Monday, February 16, 2026
Monday, February 16, 2026
Home Blog Page 1734

ಕಾಲೇಜಿನ ಆಡಳಿತ ಮಂಡಳಿ ವಿಧಿಸಿರುವ ಸಮವಸ್ತ್ರ ಧಾರಣೆಗೆ ಸರ್ಕಾರದ ಆದೇಶ

0

ಪದವಿಪೂರ್ವ ಕಾಲೇಜುಗಳ ಭುಗಿಲೆದ್ದಿರುವ ಹಿಜಾಬ್ ಮತ್ತು ಕೇಸರಿ ಶಾಲು ವಿವಾದಕ್ಕೆ ತಾತ್ಕಾಲಿಕ ತೆರೆ ಎಳೆಯಲು ಮುಂದಾಗಿರುವ ರಾಜ್ಯ ಸರ್ಕಾರ ವಿದ್ಯಾರ್ಥಿಗಳು ಕಾಲೇಜು ಅಭಿವೃದ್ಧಿ ಸಮಿತಿ ಅಥವಾ ಕಾಲೇಜು ಮಂಡಳಿಯ ಮೇಲ್ವಿಚಾರಣಾ ಸಮಿತಿ ನಿರ್ಧರಿಸಿರುವ ಸಮವಸ್ತ್ರ ಧರಿಸಬೇಕು ಎಂದು ಆದೇಶ ಹೊರಡಿಸಿದೆ.

ಒಂದು ವೇಳೆ ಕಾಲೇಜು ಆಡಳಿತ ಮಂಡಳಿ ಸಮವಸ್ತ್ರ ನಿಗದಿಪಡಿಸದೆ ಇದ್ದರೆ , ಸಮಾನತೆ ಮತ್ತು ಐಕ್ಯತೆಯನ್ನು ಕಾಪಾಡಿಕೊಂಡು ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ಬರದಂತೆ ಉಡುಪುಗಳನ್ನು ಧರಿಸಬೇಕು ಎಂದು ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎಸ್.ಎನ್ . ಪದ್ಮಿನಿ ಅವರು ಆದೇಶ ಹೊರಡಿಸಿದ್ದಾರೆ.

ಹಿಜಾಬ್ ಗೆ ಸಂಬಂಧಿಸಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜ್ಯ- ರಾಷ್ಟ್ರಮಟ್ಟದಲ್ಲಿ ವಾಕ್ಸಮರ ತೀವ್ರಗೊಂಡಿದೆ .
ಹಿಜಾಬ್ ಧಾರಣೆಗೆ ಕಾಂಗ್ರೆಸ್ ನೇರ ಬೆಂಬಲ ಘೋಷಿಸಿದೆ. ಆದರೆ ಬಿಜೆಪಿಯು ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಮುಸ್ಲಿಮರನ್ನು ಓಲೈಸುತ್ತಿದೆ ಎಂದು ಆಪಾದಿಸಿದೆ ಎಂದು ತಿಳಿದುಬಂದಿದೆ.

ಹಿಜಾಬ್ ಧರಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಬರುವುದು ಮತ್ತು ಇದಕ್ಕೆ ಪ್ರತಿಯಾಗಿ ಹಿಂದೂ ವಿದ್ಯಾರ್ಥಿಗಳು ಶಾಲು ಧರಿಸಿ ಬರುವ ಘಟನೆಗಳು ಶನಿವಾರ ಮತ್ತಷ್ಟು ಜಿಲ್ಲೆಗಳಲ್ಲಿ ವಿಸ್ತರಿಸಿದೆ.
ಸುಪ್ರೀಂಕೋರ್ಟ್ ಮತ್ತು ನಾನಾ ರಾಜ್ಯಗಳ ಹೈಕೋರ್ಟ್ ಗಳು ನೀಡಿರುವ ತೀರ್ಪುಗಳ ಅನ್ವಯ ಶಿರವಸ್ತ್ರ ಹಾಕಿಕೊಂಡು ಶಾಲೆಗೆ ಬರದಂತೆ ತಡೆಯುವುದು ಸಂವಿಧಾನದ ಉಲ್ಲಂಘನೆ ಅಲ್ಲ. ಆದ್ದರಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ನಿಜ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದು, ಫೆಬ್ರುವರಿ 8ರ ಮಂಗಳವಾರ ವಿಚಾರಣೆ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಮಹತ್ವದ್ದಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet

ಹೊಸ ಲಸಿಕೆ ಕಾರ್ಬಿವ್ಯಾಕ್ಸ್ ಗೆ ಸರ್ಕಾರ ಬೇಡಿಕೆ ಸಲ್ಲಿಕೆ

0

ಕೋವಿಶಿಲ್ಡ್ , ಕೋವ್ಯಾಕ್ಸಿನ್ ಬಳಿಕ ಬಯೊಲಾಜಿಕಲ್ ಇ ಕಂಪೆನಿ ದೇಶಿಯವಾಗಿ ತಯಾರಿಸಿರುವ ಕಾರ್ಬಿವ್ಯಾಕ್ಸ್ ಕೊರೊನಾ ನಿರೋಧಕ ಲಸಿಕೆಯ ಖರೀದಿಗೆ ಕೇಂದ್ರ ಸರ್ಕಾರ ಮುಂದಾಗಿದೆ.

ಈ ಸಂಬಂಧ ಮಾತುಕತೆ ಅಂತಿಮವಾಗಿದ್ದು, ಪ್ರತಿ ಡೋಸ್ ಗೆ 145 ರೂ. ನಂತೆ ಒಟ್ಟಾರೆ 5 ಕೋಟಿ ಡೋಸ್ ಗಳಷ್ಟು ಲಸಿಕೆ ಪೂರೈಕೆ ಮಾಡುವಂತೆ ಕಂಪನಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಮಾಹಿತಿ ನೀಡಿರುವ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು, 145 ರೂ. ತಯಾರಿಕಾ ವೆಚ್ಚವಾಗಿದ್ದು, ಮಾರಾಟದ ವೇಳೆ ಜಿಎಸ್ ಟಿ ಸೇರಿಕೊಂಡು ಒಟ್ಟು ಖರೀದಿ ಮೌಲ್ಯವು 725 ರೂ. ಆಗಲಿದೆ. ಈಗಾಗಲೇ 1500 ಕೋಟಿ ರೂ. ಮುಂಗಡ ಹಣವನ್ನು ಡೋಸ್ ಗಳ ರೀತಿಗಾಗಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಲಸಿಕೆಗಳ ಖರೀದಿಗೆ ಸರ್ಕಾರ ರಚಿಸಿರುವ ಎಚ್ ಎಲ್ ಎಲ್ ಲೈಫ್ ಕೇರ್ ಲಿಮಿಟೆಡ್ ಮೂಲಕ ಕಾರ್ಬಿವ್ಯಾಕ್ಸ್ ಪೂರೈಕೆ ಮಾಡುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಬೇಡಿಕೆ ಪತ್ರ ಸಲ್ಲಿಸಿದೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet

ತತ್ವಜ್ಞಾನಿ ಶ್ರೀರಾಮಾನುಜಾ ಚಾರ್ಯರ ಪ್ರತಿಮೆ ಲೋಕಾರ್ಪಣೆ

0

ಹವಾಮಾನ ಬದಲಾವಣೆಯಿಂದಾಗಿ ರೈತರನ್ನು ರಕ್ಷಿಸಲು ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ.

ಹೈದರಾಬಾದ್ ನಲ್ಲಿರುವ ಅರೆ-ಶುಷ್ಕ ಮತ್ತು ಅಂತರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ ನಡೆಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹವಾಮಾನ ಬದಲಾವಣೆಯಿಂದ ರೈತರು, ಅದರಲ್ಲೂ ಸಣ್ಣ ಪ್ರಮಾಣದ ರೈತರನ್ನು ರಕ್ಷಿಸುವುದು ಆದ್ಯತೆಯಾಗಿದೆ. ದೇಶದ ಶೇಕಡ 80ರಷ್ಟು ಸಣ್ಣ ರೈತರ ಅನುಕೂಲಕ್ಕಾಗಿ 2022-23ನೇ ಸಾಲಿನ ಬಜೆಟ್ ನಲ್ಲಿ ಸಾವಯವ ಕೃಷಿಗೆ ಮತ್ತು ಪ್ರಾಮುಖ್ಯತೆ ನೀಡಿ ಹಣ ಮೀಸಲಿಡಲಾಗಿದೆ ಎಂದರು.

ಕೃಷಿಯಲ್ಲಿ ಬೃಹತ್ ಮಾರುಕಟ್ಟೆಗಳು ಸ್ವಲ್ಪ ಮಟ್ಟಿಗೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಣ್ಣಮಟ್ಟದಲ್ಲಿ ಕೃಷಿ ಉತ್ಪಾದಕ ಸಂಘಟನೆಗಳನ್ನು ಸ್ಥಾಪಿಸುವುದು ಸದ್ಯದ ಅವಶ್ಯಕತೆಯಾಗಿದೆ. ಹಾಗೆಯೇ ಸಣ್ಣ ಪ್ರಮಾಣದ ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಏಳಿಗೆ ಹೊಂದಬೇಕು ಎಂದರು.

ಹೈದರಾಬಾದ್ ನ ಚಿನ್ನ ಜೀಯರ್ ಆಶ್ರಮದಲ್ಲಿ ಸ್ಥಾಪಿಸಲಾಗಿರುವ 216 ಅಡಿ ಎತ್ತರದ ರಾಮಾನುಜಾಚಾರ್ಯರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು.

ಸಮಾಜದಲ್ಲಿ ಸಮಾನತೆಗಾಗಿ ರಾಮಾನುಜಾಚಾರ್ಯರ ಕೊಡುಗೆ ಅಪಾರ. ಸಮಾಜದಲ್ಲಿ ಸಮಾನತೆ ತರಲು ರಾಮಾನುಜಾಚಾರ್ಯರು ನಡೆಸಿದ ಪ್ರಯತ್ನ, ತಂದ ಸುಧಾರಣೆ ಪೀಳಿಗೆಗಳವರೆಗೆ ನೆನಪಿನಲ್ಲಿ ಇರುತ್ತವೆ‌. ಅದರಲ್ಲೂ ದಲಿತರು ಬಡವರ ಏಳಿಗೆ ಅವರು ಸಹ ಸಮಾಜದ ಮುಖ್ಯವಾಹಿನಿಗೆ ಬರುವಂತೆ ರಾಮಾನುಜಾಚಾರ್ಯರು ಪ್ರೇರೇಪಿಸಿದ ರೀತಿ ಅಮೋಘವಾಗಿದೆ ಎಂದರು‌.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮೌನದಗೂಡಿಗೆ ಭಾರತದ ಗಾನ ಕೋಗಿಲೆ

0

ಲತಾ ಮಂಗೇಶ್ಕರ್ 28- 09-1929 ರಂದು ಮಧ್ಯಪ್ರದೇಶದ ಇಂದೋರ್ ನಲ್ಲಿ ಜನಿಸಿದರು.
ಇವರು ಭಾರತದ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರು.
ಹಿಂದಿ ಚಿತ್ರರಂಗದ ಬಹುತೇಕ ನಟಿಯರಿಗಾಗಿ ಲತಾ ಮಂಗೇಶ್ಕರ್ ಅವರು ಹಾಡಿದ್ದಾರೆ.
50ರ ದಶಕದಲ್ಲಿ ಮೇಲೇರಿದ ಅವರು ಕೀರ್ತಿಪತಾಕೆ.
ಗಜಲ್, ಪ್ರೇಮಗೀತೆ, ಜನಪದ ಗೀತೆ, ಕ್ಲಬ್ ಸಾಂಗ್, ಯುಗಳ ಗೀತೆ ಹೀಗೆ ಪ್ರತಿಯೊಂದು ಬಗ್ಗೆಯ ಹಾಡುಗಳನ್ನು ಲತಾ ಅವರು ಹಾಡಿದ್ದಾರೆ.

ಹಿಂದಿ ಚಿತ್ರರಂಗದಲ್ಲಿ ಬಹಳ ಹಾಡುಗಳನ್ನು ಹಾಡಿರುವುದಲ್ಲದೆ ಹಲವಾರು ಭಾರತೀಯ ಭಾಷೆಗಳಲ್ಲಿಯೂ ಹಾಡಿದ್ದಾರೆ.

1967ರಲ್ಲಿ ಬಿಡುಗಡೆಯಾದ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ” ಕನ್ನಡ ಚಲನಚಿತ್ರದಲ್ಲಿನ “ಬೆಳ್ಳನೆ ಬೆಳಗಾಯಿತು” ಮತ್ತು “ಎಲ್ಲಾರೆ ಇರತೀರೋ ಎಂದಾರೆ ಬರತೀರೋ” ಹಾಡುಗಳನ್ನು ಹಾಡಿದ್ದಾರೆ.

10,000ಕ್ಕೂ ಹೆಚ್ಚು ಹಾಡುಗಳನ್ನು 22 ಭಾಷೆಗಳಲ್ಲಿ ಹಾಡಿದ್ದಾರೆ.
ಅಮೆರಿಕ, ಯೂರೊಪ್ ಸುತ್ತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಇವರ ಹಾಡುಗಳ ವಿಶೇಷವೆಂದರೆ, ಅಸಾಧಾರಣ ಸ್ಪಷ್ಟ ಶಬ್ದೋಚ್ಚಾರ, ಶಾಸ್ತ್ರೀಯ ಸಂಗೀತದ ಸ್ವರಬದ್ಧ ಸಂಸ್ಕಾರ, ಗೀತೆಗಳ ಗುಣಮಟ್ಟ, ಸನ್ನಿವೇಶಕ್ಕೆ ನಟಿಯರ ಕಂಠಕ್ಕೆ ಸರಿಯಾಗಿ ಅಳವಡಿಸಿಹಾಡುವ ಕಲೆ. “ಪುಲೆ ವೇಚಿತಾ”- ಲತಾರವರ ಆತ್ಮಚರಿತ್ರೆಯಾಗಿದೆ.

6 ವಿಶ್ವವಿದ್ಯಾಲಯಗಳ ಗೌರವ ಡಾಕ್ಟೊರೇಟ್ (ನ್ಯೂಯಾರ್ಕ್ ವಿಶ್ವವಿದ್ಯಾಲಯವೂ ಸೇರಿದಂತೆ).
ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳು
ಶಾಂತಿನಿಕೇತನದಿಂದ ದೇಶಿಕೋತ್ತಮ ಪ್ರಶಸ್ತಿ
ಆಸ್ಥಾನ ವಿದ್ವಾನ್, ತಿರುಪತಿ ದೇವಸ್ಥಾನಮ್
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ,
ಪದ್ಮಭೂಷಣ,
ಭಾರತರತ್ನ,
ಫ್ರಾನ್ಸ್ ಸರ್ಕಾರ ನೀಡುವ ’ಆಫೀಸರ್ ಆಫ್ ದ ಲೀಜಿಯನ್ ಆಫ್ ಆನರ್’ ಪ್ರತಿಷ್ಠಿತ ಪ್ರಶಸ್ತಿ ಇವರಿಗೆ ಸಂದಿವೆ.

ಲತಾ ಮಂಗೇಶ್ಕರ್ ರವರ ಜೀವನ ಚರಿತ್ರೆ-ಹಾಡುಹಕ್ಕಿಯ ಹೃದಯಗೀತೆ ಪುಸ್ತಕವನ್ನು ಹಿರಿಯ ಪತ್ರಕರ್ತ ವಸಂತ ನಾಡಿಗೇರ್ ಅವರು ರಚಿಸಿದ್ದಾರೆ.
ಸುಮುಖ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕವು 27 ಅಕ್ಟೋಬರ್ 2009ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಂಡಿತ್ತು.
ಗಾನಕೋಗಿಲೆ ಎಂದೇ ಪ್ರಸಿದ್ಧರಾಗಿದ್ದ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರು ಮುಂಬೈನ ಬ್ರಿಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇವರ ಅಗಲುವಿಕೆಯಿಂದಾಗಿ ಸಂಗೀತ ಲೋಕವೇ ಶೋಕದಲ್ಲಿ ಮುಳುಗಿದೆ.
ಅನೇಕ ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಆಯನೂರು ಸಿರಿಗೆರೆಯಲ್ಲಿ ಕಾಡಾನೆ ಅಡ್ಡಾಡುತ್ತಿದೆ !

0

ಶಿವಮೊಗ್ಗ ಸನಿಹದ ಸಿರಿಗೆರೆಯಲ್ಲಿ ಕಾಡಾನೆ ದಾಂಧಲೆ.
ಆಯನೂರು ಸಮೀಪದ ಸಿರಿಗೆರೆಯು ದೊಡ್ಡದಾದ ಗೌಡನ ಕೆರೆ ದಡದ ಒಂದು ಗ್ರಾಮ.
ಇತ್ತೀಚೆಗೆ ರಿಪ್ಪನ್ ಪೇಟೆ ಬಳಿ ಕಾರೆಹೊಂಡ ಗ್ರಾಮದ ಅಡಕೆ ತೋಟಕ್ಕೆ ಕಾಡಾನೆ ನುಗ್ಗಿದ ಬಗ್ಗೆ ವರದಿಯಾಗಿತ್ತು.
ಈಗ ಅದೇ ಸಲಗ ಶಿವಮೊಗ್ಗದ ಹತ್ತಿರಕ್ಕೆ ಬರುತ್ತಿದೆ. ಸಿರಿಗೆರೆ ಕೃಷಿಕ ರಮೇಶ್ ಅವರು ಬೆಳೆಸುತ್ತಿರುವ ಅಡಕೆ ಮತ್ತು ಬಾಳೆ ತೋಟಕ್ಕೆ ಕಾಡಾನೆ ಈಗಷ್ಟೇ ಧಾಳಿಮಾಡಿದೆ.
ಅವರು ಬೆಳೆಸಿದ ಎರಡು ವರ್ಷದ ಅಡಕೆ ಗಿಡ ಮತ್ತು ಬಾಳೆ ಒಂದಿಷ್ಟು ಸಂಪೂರ್ಣ ನಾಶಮಾಡಿದೆ.ಕೈಗೆ ಬರುತ್ತಿದ್ದ ಬಾಳೆ ಬೆಳೆ ಹಾಳಾದ ಬಗ್ಗೆ ರಮೇಶ್ ಚಿಂತಿತರಾಗಿದ್ದಾರೆ.
ಅವರ ತೋಟದ ಮುಳ್ಳು ಬೇಲಿ ಮತ್ತು ಕಲ್ಲುಕಂಭಗಳನ್ನೂ
ಎಳೆದೊಯ್ದು ಬೇಲಿಯೂ ಕಾಡಾನೆ ಹಾವಳಿಯಿಂದ
ಧ್ವಂಸವಾಗಿದೆ.
ಅಲ್ಲದೇ ಸನಿಹದ ಚಂದ್ರಪ್ಪ ಎಂಬುವರ
ಬಣವೆಗೂ ತನ್ನ ದಂತಗಳಿಂದ ತಿವಿದು
ಬಿಗಿಯಾಗಿದ್ದ ಭತ್ತದ ಬಣವೆಯನ್ನ ಸೂರೆಮಾಡಿದೆ.
ಕಾಳು ಒಕ್ಕಲಾಗುವ ಮುನ್ನ ಹೀಗಾದರೆ ಕೃಷಿಕರ ಸ್ಥಿತಿ ಚಿಂತಾಜನಕವಾಗಲಿದೆ.

ಈಗಾಗಲೇ ಅಲ್ಲಲ್ಲಿ ಈ ಕಾಡಾನೆ ಹಾವಳಿ ವಿಪರೀತ ವರದಿಯಾಗುತ್ತಿದೆ. ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ಈ ಬಗ್ಗೆ ತಕ್ಷಣ ಕಾರ್ಯ ಪ್ರವೃತ್ತರಾಗಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು. ಈ ಮೂಲಕ ಸಿರಿಗೆರೆ ಭಾಗದ ರೈತ ಸಮುದಾಯದ ಕೃಷಿ ಬೆಳೆ ನಾಶವಾಗುವುದನ್ನ ತಪ್ಪಿಸಬಹುದು.
ಈಗ ಡ್ರೋನ್ ಕ್ಯಾಮರಾ ತಂತ್ರಜ್ಞಾನ
ಇರುವುದರಿಂದ ಎತ್ತರೆತ್ತರ ಮರಗಳ ಹೊರತು ಬಯಲು ಪ್ರದೇಶದಲ್ಲಾದರೂ
ಕಾಡಾನೆಯ ಸಂಚಾರ ಪತ್ತೆ ಹಚ್ಚಿ ಸೂಕ್ತಕ್ರಮ
ಕೈಗೊಳ್ಳಬೇಕೆಂದು
ಈ ಭಾಗದ ಕೃಷಿಕ ಸಮುದಾಯ ಸರ್ಕಾರವನ್ನ ಆಗ್ರಹಪಡಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

Shimoga News – Saturday, 5 February 2022

0

Book Your Advertisement Now in Shimoga News.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Shimoga News
Send a Whatsapp message Startto this contact to get started. That’s it! We will send you your daily dose of positive Shimoga News on Whatsapp!

Why Keelambi Media Lab Pvt Ltd in Shimoga News ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

Shimoga News

KLIVE Android App on Google Play Store

Shimoga News

Download the most loved Klive App for your Android phone or tablet.

ದೇಶದಲ್ಲಿ ಕೋವಿಡ್ ನಿಂದ ಸಾವಿನ ಸಂಖ್ಯೆ ಐದು ಲಕ್ಷ ಗಡಿದಾಟಿದೆ

0

ದೇಶದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5 ಲಕ್ಷ ದಾಟಿದೆ.
2020 ರ ಮಾರ್ಚ್ 13ರಂದು ದೇಶದಲ್ಲೇ ಮೊದಲ ಕೊರೊನಾ ಸಾವು ಕರ್ನಾಟಕದಲ್ಲಿ ವರದಿಯಾಗಿತ್ತು. ಆ ನಂತರ ಅಕ್ಟೋಬರ್ 2ರಂದು ದೇಶದಲ್ಲಿ ಕೊರೊನಾಗೆ ಬಲಿಯಾದವರ ಒಟ್ಟು ಸಂಖ್ಯೆ 1 ಲಕ್ಷ ಗಡಿ ಮುಟ್ಟಿತ್ತು.

ವಿಶ್ವದಲ್ಲಿ ಕೊರೊನಾಗೆ 5 ಲಕ್ಷಕ್ಕೂ ಹೆಚ್ಚು ಜನರು ಬಲಿಯಾಗಿರುವ ಮೂರನೇ ರಾಷ್ಟ್ರ ಭಾರತವಾಗಿದೆ. ಅಮೆರಿಕ ಹಾಗೂ ಬ್ರೆಜಿಲ್ ನಲ್ಲಿ ಕೆಲತಿಂಗಳ ಮುನ್ನವೇ ಸಾವಿನ ಗಡಿ 5 ಲಕ್ಷ ದಾಟಿದೆ.
ಅಮೆರಿಕದಲ್ಲಿ 9.2 ಲಕ್ಷ ಜನರು ಕೊರೊನಾ ಸೋಂಕಿನಿಂದ ಮೃತರಾಗಿದ್ದಾರೆ.

ಸದ್ಯ ಭಾರತದಲ್ಲಿ ಕೊರೊನಾ 3ನೇ ಅಲೆಯು ಅಂತ್ಯದ ಭಾಗದಲ್ಲಿದೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಸೇರಿದಂತೆ ಸುಮಾರು 34 ರಾಜ್ಯಗಳಲ್ಲಿ ಕೊರೊನಾ ಮೂರನೇ ಅಲೆಯು ಉತ್ತುಂಗ ತಲುಪಿದ ಬಳಿಕ ಇಳಿಮುಖವಾಗುತ್ತಿದೆ.
ಮಿಜೋರಾಂ ಮತ್ತು ಕೇರಳದಲ್ಲಿ ಮಾತ್ರ ಕೊರೊನಾ ಅಟ್ಟಹಾಸ ಮುಂದುವರೆದಿದೆ.
ಶುಕ್ರವಾರ ಒಂದೇ ದಿನ ಕೇರಳದಲ್ಲಿ 601 ಸೋಂಕಿತರು ಮೃತಪಟ್ಟಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರೊ ಕಬಡ್ಡಿ ಲೀಗ್ ಬುಲ್ಸ್ – ದಬಾಂಗ್ ರೋಚಕ ಟೈ

0

ವೈಟ್ ಫೀಲ್ಡ್ ನ ಶೆರಟಾನ್ ಗ್ರಾಂಡ್ ಹೋಟೆಲ್ ನ ಸಭಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಎಂಟನೇ ಆವೃತ್ತಿಯ 93ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಮತ್ತು ದಬಾಂಗ್ ದಿಲ್ಲಿ ತಂಡಗಳು ಹಣಾಹಣಿ ನಡೆಸಿದವು. ಎರಡು ತಂಡಗಳ ನಡುವೆ ನಡೆದ ಪಂದ್ಯವು ಪಂದ್ಯವು ಡ್ರಾ ಮಾಡಿಕೊಳ್ಳುವ ಮೂಲಕ ಅಂತ್ಯವಾಯಿತು.

ಉಭಯ ತಂಡಗಳು 36-36 ಅಂಕಗಳಿಂದ ಸಮಬಲ ಹೋರಾಟ ನೀಡಿದವು. ಹೀಗಾಗಿ ತಲಾ ಮೂರು ಅಂಕಗಳಿಗೆ ಸಮಾಧಾನಪಟ್ಟುಕೊಂಡವು.

ಪಂದ್ಯ ಮುಕ್ತಾಯಕ್ಕೆ ಇನ್ನೇನೂ ಎರಡು ನಿಮಿಷ ಬಾಕಿ ಇರುವಾಗ 34 30ರಲ್ಲಿ ಮುನ್ನಡೆಯಲ್ಲಿ ಇದ್ದ ಬೆಂಗಳೂರು ತಂಡ ಕೊನೆಯಲ್ಲಿ ಸತತವಾಗಿ ಅಂಕ ಬಿಟ್ಟುಕೊಟ್ಟು ಹತ್ತನೇ ಗೆಲುವಿನ ಅವಕಾಶವನ್ನು ಕಳೆದುಕೊಂಡಿತ್ತು.

ಬೆಂಗಳೂರು ಬುಲ್ಸ್ ತಂಡವು ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರುವ ಅವಕಾಶವು ಪಂದ್ಯದಿಂದ ಕೈ ಜಾರಿತು.

ಬೆಂಗಳೂರು ಬುಲ್ಸ್ ತಂಡವು ಸದ್ಯ ಆಡಿದ 18 ಪಂದ್ಯಗಳಿಂದ 54 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ದಬಾಂಗ್ ದಿಲ್ಲಿ ತಂಡವು 57 ಅಂಕಗಳೊಂದಿಗೆ ಮೊದಲನೇ ಸ್ಥಾನ ಪಡೆದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನೀಟ್ ಪರೀಕ್ಷೆ ಮುಂದೂಡಲು ಇಲಾಖೆ ಸೂಚನೆ

0

ದೇಶದಾದ್ಯಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಕ್ಕಾಗಿ ಮಾರ್ಚ್ 12ರಂದು ನಿಗದಿಯಾಗಿದ್ದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನೀಟ್- ಪಿಜಿ 2022 ಅನ್ನು ಮುಂದೂಡುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಸೂಚನೆ ನೀಡಿದೆ. ಪರೀಕ್ಷೆಯು ಮುಂಬರುವ ಮೇ ಅಥವಾ ಜೂನ್ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

2021 ನೇ ಸಾಲಿನ ನೀಟ್ ಸ್ನಾತಕೋತ್ತರ ಕೌನ್ಸಿಲಿಂಗ್ ಮತ್ತು 2022ನೇ ಸಾಲಿನ ನೀಟ್ ಪಿಜಿ ಪರೀಕ್ಷೆ ಏಕಕಾಲದಲ್ಲಿ ಬರುವುದರಿಂದ ಅಭ್ಯರ್ಥಿಗಳಿಗೆ ಗೊಂದಲವಾಗುತ್ತದೆ. ವೈದ್ಯಕೀಯ ವಿಭಾಗದ ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ನಡೆಯುವ ಅರ್ಹತಾ ಪರೀಕ್ಷೆ ಮಾರ್ಚ್ 12ರಂದು ನಿಗದಿಯಾಗಿದ್ದರೂ, ಹಲವಾರು ಎಂಬಿಬಿಎಸ್ ಪದವೀಧರರು ಇಂಟರ್ನ್ಶಿಪ್ ಅವಧಿಯನ್ನು ಕೂಡ ಪೂರ್ಣಗೊಳಿಸಿಲ್ಲ. ಆದ್ದರಿಂದ ಮಾರ್ಚ್ 12ರ ಪರೀಕ್ಷೆಗೆ ಹಾಜರಾಗುವುದು ಸಾಧ್ಯವಾಗುವುದಿಲ್ಲ ಎಂದು ಎಂಬಿಬಿಎಸ್ ಪದವೀಧರರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ಆರಂಭವಾಗುವ ಮುನ್ನವೇ ಪರೀಕ್ಷೆ ಮುಂದೂಡುವ ತೀರ್ಮಾನವನ್ನು ಸರ್ಕಾರ ಪ್ರಕಟಿಸಿದೆ. ವಿದ್ಯಾರ್ಥಿಗಳ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯನ್ನು ಫೆಬ್ರವರಿ 8 ಕ್ಕೆ ಮುಂದೂಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪಾಕ್ ಮತ್ತು ಚೀನಾಗಳಿಂದ ಭಾರತದ ಗಡಿ ಒತ್ತುವರಿ

0

ಕೇಂದ್ರಾಡಳಿತ ಪ್ರದೇಶ ಲಡಾಕ್ ಗಡಿಭಾಗದಲ್ಲಿ ಒತ್ತುವರಿ ಮಾಡುವ ಅಕ್ರಮ ಚಟುವಟಿಕೆಯನ್ನು ಚೀನಾ ಕಳೆದ ಆರು ದಶಕಗಳಿಂದ ನಡೆಸಿಕೊಂಡು ಬಂದಿದೆ.

ಇದುವರೆಗೂ ಸುಮಾರು 38 ಸಾವಿರ ಚದರ ಕಿಲೋಮೀಟರ್ ಭಾರತದ ಭೂಮಿಯನ್ನು ಅದು ಅಕ್ರಮಿಸಿದೆ ಎಂದು ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.

ಚೀನಾ ಮಾತ್ರವಲ್ಲ, ಪಾಕಿಸ್ತಾನವು ನಮ್ಮ ಪ್ರದೇಶವನ್ನು ಒತ್ತುವರಿ ಮಾಡಿದೆ. 1963 ರಲ್ಲಿ ಶೇಕ್ಸ್ ಗ್ರಾಮ್ ಕಣಿವೆಯಿಂದ ಚೀನಾ ಗಡಿವರೆಗಿನ ಭಾರತದ 5,180 ಚದರ ಕಿ. ಮೀ. ಭೂಭಾಗವನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿತ್ತು. ಚೀನಾ ಕೂಡ ಆರು ದಶಕಗಳಿಂದ ಇದೆ ಅಕ್ರಮವನ್ನು ಮುಂದುವರಿಸಿಕೊಂಡು ಬಂದಿದೆ. 1963ರ ಚೀನಾ-ಪಾಕಿಸ್ತಾನ ಗಡಿ ಒಪ್ಪಂದದಲ್ಲಿ ಭೂ ರೇಖೆಗಳೇ ಇಲ್ಲ. ಆದ್ದರಿಂದ ಈ ಒಪ್ಪಂದವನ್ನು ಭಾರತ ಮಾನ್ಯತೆ ಮಾಡಿಲ್ಲ. ಈ ಭೂಪ್ರದೇಶವನ್ನು ಒತ್ತುವರಿಯ ಭಾಗ ಎಂದೇ ಪರಿಗಣಿಸಲಾಗಿದೆ ಎಂದು ವಿದೇಶಾಂಗ ಖಾತೆ ಸಹಾಯಕ ಸಚಿವ ವಿ. ಮುರಳಿಧರ ರಾವ್ ಅವರು ತಿಳಿಸಿದ್ದಾರೆ.