ಮಹಾಲಿಂಗಪುರ ಸಮೀಪದ ಮಿರ್ಜಿ ಗ್ರಾಮದ ಯುವ ಪತ್ರಕರ್ತೆ ಕು. ದೀಪಾ ತಟ್ಟಿಮನಿ ಅವರು ಬೆಂಗಳೂರಿನ ಟ್ವೇಲ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನವರು ನೀಡುವ ಅಖಿತ ಭಾರತ ಸಾಧಕ ಮಹಿಳಾ ಪ್ರಶಸ್ತಿ-2022ಕ್ಕೆ ಆಯ್ಕೆಯಾಗಿದ್ದಾರೆ.
ಪತ್ರಕರ್ತೆ ಕು.
ದೀಪಾ ತಟ್ಟಿಮನಿಯವರು ಮಹಾಲಿಂಗಪುರದ ಕೆಎಲ್‌ಇ ಪದವಿ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಪದವಿ ಪೂರೈಸಿ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಪತ್ರಿಕೋದ್ಯಮ ಎಂಎ ಪದವಿಯನ್ನು ಪಡೆದುಕೊಂಡಿದ್ದಾರೆ. ನಂತರ ವಿವಿಧ ಪತ್ರಿಕೆಗಳ ವರದಿಗಾರರಾಗಿ, ಎನ್‌ಜಿಓ ಸಂಸ್ಥೆಯೊಂದರ ಸಕ್ರೀಯ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಬೆಂಗಳೂರಿನ ಟ್ವೇಲ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನವರು ಅಖಿತ ಭಾರತ ಸಾಧಕ ಮಹಿಳಾ ಪ್ರಶಸ್ತಿ-2022( ಚೇಂಚ್ ಮೇಕರ್) ಆಯ್ಕೆಯಾಗಿದ್ದಾರೆ ಎಂದು ಟ್ವೇಲ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಸಿಇಓ ದೀಪಕ್ ಟಾಟರ್ ಜೈನ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ದೀಪಾ ತಟ್ಟಿಮನಿಯವರು ಅಕ್ಕಮಹಾದೇವಿ ವಿವಿಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ| ಓಂಕಾರ ಕಾಕಡೆ ಅವರ ಮಾರ್ಗದರ್ಶನದಲ್ಲಿ ಮಹಿಳೆಯರ ಮೇಲೆ ಡಿಜಿಟಲ್ ಇಂಡಿಯಾದ ಪ್ರಭಾವ ಎ ಕೇಸ್ ಸ್ಟಡಿ ಆಫ್ ಕರ್ನಾಟಕ ರಾಜ್ಯ ಕುರಿತು ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ.