ಕನ್ನಡ ಸಂಘಟನೆಗಳ ಮೂಲಕ ವಿಧಾನಸಭೆಗೆ ಬನ್ನಿ ಎಂದು ಹೋರಾಟಗಾರರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಕರೆ ನೀಡಿದ್ದಾರೆ. ನಾಡಿನ ನೆಲ, ಜಲ ಹಾಗೂ ಭಾಷೆ ಕುರಿತು ಕನ್ನಡಪರ ಸಂಘಟನೆಗಳ ಜೊತೆ ಬೆಂಗಳೂರು ನಗರದ ಟೌನ್ ಹಾಲ್ ನಲ್ಲಿ ಮುಕ್ತ ಸಂವಾದ ನಡೆಸಿದರು.
ಸಣ್ಣಪುಟ್ಟ ಭಿನ್ನಾಭಿಪ್ರಾಯ ತೊರೆದು ಒಗ್ಗಟ್ಟಿನಿಂದ ನಿಂತರೆ, ಶಿವಸೇನೆಯಂತೆಯೇ ಕನ್ನಡಪರ ಸಂಘಟನೆಯ ಪ್ರತಿನಿಧಿಗಳು ಕೂಡ ವಿಧಾನಸಭೆ ಪ್ರವೇಶಿಸಬಹುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಪಂಚರತ್ನ ಯೋಜನೆ ಮೂಲಕ ಪ್ರಣಾಳಿಕೆ ಘೋಷಿಸಿದರು. ಈ ಪ್ರಣಾಳಿಕೆಯು 1ರಿಂದ 12ನೇ ತರಗತಿಯವರೆಗೆ ಕನ್ನಡ, ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ, ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಅತ್ಯುತ್ತಮ ಶಾಲೆ, ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಬೆಂಗಳೂರಿನಲ್ಲಿ ಪ್ರತಿ ವಾರ್ಡ್ ನಲ್ಲಿ ಅತ್ಯುತ್ತಮ ಶಾಲೆ, 25 ಸಾವಿರ ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ಮತ್ತು ನಗರದಲ್ಲಿ ಉಚಿತ ಶಿಕ್ಷಣ ಎಂಬ ಅಂಶಗಳನ್ನು ಒಳಗೊಂಡಿದೆ. ಕನ್ನಡ ಹೋರಾಟಗಾರರ ರಿಂದಲೇ ಕನ್ನಡಕ್ಕೆ ಜೀವಂತಿಕೆ ಇದೆ. ಕನ್ನಡದ ಕೆಲಸಕ್ಕಾಗಿ ಸ್ವಾಭಿಮಾನ ಬದಿಗಿಟ್ಟು ಕರ್ತವ್ಯ ನಿಭಾಯಿಸಬೇಕು. ನಮ್ಮ ದನಿಗೆ ಸ್ಪಂದಿಸುವ ಸರ್ಕಾರ ಬರಲಿ ಎಂದು ಉಸ್ಮಾನಿಯಾ ವಿವಿ ವಿಶ್ರಾಂತ ಕುಲಪತಿಗಳಾದ ಪ್ರೋ.ಇಕ್ಬಾಲ್ ಅಹಮದ್ ಅವರು ತಿಳಿಸಿದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಬೆಳೆ ಪರಿಹಾರವಾಗಿ ಹೆಚ್ಚುವರಿಯಾಗಿ 1135.49 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ತಿಳಿಸಿದ್ದಾರೆ. ಬೆಳೆ ಪರಿಹಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಳೆದ ಅಧಿವೇಶನದಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆಯಂತೆ ಸರ್ಕಾರವು ಹಣ ಬಿಡುಗಡೆ ಮಾಡಿದೆ ಎಂದರು.
ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ನಿಗದಿಯಾದಂತೆ ಈಗಾಗಲೇ ರಾಜ್ಯದ 18.02 ಲಕ್ಷ ರೈತರಿಗೆ 1252.89 ಕೋಟಿ ರೂ.ಇನ್ ಪುಟ್ ಸಬ್ಸಿಡಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಆಗಿದೆ. ಬೆಳೆಹಾನಿಗೆ ಹೆಚ್ಚಿನ ಆರ್ಥಿಕ ನೆರವನ್ನು ರೈತರಿಗೆ ನೀಡಬೇಕಾಗಿತ್ತು. ಹಾಗಾಗಿ ಇನ್ ಪುಟ್ ಸಬ್ಸಿಡಿ ಮೊತ್ತ ಪರಿಷ್ಕರಣೆ ಮಾಡಲು ಬೆಳಗಾವಿ ಅಧಿವೇಶನದಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಹೆಚ್ಚುವರಿ ಪರಿಹಾರವಾಗಿ 1,135.49 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಈವರೆಗೆ ಪ್ರವಾಹದಿಂದ ಉಂಟಾದ ಬೆಳೆಹಾನಿಗೆ 2,388.39 ಕೋಟಿ ರೂ. ರೈತರಿಗೆ ನೀಡಲಾಗಿದೆ ಎಂದು ಆರ್. ಅಶೋಕ್ ಅವರು ತಿಳಿಸಿದರು.
2021 ನೇ ಸಾಲಿನ ಅಕಾಲಿಕ ಮಳೆಯಿಂದ ಉಂಟಾದ ಪ್ರವಾಹದಿಂದಾಗ ಅಪಾರ ಬೆಳೆ ಹಾನಿ ಉಂಟಾಗಿತ್ತು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಕೆಪಿಎಸ್ ಸಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆ ಭರ್ತಿಗೆ 2011ರಲ್ಲಿ ನಡೆಸಿದ್ದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ 362 ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಈ ಹಿಂದೆ ಕೆಪಿಎಸ್ ಸಿ ಹೊರಡಿಸಿದ ಅಧಿಸೂಚನೆಯ ಪಟ್ಟಿಯಲ್ಲಿದ್ದವರಿಗೆ ನೇಮಕಾತಿ ಆದೇಶ ನೀಡಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವ ಜೆ.ಸಿ. ಮಾಧುಸ್ವಾಮಿ, ಕೆಪಿಎಸ್ ಸಿ ಹಿಂದೆ ಹೊರಡಿಸಿದ್ದ ಅಧಿಸೂಚನೆಯನ್ನು ಮಾನ್ಯ ಮಾಡಿ ಅಭ್ಯರ್ಥಿಗಳೆಲ್ಲ ಆಯ್ಕೆಯಾಗಿದ್ದಾರೆ ಎಂದು ಭಾವಿಸಿ ನೇಮಕಾತಿ ಆದೇಶ ನೀಡಲು ತೀರ್ಮಾನಿಸಿದೆ ಎಂದು ತಿಳಿಸಿದರು. ಈ ಹಿಂದೆ ಆಯ್ಕೆಪಟ್ಟಿಯನ್ನು ತಿರಸ್ಕರಿಸುವ ಸಂದರ್ಭದಲ್ಲಿ ಉಂಟಾಗಿರುವ ಲೋಪಗಳ ಆಧಾರದಲ್ಲಿ ಅಭ್ಯರ್ಥಿಗಳಿಗೆ ರಕ್ಷಣೆ ನೀಡಲು ತೀರ್ಮಾನಿಸಲಾಗಿದೆ. ನ್ಯಾಯಾಲಯ ಉಲ್ಲೇಖಿಸಿರುವ ಆಕ್ಷೇಪಗಳಿಗೆ ನೀಡಲಾಗುವ ಸಮಜಾಯಿಷಿ, ಮನವರಿಕೆ ಮಾಡಿಕೊಡಬೇಕಾದ ಅಂಶಗಳನ್ನು ವಿಧೇಯಕದಲ್ಲಿ ಸೇರ್ಪಡೆ ಮಾಡಲಾಗುವುದು. ಸೇವಾ ಜೇಷ್ಠತೆ ಸೇರಿದಂತೆ ಇತರ ವಿಷಯಗಳ ಬಗ್ಗೆ ನಿಯಮಗಳನ್ನು ರೂಪಿಸಲಾಗುವುದು ಎಂದು ತಿಳಿದುಬಂದಿದೆ. ಇದಕ್ಕೆ ಪೂರಕವಾಗಿ ಸಿದ್ಧಪಡಿಸಿರುವ ವಿಧೇಯಕಕ್ಕೆ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ದಶಕದಷ್ಟು ಹಳೆಯದಾದ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಲು ಸರ್ಕಾರ ಮುಂದಾಗಿದೆ. ಇದೇ ವಿಧಾನಮಂಡಲದ ಅಧಿವೇಶನದಲ್ಲಿ ಕರ್ನಾಟಕ ನಾಗರಿಕ ಸೇವೆಗಳು ವಿಧೇಯಕ -2022 ಮಂಡಿಸಿ, ಅನುಮೋದನೆ ಪಡೆಯಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಗ್ರಾಮೀಣ ಭಾಗದಲ್ಲಿ ಅದರಲ್ಲೂ ವಿಶೇಷವಾಗಿ ಮಲೆನಾಡಿನ ಗ್ರಾಮಗಳಲ್ಲಿ ಹಳ್ಳ, ಕಾಲುವೆ ಮತ್ತಿತರೆ ನೀರಿನ ಮೂಲಗಳನ್ನು ದಾಟಲು ಸೂಕ್ತ ವ್ಯವಸ್ಥೆಯಿಲ್ಲದೇ ಸುತ್ತುಬಳಸು ದಾರಿಗಳ ಮೂಲಕ ಸಾಗುವುದು ಕಷ್ಟವಾಗುತ್ತಿತ್ತು. ಜನರ ಈ ಸಂಕಷ್ಟವನ್ನು ನೀಗಿಸಲು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಲುಸಂಕಗಳನ್ನು ನಿರ್ಮಿಸಲಾಗುತ್ತಿದೆ.
ಗ್ರಾಮೀಣ ಭಾಗಗಳಲ್ಲಿ ಅವಶ್ಯಕತೆ ಇರುವೆಡೆ ಗ್ರಾಮ ಪಂಚಾಯ್ತಿ ಮೂಲಕ ಕಾಲುಸಂಕ ನಿರ್ಮಿಸುವ ಕಾರ್ಯ ನಡೆಯುತ್ತಿದ್ದು, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಆದವಳ್ಳಿ ಮತ್ತು ಕೊಳಗಿ ಊರಿನ ಗ್ರಾಮಸ್ಥರು ಸೊನಲೆಗೆ ಹೋಗಲು ಹಳ್ಳ ದಾಟಬೇಕಿತ್ತು. ಈ ಹಳ್ಳಕ್ಕೆ ಕಾಲು ಸಂಕ ಅಥವಾ ಸೇತುವೆ ಇಲ್ಲದ ಕಾರಣ ಜನರು ಸುತ್ತುಬಳಸು ದಾರಿಯಲ್ಲಿ ಸಾಗಲು ಕಷ್ಟಕರವಾಗಿತ್ತು.
ಆದವಳ್ಳಿ ಗ್ರಾಮವು ಸೊನಲೆ ಗ್ರಾಮಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿದ್ದು, ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಸುಮಾರು 75 ಕಿ.ಮೀ ಹಾಗೂ ಹೊಸನಗರ ತಾಲ್ಲೂಕು ಕೇಂದ್ರದಿಂದ 14 ಕಿ ಮೀ ದೂರವಿದೆ. ಗ್ರಾಮ ಪಂಚಾಯತಿಯಿಂದ ಸುಮಾರು 2 ಕಿ. ಮೀ ದೂರದಲ್ಲಿದೆ. ಈ ಗ್ರಾಮವು ಆರ್ಥಿಕವಾಗಿ ಹಿಂದುಳಿದ ಗ್ರಾಮವಾಗಿರುವುದರಿಂದ ಕೂಲಿ ಕೆಲಸವನ್ನು ಮಾಡುವ ಜನರ ಸಂಖ್ಯೆ ಹೆಚ್ಚಾಗಿದ್ದು ಜನರು ತಮ್ಮ ದೈನಂದಿನ ವ್ಯವಹಾರಕ್ಕಾಗಿ ಸೊನಲೆ ಗ್ರಾಮಕ್ಕೆ ಬರುವುದು ತೀರಾ ಅವಶ್ಯಕವಾಗಿತ್ತು.
ಆದವಳ್ಳಿ ಮತ್ತು ಕೊಳಗಿ ಗ್ರಾಮದ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಸೊನಲೆ ಗ್ರಾ.ಪಂ 2019-20 ನೇ ಸಾಲಿನಲ್ಲಿ ಅಂದಾಜು ಮೊತ್ತ ರೂ.17,42,000 ಮೊತ್ತದಲ್ಲಿ ಆದವಳ್ಳಿ ಮತ್ತು ಕೊಳಗಿ ಗ್ರಾಮದಿಂದ ಸೊನಲೆಗೆ ಹಸೆಕೊಡಿಗೆ ಹಳ್ಳದ ಮೂಲಕ ಸಾಗಲು ಕಾಲುಸಂಕ ಕಾಮಗಾರಿಗೆ ಅನುಮೋದನೆ ನೀಡಿತು.
ಆದವಳ್ಳಿ ಗ್ರಾಮದಿಂದ ಸೊನಲೆಗೆ ಹೋಗುವ ಹಸೆಕೊಡಿಗೆ ಹಳ್ಳಕ್ಕೆ ಕಿರು ಸೇತುವೆ ನಿರ್ಮಾಣ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆದು ನಂತರ ತಾಲ್ಲೂಕು ಪಂಚಾಯತಿ ಮುಖಾಂತರ ಕ್ರಿಯಾಯೋಜನೆ ಅನುಮೋದನೆ ಪಡೆದು ಅನುಷ್ಟಾನ ಮಾಡಲಾಗಿದೆ. ಕಿರು ಸೇತುವೆ ನಿರ್ಮಾಣದಿಂದಾಗಿ ಆದವಳ್ಳಿ ಗ್ರಾಮದ ಸುಮಾರು 100 ಕುಟುಂಬಗಳಿಗೆ ಅನುಕೂಲವಾಗಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯ ಆದ್ಯತೆ “ಡಿ” ನಲ್ಲಿ ಕಿರು ಸೇತುವೆ ಕಾಮಗಾರಿಗಳನ್ನು ಅನುಷ್ಟಾನ ಮಾಡಲು ಅವಕಾಶವಿದ್ದು ಅದರಂತೆ ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಆದವಳ್ಳಿ ಗ್ರಾಮದಿಂದ ಸೊನಲೆಗೆ ಸಂಪರ್ಕಿಸುವ ಹಸೆಕೊಡಿಗೆ ಹಳ್ಳಕ್ಕೆ ಕಿರು ಸೇತುವೆ ನಿರ್ಮಾಣ ಕಾಮಗಾರಿಯು ದಿನಾಂಕ:01/04/2019 ರಂದು ಪ್ರಾರಂಭಿಸಲಾಯಿತು. ಕಾಮಗಾರಿಯ ಅಂದಾಜು ಮೊತ್ತ ರೂ.17,42,000/-ವಾಗಿದ್ದು, ಕೆಲಸ ಪ್ರಾರಂಭದ ಕೂಲಿಯ ಬಾಬ್ತು ರೂ.6,27,298/- ಮತ್ತು ಸಾಮಗ್ರಿ ಮೊತ್ತ ರೂ.99,294 ಪಾವತಿಸಲಾಗಿದೆ.
ಒಟ್ಟು 2422 ಮಾನವ ದಿನಗಳನ್ನು ಸೃಷ್ಠಿಸಲಾಗಿದ್ದು, ಕುಶಲ ಕೂಲಿ ಮೊತ್ತ ರೂ.99294/- ಪಾವತಿಸಲಾಗಿದೆ. ಜನರ ದೈನಂದಿನ ವ್ಯವಹಾರಕ್ಕೆ ಹಸೆಕೊಡಿಗೆ ಹಳ್ಳಕ್ಕೆ ಕಿರು ಸೇತುವೆ ಅವಶ್ಯಕವಾದ್ದರಿಂದ ಜನರ ಆಶೋತ್ತರಗಳಿಗೆ ಸ್ಪಂದಿಸಿ ಈ ಕಾಮಗಾರಿಯ ನಿರ್ಮಾಣ ಮಾಡಲಾಗಿದೆ. ಸೊನಲೆ ಗ್ರಾಮಪಂಚಾಯಿತಿಯ ಸರ್ವ ಸದಸ್ಯರ ಒಪ್ಪಿಗೆ ಮೇರಗೆ ಈ ಕಿರು ಸೇತುವೆಯನ್ನ ನಿರ್ಮಾಣ ಮಾಡಲು ತೀರ್ಮಾನಿಸಿ ಇದಕ್ಕೆ ಸಾಮಗ್ರಿ ಮೊತ್ತ ಹಾಗೂ ಕೂಲಿಯ ವೆಚ್ಚವನ್ನ ಸರಿದೂಗಿಸಿ ಅತ್ಯಂತ ಯಶಸ್ವಿಯಾಗಿ ಈ ಕಾಲುಸಂಕ ಕಾಮಗಾರಿಯನ್ನ ಪೂರ್ಣಗೊಳಿಸಿದ್ದೇವೆ ಎಂದು ಎಂ.ಎಲ್.ವೈಶಾಲಿ, ಜಿ.ಪಂ, ಸಿಇಓ ಅವರು ತಿಳಿಸಿದರು.
ಸಂತಸ ವ್ಯಕ್ತ : ಆದವಳ್ಳಿ ಗ್ರಾಮದಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಮತ್ತು ಅಲ್ಲಿನ ಜನರು ಕೆಲಸಕ್ಕೆ ಸೊನಲೆ ಗ್ರಾಮವನ್ನೇ ಆಶ್ರಯಿದ್ದಾರೆ. ಮಳೆಗಾಲದ ಸಮಯದಲ್ಲಿ ಹಸೆಕೊಡಿಗೆ ಹಳ್ಳ ತುಂಬಿ ಹರಿಯುವುದರಿಂದ ಸೊನಲೆಗೆ ಬರುವುದು ತುಂಬಾ ಕಷ್ಟವಾಗಿತ್ತು.ಈ ಕಿರುಸೇತುವೆ ನಿರ್ಮಾಣದಿಂದಾಗಿ ಸ್ಥಳೀಯರಿಗೆ ಅನುಕೂಲವಾಗಿದೆ ಎಂದು ಸೊನಲೆ ಗ್ರಾಮಸ್ಥರಾದ ಲೋಕೇಶ.ಆರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಕ್ಷಿಣ ನದಿಗಳ ಜೋಡಣೆ ಪ್ರಸ್ತಾಪಿಸಿದ ಪರಿಣಾಮ, ಈ ವಿಷಯದ ಚರ್ಚೆಯ ಪಡಸಾಲೆಗೆ ಮತ್ತೆ ಬಂದಿದೆ. ಗೋದಾವರಿ, ಕೃಷ್ಣಾ, ಪೆನ್ನಾರ್ ಮತ್ತು ಕಾವೇರಿ ನದಿ ಜೋಡಣೆಯಿಂದ ರಾಜ್ಯಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಅಭಿಪ್ರಾಯ ತಜ್ಞರಿಂದ ಕೇಳಿಬಂದಿದೆ. ರಾಜ್ಯ ಸರ್ಕಾರವೂ ಧಾಟಿಯಲ್ಲಿ ಪ್ರತಿಕ್ರಿಯಿಸುತ್ತಿದೆ.
ಹಾಗಾದ್ರೆ ಏನಿದು ನದಿ ಜೋಡಣೆ, ರಾಜ್ಯಕ್ಕೆ ಏಕೆ ನಷ್ಟವಾಗುತ್ತಿದೆ, ಒಟ್ಟಾರೆ ಯೋಜನೆಗಳಿಂದ ಲಾಭಗಳೇನು, ಮತ್ತು ಇದರಿಂದ ನಷ್ಟವೇನು ಎಂಬುವುದರ ಮಾಹಿತಿ ಇಲ್ಲಿದೆ.
ಯಮುನೆಯ ಉಪನದಿಗಳಾದ ಕೆನ್-ಬೆಟ್ವಾ ನದಿ ಜೋಡಣೆಗೆ 44,605 ಕೋಟಿ ರೂಪಾಯಿ ಮೀಸಲಿಡುವ ಮೂಲಕ, ದಕ್ಷಿಣದ ಪಂಚನದಿಗಳ ಜೋಡಣೆಯ ಕನಸಿಗೆ ಕಸುವು ತುಂಬುವ ಯತ್ನವೂ ನಡೆದಿದೆ. ಆದರೆ, ಈ ಘೋಷಣೆ ಕರ್ನಾಟಕದ ಕೃಷ್ಣಾ, ಕಾವೇರಿ ಸೀಮೆಯ ಜನರಿಗೆ ಯಾವ ರೀತಿ ಅನುಕೂಲವಾಗುತ್ತದೆ. ಮತ್ತು ಎರಡು ನದಿಗಳ ಜಲಾನಯನ ಪ್ರದೇಶ ಎಷ್ಟರಮಟ್ಟಿಗೆ ವಿಸ್ತರಣೆಯಾಗುತ್ತದೆ? ಜೋಡಣೆ ನಂತರ ಹರಿಯುವ ನದಿಗಳು ನಮ್ಮ ಕಲ್ಯಾಣ ಕರ್ನಾಟಕ, ಕೋಲಾರ ಸೀಮೆಯ ಜನರಿಗೆ ಕುಡಿಯುವ ನೀರು ಪೂರೈಸಬಲ್ಲವೇ? ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರ ದೊರಕಿಲ್ಲ. ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಡಿಪಿಆರ್ ನಲ್ಲಿ ಏನಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಕೂಡ ದೊರೆತ್ತಿಲ್ಲ.
2020ರಲ್ಲಿ ಗೋದಾವರಿ, ಕೃಷ್ಣಾ, ಕಾವೇರಿ ನದಿಗಳನ್ನು ಜೋಡಿಸಲು ಡಿಪಿಆರ್ ಸಿದ್ಧ ಎಂದು ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಗೋದಾವರಿಯಿಂದ 247 ಟಿಎಂಸಿ ಅಡಿಯಷ್ಟು ಹೆಚ್ಚುವರಿ ನೀರನ್ನು ಕೃಷ್ಣಾ, ಕಾವೇರಿ, ಪೆನ್ನಾರ್ ಜಲಾನಯನ ಪ್ರದೇಶಗಳನ್ನು ಒಳಗೊಂಡಿರುವ ದಕ್ಷಿಣ ಪ್ರದೇಶಗಳಿಗೆ ತಿರುಗಿಸಬಹುದು. ಮೂರು ಹಂತದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಬಹುದು ಎಂದು ಅಂದಿನ ಕೇಂದ್ರ ಜಲಸಂಪನ್ಮೂಲ ಸಚಿವರು ಘೋಷಿಸಿದ್ದರು. ಮೊದಲ ಹಂತದಲ್ಲಿ ಈ ಯೋಜನೆಯಿಂದ ತನಗೆ 200 ಟಿಎಂಸಿ ಅಡಿ ನೀರು ಸಿಗಬೇಕು ಎಂದು ಕೋರಿಕೆ ಇಟ್ಟಿರುವ ತಮಿಳುನಾಡು, ತನಗೆ ಸಿಂಹಪಾಲು ದೊರೆಯಲಿದೆ ಎಂಬ ಉತ್ಸಾಹದಲ್ಲಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವಂತೆ ಸಲಹೆ ನೀಡಿದೆ. ಈ ಯೋಜನೆಯಿಂದ ಕರ್ನಾಟಕಕ್ಕೆ ಎಷ್ಟು ವಿಧಿಗಳಿವೆ ಎಂಬುದರ ಸ್ಪಷ್ಟ ಮಾಹಿತಿ ದೊರಕಿಲ್ಲ.
ಬಜೆಟ್ ನಲ್ಲಿ ಘೋಷಿಸಿರುವ ಕೃಷ್ಣಾ ಕಾವೇರಿ ನದಿಗಳ ಜೋಡಣೆಯಿಂದ ಕರ್ನಾಟಕದ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಅಭಾವ ಎದುರಾಗಲಿದೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ನದಿ ಜೋಡಣೆ ಯೋಜನೆಯಿಂದ ಕರ್ನಾಟಕಕ್ಕೆ ಬಾರಿ ಅನ್ಯಾಯವಾಗಲಿದೆ. ಬೆಂಗಳೂರು ನಗರ ಈಗಾಗಲೇ ಕುಡಿಯುವ ನೀರಿನ ಅಭಾವ ಎದುರಿಸುತ್ತಿದೆ. ಸುಪ್ರೀಂಕೋರ್ಟ್ ನೀರಾವರಿಗೆ ಹಂಚಿಕೆ ಮಾಡಿರುವ ಪಾಲಿನ ಮೂಲಕ ನಗರಕ್ಕೆ ನೀರು ಪೂರೈಸಲಾಗುತ್ತಿದೆ.
ನದಿ ಜೋಡಣೆಯಿಂದ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ ಎಂದು ತಮ್ಮ ಕಳವಳವನ್ನು ವ್ಯಕ್ತಪಡಿಸಿದರು.
ಬೆಂಗಳೂರು ನಗರದ ಜನಸಂಖ್ಯೆ 2011 ರಲ್ಲಿ 85 ಲಕ್ಷ ಇತ್ತು. ಈಗ ಅದು 1.30 ಕೋಟಿಗೆ ಏರಿಕೆಯಾಗಿದೆ. ಬೆಂಗಳೂರಿಗೆ ಹಂಚಿಕೆ ಮಾಡಿರುವ 4.75 ಟಿಎಂಸಿ ಯಿಂದ ಏನನ್ನೂ ಮಾಡಲಾಗದು. ಆದ್ದರಿಂದ, ನೀರಾವರಿ ಉದ್ದೇಶಕ್ಕೆ ಹಂಚಿಕೆ ಮಾಡಲಾಗಿರುವ ನೀರಿನಿಂದ 50 ಟಿಎಂಸಿ ಯನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ ಇಂದು ದೇವೇಗೌಡರು ವಿವರಿಸಿದ್ದಾರೆ. ಬೆಂಗಳೂರಿಗೆ ಕುಡಿಯುವ ನೀರಿಗಾಗಿ ಹೆಚ್ಚಿನ ಹಂಚಿಕೆ ಮಾಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಇದರ ಜೊತೆಗೆ ಕೃಷ್ಣಾ -ಪೆನ್ನಾರ್ ಯೋಜನೆಯಲ್ಲಿ ಕರ್ನಾಟಕದ ನೀರಿನ ಪಾಲಿನ ಕುರಿತು ಪ್ರಸ್ತಾಪವೇ ನಡೆದಿಲ್ಲವೆಂದು ಮತ್ತು ಕೃಷ್ಣಾ, ಪೆನ್ನಾರ್, ಪೆನ್ನಾರ್ ಕಾವೇರಿ ನದಿ ಜೋಡಣೆ ಕುರಿತು ಕೇಂದ್ರ ಸರ್ಕಾರ ಹೆಚ್ಚಿನ ಮಾಹಿತಿ ನೀಡಬೇಕು ಎಂದು ರಾಜ್ಯಸಭೆಯಲ್ಲಿ ಬಜೆಟ್ ನ ಕುರಿತು ಚರ್ಚೆಯಲ್ಲಿ ಮಾತನಾಡಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಹಿಜಾಬ್-ಕೇಸರಿ ಶಾಲು ವಿವಾದ, ಕಲ್ಲುತೂರಾಟ ಮತ್ತು ಹಲ್ಲೆ ಪ್ರಕರಣವನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ ಮತ್ತು ಕಾಲೇಜು ಕ್ಯಾಂಪಸ್‌ನಲ್ಲಿ ಧರ್ಮದ ವಿಷ ಬೀಜ ಬಿತ್ತುವ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಕ್ಷದ ಜಿಲ್ಲಾ ಅಧ್ಯಕ್ಷ ಇಮ್ರಾನ್ ಅಹಮದ್ ಒತ್ತಾಯಿಸಿದ್ದಾರೆ. ಶಿವಮೊಗ್ಗ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರೀಕ್ಷೆಗಳು ಬಂದಿರುವ ಈ ಸಂದರ್ಭ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಬೀದಿಗಿಳಿಯುವುದು ಸರಿಯಲ್ಲ. ಉಡುಪಿ ಜಿಲ್ಲೆಯಲ್ಲಿ ಕಾಲೇಜಿಗೆ ಸೀಮಿತವಾಗಿದ್ದ ವಿವಾದವನ್ನು ಬಗೆಹರಿಸುವಲ್ಲಿ ಸರಕಾರ ವಿಫಲವಾಗಿದೆ. ಸೂಕ್ಷ್ಮ ವಿಚಾರವನ್ನು ಮಾತುಕತೆಯ ಮೂಲಕ ಬಗೆಹರಿಸಬಹುದಿತ್ತು. ಆದರೆ ಇವರು ಸಮವಸ್ತ್ರ ಕಡ್ಡಾಯ ಆದೇಶ ಹೊರಡಿಸಿದರು. ಇದರಿಂದ ಕಾಲೇಜುಗಳ ಆಡಳಿತ ಮಂಡಳಿಗಳು ಹಿಜಾಬ್ ಮತ್ತು ಕೇಸರಿ ವಸ್ತ್ರ ಧರಿಸುವವರನ್ನು ತಡೆದವು. ಈ ಕಾರಣದಿಂದ ಎಲ್ಲೆಡೆ ಘರ್ಷಣೆಯ ವಾತಾವರಣ ಸೃಷ್ಟಿಯಾಯಿತು. ವಿದ್ಯಾರ್ಥಿಗಳು ನಡುವಿನ ವಿವಾದಕ್ಕೆ ಸಂಘ ಪರಿವಾರ ಪ್ರವೇಶ ಮಾಡಿತು.ಅದರ ಅಂಗಸಂಘಟನೆಗಳು ಕಾಲೇಜು ಪ್ರವೇಶ ಮಾಡಿ ವಿವಾದವನ್ನು ದೊಡ್ಡದು ಮಾಡಿವೆ ಎಂದು ಆರೋಪಿಸಿದರು.
ಎಲ್ಲಾ ಧರ್ಮದ ವಿದ್ಯಾರ್ಥಿಗಳು ವಿದ್ಯಾಭ್ಯಾಸದತ್ತ ಗಮನ ಹರಿಸಬೇಕು. ಜಿಲ್ಲೆಯ ಜನ ಶಾಂತಿ ಸುವ್ಯವಸ್ಥೆಗೆ ಗಮನ ಕೊಡಬೇಕು. ಮತ್ತು ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ಅವಕಾಶ ಬಳಸಿಕೊಳ್ಳುವುದನ್ನು ಎಸ್.ಡಿ.ಪಿ.ಐ ಖಂಡಿಸುತ್ತದೆ ಎಂದು ಇಮ್ರಾನ್ ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮುಜೀಬ್ ಮಾತನಾಡಿ, ಶಿವಮೊಗ್ಗದಲ್ಲಿ ಕಾಲೇಜು ಗ್ಲಾಸ್ ಒಡೆಯಲಾಗಿದೆ. ರಾಷ್ಟಧ್ವಜ ಹಾರಿಸುವ ಧ್ವಜಸ್ತಂಭದಲ್ಲಿ ಕೇಸರಿ ದ್ವಜ ಹಾರಿಸಲಾಗಿದೆ. ಈ ದುಂಡಾವರ್ತನೆ ನಡೆಸಿದ ವ್ಯಕ್ತಿಗಳನ್ನು ಬಂಧಿಸಿ ದೇಶದ್ರೋಹದ ಕೇಸು ದಾಖಲಿಸಬೇಕು. ಕೇಸರಿ ಶಾಲು ಧರಿಸಲು ಉತ್ತೇಜನ ನೀಡಿದ್ದಲ್ಲದೆ, ಪ್ರಚೋದನಕಾರಿ ಭಾಷಣ ಮಾಡಿದ ದೀನ್‌ದಯಾಳ್ ಅವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು ಆರೋಪಿಸಿದರು.
ಇಡೀ ಪ್ರಕರಣದಲ್ಲಿ ಸರಕಾರದ ವೈಫಲ್ಯವಿದೆ. ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಸಂವಿಧಾನದಲ್ಲಿಯೇ ಅವಕಾಶವಿದೆ. ಯಾವುದೇ ಮುಸ್ಲಿಂ ಹೆಣ್ಣು ಮಕ್ಕಳು ಆಯಾ ಕಾಲೇಜಿನ ಯೂನಿಫಾರಂ ಧರಿಸುತ್ತಾರೆ. ತಲೆಗೆ ಸ್ಕಾರ್ಪ್ ಧರಿಸುತ್ತಾರೆ. ಬುರ್ಖಾ ಧರಿಸಿಕೊಂಡು ಹೋದರೂ ಅದನ್ನು ಬಿಚ್ಚಿ ತರಗತಿಯಲ್ಲಿ ಕೂರುತ್ತಾರೆ. ಆದರೆ ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ ಅದಕ್ಕೆ ಈಗ ತಕರಾರು ಎತ್ತಿರುವ ಹಿಂದೆ ಕಾಣದ ಕೈಗಳಿವೆ. ಈ ಶಕ್ತಿಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಎಂದರು.
ನ್ಯಾಯಾಲಯದಲ್ಲಿ ನಮಗೆ ನಂಬಿಕೆ ಇದೆ. ಈ ವಿಚಾರದ ಹೋರಾಟ ಅಲ್ಲಿಯೇ ನಡೆಯುತ್ತದೆ. ಶಾಲಾ ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾಭ್ಯಾಸಕ್ಕೆ ಮಾತ್ರ ಅವಕಾಶ ಇರಬೇಕು. ಶಿವಮೊಗ್ಗ ನಗರದ ಹಾಗೂ ಜಿಲ್ಲೆಯಲ್ಲಿ ಎಲ್ಲರೂ ಶಾಂತಿ ಕಾಪಾಡಬೇಕು. ಕಾನೂನಿಗೆ ವಿರುದ್ಧದ ಕೆಲಸವನ್ನೂ ಯಾರೂ ಮಾಡಬಾರದು. ಕಾಲೇಜಿನಲ್ಲಿ ಮಧ್ಯಾಹ್ನದ ಊಟ ಹಂಚಿಕೊಂಡು ಉಣ್ಣುತ್ತಿದ್ದ ಮಕ್ಕಳಿಂದು ಪರಸ್ಪರ ವಿರೋಧಿಗಳಂತೆ ವರ್ತಿಸುವುದು ದುರಂತ. ಈ ರೀತಿಯ ಧರ್ಮದ ವಿಚಾರ ವಿದ್ಯಾರ್ಥಿಗಳಿಂದ ದೂರ ಇರಬೇಕು ಎಂಬ ನಿಲುವು ನಮ್ಮ ಪಕ್ಷದ್ದಾಗಿದೆ. ಬಿಜೆಪಿ ಮತ್ತು ಸಂಘಪರಿವಾರ ಧರ್ಮದ ಲೇಪ ಹಚ್ಚುವ ಕೆಲಸ ಬಿಡಬೇಕು ಎಂದು ಮುಜೀಬ್ ಆಗ್ರಹಿಸಿದರು. ಗೋಷ್ಠಿಯಲ್ಲಿ ಮೊಹಮದ್ ಕಲೀಮುಲ್ಲಾ, ಉಪಾಧ್ಯಕ್ಷ ದೇವೇಂದ್ರ ಪಟೇಲ್, ಜೀಲನ್ ರಾಜಾ, ಪೈರೋಜ್‌ಖಾನ್, ಮನ್ಸೂರ್ ಮತ್ತಿತರರಿದ್ದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಪ್ರ ಸಕ್ತ ಸಾಲಿನ ದ್ವಿತೀಯ ಪಿಯು ಸಿ ವಾರ್ಷಿಕ ಪರೀಕ್ಷೆ ಏಪ್ರಿಲ್ 16 ರಿಂದ ಮೇ 6 ರವರೆಗೆ ಜರುಗಲಿದೆ. ಈ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ಅಂತಿಮ ವೇಳಾಪಟ್ಟಿ ಪ್ರಕಟಿಸಿದೆ. ಎಲ್ಲಾ ಪರೀಕ್ಷೆಗಳು ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರ ವರೆಗೆ ನಡೆಯಲಿವೆ. ಜನವರಿ 18ರಂದು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದ್ದು ಇಲಾಖೆ, ಆಕ್ಷೇಪಣಿಗೆ ಅವಕಾಶ ಕಲ್ಪಿಸಿತ್ತು. ಇದೀಗ ಅಂತಿಮ ವೇಳಾಪಟ್ಟಿ ಪ್ರಕಟಿಸಿದೆ.
ಏಪ್ರಿಲ್ 16 ರಂದು ಗಣಿತ, ಶಿಕ್ಷಣ, ಮೂಲ ಗಣಿತ ಈ ಪರೀಕ್ಷೆ ನಡೆಯಲಿವೆ. ಏಪ್ರಿಲ್ 18ರಂದು ರಾಜ್ಯಶಾಸ್ತ್ರ, ಸಂಖ್ಯಾ ಶಾಸ್ತ್ರ. ಏಪ್ರಿಲ್ 19 ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್ಸ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ನೆಸ್.
ಏಪ್ರಿಲ್ 20 ರಂದು ಇತಿಹಾಸ, ಭೌತಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಏಪ್ರಿಲ್ 21 ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಅರೇಬಿಕ್ ಮತ್ತು ಫ್ರೆಂಚ್. ಎಪ್ರಿಲ್ 22ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ.
ಏಪ್ರಿಲ್ 23ರಂದು ರಸಾಯನಶಾಸ್ತ್ರ, ಮನಶಾಸ್ತ್ರ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ.
ಏಪ್ರಿಲ್ 25ರಂದು ಅರ್ಥಶಾಸ್ತ್ರ. ಏಪ್ರಿಲ್ 26ರಂದು ಹಿಂದಿ. ಏಪ್ರಿಲ್ 28ರಂದು ಕನ್ನಡ. ಏಪ್ರಿಲ್ 30ರಂದು ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್. ಮೇ 2 ಜೀವಶಾಸ್ತ್ರ, ಭೂಗೋಳಶಾಸ್ತ್ರ.
ಮೇ 4ರಂದು ಇಂಗ್ಲಿಷ್. ಮೇ 6ರಂದು ಲೆಕ್ಕಶಾಸ್ತ್ರ, ಐಚ್ಛಿಕ ಕನ್ನಡ, ಭೂಗರ್ಭಶಾಸ್ತ್ರ, ಹಾಗೂ ಗೃಹ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.