ಬೆಂಗಳೂರಿನಲ್ಲಿ 2021ರಲ್ಲಿ ಹೌಸಿಂಗ್ ದರದಲ್ಲಿ ಶೇ.6ಕ್ಕೆ ಏರಿಕೆಯಾಗಿದೆ. ಮನೆಗಳ ಮಾರಾಟದಲ್ಲಿ ಶೇ. 7 ರಷ್ಟು ಹೆಚ್ಚಳವಾಗಿದೆ ಎಂದು ಪ್ರಾಪರ್ಟಿ ಬ್ರೋಕರೇಜ್ ಸಂಸ್ಥೆ ಪ್ರಾಫ್ ಟೈಗರ್ ಡಾಟ್ ಕಾಮ್ ತಿಳಿಸಿದೆ.
2022 ರಲ್ಲಿ ಕೂಡ ಮನೆ, ಫ್ಲಾಟ್ಗಳ ದರದಲ್ಲಿ ಹೆಚ್ಚಳ ನಿರೀಕ್ಷೆ ಸಲಾಗಿದೆ ಎಂದು ಸಂಸ್ಥೆಯ ಬಿಜಿನೆಸ್ ಮುಖ್ಯಸ್ಥ ರಾಜನ್ ಸೂದ್ ಅವರು ತಿಳಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ತಂತ್ರಜ್ಞಾನವಾಗಲಿ, ವಾಣಿಜ್ಯ ಜ್ಞಾನವಾಗಲಿ, ನಿರ್ವಹಣಾ ಜ್ಞಾನವಾಗಲಿ ತಿಳುವಳಿಕೆ ಇದ್ದರೆ ಸಾಲದು, ಅಳವಡಿಕೆಯ ಕೌಶಲವೂ ಅವಶ್ಯ ಎಂದು ಗ್ರಾಸಿಮ್ ಕೈಗಾರಿಕೆಯ ವಿಭಾಗ ಮುಖ್ಯಸ್ಥ ಹಿರಿಯ ಅಧ್ಯಕ್ಷ ಅಜಯ್ ಕುಮಾರ್ ಗುಪ್ತ ಹೇಳಿದರು.
ಬಾಪೂಜಿ ಮೆನೇಜ್ಮೆಂಟ್ ಕಾಲೇಜಿನ 25 ನೇ ಸಂಸ್ಥಾಪನಾ ದಿನ ಹಾಗೂ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಯಶಸ್ಸಿನ ಗಾಥೆ ಆಗಬೇಕೆಂದರೆ ಮೊದಲು ವೈಯಕ್ತಿಕ ಛಾಪು ಮೂಡಿಸಬೇಕು ನಂತರ ಸಂಸ್ಥೆಯ ಛಾಪು ಮೂಡಿಸಬೇಕು. ಅದಕ್ಕೂ ಪೂರ್ವವಾಗಿ ಏನು ಸಾಧಿಸಬೇಕೆಂಬುದುರ ಸ್ಪಷ್ಟ ಅರಿವು ಬೇಕು ನಂತರ ಅದಕ್ಕೆ ಪೂರಕವಾಗಿ ಏನು ಮಾಡಬೇಕೆಂಬುದರ ಅರಿವನ್ನು ಸಹವರ್ತಿಗಳಿಗೆ ಕೊಡಬೇಕು.
ಈ ಪ್ರಕ್ರಿಯೆಯಲ್ಲಿ ಹೊಸ ಜವಾಬ್ದಾರಿಗಳಿಗೆ ಭಯಪಡದೆ ಹೊಸ ಅನುಭವಗಳಿಗೆ ತೆರೆದುಕೊಳ್ಳಬೇಕು ಎಂದು ಮೆನೇಜ್ಮೆಂಟ್ ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಮತ್ತೋರ್ವ ಮುಖ್ಯ ಅತಿಥಿ ಹರಿಹರದ ಸಿಂಥೆಟಿಕ್ ಇಂಡಸ್ಟ್ರೀಸ್ ನ ಜನರಲ್ ಮೆನೇಜರ್ ಎಲ್. ಕೆ. ನಾಗರಾಜ್ ಮಾತನಾಡಿ, ಸಂವಹನ ಕೌಶಲ, ಮಾನವ ಸಂಪನ್ಮೂಲ ಬಳಕೆ, ನಾಯಕತ್ವ ಗುಣ ಅತ್ಯವಶ್ಯ, ಅಂಕಗಳಿಕೆಗೆ ಕೊಡುವಷ್ಟೇ ಗಮನವನ್ನು ಕೈಗಾರಿಕಾ ಕೌಶಲಕ್ಕೂ ಕೊಡಬೇಕು. ಅದರಲ್ಲೂ ಬಹುಮುಖ ಬಹುವಿಧ ಕೌಶಲಗಳು ಬೇಕು ಎಂದರು.
ಉದ್ಘಾಟನಾ ನುಡಿಗಳನ್ನಾಡಿದ ಮುಖ್ಯ ಅತಿಥಿ, ಬಾಪೂಜಿ ತಾಂತ್ರಿಕ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್. ಬಿ. ಅರವಿಂದ ರವರು ಆಲೋಚನೆಗಳು ಸ್ಥಳೀಯ ಸಮಸ್ಯೆಗಳ ಮಿತಿಯಲ್ಲಿದ್ದರೂ ಕಾರ್ಯಾನುಷ್ಠಾನ ಜಾಗತಿಕ ಸಮಸ್ಯೆಗಳ ನಿವಾರಣಾ ಮಟ್ಟದ್ದಾಗಿರಬೇಕು. ನೂತನ ಶಿಕ್ಷಣ ನೀತಿಯಲ್ಲಿ ಕಲಿಕೆಯು ಪರೀಕ್ಷೆ ಬರೆಯುವುದಕ್ಕಷ್ಟೇ ಅಲ್ಲ. ಜ್ಞಾನ ಸಂಪಾದನೆಗೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಚೇರ್ಮನ್ ಅಥಣಿ ಎಸ್. ವೀರಣ್ಣನವರು ಮಾತನಾಡುತ್ತಾ, ಬದಲಾಗುತ್ತಿರುವ ತಂತ್ರಜ್ಞಾನದ ಸವಾಲು ಎದುರಿಸಿ ಸಾಧನೆ ಮಾಡಲು ನಿತ್ಯ ಕಲಿಕೆಯು ಅವಶ್ಯ. ಪ್ರಸ್ತುತ ಔದ್ಯಮಿಕ ರಂಗವು ಗ್ರಾಹಕ ಪ್ರಧಾನವಾಗಿದ್ದು ಗ್ರಾಹಕರ ಅಭಿರುಚಿಯ, ಅಭಿವೃದ್ಧಿಯ ಅರಿವು ಅವಶ್ಯ ಎಂದರು.
ಕಾಲೇಜಿನ ನಿರ್ದೇಶಕ ಸ್ವಾಮಿ ತ್ರಿಭುವನಾನಂದ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತ ಕೋರಿದ ಕಾರ್ಯಕ್ರಮದ ಪ್ರಾರ್ಥನೆಯನ್ನು ನಂದಿನಿ ಹಾಡಿದರು. ಪ್ರಾಧ್ಯಾಪಕ ವರ್ಗದ ನವೀನ್ ನಾಗರಾಜ್, ಸುಜಿತ್, ಪ್ರಕಾಶ್, ಡಾ. ಬಿ.ವೀರಪ್ಪ ಮುಂತಾದವರು ಭಾಗವಹಿಸಿದ್ದ ಕಾರ್ಯಕ್ರಮದ ನಿರೂಪಣೆಯನ್ನು ಸುಹೇಲ್, ಕಿಶನ್ ಮಾಡಿದರೆ ವಂದನೆಯನ್ನು ಉಪ ಪ್ರಾಧ್ಯಾಪಕಿ ಶ್ರುತಿ ಕೆ. ಸಲ್ಲಿಸಿದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಈ ದಿನ ರಾಜೀವ್ ಗಾಂಧಿ ಬಡಾವಣೆಯ ನೂತನವಾಗಿ ನಿರ್ಮಾಣಗೊಂಡಿರುವ ಅಂಗನವಾಡಿ ಕಟ್ಟಡವನ್ನು ಉದ್ಘಾಟನೆ ಮಾಡಲಾಯಿತು. ಹಲವಾರು ವರ್ಷಗಳಿಂದ ಅಂಗನವಾಡಿ ಕಟ್ಟಡದ ಕೊರತೆಯಿತ್ತು.
ರಾಜೀವ್ ಗಾಂಧಿ ಬಡಾವಣೆಯ ಅತ್ಯಂತ ಹಳೆಯ ಸಮುದಾಯಭವನದಲ್ಲಿ ಅಂಗನವಾಡಿಗೆ ಬರುವಂತಹ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದ್ದು ಮೂರು ವರ್ಷಗಳ ಸತತ ಪ್ರಯತ್ನಗಳ ನಂತರ ಈ ಪ್ರದೇಶದಲ್ಲಿ ಸುಸಜ್ಜಿತವಾದ ಎಲ್ಲಾ ವ್ಯವಸ್ಥೆಗಳನ್ನು ಹೊಂದಿರುವ ಅಂಗನವಾಡಿ ಕಟ್ಟಡವನ್ನು ಉದ್ಘಾಟನೆ ಮಾಡಲಾಗಿದೆ. ಈ ಮೂಲಕ ಇಲ್ಲಿನ ಮಕ್ಕಳಿಗೆ ಉತ್ತಮ ವ್ಯವಸ್ಥೆಯನ್ನು ನೀಡಲಾಗುತ್ತದೆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಹಾಗೂ ಈ ವಾರ್ಡಿನ ಕಾರ್ಪೊರೇಟರ್ ಶ್ರೀಮತಿ ಯಮುನಾ ರಂಗೇಗೌಡ ಮುಖಂಡರಾದ ರಂಗೇಗೌಡರು ಅಂಗನವಾಡಿ ಮೇಲ್ವಿಚಾರಕಿ ನಾಗರತ್ನ ಶಿಕ್ಷಕರು ಸಹಾಯಕಿಯರು ಸ್ಥಳೀಯರಾದ ಹನಿಫ್ ಭಾಷಾ ಪರಶುರಾಮ್ ಇನ್ನಿತರರು ಉಪಸ್ಥಿತರಿದ್ದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಉಕ್ರೇನ್‌ನಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಭಾರತವು ಯಾವುದೇ ತಕ್ಷಣದ ಯೋಜನೆಯನ್ನು ಹೊಂದಿಲ್ಲ. ಅವರ ಸುರಕ್ಷತೆಯೇ ನಮಗೆ ಮುಖ್ಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ.
ನಿಯಮಾಧಾರಿತ ಅಂತರಾಷ್ಟ್ರೀಯ ಕ್ರಮಕ್ಕೆ ಬದ್ಧವಾಗಿರುವ ಭಾರತವು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಸಂದರ್ಭದಲ್ಲಿ ತನ್ನ ಪರವಾಗಿ ನಿಲ್ಲುತ್ತದೆ ಎಂದು ಯುಎಸ್ ಹೇಳಿದೆ.
ಬಿಡೆನ್ ಆಡಳಿತದ ಪ್ರಕಾರ ಮಾಸ್ಕೋಗೆ 7000 ಸೈನಿಕರನ್ನು ಸೇರಿಸುವುದು ಸನ್ನಿಹಿತವಾಗಿದೆ. ಭಾರತೀಯರು ಸ್ವದೇಶಕ್ಕೆ ಮರಳಲು ಸಹಾಯ ಮಾಡುವ ಕ್ರಮದಲ್ಲಿದೆ. ನಾಗರಿಕ ವಿಮಾನಯಾನ ಸಚಿವಾಲಯವು ಭಾರತದ ನಡುವೆ ನಿರ್ವಹಿಸಬಹುದಾದ ವಿಮಾನಗಳ ಸಂಖ್ಯೆಯ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದೆ.
ದ್ವಿಪಕ್ಷೀಯ ಏರ್ ಬಬಲ್ ವ್ಯವಸ್ಥೆಯಲ್ಲಿ ದೂರವಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಶಿವಮೊಗ್ಗ ಸಂಸದರಾದ ಬಿ.ವೈ.ರಾಘವೇಂದ್ರರವರು ಹಿಜಾಬ್ ವಿವಾದದ ಕುರಿತು ಪತ್ರಿಕಾಗೋಷ್ಠಿ ಮಾತನಾಡಿದರು. “ಈ ಹಿಜಾಬ್ ಎನ್ನುವಂತಹ ಒಂದು ವಿಚಾರವನ್ನು ಇಟ್ಟುಕೊಂಡು ಶೈಕ್ಷಣಿಕವಾಗಿ, ಉದ್ಯೋಗ, ಸಾಮರಸ್ಯ ಎಲ್ಲದಕ್ಕೂ ಧಕ್ಕೆಯಾಗುವಂತಹ ಪ್ರಕ್ರಿಯೆ ಎಂಟು – ಹತ್ತು ದಿನದಿಂದ ನಾವೆಲ್ಲರೂ ನೋಡುತ್ತಿದ್ದೇವೆ. ಶಾಂತಿಗೆ ಹೆಸರಾದ ಕರ್ನಾಟಕಕ್ಕೆ ಒಂದು ಕಪ್ಪು ಚುಕ್ಕೆ ಇಡುವಂತಹ ವಾತಾವರಣ ಕೂಡ ಸೃಷ್ಟಿಯಾಗುತ್ತಿದೆ. ನಡೆದ ಪಾರ್ಲಿಮೆಂಟ್ ಸೇಷನ್ ನಲ್ಲೂ ಕೂಡ ಚರ್ಚೆ ಬಂದಿದೆ.
ಈ ಬಗ್ಗೆ ಅನೇಕ ರಾಜಕೀಯ ಪಕ್ಷದ ಮುಖಂಡರುಗಳು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಸರ್ಕಾರ ಪ್ರಾಮಾಣಿಕವಾಗಿ ಕೂಡ ಒಂದೇ ತಾಯಿಯ ಮಕ್ಕಳು ಎಂದು ಹೇಳಿ ಸಾಮರಸ್ಯದಿಂದ ತೆಗೆದುಕೊಂಡು ಹಂತಕ್ಕೆ ಬರುತ್ತಿದ್ದಂತೆ ಮತ್ತೆ ಅವರನ್ನು ಆಕ್ರೋಶದಿಂದ ಪುಟಿದೇಳಿಸುವ ಒಂದು ಪ್ರಯತ್ನ ಕೂಡ ಕೆಲವು ರಾಜಕೀಯ ಪಕ್ಷಗಳ ಹಾಗೂ ಮುಖಂಡರು ಹೇಳಿಕೆ ನೀಡುತ್ತಿದ್ದಾರೆ” ಎಂದು ಹೇಳಿದರು.
“ಯಾರು ಶಾಂತಿಗೆ ಭಂಗ ತರುತ್ತಿದ್ದಾರೆ ಅಂತಹವರನ್ನು ಶಬಾಸ್ ಗಿರಿ ಕೊಡುವ ಪದ್ಧತಿ ನಡೆಯುತ್ತಿದೆ. ಇದೆಲ್ಲವನ್ನೂ ನೋಡಿದರೆ ಇದರ ಬೇರು ಆಳವಾಗಿ ಇರುವಂತೆ ಕಾಣುತ್ತಿದೆ. ಚರ್ಚೆಗಳು ಕೂಡ ನಡೆಯುತ್ತಿದೆ. ಅನೇಕ ಸಾಕ್ಷಿಗಳು ಕೂಡ ಸಿಗುತ್ತಿದೆ. ವಿಶೇಷವಾಗಿ ಪಿಐಎಫ್ ಬಗ್ಗೆ ಇದಕ್ಕೆ ಬೇಕಾದಂತಹ ಎಲ್ಲಾ ತಯಾರಿಗಳು ನಡೆದಿತ್ತು. ಆ ಮುಗ್ಧ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಮನಸ್ಸನ್ನು ಮತೀಯ ಸಂಸ್ಥೆಗಳು ಗಳ ಮನಸ್ಸಿನಲ್ಲಿ ವಿಷಬೀಜ ಬಿತ್ತುತ್ತಿವೆ” ಎಂದು ಬಿ.ವೈ.ರಾಘವೇಂದ್ರ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷರಾದ ಎನ್.ಕೆ.ಜಗದೀಶ್, ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ಸುನೀತಾ ಅಣ್ಣಪ್ಪ, KSSIDC ಉಪಾಧ್ಯಕ್ಷರಾದ ಎಸ್.ದತ್ತಾತ್ರಿ, ಸೂಡಾ ಅಧ್ಯಕ್ಷರಾದ ಎನ್.ಜಿ.ನಾಗರಾಜ್, ಮಾಜಿ ಸೂಡಾ ಅಧ್ಯಕ್ಷರಾದ ಎಸ್.ಎಸ್.ಜ್ಯೋತಿ ಪ್ರಕಾಶ್ ಹಾಗೂ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖರಾದ ಅಣ್ಣಪ್ಪ ಕೆ. ವಿ ಉಪಸ್ಥಿತರಿದ್ದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ನವದೆಹಲಿಯಲ್ಲಿ ಜನಸಂದಣಿ ಪ್ರದೇಶವಾದ ಹಳೆ ಸೀಮಾ ಪುರಿಯಲ್ಲಿ ಅನುಮಾನಸ್ಪದ ಬ್ಯಾಗೊಂದು ದೊರಕಿದೆ. ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಅದರಲ್ಲಿ ಸುಧಾರಿತ ಸ್ಫೋಟಕ ಸಾಧನ ಪತ್ತೆಯಾಗಿದೆ.
ದೆಹಲಿ ಪೊಲೀಸರ ವಿಶೇಷ ವಿಭಾಗವು ಪ್ರದೇಶವನ್ನು ವಶಕ್ಕೆ ಪಡೆದುಕೊಂಡು ಕಟ್ಟುನಿಟ್ಟಿನ ಭದ್ರತೆ ನಿಯೋಜಿಸಿದೆ. ಐಇಡಿ ಸಿಕ್ಕಿರುವ ಅಪಾರ್ಟ್ಮೆಂಟ್ ನ ಎರಡನೇ ಮಹಡಿಯ ಫ್ಲಾಟ್ ಕಳೆದ ಅನೇಕ ತಿಂಗಳಿಂದ ಖಾಲಿಯಾಗಿತ್ತು. ಅಪಾರ್ಟ್ಮೆಂಟ್ ಮಾಲೀಕರು, ನಿರ್ವಹಣೆ ಸಿಬ್ಬಂದಿಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪೊಲೀಸರ ಮನವಿ ಮೆರೆಗೆ ರಾಷ್ಟ್ರೀಯ ಸುರಕ್ಷಿತ ಪಡೆಯು ಫ್ಲಾಟ್ ಗೆ ಭೇಟಿ ನೀಡಿ, ಐಇಡಿ ಬಾಂಬ್ ಅನ್ನು ಸುರಕ್ಷಿತ ಪ್ರದೇಶಕ್ಕೆ ಹೊತ್ತಾಯ್ತು ನಿಷ್ಕ್ರಿಯಗೊಳಿಸಿದ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವಂತೆ ಬಾಂಬ್ ಸಿಕ್ಕಿರುವ ಅಪಾರ್ಟ್ಮೆಂಟಿನ ಮಾಲೀಕನ ಹೆಸರು ಖಾಸಿಂ. ಆತ ವೃತ್ತಿಯಲ್ಲಿ ಗುತ್ತಿಗೆದಾರ ನಾಗಿದ್ದಾನೆ. ಫ್ಲ್ಯಾಟನ್ನು ರಿಯಲ್ ಎಸ್ಟೇಟ್ ಬ್ರೋಕರ್ ಮೂಲಕ ಬಾಡಿಗೆಗೆ ನೀಡಲಾಗಿತ್ತು. ಆದರೆ ಕಳೆದ ಹತ್ತು ದಿನಗಳಿಂದ ಪ್ಲಾಟ್ನಲ್ಲಿ ಬಾಡಿಗೆದಾರನ ಜೊತೆ ಮತ್ತಿಬ್ಬರು ವಾಸವಾಗಿದ್ದರು. ಪೊಲೀಸರು ಸ್ಥಳಕ್ಕೆ ಬರುವ ಮುಂಚೆ ಮೂವರು ಪರಾರಿಯಾಗಿದ್ದಾರೆ. ಇದು ಪಾಕ್ ಪೋಷಿತ ಉಗ್ರರು ರಾಜಧಾನಿಯಲ್ಲಿ ಇರಬಹುದು ಎಂಬ ಬಲವಾದ ಶಂಕೆಯೂ ಪೊಲೀಸರಿಗೆ ಕಾಡ ತೊಡಗಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಜಯ ಸಾಧಿಸುವುದರೊಂದಿಗೆ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ ನಲ್ಲಿ ಪ್ಲೇಆಫ್ ಹಂತಕ್ಕೆ ಇರುವ ಅವಕಾಶವನ್ನು ಜೀವಂತವಾಗಿರಿಸಿಕೊಂಡಿದೆ. ಪವನ್ ಸೆಹ್ರಾವತ್ ತಂಡ ಲೀಗ್ ನಲ್ಲಿ ಆಡಿದ 22 ಪಂದ್ಯಗಳಲ್ಲಿ ಒಟ್ಟು 66 ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿದೆ. ಆದರೂ ಬುಲ್ಸ್ ಬಳಗದ ಪ್ಲೇಆಫ್ ಸಾಧ್ಯತೆ, ಚಿತ್ರತಂಡಗಳು ಆಡಲು ಬಾಕಿ ಇರುವ ಪಂದ್ಯಗಳ ಫಲಿತಾಂಶವನ್ನು ಮೇಲೆ ಅವಲಂಬಿಸಿದೆ. ಒಟ್ಟು ಆರು ತಂಡಗಳಿಗೆ ಪ್ಲೇಆಫ್ ಅವಕಾಶವಿದೆ.
ಬೆಂಗಳೂರಿನ ಶೆರಾಟಾನ್ ಗ್ರಾಂಡ್ ಹೋಟೆಲ್ ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಬೆಂಗಳೂರು 46 ರಿಂದ 24 ಅಂಕಗಳ ಭಾರಿ ಅಂತರದ ಗೆಲುವು ಸಾಧಿಸಿದೆ. ನಾಯಕ ಸೆಹ್ರಾವತ್ ಆಕ್ರಮಣಕಾರಿ ಆಟವಾಡಿ ಬೊಟ್ಟು 20 ಅಂಕಗಳನ್ನು ಕಬಳಿಸಿ ಗೆಲುವಿನ ಶ್ರೇಯಸ್ಸನ್ನು ಗಳಿಸಿದೆ.
ಆರಂಭದಿಂದಲೂ ಯೋಜನಾಬದ್ಧವಾಗಿ ಆಡಿದ ಬೆಂಗಳೂರು ಮೇಲುಗೈ ಸಾಧಿಸುತ್ತವೆ ಹೋಯಿತು. ಪ್ರಥಮಾರ್ಧ ಮುಕ್ತಾಯದ ಸಮಯಕ್ಕೆ 20 ರಿಂದ 14 ಅಂಕಗಳ ಮೇಲುಗೈ ಪಡೆಯಿತು. ಆನಂತರ ಮುನ್ನಡೆಯ ಲಾಭವನ್ನು ಬಳಸಿಕೊಂಡು ಮುನ್ನುಗ್ಗಿ ಹಾಡಿದ ಬೆಂಗಳೂರು ಬುಲ್ಸ್ ಪಡೆ ದ್ವಿತೀಯಾರ್ಧದಲ್ಲಿ 26 ರಿಂದ 10 ಅಂಕಗಳನ್ನು ಕಲೆಹಾಕಿ ಗೆಲುವಿನ ಅಂತರವನ್ನು ಹಿಗ್ಗಿಸಿಕೊಂಡಿತು.
ದಿನದ ಮೊದಲ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಯು.ಪಿ ಯೋಧಾ 35 -28 ಅಂಕಗಳಿಂದ ಜಯ ಸಾಧಿಸಿತು. ಯೋಧಾ ತಂಡದ ಸುರೇಂದರ್ ಗಿಲ್ ಗೆಲುವಿನ ರೂವಾರಿ ಎನಿಸಿಕೊಂಡರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಕರ್ನಾಟಕದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ನಿನ್ನೆಯ ಬಳಿಕ ಸಕ್ರಿಯ ಪ್ರಕರಣಗಳ ಸಂಖ್ಯೆ 19,761ಕ್ಕೆ ಇಳಿಕೆಯಾಗಿದೆ.
ಫೆಬ್ರವರಿ 17ರಂದು 1,579 ಹೊಸ ಪ್ರಕರಣಗಳು ವರದಿಯಾಗಿದೆ. 23ಜನ ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 39.33 ಲಕ್ಷಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 39,738ಕ್ಕೆ ತಲುಪಿದೆ. 5,079 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಬಿಡುಗಡೆಯಾದವರ ಸಂಖ್ಯೆ 38.73 ಲಕ್ಷಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಶೇ. 1.74 ರಷ್ಟಿದೆ. ಸಾವಿನ ಪ್ರಮಾಣ ಶೇ. 1.45 ರಷ್ಟಿದೆ.
ಬೆಂಗಳೂರು ನಗರದಲ್ಲಿ 769 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 21 ಜಿಲ್ಲೆಗಳಲ್ಲಿ ಸೋಂಕಿನ ಸಂಖ್ಯೆ ಎರಡಂಕಿ ಯಲ್ಲಿದೆ. ಎಂಟು ಜಿಲ್ಲೆಗಳಲ್ಲಿ ಒಂದಂಕಿಯಲ್ಲಿದೆ. ಇದೇ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ 7, ಧಾರವಾಡ, ಮಂಡ್ಯ,, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ ಎರಡು ಮತ್ತು ವಿಜಯಪುರ, ಕೋಲಾರ, ಕೊಡಗು, ಉಡುಪಿ, ಚಿತ್ರದುರ್ಗ, ಬೆಳಗಾವಿಯಲ್ಲಿ ತಲಾ ಒಬ್ಬ ಸೋಂಕಿತರು ಮೃತಪಟ್ಟಿದ್ದಾರೆ.
90,688 ಜನರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ. 21,893 ಜನರಿಗೆ ರಾಪಿಡ್ ಆಂಟಿಜೆನ್ ಮತ್ತು 68,795 ಜನರಿಗೆ ಆರ್ ಟಿ ಪಿಸಿಆರ್ ಪರೀಕ್ಷೆ ನಡೆಸಲಾಗಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ 7ನೇ ವೇತನ ಆಯೋಗ ರಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಾಲಿನ ಬಜೆಟ್ ಅಧಿವೇಶನಕ್ಕೆ ಮುಂಚೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಸಮಯದಲ್ಲಿ ಜೆಡಿಎಸ್ನ ಕೆ.ಟಿ. ಶ್ರೀಕಂಠೇಗೌಡ ಅವರು, ಬಿಜೆಪಿಯ ಅರುಣ್ ಶಹಾಪೂರ್ ಮತ್ತು ಅ. ದೇವೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಐದು ವರ್ಷಗಳಿಗೊಮ್ಮೆ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಿಸುವುದು ವಾಡಿಕೆ. ಈ ಹಿಂದೆ 2017-18 ರಲ್ಲಿ ವೇತನ ಪರಿಷ್ಕರಿಸಲಾಗಿತ್ತು. ಸರ್ಕಾರಿ ನೌಕರರು ಕೊರೋನಾ ಸಂದರ್ಭದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಸರ್ಕಾರಿ ನೌಕರರ ಜೀವನ ನಿರ್ವಹಣೆಗೆ ತೊಂದರೆಯಾಗದ ರೀತಿಯಲ್ಲಿ, ಆರ್ಥಿಕ ಸ್ಥಿತಿಗತಿ ನೋಡಿಕೊಂಡು ಬೇತನ ಪರಿಷ್ಕರಿಸಲಾಗುವುದು ಎಂದು ಮುಖ್ಯಮಂತ್ರಿ ಅವರು ಹೇಳಿದ್ದಾರೆ.
ದೇಶದ 25 ರಾಜ್ಯಗಳಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸಮಾನವಾದ ವೇತನವನ್ನು ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದೆ. ಕರ್ನಾಟಕ ಕೂಡ ಕೇಂದ್ರಸರ್ಕಾರ ನೌಕರರಿಗೆ ಸಮಾನ ವೇತನ ನೀಡುವ 26ನೇ ರಾಜ್ಯವಾಗಬೇಕು ಎಂದು ಸದಸ್ಯ ಶ್ರೀಕಂಠೇಗೌಡ ಅವರು ಒತ್ತಾಯಿಸಿದರು.
ಕರ್ನಾಟಕ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿರುವ ಅಖಿಲ ಭಾರತ ಅಧಿಕಾರಿಗಳ ವೇತನ ಮತ್ತು ಭತ್ಯೆಗಳನ್ನು ಕೇಂದ್ರ ಸರ್ಕಾರದ ವೇತನ, ಸೇವಾ ನಿಯಮಗಳ ಪ್ರಕಾರ ಪಾವತಿಸಲಾಗುತ್ತದೆ. ರಾಜ್ಯ ಸರ್ಕಾರದ ವೇತನ ಮತ್ತು ಸೇವಾ ನಿಯಮಗಳು ಅಖಿಲ ಭಾರತ ಸೇವೆಯ ನೌಕರರಿಗೆ ಅನ್ವಯಿಸುವುದಿಲ್ಲ. ಅಖಿಲ ಭಾರತ ಸೇವೆಯ ಹುದ್ದೆಗಳನ್ನು ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ ಹುದ್ದೆಗಳಿಗೆ ಹೋಲಿಸಲಾಗದು. ಹೀಗಾಗಿ ಅಖಿಲ ಭಾರತ ಸೇವೆ ಹುದ್ದೆಗಳ ವೇತನ ಶ್ರೇಣಿಗಳನ್ನು ರಾಜ್ಯ ಸರ್ಕಾರದ ಹುದ್ದೆಗಳ ವೇತನ ಶ್ರೇಣಿಗೆ ಹೋಲಿಸುವ ಪ್ರಮೇಯ ಉದ್ಭವಿಸುವುದಿಲ್ಲ ಎಂದು ಮುಖ್ಯಮಂತ್ರಿ ಅವರು ಹೇಳಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಎಲ್ಲಾ ಹಂತದ ಚುನಾವಣೆಗಳಲ್ಲಿ ಶೇ.50ರಷ್ಟು ಮೀಸಲಾತಿ ಕಲ್ಪಿಸುವಂತೆ ಮಹಿಳಾ ನೌಕರರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಂಘದ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿರುವ ಅವರು, ಸಂಘದ ಸದಸ್ಯರಲ್ಲಿ ಶೇಕಡ 50ರಷ್ಟು ಮಹಿಳಾ ನೌಕರರಿದ್ದಾರೆ. ಆದರೆ ತಮ್ಮ ಸಂಖ್ಯೆಗೆ ಅನುಗುಣವಾಗಿ ಸಂಘದ ಚುನಾವಣೆಗಳಲ್ಲಿ ಪ್ರಾತಿನಿಧ್ಯ ದೊರಕದೇ ಇರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಶತಮಾನದ ಇತಿಹಾಸವಿರುವ ಸರ್ಕಾರಿ ನೌಕರರ ಸಂಘವನ್ನು ಕಾಮ್ರೇಡ್ ಮೇರಿ ದೇವಸಿಯಾ ಎಂಬ ಮಹಿಳೆ ಸಮರ್ಥವಾಗಿ ಸಂಘಟಿಸಿ ಸದೃಢವಾಗಿ ಬೆಳೆಸಿದ್ದಾರೆ. ಎಲ್ಲಾ ಅರ್ಹತೆ ಮತ್ತು ಸಾಮರ್ಥ್ಯ ಹೊಂದಿದ್ದರೂ ಮಹಿಳೆ ಎಂಬ ಕಾರಣಕ್ಕಾಗಿ ಸಂಘದಲ್ಲಿ ಅವಕಾಶಗಳನ್ನು ನಿರಾಕರಿಸಲಾಗುತ್ತಿದೆ. ಇದು ಮಹಿಳೆಯರ ಸ್ವಾತಂತ್ರ್ಯಕ್ಕೂ ದಕ್ಕೆ ತರುವ ವಿಚಾರವಾಗಿದೆ ಎಂದು ದೂರಲಾಗಿದೆ.
ಫೆ.22ರಂದು ಶಿವಮೊಗ್ಗದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ಆಡಳಿತ ಮತ್ತು ರಚನೆ) ನಿಯಮಗಳು- 2012ಕ್ಕೆ ತಿದ್ದುಪಡಿ ತರಲು ಸಭೆ ಆಯೋಜಿಸಲಾಗಿದೆ. ಈ ವೇಳೆ ನಿಯಮಗಳಿಗೆ ಸೂಕ್ತ ಮಾರ್ಪಾಡು ತಂದು, ಸಂಘದ ಎಲ್ಲಾ ಹಂತದ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇಕಡ 50ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.