್ಕಳಿಗೆ ಟಾಟಾ ಮಾಡಿ ಹೋಗಿರಬಹುದು ಅಲ್ಲವೆ?.

ಪರೀಕ್ಷೆಯ ಅಂಕಗಳಿಗಿಂತ ಜೀವನವೆಂಬ ಪರೀಕ್ಷೆಯ ಅಂಕಗಳೇ ಮುಖ್ಯ

0

ವಾರ್ಷಿಕ ಪರೀಕ್ಷೆ ಎದುರಿಸಿ ಅಂಕಗಳಿಸಲು ಶಾಲಾ ಕಾಲೇಜು ಶಿಕ್ಷಣ ಸಾಕು, ಆದರೆ, ಬದುಕು ಎದುರಿಸಲು ಜೀವನ ಶಿಕ್ಷಣ ಬೇಕೇ ಬೇಕು. ಜೀವನ ಶಿಕ್ಷಣವನ್ನು ಪಠ್ಯೇತರ ಚಟುವಟಿಕೆಗಳ ಮೂಲಕವೂ ಪಡೆಯಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಎಚ್. ಬಿ. ಮಂಜುನಾಥ ಅವರು ತಿಳಿಸಿದರು.
ಹರಿಹರದ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಪದವಿ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪಠ್ಯೇತರವಾದ ಸಾಂಸ್ಕೃತಿಕ, ಸಾಹಿತ್ಯಿಕ, ಕ್ರೀಡಾ ಮುಂತಾದ ಯಾವುದೇ ಚಟುವಟಿಕೆಗಳಿಗೆ ಆದ್ಯತೆ ಕೊಡಬೇಕು. ಭಾರತೀಯ ಸಂಸ್ಕೃತಿಯಲ್ಲಿ ಸೌಹಾರ್ದತೆಗೂ, ಜೀವನ ಮೌಲ್ಯಗಳಿಗೂ ಪ್ರಾಶಸ್ತ್ಯವಿದೆ. ಆದ್ದರಿಂದಲೇ ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರತೀಯ ಸಂಸ್ಕೃತಿಗೆ ಹೆಚ್ಚು ಗೌರವ ನೀಡುತ್ತಿವೆ ಎಂದರು.

ವಿಶ್ವದಲ್ಲಿ ದೊಡ್ಡ ಮೊತ್ತದಲ್ಲಿ ರುವ ಭಾರತೀಯ ಯುವ ಶಕ್ತಿಯ ಬಗ್ಗೆ ಜಗತ್ತಿನ ಬೇರೆ ರಾಷ್ಟ್ರಗಳು ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿವೆ. ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ವೈಯಕ್ತಿಕ ನಿರೀಕ್ಷೆ, ತಂದೆ-ತಾಯಿಗಳ ನಿರೀಕ್ಷೆ, ಸಮಾಜ ಮತ್ತು ರಾಷ್ಟ್ರದ ನಿರೀಕ್ಷೆ ಯೊಂದಿಗೆ ಜಾಗತಿಕ ನಿರೀಕ್ಷೆಯೂ ಸಾಕಾರವಾಗಿ ಪ್ರಪಂಚವನ್ನೇ ನಿಯಂತ್ರಿಸುವ ಮಟ್ಟಕ್ಕೆ ಬೆಳೆಯಬೇಕಿದ್ದು ಈ ಸಾಮರ್ಥ್ಯ ಭಾರತದ ಯುವ ಜನರಲ್ಲಿದೆ.


ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಿ. ಎಂ.ಹಾಲಸ್ವಾಮಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸುಮ್ಮನೆ ಬದುಕಿದರೆ ಪ್ರಯೋಜನವಿಲ್ಲ, ಏನಾದರೂ ಸಾಧನೆ ಬೇಕು. ಯುವಜನತೆಯನ್ನು ಬಳಸಿಕೊಳ್ಳುವುದು ಎಷ್ಟು ಮುಖ್ಯವೋ, ಉತ್ತಮ ಕಾರ್ಯಕ್ಕೆ ಯುವಜನತೆಯ ಸ್ಪಂದನೆಯೂ ಅಷ್ಟೇ ಮುಖ್ಯ ಎಂದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಜಿ.ಎಂ.ಮುರಗಿಸ್ವಾಮಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎನ್.ಎಂ. ತಿಪ್ಪೇಸ್ವಾಮಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಹಾಗೂ ಕಲಾ ವೇದಿಕೆಯ ಸಂಯೋಜಕ ಪ್ರೊ.ಸಿದ್ದಯ್ಯ ಎಸ್. ವಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ನ್ಯಾಕ್ ಸಂಯೋಜಕ ಪ್ರೊ.ಬಿ. ಕೆ. ಮೊಹಮ್ಮದ್ ಸ್ವಾಲೇಹಾ, ಮಾನವ ಹಕ್ಕುಗಳ ವೇದಿಕೆ ಸಂಯೋಜಕ ಪ್ರೊ.ಹೆಚ್. ಎಂ. ವೇದಮೂರ್ತಿ ಆರಾಧ್ಯ, ಮಹಿಳಾ ವೇದಿಕೆಯ ಸಂಯೋಜಕಿ ಡಾ.ಎಂ.ಹೆಚ್. ಶಿವಗಂಗಮ್ಮ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ವೇದಿಕೆ ಸಂಯೋಜಕ ಡಾ.ಪರಮೇಶ್ವರ ನಾಯ್ಕ, ಉದ್ಯೋಗ ಮಾಹಿತಿ ವೇದಿಕೆ ಸಂಯೋಜಕ ಪ್ರೊ. ರಮೇಶ್ ಕೆ.ಪರ್ವತಿ, ಕನ್ನಡ ವಿಭಾಗ ಮುಖ್ಯಸ್ಥೆ ರೇಣುಕಾ ಸಂಕನಗೌಡರ, ಇಂಗ್ಲಿಷ್ ವಿಭಾಗ ಮುಖ್ಯಸ್ಥೆ ಡಾ.ರಶ್ಮಿ ಜಿ. ಹೆಚ್, ಉರ್ದು ವಿಭಾಗ ಮುಖ್ಯಸ್ಥ ಅಪ್ಸರ್ ಅಲಿ ಮುಂತಾದವರು ವೇದಿಕೆಯಲ್ಲಿದ್ದರು. ಕಲಾವಿಭಾಗದ ವಿದ್ಯಾರ್ಥಿ ಪ್ರತಿನಿಧಿಗಳಾದ ಫೌಜಿಯಾ ಖಾನಂ, ಗೌತಮ್ ಜಿ. ಹೆಚ್. ಭಾಗವಹಿಸಿದ್ದರು.ಮುಖ್ಯ ಅತಿಥಿ ಎಚ್. ಬಿ.ಮಂಜುನಾಥ ರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಮತ್ತೆ ಬಯಲಾದ ಚೀನಾದ ಸುಳ್ಳು ಗಾರಿಕೆ

0

ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಎರಡು ವರ್ಷ ಹಿಂದೆ ನಡೆದ ಸಂಘರ್ಷದ ವೇಳೆ ಮೃತಪಟ್ಟ ಭಾರತೀಯ ಸೈನಿಕರ ಸಂಖ್ಯೆ ಕುರಿತು ಚೀನಾ ಸುಳ್ಳು ಹೇಳಿರುವುದು ಬಯಲಾಗಿದೆ.

2020ರ ಜೂನ್ 15ರ ತಡರಾತ್ರಿ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ವೇಳೆ ಚೀನಾದ 38 ಸೈನಿಕರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಆಸ್ಟ್ರೇಲಿಯಾದ ದಿ ಕ್ಲಾಕ್ಸನ್ ಪತ್ರಿಕೆ ವಿಶೇಷ ವರದಿ ಪ್ರಕಟಿಸಿದೆ.
ಸಂಘರ್ಷಣೆ ವೇಳೆ ನಾಲ್ವರು ಯೋಧರು ಮಾತ್ರ ಮೃತಪಟ್ಟಿದ್ದಾರೆ ಎಂದು ಘಟನೆ ನಡೆದ ಎಂಟು ತಿಂಗಳ ಬಳಿಕ ಚೀನಾ ಒಪ್ಪಿಕೊಂಡಿತ್ತು. ಅಲ್ಲದೇ ನಾಲ್ವರಿಗೂ ಸೇನಾ ಮೇಡಲ್ ನೀಡಿತ್ತು . ಆದರೆ ಸೈನಿಕರ ಸಾವಿನ ಸಂಖ್ಯೆಯಲ್ಲಿ ಚೀನಾ ಕಳ್ಳಾಟ ಈಗ ಬಯಲಾಗಿದೆ. ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ.
ಸಾಮಾಜಿಕ ಜಾಲತಾಣ ಸಂಶೋಧಕರು, ಚೀನಾ ಬ್ಲಾಗರ್ ಗಳು , ಕಮುನಿಸ್ಟ್ ರಾಷ್ಟ್ರದ ಗಡಿ ನಾಗರಿಕರು ಹಾಗೂ ಮಾಧ್ಯಮಗಳ ವರದಿ ಆಧರಿಸಿ ಆಸ್ಟ್ರೇಲಿಯ ಪತ್ರಿಕೆಯು ಚೀನಾ ಸೈನಿಕರ ಸಾವಿನ ಸಂಖ್ಯೆ ಪ್ರಕಟಿಸಿದೆ.
ಇದಕ್ಕೂ ಮೊದಲು ಸಾವಿನ ಕುರಿತ ವರದಿಗಳನ್ನು ಚೀನಾ ಡಿಲೀಟ್ ಮಾಡಿಸಿತ್ತು. ಆದರೆ ಈಗ ವಿದೇಶಿ ಪತ್ರಿಕೆ ವರದಿ ಪ್ರಕಟಿಸಿರುವುದರಿಂದ ಚೀನಾ ಅಸಹಾಯಕವಾದಂತಾಗಿದೆ

ಮತ್ತೆ ಚಂದ್ರಯಾನದತ್ತ ಭಾರತದ ವಿಜ್ಞಾನಿಗಳ ಚಿತ್ತ

0

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಆಗಸ್ಟ್ 2022 ರಲ್ಲಿ ಚಂದ್ರಯಾನ-3 ಮೂರನ್ನು ಉಡಾವಣೆ ಮಾಡಲು ಸಿದ್ಧವಾಗಿದೆ. ಈ ವಿಚಾರವನ್ನು ಲೋಕಸಭೆಯನ್ನು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರವನ್ನು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಹಲವು ಹಾರ್ಡ್ವೇರ್ ಮತ್ತು ಅವುಗಳ ವಿಶೇಷ ನಿರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಉಡಾವಣೆಯನ್ನು 2022ರ ಆಗಸ್ಟ್ ತಿಂಗಳಿನಲ್ಲಿ ನಿಗದಿಯಾಗಿದೆ ಎಂದರು.

ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ವರ್ಷದ ಆಗಸ್ಟ್ ನಲ್ಲಿ ಚಂದ್ರಯಾನ-3 ನಡೆಯಲಿದೆ.
ಈ ವರ್ಷ ಒಟ್ಟು 19 ಯೋಜನೆಗಳನ್ನು ಇಸ್ರೋ ಕೈಗೊಳ್ಳಲಿದೆ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.
2019ರ ಜುಲೈನಲ್ಲಿ ಕೈಗೊಂಡಿದ್ದ ಚಂದ್ರಯಾನ -2 ಚಂದ್ರನ ಬಳಿ ರೋವರ್ ಇಳಿಯುವ ಸಂದರ್ಭದಲ್ಲಿ ಸಮಸ್ಯೆ ಕಂಡುಬಂದಿದ್ದರಿಂದ ವಿಫಲವಾಗಿತ್ತು

ಫೇಸ್ ಬುಕ್ ಬಳಕೆದಾರರ ಸಂಖ್ಯೆಗಣನೀಯ ಕುಸಿತ

0

ಜಗತ್ತಿನ ಬಹುತೇಕ ಜನರ ನೆಚ್ಚಿನ ಸಾಮಾಜಿಕ ಮಾಧ್ಯಮವಾಗಿರುವಂತಹ ಫೇಸ್ ಬುಕ್ ಅನ್ನು ಮೆಟಾ ಎಂದು ನಾಮಕರಣ ಮಾಡಿದ ನಂತರ ಬಳಕೆದಾರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.

ಬಳಕೆದಾರರ ಸಂಖ್ಯೆ ಕುಸಿತದ ಕುರಿತು ಮೆಟಾ ಸಂಸ್ಥೆಯು ತ್ರೈಮಾಸಿಕ ವರದಿ ಪ್ರಕಟಿಸಿದೆ. ಜಾಗತಿಕ ಫೇಸ್ಬುಕ್ ಬಳಕೆದಾರರ ಸಂಖ್ಯೆ ನಿತ್ಯ ಸರಾಸರಿ ಐದು ಲಕ್ಷದಷ್ಟು ಕುಸಿತವಾಗಿದೆ. ಫೇಸ್ಬುಕ್ ಶೇರುಗಳಲ್ಲಿ ಯೂ ಶೇ.20 ರಷ್ಟು ಇಳಿಮುಖವಾಗಿದೆ ಎಂದು ತಿಳಿದುಬಂದಿದೆ.

ಕ್ರಿಕೆಟ್ ಅಂಡರ್ 19ಭಾರತ ಫೈನಲ್ಸ್ ಪ್ರವೇಶ

0

ಭಾರತದ ಹಿರಿಯರ ಕ್ರಿಕೆಟ್ ತಂಡ ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಗಳೆರಡರಲ್ಲೂ ಸೋತಿದ್ದರಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಶೆ ಉಂಟಾಗಿದೆ.

ಆದರೆ ಇದೀಗ ಕೆರಿಬಿಯನ್ ನಾಡಿನಲ್ಲಿ 19ರ ವಯೋಮಿತಿ ಏಕದಿನ ವಿಶ್ವಕಪ್ ಆಡುತ್ತಿರುವ ಯಶ್ ಧುಲ್ ಸಾರಥ್ಯದ ಕಿರಿಯರ ತಂಡ ಒಂದರ ನಂತರ ಇನ್ನೊಂದು ಎಂಬಂತೆ ಸಿಹಿಸುದ್ದಿ ಗಳ ಸರಮಾಲೆಯನ್ನೇ ಹೆಣೆಯುತ್ತಿದೆ.

ಅಜೇಯ ತಂಡವೆನಿಸಿಕೊಂಡು ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದ ಭಾರತ ತಂಡ ಬುಧವಾರ ರಾತ್ರಿ ನಡೆದ ಸೂಪರ್ ಲೀಗ್ ಸೆಮಿಫೈನಲ್ಸ್ ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 96 ರನ್ ಗಳ ಅಂತರದಿಂದ ಹಿಮ್ಮೆಟ್ಟಿಸಿ ಪ್ರಶಸ್ತಿ ಹೊಸ್ತಿಲು ತಲುಪಿದೆ.
ಕಿರಿಯರ ಏಕದಿನ ವಿಶ್ವಕಪ್ ನಲ್ಲಿ ಭಾರತ ಫೈನಲ್ ಪ್ರವೇಶಿಸಿರುವುದು ಇದು ಸತತ ನಾಲ್ಕನೇ ಬಾರಿ ಎನ್ನುವುದು ಗಮನಾರ್ಹ.
ಶನಿವಾರ ನಡೆಯಲಿರುವ ಪ್ರಶಸ್ತಿ ಫೈಟ್ ನಲ್ಲಿ ಭಾರತಕ್ಕೆ 1998ರ ಆವೃತ್ತಿಯ ಚಾಂಪಿಯನ್ ಇಂಗ್ಲೆಂಡ್ ಎದುರಾಳಿಯಾಗಲಿದೆ. ಅಂದು ಆಂಗ್ಲರನ್ನೂ ಸೋಲಿಸಿದಲ್ಲಿ ಭಾರತ 14 ಆವೃತ್ತಿಗಳಲ್ಲಿ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದಂತಾಗಲಿದೆ.

ಕೂಲಿಡ್ಜ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ, ನಾಯಕ ಯಶ್ ಧುಲ್ (110) ಹಾಗೂ ಉಪ ನಾಯಕ ಶೇಖ್ ರಶೀದ್ (94) ಜೋಡಿಯ 204 ರನ್ ಗಳ 3ನೇ ವಿಕೆಟ್ ಜೊತೆಯಾಟದ ನೆರವಿನಿಂದ 290 ರನ್ ಕಲೆ ಹಾಕಿತು.
ಇದು ಭಾರತದ 19ರ ವಯೋಮಿತಿ ತಂಡಕ್ಕೆ ಆಸ್ಟ್ರೇಲಿಯ ವಿರುದ್ಧ ವಿಶ್ವಕಪ್ ನಲ್ಲಿ ಲಭಿಸಿದ ಸತತ ಆರನೇ ಗೆಲುವಾಗಿದೆ. ಟೂರ್ನಿಯ ಇತಿಹಾಸದಲ್ಲಿ ಒಮ್ಮೆಯೂ ಆಸ್ಟ್ರೇಲಿಯಾಕ್ಕೆ ಮಣಿದಿಲ್ಲ ಎಂಬ ಹೆಗ್ಗಳಿಕೆ ಭಾರತದ್ದಾಗಿದೆ.