Tuesday, February 17, 2026
Tuesday, February 17, 2026
Home Blog Page 1730

ಅಹ್ಮದಾಬಾದ್ ಸರಣಿ ಸ್ಫೋಟ49 ಆರೋಪಿಗಳಿಗೆ ಶಿಕ್ಷೆ

0

2008ರ ಅಹಮದಾಬಾದ್ ಸರಣಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು 49 ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.
ಪ್ರಕರಣದ ತೀರ್ಪು ಪ್ರಕಟಗೊಂಡಿದ್ದು, 28 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಅಂದು ನಡೆದ ಬಾಂಬ್ ಸ್ಫೋಟದಲ್ಲಿ 56 ಮಂದಿ ಮೃತಪಟ್ಟು, 200 ಜನರು ಗಾಯಗೊಂಡಿದ್ದರು.

ಪ್ರಕರಣದಲ್ಲಿ ಒಟ್ಟು 27 ಜನರ ವಿರುದ್ಧ ದೋಷಾರೋಪ ಹೋರಿಸಲಾಗಿತ್ತು. ಈ ದಾಳಿಯ ಹಿಂದೆ ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕೈವಾಡ ಇರುವುದು ತನಿಖೆಯಿಂದ ಸಾಬೀತಾಗಿತ್ತು.

13 ವರ್ಷಗಳ ಹಿಂದೆ ಅಹ್ಮದಾಬಾದ್ ನಗರವನ್ನು ತಲ್ಲಣಗೊಳಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದ ತೀರ್ಪನ್ನು ನ್ಯಾಯಾಧೀಶ ಎ.ಆರ್. ಪಟೇಲ್ ಪ್ರಕಟಿಸಿದರು. ಸಾಕ್ಷ್ಯಾಧಾರ ಕೊರತೆಯಿಂದ 28 ಆರೋಪಿಗಳನ್ನು ದೋಷಮುಕ್ತಗೊಳಿಸಿದ ನ್ಯಾಯಾಲಯ, ಉಳಿದವರಿಗೆ ಶಿಕ್ಷೆವಿಧಿಸಿತು.
ಭಯೋತ್ಪಾದನೆ ವಿಷಯಗಳಿಗೆ ಸಂಬಂಧಿಸಿದ ಅಕ್ರಮ ಚಟುವಟಿಕೆ ತಡೆ ಕಾಯ್ದೆಯ ಸೆಕ್ಷನ್ 16ರ ಅಡಿಯಲ್ಲಿ 49 ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯ ಸಂಪುಟ ಸರ್ಜರಿ‌ ಮುಂದೂಡಿಕೆ

0

ಬಹುನಿರೀಕ್ಷಿತ ರಾಜ್ಯ ಸಂಪುಟ ಸರ್ಜರಿ ಬಿಜೆಪಿ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದೆ. ಆದರೆ ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿರುವುದರಿಂದ ಅಭಿವೃದ್ಧಿ ಚಟುವಟಿಕೆ ವೇಗ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹೈಕಮಾಂಡ್ ಸೂಚಿಸಿದೆ.

ಪಂಚರಾಜ್ಯಗಳ ಚುನಾವಣೆ ಇರುವುದರಿಂದ ಕರ್ನಾಟಕದಲ್ಲಿ ಸದ್ಯಕ್ಕೆ ಸಂಪುಟ ವಿಸ್ತರಣೆ ಉತ್ತರಪ್ರದೇಶ ಚುನಾವಣೆಗೆ ತೆರೆ ಬೀಳುತ್ತಿದ್ದಂತೆ ಈ ಕುರಿತು
ಮಾತುಕತೆ ನಡೆಸಬೇಕು ಎಂದು ವರಿಷ್ಠರು ಸೂಚಿಸಿದರು ಎನ್ನಲಾಗಿದೆ.
ಇದರಿಂದ ಸಹಜವಾಗಿ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಆದರೆ, ಮಂತ್ರಿ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದ್ದವರಿಗೆ ಸದ್ಯಕ್ಕೆ ನಿರಾಳವಾಗುವಂತಾಗಿದೆ.
ದಿಲ್ಲಿ ಪ್ರವಾಸಕ್ಕೆ ಹೋಗಿದ್ದಾಗ ಬಸವರಾಜ್ ಬೊಮ್ಮಾಯಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದರು. ನಂತರ ರಾಜನಾಥ್ ಸಿಂಗ್ ಸೇರಿದಂತೆ ಕೇಂದ್ರದ ನಾನಾ ಸಚಿವರನ್ನೂ ಭೇಟಿಯಾದರು.ಇದರ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಫೋನ್ ಮೂಲಕ ಮಾತನಾಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಗದ್ದುಗೆಯೇರಲು ಪಕ್ಷಗಳ ವಿಧವಿಧ ಪ್ರಣಾಳಿಕೆಗಳು

0

ಉತ್ತರಪ್ರದೇಶದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಒಟ್ಟು ಜನಸಂಖ್ಯೆಯ ಸುಮಾರು ಅರ್ಧದಷ್ಟಿರುವ ಈ ರಾಜಕೀಯ ಪಕ್ಷಗಳು ನೋಡುವ ದೃಷ್ಟಿ ಬದಲಾಗಿದೆ ಎಂಬುದಕ್ಕೆ ಈ ಬಾರಿಯ ವಿಧಾನಸಭೆ ಚುನಾವಣೆಯೇ ಸಾಕ್ಷಿಯಾಗಿದೆ.
ಉತ್ತರಪ್ರದೇಶದಲ್ಲಿ ಕಳೆದುಕೊಂಡಿರುವ ನೆಲೆಯನ್ನು ಪಡೆಯಲು ಯತ್ನಿಸುತ್ತಿರುವ ಕಾಂಗ್ರೆಸ್ ಪಕ್ಷವು ಮಹಿಳೆಯರನ್ನು ಆಕರ್ಷಿಸಲು ತನ್ನ ಮತ ಬ್ಯಾಂಕ್ ಕಾರ್ಯತಂತ್ರ ರೂಪಿಸಿದೆ.ಶೇ.40ರಷ್ಟು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡುವುದು ಈ ಕಾರ್ಯತಂತ್ರದ ಭಾಗವಾಗಿದೆ.

ಪಂಚಾಬ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಕಾಲಿದಳ ಹಾಗೂ ಪಂಜಾಬ್ ಲೋಕಕಾಂಗ್ರೆಸ್ ಪಕ್ಷಗಳು 11 ಅಂಶಗಳ ಸಂಕಲ್ಪ ಸೂತ್ರವನ್ನು ಪ್ರಕಟಿಸಿವೆ.
ಕೇಂದ್ರ ಸಚಿವ ಹಾಗೂ ಪಂಜಾಬ್ ಉಸ್ತುವಾರಿ ಗಜೇಂದ್ರ ಸಿಂಗ್ ಶೆರಾವತ್ , ಅಕಾಲಿದಳ ಮುಖ್ಯಸ್ಥ ಸುಖದೇವ್ ಸಿಂಗ್ ಧಿಂಡ್ಸಾ , ಬಿಜೆಪಿ ಮುಖಂಡರಾದ ಅ
ಹರ್ಜಿತ್ ಸಿಂಗ್ ಘೆವಾಲ್ ಮತ್ತು ಸುಭಾಷ್ ಶರ್ಮಾ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರು.

ಸೌರ ಕೊಳವೆ ಬಾವಿ ಮತ್ತು ಕಾಲುವೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಸಬ್ಸಿಡಿ ನೀಡುವುದಾಗಿ ಮಾತುಕೊಟ್ಟಿದೆ.
ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ರಾಜ್ಯದ ಸಾಂಪ್ರದಾಯಿಕ ಧಾನ್ಯಗಳನ್ನು ಸಂರಕ್ಷಿಸುವ ಉದ್ದೇಶದಿಂದ ವಿವಿಧ ಕಡೆಗಳಲ್ಲಿ ಬಿತ್ತನೆ ಬೀಜ ಬ್ಯಾಂಕ್ ತಲೆಎತ್ತಲಿದೆ ಎಂದು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಉತ್ತರಪ್ರದೇಶದಲ್ಲಿ ಈ ಬಾರಿ ಸಮಾಜವಾದಿ ಪಕ್ಷದ ಸರ್ಕಾರ ಬರಲಿದೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ತಿಳಿಸಿದ್ದಾರೆ.
ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಬೇಕು. ಪಶ್ಚಿಮ ಬಂಗಾಳದಲ್ಲಿ ಇದು ಸಾಧ್ಯವಾಗುವುದಾದರೆ, ಉತ್ತರಪ್ರದೇಶದಲ್ಲೂ ಸಾಧ್ಯವಾಗುತ್ತದೆ ಎಂದರು.

ಉತ್ತರಪ್ರದೇಶದಲ್ಲಿ ಈಗ ನೇರಾನೇರ ಸ್ಪರ್ಧೆಯಿರುವುದು ಸಮಾಜವಾದಿ ಪಕ್ಷ ಮತ್ತು ಬಿಜೆಪಿ ಮಧ್ಯ ಮಾತ್ರ. ಈ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವೇ ಗೆಲ್ಲಲಿದೆ. 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಆರಿಸಿ ಬರಲಿದೆ ಎಂದರು.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಕಟಿಸಿರುವ ಪ್ರಣಾಳಿಕೆಯಲ್ಲಿ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು, ರೈತರು, ಓಬಿಸಿ ಮತ್ತು ಮಹಿಳೆಯರಿಗೆ ವಿಶೇಷ ಕೊಡುಗೆಗಳು ಸೇರಿವೆ.

ಪ್ರಣಾಳಿಕೆಯು ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್ ವಿತರಣೆ, ವಿದ್ಯಾರ್ಥಿಗಳಿಗೆ 2ಕೋಟಿ ಟ್ಯಾಬ್ಲೆಟ್, ಸ್ಮಾರ್ಟ್ ಪೋನ್ ನೀಡುವ ಯೋಜನೆ, ಎಲ್ಲ ಜಿಲ್ಲೆಗಳಲ್ಲಿಯೂ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಸ್ಥಾಪನೆಯ ಅಂಶಗಳನ್ನು ಒಳಗೊಂಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿ ನಗರದಲ್ಲಿ ಸಹಜ ಸ್ಥಿತಿ : ಎಸ್ಪಿ

0

ಶಿವಮೊಗ್ಗ ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಮಂಗಳವಾರ ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿ ಪ್ರತಿಭಟನೆ ವೇಳೆ ನಡೆದ ಕಲ್ಲು ತೂರಾಟದಿಂದಾಗಿ ಶಿವಮೊಗ್ಗ ನಗರದಲ್ಲೆಡೆ ಸೆಕ್ಷನ್ 144 ಜಾರಿಗೊಂಡಿತು.

ಇಂದು ಬೆಳಗ್ಗೆ ಶಿವಮೊಗ್ಗ ನಗರದ ಪರಿಸ್ಥಿತಿಯನ್ನು ಖುದ್ದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮಿಪ್ರಸಾದ್ ಅವರು ಸಿಟಿ ರೌಂಡ್ ನಡೆಸಿದರು. ಈ ವೇಳೆ ಮಾತನಾಡಿದ ಅವರು ನಗರದಲ್ಲಿ 144 ಸೆಕ್ಷನ್ ಮುಂದುವರಿದಿದೆ. ಎಲ್ಲಾ ಅಂಗಡಿಗಳು ಮುಚ್ಚು ವಂತಿಲ್ಲ. ಹುಡುಗರು ಸೇರುವಂತಹ ಟೀ ಅಂಗಡಿ ಮತ್ತು ಪೆಟ್ಟಿ ಅಂಗಡಿಗಳನ್ನು ಇಂದು ತೆರೆಯ ಬಾರದೆಂದು ಎಸ್ಪಿ ಲಕ್ಷ್ಮೀಪ್ರಸಾದ್ ಅವರು ತಿಳಿಸಿದರು.

ನಗರದಲ್ಲಿ ಎಲ್ಲಿಯೂ ಹುಡುಗರ ಗುಂಪು ಸೇರಿದಂತೆ ನೋಡಿಕೊಳ್ಳುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದು, ಆ ಕಾರಣದಿಂದ 144 ಸೆಕ್ಷನ್ ಜಾರಿಯಲ್ಲಿದೆ. ಅದನ್ನು ಹೊರತುಪಡಿಸಿದರೆ ವ್ಯಾಪಾರ-ವಹಿವಾಟು ಎಂದಿನಂತೆ ಸಹಜ ಸ್ಥಿತಿಯಲ್ಲಿ ನಡೆಯುತ್ತಿದೆ ಎಂದು ಎಸ್ಪಿ ಲಕ್ಷ್ಮೀಪ್ರಸಾದ್ ಹೇಳಿದರು.

ಮಂಗಳವಾರ ದಿನದಂದು ನಡೆದ ಕಲ್ಲುತೂರಾಟ ದಿಂದಾಗಿ ನಗರದಲ್ಲಿ ಬಿಗುವಿನ ವಾತಾವರಣ ಮೂಡಿರುವುದರಿಂದ 2 ಕೆಎಸ್ಆರ್ ಪಿ ತುಕಡಿ, 6 ತೀರ್ವ ಪ್ರತಿರೋಧ ಪಡೆ, ಹೊರಜಿಲ್ಲೆಯ 50 ಪೊಲೀಸ್ ಸಿಬ್ಬಂದಿ ಹಾಗೂ 70 ಜನ ಗೃಹರಕ್ಷಕ ದಳ ಸಿಬ್ಬಂದಿಯನ್ನು ನಗರದಲ್ಲಿ ನಿಯೋಜಿಸಲಾಗಿದೆ ಎಂದು ಎಸ್ಪಿ ಲಕ್ಷ್ಮೀಪ್ರಸಾದ್ ಅವರು ತಿಳಿಸಿದರು.

ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ. ಇಂದು 250 ಮಂದಿ ಪೊಲೀಸರನ್ನ ನಗರದ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.

ಮಂಗಳವಾರ ಜಿಲ್ಲೆಯಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ ಶಿವಮೊಗ್ಗ ನಗರದಲ್ಲಿ 5 ಪ್ರಕರಣಗಳು, ಸಾಗರ ತಾಲೂಕಿನಲ್ಲಿ 1 ಪ್ರಕರಣವನ್ನು ದಾಖಲಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಸೆಕ್ಷನ್ 188 ಅಡಿಯಲ್ಲಿ ಕ್ರಮವನ್ನು ಕೈಗೊಳ್ಳಲಾಗುತ್ತದೆ ಹಾಗೂ 144 ಸೆಕ್ಷನ್ ಉಲ್ಲಂಘಿಸಿರುವುದರಿಂದ ಅತಂಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನದಿ ಜೋಡಣೆ ಪ್ರಸ್ತಾವಕ್ಕೆ ರಾಜ್ಯದ ವಿರೋಧ-ಸಿ ಎಂ ಬೊಮ್ಮಾಯಿ

0

ತಮಿಳುನಾಡು ಸರ್ಕಾರ ಕೈಗೊಂಡಿರುವ ಹೊಗೇನಕಲ್ ಜಲವಿದ್ಯುತ್ ಯೋಜನೆ ಮತ್ತು ಕಾವೇರಿ-ಗುಂಡಾರ್-ವೈಗೈ ನದಿ ಜೋಡಣೆ ಯೋಜನೆಗಳಿಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ನ್ಯಾಯಾಲಯದ ಮೂಲಕವೂ ಈ ಯೋಜನೆಗಳಿಗೆ ರಾಜ್ಯದ ವಿರೋಧವನ್ನು ಮುಂದಿಡುವ ಮಹತ್ವದ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ರಾಜ್ಯಕ್ಕೆ ಸಂಬಂಧಪಟ್ಟ ಅಂತರ ರಾಜ್ಯ ಜಲ ವಿವಾದ ಕುರಿತಂತೆ ಸಚಿವರು, ಹಿರಿಯ ನ್ಯಾಯವಾದಿಗಳು, ಅಡ್ವೋಕೇಟ್ ಜನರಲ್ ಮತ್ತು ಅಧಿಕಾರಿಗಳೊಂದಿಗೆ ನವದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಭೆ ನಡೆಸಿದ್ದಾರೆ. ಚರ್ಚೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಸಭೆ ಬಳಿಕ ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ” ಕರ್ನಾಟಕವು ರಾಜ್ಯದ ನೆಲ-ಜಲದ ವಿಚಾರದಲ್ಲಿ ಎಂದಿಗೂ ಒಂದಾಗಿದೆ. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಎನ್ ಜಿಟಿ ಮತ್ತು ಪ್ರಕರಣ ಒಟ್ಟಿಗೆ ವಿಚಾರಣೆ ಬರಲಿದೆ. ಆಕ್ಷೇಪಣೆ ಸಲ್ಲಿಸಿ ರಾಜ್ಯದ ನಿಲುವು ಸ್ಪಷ್ಟ ಪಡಿಸಲಾಗುವುದು” ಎಂದು ಹೇಳಿದ್ದಾರೆ.

ಕೃಷ್ಣಾನದಿ ಎರಡನೇ ನ್ಯಾಯಾಧಿಕರಣ ಅಧಿಸೂಚನೆಗೆ ಸಂಬಂಧಿಸಿದಂತೆ ಕಳೆದ ಬಾರಿ ನ್ಯಾಯಮೂರ್ತಿಗಳು ಹಿಂದೆ ಸರಿದಿದ್ದಾರೆ. ಮುಂದಿನ ವಿಚಾರಣೆಯಷ್ಟರೊಳಗೆ ಹೊಸ ನ್ಯಾಯಮೂರ್ತಿಗಳ ನೇಮಕ ವಾಗಬೇಕೆಂದು ಕೋರಿ ರಿಜಿಸ್ಟಾ ರ್ ಜನರಲ್ ಬಳಿ ಅರ್ಜಿ ಸಲ್ಲಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ. ಒಂದೊಮ್ಮೆ ಇದು ತಪ್ಪಿದಲ್ಲಿ ನ್ಯಾಯಾಲಯದಲ್ಲಿ ಈ ಬಗ್ಗೆ ಪ್ರಸ್ತಾ ಪಿಸಲು ತೀರ್ಮಾ ನಿಸಲಾಗಿದೆ, ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಫೆ 14 ರಿಂದ ಸಿರಿಗೆರೆಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ

0

ತರಳಬಾಳು ಬೃಹನ್ಮಠದ ತರಳಬಾಳು ಹುಣ್ಣಿಮೆ ಮಹೋತ್ಸವ ಫೆಬ್ರವರಿ 14 ರಿಂದ 16 ರವರೆಗೆ ಮೂರು ದಿನಗಳ ಕಾಲ ಚಿತ್ರದುರ್ಗ ತಾಲೂಕು ಸಿರಿಗೆರೆಯಲ್ಲಿ ಸಾಂಕೇತಿಕವಾಗಿ ಜರುಗುವುದು ಎಂದು ತರಳಬಾಳು ಬೃಹನ್ಮಠದ ಕಾರ್ಯದರ್ಶಿ ತಿಳಿಸಿದ್ದಾರೆ.

ಮಹೋತ್ಸವವು ಶ್ರೀ. ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಹೊಸ ಆಯಾಮ ಪಡೆದಿದೆ. ಈ ವರ್ಷ ಕೊಟ್ಟೂರು ನಗರದಲ್ಲಿ ನಡೆಯಬೇಕಾಗಿದ್ದ ತರಳಬಾಳು ಹುಣ್ಣಿಮೆಯನ್ನು ಕೊರೋನ ಹಿನ್ನೆಲೆಯಲ್ಲಿ ಮುಂದೂಡಿದೆ.
ಕೊರೊನ ನಿಯಮಗಳ ಅನುಸಾರ, ಸಿರಿಗೇರಿಯಲ್ಲಿ ಸರಳವಾಗಿ ಆಚರಿಸಬೇಕೆಂಬುದು ಶ್ರೀಗಳ ಶ್ರೀಗಳ ಆಶಯವಾಗಿದೆ ಎಂದು ಹೇಳಿದ್ದಾರೆ.

ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿಚಾರಗೋಷ್ಠಿಗಳು ನಡೆಯಲಿವೆ. ಫೆಬ್ರವರಿ 16ರ ಮಾಘ ಶುದ್ಧ ಭರತ ಹುಣ್ಣಿಮೆಯಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಸದ್ಧರ್ಮ ಸಿಂಹಾಸನಾರೋಹಣ ನೆರವೇರಿಸಿ ದರ್ಶನಾಶೀರ್ವಾದ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹಿಜಾಬ್ ವಿವಾದ ರಾಜ್ಯಾದ್ಯಂತ ಕಾಲೇಜುಗಳಿಗೆ ಮೂರುದಿನ ರಜೆ

0

ಕಾಲೇಜುಗಳಲ್ಲಿ ಹಿಜಾಬ್ ಧಾರಣೆ ವಿವಾದ ರಾಜ್ಯಾದ್ಯಂತ ಹರಡಿದೆ.ಇದು ಹಿಂಸಾಚಾರಕ್ಕೆ ತಿರುಗಿದೆ. ಅನೇಕ ಜಿಲ್ಲೆಗಳಲ್ಲಿ ಹಿಜಾಬ್ ಪರ ಮತ್ತು ವಿರೋಧಿ ಗುಂಪುಗಳ ನಡುವೆ ಹೊಡೆದಾಟ ನಡೆಯುತ್ತಿದೆ. ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 9ರಿಂದ 11ರವರೆಗೆ ಮೂರು ದಿನಗಳ ಕಾಲ ಶಾಲಾ, ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ.

ಇಂದಿನಿಂದ, ಶುಕ್ರವಾರದವರೆಗೆ 9 ರಿಂದ 10ನೇ ತರಗತಿಯವರೆಗಿನ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರೌಢಶಾಲೆಗಳು, ಪದವಿಪೂರ್ವ ಕಾಲೇಜುಗಳು, ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲಾ ವಿವಿಗಳು, ಕಾಲೇಜು ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ ಎಲ್ಲಾ ಪದವಿ, ಡಿಪ್ಲೋಮಾ ಮತ್ತು ಎಂಜಿನಿಯರಿಂಗ್ ಕಾಲೇಜುಗಳಿಗೆ ರಜೆ ಇರುತ್ತದೆ.

ಉಳಿದಂತೆ ಒಂದರಿಂದ ಎಂಟನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಎಂದಿನಂತೆ ತರಗತಿಗಳು ನಡೆಯಲಿವೆ. ಈಗಾಗಲೇ ಆರಂಭಗೊಂಡಿರುವ ಎಂಜಿನಿಯರಿಂಗ್, ಸ್ನಾತಕೋತ್ತರ ಪದವಿ ಸೇರಿದಂತೆ ಇತರೆ ಪರೀಕ್ಷೆಗಳು ಎಂದಿನಂತೆ ಮುಂದುವರಿಯಲಿವೆ.

ಹಿಜಾಬ್ ವಿವಾದ ಮಂಗಳವಾರ ಬೆಳಗ್ಗೆ ಭುಗಿಲೇಳುತ್ತಲೇ ದೆಹಲಿಯಲ್ಲಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶಾಲಾ ಕಾಲೇಜುಗಳಿಗೆ ರಜೆ ಅಲ್ಲಿಂದಲೇ ಸೂಚನೆ ರವಾನಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಮೂರು ದಿನ ರಜೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯಾದ್ಯಂತ ಭುಗಿಲೆದ್ದಿರುವ ಹಿಜಾಬ್ ವಿವಾದ ಕುರಿತು ವಿಚಾರಣೆ ಆರಂಭಿಸಿರುವ ಹೈ ಕೋರ್ಟ್, ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಯ್ದು ಕೊಳ್ಳು ವಂತೆ ವಿದ್ಯಾರ್ಥಿ ಸಮುದಾಯ ಮತ್ತು ಸಾರ್ವನಿಕರಿಗೆ ಮನವಿ ಮಾಡಿದೆ. ಸುಮಾರು 5 ಗಂಟೆ ವಾದ ಆಲಿಸಿದ ನ್ಯಾ.ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ದಿನದ ಕೊನೆಗೆ ” ಜನರಿಗೆ ಸಂವಿಧಾನದ ಬಗ್ಗೆ ವಿಶ್ವಾಸವಿದೆ. ಬಹುಪಾಲು ಜನರು ಒಳ್ಳೆಯವರೇ. ಯಾರು ಕೆಲವು ದುಷ್ಕರ್ಮಿಗಳು ವಿವಾದಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಆದರೆ ಬೀದಿಗೆ ಹೋಗುವುದು, ಘೋಷಣೆಗಳನ್ನು ಕೂಗುವುದು, ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುವುದು ಇವೆಲ್ಲ ಸರಿಯಲ್ಲ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸ ಬಾರದು. ಶಾಂತಿ ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳಬೇಕು ಎಂದು ಆದೇಶಿಸಿತು. ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 2.30 ಕ್ಕೆ ಮುಂದೂಡಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸಮವಸ್ತ್ರ ಸಮಸ್ಯೆ ವಿವೇಕವೇ ಪರಿಹಾರ

0

ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಭುಗಿಲೆದ್ದಿರುವ ಕಾರಣ ಶಿಕ್ಷಣಕ್ಕೆ ಮತ್ತಷ್ಟು ಹೊಡೆತ ಬಿದ್ದಿದೆ. ಈ ಹಿಂದೆ ಎರಡು ವರ್ಷಗಳ ಕಾಲ ಕೊರೊನಾ ಸಾಂಕ್ರಮಿಕ ರೋಗದ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದವು. ಇದರಿಂದಾಗಿ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗಿದ್ದರು.
ಒಂದು ಮಟ್ಟದವರೆಗೆ ಎಲ್ಲವೂ ಸರಿಯಾಗುತ್ತಿದೆ ಎಂದುಕೊಳ್ಳುವಾಗಲೇ ಈ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೋಮು ಗಲಭೆಯನ್ನು ಸೃಷ್ಟಿಸಿವೆ.
ಪ್ರತಿಯೊಬ್ಬರಿಗೂ ತಮ್ಮ ಧರ್ಮದ ಬಗ್ಗೆ ಪ್ರೀತಿ, ನಂಬಿಕೆ ಇರುವುದು ಸಹಜ. ಅದು ಒಳ್ಳೆಯದೂ ಕೂಡ.
ಆದರೆ, ವಿದ್ಯಾಸಂಸ್ಥೆಗಳು ಆರಂಭವಾದಾಗಿನಿಂದ ಎಲ್ಲಾ ಜಾತಿ, ಧರ್ಮವೆನ್ನುವ ಭೇದ ಭಾವವಿಲ್ಲದೇ ಎಲ್ಲರೂ ಒಂದೇ ಎಂಬಂತೆ ಇದ್ದ ಮನಸ್ಸುಗಳು ಈಗ ಏಕಾಏಕಿ ಈ ರೀತಿ ತಮ್ಮ ತಮ್ಮಲ್ಲಿಯೇ ಹೊಡೆದಾಡುತ್ತಿರುವದನ್ನು ನೋಡಿದರೆ ವಿಪರ್ಯಾಸವೆನಿಸುತ್ತದೆ.

ಸಂವಿಧಾನದತ್ತವಾಗಿ ಸಾರ್ವಜನಿಕ ಸಂಸ್ಥೆಗಳಲ್ಲಿ ಸಮಾನತೆ, ವಿವಿಧತೆಯಲ್ಲಿ ಏಕತೆ,ವರ್ಗ ಸಮಾನತೆಯನ್ನು ಸಾಧಿಸಲು ಸಮವಸ್ತ್ರ ಜಾರಿಯಾಗಿದೆ.
ಹೆಸರೇ ಸೂಚಿಸುವಂತೆ “ಸಮವಸ್ತ್ರ” ಎಂದರೆ ಎಲ್ಲರಿಗೂ ಸಮ ವಸ್ತ್ರ ಎಂದರ್ಥ. ಶಿಕ್ಷಣ ಸಂಸ್ಥೆಗಳಲ್ಲಿ ಬಡವ-ಶ್ರೀಮಂತ, ಮೇಲು-ಕೀಳು , ಮೇಲ್ಜಾತಿ, ಕೆಳಜಾತಿ ಎಂಬ ಭೇದಭಾವಗಳನ್ನು ತೊರೆದು ಎಲ್ಲರೂ ಒಂದೇ ಎನ್ನುವ ಮನೋಭಾವದಿಂದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ತೊಡಗಲಿ ಎಂಬ ಆಶಯದೊಂದಿಗೆ ಹುಟ್ಟುಕೊಂಡಿದೆ ಈ ಸಮವಸ್ತ್ರ.

ಆದರೆ ಇಂದು ಜಾತಿ-ಧರ್ಮದ ಹೆಸರಿನಲ್ಲಿ ಯುವ ಮನಸ್ಸುಗಳು ವಿಚಲಿತಗೊಂಡಿವೆ. ಒಳ್ಳೆಯ ರೀತಿಯಲ್ಲಿ ಅಭ್ಯಾಸವನ್ನು ನಡೆಸಿ ಯಶಸ್ಸಿನ ಶಿಖರವನ್ನೇರಬೇಕಾದ ಸಮಯದಲ್ಲಿ ವಿದ್ಯಾರ್ಥಿಗಳು ಹಾದಿ ತಪ್ಪುತ್ತಿದ್ದಾರೆ.
ಮಾನವೀಯ ಧರ್ಮದ ಮುಂದೆ ಯಾವ ಧರ್ಮವೂ ದೊಡ್ಡದಲ್ಲ ಎನ್ನುವ ಅರಿವು ಎಲ್ಲರಿಗೂ ಇದ್ದರೂ ಈ ಸಂಧರ್ಭದಲ್ಲಿ ಅವರ ಬುದ್ದಿಗೆ ಮಂಕು ಬಡಿದಂತಾಗಿದೆ.
ಸರ್ವರಿಗೂ ಸಮಬಾಳು. ಸರ್ವರಿಗೂ ಸಮಪಾಲು ಎಂಬ ಸಂದೇಶ ನೀಡಿದ
ಕುವೆಂಪು ಅವರು ಒಂದು ಮಾತು ಹೇಳುತ್ತಿದ್ದರು, ಎಲ್ಲಾ ಧರ್ಮಗಳು ಮನುಷ್ಯ ಧರ್ಮವೊಂದೇ ಶ್ರೇಷ್ಠ ಎಂದಿವೆ ಎಂದು. ಆದರೆ ಅದನ್ನು ಅರ್ಥೈಸಿಕೊಳ್ಳುವಲ್ಲಿ ಸೋತ ನಾವು ಸಣ್ಣ ಪುಟ್ಟ ವಿಚಾರಗಳಲ್ಲಿಯೂ ಧರ್ಮ,ಜಾತಿಯನ್ನು ಎಳೆತರುತ್ತಿರುವುದು ಸೂಕ್ತವಲ್ಲ.
ರಸಋಷಿ ಕುವೆಂಪು ಅವರೇ ಹೇಳುವಂತೆ ಮನುಷ್ಯ ಮಗುವಾಗಿದ್ದಾಗ ವಿಶ್ವಮಾನವ ನಾಗಿರುತ್ತಾನೆ. ಬೆಳೆಯುತ್ತಾ ಬೆಳೆಯುತ್ತಾ ಅವನನ್ನ ಅಲ್ಪ ಮಾನವನನ್ನಾಗಿ ಮಾಡುತ್ತೆವೆ.
ಆದರೆ ಈಗಿನ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಕಿಂಚಿತ್ತೂ ಯೋಚಿಸುತ್ತಿಲ್ಲ. ಕಲಿಕೆಯ ಹಂತದಲ್ಲಿ ಜಾತಿ ಧರ್ಮಗಳ ಬಗ್ಗೆ ಸಂಘರ್ಷಕ್ಕೆ ಇಳಿದಿರುವುದು ಕೂಡ ಸಾಧುವಲ್ಲ.
ಈ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ವಕ್ತಾರೆ ಸುರೈಯ್ಯ ಅಂಜುಮ್ ಅವರ ಹೇಳಿಕೆ ಗಮನಿಸುವಂತದ್ದಾಗಿದೆ.
” ಧರ್ಮಕ್ಕಿಂತ ದೇಶ ಮುಖ್ಯ. ಹಿಜಾಬ್ ಮುಸ್ಲಿಂ ಧರ್ಮದ ಪ್ರತಿಕ ಅದರ ಬಗ್ಗೆ ನಮಗೆ ಹೆಮ್ಮೆಯಿದೆ. ಆದರೆ ಹಿಜಾಬ್ ತೆಗೆದಿಟ್ಟು ತರಗತಿಗೆ ಹಾಜರಾಗಬೇಕು.”
ಭವಿಷ್ಯದಲ್ಲಿ ಎಂದೋ ಕೆಲಸಕ್ಕೆಂದು ಅಲೆದಾಡುವಾಗ ಈ ರೀತಿಯ ಸಂಘರ್ಷಕ್ಕೆ ಇಳಿದ ಅನುಭವ ಎನೂ ಲಾಭ ಕೊಡುವುದಿಲ್ಲ ಎನ್ನುವುದನ್ನ ನೆನಪಿಟ್ಟುಕೊಳ್ಳಬೇಕು.