Tuesday, February 17, 2026
Tuesday, February 17, 2026
Home Blog Page 1728

ಪ್ರೊ ಕಬಡ್ಡಿ ಲೀಗ್ ಯೋಧಾ ಮತ್ತು ಜೈಂಟ್ಸ್ ಜಯಭೇರಿ

0

ಪ್ರದೀಪ್ ನರ್ವಾಲ್ ಮತ್ತೆ ಮತ್ತು ಸುರೇಂದರ್ ಗಿಲ್ ಅವರ ಅಮೋಘ ಆಟದ ಬಲದಿಂದ ಯುಪಿ ಯೋಧಾ ತಂಡವು ಬುಧವಾರ ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಜಯಗಳಿಸಿದೆ.

ವೈಟ್ ಫೀಲ್ಡ್ ನಲ್ಲಿರುವ ಗ್ರಾಂಡ್ ಶೆರಾಟಾನ್ ಹೋಟೆಲ್ ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಯೋಧಾ 41-37ರಿಂದ ತಮಿಳ್ ತಲೈವಾಸ್ ವಿರುದ್ಧ ಗೆಲುವನ್ನು ಸಾಧಿಸಿತು.

ಯೋಧಾ ತಂಡವು ಮೊದಲಾರ್ಧದಲ್ಲಿ ಹೆಚ್ಚು ಅಕ್ರಮಕಾರಿಯಾಗಿರಲಿಲ್ಲ. ಆದರೆ ತಲೈವಾಸ್ ಚುರುಕಿನ ಆಟವಾಡಿತ್ತು. ಅದರಿಂದಾಗಿ ವಿರಾಮದ ವೇಳೆಗೆ 22ರಿಂದ 20 ಮುನ್ನಡೆ ಸಾಧಿಸಿತ್ತು ವಿರಾಮದ ನಂತರ ಭರ್ಜರಿ ದಾಳಿ ಮಾಡಿದ ಯೋಧ ತಂಡವು 21 ಅಂಕಗಳನ್ನು ಸೂರೆ ಮೂಡಿತು. ಈ ಅವಧಿಯಲ್ಲಿ ತಲೈವಾಸ್ ಕೇವಲ 17 ಅಂಕಗಳನ್ನು ಗಳಿಸಿತು. ಅದರಿಂದಾಗಿ ಹಿನ್ನಡೆ ಅನುಭವಿಸಿತು.

ಯೋಧಾ ತಂಡದ ಪ್ರದೀಪ್ 10 ಮತ್ತು 13 ಅಂಕಗಳನ್ನು ಗಳಿಸಿದರು. ತಲೈವಾಸ್ ತಂಡದ ಮಂಜಿತ್ 12 ಮತ್ತು ರಕ್ಷಣಾ ವಿಭಾಗದಲ್ಲಿ ಹಿಮಾಂಶು 8 ಅಂಕಗಳನ್ನು ಗಳಿಸಿದ್ದಾರೆ.

ಗುಜರಾತ್ ಗೆ ರೋಚಕ ಜಯಗಳಿಸಿದೆ. ಅದೇ ದಿನದ ಇನ್ನೊಂದು ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವು 34 ರಿಂದ 32 ತೆಲುಗು ಟೈಟನ್ಸ್ ವಿರುದ್ಧ ಗೆದ್ದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಲಾಸ್ ಏಂಜಲೀಸ್ ಚಿತ್ರೋತ್ಸವಕ್ಕೆ ಕನ್ನಡ ಸಿನಿಮಾ

0

ಕಸ್ತೂರ್ ಬಾ ಗಾಂಧಿ ಅವರ ಜೀವನದ ಮುಖ್ಯ ಘಟನೆಗಳನ್ನು ಆಧರಿಸಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ ತಾಯಿ ಕಸ್ತೂರ್ ಗಾಂಧಿ’ ಚಿತ್ರವು ಲಾಸ್ ಏಂಜಲೀಸ್ ಸನ್ ಅಂತರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ.

ಗಾಂಧೀಜಿ ಕುರಿತು ಸಿನಿಮಾಗಳು ಬಂದಿದ್ದರೂ, ಭಾರತದಲ್ಲಿ ಕಸ್ತೂರ್ ಬಾ ಅವರನ್ನೇ ಮುಖ್ಯ ಪಾತ್ರವನ್ನಾಗಿ ಸಿಕೊಂಡ ಸಿನಿಮಾಗಳು ಇಲ್ಲ. ಕನ್ನಡದಲ್ಲಿ ಇಂಥದ್ದೊಂದು ಪ್ರಯತ್ನ ಆಗಿದೆ. ಕಸ್ತೂರ್ ಬಾ ಅವರ ಬದುಕಿನ ಕೆಲವು ಪ್ರಮುಖ ಘಟನೆಗಳ ಮೂಲಕ ಆದರ್ಶ ಮತ್ತು ಕಟುವಾಸ್ತವ ಗಳ ದ್ವಂದ್ವವನ್ನು ಕಟ್ಟಿಕೊಡಲಾಗಿದೆ. ದ್ವಂದ್ವವನ್ನು ಎದುರಿಸುತ್ತಲೇ ಅದನ್ನು ಮೀರುವ ವ್ಯಕ್ತಿತ್ವಗಳಾಗಿ ಕಸ್ತೂರ್ ಬಾ ಮತ್ತು ಗಾಂಧೀಜಿಯವರನ್ನು ಚಿತ್ರಿಸಲಾಗಿದೆ. ಮುಖ್ಯವಾಗಿ ಕಸ್ತೂರ್ ಬಾ ಅವರು ತಾಯಿ ಮತ್ತು ಪತ್ನಿ ಎರಡು ನೆಲೆಗಳಲ್ಲಿ ಬದುಕನ್ನು ನಿಭಾಯಿಸಿದ ಚರಿತೆ ಯು ಈ ಚಿತ್ರದ ಕೇಂದ್ರವಾಗಿದೆ ಎಂದು ಬರಗೂರು ರಾಮಚಂದ್ರಪ್ಪ ಅವರು ಹೇಳಿದ್ದಾರೆ.

ನಿರ್ದೇಶಕ ಬರಗೂರು ರಾಮಚಂದ್ರಪ್ಪ

ಕಸ್ತೂರ್ ಬಾ ಹಾಗೂ ಗಾಂಧೀಜಿಯವರ ಯೌವನ ಮತ್ತು ಮುಪ್ಪಿನ ಘಟನೆಗಳನ್ನು ಈ ಚಿತ್ರವು ಒಳಗೊಂಡಿದೆ. ಕಸ್ತೂರ್ ಬಾ ಪಾತ್ರದಲ್ಲಿ ನಟಿ ಹರಿಪ್ರಿಯಾ ಮತ್ತು ಗಾಂಧಿ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್ ಅಭಿನಯಿಸಿದ್ದಾರೆ. ಖ್ಯಾತ ನಟರಾದ ಶ್ರೀನಾಥ್, ಸುಂದರರಾಜ್, ನಟಿ ಪ್ರಮೀಳಾ ಜೋಷಾಯ್, ವತ್ಸಲಾ ಮೋಹನ್ ಮುಂತಾದವರು ಮುಖ್ಯಭೂಮಿಕೆಯಯಲ್ಲಿ ಕಾಣಿಸಿಕೊಂಡಿದ್ದಾರೆ. ಮಾಸ್ಟರ್ ಆಕಾಂಕ್ಷ್ ಬರಗೂರು ಬಾಲಕ ಗಾಂಧಿಯಾಗಿ, ಕುಮಾರಿ ಸ್ಪಂದನ ಬಾಲಕಿ ಕಸ್ತೂರಿಬಾಯಿ ನಟಿಸಿದ್ದಾರೆ.

ಬರಗೂರು ಅವರೇ, ಚಿತ್ರಕಥೆ, ಸಂಭಾಷಣೆ, ಗೀತ ರಚನೆ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಸುರೇಶ್ ಅರಸು ಅವರು ಸಂಕಲನ, ನಾಗರಾಜ್ ಆದವಾನಿ ಅವರ ಛಾಯಾಗ್ರಹಣ ಶಮಿತಾ ಮಲ್ನಾಡ್ ಸಂಗೀತ, ಮೈತ್ರಿ ಬರಗೂರು ಅವರ ಕಲಾ ನಿರ್ದೇಶನ ಇದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಫಲಾನುಭವಿಗಳ ಪಾಲನ್ನ ಸರ್ಕಾರ ಭರಿಸಲಿದೆ

0

ಮುಂದಿನ 2023 ರೊಳಗೆ ರಾಜ್ಯದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಮನೆಮನೆಗೆ ನೀರಿನ ಸಂಪರ್ಕ ಕಲ್ಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಅದಕ್ಕೆ ಪೂರಕವಾಗಿ 4,400.66 ಕೋಟಿ ರೂಪಾಯಿ ಮೊತ್ತದ ಯೋಜನೆಗೆ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ. ಯೋಜನೆಗೆ ತಗಲುವ ವೆಚ್ಚದಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಶೇ.45 ಮತ್ತು ಶೇ. 10ರಷ್ಟನ್ನು ಫಲಾನುಭವಿ ಭರಿಸಬೇಕು. ಆದರೆ, ಫಲಾನುಭವಿ ಪಾಲಿನ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲು ಮುಂದಾಗಿರುವುದರಿಂದ ವಿಶ್ವ ಬ್ಯಾಂಕಿನಿಂದ ಸಾಲ ಪಡೆಯಲು ಕಳೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ವಿಶ್ವಾದ್ಯಂತ ತಿಂಗಳಿಗೆ 300 ಮಿಲಿಯನ್ ಕೊರೊನಾ ಪ್ರಕರಣಗಳು ಪತ್ತೆ

0

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಸಿಸ್ಟಮ್ಸ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಕೇಂದ್ರದ ಪ್ರಕಾರ, ಕೇವಲ ಒಂದು ತಿಂಗಳ ನಂತರ ಜಗತ್ತು 300 ಮಿಲಿಯನ್ ಕೊರೊನಾ ವೈರಸ್ ಪ್ರಕರಣಗಳನ್ನು ಮೀರಿದೆ.
ವಿಶ್ವಾದ್ಯಂತ ಸರ್ಕಾರಗಳು ಮತ್ತು ಜನರು ಸಾಂಕ್ರಾಮಿಕ ರೋಗದ ಮುಂದಿನ ಹಂತವನ್ನು ಹೇಗೆ ಎದುರಿಸಬೇಕೆಂಬ ಸವಾಲು ಇರುವಾಗಲೇ ಹೆಚ್ಚು ಹರಡುತ್ತಿರುವ ಓಮಿಕ್ರಾನ್ ರೂಪಾಂತರಿವು ದಿಗ್ಭ್ರಮೆಗೊಳಿಸಿದೆ.
ವಿಶ್ವವು 100 ಮಿನಿಯನ್ ದೃಢಪಡಿಸಿದ ಸೋಂಕುಗಳನ್ನು ತಲುಪಲು ಒಂದು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಂಡಿತು.
2019ರ ಕೊನೆಯಲ್ಲಿ ಮೊದಲ ಪ್ರಕರಣ ಗುರುತಿಸಲಾಗಿತ್ತು.
ಈಗ ದೈನಂದಿನ ಪ್ರಕರಣಗಳ ಎಣಿಕೆಗಳು ಕಡಿಮೆಯಾಗಲು ಪ್ರಾರಂಭಿಸಿವೆ. ಆದರೆ ಪ್ರತಿದಿನ ಸರಾಸರಿ 2.7 ದಶಲಕ್ಷಕ್ಕೂ ಹೆಚ್ಚು ಸೋಂಕುಗಳು ವರದಿಯಾಗಿವೆ. ಪ್ರಕರಣಗಳ ನಿಜವಾದ ಸಂಖ್ಯೆಯು ನಿಸ್ಸಂದೇಹವಾಗಿ ಹೆಚ್ಚಾಗಿರುತ್ತದೆ.
ಮನೆಯಲ್ಲಿ ಕ್ಷಿಪ್ರ ಪರೀಕ್ಷೆಯ ಫಲಿತಾಂಶಗಳು ಅಧಿಕೃತವಾಗಿ ವರದಿಯಾಗುವುದಿಲ್ಲ. ಎಲ್ಲಾ ಸೋಂಕಿತ ಜನರು ಪರೀಕ್ಷೆಗೆ ಒಳಗಾಗುವುದಿಲ್ಲ ಏಕೆಂದರೆ ಅವರಲ್ಲಿ ಸೋಂಕು ಪ್ರವೇಶಿಸಿರುವ ಯಾವುದೇ ರೋಗಲಕ್ಷಣಗಳು ವ್ಯಕ್ತವಾಗಿರುವುದಿಲ್ಲ.

ವಿಶ್ವಾದ್ಯಂತ ಸುಮಾರು 5 ಶತಕೋಟಿ ಜನರು ಕೊರೊನಾ ವೈರಸ್ ಲಸಿಕೆಗಳ ಕನಿಷ್ಠ ಒಂದು ಡೋಸ್ ಅನ್ನು ಪಡೆದಿದ್ದಾರೆ‌. ಲಸಿಕೆಗಳು ರೋಗದ ವಿರುದ್ಧ ಒಳ್ಳೆಯ ರಕ್ಷಣೆ ನೀಡುತ್ತವೆ ಎಂದು ಸಂಶೋಧನೆಯೊಂದು ಸೂಚಿಸುತ್ತದೆ.

ವೈರಸ್‌ನ ಪ್ರಸ್ತುತ, ಪ್ರಬಲವಾದ ರೂಪ – ಓಮಿಕ್ರಾನ್ ನಿಂದಾಗಿ ಆಸ್ಪತ್ರೆಗೆ ಸೇರುವ ಅಥವಾ ಸಾವಿಗೆ ಕಾರಣವಾಗುವ ಸಾಧ್ಯತೆಗಳು ಕಡಿಮೆಯಾಗಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರೈತರಿಗೆ ಪಿಂಚಣಿ ಕೊಡಿ- ಸಂಸದ ಸುರೇಶ್

0

ಅನ್ನದಾತರಿಗೆ ನಿವೃತ್ತಿ ಎಂಬುದು ಇಲ್ಲ. ಪಿಂಚಣಿಯೂ ಸಿಗುವುದಿಲ್ಲ. ರೈತ ತನ್ನ ಜೀವನದ ಕೊನೆಯ ಕ್ಷಣದವರೆಗೂ ದುಡಿಯುತ್ತಾನೆ. ಅನ್ನದಾತನಿಗೆ ಪಿಂಚಣಿ ಸೌಲಭ್ಯ ಎಂದು ಸಂಸದ ಡಿ.ಕೆ. ಸುರೇಶ್ ಅವರು ಸಂಸತ್ತಿನಲ್ಲಿ ಆಗ್ರಹಿಸಿದ್ದಾರೆ.

” ರೈತ ಈ ದೇಶ ಮತ್ತು ದೇಶದ ಆರ್ಥಿಕತೆಯ ಬೆನ್ನೆಲುಬು. ಆದರೆ ರೈತರ ಪರಿಸ್ಥಿತಿ ಮಾತ್ರ ಶೋಚನೀಯವಾಗಿದೆ. ರೈತರಿಗೆ ಕಮಿಷನ್ ಸಿಗುವುದಿಲ್ಲ. ಸ್ಥಿರ ಮಾರುಕಟ್ಟೆಯೂ ಇಲ್ಲ. ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಯಲ್ಲಿ ವಿಭಿನ್ನ ಶ್ರೇಣಿಗಳಿದೆ. ಅವುಗಳ ನಡುವೆ ಭಾರೀ ವ್ಯತ್ಯಾಸವಿದೆ. ಕೇವಲ 23 ಬೆಳೆಗಳು ಮಾತ್ರ ಈ ವ್ಯಾಪ್ತಿಗೆ ಒಳಪಡುತ್ತವೆ. ಆದ್ದರಿಂದ ರೈತರಿಗೆ ನಿವೃತ್ತಿ ಮತ್ತು ಪಿಂಚಣಿ ನೀಡಲು ಸರ್ಕಾರ ಬದ್ಧವಾಗಿದಿಯೇ? ಎಂದು ಡಿ.ಕೆ. ಸುರೇಶ್ ಅವರು ಸಂಸತ್ತಿನಲ್ಲಿ ಕೃಷಿ ಸಚಿವರನ್ನು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ ಕೈಲಾಶ್ ಚೌಧರಿ, ಈಗಾಗಲೇ ವಯಸ್ಸಾದ ರೈತರಿಗೆ ಪಿಂಚಣಿ ನೀಡಲು ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯ ವ್ಯಾಪ್ತಿಗೆ ಒಳಪಡುವ ರೈತರು 60 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಅವರ ವಯಸ್ಸಿನ ಆಧಾರವಾಗಿ ಮೂರು ಸಾವಿರ ರೂಪಾಯಿಯಷ್ಟು ಪಿಂಚಣಿ ನೀಡಲಾಗುತ್ತದೆ ಎಂದು ಉತ್ತರಿಸಿದ್ದಾರೆ.

ಮುಂಬರುವ ದಿನಗಳಲ್ಲಿ ದೇಶದ ರೈತರ ಆದಾಯ ಹೆಚ್ಚಿಸುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೂರದೃಷ್ಟಿ ಹೊಂದಿದ್ದಾರೆ. ಇದರಿಂದ ಕೃಷಿ ಉತ್ಪಾದನೆ ಹೆಚ್ಚಳ, ರೈತರಿಗೆ ಭದ್ರತೆ ನೀಡಲು ಕೃಷಿ ಜೊತೆಗೆ ತಂತ್ರಜ್ಞಾನ ಜೋಡಣೆ, ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಕೃಷಿ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡಲು ನಿರ್ಧರಿಸಲಾಗಿದೆ. ಆ ಪ್ರಕಾರವಾಗಿ 2013-14ನೇ ಸಾಲಿನಲ್ಲಿ ಕೃಷಿ ಕ್ಷೇತ್ರಕ್ಕೆ 27,662.67 ಕೋಟಿ ರೂಪಾಯಿ ಅನುದಾನ ನೀಡಿದೆ. 2022-23ನೇ ಸಾಲಿನಲ್ಲಿ ಕೃಷಿ ಕ್ಷೇತ್ರದ ಅನುದಾನವನ್ನು 1,32,513.62 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಆ ಮೂಲಕ ಶೇ.379 ರಷ್ಟು ಅನುದಾನ ಹೆಚ್ಚಳ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸುದ್ದಿ ಸಾಲು

0

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆ ಸಂದರ್ಭ ವಲಸೆ ಹೋಗಿ ಹಿಂತಿರುಗಿ ಬಂದ ಸುಮಾರು 610 ಕಾಶ್ಮೀರಿ ಪಂಡಿತರ ಕುಟುಂಬಗಳಿಗೆ ಅವರ ಆಸ್ತಿಗಳನ್ನು ಮರು ನೀಡಲಾಗಿದೆ.

ಹಿಜಾಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಬೇಕೆಂದು ವಕೀಲರಾದ ಶ್ರೀ ಕಪಿಲ್ ಸಿಬ್ಬಲ್ ಅವರು ಕೋರಿಕೆ ಅರ್ಜಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿದೆ ಎಂದು
ಮಾಧ್ಯಮಗಳಲ್ಲಿ ವರದಿಯಾಗಿದೆ.

ಶಿವಮೊಗ್ಗ ಸಮೀಪದ ಆಯನೂರು ಸಿರಿಗೆರೆಯಲ್ಲಿ ಕಾಡಾನೆ
ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ಸಿರಿಗೆರೆ ಕೃಷಿಕ
ರಮೇಶ್ ಅವರ ತೋಟದ ಅಡಿಕೆ ಮತ್ತು ಬಾಳೆ ಸಸಿಗಳನ್ನು, ಮುಳ್ಳಿನ ಬೇಲಿಯನ್ನ ಕಾಡಾನೆ
ತುಳಿದು ಹಾಳುಗೆಡವಿರುವುದು ವರದಿಯಾಗಿದೆ.

ಏಕ ದಿನ ಕ್ರಿಕೆಟ್ ಪಂದ್ಯದಲ್ಲಿ
ವೆಸ್ಟ್ ಇಂಡೀಸ್ ವಿರುದ್ಧ 44 ರನ್ ಗಳ ಜಯ ಸಾಧಿಸಿದೆ.
ಪಂದ್ಯ ಪುರುಷ ಪ್ರಶಸ್ತಿಯನ್ನ
ಯಶಸ್ವಿ ಬೌಲರ್,ಪ್ರಸಿದ್ಧ ಕೃಷ್ಣ ಪಡೆದುಕೊಂಡರು.
(ಸಾಧನೆ 9-3-12-4)
ಭಾರತ : 237-9
ವೆಸ್ಟ್ ಇಂಡೀಸ್ 193 ಆಲ್ ಔಟ್

ಸೂಪರ್ ಮಾರ್ಕೆಟ್ ಹಾಗೂ‌ ದಿನಸಿ ಅಂಗಡಿಗಳಲ್ಲಿ ಮದ್ಯಮಾರಾಟಕ್ಕೆ ಮಹಾರಾಷ್ಟ್ರ ಸರ್ಕಾರ ಅವಕಾಶ ನೀಡಿದೆ.‌ ಈ ನೀತಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಹಿರಿಯ
ಅಣ್ಣಾ ಹಜಾರೆ ಅವರು ಫೆ 14ರಿಂದ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಸರ್ಕಾರಕ್ಕೆ ಪತ್ರಮುಖೇನ ತಿಳಿಸಿದ್ದಾರೆ.

ಆಫ್ಘನಿಸ್ತಾನದಲ್ಲಿ ಇದ್ದ 33 ಆಸ್ಪತ್ರೆಗಳು ಬಂದ್ ಆಗಿವೆ.
ಸದ್ಯ ಓಮಿಕ್ರಾನ್ ಸೋಂಕಿತರನ್ನ ಪರೀಕ್ಷೆ ಮಾಡುವ ವ್ಯವಸ್ಥೆಯೇ ಇಲ್ಲವಾಗಿದೆ. ಕೇವಲ 5 ಆಸ್ಪತ್ರೆಗಳ ಮೂಲಕವೇ ಜನರಿಗೆ ಚಿಕಿತ್ಸೆ ನೀಡುತ್ತಿದ್ದು,
ಒಂದು ರೀತಿ ಅರೋಗ್ಯ ಬಿಕ್ಕಟ್ಟು ಉದ್ಭವಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಇಂದು ಕೆಂಗಲ್ ಹನುಮಂತಯ್ಯ ನವರ ಜನ್ಮ ದಿನಾಚರಣೆ

0

ಇಂದು ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ 114ನೇ ಜನ್ಮ ದಿನಾಚರಣೆಯ ಅಂಗವಾಗಿ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ನಮನಗಳನ್ನು ಸಲ್ಲಿಸಿದರು. ಇದರೊಂದಿಗೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಸಹ ಪುಷ್ಪ ನಮನ ಸಲ್ಲಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಫೆಬ್ರವರಿ 14 ವಿಧಾನಸೌಧಕ್ಕೆ ರೈತರಿಂದ ಮುತ್ತಿಗೆ

0

ರಾಜ್ಯ ಸರ್ಕಾರ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಫೆ. 14ರ ಸೋಮವಾರದಂದು ವಿಧಾನಸೌಧ ಮುತ್ತಿಗೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಿರ್ಧರಿಸಿದೆ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ ಅವರು ಶಿವಮೊಗ್ಗದ ಪತ್ರಿಕ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

13 ತಿಂಗಳ ರೈತರ ನಿರಂತರ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ. ಈ ಕಾಯ್ದೆಗಳಿಗೆ ಪೂರಕವಾಗಿ ರಾಜ್ಯ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಬೆಳಗಾವಿ ವಿಧಾನ ಸಭಾ ಅಧಿವೇಶನದಲ್ಲಿ ತಿಳಿಸಿದ್ದರು. ಆದರೆ ಈ ಕಾಯ್ದೆಯನ್ನು ವಾಪಸ್ ಪಡೆದಿಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆಯನ್ನು ಮುಂದುವರಿಸಿದೆ. ಭತ್ತ, ಜೋಳ, ರಾಗಿ, ತೊಗರಿ ಖರೀದಿ ಕೇಂದ್ರಗಳನ್ನು ಮುಚ್ಚಿ ರೈತರು ಅರ್ಧ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ. ಈ ಹಿಂದೆ ರಾಷ್ಟ್ರೀಯ ವಿಪತ್ತಿನ ಪರಿಹಾರದ ಅಡಿಯಲ್ಲಿ ಕೊಡಬೇಕಾಗಿದ್ದ ನಷ್ಟದ ಹಣವನ್ನು ಇನ್ನೂ ರೈತರಿಗೆ ಕೊಟ್ಟಿಲ್ಲ. ರೈತರಿಗೆ ಬಗರ್ಹುಕುಂ ಸಾಗುವಳಿ ಪತ್ರವನ್ನು ಸಹ ರೈತರಿಗೆ ಕೊಟ್ಟಿಲ್ಲ ಎಂದು ಹೆಚ್.ಆರ್.ಬಸವರಾಜಪ್ಪ ಹೇಳಿದರು.

ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಕೃಷಿ, ಗ್ರಾಮೀಣ ಉದ್ಯೋಗ ಭರವಸೆ ಯೋಜನೆ, ರಸಗೊಬ್ಬರ ಸಬ್ಸಿಡಿ, ನೀರಾವರಿ ಗ್ರಾಮೀಣಾಭಿವೃದ್ಧಿಗೆ ಹೋದವರ್ಷದ ಬಜೆಟ್ಗಿಂತ ಈ ವರ್ಷ ಕಡಿಮೆ ಮೊತ್ತವನ್ನು ಮೀಸಲಿಟ್ಟಿದೆ. ಅಲ್ಲದೇ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಿಸಿರುವ ಗೋದಾವರಿ, ಪೆನ್ನಾರ್ ನೀರಾವರಿ ಯೋಜನೆಯಿಂದ ಅಕ್ಕಪಕ್ಕದ ರಾಜ್ಯಗಳಿಗೆ ಲಾಭವಾಗುತ್ತಿದೆ ಹೊರತು, ಕರ್ನಾಟಕ ರಾಜ್ಯಕ್ಕೆ ಇದರಿಂದ ಯಾವುದೇ ಲಾಭವಿಲ್ಲ ಎಂದು ಹೆಚ್.ಆರ್.ಬಸವರಾಜಪ್ಪ ಅವರು ತಿಳಿಸಿದರು.

ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೆ ಅಂತರರಾಜ್ಯ ನದಿ ವಿವಾದಗಳು ಬಗೆಹರಿಯದೆ ಇನ್ನೂ ಹಾಗೆ ಉಳಿದಿದೆ. ಹೀಗಿರುವಾಗ ನದಿಜೋಡಣೆ ಸಾಧ್ಯವಾಗದ ಮಾತು. ಈ ರೀತಿಯ ದೀರ್ಘಕಾಲಿಕ ಯೋಜನೆ ಬದಲಿಗೆ ನದಿಜೋಡಣೆಯ ಖರ್ಚು ಮಾಡುವ ಹಣವನ್ನು ಕೆರೆಕಟ್ಟೆಗಳ ಹೂಳು ತೆಗೆಸಲು, ಮಳೆ ನೀರು ಕೊಯ್ಲು ಮಾಡುವುದು ಇನ್ನು ಮುಂತಾದ ಅಂತರ್ಜಲ ರಕ್ಷಣೆ ಮಾಡಬೇಕು.ಇತಂಹ ಕಾರ್ಯಗಳನ್ನು ರೂಪಿಸಿ ಸಣ್ಣ ನೀರಾವರಿ ಯೋಜನೆಗಳಿಗೆ ಒತ್ತು ಕೊಡುವ ನಿಟ್ಟಿನಲ್ಲಿ ಸೋಲಾರ್, ಹನಿ ಮತ್ತು ತುಂತುರು ನೀರಾವರಿಗೆ ಶೇ100 ರಷ್ಟು ಸಹಾಯಧನ ಒದಗಿಸುವ ಮುಖಾಂತರ ತಕ್ಷಣ ರೈತರಿಗೆ ನೀರಾವರಿ ಅನುಕೂಲ ಮಾಡಿಕೊಡಬಹುದಾಗಿದೆ ಎಂದು ಹೆಚ್.ಆರ್.ಬಸವರಾಜಪ್ಪ ಅವರು ಹೇಳಿದರು.

ಭೂ ಕಬಳಿಕೆ ಕಾನೂನು ಅಡಿ ರೈತರ ಮೇಲೆ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ರೈತರು ಜೈಲಿಗೆ ಹೋಗುವ ಪರಿಸ್ಥಿತಿ ಬಂದಿದೆ. ಆದ್ದರಿಂದ ರೈತರ ಮೇಲಿರುವ ಎಲ್ಲಾ ಕೇಸುಗಳನ್ನು ಕೈಬಿಡಬೇಕು ಎಂದು ಈ ವೇಳೆ ಹೆಚ್.ಆರ್.ಬಸವರಾಜಪ್ಪ ಆಗ್ರಹಿಸಿದರು.

ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಫೆಬ್ರವರಿ 14ರ ಸೋಮವಾರ ಬೆಳಗ್ಗೆ 11ಗಂಟೆಗೆ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಹೊರಟು ವಿಧಾನಸೌಧ ಮುತ್ತಿಗೆ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕು ಎಂದು ಕರೆಕೊಟ್ಟರು.

ಪ್ರಸ್ತುತ ಹಿಜಾಬ್ ವಿವಾದದ ಬಗ್ಗೆ ಮಾತನಾಡಿದ ಅವರು ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಧರ್ಮದ ವಿಷಯಕ್ಕೆ ಭಾಗಿಯಾಗಬಾರದು. ವಿದ್ಯಾರ್ಥಿಗಳು ವಿದ್ಯಾಭ್ಯಾಸದದ ಕಡೆಗೆ ಗಮನ ಹರಿಸಬೇಕು ಎಂದು ಮನವಿ ಮಾಡಿಕೊಂಡರು.

ಈ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಸಿ.ಚಂದ್ರಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ರಾಘವೇಂದ್ರ, ರಾಜ್ಯ ಉಪಾಧ್ಯಕ್ಷ ಟಿ.ಎಂ. ಚಂದ್ರಪ್ಪ ಅವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶಾಲಾ ದೇಣಿಗೆ ನೀಡಲು ಈಗ ನನ್ನ ಶಾಲೆ ನನ್ನ ಕೊಡುಗೆ ಆ್ಯಪ್

0

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳು, ಉದ್ಯಮಗಳು ಮತ್ತು ಸರ್ಕಾರೇತರ ಸಂಸ್ಥೆಗಳು ದೇಣಿಗೆ ನೀಡುತ್ತಿವೆ. ಅಂತಹ ದೇಣಿಗೆ ಸದ್ಬಳಿಕೆಯಲ್ಲಿ ಪಾರದರ್ಶಕತೆ ಕಾಪಾಡುವ ಸಲುವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ನನ್ನ ಶಾಲೆ ನನ್ನ ಕೊಡುಗೆ ಎಂಬ ಆ್ಯಪ್ ಅಭಿವೃದ್ಧಿಪಡಿಸಿದೆ.

ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ದಾನಿಗಳಿಂದ ನೆರವು ಪಡೆಯುವ ಸಲುವಾಗಿ ಮತ್ತು ನನ್ನ ಶಾಲೆ ನನ್ನ ಕೊಡುಗೆ ಯೋಜನೆಗೆ ಸ್ವೀಕರಿಸಿರುವ ಸಿಎಸ್ ಆರ್ ನಿಧಿ ಹಾಗೂ ಇತರೆ ದೇಣಿಗೆಯನ್ನು ಪರಿಣಾಮಕಾರಿಯಾಗಿ ಮತ್ತು ಪಾರದರ್ಶಕವಾಗಿ ಬಳಸಿಕೊಳ್ಳಲು ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆ. 14ರಂದು ಈ ಆ್ಯಪ್ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳ ಮಾಡುವ ಸಲುವಾಗಿ ಸುಮಾರು 80 ಎನ್ ಜಿಒ ಗಳು ಹಾಗೂ ಉದ್ಯಮಗಳು ಮುಂದೆ ಬಂದಿವೆ.

ಪ್ರಮುಖವಾಗಿ ಐಬಿಎಂ, ಗೂಗಲ್ ಮೈಕ್ರೋಸಾಫ್ಟ್ ಮತ್ತು ದೊಡ್ಡ ಉದ್ಯಮ ಸಂಸ್ಥೆಗಳು ನನ್ನ ಶಾಲೆ ನನ್ನ ಕೊಡುಗೆಗೆ ಕೈಜೋಡಿಸಿವೆ.

ರಾಜ್ಯದಲ್ಲಿ ಸುಮಾರು 48 ಸಾವಿರ ಸರ್ಕಾರಿ ಶಾಲೆಗಳಿದ್ದು, ಅವಶ್ಯವಿರುವ ಶಿಕ್ಷಕರ ನೇಮಕ, ಕೊಠಡಿಗಳ ಅಭಿವೃದ್ಧಿಗೆ ಸಿಎಸ್ಆರ್ ಅನುದಾನ ಬಳಸಿಕೊಳ್ಳಲಾಗುವುದು ಎಂದರು.

ದಾನಿಗಳು ತಾವು ಅಭಿವೃದ್ಧಿಪಡಿಸಲು ಇಚ್ಚಿಸುವ ಶಾಲೆಗೆ ನೀಡುವ ದೇಣಿಗೆ ಹಣವನ್ನು ಈ ಆ್ಯಪ್ ಮೂಲಕ ನೇರವಾಗಿ ಇಲಾಖೆಯ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು.
ಅಥವಾ ಕಟ್ಟಡ ನಿರ್ಮಾಣ, ರಿಪೇರಿ, ಪೀಠೋಪಕರಣಗಳ ಕೊಡುಗೆ ಸೇರಿದಂತೆ ಇತರ ಎಲ್ಲಾ ವಿಷಯಗಳಿಗೂ ನೇರವಾಗಿ ಈ ಆ್ಯಪ್ ಮೂಲಕವೇ ಸ್ಪಂದಿಸಬಹುದಾಗಿದೆ.

ಸಾರ್ವಜನಿಕರು ಸಹ ತಮ್ಮ ವ್ಯಾಪ್ತಿಯ ಶಾಲೆಗಳ ಅಭಿವೃದ್ಧಿಗೆ ಈ ಆ್ಯಪ್ ಮೂಲಕ ದೇಣಿಗೆ ಸಲ್ಲಿಸಬಹುದಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹಿಜಾಬ್ ವಿವಾದ ತ್ರಿಸದಸ್ಯ ಪೀಠಕ್ಕೆ

0

ಹಿಜಾಬ್ ವಿವಾದದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಹೈಕೋರ್ಟ್ ಏಕಸದಸ್ಯ ಪೀಠವು , ವಿಷಯದ ಬಗ್ಗೆ ವಿಸ್ತೃತ ವಿಚಾರಗಳ ಚರ್ಚೆಯಾಗಬೇಕಾಗಿದೆ ಎಂದು ಅಭಿಪ್ರಾಯ ಪಟ್ಟಿದೆ. ಇದರೊಂದಿಗೆ ವಿಸ್ತೃತ ಪೀಠ ರಚನೆಗೆ ಶಿಫಾರಸು ಮಾಡಿದೆ. ಇದರ ಬೆನ್ನಲ್ಲೇ ಮುಖ್ಯನ್ಯಾಯಮೂರ್ತಿ ಅವರನ್ನೊಳಗೊಂಡ ತ್ರಿಸದಸ್ಯ ವಿಶೇಷ ಪೀಠವನ್ನು ರಚನೆ ಮಾಡಲಾಗಿದ್ದು, ವಿಚಾರಣೆ ಗುರುವಾರದಂದು ಮುಂದುವರಿಯಲಿದೆ ಎಂದು ತಿಳಿದುಬಂದಿದೆ.
ಈ ವಿಚಾರ ಕುರಿತಂತೆ ಸಚಿವ ಜೆ.ಸಿ. ಮಾಧುಸ್ವಾಮಿಯವರು ಮಾತನಾಡಿ, ಹಿಜಾಬ್ ವಿವಾದ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂತು. ಹೈಕೋರ್ಟ್ ತೀರ್ಪಿನ ಬಳಿಕ ಚರ್ಚಿಸಿ ಮುಂದಿನ ಕ್ರಮ ವಹಿಸಲು ನಿರ್ಧರಿಸಲಾಯಿತು. ನ್ಯಾಯಾಲಯ ಯಾವ ರೀತಿ ಆದೇಶ ನೀಡಲಿದೆ ಎಂದು ಕಾದು ನೋಡುತ್ತೇವೆ ಎಂದರು.

ಈ ನಡುವೆ ಇದೊಂದು ಸೂಕ್ಷ್ಮ ವಿಚಾರವಾಗಿರುವುದರಿಂದ ತ್ವರಿತವಾಗಿ ವಿಚಾರಣೆ ನಡೆಸಿ ತೀರ್ಪು ನೀಡಬೇಕು ಎಂದು ರಾಜ್ಯ ಸರ್ಕಾರದ ಪರವಾಗಿ ಅಡ್ವಕೇಟ್ ಜನರಲ್ ಮನವಿ ಮಾಡಿದ್ದಾರೆ.

ಈ ಪ್ರಕರಣ ತ್ರಿಸದಸ್ಯ ಪೀಠಕ್ಕೆ ಹೋಗಿರುವುದರಿಂದ ಹಲವು ಸಾಂವಿಧಾನಿಕ ಪ್ರಶ್ನೆಗಳ ಬಗ್ಗೆ ವಿಮರ್ಶೆ ನಡೆಯಬೇಕಾಗಿರುವುದರಿಂದ ತೀರ್ಪು ಯಾವಾಗ ಹೊರಬರಬಹುದು ಎಂಬ ಬಗ್ಗೆ ಕುತೂಹಲವಿದೆ.
ಹೀಗಾಗಿ ವಿವಾದವನ್ನು ತಣ್ಣಗಾಗಿಸಲು ರಾಜ್ಯದ ಹೈಸ್ಕೂಲ್ ಮತ್ತು ಕಾಲೇಜುಗಳಿಗೆ ಮೂರು ದಿನ ರಜೆ ಘೋಷಿಸಿದ್ದ ಸರ್ಕಾರ ರಜೆ ಮುಗಿದ ಬಳಿಕ ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದೆ.

ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ವಿಧಿಸಿರುವ ನಿರ್ಬಂಧ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ಪ್ರಕರಣದ ಗಂಭೀರತೆ, ವಿವಿಧ ಹೈಕೋರ್ಟ್ ಗಳ ತೀರ್ಪು, ಸಾಂವಿಧಾನಿಕ ಪ್ರಶ್ನೆಗಳನ್ನು ಇತ್ಯರ್ಥಪಡಿಸಲು ವಿಸ್ತೃತ ಪೀಠದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು.