Thursday, February 19, 2026
Thursday, February 19, 2026
Home Blog Page 1703

ಹರ್ಷನ ಹೆತ್ತವರಿಗೆ ಸಾಂತ್ವನ ಹೇಳಿದ ನಳಿನ್ ಕುಮಾರ್ ಕಟೀಲ್

0

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹತ್ಯೆಯಾದ ಭಜರಂಗದಳ ಕಾರ್ಯಕರ್ತರು ಹರ್ಷನ ಮನೆಗೆ ಭೇಟಿ ನೀಡಿ ಪಕ್ಷದ ವತಿಯಿಂದ 10 ಲಕ್ಷ ರೂಪಾಯಿ ಚೆಕ್ ಅನ್ನು ಹರ್ಷನ ಕುಟುಂಬಕ್ಕೆ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ಹರ್ಷನ ಹತ್ಯೆ ಹಿಂದೆ ಕಾಣದ ಕೈಗಳ ಕೈವಾಡವಿದೆ. ಸೂಕ್ತ ತನಿಖೆ ನಡೆಸುವ ಮೂಲಕ ನಮ್ಮ ಸರ್ಕಾರ ಬಹಿರಂಗಪಡಿಸಲಿದೆ ಎಂದು ಹೇಳಿದರು.

ಹರ್ಷನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಬಳಿಕ ಶೀಘ್ರವಾಗಿ ಈಗಾಗಲೇ ಪೊಲೀಸರು 8 ಜನ ಆರೋಪಿಗಳನ್ನು ಬಂಧಿಸುವಲ್ಲಿ ಶಿವಮೊಗ್ಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ನವೀನ್ ಕುಮಾರ್ ಕಟೀಲ್ ಅವರು ಹೇಳಿದರು.

ಹಂತಕರು ಯಾವುದೇ ರೀತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ತನಿಖೆ ನಡೆಯುತ್ತಿದೆ. ಬಂಧಿತರ ವಿಚಾರಣೆಯೂ ಸಹ ನಡೆಯುತ್ತಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನಮ್ಮ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಇದಕ್ಕಾಗಿ ಈಗಾಗಲೇ ಎಲ್ಲಾ ರೀತಿಯ ಕ್ರಮಗಳನ್ನು ಅನುಸರಿಸುತ್ತಿದೆ ಎಂದು ಹೇಳಿದರು.

ನಗರದಲ್ಲಿ ಪರಿಸ್ಥಿತಿ ಈಗ ಹತೋಟಿಯಲ್ಲಿದ್ದು ಶಾಂತಿ-ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶಿವಮೊಗ್ಗದಲ್ಲಿ ಗಲಭೆ ಗುಂಪು ಪತ್ತೆಗೆ ಡ್ರೋನ್ ಸಾಧನ ಬಳಕೆ

0

ನಗರದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷನ ಕೊಲೆಯ ಬಳಿಕ ನಡೆದ ಹಿಂಸಾಚಾರದಿಂದಾಗಿ ನಗರದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಪರಿಸ್ಥಿತಿ ತಿಳಿಗೊಳಿಸಲು ಈಗ ನಗರಕ್ಕೆ ನಕ್ಸಲ್ ನಿಗ್ರಹದಳ ಆಗಮಿಸಿದೆ.

ಉಡುಪಿ ಜಿಲ್ಲೆಯ ಕಾರ್ಕಳದ ಎಎನ್ಎಫ್ ಹೆಡ್ ಕ್ವಾಟ್ರಸ್ ನಿಂದ ನಕ್ಸಲ್ ನಿಗ್ರಹ ದಳ ಆಗಮಿಸಿದೆ.

ಎಎನ್ಎಫ್ ತಂಡವು ಕಿಡಿಗೇಡಿಗಳ ಹೆಡೆಮುರಿಕಟ್ಟಲು ಸನ್ನದ್ಧವಾಗಿದೆ. ಎರಡು ಡ್ರೋನ್ ಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತಿದೆ. ಈ ಡ್ರೋನ್ ಗಳು ಸುಮಾರು ಐದು ಕಿಲೋಮೀಟರ್ ದೂರದವರೆಗೆ ದೃಶ್ಯವನ್ನು ಚಿತ್ರೀಕರಿಸುವ ಸಾಮರ್ಥ್ಯವನ್ನು ಹೊಂದಿದೆ.

ಡ್ರೋನ್ ವ್ಯಾಪ್ತಿಯಲ್ಲಿ ಜನಜಂಗುಳಿ, ಗಲಭೆ ಇತ್ಯಾದಿ ಏನೇ ಘಟನೆಗಳು ನಡೆದರೆ ತಕ್ಷಣ ಆ ಜಾಗಕ್ಕೆ ಕ್ಷಿಪ್ರಗತಿಯಿಂದ ಪೊಲೀಸ್ ಸಿಬ್ಬಂದಿ ರವಾನಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಮಾಧ್ಯಮದವರಿಗೆ ಈ ಬಗ್ಗೆ ಮಾಹಿತಿ ನೀಡಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಚೆಸ್ ಪ್ರತಿಭೆ ಪ್ರಜ್ಞಾನಂದಗೆ ಮತ್ತೆರಡು ಜಯ

0

ಏರ್ ಥಿಂಗ್ಸ್ ಮಾಸ್ಟರ್ಸ್ ಆನ್ಲೈನ್ ಚೆಸ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾಲ್ಸರ್ನ್ ಅವರನ್ನು 8ನೇ ಸುತ್ತಿನಲ್ಲಿ ಸೋಲಿಸಿ ಇತಿಹಾಸ ನಿರ್ಮಿಸಿದ ಭಾರತದ 16ರ ಬಾಲಕ ಆರ್. ಪ್ರಜ್ಞಾನಂದ ಹತ್ತು ಹಾಗೂ ಹನ್ನೆರಡನೇ ಸುತ್ತಿನಲ್ಲಿ ಅಕ್ರಮವಾಗಿ ಅಂಡ್ರೇ ಎಸಿ ಪೆಂಕೋ ಮತ್ತು ಅಲೆಕ್ಸಾಂಡ್ರಾ ಕೊಸ್ಟೆನುಕ್ ವಿರುದ್ಧವೂ ಗೆದ್ದು ಮತ್ತು ಚೆಸ್ ಜಗತ್ತಿನ ಗಮನ ಸೆಳೆದಿದ್ದಾರೆ.

ಅವರಿಗೆ ನಾಕೌಟ್ ಹಂತ ಪ್ರವೇಶಿಸುವ ಅವಕಾಶ ದೊರೆಯಲಿಲ್ಲ. ಉಜ್ಬೇಕಿಸ್ತಾನದ ಗ್ರಾಂಡ್ ಮಾಸ್ಟರ್ ನಾಡಿರ್ಬೆಕ್ ಅಬುಸಟ್ಟಾರೊವ್ ವಿರುದ್ಧದ 9ನೇ ಸುತ್ತಿನ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದು ಮತ್ತು ರಷ್ಯಾ ಗ್ರಾಂಡ್ ಮಾಸ್ಟರ್ ಇಯಾನ್ ನೆಪೊಮ್ ನೆಶಿ ವಿರುದ್ಧ ಹನ್ನೊಂದನೇ ಸುತ್ತಿನಲ್ಲಿ ಸೋತಿದ್ದು, ಭಾರತದ ಗ್ರಾಂಡ್ ಮಾಸ್ಟರ್ ಗೆ ಭಾರಿ ಹಿನ್ನಡೆ ಎನಿಸಿತು.

ಈ ನಾಲ್ಕು ಸುತ್ತುಗಳಲ್ಲಿ ಒಟ್ಟಾರೆ 15 ಅಂಕ ಕಲೆ ಹಾಕುವುದರೊಂದಿಗೆ ಪ್ರಜ್ಞಾನಂದ 12ನೇ ಸ್ಥಾನದಲ್ಲಿ ಉಳಿದುಕೊಂಡರು. 16 ಆಟಗಾರರು ಇರುವ ರೌಂಡ್ ರಾಬಿನ್ ಮಾದರಿಯ ಆರಂಭಿಕ ಹಂತದಲ್ಲಿ ಟಾಪ್ 8 ಆಟಗಾರರು ನಾಕೌಟ್ ಹಂತ ಪ್ರವೇಶಿಸುತ್ತಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸದನದಲ್ಲಿ ಹರ್ಷ ಕೊಲೆ ತನಿಖೆ ಪ್ರಸ್ತಾಪ ಜೆಡಿಎಸ್ ಶಾಸಕ ಸಭಾತ್ಯಾಗ

0

ಪರಿಷತ್ ಕಲಾಪ ನಿನ್ನೆ ಬೆಳಿಗ್ಗೆ ಆರಂಭಗೊಂಡಾಗ ಕಾಂಗ್ರೆಸ್ನಿಂದ ಮುಂದೂಡಲಾಗಿತ್ತು. ಮತ್ತೆ 2:00 ಗಂಟೆಗೆ ಸದನ ಸೇರಿದಾಗ ಗದ್ದಲ ನಡುವೆ ಸಚಿವರು ಶಾಸಕರ ಭತ್ಯೆ ಹೆಚ್ಚಳದ ವಿಧೇಯಕ್ಕೆ ಧರಣಿ ಮಧ್ಯೆ ಒಪ್ಪಿಗೆ ನೀಡಲಾಯಿತು.

ಈ ಮಧ್ಯೆ ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ತಿ ಹಾಗೂ ನಂತರ ನಡೆದ ಗಲಭೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಜೆಡಿಎಸ್ ನ ಕೆ .ಟಿ. ಶ್ರೀಕಂಠೇಗೌಡ ಸರ್ಕಾರವನ್ನು ಒತ್ತಾಯಿಸಿದರು.

ಶಿವಮೊಗ್ಗ ಹಿಂದೂ ಕೋಮು ದಳ್ಳುರಿಯಿಂದ ಬೇಯುತ್ತಿದೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬಜರಂಗದಳ ಕಾರ್ಯಕರ್ತ ಹರ್ಷ ಅವರನ್ನು ಹತ್ಯೆ ಮಾಡಿದ್ದು ಖಂಡನೀಯ. ಆದರೆ ಆತನಿಗೆ ಈ ಹಿಂದೆಯೇ ಬೆದರಿಕೆ ಇದ್ದರೂ ಸರ್ಕಾರ ನಿರ್ಲಕ್ಷ ವಹಿಸಿದೆ. ಇದು ಗೃಹ ಇಲಾಖೆಯ ವೈಫಲ್ಯ. ನ್ಯಾಯಾಂಗ ತನಿಖೆ ನಡೆಸಬೇಕು. ಜನತೆಯಿಂದ ನೊಂದವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಜೆ.ಸಿ. ಮಾಧು ಸ್ವಾಮಿ, ಪೊಲೀಸರು ಸಮರ್ಥವಾಗಿ ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳುವ ಮೂಲಕ ತನಿಖೆ ಪ್ರಸ್ತಾವ ತಿರಸ್ಕರಿಸಿದರು. ಇದರಿಂದ ಸಿಟ್ಟಿಗೆದ್ದ ಶ್ರೀಕಂಠೇಗೌಡ ಸಭಾತ್ಯಾಗ ನಡೆಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಜೈಲಿನಲ್ಲಿ ಕೈದಿಗಳ ಮೇಲೆ ಹಲ್ಲೆ ಅಧಿಕಾರಿಗಳ ವಿರುದ್ಧ ಎಫ್ ಐ ಆರ್

0

ಕುಖ್ಯಾತ ಪಾತಕಿ ಬಚ್ಚನ್ ಅಲಿಯಾಸ್ ಸಮೀರನ ಕುತಂತ್ರಗಳ ಕಾರಣದಿಂದಾಗಿ ಹದಿನೈದು ದಿನಗಳ ಹಿಂದೆ ನಿರಂತರ ಸುದ್ದಿಯಲ್ಲಿದ್ದ ಶಿವಮೊಗ್ಗ ಕೇಂದ್ರ ಕಾರಾಗೃಹ ಈಗ ಅಧಿಕಾರಿಗಳು ಕೈದಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮತ್ತೊಮ್ಮೆ ಸುದ್ದಿಯಲ್ಲಿದೆ.

ಜಿಲ್ಲಾ ನ್ಯಾಯಾಧೀಶರು ಮತ್ತು ತಂಡದ ದಿಢೀರ್ ಭೇಟಿ ನೀಡುವ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ದೃಢ ಪಟ್ಟಿದೆ. ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿಯೇ ಕೈದಿಗಳು, ವಿಚಾರಣಾಧೀನ ಕೈದಿಗಳ ಮೇಲೆ ಹಲ್ಲೆ ನಡೆಸಿದ ಆಪಾದನೆ ಹೊತ್ತಿದ್ದಾರೆ. ಈ ಸಂಬಂಧವಾಗಿ ತುಂಗಾ ನಗರ ಠಾಣೆ ಪೊಲೀಸರು ಪ್ರಭಾರ ಮುಖ್ಯ ಅಧೀಕ್ಷಕ, ಮುಖ್ಯ ವಾರ್ಡರ್ ಹಿರೇಮಠ, ವಾರ್ಡರ್ ಗಳಾದ ಅಕ್ಷಯ್, ಕೃಷ್ಣ, ದರ್ಶನ್, ಮತ್ತು ಇತರೆ 9 ವಾರ್ಡರ್ ಗಳ ವಿರುದ್ಧ ಐಪಿಸಿ ಸೆಕ್ಷನ್ 324,326,504, ಸಹಿತ 149ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೇಂದ್ರ ಕಾರಾಗೃಹದಲ್ಲಿ ಫೆಬ್ರವರಿ 12ರಂದು ಮಧ್ಯರಾತ್ರಿ ಒಂದು ಗಂಟೆ ಹೊತ್ತಿಗೆ ಕಾರಾಗೃಹದ ಮುಖ್ಯ ಅಧೀಕ್ಷಕರು ಮತ್ತು ವಾರ್ಡರ್ ಗಳು ಶರಾವತಿ ಮತ್ತು ತುಂಗಾ ಬ್ಲಾಕ್ ನಲ್ಲಿರುವ ಸೆಲ್ ಗಳ ಬೀಗ ತೆರೆದು ಹಲವು ಕೈದಿ ಮತ್ತು ವಿಚಾರಣಾಧೀನ ಕೈದಿಗಳಿಗೆ ಲಾಠಿಯಿಂದ
ಥಳಿಸಿದ್ದರು. ತೀವ್ರ ಗಾಯಗೊಂಡಿದ್ದ ಕೈದಿಗಳು ತಮ್ಮನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಮನವಿ ಮಾಡಿದರೂ ಸ್ಪಂದಿಸಿರಲಿಲ್ಲ. ಇದರಿಂದ ತೀವ್ರ ಸಿಟ್ಟಿಗೆದ್ದ ಕೈದಿಗಳು ಮಾರನೆಯ ದಿನ ಬೆಳಿಗ್ಗೆ ಸಿಸಿ ಕ್ಯಾಮೆರಾಗಳನ್ನು ಒಡಿದು ಹಾಕಿದ್ದರು. ನೊಂದ ಕೈದಿಗಳು ಚೀಟಿ ಬರೆದು ಜೈಲಿನೊಳಗೆ ಕೆಲಸಕ್ಕೆ ಬಂದವರ ಕೈಗೆ ಕೊಟ್ಟು ವಕೀಲರಿಗೆ ತಲುಪುವಲ್ಲಿ ಯಶಸ್ವಿಯಾಗಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ನ್ಯಾಯಾಧೀಶರು, ಉಳಿದ ನ್ಯಾಯಾಧೀಶರು, ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳೊಂದಿಗೆ ಫೆಬ್ರವರಿ 20ರಂದು ಕಾರಾಗೃಹಕ್ಕೆ ಧಿಡೀರ್ ಭೇಟಿ ನೀಡಿ ಗಾಯಗೊಂಡ ಕೈದಿಗಳಿಗೆ ವೈದ್ಯರಿಂದ ಪರೀಕ್ಷೆ ನಡೆಸಿ ಹಲವರು ಆಸ್ಪತ್ರೆಗೆ ದಾಖಲಿಸಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮೋದಿಯವರೊಂದಿಗೆ ಚರ್ಚೆಗೆ ಸಿದ್ಧ-ಇಮ್ರಾನ್ ಖಾನ್

0

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಅನೇಕ ವರ್ಷಗಳಿಂದ ಕಗ್ಗಂಟಾಗಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಟಿವಿ ವಾಹಿನಿಯಲ್ಲಿ ಚರ್ಚೆ ನಡೆಸಲು ಇಚ್ಛಿಸುತ್ತೇನೆ ಎಂದು ತಿಳಿಸಿದ್ದಾರೆ.

ಇಂಗ್ಲಿಷ್ ಸುದ್ದಿವಾಹಿನಿಯ ‘ರಷ್ಯಾ ಟು ಡೇ’ ಸಂದರ್ಶನದಲ್ಲಿ ಇಮ್ರಾನ್ ಖಾನ್ ಈ ಕುರಿತಂತೆ ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳೊಂದಿಗೆ ವ್ಯವಹಾರ ನಡೆಸುವ ಉನ್ನತಮಟ್ಟದ ವಿದೇಶಾಂಗ ನೀತಿಯನ್ನು ಉತ್ತಮ ಸರ್ಕಾರ ಹೊಂದಿದೆ ಎಂದು ಹೇಳಿಕೊಂಡಿದ್ದಾರೆ.

ನೆರೆ ರಾಷ್ಟ್ರಗಳಾದ ಇರಾನ್ ಬಿಟ್ಟರೆ ಭಾರತವೊಂದೇ ಪಾಕ್ ಗೆ ಸದ್ಯಕ್ಕೆ ವ್ಯಾಪಾರಕ್ಕೆ ಸೂಕ್ತವಾಗಿರುವ ರಾಷ್ಟ್ರವಾಗಿದೆ.

ಆಫ್ಘಾನಿಸ್ತಾನದಲ್ಲಿ ಅಮೆರಿಕದಿಂದ ಹಲವು ರೀತಿಯ ನಿರ್ಬಂಧಗಳನ್ನು ಹೇರಲಾಗಿದೆ. ಚೀನಾ ನಮಗೆ ಉತ್ತಮ ಮಿತ್ರ ರಾಷ್ಟ್ರವಾಗಿದೆ. ಹಾಗಾಗಿ ಅವರ ಮೂಲಭೂತ ಸೌಕರ್ಯ ಯೋಜನೆಗಳಿಗೆ ಪಾಕ್ ನೆಲದಲ್ಲಿ ಅವಕಾಶ ಕಲ್ಪಿಸಿದ್ದೇವೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಎರಡು ದಿನಗಳ ಕಾಲ ರಷ್ಯಾ ಪ್ರವಾಸದಲ್ಲಿರುವ ಇಮ್ರಾನ್ ಖಾನ್ ಅವರು ಶೀಘ್ರವೇ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲಿದ್ದಾರೆ.

ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಪಾಕಿಸ್ತಾನಕ್ಕೆ ಸಾಲ ಕೇಳುವ ಆತುರದಲ್ಲಿ ಇಮ್ರಾನ್ ಖಾನ್ ಇದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಖಾಸಗೀಕರಣದಿಂದ ನಿರುದ್ಯೋಗ ಸಮಸ್ಯೆ ಸೃಷ್ಟಿ- ವರುಣ್ ಗಾಂಧಿ

0

ಬಿಜೆಪಿ ಸಂಸದ ವರುಣ್ ಗಾಂಧಿಯವರು ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ “ಬ್ಯಾಂಕ್ ಮತ್ತು ರೈಲ್ವೆ ಖಾಸಗೀಕರಣದಿಂದ ಲಕ್ಷಾಂತರ ಜನ ನಿರುದ್ಯೋಗಿಗಳಾಗುವುದನ್ನು ಬಿಟ್ಟರೆ ಮತ್ತೇನು ಸಾಧಿಸಲು ಸಾಧ್ಯವಾಗುವುದಿಲ್ಲ” ಎಂದು ವರುಣ್ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್ ಮತ್ತು ರೈಲ್ವೆ ಖಾಸಗೀಕರಣವು ದೇಶದಲ್ಲಿ 5 ಲಕ್ಷ ಜನರನ್ನು ನಿರುದ್ಯೋಗಿಗಳಾಗಿ ಮಾಡುತ್ತದೆ. ಒಬ್ಬ ವ್ಯಕ್ತಿ ಉದ್ಯೋಗ ಕಳೆದುಕೊಂಡರೆ ಒಂದು ಇಡೀ ಕುಟುಂಬ ಬೀದಿಗೆ ಬೀಳುತ್ತದೆ. ಅಂದರೆ ಲಕ್ಷಾಂತರ ಜನ ಬೀದಿಪಾಲಾಗುತ್ತಾರೆ. ಸರ್ಕಾರ ಜನರ ಪರವಾಗಿ ಕೆಲಸ ಮಾಡಬೇಕೆ ಹೊರತು ಅಸಮಾನತೆ ಮತ್ತು ಬಂಡವಾಳಶಾಹಿಯನ್ನು ಪ್ರೋತ್ಸಾಹಿಸಬಾರದು ಎಂದು ವರುಣ್ ಗಾಂಧಿ ಅವರು ಅಸಮಾಧಾನ ಹೊರಹಾಕಿದ್ದಾರೆ.

ಕೇಂದ್ರ ಸರ್ಕಾರವು 2020ರಲ್ಲಿ ರೈಲ್ವೆಯ ‘ಭಾಗಶಃ ಖಾಸಗೀಕರಣದ’ ಪ್ರಸ್ತಾಪ ಮುಂದಿಟ್ಟಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಖಂಡಿಸಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಟಿಕೆಟ್ ರಹಿತ ಪ್ರಯಾಣಿಕರ ಪ್ರಮಾಣ ಶೇ 79 ರಷ್ಟು ಹೆಚ್ಚಾಗಿದೆ

0

ರೈಲುಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ 1.8 ಕೋಟಿ ಪ್ರಯಾಣಿಕರು ಕಳೆದ 9 ತಿಂಗಳಲ್ಲಿ ಸಿಕ್ಕಿಬಿದ್ದಿದ್ದಾರೆ.

ಟಿಕೆಟ್ ರಹಿತ ಪ್ರಯಾಣ ಮಾಡಿ ಸಿಕ್ಕಿಬಿದ್ದವರ ಸಂಖ್ಯೆಯು 2019ರಿಂದ 20 ರ ಸಾಲಿಗೆ ಹೋಲಿಸಿದರೆ 2021 ರಿಂದ 22 ನೇ ಸಾಲಿನಲ್ಲಿ ಶೇ.79 ರಷ್ಟು ಹೆಚ್ಚಾಗಿದೆ ಎಂದು ಆರ್ ಟಿಐ ಅರ್ಜಿಗೆ ನೀಡಿದ್ದ ವಿವರದಲ್ಲಿ ಭಾರತೀಯ ರೈಲ್ವೆ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

2020-21 ರಲ್ಲಿ ಕೊರೋನಾ ನಿರ್ಬಂಧಗಳು ಜಾರಿಯಲ್ಲಿದ್ದ ವೇಳೆ ಮನೆಗೆ ಮರಳಲು ಹರಸಾಹಸ ಪಡುತ್ತಿದ್ದ ವಲಸಿಗರಲ್ಲಿ ಅನೇಕರು ಟಿಕೆಟ್ ರಹಿತವಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದರು. ಇಂಥವರ ಸಂಖ್ಯೆ ಸುಮಾರು 27 ಲಕ್ಷದಷ್ಟಿದೆ.

2021ರ ಏಪ್ರಿಲ್ ನಿಂದ ಡಿಸೆಂಬರ್ ವರೆಗೆ 1.78 ಕೋಟಿಗೂ ಅಧಿಕ ಪ್ರಯಾಣಿಕರು ಟಿಕೆಟ್ ರಹಿತರಾಗಿ ಇಲಾಖೆ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಇವರಿಂದ 1,017,48 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆ

0

ರಾಜ್ಯ ಸರ್ಕಾರವು ರಾಜ್ಯಾದ್ಯಂತ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 6ರಿಂದ 8ನೇ ತರಗತಿಯವರಿಗೆ ಬೋಧನೆ ಮಾಡಲು ಒಟ್ಟು 15 ಸಾವಿರ ಪದವೀಧರ ಶಿಕ್ಷಕರ (ಜಿಪಿಟಿ) ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದೆ.

ಇದೇ ಮೊದಲ ಬಾರಿಗೆ ನೇಮಕದಲ್ಲಿ ‘ಲಿಂಗತ್ವದ ಅಲ್ಪಸಂಖ್ಯಾತರಿಗೆ’ ಶೇ.1ರಷ್ಟು ಮೀಸಲು ನಿಗದಿಪಡಿಸಲಾಗಿದೆ.

ಜನವರಿ 21ರಂದು ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿತ್ತು. ಆಕ್ಷೇಪಗಳಿಗೆ ಅವಕಾಶ ಕೂಡ ಕಲ್ಪಿಸಿತ್ತು. ಇದೀಗ ಅಭ್ಯರ್ಥಿಗಳಿಂದ ಸ್ವೀಕೃತ ಗೊಂಡ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಗಣಿಸಿ ಅಂತಿಮ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ.

ಎಲ್ಲಾ ಅಭ್ಯರ್ಥಿಗಳ ವಯೋಮಿತಿಯನ್ನು ಎರಡು ವರ್ಷ ಹೆಚ್ಚಳ ಮಾಡಲಾಗಿದೆ. ಪರಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ವಿಶೇಷಚೇತನ ಅಭ್ಯರ್ಥಿಗಳ ವಯೋಮಿತಿ 47 ವರ್ಷ, ವರ್ಗಗಳ ಅಭ್ಯರ್ಥಿಗಳ ವಯೋಮಿತಿ 45 ಹಾಗೂ ಸಾಮಾನ್ಯ ಅಭ್ಯರ್ಥಿಗಳ ವಯೋಮಿತಿಯನ್ನು 42 ವರ್ಷಗಳಿಗೆ ಏರಿಕೆ ಮಾಡಲಾಗಿದೆ.

ಪದವಿಯಲ್ಲಿ ಶೇ. 50 ರಷ್ಟು ಅಂಕ ಮತ್ತು ‘ಬಿ.ಇಡಿ’ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ನೇಮಕಕ್ಕೆ ಪರಿಗಣಿಸಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ನಡೆಯಲಿದೆ.

ಭಾಷಾ ವಿಷಯಗಳಲ್ಲಿ ಹುದ್ದೆ ಬಯಸುವ ಅಭ್ಯರ್ಥಿಗಳು ಪದವಿ ವೇಳೆ ಭಾಷಾ ವಿಷಯಗಳ ಜೊತೆಗೆ ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಉರ್ದು, ತೆಲುಗು, ತಮಿಳು, ಮಲಯಾಳಂ, ಕೊಂಕಣಿ,ಸಂಸ್ಕೃತ ಸೇರಿದಂತೆ ಇತರೆ ಭಾಷೆ ವಿಷಯಗಳನ್ನು ಐಚ್ಛಿಕವಾಗಿ ಅಭ್ಯಾಸ ಮಾಡಿರಬೇಕು. ಅದರಲ್ಲಿ ಕನಿಷ್ಠ ಶೇ.50 ರಷ್ಟು ಅಂಕ ಪಡೆದಿರಬೇಕು.

ಶೇ.50 ರಷ್ಟು ಸ್ಪರ್ಧಾತ್ಮಕ ಪರೀಕ್ಷೆ ಅಂಕ, ಶೇ.20 ರಷ್ಟು ಟಿಇಟಿ ಪರೀಕ್ಷೆ ಅಂಕ, ಶೇ.20ರಷ್ಟು ಪದವಿ ಪರೀಕ್ಷೆ ಅಂಕ ಹಾಗೂ ಶೇ.10ರಷ್ಟು ಬಿ.ಇಡಿ ಶಿಕ್ಷಣದ ಅಂಕಗಳನ್ನು ಪರಿಗಣಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಗಣಿತ ಮತ್ತು ವಿಜ್ಞಾನ ವಿಷಯಗಳ ಶಿಕ್ಷಕರ ಹುದ್ದೆಗೆ ಬಿಎಸ್ಸಿ ಪದವಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ಜೊತೆಗೆ ರಸಾಯನಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಸ್ಯಾಟಿಸ್ಟಿಕ್ಸ್, ಜಿಯೊಟೆಕ್ನಾಲಜಿ ವಿಷಯಗಳನ್ನು ಐಚ್ಛಿಕವಾಗಿ ಅಭ್ಯಾಸ ಮಾಡಿದವರು ಅರ್ಜಿ ಸಲ್ಲಿಸಬಹುದು.

ಜಿಯಾಲಜಿಕಲ್ ಸೈನ್ಸ್ ಶಿಕ್ಷಕರ ಹುದ್ದೆಗೆ ಬಿಎಸ್ಸಿ ಪದವಿಯಲ್ಲಿ ರಸಾಯನಶಾಸ್ತ್ರ ದೊಂದಿಗೆ ಇತರೆ ಎರಡು ಐಚ್ಛಿಕ ವಿಷಯಗಳಾಗಿ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಸಿರಿಕಲ್ಚರ್, ಎನ್ವಿರಾನ್ಮೆಂಟಲ್ ಸೈನ್ಸ್, ಜೆನೆಟಿಕ್ಸ್ ಹಾಗೂ ಗಣಿತ ವಿಷಯಗಳನ್ನು ಅಧ್ಯಯನ ಮಾಡಿದವರಿಗೂ ಅವಕಾಶ ನೀಡಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಯಾವುದೇ ಧರ್ಮದ ಮಹಿಳೆಗೆ ಉಡುಗೆ ಸ್ವಂತ ಆಯ್ಕೆ

0

ಯಾವುದೇ ಧರ್ಮದ ಮಹಿಳೆಗೂ ತನ್ನಿಷ್ಟದ ಉಡುಗೆ ತೊಡುವ ಆಯ್ಕೆಯಿದೆ. ಅದು ಅವರ ಘನತೆಯ ವಿಚಾರವೂ ಹೌದು. ಆದರೆ, ಅರ್ಜಿದಾರರು ಧಾರಣಿ ಕಡ್ಡಾಯಗೊಳಿಸುವ ಮೂಲಕ ಮುಸ್ಲಿಂ ಮಹಿಳೆಯರ ಮೇಲೆ ಬಲವಂತವಾಗಿ ಹೇರಲು ಮುಂದಾಗಿದ್ದಾರೆ. ಈ ಭಾಗವನ್ನು ನ್ಯಾಯಾಲಯ ಪುರಸ್ಕರಿಸಿ ಬಾರದು ಎಂದು ಸರ್ಕಾರ ಹೈಕೋರ್ಟ್ ನಲ್ಲಿ ಪ್ರಬಲ ವಾದ ಮಂಡಿಸಿದೆ.

ಸರ್ಕಾರದ ಪರ ವಾದ ಮುಂದುವರಿಸಿದ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವಾದಗಿ ಅವರು, ಒಂದು ಧರ್ಮದ ಮಹಿಳೆಯರು ಹಿಜಬ್ ಧರಿಸಬೇಕು ಎಂದು ತೀರ್ಪು ನೀಡಿದರೆ, ಆ ಮಹಿಳೆಯರ ವೈಯಕ್ತಿಕ ಆಯ್ಕೆ ಸ್ವಾತಂತ್ರ್ಯವನ್ನು ನಾವು ನಿರ್ಲಕ್ಷಿಸಿದಂತೆ ಆಗಬಹುದು ಎಂದು ಹೇಳಿದರು.

ಹಿಜಾಬ್ ಗೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ಸಿಜೆ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾ. ಖಾಜೆ ಜೈಬುನ್ನಿಸಾ ಮೋಹಿಯುದ್ದಿನ್ ಅವರಿದ್ದ ಪೂರ್ಣಪೀಠ ಸುಮಾರು ಎರಡು ಗಂಟೆಗಳ ವಾದ ಆಲಿಸಿದ ನಂತರ ವಿಚಾರಣೆಯನ್ನು ಇಂದು ಮಧ್ಯಾಹ್ನಕ್ಕೆ ಮುಂದೂಡಿದೆ.