Monday, February 16, 2026
Monday, February 16, 2026
Home Blog Page 1737

ದೇಶದಲ್ಲಿ ನಿರುದ್ಯೋಗ ಪ್ರಮಾಣ ಕುಸಿತ!

0

ದೇಶದಲ್ಲಿ ನಿರುದ್ಯೋಗದ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ. 2021ರ ಮಾರ್ಚ್ ನಿಂದ 2022ರ ಶೇ.6.57 ರಷ್ಟು ಕುಸಿತ ದಾಖಲಿಸಿದೆ ಎಂದು ಸರ್ಕಾರೇತರ ಸಂಸ್ಥೆಯಾದ ಭಾರತೀಯ ಆರ್ಥಿಕತೆ ನಿಗಾ ಕೇಂದ್ರ ವರದಿ ಮಾಡಿದೆ. ತೆಲಂಗಾಣದಲ್ಲಿ ನಿರುದ್ಯೋಗ ಪ್ರಮಾಣ ಅತ್ಯಂತ ಕಡಿಮೆ ಅಂದರೆ ಶೇ.0.7 ರಷ್ಟಿದ್ದರೆ, ಹರಿಯಾಣದಲ್ಲಿ ಅತಿಹೆಚ್ಚು ಶೇ.23.4 ರಷ್ಟಿದೆ. ನಿರುದ್ಯೋಗ ಪ್ರಮಾಣ ಜಾಸ್ತಿ ಇರುವ ರಾಜ್ಯಗಳ ಪಟ್ಟಿಯಲ್ಲಿ ರಾಜ್ಯಸ್ಥಾನ ಶೇ.18.9 ಮತ್ತು ತ್ರಿಪುರ ಶೇ.17.1 ರಷ್ಟಿದೆ.

ನಿರುದ್ಯೋಗದ ಪ್ರಮಾಣ ಜಾಸ್ತಿ ಇರುವ ರಾಜ್ಯಗಳನ್ನು ಪಟ್ಟಿ ಮಾಡುವುದಾದರೆ ಹರಿಯಾಣ 23.4%, ರಾಜಸ್ಥಾನ 18.9%, ತ್ರಿಪುರ 17.1%, ಜಮ್ಮು – ಕಾಶ್ಮೀರ 15%,ದೆಹಲಿ 14.1% ರಷ್ಟಿದೆ.

ಇನ್ನು ನಿರುದ್ಯೋಗದ ಪ್ರಮಾಣ ಕಡಿಮೆ ಇರುವ ರಾಜ್ಯಗಳನ್ನು ಪಟ್ಟಿ ಮಾಡುವುದಾದರೆ ತೆಲಂಗಾಣ 0.7%, ಗುಜರಾತ್ 1.2%, ಕರ್ನಾಟಕ 2.9%, ಉತ್ತರ ಪ್ರದೇಶ 3%, ಉತ್ತರಾ ಖಂಡ 3.5% ಪ್ರಮಾಣದಷ್ಟಿದೆ.

Shimoga News – Thursday, 3 February 2022

0

Book Your Advertisement Now in Shimoga News.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Shimoga News
Send a Whatsapp message Startto this contact to get started. That’s it! We will send you your daily dose of positive Shimoga News on Whatsapp!

Why Keelambi Media Lab Pvt Ltd in Shimoga News ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

Shimoga News

KLIVE Android App on Google Play Store

Shimoga News

Download the most loved Klive App for your Android phone or tablet.

ಕಾರೆಹೊಂಡ ಗ್ರಾಮಕ್ಕೆ ಕಾಡಾನೆ ಹಾವಳಿ

0

ಮುಗುಡ್ತಿ ಅರಣ್ಯ ಜೀವಿ ವಲಯ ವ್ಯಾಪ್ತಿಯ ತಳಲೆ ಗ್ರಾಮದ ಕಾರೆಹೊಂಡದ ರೈತರ ತೋಟಕ್ಕೆ ರಾತ್ರಿ ನುಗ್ಗಿದ ಕಾಡಾನೆ ಅಡಿಕೆ ಮರಗಳಿಗೆ ಹಾನಿಗೊಳಿಸಿದೆ.

ಇದುವರೆಗೆ ಈ ಭಾಗದಲ್ಲಿ ಆನೆ ಬಂದಿರುವ ನಿದರ್ಶನ ಇರಲಿಲ್ಲ. ಆದರೆ ಈಗ ಏಕಾಏಕಿ ರಾತ್ರಿ ವೇಳೆಯಲ್ಲಿ ರೈತರ ಜಮೀನುಗಳಿಗೆ ದಾಳಿ ಮಾಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಕಾರೆಹೊಂಡ ಗ್ರಾಮದ ರೈತ ಪರಶುರಾಮ ಅವರ ಅಡಿಕೆ ತೋಟಕ್ಕೆ ಕಾಡಾನೆ ದಾಳಿ ಮಾಡಿದ್ದು, ತೆಂಗು ಹಾಗೂ ಅಡಿಕೆ ಮರಗಳನ್ನು ಕಿತ್ತು ಮುರಿದು ಹಾನಿಗೊಳಿಸಿ ಅಪಾರ ನಷ್ಟವನ್ನು ಉಂಟುಮಾಡಿದೆ.
ಘಟನಾ ಸ್ಥಳಕ್ಕೆ ವನ್ಯಜೀವಿ ಅರಣ್ಯಾಧಿಕಾರಿ ರಾಜ ಅಹ್ಮದ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಆನೆ ಬಂದಿರುವ ಬಗ್ಗೆ ಖಾತ್ರಿಪಡಿಸಿಕೊಂಡರು.
ರೈತರು ಹೊಲಗದ್ದೆಗಳಿಗೆ ತೆರಳುವಾಗ ಮುಂಜಾಗ್ರತೆ ವಹಿಸಬೇಕೆಂದು ತಿಳಿಸಿದರು.
ಕಾಡಾನೆ ಭಾಗದಲ್ಲಿ ಮತ್ತೆ ಕಾಣಿಸಿಕೊಂಡರೆ ತಕ್ಷಣ ಅರಣ್ಯ ಇಲಾಖೆಗೆ ತಿಳಿಸಬೇಕೆಂದು ಮನವಿ ಮಾಡಿದರು.

ಟಿ.ಜೆ.ರವಿಕುಮಾರ್,ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ)

ಶಿವಮೊಗ್ಗದ ಸಕ್ರೆಬೈಲು ಏರಿಯಾ ವನ್ಯಜೀವಿ ವಿಭಾಗದಲ್ಲಿ ಒಟ್ಟು 6500 ಹೆಕ್ಟೆರ್ ಅರಣ್ಯಭೂಮಿ ಇದೆ. ಅದರಲ್ಲಿ ಶಿವಮೊಗ್ಗದಲ್ಲಿ ಮೂರು ಗಂಡಾನೆಗಳಿವೆ. ಅದರಲ್ಲಿ ಒಂದು ಆನೆ ಕಾರೆಹೊಂಡದ ಕಡೆ ಸಂಚರಿಸಿರಬಹುದು.
ಇಲ್ಲವೆ, ಆಗುಂಬೆ ಭಾಗದಲ್ಲಿ ಒಂದು ಆನೆಯಿದೆ. ಅದು ಎನ್.ಆರ್ ಪುರ , ಕೊಪ್ಪ, ಶೃಂಗೇರಿ, ಆಗುಂಬೆ, ನಾಗರಹೊಂಡ, ಹೊಸನಗರ, ಲಿಂಗನಮಕ್ಕಿ ಡ್ಯಾಮ್ ಹೊರವಲಯದ ಮಾರ್ಗದಿಂದ ಬಂದಿರಬಹುದು. ಆದರೆ, ಈ ಆನೆಯು ಇಲ್ಲಿಯವರೆಗೆ ವರ್ಷದಲ್ಲಿ ಒಂದೇ ಬಾರಿಗೆ ಕಾಣಿಸಿತ್ತು. ಇಲ್ಲಿಯವರೆಗೂ ಯಾರಿಗೂ ತೊಂದರೆ ಏನೂ ಕೊಟ್ಟಿಲ್ಲ ಎಂದು
ಕಾಡಾನೆಗಳ ವಿಷಯವಾಗಿ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಟಿ.ಜೆ. ರವಿಕುಮಾರ್ ಅವರು ಕೆ ಲೈವ್ ನ್ಯೂಸ್ ಮಾಧ್ಯಮದೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಪ್ರೊ ಕಬಡ್ಡಿ ಲೀಗ್ ಪೈರೇಟ್ಸ ಮತ್ತು ಪಲ್ಟನ್ ಜಯ ದಾಖಲು

0

ಸಚಿನ್ ಅಮೋಘ ಆಟದ ನೆರವಿನಿಂದ ಪಾಟ್ನಾ ಪೈರೇಟ್ಸ್ ತಂಡವು ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಜಯ ಗಳಿಸಿಕೊಂಡಿದ್ದಾರೆ.

ವೈಟ್ಫೀಲ್ಡ್ ನಲ್ಲಿರುವ ಗ್ರಾಂಡ್ ಹೋಟೆಲ್ ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಪಾಟ್ನಾ ತಂಡವು 37 ರಿಂದ 35 ಯುಪಿ ಯೋಧ ತಂಡದ ವಿರುದ್ಧ ಜಯಗಳಿಸಿದೆ.

ಮೊದಲಾರ್ಧ ಮುಗಿದಾಗ ಪಾಟ್ನಾ ತಂಡವು 20ರಿಂದ 15 ಮುನ್ನಡೆ ಸಾಧಿಸಿತ್ತು. ಆದರೆ, ವಿರಾಮದ ಬಳಿಕ ಯುಪಿ ತಂಡವು ತಿರುಗೇಟು ನೀಡಿದೆ. ಕಠಿಣ ಪೈಪೋಟಿಯಿಂದ ಕೂಡಿತ್ತು. ತಂಡದ ಸುರಿಂದರ್ ಗಿರಲ್ 10, ಹಾಗೂ ಶ್ರೀಕಾಂತ್ ಜಾಧವ್ 9, ರೆಂಡಿಂಗ್ ನಲ್ಲಿ ಪಾಯಿಂಟ್ಸ್ ಹೆಕ್ಕಿ ತಂದರು. ತಂಡದ ಗೆಲುವಿಗೆ ಪ್ರಯತ್ನಿಸಿದರು. ಆದರೆ ಪಾಟ್ನಾ ತಂಡದ ನಾಯಕ ಪ್ರಶಾಂತ್ ಕುಮಾರ್ ಅವರ ಚಾಣಾಕ್ಷ ತಂತ್ರಗಳಿಂದಾಗಿ ಯೋಧ ತಂಡಕ್ಕೆ ಜಯಗಳಿಸಲಾಗಲಿಲ್ಲ.

ಸಚಿನ್ 12, ಟ್ರೆಂಡಿಂಗ್ ನಲ್ಲಿ ಮಿಂಚಿದರು. ಆಲ್-ರೌಂಡರ್ ಮೊಹಮ್ಮದ್ ದ್ರೆಜ್ ಚಿಹಾನೆ 5, ಕೂಡ ಮಿಂಚಿದರು. ಇದರಿಂದಾಗಿ ಪಾಟ್ನಾ ತಂಡವು ರೋಚಕ ಜಯ ಸಾಧಿಸಿತು.

ಇನ್ನೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವು 36 ರಿಂದ 34 ಯು ಮುಂಬಾ ಎದುರು ಜಯಭೇರಿ ಬಾರಿಸಿತು. ಪುಣೇರಿ ತಂಡದ ಅಸ್ಲಾಂ ಇನಾಮದಾರ್ 8, ಅಭಿಷೇಕ್ ಸಿಂಗ್ 8, ಮತ್ತು ವಿ.ಅಜಿತ್ 10, ಅವರು ರೇಡಿಂಗ್ ನಲ್ಲಿ ಮಿಂಚಿದರು.

ಪಾಕಿಸ್ತಾನದಲ್ಲಿ ಹಿಂದೂ ಉದ್ಯಮಿಯ ಕೊಲೆ

0

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಉದ್ಯಮಿಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಹತ್ಯೆಗಿಡದ ವ್ಯಕ್ತಿಯನ್ನು ಉದ್ಯಮಿ ಸತನ್ ಲಾಲ್ ಎಂದು ಗುರುತಿಸಲಾಗಿದೆ.

ಈ ಹತ್ಯೆಗೆ ಸಂಬಂಧಿಸಿದ ದುಷ್ಕರ್ಮಿಗಳ ವಿರುದ್ಧ ಯಾವುದೇ ಮಾಹಿತಿ ಇಲ್ಲ. ಅವರ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಪಾಕಿಸ್ತಾನದ ಹಿಂದೂ ಸಮುದಾಯ ಆರೋಪಿಸಿದೆ.

ಅಲ್ಲಿನ ಪ್ರಭಾವಿ ದಾಹರ್ ಸಮುದಾಯದ ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಸತನ್ ಲಾಲ್ ತಮ್ಮದೇ ಜಮೀನಿನಲ್ಲಿ ಹತ್ತಿ ಕಾರ್ಖಾನೆ ಮತ್ತು ಹಿಟ್ಟಿನ ಗಿರಣಿ ಆರಂಭಿಸಿದ್ದರು. ಉದ್ಘಾಟನೆ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಗೈದ್ದಿದ್ದಾರೆ ಎಂದು ತಿಳಿದುಬಂದಿದೆ.

ದಾಹರ್ ಸಮುದಾಯದ ಜೊತೆ ಸತನ್ ಲಾಲ್ ಅವರಿಗೆ ಭೂ ವ್ಯಾಜ್ಯ ಇದ್ದಿದ್ದರಿಂದ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕ್ರಿಕೆಟ್ ಅಂಡರ್ 19: ಕಾಂಗರೂ ಪಡೆಗೆ ಭಾರತ ಸವಾಲು

0

ಅಂಡರ್ 19 ಏಕದಿನ ವಿಶ್ವಕಪ್ ನ ಸೂಪರ್ ಲೀಗ್ ಎರಡನೇ ಫೈನಲ್ ನಲ್ಲಿ ಭಾರತ ತಂಡವು 291 ರನ್ ಗಳಿಸಿ ಆಸ್ಟ್ರೇಲಿಯಾ ತಂಡಕ್ಕೆ ಸವಾಲೊಡ್ಡಿದೆ.

ಕೂಲಿಡ್ಜ್ ಕ್ರಿಕೆಟ್ ಗ್ರೌಂಡ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ, ಬ್ಯಾಟ್ಸ್ಮನ್ಗಳ ಜವಾಬ್ದಾರಿಯುತ ಆಟದ ಸಹಾಯದಿಂದ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 290ರನ್ ಕಲೆಹಾಕಿತು. ಪಂದ್ಯದ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಅಂಗ್ ಕ್ರಿಶ್ ರಘುವಂಶಿ ಮತ್ತು ಹರ್ನೂರ್ ಸಿಂಗ್ ಕೇವಲ 37 ರಂ ಗಳಿಸಿ ಪೆವಿಲಿಯನ್ ನತ್ತ ಮುಖ ಮಾಡಿದರು.

ಮೂರನೇ ವಿಕೆಟ್ ಜೊತೆ ಆಟವಾಡಿದ ಶೇಖ್ ರಶೀದ್ ಮತ್ತು ಯಶ್ ಧುಲ್ ಜೋಡಿ ಕಾಂಗರೂ ಬೌಲಿಂಗ್ ಪಡೆಯನ್ನು ಧೂಳಿಪಟಗೈಯಿತು.

ಏತನ್ಮಧ್ಯೆ, ಧುಲ್ ಶತಕ ಸಂಭ್ರಮ ಆಚರಿಸಿದರು. ಆದರೆ ಕೆಲವೇ ಹೊತ್ತಿನಲ್ಲಿ ಅವರು ರನೌಟ್ ಆದರು. ರಶೀದ್ ಅವರು ಔಟ್ ಆಗುವ ಮೂಲಕ 6 ರನ್ ಗಳಿಂದ ಶತಕ ವಂಚಿತರಾದರು.

ಉಪನಾಯಕ ಔಟಾದ ಬಳಿಕ ರನ್ ವೇಗ ಕುಸಿಯಿತು. ಕೊನೆಯಲ್ಲಿ ವಿಕೆಟ್ ಕೀಪರ್ ದಿನೇಶ್ ಬಾಣಾ ಕೇವಲ ನಾಲ್ಕು ಎಸೆತಗಳಲ್ಲಿ ತಲಾ 2 ಫೊರ್, ಸಿಕ್ಸರ್ ನೊಂದಿಗೆ ಅಜೇಯ 20 ರನ್ ಸಿಡಿಸಿದ ಪರಿಣಾಮ ತಂಡದ ಮೊತ್ತ 290ರ ಗಡಿ ಮುಟ್ಟಿತು. ಆಸ್ಟ್ರೇಲಿಯಾ ಪರ ಜಾಕ್ ನಿಸ್ಬೆತ್ ಮತ್ತು ವಿಲಿಯಮ್ ಸಲ್ಜಾಮನ್ ತಲಾ 2 ವಿಕೆಟ್ ಪಡೆದರು.

ವಿವಿಧ ಹೂಡಿಕೆದಾರರಿಗೆ ಉದ್ಯಮ ಸ್ಥಾಪನೆಗೆ ಅನುಮತಿ- ನಿರಾಣಿ

0

ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಯವರು ಬೆಂಗಳೂರು ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಒಟ್ಟು 2367.99 ಕೋಟಿ ರೂ ಹೂಡಿಕೆ 88 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದ 10,904 ಮಂದಿಗೆ ಉದ್ಯೋಗ ಲಭಿಸಲಿದೆ ಎಂದು ತಿಳಿಸಿದರು.

50 ಕೋಟಿ ರೂ. ಮೊತ್ತದ 7 ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಒಪ್ಪಿಗೆ ಕೊಡಲಾಗಿದೆ. 15 ಕೋಟಿ ರೂ 50 ಕೋಟಿ ರೂ. ಒಳಗಿನ ವೆಚ್ಚದ 78 ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಮೂರು ಯೋಜನೆಗಳಿಗೆ ಸಂಬಂಧಿಸಿದ ಹೆಚ್ಚುವರಿ 137.15 ಕೋಟಿ ರೂ. ಪ್ರಸ್ತಾವಕ್ಕೆ ಅನುಮೋದನೆಯನ್ನು ನೀಡಲಾಗಿದೆ ಎಂದು ಸಚಿವ ನಿರಾಣಿ ಒವರು ಹೇಳಿದ್ದಾರೆ.

ಗುರುದತ್ತ ಇಂಟಿಗ್ರೇಟೆಡ್ ಟೆಕ್ಸ್ ಟೈಲ್ಸ್ ಪಾರ್ಕ್ – 357 ಕೋಟಿ ರೂ. ಸ್ಪಾನ್ ಸುಲ್ಸ್ ಫಾರ್ಮು ಲೇ‌ಷನ್-96 ಕೋಟಿ ರೂ. ರಿನಾಕ್ ಇಂಡಿಯ ಲಿಮಿಟೆಡ್ – 64 ಕೋಟಿ ರೂ. ಹೆಚ್ ಆ್ಯಂಡ್ ವಿ ಅಡ್ವಾನ್ಸಡ್ ಮೆಟೀರಿಯಲ್ ಇಂಡಿಯಾ ಪ್ರೈ. – 46.50 ಕೋಟಿ ರೂ. ಟೆಕ್ಸ್ ಪೋರ್ಟ್ ಇಂಡಸ್ಟ್ರೀಸ್ ಪ್ರೈ. ಲಿಮಿಟೆಡ್ – 44.80 ಕೋಟಿ ರೂ. ಕೇನಾಸ್ಸ್ ಟೆಕ್ನೋಲಜಿ ಇಂಡಿಯಾ ಪ್ರೈ. -35 ಕೋಟಿ ರೂ ವೆಚ್ಚದ ಯೋಜನೆಗಳಾಗಿವೆ.

ಈ ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಮಣರೆಡ್ಡಿ, ಇಲಾಖೆ ಆಯುಕ್ತ ಗುಂಜಾನ್ ಕೃಷ್ಣ ಸೇರಿದಂತೆ ಉನ್ನತಾಧಿಕಾರಿಗಳು ಹಾಜರಿದ್ದರು.

ಕೋವಿಡ್ ನಿಂದ ಜನವರಿ ತಿಂಗಳಲ್ಲಿ ಗರಿಷ್ಠ ಸಾವು

0

ರಾಜ್ಯದಲ್ಲಿ ಜನವರಿ ತಿಂಗಳಿನಲ್ಲಿ ಕೋವಿಡ್ ಮೂರನೇ ಅಲೆ ಸೋಂಕು ಅಧಿಕವಾಗಿತ್ತು. ಆದರೆ ಈಗ ಸೋಂಕಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದರೂ ಸಹ ಸಾವಿನ ಪ್ರಮಾಣ ಆತಂಕಕಾರಿಯಾಗಿದೆ.

ರಾಜ್ಯದಲ್ಲಿ ಫೆಬ್ರವರಿ 2 ರಂದು 81 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಮೂರನೇ ಅಲೆ ಒಂದೇ ದಿನ ದಾಖಲಾದ ಗರಿಷ್ಠ ಸಾವಿನ ಸಂಖ್ಯೆ ಇದಾಗಿದೆ.

ಬೆಂಗಳೂರಿನಲ್ಲಿ 8,850 ಮಂದಿ ಸೇರಿದಂತೆ ರಾಜ್ಯದಲ್ಲಿ 20,505 ಮಂದಿಗೆ ಸೋಂಕು ದೃಡಪಟ್ಟಿದೆ.

ಆದಾಯ ವಿವರ ಸಲ್ಲಿಕೆ: ಕ್ರಿಪ್ಟೊ ಕರೆನ್ಸಿ ಬಗ್ಗೆ ಪ್ರತ್ಯೇಕ ವಿವರ

0

ಕೇಂದ್ರ ಬಜೆಟ್ ನಲ್ಲಿ ಕ್ರಿಪ್ಟೊ ಸೇರಿದಂತೆ ವರ್ಚುವಲ್ ಆಸ್ತಿಗಳ ವಹಿವಾಟುಗಳಿಂದ ರಚಿಸುವ ಆದಾಯಕ್ಕೆ ಶೇ.30 ರಷ್ಟು ತೆರಿಗೆಯನ್ನು ಘೋಷಿಸಿರುವ ಬೆನ್ನಲ್ಲೇ, ಈ ಬಗ್ಗೆ ಮತ್ತಷ್ಟು ವಿವರಗಳನ್ನು ಹಣಕಾಸು ಮತ್ತು ಕಂದಾಯ ಇಲಾಖೆಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಅವರು ಮುಂದಿನ ವರ್ಷದಿಂದ ಆದಾಯ ತೆರಿಗೆ ರಿಟರ್ನ್ ಅರ್ಜಿಯಲ್ಲಿ ಕ್ರಿಪ್ಟೊ ವಹಿವಾಟಿನಿಂದ ದೊರೆಯುವ ಆದಾಯವನ್ನು ಉಲ್ಲೇಖಿಸಲು ಪ್ರತ್ಯೇಕ ಕಾಲಂ ನನ್ನು ವ್ಯವಸ್ಥೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

2022ರ ಏಪ್ರಿಲ್ 1 ರಿಂದ ಕ್ರಿಪ್ಟೊ ವಹಿವಾಟಿನಿಂದ ದೊರೆಯುವ ಆದಾಯದ ಮೇಲೆ ಶೇ.30 ರಷ್ಟು ತೆರಿಗೆ ಅನ್ವಯವಾಗಲಿದೆ. ಕುದುರೆ ಜೂಜು, ಬೆಟ್ಟಿಂಗ್ ಮೂಲಕ ದೊರೆಯುವ ಆದಾಯಕ್ಕೆ ಸಮನಾಗಿ ಕ್ರಿಪ್ಟೊ ಆದಾಯವನ್ನು ಪರಿಗಣಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕ್ರಿಪ್ಟೊ ವಹಿವಾಟಿನಿಂದ ಗಳಿಸುವ 50ಲಕ್ಷ ರೂ. ಗಿಂತ ಅಧಿಕ ಆದಾಯಕ್ಕೆ ತೆರಿಗೆ ಜೊತೆಗೆ ಶೇ.15 ರಷ್ಟು ಸೆಸ್ ಮತ್ತು ಸರ್ಚಾರ್ಜ್ ಸಹ ಅನ್ವಯವಾಗಲಿದೆ ಎಂದು ತರುಣ್ ಬಜಾಜ್ ತಿಳಿಸಿದ್ದಾರೆ.

ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು “ಆರ್ ಬಿ ಐ ಹೊರತರಲಿರುವ ಡಿಜಿಟಲ್ ರೂಪಾಯಿ (ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ- ಸಿಬಿಡಿಸಿ) ಈಗಿರುವ ನಗದು ಕರೆನ್ಸಿಯ ಡಿಜಿಟಲ್ ರೂಪವಷ್ಟೇ. ಡಿಜಿಟಲ್ ಕರೆನ್ಸಿಯನ್ನು ನಗದಿನ ಜೊತೆ ಚಾಲನೆಯಿಂದ ಡಿಜಿಟಲ್ ಆರ್ಥಿಕತೆ ಬಲಗೊಳ್ಳಲಿದೆ. ವಹಿವಾಟಿನ ಭದ್ರತೆ ಹೆಚ್ಚಲಿದೆ” ಎಂದು ಹೇಳಿದ್ದಾರೆ.

ಆದ್ಯತೆ ಮೇರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ-ವಿಶ್ವೇಶ್ವರ ಹೆಗಡೆ ಕಾಗೇರಿ

0

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗ್ರಾಮೀಣ ಪ್ರದೇಶದ ಇ-ಸ್ವತ್ತು ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿವೇಶನದಲ್ಲಿ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಶಿರಸಿ ತಾಲೂಕಿನ ಮಂಜುಗುಣಿ ಗ್ರಾಮ ಪಂಚಾಯಿತಿಯಲ್ಲಿ ನಾನಾ ಕಾಮಗಾರಿಗಳಿಗೆ ಅವರು ಚಾಲನೆ ನೀಡಿದರು. ಈ ವೇಳೆ ಇ-ಸ್ವತ್ತು ಸಮಸ್ಯೆ ಪರಿಹಾರಕ್ಕೆ ರಚಿತವಾದ ಸಂಪುಟ ಉಪ ಸಮಿತಿ ವರದಿ ನೀಡುವಂತೆ ತಿಳಿಸಲಾಗುವುದು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದರು.

“ಸಣ್ಣ ವಿಷಯಗಳಿಗೂ ಸ್ಥಳೀಯ ಅಧಿಕಾರಿಗಳು ಮಂತ್ರಿಗಳವರೆಗೂ ಕಳುಹಿಸುವ ವ್ಯವಸ್ಥೆಯಿದೆ. ಸ್ಥಳೀಯವಾಗಿ ಬಗೆಹರಿಸಲು ಅವಕಾಶಗಳಿದ್ದರೂ ಮಾಡುವುದಿಲ್ಲ” ಎಂದು ಕಾಗೇರಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮಲೆನಾಡು ಭಾಗದಲ್ಲಿ ರಸ್ತೆ ನಿರ್ವಹಣ ಸಮಸ್ಯೆಯಿಂದಾಗಿ ಕಾಂಕ್ರಿಟ್ ರಸ್ತೆಗೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ. ಇದರ ವೆಚ್ಚ ಹೆಚ್ಚಾದರೂ ಆದ್ಯತೆ ಮೇರೆಗೆ ನಿರ್ಮಿಸುತ್ತೇವೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದ್ದಾರೆ.