Thursday, February 19, 2026
Thursday, February 19, 2026
Home Blog Page 1704

ಕೆಪಿಎಸ್ ಸಿ ವ್ಯಕ್ತಿತ್ವ ಪರೀಕ್ಷೆ ಅಂಕ ಕಡಿತ ಮಾಜಿ ಪ್ರಧಾನಿ ಆಕ್ಷೇಪ

0

ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಭರ್ತಿಗೆ ಕೆಪಿಎಸ್ ಸಿ ನಡೆಸುವ ವ್ಯಕ್ತಿತ್ವ ಪರೀಕ್ಷೆ ಅಂಕವನ್ನು ಐವತ್ತರಿಂದ 25ಕ್ಕೆ ಇಳಿಸುವ ಸರ್ಕಾರದ ತೀರ್ಮಾನಕ್ಕೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ಸರ್ಕಾರದ ತೀರ್ಮಾನದಿಂದ ಗ್ರಾಮೀಣ ಭಾಗದಲ್ಲಿನ ಸ್ಪರ್ಧಾ ಆಕಾಂಕ್ಷಿಗಳಿಗೆ ಅನ್ಯಾಯವಾಗಲಿದೆ ಎಂದು ತಿಳಿಸಿದ್ದಾರೆ.

ಕೆಪಿಎಸ್ ಸಿ 2020ರ ಜೂನ್4ರಂದು ಅಧಿಸೂಚನೆ ಹೊರಡಿಸಿ ಪತ್ರಾಂಕಿತ ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿನ ವ್ಯಕ್ತಿತ್ವ ಪರೀಕ್ಷೆಗೆ ಬಹುವರ್ಷಗಳಿಂದ ಜಾರಿಯಲ್ಲಿದ್ದ ಪ್ರಮಾಣಿತ ಕಾರ್ಯವಿಧಾನಗಳನ್ನು ಬದಲಿಸಿ, 1750 ಅಂಕಗಳಿಗೆ ಲಿಖಿತ ಪರೀಕ್ಷೆ ಮತ್ತು 200 ಅಂಕಗಳಿಗೆ ವ್ಯಕ್ತಿತ್ವ ಪರೀಕ್ಷೆ ಮಾರ್ಪಡಿಸಿ 2 ಐಚ್ಛಿಕ ವಿಷಯಗಳನ್ನು ಕಡಿತಗೊಳಿಸಿ 1250 ಅಂಕಗಳಿಗೆ ಲಿಖಿತ ಪರೀಕ್ಷೆ ನಿಗದಿ ಮಾಡಿತ್ತು.

150 ಅಂಕಗಳಿಗೆ ವ್ಯಕ್ತಿತ್ವ ಪರೀಕ್ಷೆಗೆ ಅವಕಾಶ ಕಲ್ಪಿಸಿತ್ತು. ತದನಂತರ ವ್ಯಕ್ತಿತ್ವ ಪರೀಕ್ಷೆಯನ್ನು ಐವತ್ತು ಅಂಕಗಳಿಗೆ ನಿಗದಿ ಮಾಡಿತ್ತು. ನಂತರ ಸಾಧಕ-ಬಾಧಕ ಅವಲೋಕಿಸದೆ 2022ರ ಫೆಬ್ರವರಿ 18ರಂದು ಸಂಪುಟ ಸಭೆಯು ಮತ್ತೆ ವ್ಯಕ್ತಿತ್ವ ಪರೀಕ್ಷೆ ಅಂಕಗಳನ್ನು 25ಕ್ಕೆ ಇಳಿಕೆ ಮಾಡಿದೆ. ಇದರಿಂದ ಆಯೋಗದ ಬಗ್ಗೆ ಸಾರ್ವಜನಿಕರಲ್ಲಿ ಇರುವ ಗೌರವ ಮತ್ತಷ್ಟು ಕಡಿಮೆಯಾಗಲಿದೆ ಎಂದು ಮಾಜಿ ಪ್ರಧಾನಿ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋಟಿ ರೂ ಬೇಡಿಕೆಯ ರವಿವರ್ಮನ ವರ್ಣಚಿತ್ರಗಳು

0

ವಿಶ್ವ ವರ್ಣಚಿತ್ರ ಪರಂಪರೆಯಲ್ಲಿ ಮೈಲುಗಲ್ಲಿನ ಸಾಧನೆ ಮಾಡಿದ ರಾಜ ರವಿವರ್ಮ ಗತಿಸಿ ಶತಮಾನ ಸಮೀಪಿಸಿದರೂ ಅವರ ಕಲಾಕೃತಿಗಳ ಬೇಡಿಕೆ ಇವತ್ತಿಗೂ ಕಡಿಮೆಯಾಗಿಲ್ಲ.

ಡಿಜಿಟಲ್ ಮಾದರಿಯ ಅವರ ಎರಡು ವರ್ಣಚಿತ್ರಗಳು ಬರೋಬ್ಬರಿ 1 ಕೋಟಿ ರೂ.ಗೆ ಹರಾಜು ಕಂಡಿವೆ. ಫಂಗಸ್ ಹಿಡಿದು ಹಾಳಾಗದ ಅಪರೂಪದ ಡಿಜಿಟಲ್ ರೂಪದ ಕಲಾಕೃತಿಗಳನ್ನು ರಿಟಿಸ್ಟಿಕ್ ಆನ್ಲೈನ್ ಮಾರಾಟ ಸಂಸ್ಥೆಯು ಫೆಬ್ರುವರಿ 17 ರಿಂದ 20ರವರೆಗೆ ಹರಾಜಿಗೆ ಇರಿಸಿತ್ತು.

ಅವರು ರಿಕ್ಲೇನಿಂಗ್ ನಾಯರ್ ಲೇಡಿ ಚಿತ್ರ 47 ಲಕ್ಷ ರೂ. (63,999 ಡಾಲರ್) ಮತ್ತು ದಿ ಕಾಂಕ್ವೆಟ್ಟೆ ವರ್ಣ ಚಿತ್ರ 56 ಲಕ್ಷ ರೂ. (74,999 ಡಾಲರ್) ಗೆ ಹರಾಜುಗೊಂಡಿವೆ.ಎನ್ ಎಫ್ ಟಿ ಎಂದೇ ಗುರುತಿಸಲ್ಪಟ್ಟಿರುವ ಡಿಜಿಟಲ್ ಕಲಾಕೃತಿಗಳ ಮಾರಾಟ ಪ್ರಕ್ರಿಯೆ ಇತ್ತೀಚಿಗೆ ಹೆಚ್ಚು ಚಾಲ್ತಿಗೆ ಬಂದಿದೆ. ಈ ಮಾದರಿ ಬಳಸಿ ವಿಶ್ವದ ಎಲ್ಲಾ ಕಡೆಗೂ ಸುಲಭ ಹರಾಜು ನಡೆಸಲಾಗುತ್ತಿದ್ದು, ರವಿವರ್ಮನ ವರ್ಣ ಚಿತ್ರಗಳಿಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿದೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರೊ ಕಬಡ್ಡಿ ಲೀಗ್ ಎರಡನೇ ಉಪಾಂತ್ಯಕ್ಕೆ ಬುಲ್ಸ್.

0

ವೈಟ್ ಫೀಲ್ಡ್ ನ ಶರ್ಟನ್ ಹೋಟೆಲ್ ಆವರಣದಲ್ಲಿ ಸೋಮವಾರ ನಡೆದ 2ನೇ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಗುಜರಾತ್ ಜಯಂಟ್ಸ್ ತಂಡವನ್ನು ಸೋಲಿಸಿದೆ‌. ಈ ಮೂಲಕ ಸೆಮಿಫೈನಲ್ ಗೆ ಲಗ್ಗೆ ಇಟ್ಟಿರುವ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬ್ಬಡ್ಡಿ ಲೀಗ್ 8ನೇ ಆವೃತ್ತಿಯ ಎರಡನೇ ಸೆಮಿಫೈನಲ್ ನಲ್ಲಿ ಡಬಲ್ ದಿಲ್ಲಿ ತಂಡವನ್ನು ಎದುರಿಸಲಿದೆ.

ಈ ಪಂದ್ಯದಲ್ಲಿ ಗೆದ್ದರೆ ಬೆಂಗಳೂರು ಬುಲ್ಸ್ ಬಳಗ 3ನೇ ಬಾರಿ ಫೈನಲ್ ಪ್ರವೇಶಿಸಿದಂತಾಗಲಿದೆ. 2015ರಲ್ಲಿ ರನ್ನರ್ ಆಫ್ ಸ್ಥಾನ ಪಡೆದಿದ್ದ ಬುಲ್ಸ್ ಕೊನೆಗೂ 2018ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಹಲವು ಸೋಲು-ಗೆಲುವಿನೊಂದಿಗೆ ಐದನೇ ಸ್ಥಾನಿಯಾಗಿ ಲೀಗ್ ಹಂತದಲ್ಲಿ ಎಲಿಮಿನೇಟರ್ ಹಂತಕ್ಕೆ ತೇರ್ಗಡೆ ಗೊಂಡಿದ್ದ ಬುಲ್ಸ್ ಇದೀಗ ಪವನ್ ಸೆಹ್ರಾವತ್ ಅವರ ಸಮರ್ಥ ನಾಯಕತ್ವದೊಂದಿಗೆ ಸೆಮಿಫೈನಲ್ಸ್ ಗೂ ಲಗ್ಗೆ ಇಟ್ಟಿದೆ.

ಅಂಕಪಟ್ಟಿಯ ಅಗ್ರಸ್ಥಾನಿ ಮೂರು ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ ಹಾಗೂ ಎಲಿಮಿನೇಟರ್ 1ರ ವಿಜೇತ ಯು.ಪಿ.ಯೋಧಾ ತಂಡಗಳ ನಡುವೆ ಮೊದಲ ಸೆಮಿಫೈನಲ್ ನಡೆಯಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸದನ ಕಲಾಪವನ್ನ ಸಾರ್ಥಕಗೊಳಿಸದ ಪ್ರತಿಪಕ್ಷ ಕಾಂಗ್ರೆಸ್-” ಸಿಎಂ

0

ರಾಜ್ಯ ವಿಧಾನಮಂಡಲದ ಇತಿಹಾಸದಲ್ಲೇ ಕಾಂಗ್ರೆಸ್ ಅತ್ಯಂತ ಬೇಜವಾಬ್ದಾರಿ ಇಂದ ವರ್ತಿಸಿದ್ದು ಸದನಕ್ಕೆ ಕಪ್ಪುಚುಕ್ಕೆ ತಂದಿದೆ. ಹಾಗಾಗಿ ಕಾಂಗ್ರೆಸ್ ಗೆ ಪ್ರತಿಪಕ್ಷ ಮತ್ತು ಆಡಳಿತ ಪಕ್ಷವಾದ ಯೋಗ್ಯತೆಯನ್ನು ಕಳೆದುಕೊಳ್ಳುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಸಿಎಂ ಉತ್ತರಿಸಲು ಮುಂದಾಗುತ್ತಿದ್ದಂತೆ ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು.

ಇದರಿಂದಾಗಿ ಸಿಟ್ಟಾದ ಸಿಎಂ ಬಸವರಾಜ್ ಸ್ವಾಮಿಯವರು, ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರದ ಸಾಧನೆ, ಕಾರ್ಯಕ್ರಮದ ಬಗ್ಗೆ ಪ್ರಶ್ನಿಸಬೇಕಿತ್ತು. ಆದರೆ ನಿರಂತರ ಧರಣಿ ನಡೆಸುವ ಮೂಲಕ ಈ ಹಕ್ಕನ್ನು ಅದು ಕಳೆದುಕೊಂಡಿದೆ. ಕಲಾಪದಲ್ಲಿ ಭಾಗವಹಿಸದೇ ಧರಣಿ ಮುಂದುವರಿಸಿದ ಕಾಂಗ್ರೆಸ್ ಗೆ ಜವಾಬ್ದಾರಿ ಇಲ್ಲ ಎಂದರು.

ಕೋವಿಡ್ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಫೋಟೋ ಕಲಿತು ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಸೂಕ್ತ ಅಂಬುಲೆನ್ಸ್ ವ್ಯವಸ್ಥೆ, ಕೋವಿಡ್ ನಿಂದ ಮೃತಪಟ್ಟ ವಾರಸುದಾರರಿಲ್ಲದ ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದೆವೆ. ತಾಲೂಕು ಮಟ್ಟದ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಲಭ್ಯವಾಗುವಂತೆ ವ್ಯವಸ್ಥೆ ರೂಪಿಸಿದ್ದೇವೆ. ಕಳೆದ 55 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ ರಾಜ್ಯದ ಆರೋಗ್ಯ ವ್ಯವಸ್ಥೆ ಹದಗೆಡಿಸಿತ್ತು ಎಂದು ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನವನ್ನು ಇಂದೇ ಮೊಟಕುಗೊಳಿಸಬೇಕಾದ ಅನಿವಾರ್ಯತೆಯನ್ನು ಕಾಂಗ್ರೆಸ್ ತಂದೊಡ್ಡಿದೆ. ಇದು ಬೇಸರದ ಸಂಗತಿ. ಸದನ ಕರಿಯಿರಿ ಸಮಸ್ಯೆ ಚರ್ಚಿಸಬೇಕು ಎನ್ನುತ್ತಾರೆ. ಅಧಿವೇಶನ ನಡೆಯುವಾಗ ಚರ್ಚೆಗೆ ತಯಾರಿಲ್ಲ ಎಂದು ಆರೋಪಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಒಂದು ರಾಷ್ಟ್ರ ಒಂದು ಚುನಾವಣೆ ಎಲ್ಲಾ ರಾಜ್ಯಗಳ ಸಮ್ಮತಿ ಅಗತ್ಯ

0

ರಾಷ್ಟ್ರದ ಹಿತ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಎಲ್ಲಾ ರಾಜ್ಯಗಳ ಸಮ್ಮತದೊಂದಿಗೆ ಒಂದು ರಾಷ್ಟ್ರ ಒಂದು ಚುನಾವಣೆ ವ್ಯವಸ್ಥೆಯನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಜನಪ್ರತಿನಿಧಿಗಳು ಹಾಗೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ವಿಕಾಸ ವೇದಿಕೆ ಕರ್ನಾಟಕ ಸಂಸ್ಥೆ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಯಿತು. ಒಂದು ರಾಷ್ಟ್ರ ಒಂದು ಚುನಾವಣೆ ಎಂಬುದನ್ನು ವ್ಯಕ್ತಿಗತ ಪ್ರತಿಷ್ಠೆಗಾಗಿ ತೆಗೆದುಕೊಳ್ಳದೆ, ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯಬೇಕು. ಕೇವಲ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಮಾತ್ರ ಒಂದು ರಾಷ್ಟ್ರ ಒಂದು ಚುನಾವಣೆ ವ್ಯವಸ್ಥೆಯನ್ನು ಸೀಮಿತಗೊಳಿಸಬಾರದು. ಜಿಲ್ಲೆ ಪಂಚಾಯಿತಿ, ತಾಲೂಕು ಪಂಚಾಯಿತಿ, ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು, ಸಹಕಾರ ಸಂಘಗಳು ಸೇರಿದಂತೆ ಇತರ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಬೇಕು. ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಜನಪ್ರತಿನಿಧಿಗಳು, ಹಾಗೂ ತಜ್ಞರ ಸಲಹೆ ನೀಡಿದರು.

ದುಂಡುಮೇಜಿನ ಸಭೆ ಉದ್ಘಾಟಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಒಂದು ರಾಷ್ಟ್ರ ಒಂದು ಚುನಾವಣೆ ಎಂಬ ಪರಿಕಲ್ಪನೆ ಹೊಸದೇನೂ ಅಲ್ಲ. ಚುನಾವಣೆ ಸುಧಾರಣೆಗೆ ಸಂಬಂಧಿಸಿದಂತೆ 1983ರಲ್ಲಿ ಕೇಂದ್ರ ಚುನಾವಣಾ ಆಯೋಗ ಈ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಿದೆ. ಆದರೆ ಇದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದ್ದಾರೆ ಎಂಬ ವಿರೋಧ ವ್ಯಕ್ತವಾಗುತ್ತಿರುವುದು ಕಾಣುತ್ತಿದೆ ಎಂದರು.

ವಿಧಾನ ಪರಿಷತ್ ಮಾಜಿ ಸಭಾಪತಿ ಬಿ‌.ಎಲ್. ಶಂಕರ್ ಅವರು ಮಾತನಾಡಿ, ಒಂದು ರಾಷ್ಟ್ರ ಒಂದು ಚುನಾವಣೆ ವಿಷಯವನ್ನು ಕೇವಲ ವಿಧಾನಸಭೆ ಮತ್ತು ಲೋಕಸಭೆ ಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಚರ್ಚಿಸುತ್ತಿದ್ದೇವೆ. ಆದರೆ ಪಂಚಾಯಿತಿ ಚುನಾವಣೆಯಿಂದ ಹಿಡಿದು ಪಾರ್ಲಿಮೆಂಟ್ ವರೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸುವ ಬಗ್ಗೆ ಚರ್ಚೆಯಾಗಬೇಕು. ಎಲ್ಲಾ ಪ್ರಾದೇಶಿಕ ಪಕ್ಷಗಳ ಒಮ್ಮತದ ಅಭಿಪ್ರಾಯದೊಂದಿಗೆ ಈ ವ್ಯವಸ್ಥೆ ಜಾರಿಯಾಗಬೇಕು ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ಸಮೀಕ್ಷಿಸಲಿ- ಎಚ್ ಡಿ ಕೆ

0

ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ದೊಡ್ಡ ಅಪಾಯ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೂಡಲೇ ರಾಜ್ಯಪಾಲರ ಮಧ್ಯ ಪ್ರವೇಶಕ್ಕೆ ಆಗ್ರಹಿಸಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಹಿಜಾಬ್ ಮತ್ತು ಕೇಸರಿ ಸಂಘರ್ಷ , ಶಿವಮೊಗ್ಗದಲ್ಲಿ ಯುವಕನ ಕೊಲೆಯಿಂದ ಇಡೀ ರಾಜ್ಯವೇ ಕುಲುಮೆಯಾಗಿದೆ. ಇಂತಹ ಸೂಕ್ಷ್ಮ ಸಮಯದಲ್ಲಿ ರಾಜ್ಯಪಾಲರ ಮೌನ ಸರಿಯಲ್ಲ. ಸರ್ಕಾರದಿಂದ ಮಾಹಿತಿ ಪಡೆದು ಕೇಂದ್ರ ಸರ್ಕಾರಕ್ಕೆ ವರದಿ ನೀಡಬೇಕು. ಸದ್ಯದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ರಾಜ್ಯದಲ್ಲಿನ ಅಹಿತಕರ ಘಟನೆಗಳು, ಅಸಮರ್ಪಕ ಕಲಾಪದ ಬಗ್ಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಈ ವರ್ಷವೂ ಕೋವಿಡ್ ಹಾವಳಿ ನಂತರ ರಾಜಕೀಯದ ಕೋವಿಡ್ ಪ್ರಯೋಗವಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳು ಇಡೀ ರಾಜ್ಯಕ್ಕೆ ರಾಜಕೀಯ ಕೋವಿಡ್ ಹನಿ ಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಸರ್ಕಾರದ ವಿರುದ್ಧ ಬಿಜೆಪಿ ಸಂಸದರೇ ರೋಸಿ ಹೋಗಿದ್ದಾರೆ ಎಂದರು.

ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆಯಿಂದ ಸದನದಲ್ಲಿ ಚರ್ಚೆಗೆ ಅವಕಾಶವೇ ಸಿಗಲಿಲ್ಲ. ಬಿಜೆಪಿಯವರು ವಂದನಾ ನಿರ್ಣಯದ ಮಾತನಾಡಿದರೂ ರಾಜ್ಯ ದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುವ ಬದಲಿಗೆ ಪ್ರಧಾನಿ ಮೋದಿ ಅವರ ಸಾಧನೆಗಳ ಬಗ್ಗೆ ಮಾತನಾಡಿದರು. ಕಾಂಗ್ರೆಸ್ ಧರಣಿ ನಡುವೆ ಸಿಎಂ ಉತ್ತರ ನೀಡಿದ್ದಾರೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮುಂಚೆಯೇ ಬಲವಂತ ಮುಗಿದ ಸದನ ಕಲಾಪ

0

ಈ ಬಾರಿಯೂ ವಿಧಾನಮಂಡಲ ಅಧಿವೇಶನ 3 ದಿನ ಮೊದಲೇ ಮುಕ್ತಾಯಗೊಂಡಿದೆ. ಸಚಿವ ಕೆ.ಎಸ್.ಈಶ್ವರಪ್ಪ ಅವರ ರಾಜೀನಾಮೆಗೆ ಬಿಗಿ ಪಟ್ಟು ಹಿಡಿದು ಪ್ರತಿಪಕ್ಷ ಕಾಂಗ್ರೆಸ್ ಅಹೋರಾತ್ರಿ ಧರಣಿಯನ್ನು ನಡೆಸಿದ ಹಿನ್ನೆಲೆ ಮೂರು ದಿನ ಮೊದಲೇ ಅಧಿವೇಶನ ಮುಕ್ತಾಯಗೊಂಡಿದೆ.

ಫೆಬ್ರವರಿ 25ರವರೆಗೆ ನಿಗದಿಯಂತೆ ಉಭಯ ಸದನಗಳ ಕಲಾಪ ನಡೆಯಬೇಕಿತ್ತು. ಆದರೆ ಕೇಸರಿ ದ್ವಜ ಸಂಬಂಧ ಕೆಎಸ್ ಈಶ್ವರಪ್ಪ ನೀಡಿದ ಹೇಳಿಕೆ ಖಂಡಿಸಿ ಪ್ರತಿಪಕ್ಷ ಕಾಂಗ್ರೆಸ್ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಲು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿದೆ.

ಈ ವೇಳೆ ಪ್ರತಿಪಕ್ಷ ಬಣ್ಣ ವಿಶ್ವಾಸಕ್ಕೆ ತೆಗೆದುಕೊಳ್ಳಲು ಉಭಯ ಸದನಗಳ ಅಧ್ಯಕ್ಷರು ಮಾತುಕತೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ್ ಬೊಂಬಾಯಿ, ಸಂಸದೀಯ ಸಚಿವ ಮಾಧುಸ್ವಾಮಿ, ನಿಕಟಪೂರ್ವ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಸರ್ಕಾರದ ಕಡೆಯಿಂದ ಕಾಂಗ್ರೆಸ್ ನಾಯಕರ ಮನವೊಲಿಸಲು ಪ್ರಯತ್ನಿಸಿದರು.

ಪ್ರತಿಪಕ್ಷಗಳು ಧರಣಿಯಿಂದ ಹಿಂದೆ ಸರಿಯಲಿಲ್ಲ, ಸರ್ಕಾರವು ಸಚಿವ ಈಶ್ವರಪ್ಪ ಬೆನ್ನಿಗೆ ದೃಢವಾಗಿ ನಿಂತುಕೊಂಡಿತು. ವಿವಾದಿತ ಹೇಳಿಕೆ ಹಿನ್ನೆಲೆಯಲ್ಲಿ ಈಶ್ವರಪ್ಪ ಕಡೆಪಕ್ಷ ವಿಷಾದ ವ್ಯಕ್ತಪಡಿಸಿತ್ತು. ಆಗ ಮಾತ್ರ ಪ್ರತಿಪಕ್ಷ ಒಂದು ಹೆಜ್ಜೆ ಮುಂದೆ ಬಂದು ಕಲಾಪ ನಡೆಸಲು ಸಹಕರಿಸುವ ಸಾಧ್ಯತೆ ಇತ್ತು.

ಈ ವಿಚಾರದಲ್ಲಿ ಈಶ್ವರಪ್ಪ ಅವರಿಗೆ ಸರ್ಕಾರ ಸೂಕ್ತ ನಿರ್ದೇಶನ ಕೊಡುವುದರಲ್ಲಿ ಎಡವಿದೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ಮೊದಲ ರಾಜ್ಯಪಾಲರು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದರು. ನಂತರ ಎರಡು ದಿವಸ ಸುಗಮವಾಗಿ ಕಲಾಪ ನಡೆಯಿತು. ಕಲಿತ ಗುರುವಾರದಿಂದಲೇ ಕಾಂಗ್ರೆಸ್ ನಡೆಸುತ್ತಿದೆ. ಇದರ ನಡುವೆಯೇ ಪ್ರಶ್ನೋತ್ತರ ಕಲಾಪ ನಡೆಸಲಾಗಿದೆ. ಪ್ರಮುಖ ವಿಧೇಕಗಳನ್ನು ಪಾಸ್ ಮಾಡಿಕೊಳ್ಳಲಾಗಿದೆ. ಮಂಗಳವಾರವೂ ಕಲಾಪ ಪ್ರಾರಂಭಗೊಂಡಾಗ ಕಾಂಗ್ರೆಸ್ ನ ಧರಣಿ ಮುಂದುವರೆಯಿತು. ಪ್ರಶ್ನೋತ್ತರ, ವಿಧೇಯಕಗಳನ್ನು ಅಂಗೀಕಾರ, ಸಿಎಂ ಮಾತಿನ ಬಳಿಕ ಕಲಾಪವನ್ನು‌ ಸಭಾಧ್ಯಕ್ಷರು ಮಾರ್ಚ್ 4ಕ್ಕೆ ಮುಂದೂಡಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹರ್ಷ ಅವರ ಮನೆಗೆ ಹಲವು ನಾಯಕರ ಭೇಟಿ ಸಾಂತ್ವನ

0

ಹರ್ಷ ಕೊಲೆ ಪ್ರಕರಣವೀಗ ಹೈ ಪ್ರೊಫೈಲ್ ಕೇಸ್ ಆಗಿ ಮಾರ್ಪಟ್ಟಿದೆ. ಇಡೀ ದೇಶವೇ ಶಿವಮೊಗ್ಗ ದತ್ತ ಮುಖ ಮಾಡಿದೆ. ಶಿವಮೊಗ್ಗದಲ್ಲಿರುವ ರಾಜಕೀಯ ನಾಯಕರು, ಹಿಂದುತ್ವ ಪ್ರತಿಪಾದಕರು ಹಾಗೂ ಅನೇಕರು ಹರ್ಷನ ಮನೆಗೆ ಭೇಟಿ ನೀಡಲು ಆರಂಭಿಸಿದ್ದಾರೆ.

ಸೋಮವಾರ ಉಸ್ತುವಾರಿ ಸಚಿವ ನಾರಾಯಣಗೌಡ, ಸಂಸದ ಬಿ.ವೈ‌. ರಾಘವೇಂದ್ರ, ಸಚಿವ ಕೆ.ಎಸ್. ಈಶ್ವರಪ್ಪ, ಮೃತನ ಮನೆಗೆ ಭೇಟಿ ನೀಡಿದ್ದರು.

ಮಂಗಳವಾರದಂದು ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್‌. ಜೀವರಾಜ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಯುವ ಬಿಗ್ರೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ಡಾ. ಸಂತೋಷ್ ಭಾರತಿ ಶ್ರೀಪಾದ ಸ್ವಾಮೀಜಿ ಮತ್ತು ಇನ್ನಿತರರು ಆಗಮಿಸಿ ಕುಟುಂಬದ ಸದಸ್ಯರಿಗೆ ಸಾಂತ್ವನ ನೀಡಿದರು.
ಈ ಕುರಿತು ಮಾತನಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು , ಶಿವಮೊಗ್ಗ ಕೊಲೆ ಪ್ರಕರಣ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದರು. ಇದು ಷಡ್ಯಂತ್ರದ ಕೊಲೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕೊಲೆಗೆ ಯಾರು ಜವಾಬ್ದಾರರು? ಅವರ ಪ್ರಾಣಕ್ಕೆ ಯಾರು ಹೊಣೆ? ಶಾಂತಿಭಂಗ ಮಾಡುವ ಕ್ರಮಕ್ಕೆ ಸದನ, ಪಕ್ಷ ಮತ್ತು ರಾಜ್ಯದ ಜನರು ಖಂಡಿಸುತ್ತಾರೆ. ಪ್ರಕ್ಷುಬ್ಧ ವಾತಾವರಣ ನಿಯಂತ್ರಿಸುವುದಕ್ಕೆ ಪ್ರತಿಪಕ್ಷದ ಜವಾಬ್ದಾರಿಯೂ ಇರುತ್ತದೆ. ಇದರ ಬಗ್ಗೆ ಚರ್ಚಿಸಿದೆ ಧರಣಿ ನಡೆಸುತ್ತಿದ್ದೆ ಎಂದರು.

ಹೆಚ್ಚಿನ ಕೊಲೆ ಇಡೀ ಹಿಂದೂಗಳ ಕೊಲೆಯ ಸೂಚಕವಾಗಿದೆ. ಈ ರೀತಿಯ ಬೆಳವಣಿಗೆಗಳು ಯಾಕೆ ಆಗುತ್ತಿವೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ನೋಡಬೇಕಿದೆ. ನಾನು ಕೂಡ ಹರ್ಷನ ಕುಟುಂಬದವರಲ್ಲಿ ಒಬ್ಬನಾಗಿದ್ದಾನೆ ಎಂದು ಡಿ.ಎನ್. ಜೀವರಾಜ್ ಅವರು ಪ್ರತಿಕ್ರಿಯಿಸಿದ್ದಾರೆ.

ಹರ್ಷನ ಹತ್ಯೆಯನ್ನು ಕೊಲೆಯಾಗಿ ಪರಿಗಣಿಸದೆ ಇದೊಂದು ಭಯೋತ್ಪಾದಕ ಕೃತ್ಯ ಎಂದು ಪ್ರಕರಣ ದಾಖಲು ಮಾಡಬೇಕು ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಬರುವ ವರ್ಷ ಮಳೆ ಬೆಳೆ ಉತ್ತಮವಾಗಿರಲಿದೆ

0

ಕಳೆದ ವರ್ಷದಂತೆ ಈ ಬಾರಿಯೂ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಭರ್ಜರಿಯಾಗಿ ಮುನ್ಸೂಚನೆ ಇದೆ. 2021ನೇ ಸಾಲಿನಲ್ಲಿ ಒಳ್ಳೆಯ ಮಳೆಯಾಗಿದೆ.

ಭೂಮಿಯಲ್ಲಿನ ತೇವಾಂಶದ ಪ್ರಮಾಣವು ಈ ಬಾರಿಯ ಮಳೆಗೂ ಪೂರಕವಾಗಿದೆ. ಯಾವಾಗ ತೇವಾಂಶವಿದ್ದು, ಕೆರೆಕಟ್ಟೆಗಳು ತುಂಬಿರುತ್ತವೋ ಆಗ ಮೊಡ ಕಟ್ಟಲು ಸಹಾಯಕವಾಗುತ್ತದೆ. ಹೀಗಾಗಿ ಈ ಬಾರಿಯೂ ಮಾರ್ಚ್ ನಲ್ಲಿ ಬರುವ ಪೂರ್ವ ಮುಂಗಾರು ಮತ್ತು ಜೂನ್ ನಲ್ಲಿ ಆಗಮಿಸುವ ಹಿಂಗಾರು ಮಳೆ ಉತ್ತಮವಾಗಿ ಇರಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ಪೂರ್ವ ಮುಂಗಾರಿನಲ್ಲಿ ವಾಡಿಕೆಯಂತೆ 120 ಮಿ.ಮೀ. ಮಳೆಯಾಗುತ್ತದೆ. ಆದರೆ ಕಳೆದ ವರ್ಷ 207 ಮಿ.ಮೀ. ಮಳೆಯಾಗಿದ್ದು, ಶೇಕಡ 74ರಷ್ಟು ಹೆಚ್ಚುವರಿ ಮಳೆಯಾಗಿತ್ತು. ಈ ವರ್ಷವೂ ವಾಡಿಕೆಯಷ್ಟು, ತೆಲುಗು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಪೂರ್ವ ಮುಂಗಾರು ಮಳೆ ಬರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

24 ಗಂಟೆ ಕಾವಲು ಯಾವುದೇ ಸರ್ಕಾರಕ್ಕೂ ಕಷ್ಟ

0

ಶಿವಮೊಗ್ಗದಲ್ಲಿ ನಡೆದಂತ ಹರ್ಷನ ಕೊಲೆ ಸಂಬಂಧಿಸಿದಂತೆ ರಾಜ್ಯದ ಗೃಹ ಇಲಾಖೆ ಕಾರ್ಯವೈಖರಿಯನ್ನು ಕುರಿತು ಅನೇಕ ನಾಯಕರು ಟೀಕಿಸಿದ್ದರು. ಕುರಿತಂತೆ ಗೃಹಸಚಿವ ಆರಗ ಜ್ಞಾನೇಂದ್ರ ಅವರು ದಿನದ 24 ಗಂಟೆ ಯಾವುದೇ ಸರ್ಕಾರದಲ್ಲಿ ಕೂಡ ಕಾವಲು ಕಾಯಲು ಕಷ್ಟವಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

“ಶಿವಮೊಗ್ಗದಲ್ಲಿ ಪೊಲೀಸರು ಎಲ್ಲಾ ಕಾಲದಲ್ಲೂ ಅಲರ್ಟ್ ಆಗಿದ್ದಾರೆ. ಏಕೆಂದರೆ ಶಿವಮೊಗ್ಗ ಸೂಕ್ಷ್ಮ ಪ್ರದೇಶ. ಒಮ್ಮೊಮ್ಮೆ ಈ ರೀತಿ ನಡೆಯುತ್ತದೆ. ಪ್ರಕರಣದ ತನಿಖೆ ನಡೆಸಿ ಶಿಕ್ಷೆ ಕೊಡಿಸಿ ಮುಂದೆ ಈ ರೀತಿ ಆಗದಂತೆ ಸಂದೇಶ ರವಾನಿಸುತ್ತೇನೆ” ಎಂದು ಆರಗ ಜ್ಞಾನೇಂದ್ರ ಅವರು ಹೇಳಿದರು.

“ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಅಂಥ ಹಿರಿಯರು ಮಾತಿನ ಕುರಿತು ಚರ್ಚಿಸುವುದಿಲ್ಲ. ಅವರು ಸರ್ಕಾರ ನಡೆಸಿದವರು. ಅವರ ಸರ್ಕಾರದಲ್ಲಿ ಎಲ್ಲಾ ಶಾಂತಿ-ಸುವ್ಯವಸ್ಥೆ ಸಮಾಧಾನವಾಗಿತ್ತು ಎಂದು ಎದೆ ಮುಟ್ಟಿಕೊಂಡರು ಹೇಳಲಿ, ಹಿಂದಿ ಏನೇನು ನಡೆದಿತ್ತು, ಅವರ ಪಕ್ಷದ ಎಷ್ಟು ಗೃಹ ಸಚಿವರು ರಾಜೀನಾಮೆ ನೀಡಿದ್ದರು ಎಂಬುದನ್ನು ಹೇಳಲಿ” ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಅವರು ಡಿಕೆಶಿ ಅವರಿಗೆ ಮಾತಿನ ಮೂಲಕ ಟಾಂಗ್ ಕೊಟ್ಟಿದ್ದಾರೆ.

“ಹತ್ಯೆ ಘಟನೆ ರಾಜಕೀಯ ಪ್ರೇರಿತವೇ ಎಂಬ ಆಯಾಮದಿಂದಲೂ ತನಿಖೆಯಾಗಲಿದೆ. ಇದರಿಂದ ಕಾಂಗ್ರೆಸ್ ಸಹಿತ ಯಾರಿದ್ದಾರೆ ಎಂಬುದರ ಬಗ್ಗೆಯೂ ತನಿಖೆಯಾಗಲಿದ್ದು, ಎಲ್ಲವೂ ಹೊರಬರಲಿದೆ” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

“ಶಿವಮೊಗ್ಗದ ಕೋಟೆ ಮತ್ತು ದೊಡ್ಡಪೇಟೆ ಪೋಲಿಸ್ ಠಾಣೆಗಳಲ್ಲಿ ಯಾರ್ಯಾರ ಮೇಲೆ ಕೇಸ್ ಗಳಿವೆ? ಯಾವರೀತಿ ಕೇಸ್ ಗಳಿವೆ?ಎಷ್ಟರ ಮೇಲೆ ಕ್ರಮಕೈಗೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿ ವಿವರ ಎಲ್ಲ ಮಾಹಿತಿ ಪಡೆಯಲಾಗುತ್ತದೆ.
ಪೋಲಿಸ್ ಗೆ ಈ ಸಂಗತಿಗಳು ಗೊತ್ತಿದ್ದವೆ? ಗೊತ್ತಿದ್ದೂ ಕ್ರಮಕೈಗೊಳ್ಳದಿರಲು ಕಾರಣವೇನು? ಈ ರೀತಿ ಪೋಲಿಸ್ ವ್ಯವಸ್ಥೆಯ ಮೇಲೂ ತನಿಖೆ ಕೈಗೊಳ್ಳಲಾಗುವುದು”
ಎಂದು ಗೃಹ ಸಚಿವ
ಆರಗ ಜ್ಞಾನೇಂದ್ರ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.