ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಶುಕ್ರವಾರ 83,355 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು,1,333 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 19 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಸೋಂಕಿನ ಪ್ರಮಾಣ ಶೇ.1.59ರಷ್ಟಿದ್ದು, ಸಾವಿನ ಪ್ರಮಾಣ ಶೇ.1.42ರಷ್ಟಿದೆ. ಇದುವರೆಗೆ ರಾಜ್ಯದಲ್ಲಿ 39.34 ಲಕ್ಷ ಜನರು ಸಂಖ್ಯೆಗೆ ಒಳಗಾಗಿದ್ದು, 39,757 ಮೃತರಾಗಿದ್ದಾರೆ.
ಫೆಬ್ರವರಿ 18ರಂದು 4890 ಜನರು ಗುಣಮುಖರಾಗಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 38.78 ಲಕ್ಷಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 16,184ರಷ್ಟಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಮೈಸೂರಿನ ಅಂಬಾವಿಲಾಸ ಅರಮನೆಯ ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಗೂಗಲ್ ನಲ್ಲಿ ವಿಶ್ವದ ಟಾಪ್ -20 ರಿವ್ಯೂವ್ಡ್ ತಾಣಗಳಲ್ಲಿ ಮೈಸೂರು ಅರಮನೆಗೂ ಸ್ಥಾನವಿದೆ. ನಿತ್ಯ ಸಾವಿರಾರು ಮಂದಿ ಭೇಟಿ ನೀಡುವ ಅರಮನೆ ಗೂಗಲ್ ನಲ್ಲೂ ಹಾಟ್ ಟಾಪಿಕ್ ಗೂಗಲ್ ಪ್ರಕಟಿಸಿರುವ ವಿಶ್ವದ ಟಾಪ್-20 ರಿವ್ಯೂವ್ಡ್ ತಾಣಗಳಲ್ಲಿ ಅಂಬಾವಿಲಾಸ ಅರಮನೆಗೆ 15ನೇ ಸ್ಥಾನ ಸಿಕ್ಕಿದೆ.
ಗೂಗಲ್ ಮ್ಯಾಪ್ ಗೆ ಭೇಟಿ ನೀಡಿದ ವೇಳೆ ನೀಡುವ ಪ್ರತಿಕ್ರಿಯೆ ಆಧರಿಸಿ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ. ಮೈಸೂರು ಅರಮನೆಗೆ ಒಟ್ಟು 1,93,177 ಪ್ರತಿಕ್ರಿಯೆಗಳು ಬಂದಿವೆ.
ತಾಜ್ ಮಹಲ್ ಗೆ ಒಟ್ಟು 1,87,245 ರಿವ್ಯೂ ಬಂದಿದೆ.ಈ ಮೂಲಕ ಪಟ್ಟಿಯಲ್ಲಿ 17 ನೇ ಸ್ಥಾನಗಳಿಸಿದೆ. ಈ ವಿಷಯವನ್ನು ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ . ಮೈಸೂರು ಅರಮನೆಗೆ ಪ್ರತಿ ವರ್ಷ 6 ದಶಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ ಎನ್ನುವುದು ವಿಶೇಷ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಗುಜರಾತ್ ನ ಅಹಮದಾಬಾದ್ ನಲ್ಲಿ 2008ರಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 38 ಅಪರಾಧಿಗಳಿಗೆ ವಿಶೇಷ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ. ಇದೇ ವೇಳೆ 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 28 ಮಂದಿಯನ್ನು ಖುಲಾಸೆಗೊಳಿಸಲಾಗಿದೆ.
ಸುಮಾರು 13 ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಫೆಬ್ರವರಿ 8ರಂದು ಪ್ರಕರಣದ ವಿಶೇಷ ನ್ಯಾಯಾಧೀಶ ಎ. ಆರ್. ಪಾಟೀಲ್ ಅವರು 49 ಆರೋಪಿಗಳನ್ನು ತಪ್ಪಿತಸ್ಥರಾಗಿರುವ ಗುರುತಿಸಿ ತೀರ್ಪು ನೀಡಿದ್ದಾರೆ. ಇವರಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗಿದೆ.
ಸುಮಾರು ಏಳು ಸಾವಿರ ಪುಟಗಳ ತೀರ್ಪಿನ ಪ್ರತಿಯಲ್ಲಿ ಇದನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ ಎಂದು ಸರ್ಕಾರಿ ಅಭಿಯೋಜಕರು ಹೇಳಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಡಾ. ರಾಜೇಶ್ ಅವರು ಏಪ್ರಿಲ್ 15,1935ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರು ಕನ್ನಡ ಹಿರಿಯ ನಟರಲ್ಲಿ ಒಬ್ಬರಾಗಿದ್ದಾರೆ. ರಾಜ್ ಕುಮಾರ್, ಉದಯ ಕುಮಾರ್, ಕಲ್ಯಾಣ ಕುಮಾರ್ ಅವರ ಸಮಕಾಲೀನರಾಗಿ ಅಂತಹ ಮಹಾನ್ ಪ್ರತಿಭೆಗಳ ಕಾಲದಲ್ಲಿ ಕೂಡಾ ತಮ್ಮದೇ ಆದ ವಿಶಿಷ್ಟ ಛಾಪನ್ನು ಕನ್ನಡ ಚಿತ್ರಂಗದಲ್ಲಿ ಮೂಡಿಸಿದ್ದವರು.
ಮೊದಲಿಗೆ ಇವರು ಪಿ.ಡಬ್ಲ್ಯೂಡಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಂತರದ ದಿನಗಳಲ್ಲಿ ಅವರಿಗೆ ರಂಗಭೂಮಿಯ ಸೆಳೆತ ಅಪಾರವಾಗಿತ್ತು. ಹೀಗಾಗಿ ಮನೆಯವರಿಗೆ ತಿಳಿಯದಂತೆ ಸುದರ್ಶನ್ ನಾಟಕ ಮಂಡಳಿಯನ್ನು ಸೇರಿಕೊಂಡರು.
ಮುಂದೆ ತಮ್ಮದೇ ಆದ ‘ಶಕ್ತಿ ನಾಟಕ ಮಂಡಳಿ’ಯನ್ನು ಸ್ಥಾಪಿಸಿದ ರಾಜೇಶ್ ನಾಡಿನೆಲ್ಲೆಡೆ ಪ್ರಸಿದ್ಧ ನಾಟಕಗಳಲ್ಲಿ ಬಣ್ಣ ಹಚ್ಚಿದರು. ಕಲಾತಪಸ್ವಿ ರಾಜೇಶ್’ ಎಂಬುದು ಅವರ ಆತ್ಮಚರಿತ್ರೆಯ ಹೆಸರಾಗಿದೆ.
ಇವರು ನಮ್ಮ ಊರು ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಚಿತ್ರ ವಿಮರ್ಶಕರು ಕನ್ನಡ ಚಿತ್ರರಂಗಕ್ಕೆ ಒಬ್ಬ ಹೊಸ ನಾಯಕ ನಟ ಸಿಕ್ಕಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕನ್ನಡ ಚಿತ್ರರಂಗದ ನಮ್ಮ ಊರು’, ‘ಗಂಗೆ ಗೌರಿ’, ‘ಸತೀ ಸುಕನ್ಯ’, ಬೆಳುವಲದ ಮಡಿಲಲ್ಲಿ’, ‘ಕಪ್ಪು ಬಿಳುಪು’, ‘ಬೃಂದಾವನ’, ‘ಬೋರೆ ಗೌಡ ಬೆಂಗಳೂರಿಗೆ ಬಂದ’, ‘ಮರೆಯದ ದೀಪಾವಳಿ’, ‘ಪ್ರತಿಧ್ವನಿ’, ‘ಕಾವೇರಿ’, ‘ದೇವರ ಗುಡಿ’, ‘ಬದುಕು ಬಂಗಾರವಾಯ್ತು’, ‘ಸೊಸೆ ತಂದ ಸೌಭಾಗ್ಯ’, ‘ಮುಗಿಯದ ಕಥೆ’, ‘ಬಿಡುಗಡೆ’, ‘ದೇವರದುಡ್ಡು’, ‘ಕಲಿಯುಗ’, ‘ಪಿತಾಮಹ’ ಹೀಗೆ ಮುಂತಾದ ಚಿತ್ರಗಳಲ್ಲಿ ರಾಜೇಶ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ಇತ್ತೀಚೆಗೆ ನಟ ನಿರ್ದೇಶಕ ಶ್ರೀನಿಧಿ ಅವರ ಓಲ್ಡ್ ಮಾಂಕ್ ಚಿತ್ರದಲ್ಲಿಯೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜೇಶ್ ಅವರ ಭಾಷಾ ಉಚ್ಚಾರ, ಭಾವಾಭಿನಯ ಉತ್ತಮ ಮಟ್ಟದ್ದಾಗಿದ್ದು ನಿರಂತರವಾಗಿ ಅವರು ಉತ್ತಮ ಪಾತ್ರಗಳನ್ನು ನಿರ್ವಹಿಸುತ್ತಾ ಬಂದರು. ‘ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ’, ‘ನಾನೇ ಎಂಬ ಭಾವ ನಾಶವಾಯಿತೋ’, ‘ರವಿವರ್ಮನ ಕುಂಚದ ಕಲೆ’, ‘ಈ ದೇಶ ಚೆನ್ನ ಈ ಮಣ್ಣು ಚಿನ್ನ’, ‘ಕಂಗಳು ವಂದನೆ ಹೇಳಿವೆ’ ಮುಂತಾದ ಜನಪ್ರಿಯ ಹಾಡುಗಳಲ್ಲಿಯೂ ಇವರನ್ನು ಕಾಣಬಹುದು.
ರಾಜೇಶ್ ಅವರನ್ನು ಹಲವಾರು ಪ್ರಶಸ್ತಿ ಗೌರವಗಳು ಅರಸಿ ಬಂದಿವೆ. ಧಾರವಾಡ ವಿಶ್ವವಿದ್ಯಾಲಯವು ರಾಜೇಶ್ ಅವರಿಗೆ ಡಾಕ್ಟರೆಟ್ ಪದವಿ ನೀಡಿ ಗೌರವಿಸಿದೆ.
ಇವರು ಇಂದು ಮುಂಜಾನೆ 2:30 ರ ಹೊತ್ತಿಗೆ ವಯೋಸಹಜ ಕಾಯಿಲೆ ಯಿಂದ ಇಹಲೋಕ ತ್ಯಜಿಸಿದ್ದಾರೆ.
ಇವರ ಅಗಲುವಿಕೆಗೆ ಅಪಾರ ಅಭಿಮಾನ ಬಳಗ, ಸಿನಿಮಾ ರಂಗದವರು ಹಾಗೂ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟರಾದ ಶ್ರೀ ರಾಜೇಶ್ ಅವರು ನಿಧನರಾದ ವಿಷಯ ತುಂಬಾ ನೋವುಂಟು ಮಾಡಿದೆ. ಅಗಲಿದ ಹಿರಿಯ ಕಲಾ ಚೇತನದ ಆತ್ಮಕ್ಕೆ ಶಾಂತಿ ನೀಡಿ. ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಹಾಯ್… ನನ್ನ ಪರಿಚಯ ಎಲ್ಲರಿಗೂ ಇದ್ದೇ ಇರುತ್ತೆ… ಯಾಕಂದ್ರೆ ನಿಮ್ಮ ದೈನಂದಿನ ಜೀವನದಲ್ಲಿ ಎಲ್ಲಾ ರೀತಿಯಲ್ಲೂ ನನ್ನ ಪಾಲು ಇದ್ದೇ ಇರುತ್ತದೆ.
ಯಾರಿದು ಅಂತ ಯೋಚಿಸುತ್ತಿದ್ದೀರಾ…! ಅದೇ ಕಣ್ರೀ ನಿಮ್ಮ ಪ್ರೀತಿಯ ಪರಿಸರಕ್ಕೆ ಹಾನಿ ಉಂಟು ಮಾಡ್ತೀನಲ್ಲ ಅವನೇ… ನಾನು… ಇನ್ನು ಗೊತ್ತಾಗಿಲ್ವಾ? ಮತ್ತೆ ಕನ್ಫ್ಯೂಷನ್ ಆಗೋಕೆ ಹೋಗಬೇಡಿ. ನನ್ನ ಪರಿಚಯವನ್ನು ನಾನೇ ಮಾಡ್ಕೋತೀನಿ ಬಿಡಿ.
ನನ್ನ ಹೆಸರು ಪ್ಲಾಸ್ಟಿಕ್. ನನ್ನನ್ನು ಪರಿಸರದ ಮಾರಕ ವಸ್ತು ಎಂದು ಕರೆಯುವುದುಂಟು. ಮೊದಲು ಜನ ನನ್ನನ್ನು ಭಾರಿ ಇಷ್ಟ ಪಡ್ತಾ ಇದ್ರು… ಆದ್ರೆ, ಈಗ ನನ್ನನ್ನು ಎಲ್ಲೆಂದರಲ್ಲಿ, ಹೇಗ್ ಬೇಕೋ ಹಾಗೆ ಎಸೆದು ಹೋಗ್ತಾರೆ. ಹೀಗೆ ಎಲ್ಲೆಂದರಲ್ಲಿ ನನ್ನ ಬಿಟ್ಟು ಹೋದ್ರೆ, ನನ್ಗೆ ಬೇಸರವಾಗಲ್ವೇ ನೀವೇ ಹೇಳಿ…
ನಿಮ್ಗೆಲ್ಲಾ ಹೇಗೆ ಅಚ್ಚುಕಟ್ಟಾದ ಮನೆ, ರೂಮ್ ಬೇಕೋ ಹಾಗೇ ನಮಗೂ ಬೇಡ್ವಾ…? ಸರ್ಕಾರದವರು ರಸ್ತೆಯ ಬದಿಗಳಲ್ಲಿ ಅಲ್ಲೊಂದು, ಇಲ್ಲೊಂದು ಅಂತ ಕಸದ ಬುಟ್ಟಿ ಇಟ್ಟಿರುತ್ತಾರೆ. ಈ ಜನಗಳು ನನ್ನನ್ನ ಅವರ ಕೆಲಸಕ್ಕೋಸ್ಕರ ಉಪಯೋಗಿಸಿಕೊಂಡು, ನನ್ನನ್ನು ನನ್ನ ಮನೆ ಅಂದ್ರೆ ಕಸದ ಬುಟ್ಟಿಗೆ ಹಾಕ್ದೆ… ಎಲ್ಲೆಲ್ಲೋ ಎಸೆದು ನನ್ನನ್ನು ಅನಾಥನನ್ನಾಗಿ ಮಾಡಿ ಹೋಗ್ತಾರೆ. ಒಂದ್ ಕ್ಷಣ ಯೋಚ್ನೆ ಮಾಡಿ ಇದು ಸರಿನಾ…?
ನನ್ನನ್ನು ಅನಾಥನನ್ನಾಗಿ ಮಾಡಿ ಎಸೆದು ಹೋದೋರು ಮತ್ತೆ ನನ್ನ ಹತ್ರ ಬರೋದೇ ಇಲ್ಲ. ನಾನು ಎದ್ದು ಮನೆಗೆ( ಕಸದ ಬುಟ್ಟಿ) ಹೋಗೋಣ ಅಂದ್ರೆ, ನನ್ಗೆ ಕೈ-ಕಾಲುಗಳಿಲ್ಲವೆ…? ಅಲ್ಲಿಲ್ಲಿ ಬಿದ್ದು ಜನಗಳ ತುಳಿತಕ್ಕೆ ಒಳಗಾಗುತ್ತೀನಿ ಗೊತ್ತಾ… ಎಷ್ಟ್ ನೋವಾಗಬಹುದು ಹೇಳಿ…?
ನಾನು ಒಂಥರಾ ಚಿರಾಯು ಕಣ್ರೀ. ಏಕೆಂದರೆ ನಾನು ಒಮ್ಮೆ ಭೂಮಿಗೆ ಬಿದ್ದರೆ ಮಣ್ಣಿನ ಜೊತೆ ವಿಲೀನವಾಗುವುದಕ್ಕೆ ತುಂಬಾ ವರ್ಷಗಳೇ ಬೇಕಾಗುತ್ತೇ. ನಾನು ಯಾವಾಗ್ಲೂ ಇನ್ನೊಬ್ಬರಿಗೆ ಎಷ್ಟು ಸಹಾಯಕವೋ ಅಷ್ಟೇ ಅಪಾಯಕಾರಿವು ಕೂಡ ಹೌದು.
ನನ್ನಿಂದ ತೊಂದ್ರೆಗಳೇ ಜಾಸ್ತಿ. ಯಾಕಂದ್ರೆ, ಜನ ನನ್ನನ್ನು ಸುಟ್ಟರೆ ನಾನು ಗಾಳಿ ಜೊತೆ ಸೇರಿ ವಾಯು ಮಾಲಿನ್ಯವನ್ನು ಉಂಟು ಮಾಡ್ತೀನಿ.ಪ್ರವಾಸಿ ತಾಣಗಳಲ್ಲಂತೂ ನನ್ನನ್ನ ಅನಾಥನನ್ನಾಗಿ ಬಿಸಾಕಿ ಹೋಗ್ತಾರೆ. ಇನ್ನು ಕೆಲವರು ಸಮುದ್ರ, ಹಳ್ಳ, ಕೊಳ್ಳ, ಇವುಗಳಲ್ಲಿ ನನ್ನನ್ನು ನೀರಿಗೆ ಹಾಕುವವರು ತುಂಬಾ ಜನ ಇದ್ದಾರೆ. ನಾನು ನೀರಿನಲ್ಲಿ ಕರಗುತ್ತೀನಾ…?
ನಾನು ಅವಾಗ್ಲೇ ನಿಮ್ಗೆ ಹೇಳಿಲ್ವಾ ನಾನು ಕರಗದೆ ಇರುವ ವಸ್ತು ಅಂತ ಈ ಜನಕ್ಕೆ ಗೊತ್ತಿದೆ. ಆದ್ರೂ ಈ ಬುದ್ಧಿಗೇಡಿ ಜನರು ನನ್ನನ್ನು ನೀರಿಗೆ ಹಾಕ್ತಾರೆ ನೋಡಿ… ನಾನು ನೀರಿಗೆ ಸೇರಿ ಅಲ್ಲಿರೋ ಜಲಚರಗಳಿಗೆ ತೊಂದರೆ ಕೊಡ್ತೀನಿ. ಪಾಪ ನನ್ನನ್ನು ಅವುಗಳ ಆಹಾರ ಅಂತ ತಿಂದು ಅವು ಸಾಯ್ತವೆ. ಒಂದು ಲೆಕ್ಕಾಚಾರದ ಪ್ರಕಾರ 269.000 ಟನ್ ತೂಕದ ಪ್ಲಾಸ್ಟಿಕ್ ಸಮುದ್ರದ ಪ್ರತಿ ಚದರ ಮೈಲಿ ಜಾಗವನ್ನ ತಲೂಪಿದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ. ಇನ್ನು ಜಾನುವಾರುಗಳು ನನ್ನನ್ನು ತಿಂದು ಅವುಗಳ ಹೊಟ್ಟೆಯಲ್ಲಿ ನಾನ್ ಹೋದ್ರೆ ಅವುಗಳು ಕೂಡ ಸಾಯುವ ಹಾಗ್ ಮಾಡಿ ಬಿಡ್ತೀನಿ.ಪ್ಲಾಸ್ಡಿಕ್ ತ್ಯಾಜ್ಯವನ್ನು ಗುಪ್ಪೆ ಹಾಕಿ ಸುಡುತ್ತೀರಿ. ನಿಮಗೆ ಗೊತ್ತಿಲ್ಲ. ಹೀಗೆ ಸುಡುವುದರಿಂದ. ವಾತಾವರಣಕ್ಕೆ ಟಾಕ್ಸಿಕ್ ಅನಿಲಗಳು ಸೇರುತ್ತವೆ. ಅವುಗಳಲ್ಲಿ ಡೈಯಾಕ್ಸಿನ್,ಫ್ಯುರಾನ್ಸ್,ಮರ್ಕ್ಯುರಿ,ಪಾಲಿ ಕ್ಲೋರಿನೇಟೆಡ್ ಬೈಫಿನೈಲ್ಸ್ ಇರುತ್ತದೆ. ಇದೆಲ್ಲ ಮನುಷ್ಯರ ಆರೋಗ್ಯಕ್ಕೆ ಹಾನಿಮಾಡುತ್ತವೆ.
ಹೀಗೆ, ಜನರು ನನ್ನನ್ನು ಬಳಸಿಕೊಂಡು ಎಲ್ಲೆಂದರಲ್ಲಿ ನನ್ನನ್ನು ಹಾಕಿ ನನ್ನಿಂದ ಇನ್ನೊಬ್ಬರಿಗೆ ತೊಂದರೆ ಆಗೋ ಹಾಗೆ ಮಾಡ್ತಾರೆ. ಆದ್ರಿಂದ ನೀವು ಅಂಗಡಿಗಳಿಗೆ ತೆರಳುವಾಗ ಪರಿಸರ ಸ್ನೇಹಿ ಬ್ಯಾಗ್ ಗಳನ್ನು ಬಳಸಿ. ಹಾಗೂ ನನ್ನನ್ನು ಕಡಿಮೆ ಬಳಸುವುದರ ಮೂಲಕ ನಾನು ಅನಾಥನಾಗುವುದನ್ನು ತಪ್ಪಿಸಿ.
ಇಷ್ಟೆಲ್ಲ ತೊಂದ್ರೆ ಕೊಡೋ ನನ್ನ ಸ್ವಲ್ಪ ಕಡಿಮೆ ಬಳಸಿ ಆಯ್ತಾ. ಅಂದ್ರೆ ನನ್ನನ್ನು ನಿಮ್ಮ ಕೆಲಸಕ್ಕೆ ಬಳಸಿಕೊಂಡ ನಂತರ ನನ್ನನ್ನು ನನ್ನ ಮನೆಗೆ ಸೇರಿಸಿಬೇಡಿ. ಆವಾಗ ನನ್ನಿಂದ ನಿಮಗೂ ಕೂಡ ತೊಂದರೆ ಆಗೋಲ್ಲ ಅಲ್ವಾ…!
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಜಗತ್ತು ವಿಸ್ಮಯಗಳ ಸಾಗರ. ಅಚ್ಚರಿಗಳ ಗೂಡಿನಲ್ಲಿ ಪ್ರತಿದಿನ ಮಾನವ ತನ್ನನ್ನು ವಿಭಿನ್ನವಾಗಿ ಗುರುತಿಸಿಕೊಳ್ಳುವ ಹಾದಿಯಲ್ಲಿ ಸಾಗುತ್ತಿದ್ದಾನೆ. ಅಂತಹ ವ್ಯಕ್ತಿಗಳ ಕೆಲವೇ ಕೆಲವು ನಿದರ್ಶನಗಳು ಇಲ್ಲಿವೆ. 25ರ ಹರೆಯದ ಯುವತಿ ಅಜ್ಜಿಯಾಗುವುದು, ಬಾಲಕ ಯುವತಿಯಾಗಿ ಪರಿವರ್ತನೆಗೊಳ್ಳುವುದು, ಕಿರಿಯ ವಯಸ್ಸಿನ ಹುಡುಗಿ ಯೋಗಶಿಕ್ಷಕಿಯಾಗುವುದು ಹೀಗೆ…
ಯುವತಿಯಾದ್ರೂ ಅಜ್ಜಿ 25ರ ಹರೆಯದ ಯುವತಿ ಅಜ್ಜಿಯಾಗಿದ್ದಾರೆ. ಇದು ವಿಸ್ಮಯ ಅಲ್ಲದಿದ್ದರೂ ಸತ್ಯ. ಹದಿಹರೆಯದ ಹುಡುಗಿಯ ಅಜ್ಜಿ ಆಗಿರುವುದಕ್ಕೆ ವೈದ್ಯರು ಅಚ್ಚರಿಗೊಂಡಿದೆ. ಕೂದಲು ನೆರೆದಿರುವುದು, ಗೂನು ಬೆನ್ನು, ಸುಕ್ಕು ಬಿದ್ದ ಚರ್ಮ ಅಂತೆಲ್ಲ ಕಲ್ಪಿಸಿಕೊಳ್ಳಬೇಡಿ.
ವಿಷಯ ಇಷ್ಟೇ, ಆ ಯುವತಿಗೆ ಮೊಮ್ಮಗು ಹುಟ್ಟಿದೆ . ಹೌದು, ಈ ಬಗ್ಗೆ ಈಗಾಗಲೇ ಬೇರೆ ಬೇರೆ ದೇಶದ ವಾರಪತ್ರಿಕೆಗಳಲ್ಲಿ ವರದಿಯಾಗಿದೆ. ಯೌವ್ವನದಲ್ಲಿ ಅಜ್ಜಿಯಾಗಿರುವ ಯುವತಿ ರೋಮೆನಿಯಾ ಮೂಲದ ರಿಫಿಕಾ ಸ್ಟಾನೆಸ್ಕೋ.
ಇದು ಅಚ್ಚರಿಯಾದರೂ ನಂಬಲೇಬೇಕಾದ ಸತ್ಯ. ರಿಫಿಕಾ ತನ್ನ 11ನೇ ವಯಸ್ಸಿಗೆ ಮಾರಿಯಾಗೆ ಜನ್ಮ ನೀಡಿದ್ದಾಳೆ. ಮಾರಿಯಾ ಕೂಡ 13ನೇ ವರ್ಷ ತುಂಬುವುದರೊಳಗೆ ಇಯೋನ್ ಎಂಬ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹಾಗಾಗಿ ರಿಫಿಕಾ ಈಗ ವಿಶ್ವದ ಅತೀ ಕಿರಿಯ ಅಜ್ಜಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. 25 ವರ್ಷಕ್ಕೆ ಅಜ್ಜಿಯಾಗಿವುದಕ್ಕೆ ರಿಫಿಕಾ ಸಂತೋಷ ವ್ಯಕ್ತಪಡಿಸುತ್ತಾ, ನನ್ನ ಈ ಸಂತೋಷದ ಶ್ರೇಯಸ್ಸು ಮಾರಿಯಾಗಿ ಸಲ್ಲಬೇಕು ಎಂದು ಕಿರು ನಗೆ ಬೀರುತ್ತಾಳೆ….
ಬಾಲಕ ಯುವತಿಯಾಗಿ… ವೈದ್ಯಲೋಕದ ವಿಸ್ಮಯ ವಿಸ್ಮಯ ಅಂದ್ರೆ ಇದೆ ತಾನೇ . ಎಂಟನೇ ತರಗತಿ ಓದುತ್ತಿರುವ ಬಾಲಕನೊಬ್ಬ 10ನೇ ತರಗತಿ ಮುಗಿಸುವುದರೊಳಗೆ 16ರ ಹರೆಯದ ಯುವತಿಯಾಗಿ ಮರು ಹುಟ್ಟು ಪಡೆಯುತ್ತಾನೆ. ಹೌದು, ಕಿಮ್ ಪೆಟ್ರಾಸ್ ತನ್ನ ಹದಿನಾರನೇ ವರ್ಷಕ್ಕೆ ಲಿಂಗಪರಿವರ್ತನೆ ಮಾಡಿಸಿಕೊಂಡ ಅತಿಕಿರಿಯ ಟಿನೇಜರ್ ಎನಿಸಿಕೊಂಡಿದ್ದಾನೆ. ಕಿಮ್ ಪೆಟ್ರಾಸ್ ಮೂಲತಃ ಜರ್ಮನಿಯವರು. 12 ವರ್ಷ ತುಂಬುವವರೆಗೂ ಕಿಮ್ ಬಾಲಕನಾಗಿಯೇ ಇದ್ದ.
ಬಳಿಕ ದೇಹದ ಹಾರ್ಮೋನ್ ಗಳು ಬದಲಾಗ ತೊಡಗಿದವು. ಇದನ್ನು ಗಮನಿಸಿದ ಕಿಮ್ ಕುಟುಂಬದವರು ಲಿಂಗಪರಿವರ್ತನೆ ಮಾಡಿಸಿದರು. ಇದೀಗ ಕಿಮ್ ಪೂರ್ಣ ಮಹಿಳೆಯಾಗಿದ್ದಾರೆ. ಫ್ಯಾಶನ್ ಡಿಸೈನಿಂಗ್ ಕೋರ್ಸ್ ಕಲಿತಿರುವ ಕಿಮ್ ಗೆ ರೂಪದರ್ಶಿ ಆಗಬೇಕೆಂಬ ಆಸೆ ಯಂತೆ. ಆದರೆ ಈಗಿನ ಸಂದರ್ಭದಲ್ಲಿ ಇವರು ನಾಯಕಿಯಾಗಿ ಹೊರಹೊಮ್ಮಿದ್ದಾರೆ.
ಪುಟಾಣಿ ಯೋಗ ಶಿಕ್ಷಕಿ ವಿಶ್ವದ ಪುಟಾಣಿ ಯೋಗಶಿಕ್ಷಕಿ ಯಾರು ಗೊತ್ತೆ? ಉತ್ತರಪ್ರದೇಶದ ಶೃತಿ ಪಾಂಡೆ. ತನ್ನ ನಾಲ್ಕನೇ ವಯಸ್ಸಿಗೇ ಶೃತಿ ಯೋಗ ಶಿಕ್ಷಕಿಯಾಗಿ ಹಿರಿಯರಿಗೆ ಯೋಗ ತರಬೇತಿ ನೀಡುತ್ತಿದ್ದಳು. ಝಾನ್ಸಿ ಜಿಲ್ಲೆಯ ಬ್ರಹ್ಮಾನಂದ ಸರಸ್ವತಿ ಆಶ್ರಮದಲ್ಲಿ ನಿತ್ಯ ಬೆಳಿಗ್ಗೆ 5:30ಕ್ಕೆ ಶೃತಿಯ ಯೋಗ ಪಾಠ ಶುರುವಾಗುತ್ತದೆ. ಗೃಹಿಣಿಯರು, ವಯಸ್ಕರು,ಕಾಲೇಜು ವಿದ್ಯಾರ್ಥಿಗಳು, ಇಂಜಿನಿಯರ್ ಗಳು, ವಾಣಿಜ್ಯೋದ್ಯಮಿಗಳು ಸೇರಿದಂತೆ ಹಲವಾರು ವರ್ಗದ ವೃತ್ತಿ ಪರರು ಶ್ರುತಿಯ ಶಿಷ್ಯರಾಗಿರುವುದು ವಿಶೇಷ.
ಈ ಆಶ್ರಮದ ಸಂಸ್ಥಾಪಕ ಹರಿ ಚೇತನ್ ಎಂಬವರ ಬಳಿ ಮೂರು ವರ್ಷಗಳ ಹಿಂದಷ್ಟೇ ಯುವಕ ಕಲಿಯಲು ಬಂದ ಶೃತಿ ಬಂದೆ ವರ್ಷದೊಳಗೆ ಆಸನಗಳನ್ನು ಕರಗತ ಮಾಡಿಕೊಂಡು ವಿಶ್ವದ ಅತಿ ಕಿರಿಯ ಯೋಗಶಿಕ್ಷಕಿ ಆಗಿ ಹೊರಹೊಮ್ಮಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಅವಕಾಶಕ್ಕೆ ಒತ್ತಾಯಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರಿಂದ ಪ್ರತಿಭಟನೆ ನಡೆದಿದೆ. ಕೇವಲ ಪದವಿಪೂರ್ವ ಕಾಲೇಜು, ಪ್ರೌಢಶಾಲೆಗಳಲ್ಲಿ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅನುಮತಿ ನೀಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ವಾಪಸಾಗಿದ್ದಾರೆ. ಕೆಲವೆಡೆ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ಹಾಜರಾಗಿದ್ದಾರೆ.
ಬೆಳಗಾವಿಯ ಸದಾಶಿವನಗರ ವಿಜಯ ಅರೆ ವೈದ್ಯಕೀಯ ಸಂಸ್ಥೆಯ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ಕೊಡುವಂತೆ ವಿದ್ಯಾರ್ಥಿನಿಯರು ಪಟ್ಟುಹಿಡಿದ್ದರು. ಈ ವೇಳೆ ಹೊರಗಿನಿಂದ ಬಂದ ಕೆಲವು ಯುವಕರು ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮುಂಜಾಗೃತ ಕ್ರಮವಾಗಿ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಳ್ಳಾರಿ ನಗರದ ಸರಳದೇವಿ ಕಾಲೇಜಿನ ಬಳಿ ಹಿಜಾಬ್ ಧರಿಸಿಯೇ ಕಾಲೇಜಿಗೆ ಪ್ರವೇಶಿಸುವುದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಒಂದು ಹಂತದಲ್ಲಿ ಪೊಲೀಸರ ವಿರುದ್ಧ ಪ್ರದರ್ಶನಕಾರರು ಆಕ್ರೋಶ ವ್ಯಕ್ತಪಡಿಸಿದರು. ಆ ವೇಳೆ ನೂಕಾಟ ನಡೆಯಿತು. ಪೊಲೀಸರು ಸಂಯಮದಿಂದ ಪರಿಸ್ಥಿತಿ ನಿಭಾಯಿಸಿ, ಆಕ್ರೋಶಗೊಂಡ ವಿದ್ಯಾರ್ಥಿಗಳು ಮನವೊಲಿಸಿ ವಾಪಸ್ಸು ಕಳುಹಿಸಿದರು.
ಹಾಸನ ನಗರದ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ 20ಕ್ಕೂ ಅಧಿಕ ಮತ್ತು ಸರ್ಕಾರಿ ಪದವಿಪೂರ್ವ ವಿಭಜಿತ ಕಾಲೇಜಿನ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಿಜಾಬ್ ನಮ್ಮ ಹಕ್ಕು ನ್ಯಾಯ ಬೇಕು ಎಂದು ಘೋಷಣೆ ಕೂಗಿದರು.
ಶಿರಾಳಕೊಪ್ಪ ,ಹೊನ್ನಾಳಿ, ಹೊಸಪೇಟೆ ನಗರದ ಕೆಎಸ್ ಪಿಎಲ್ ಕಾಲೇಜು, ಉತ್ತರ ಕನ್ನಡ ಜಿಲ್ಲೆ ಶಿರಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂ. ಎಂ. ಕಲಾ ಮತ್ತು ವಿಜ್ಞಾನ ಕಾಲೇಜು, ಬನವಾಸಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು, ಕಾರವಾರದ ಸರ್ಕಾರಿ ಕಲಾ ಮತ್ತು ಕಾಲೇಜಿನಲ್ಲಿ ಮತ್ತು ಸರ್ಕಾರಿ ಪಿಯು ಕಾಲೇಜಿನಲ್ಲಿ ಸುಮಾರು ಹದಿನೈದು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.
ಮುಳಬಾಗಿಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡದ ಕಾರಣ ಕೆಲಕಾಲ ವಾತಾವರಣ ಸೃಷ್ಟಿಯಾಗಿತ್ತು.
ಹುಡುಗರು ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ 15, ಮೈಸೂರು ತಾಲೂಕಿನ ಕೆಆರ್ ಮಿಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಇಬ್ಬರು ಮತ್ತು ನಂಜನಗೂಡು ತಾಲೂಕಿನ ಕವಲಂದೆ ಯ 31, ಅರಸಿನಕೆರೆ ಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ 12 ಮತ್ತು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಗೌತಮ್ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರು ವಾಪಸಾಗಿದ್ದಾರೆ.
ಹೊಸದುರ್ಗದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ 7, ದಾವಣಗೆರೆ ನಗರದ ಎವಿಕೆ ಮಹಿಳಾ ಕಾಲೇಜಿಗೆ ಹಿಜಾಬ್ ಹಾಕಿಕೊಂಡು ಬಂದಿದ್ದ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ನಿಜ ಧರಿಸಲು ಅವಕಾಶವಿಲ್ಲದ ಕಾರಣ ಮನೆಗೆ ಹಿಂದಿರುಗಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ) ಶಿವಮೊಗ್ಗ ಇಲ್ಲಿ, ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ (ಸಿಎಂಕೆಕೆವೈ) ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಎಲ್ಲ ವರ್ಗದ ನಿರುದ್ಯೋಗ ಯುವಕ/ಯುವತಿರಿಗೆ ಕೌಶಲ್ಯಾಭಿವೃದ್ದಿ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು.
ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆ ಹೊಂದಿರುವವರಿಗೆ ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್ ಹಾಗೂ ಐಟಿಐ/ಡಿಪ್ಲೊಮಾ ಆದವರಿಗೆ ಸಿಎನ್‍ಸಿ ಆಪರೇಟರ್ – ವರ್ಟಿಕಲ್ ಮಷಿನಿಂಗ್ ಸೆಂಟರ್ ತರಬೇತಿಯನ್ನು ನೀಡಲಾಗುವುದು. ಪ.ಜಾತಿ ಮತ್ತು ಪ.ಪಂಗಡದವರಿಗೆ ಮಾತ್ರ ತರಬೇತಿ ಅವಧಿಯಲ್ಲಿ ರೂ.2500 ಶಿಷ್ಯವೇತನ ನೀಡಲಾಗುವುದು.
ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ವಯಸ್ಸು, ವಿದ್ಯಾರ್ಹತೆ ದಾಖಲಾತಿಗಳು ಹಾಗೂ ವೈಯಕ್ತಿಕ ವಿವರಗಳೊಂದಿಗೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಪ್ಲಾಟ್ ನಂ ಸಿಎ-38, ನಿದಿಗೆ ಇಂಡಸ್ಟ್ರಿಯಲ್ ಏರಿಯಾ, ಮಾಚೇನಹಳ್ಳಿ, ಶಿವಮೊಗ್ಗ ಇಲ್ಲಿಗೆ ಅರ್ಜಿಯನ್ನು ಮಾರ್ಚ್ 05 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ: 08182-246054, 9429530914, 9448307027, 9449286543 ಇಲ್ಲಿಗೆ ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಸಮುದಾಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ ಕೇಂದ್ರ ಸರ್ಕಾರದ ನೆರವಿನೊಂದಿಗೆ ನಗರಕ್ಕೆ ಹತ್ತಿರದಲ್ಲಿ ಸ್ಥಳವನ್ನು ಗುರುತಿಸಿ, ದ್ವಿತೀಯ ಹಂತದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಆರಂಭಿಸಲು ಉದ್ಧೇಶಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಈ ಸಂಬಂಧ ಮಾಧ್ಯಮದವರಿಗೆ ವಿವರ ನೀಡಿದರು. ಉದ್ಯಮ ಮತ್ತು ಮಾನವ ಅಭಿವೃದ್ಧಿಗಾಗಿ ಕೈಗೊಳ್ಳುವ ಎಲ್ಲಾ ಚಟುವಟಿಕೆಗಳಲ್ಲಿ ವಿಜ್ಞಾನವನ್ನು ಅನ್ವಯಗೊಳಿಸಲು, ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಹಿನ್ನೆಲೆಯಲ್ಲಿ ಹಾಗೂ ಜನಸಾಮಾನ್ಯರಲ್ಲಿ ಅದರ ಅರಿವನ್ನು ಉಳಿಸಿ ಬೆಳೆಸಲು ಪ್ರಾದೇಶಿಕ ವಿಜ್ಞಾನ ಕೇಂದ್ರ ಸಹಕಾರಿಯಾಗಲಿದೆ ಎಂದವರು ನುಡಿದರು.
ಸದರಿ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಪ್ರದರ್ಶನಗಳು, ವಿಚಾರಸಂಕಿರಣಗಳು, ಉಪನ್ಯಾಸಗಳು, ವಿಜ್ಞಾನ ಶಿಬಿರಗಳು ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಜನರಲ್ಲಿ ವಿಜ್ಞಾನ ವಿಷಯಗಳಲ್ಲಿ ಅಭಿರುಚಿ ಉಂಟು ಮಾಡಲಾಗುವುದು ಎಂದರು.
ಶಾಲಾ-ಕಾಲೇಜುಗಳಲ್ಲಿ ನೀಡುವ ವಿಜ್ಞಾನ ಶಿಕ್ಷಣಕ್ಕೆ ಪೂರಕವಾಗಿ ವೈಜ್ಞಾನಿಕ ಮತ್ತು ಸೃಜನಶೀಲ ಚಿಂತನೆಯನ್ನು ಬೆಳೆಸಲು ಶಾಲೆಯಿಂದ ಹೊರಗೆ ಹಲವು ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸುವಲ್ಲಿ ಈ ಕೇಂದ್ರ ಸಕ್ರಿಯವಾಗಿರಲಿದೆ. ಅಲ್ಲದೇ ವಿಜ್ಞಾನ ಶಿಕ್ಷಣ ಮತ್ತು ಅದರ ಜನಪ್ರಿಯತೆಗಾಗಿ ವಿಜ್ಞಾನ ಸಂಗ್ರಹಾಲಯ, ಪ್ರದರ್ಶನ ಉಪಕರಣಗಳು ಮತ್ತು ವೈಜ್ಞಾನಿಕ ಬೋಧನಾ ಸಾಧನಗಳನ್ನು ಅಭಿವೃದ್ಧಿಪಡಿಸಲು ಮತ್ತು ತಯಾರಿಸುವಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದರು.
ವಿಶೇಷವಾಗಿ ವಿಜ್ಞಾನ ಶಿಕ್ಷಕರು, ವಿದ್ಯಾರ್ಥಿಗಳು, ಯುವ ಉದ್ಯಮಿಗಳು, ತಂತ್ರಜ್ಞರು, ದೈಹಿಕ ವಿಕಲಚೇತನರು, ಗೃಹಣಿಯರು ಮತ್ತು ಆಸಕ್ತರಿಗಾಗಿ ಕೆಲವು ನಿರ್ಧಿಷ್ಟ ವಿಷಯಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದ ಅವರು ಈ ಕೇಂದ್ರದ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದ ಮೂಲಕ 15-20ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಿದೆ ಎಂದರು.
ಮಂಗಳೂರು, ಧಾರವಾಡ, ಬೆಂಗಳೂರು ನಂತರ ಶಿವಮೊಗ್ಗ ರಾಜ್ಯದ ನಾಲ್ಕನೇ ವಿಜ್ಞಾನ ಕೇಂದ್ರವಾಗಿರಲಿದ್ದು, ಶಿವಮೊಗ್ಗ ಮತ್ತು ನೆರೆಯ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮತ್ತು ಆಸಕ್ತ ನಾಗರೀಕರಿಗೆ ವಿಜ್ಞಾನದ ಬಗ್ಗೆ ಹೆಚ್ಚಿನ ವಿಷಯ ತಿಳಿದುಕೊಳ್ಳಲು ಸಹಕಾರಿಯಾಗಲಿದೆ ಎಂದರು. ಸ್ಥಳ ಪರಿಶೀಲನಾಗಿ ಆಗಮಿಸಿದ್ದ ತಜ್ಞರ ತಂಡದವರು ನವುಲೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿ.ಎಸ್.ಐ. ಆಸ್ಪತ್ರೆಗೆ ಹೊಂದಿಕೊಂಡಂತೆ ಗುರುತಿಸಲಾಗಿದ್ದ ನಿವೇಶನ ಮತ್ತು ಸಹ್ಯಾದ್ರಿ ಕಾಲೇಜಿನ ಆವರಣದ ಪ್ರದೇಶಗಳನ್ನು ವೀಕ್ಷಿಸಿ, ಭೂಮಿಗೆ ಸಂಬಂಧಿಸಿದಂತ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ತಂಡದಲ್ಲಿ ತಜ್ಞ ಎಸ್.ಕುಮಾರ್, ಕೊಲ್ಕತ್ತಾ, ಶ್ರೀಮತಿ ಕೆ.ಎ.ಸಾಧನ ಬೆಂಗಳೂರು, ಎಸ್.ಸಿಕಾದಾರ್ ಕೊಲ್ಕತ್ತಾ, ಡಾ|| ಎಮ್.ಎಸ್.ರವಿಕುಮಾರ್ ಮತ್ತು ವಿಶ್ವಕೀರ್ತಿ, ಇವರೊಂದಿಗೆ ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ, ಕೈಗಾರಿಕಾ ಅಭಿವೃದ್ಧಿ ನಿಗಮದ ರಾಜ್ಯ ಉಪಾಧ್ಯಕ್ಷ ದತ್ತಾತ್ರಿ, ಸೂಡಾ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಜ್ಯೋತಿಪ್ರಕಾಶ್, ಜಗದೀಶ್, ಕುವೆಂಪು ವಿವಿ ರಿಜಿಸ್ಟ್ರಾರ್ ಶ್ರೀಮತಿ ಜಿ.ಅನುರಾಧ, ಅಪರ ಜಿಲ್ಲಾಧಿಕಾರಿ ಡಾ||ನಾಗೇಂದ್ರ ಎಫ್.ಹೊನ್ನಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ರಮೇಶ್, ಉಮಾಮಹೇಶ್, ಮುಂತಾದವರು ಉಪಸ್ಥಿತರಿದ್ದರು.