Thursday, February 19, 2026
Thursday, February 19, 2026
Home Blog Page 1693

ರಾಷ್ಟ್ರದ ಬೆಳವಣಿಗೆ ಅಲ್ಲಿನ ಯುವಜನತೆಯ ಆತ್ಮದಲ್ಲಿದೆ- ಅಶ್ವತ್ಥನಾರಾಯಣ

0

ಆಧುನಿಕ ಕಾಲದ ಮೇಧಾವಿ ವಿಜ್ಞಾನಿ ಸರ್ ಸಿ ವಿ ರಾಮನ್ ಅವರಿಗೆ ದೇಶದ ಪ್ರಜೆಗಳಾದ ನಾವೆಲ್ಲರೂ ಬೇರೆಬೇರೆ ರೀತಿಯಲ್ಲಿ ಗೌರವವನ್ನು ಸಲ್ಲಿಸುತ್ತೇವೆ. ನಿತ್ಯವೂ ಅವರ ಸ್ಮರಣೆ ನಮ್ಮ ನೆನಪು ಮತ್ತು ನಡವಳಿಕೆಯಲ್ಲಿ ಇದ್ದೇ ಇರುತ್ತದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ತಿಳಿಸಿದರು.

ರಾಷ್ಟ್ರವೊಂದರ ನಿಜವಾದ ಬೆಳವಣಿಗೆಯು ಅಲ್ಲಿನ ಯುವಕ ಹಾಗೂ ಯುವತಿಯರು ಹೃದಯ, ಮನಸ್ಸು, ದೈಹಿಕ ಶರೀರ ಮತ್ತು ಆತ್ಮಗಳಲ್ಲಿ ಸಂಭವಿಸುತ್ತದೆ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದರು.

ಸರ್ ಸಿವಿ ರಾಮನ್ ಅವರು ಹುಟ್ಟಿದ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಾಗಿ ಆಚರಿಸುತ್ತಿಲ್ಲ. ಬದಲಿಗೆ, ರಾಮನ್ ಅವರು ‘ಅಣುಗಳಿಂದ ಬೆಳಕಿನ ಚದುರುವಿಕೆ’ ಕುರಿತ ಸಿದ್ಧಾಂತವನ್ನು ಪ್ರತಿಪಾದಿಸಿದ ದಿನವನ್ನು ‘ವಿಜ್ಞಾನ ದಿನಾಚರಣೆಯಾಗಿ’ ಆಚರಿಸುತ್ತಿದ್ದೇವೆ. ರಾಮನ್ ಅವರ ಈ ಪ್ರತಿಪಾದನೆ ಈಗ ಜಗತ್ತಿನಾದ್ಯಂತ ರಾಮನ್ ಪರಿಣಾಮ ಎಂದೇ ಹೆಸರಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಸಚಿವರು ಹೇಳಿದರು.

ವಿಶ್ವದಾದ್ಯಂತ ರಾಮನ್ ಪರಿಣಾಮ ಎಂದೇ ಹೆಸರಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ವಿಜ್ಞಾನಕ್ಕೆ ತನ್ನದೆ ಆದ ಸೌಂದರ್ಯ ಹಾಗೂ ಗಹನತೆ ಇದೆ. ಇದರ ಜೊತೆಗೆ ಹಿಂದಿನ ವಿಜ್ಞಾನವು ನಾಳೆಯ ತಂತ್ರಜ್ಞಾನ ಎಂಬುದನ್ನು ಭಾರತೀಯರಾದ ನಾವೆಲ್ಲರೂ ನೆನಪಿಡಬೇಕಾಗಿದೆ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.

ವಿಜ್ಞಾನ ದಿನಾಚರಣೆಯಂದು ವೈಜ್ಞಾನಿಕ ಧೋರಣೆಯಿಂದ ಅನಕ್ಷರತೆ, ಮೂಢನಂಬಿಕೆ ಮತ್ತು ಬಡತನದಂತಹ ಅನಿಷ್ಟಗಳ ವಿರುದ್ಧ ಹೋರಾಡುವ ನಮ್ಮ ಸಂಪರ್ಕ ಸಂಕಲ್ಪವನ್ನು ಮತ್ತಷ್ಟು ಧೀಮಂತ ಗೊಳಿಸುವ ಸಮಯವು ಆಗಿದೆ ಎಂದು ಸಚಿವರು ಈ ವೇಳೆ ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮಾನ ಇದ್ದರೆ ಮೇಕೆದಾಟು ಯೋಜನೆಗೆ ಅನುಮತಿ ತನ್ನಿ-ಡಿಕೆಶಿ

0

ಯಾವ ಪ್ರಕರಣ ದಾಖಲಿಸಿದರೂ ಹೆದರುವುದಿಲ್ಲ. ಸಿದ್ದರಾಮಯ್ಯ ಹೇಳಿರುವಂತೆ ನಾವೆಲ್ಲರೂ ಜೈಲಿಗೆ ಹೋಗುತ್ತೇವೆ. ಯಾವ ಜೈಲು ಅಂತ ಹೇಳಿದರೆ ನಾವೇ ಹೋಗುತ್ತೇವೆ. ನಮ್ಮ ಯಾತ್ರೆಗೆ ಬಿಜೆಪಿ ನಾಯಕರು ಸಹ ಬರಬೇಕು ಎಂದು ಡಿ.ಕೆ. ಕುಮಾರ್ ಅವರು ತಿಳಿಸಿದ್ದಾರೆ.

ಇದು ನಮ್ಮ ಹೋರಾಟ ಅಲ್ಲ. ರಾಜ್ಯದ ಜನರ ಬದುಕಿಗಾಗಿ ಹೋರಾಟ. ಬೆಂಗಳೂರು ಜನರ ಕುಡಿಯುವ ನೀರಿಗಾಗಿ ಹೋರಾಟ. ಅದಕ್ಕಾಗಿ ಐದು ದಿನ ಬಿಸಿಲಿದ್ದರೂ ನಾವು ಹೆಜ್ಜೆ ಹಾಕೋಣ, ಇಂದೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಮೇಕೆದಾಟುಗಾಗಿ ಸಂಸತ್ ಭವನದ ಎದುರು ಪಕ್ಷಾತೀತವಾಗಿ ಧರಣಿ ಮಾಡಿದ್ದೆವು. ಈಗ ಅದೇ ಯೋಜನೆ ಕಾರ್ಯರೂಪಕ್ಕೆ ತನ್ನಿ ಎಂದು ಪಾದಯಾತ್ರೆ ಮಾಡುತ್ತಿದ್ದೇವೆ. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಎರಡು ದಿನಗಳ ಪರಿಸರ ಇಲಾಖೆ ಅನುಮತಿ ಪಡೆದು ಯೋಜನೆ ಆರಂಭಿಸಬಹುದು. ನಾವು ಆಗ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಇದೇರೀತಿ ಬಂದು ಬೆಂಬಲ ಸೂಚಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಮೇಕೆದಾಟು ಯೋಜನೆ ವಿಳಂಬಕ್ಕೆ ಬಿಜೆಪಿಯೇ ಅಡ್ಡಿಯಾಗಿದೆ. ಯೋಜನೆಗೆ ಪರಿಸರ ಅನುಮತಿ ತರಲು ಆಸಕ್ತಿ ವಹಿಸುತ್ತಿಲ್ಲ ಎಂದು ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ನಮ್ಮ ಹೋರಾಟ ಜನರಿಗೆ ನೀರು ತರುವುದಾಗಿದೆ. ಆದರೆ ಬಿಜೆಪಿ ಸರ್ಕಾರ ಈ ಯೋಜನೆಯನ್ನು ರಾಜಕೀಯ ವಿಚಾರದಲ್ಲಿ ಮಾತನಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಮೊದಲ ಹಂತದ ಸೇರಿದ್ದ ಜನಸ್ತೋಮ ನೋಡಿ, ಹೊಟ್ಟೆ ಉರಿಯಿಂದಾಗಿ ಬಿಜೆಪಿ ಸುಳ್ಳಿನ ಕೊರೋನಾ ಪ್ರಕರಣದ ಕಥೆ ಹೇಳಿ ನಮಗೆ ಅಡ್ಡಿಪಡಿಸಿತ್ತು ಎಂದು ಕುಟುಕಿದರು.

ಸಿಎಲ್ ಪಿ ನಾಯಕ ಸಿದ್ದರಾಮಯ್ಯ, 2017 ರಲ್ಲೇ ನಾವು ಡಿಪಿಆರ್ ಸಿದ್ಧಪಡಿಸಿದ್ದೇವೆ. ಆದರೆ, ಬಿಜೆಪಿ ರಾಜ್ಯದ ಜನರಿಗೆ ಸುಳ್ಳು ಹೇಳುತ್ತಿದೆ. ಸುಳ್ಳು ಜಾಹಿರಾತುಗಳ ಮೂಲಕ ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಕಾಲ ಏನನ್ನೂ ಮಾಡಿಲ್ಲ ಎಂದು ಬಿಂಬಿಸುತ್ತಿದೆ. ರಾಜ್ಯದ ಜನರಿಗೆ ಬಿಜೆಪಿ ಮಾಡುತ್ತಿರುವ ಅನ್ಯಾಯ ಖಂಡಿಸಿ ಈ ಹೋರಾಟ ನಡೆಸಲಾಗುತ್ತಿದೆ. ಬಿಜೆಪಿಗೆ ಮಾನ ಇದ್ದರೆ, ಕೂಡಲೇ ಕೇಂದ್ರದಿಂದ ಮೇಕೆದಾಟು ಯೋಜನೆಗೆ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಪಾದಯಾತ್ರೆ ನೀರಿಗಲ್ಲಸಿಎಂ ಹುದ್ದೆಗೆ- ಪ್ರಹ್ಲಾದ ಜೋಷಿ

0

ಸಿದ್ದರಾಮಯ್ಯ ಪಾದಯಾತ್ರೆ ಮಾಡಿ ಮುಖ್ಯಮಂತ್ರಿ ಹುದ್ದೆ ಪಡೆದಂತೆ, ತಾನು ಪಾದಯಾತ್ರೆ ಮಾಡಿದರೆ ಸಿಎಂ ಆಗುತ್ತೇನೆಂಬ ಭ್ರಮೆಯಲ್ಲಿ ಡಿ.ಕೆ. ಶಿವಕುಮಾರ್ ಇದ್ದಾರೆ. ಅವರ ಕನಸು ನನಸಾಗುವುದಿಲ್ಲ. ಹೆಚ್ಚೆಂದರೆ ಅವರು ಪ್ರತಿಪಕ್ಷ ನಾಯಕರಾಗ ಬಹುದು. ಅದಕ್ಕಾಗಿ ಅವರಿಗೆ ಅಭಿನಂದಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನಾಯಕರು ಸುಳ್ಳಿನ ಸರದಾರರು. ಇದು ನೀರಿಗಾಗಿ ಅಲ್ಲ. ಮುಖ್ಯಮಂತ್ರಿ ಪದವಿಗಾಗಿ ನಡೆಯುತ್ತಿರುವ ಪಾದಯಾತ್ರೆ. ಸಿದ್ದರಾಮಯ್ಯ ಅವರಿಗೆ ಈ ಪಾದಯಾತ್ರೆ ನಡೆಯುವುದು ಬೇಕಿಲ್ಲ. ಆದರೆ, ದೆಹಲಿಗೆ ಕರೆಸಿ ರಾಹುಲ್ ಗಾಂಧಿ ಸೂಚಿಸಿದ್ದಾರೆ ಎಂಬ ಕಾರಣಕ್ಕೆ ಒಲ್ಲದ ಮನಸ್ಸಿನಿಂದ ಅವರು ಪಾಲ್ಗೊಳ್ಳುತ್ತಿರುವುದು ಎಂದು ಪ್ರಹ್ಮಾದ ಎಂದು ಹೇಳಿದರು.

ದೇಶದಲ್ಲಿ ಕಾಂಗ್ರೆಸ್ ಬಹಳ ವರ್ಷಗಳ ಕಾಲ ಆಡಳಿತ ನಡೆಸಿದೆ. ಅವರಿಗೆ ವಿರೋಧಪಕ್ಷವಾಗಿ ಯು ಕೆಲಸ ಮಾಡುವ ಅಭ್ಯಾಸ ಆಗಬೇಕಾಗಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ 2023 ಹಾಗೂ 2024ರ ನಂತರವೂ ಅವರು ಧರಣಿ ಗೆ ತಯಾರಿ ನಡೆಸುತ್ತಿರುವ ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಮಹದಾಯಿ ಬಗ್ಗೆ ಕಾಂಗ್ರೆಸ್ ಕಾಲದಲ್ಲಿ ಈ ಸಮಸ್ಯೆ ಇರಲಿಲ್ಲವೇ? ಆಗೇಕೆ ಬಗೆಹರಿಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ದಿನೇಶ್ ಗುಂಡೂರಾವ್ ಅವರೇ ಗೋವಾ ಚುನಾವಣೆ ಉಸ್ತುವಾರಿ ಯಾಗಿದ್ದರು. ಅಲ್ಲಿ ಏಕೆ ಯಾವುದೇ ಹೇಳಿಕೆ ನೀಡಿಲ್ಲ. ಎಚ್. ಕೆ. ಪಾಟೀಲ್ ಸಚಿವರಾಗಿದ್ದಾಗ ಏಕೆ ಸಮಸ್ಯೆ ಬಗೆಹರಿದಿಲ್ಲ. ನಾವು ರಾಜ್ಯದ ಕುರಿತು ನಮ್ಮ ನಿಲುವಿಗೆ ಬದ್ದರಾಗಿದ್ದೇವೆ ಎಂದು ಹೇಳಿದರು.

ಎಸ್ ಡಿ ಪಿ ಐ, ಪಿಎಫ್ ಐ, ಸಿಎಸ್ಐ ಸಂಘಟನೆಗಳ ನಿಷೇಧಕ್ಕೆ ನನ್ನ ಬೆಂಬಲವಿದೆ. ಆದರೆ, ಇದರಲ್ಲಿ ಕೆಲ ತಾಂತ್ರಿಕ ತೊಂದರೆ ಇದೆ ಎಂದು ಕೇಳಿದ್ದೇನೆ. ಅದನ್ನು ಪರಿಹರಿಸಿ ಕ್ರಮಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಹುಬ್ಬಳ್ಳಿಯಲ್ಲಿ ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉಕ್ರೇನ್ ನಿಂದ ವಿದ್ಯಾರ್ಥಿನಿ ಸುರಕ್ಷಿತವಾಗಿ ಶಿವಮೊಗ್ಗ ತಲುಪಿದ್ದಾರೆ

0

ಉಕ್ರೇನ್ ನಿಂದ ಶಿವಮೊಗ್ಗಕ್ಕೆ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಭಾನುವಾರ ತಲುಪಿದ್ದಾರೆ. ವಿದ್ಯಾನಗರದ ಹನುಮಂತಯ್ಯ, ಕಲಾವತಿ ದಂಪತಿಯ ಪುತ್ರಿಯಾದ ಕೆ.ಎಚ್. ಜಯಶೀಲ ಅವರು ಸುರಕ್ಷಿತವಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ.

ಭಾರತದಲ್ಲಿ ವೈದ್ಯಕೀಯ ಶಿಕ್ಷಣ ದುಬಾರಿ ಇದೆ. ಖಾಸಗಿ ಸೀಟ್ ಗಾಗಿ 1 ಕೋಟಿ ರೂ.ಗೂ ಹೆಚ್ಚು ಹಣ ಸಂದಾಯ ಮಾಡಬೇಕು. ಅದೇ ಉಕ್ರೇನ್ ನಲ್ಲಿ ಐದು ವರ್ಷಗಳ ಕೋರ್ಸ್ ಗೆ 25 ಲಕ್ಷ ರೂ. ಸಾಕು ಎಂದು ತಿಳಿಸಿದರು.

ಭಾರತದ 15 ವಿದ್ಯಾರ್ಥಿಗಳು ಖಜಕಿಸ್ತಾನ್ ಮೂಲಕ ಭಾರತಕ್ಕೆ ಬರಲು ನಿರ್ಧರಿಸಿದ್ದೆವು. ಫೆ.22ರ ರಾತ್ರಿ ಹಾಸ್ಟೆಲ್ ಬಿಟ್ಟು 23ರ ಬೆಳಿಗ್ಗೆ ವಿಮಾನ ನಿಲ್ದಾಣ ತಲುಪಿದೆವು. ಅಲ್ಲಿ 24 ಗಂಟೆ ಕಾದು ನಂತರ ವಿಮಾನ ಹಾರಾಟ ಆರಂಭಿಸಿತು ಎಂದು ತಿಳಿಸಿದ್ದಾರೆ.

ಹರ್ಷ ಕೊಲೆ ಪ್ರಕರಣ ವಿಚಾರಣೆ ಆರಂಭ

0

ಬಜರಂಗ ದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣದ 10 ಆರೋಪಿಗಳನ್ನು ಜಯನಗರ ಠಾಣೆಗೆ ಕರೆತಂದು ಭಾನುವಾರ ವಿಚಾರಣೆಗೊಳಪಡಿಸಲಾಗಿದೆ.

ಕ್ಲಾರ್ಕ್ ಪೇಟೆಯ ಖಾಸಿಫ್ (32), ನದೀಮ್ (23), ಆಸೀಫ್ ಖಾನ್ (21), ರಿಯಾನ್ (22), ನಿಹಾಲ್ (23), ಜಿಲಾನ್ ,ಫರಾಜ್ ಪಾಶಾ (24), ಅಬ್ದುಲ್ ರೋಷನ್ (24), ಜಾಫರ್ ಸಾದಿಕ್ (55) ಎಂಬುವವರನ್ನು ಪೋಲಿಸ್ ಕಸ್ಟಡಿಗೆ ಪಡೆದಿದ್ದು ವಿಚಾರಣೆ ಆರಂಭಗೊಂಡಿದೆ ಎಂದು ತಿಳಿದುಬಂದಿದೆ.

ಶಿವಮೊಗ್ಗ ನಗರದಲ್ಲಿ ಮಾರ್ಚ್ 4 ರವರೆಗೆ ಸೆಕ್ಷನ್ 144 ನಿಷೇಧಾಜ್ಞೆ ಮುಂದುವರಿಯಲಿದೆ. ಆದರೂ ಬೆಳಿಗ್ಗೆ ಆರರಿಂದ ಸಂಜೆ 7ರವರೆಗೆ ವಹಿವಾಟಿಗೆ ಅವಕಾಶ ನೀಡಲಾಗಿದೆ. ಸಂಜೆ ಏಳರಿಂದ ಬೆಳಿಗ್ಗೆ 6ರವರೆಗೆ ತುರ್ತು ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಅವರು ತಿಳಿಸಿದ್ದಾರೆ.

ಬಿಜೆಪಿಯನ್ನ ಮತ್ತೆ ಅಧಿಕಾರಕ್ಕೆ ತರುವುದೇ ಗುರಿ- ಬಿಎಸ್ ವೈ

0

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 14 ರೈತರಿಗೆ ಉಚಿತವಾಗಿ ಟ್ರ್ಯಾಕ್ಟರ್ ವಿತರಣೆ ಮಾಡುವ ಮೂಲಕ ತಮ್ಮ 80ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ರಾಜ್ಯದ ನಾನಾ ಭಾಗಗಳಲ್ಲಿ ಬಿಎಸ್ ವೈ ಜನ್ಮದಿನಾಚರಣೆಯ ಕಾರ್ಯಕ್ರಮಗಳು ನಡೆದಿವೆ. ಟ್ರಾಕ್ಟರ್ ವಿತರಣೆಗೂ ಮುನ್ನ ಸಂಜಯನಗರದ ರಾಧಾಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ಬಿಎಸ್ ವೈ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿ.ವೈ . ವಿಜಯೇಂದ್ರ ಸೇರಿದಂತೆ ಕುಟುಂಬಸ್ಥರು ಜೊತೆಯಲ್ಲಿದ್ದರು.

ಕಾವೇರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ ಪುನಹ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿಯಾಗಿದ್ದು, ಬಜೆಟ್ ಅಧಿವೇಶನದ ಬಳಿಕ ಪ್ರವಾಸ ಮಾಡಲಾಗುವುದು. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕೆನ್ನುವುದು ಜನರ ಅಪೇಕ್ಷೆಯಾಗಿದೆ.

ಬಜೆಟ್ ಅಧಿವೇಶನದ ಬಳಿಕ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳುತ್ತೇವೆ. ಜನರು ನಮಗೆ ಆಶೀರ್ವದಿಸುವ ಸಂಪೂರ್ಣ ವಿಶ್ವಾಸವಿದೆ ಎಂದು ಬಿಎಸ್ ವೈ ಹೇಳಿದರು.

ಹಿಂದೂ ದೇವಾಲಯಗಳನ್ನ ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವ ಚಿಂತನೆ

0

ರಾಜ್ಯದಲ್ಲಿನ ಹಿಂದೂ ದೇವಾಲಯಗಳನ್ನು ಸರಕಾರ ನಿಯಂತ್ರಣದಿಂದ ಮುಕ್ತಗೊಳಿಸುವ ನಿಲುವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಧಾರ್ಮಿಕ ಮುಖಂಡರು ಸೇರಿ ಚರ್ಚೆ ನಡೆಸಿದ್ದಾರೆ.
ಬೆಂಗಳೂರಿನ ವಿ.ವಿ. ಪುರಂನ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ರಾಷ್ಟ್ರ ಧರ್ಮ ಸಂಘಟನೆಯು ಸಭೆಯನ್ನು ಆಯೋಜಿಸಿತ್ತು. ಸ್ವರ್ಣವಲ್ಲಿ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ನೇತೃತ್ವದಲ್ಲಿ ಸಭೆ ನಡೆಯಿತು.
ಬೇಲಿಮಠದ ಶ್ರೀ ಶಿವರುದ್ರ ಮಹಾಸ್ವಾಮಿ, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮಿ, ಶ್ರೀ ವಾಸವಿ ಪೀಠಾಧ್ಯಕ್ಷರಾದ ಶ್ರೀ ಸಚ್ಚಿದಾನಂದ ಸ್ವಾಮಿ ಪಾಲ್ಗೊಂಡಿದ್ದರು.

ಧಾರ್ಮಿಕ ದತ್ತಿ ಇಲಾಖೆಯ ಮಾಜಿ ಆಯುಕ್ತ ನಂದಕುಮಾರ್, ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಸುರೇಂದ್ರ ಹೆಗಡೆ, ತಿರುಮಲ ತಿರುಪತಿ ದೇವಾಲಯ ಆಡಳಿತ ಮಂಡಳಿ ಸದಸ್ಯ ಶಶಿಧರ್, ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ಸುಪ್ರೀಂಕೋರ್ಟಿನ ಹಿರಿಯ ನ್ಯಾಯವಾದಿ ಅರುಣಾಚಲ ಹೆಗಡೆ, ಹಾಗೂ ರಾಷ್ಟ್ರ ಧರ್ಮ ಸಂಘಟನೆಯ ಅಧ್ಯಕ್ಷ ಸಂತೋಷ್ ಕೆಂಚಾಂಬ ಸಭೆಯಲ್ಲಿ ಪಾಲ್ಗೊಂಡಿದ್ದರು.

ಕೆಪಿಎಸ್ ಸಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆ ನೇಮಕಾತಿ ಅಧಿಸೂಚನೆ ಪ್ರಕಟ

0

ಈಗಾಗಲೇ ಪ್ರಕಟಿಸಿರುವಂತೆ ರಾಜ್ಯ ಸರ್ಕಾರ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಕೆಲ ಬದಲಾವಣೆಗಳನ್ನು ಜಾರಿಗೆ ತರಲಾಗುತ್ತಿದೆ.

ಈಗ ಕರಡು ಅಧಿಸೂಚನೆ ಪ್ರಕಟಿಸಿದೆ.ಫೆ.18 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ನೇಮಕ ಪ್ರಕ್ರಿಯೆಯಲ್ಲಿನ ವ್ಯಕ್ತಿತ್ವ ಪರೀಕ್ಷೆ ( ಸಂದರ್ಶನ) ಅಂಕವನ್ನು 50ರಿಂದ 25ಕ್ಕೆ ಇಳಿಸುವ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಇದಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆ ಈಗ ಪ್ರಕಟಗೊಂಡಿದೆ.
ಇದಕ್ಕೆ 15 ದಿನಗಳ ಒಳಗೆ ಸಲಹೆ ನೀಡಲು ಅಥವಾ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.

ನೇಮಕದಲ್ಲಿ ಇನ್ನಷ್ಟು ಪಾರದರ್ಶಕತೆ ತಂದು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ತಿದ್ದುಪಡಿ ಮಾಡಲಾಗಿದೆ. ಇದುವರೆಗೆ ಅಧಿಸೂಚನೆಯನ್ನು ಹೊರಡಿಸಿ, ಪರೀಕ್ಷಾ ಪ್ರಕ್ರಿಯೆಯನ್ನು ಪ್ರಾರಂಭಿಸಿರದ ನೇಮಕ ಗಳಿಗೆ ಈ ಬದಲಾವಣೆ ಅನ್ವಯವಾಗಲಿದೆ ಎಂದು ತಿಳಿದುಬಂದಿದೆ.

ಗ್ರೂಪ್ ಸಿ ಮತ್ತು ಡಿ ಹುದ್ದೆಗಳಂತೆ ಇನ್ನು ಮುಂದೆ ಗ್ರೂಪ್ ಬಿ ಹುದ್ದೆಗಳಿಗೂ ಸಂದರ್ಶನ ನಡೆಸಲಾಗುವುದಿಲ್ಲ. ಇದುವರೆಗೆ ನಡೆಯುತ್ತಿದ್ದ ತಲಾ 200 ಆಂಕಗಳ ನಡುವೆ ಲಿಖಿತ ಪರೀಕ್ಷೆಗಳಿಗೆ ಬದಲಾಗಿ ಇನ್ನು ಮುಂದೆ ತಲಾ 300 ಅಂಕಗಳ ಎರಡು ಲಿಖಿತ ಪರೀಕ್ಷೆ ನಡೆಯಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉರಿಯುತ್ತಿದೆ ಉಕ್ರೇನ್

0

ಉರಿಯುತ್ತಿದೆ ಉಕ್ರೇನ್.!
ಆದರೆ ನಾವು ಆ ದೇಶದ ಅಧ್ಯಕ್ಷ ಝೆಲೆನ್ಸ್ಕಿ ಅವರ ಧೈರ್ಯ ಮೆಚ್ವಲೇಬೇಕಿದೆ. ಒಬ್ಬ ಕಲಾವಿದನಾಗಿ ಸಾಮಾಜಿಕ ಕ್ಷೇತ್ರದಲ್ಲಿದ್ದು ಜನಪ್ರಿಯತೆ ಗಳಸಿಕೊಂಡಿದ್ದಾರೆ.ಆದರೆ ರಾಜಕೀಯದಲ್ಲೂ ಅವರಲ್ಲಿನ
ಕಲಾವಿದನಲ್ಲದ ಘಟ್ಟಿಯಾದ ರಾಜಕಾರಣಿ ನಮಗೆ ಕಾಣತೊಡಗಿದ್ದಾನೆ.

ಉಕ್ರೇನಿನ ಪ್ರತಿಯೊಬ್ಬ ನಾಗರಿಕನನ್ನೂ ಹುರಿದುಂಬಿಸುತ್ತಿರುವ ಅವರ
ಆತ್ಮವಿಶ್ವಾಸ ವಿಶ್ವದ ಎಲ್ಲರ ದೇಶಗಳ
ರಾಜತಾಂತ್ರಿಕರ ಮನ ಸೆಳೆದಿದೆ.

ಪ್ರತಿಯೊಬ್ಬರಿಗೂ ಗನ್ ನೀಡುವುದಾಗಿ ಹೇಳಿದ ಅವರ ಮಾತುಗಳು ಎಂತಹ ಉಕ್ರೇನ್
ನಾಗರಿಕನನ್ನೂ ಬಡಿದೆಬ್ಬಿಸುವಂತಿದೆ.
ಅಲ್ಲಿನ ಸಂಸದೆ ಕೀರಾ ,ತಾವೂ ಗನ್ ಹಿಡಿದು ರಷ್ಯದ ವಿರುದ್ಧ ಹೋರಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ಈಗ ತಾನೆ ಟೀವಿಯೊಂದರಲ್ಲಿ
ಒಂದು ವಿಶೇಷ ದೃಶ್ಯ ನೋಡಿದೆವು.
ಉಕ್ರೇನಿನ ರೈತ ತನ್ನ ಟ್ರ್ಯಾಕ್ಟರ್ ಗೆ
ರಷ್ಯನ್ ಟ್ಯಾಂಕರನ್ನ ಕಟ್ಟಿ ಎಳೆದೊಯ್ಯುತ್ತಿದ್ದ. ಅಬ್ಬ ಆತನ ದೇಶಭಕ್ತಿಯೆ! .

ಅತೀ ಸಣ್ಣಸಂಗತಿ ಕೂಡ ಇಂತಹ ಕ್ಲಿಷ್ಟ ಸನ್ನಿವೇಶಗಳಲ್ಲಿ ಸಾಮೂಹಿಕವಾಗಿ ಶಕ್ತಿ ತುಂಬುತ್ತದೆ.
ವಿಶ್ವದ ಅನ್ಯ ರಾಷ್ಟ್ರಗಳು ರಷ್ಯದ
ಈ ಆಕ್ರಮಣ ಎದುರಿಸಲು ಯುದ್ಧೋಪಕರಣಗಳನ್ನ ನೆರವಿನ
ರೀತಿ ಸರಬರಾಜು ಮಾಡುತ್ತಿವೆ.

ಮುಖ್ಯವಾಗಿ ಯುರೋಪ್ ದೇಶಗಳು ಹಣಕಾಸು,ರಕ್ಷಣಾ ಸಲಕರಣೆಗಳನ್ನ ಕಳಿಸುತ್ತಿವೆ.
ಜರ್ಮನಿಯು ಟ್ಯಾಂಕರ್ ಗಳನ್ನ ಧ್ವಂಸಮಾಡಬಲ್ಲ 400 ಶಸ್ತ್ರಾಸ್ತ್ರ ಗಳು, 14 ಸೇನಾ ವಾಹನಗಳು ಮತ್ತು 10,000 ಟನ್ ಇಂಧನವನ್ನ
ಕಳೆದ ಶನಿವಾರವೇ ಕಳಿಸಿದೆ.

ಜೆಕ್ ಗಣರಾಜ್ಯವು 188 ಮಿಲಿಯನ್ ಕ್ರೌನ್ ಮೌಲ್ಯದ ರಕ್ಷಣಾ ಉಪಕರಣಗಳನ್ನ ನೀಡಿದೆ. ಅಲ್ಲದೇ ಇನ್ನೂ ಹೆಚ್ಚಿನ ಅಂದರೆ 400 ಮಿಲಿಯನ್ ಕ್ರೌನ್ ಮೌಲ್ಯದ ಸೇನಾ ಸಲಕರಣೆಗಳನ್ನ ಕಳಿಸುವುದಾಗಿ ಉಕ್ರೇನ್ ಗೆ ಸ್ಥೈರ್ಯ ತುಂಬಿದೆ.

ಈಚಿನ ವಿದ್ಯಮಾನದಲ್ಲಿ ಡ್ರೋನ್ ಉಪಕರಣದ ಉಪಯೋಗ ಬಹಳ ಅಗತ್ಯವುಳ್ಳದ್ದಾಗಿದೆ. ಟರ್ಕಿದೇಶದ ಈ ಡ್ರೋನ್ ಗಳು ಕೀವ್ ‌ನಗರವನ್ನ
ಹದ್ದುಗಣ್ಣಿನಿಂದ ನೋಡುತ್ತಿವೆ.
ಈ ನಡುವೆ ಗ್ರೀಕ್ ನಾಗರಿಕರು ರಷ್ಯಾ ಸೇನಾಪಡೆಯಿಂದ ಹತರಾಗಿದ್ದಾರೆ.
ಗ್ರೀಕ್ ಗೆ ರೋಶವುಕ್ಕಿದೆ. ಅದರ ಸೇಡು ತೀರಿಸಿಕೊಳ್ಳಲು ಉಕ್ರೇನಿಗೆ ರಕ್ಷಣಾ ಸಲಕರಣೆ ನೀಡುವುದಾಗಿ ಭರವಸೆ ಕೊಟ್ಟಿದೆ.

ಇಟಲಿಯು ಸುಮ್ಮನೆ ಕುಳಿತಿಲ್ಲ.
110 ದಶಲಕ್ಷ ಯೂರೋಗಳ ಹಣಕಾಸಿನ ನೆರವನ್ನ ಕೊಟ್ಟಿದೆ.
ರೊಮೇನಿಯ ದೇಶವು ಮೂರು ಮಿಲಿಯನ್ ಯೂರೋ ಮೌಲ್ಯದ
ರಕ್ಷಣಾ ಉಪಕರಣ,ಇಂಧನ ಉಕ್ರೇನಿಗೆ ರವಾನಿಸಿದೆ .
ಮದ್ದುಗುಂಡುಗಳು,ಬುಲೆಟ್ ಪ್ರೂಫ್
ಜಾಕೆಟ್,ಹೆಲ್ಮೆಟ್ ಗಳು,ಸೇನಾ ಉಪಕರಣ,ಆಹಾರ ಮತ್ತು ನೀರು ಸೇರಿದೆ.
ಈಗಾಗಲೇ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ತಮಗೆ ಹಣಕ್ಕಿಂತ
ಮದ್ದುಗುಂಡುಗಳು ಅವಶ್ಯ ಎಂಬ
ಹೇಳಿಕೆ ಕೊಟ್ಟಿದ್ದನ್ನ ಇಲ್ಲಿ ಸ್ಮರುಸಬಹುದಾಗಿದೆ.

ರೊಮೇನಿಯ ಇನ್ನೂ ಒಂದು ಹೆಜ್ಜೆ
ಮುಂದಾಗಿ ಮಾನವೀಯತೆ ಮೆರೆದಿದೆ.ಸಾರ್ವಜನಿಕ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ
ಶುಶ್ರೂಷೆಗೈಯಲು ಸಿಬ್ಬಂದಿಯನ್ನೂ
ಕಳಿಸಿದೆ.
ಜಾಣನಾಗಿರುವ ದೊಡ್ಡಣ್ಣ ಅಮೇರಿಕ 350 ಮಿಲಿಯನ್ ಅಮೆರಕನ್ ಡಾಲರ್ ಗಳ ಹಣಕಾಸಿನ ನೆರವು ಘೋಷಿಸಿದೆ.
ಅದೊಂದು ರೀತಿ ವಿಚಿತ್ರ. ನ್ಯಾಟೊ
ಪಡಗಳು ಉಕ್ರೇನಿನ ಹೊರಗಿವೆ.ಉಕ್ರೇನ್
ನ್ಯಾಟೋ ಸದಸ್ಯನಲ್ಲ

ರಷ್ಯಾದ ರಕ್ತಪೀಪಾಸುತನಕ್ಕೆ
ಪ್ರತಿಯಾಗಿ ವ್ಯಾಟಿಕನ್ ಸಿಟಿಯ ಪೋಪ್ ಫ್ರಾನ್ಸಿಸ್ ಅವರ ಮಾತುಗಳಿಲ್ಕಿ ಮನನೀಯ.
” ದೇವರು ಶಾಂತಿ ಬಯಸುವವರೊಂದಿಗೆ ಇರುತ್ತಾನೆ.
ಹಿಂಸೆ ಆಶ್ರಯಿಸುವವರ ಜೊತೆಗಿರುವುದಿಲ್ಲ.
ನಿಮ್ಮ ಬಂದೂಕುಗಳ ಶಬ್ದವಡಗಿಸಿ.
ಉಕ್ರೇನಿನಲ್ಲಿ ನಡೆಯುತ್ತಿರುವ ಯುದ್ಧ ನಿಲ್ಲಿಸಿ.”
ಈ ಕರೆ ಎರಡೂ ದೇಶಗಳು ಮಾತ್ರವಲ್ಲ.ಮುಂದೆ ಯುದ್ಧಕ್ಕಾಗಿ
ಹಪಹಪಿಸುವ ವಿಶ್ವದ ಇತರ ರಾಷ್ಟ್ರಗಳಿಗೂ ಅನ್ವಯಿಸುತ್ತದೆ.

ನೋಡೋಣ ಈಗ ಸಂಧಾನದ ಮಾತು ಕೇಳಿ ಬರುತ್ತಿದೆ. ಏನೇ ಆದರೂ ಒಂದು ರಾಷ್ಡ್ರದ ಅಣೆಕಟ್ಟು, ಗಗನಚುಂಬಿ ವಸತಿಗೃಹ ಸಮುಚ್ಚಯ, ಕಾರ್ಖಾನೆಗಳು, ವಿಮಾನ ನಿಲ್ದಾಣ, ಮುಂತಾದ ಆಸ್ತಿಯನ್ನ ಯುದ್ಧದ ನೆಪದಲ್ಲಿ
ನಾಶಗೈದರೆ ಆ ಆಸ್ತಿಯ ಸೃಷ್ಟಿ ಮತ್ತೆ ಹೇಗೆ ಸಾಧ್ಯ?
ಆ ಹಾನಿಯನ್ನ ಭರಿಸುವುದು
ಆ ದೇಶದ ಸಾಮಾನ್ಯ, ಬಡ ಪ್ರಜೆಯೇ ತಾನೆ??.

ಮೀಸಲಾತಿ ನಿರ್ಧರಿಸಿಯೇ ಜಿಪಂ ಮತ್ತು ತಾಪಂ ಚುನಾವಣೆ-ಸಚಿವ ಈಶ್ವರಪ್ಪ

0

ಒಬಿಸಿ ಮೀಸಲು ಇಲ್ಲದೆ ಜಿಪಂ, ತಾಪಂ ಚುನಾವಣೆ ನಡೆಸಬಾರದು ಎಂಬುದು ನಮ್ಮ ನಿರ್ಧಾರವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದ್ದಾರೆ.

ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಮೀಸಲಾತಿ ನೀಡಿಯೇ ಎಲೆಕ್ಷನ್ ನಡೆಸುವ ಬಗ್ಗೆ ಮುಖ್ಯಮಂತ್ರಿ ಮತ್ತು ಕಾನೂನು ತಜ್ಞರ ಜೊತೆ ಚರ್ಚೆ ನಡೆಸಲಾಗಿದೆ. ಚುನಾವಣೆ ಯಾವಾಗ ನಡೆಯುತ್ತದೆ ಎನ್ನುವುದು ಈಗಲೇ ಹೇಳಲು ಸಾಧ್ಯವಾಗದು ಎಂದು ಹೇಳಿದರು.

ಹಿಂದೂ-ಮುಸ್ಲಿಂ ಗಲಾಟೆಗಳು ಆಗಲು ಕಾಂಗ್ರೆಸ್ ಕಾರಣ. ಹಿಂದೂ-ಮುಸ್ಲಿಂ ದೂರ ದೂರವಾಗಬೇಕು ಎಂದು ರಾಜಕೀಯ ಮಾಡುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಜಾತಿ ಜಾತಿಗಳನ್ನು ಒಡೆದು ಅಧಿಕಾರ ಕಳೆದುಕೊಂಡಿದೆ. ಈಗ ಹಿಂದೂ-ಮುಸ್ಲಿಂ ವಿವಾದ ಹೆಚ್ಚಿಸಿ, ಪಕ್ಷ ನಿರ್ಣಾಮ ಮಾಡಿಕೊಳ್ಳುತ್ತಿದ್ದಾರೆ ಎಂದು ಕೆ.ಎಸ್. ಈಶ್ವರಪ್ಪ ಅವರು ಟಾಂಗ್ ನೀಡಿದ್ದಾರೆ.

ರಾಷ್ಟ್ರಧ್ವಜಕ್ಕೆ ಯಾರು ಅಪಮಾನ ಮಾಡುತ್ತಾರೋ ಅವರು ರಾಷ್ಟ್ರ ದ್ರೋಹಿಗಳು ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ರಾಷ್ಟ್ರಧ್ವಜಕ್ಕೆ ಮೊದಲು ಅಪಮಾನ ಮಾಡಿದ್ದೇ, ಡಿ.ಕೆ. ಶಿವಕುಮಾರ್. ಸದನದಲ್ಲಿ ರಾಷ್ಟ್ರಧ್ವಜ ಹಿಡಿದು ಎರಡು ಬಾರಿ ಅವಮಾನ ಮಾಡಿದವರು ಸಹ ಕಾಂಗ್ರೆಸ್ ನವರು. ರಾಷ್ಟ್ರಪ್ರೇಮ ಎನ್ನುವುದು ಕಾಂಗ್ರೆಸ್ ನವರಿಗೆ ಗೊತ್ತೇ ಇಲ್ಲ. ಡಿಕೆ ಶಿವಕುಮಾರ್ ಮೇಲೆ ರಾಷ್ಟ್ರದ್ರೋಹ ಕೇಸ್ ಹಾಕಿ ಒಳಗೆ ಹಾಕಬೇಕು ಎಂದು ಸಿಎಂ ಮತ್ತು ಗೃಹಸಚಿವರಿಗೆ ಮನವಿ ಮಾಡಿದ್ದೇನೆ ಎಂದು ಕೆ.ಎಸ್. ಈಶ್ವರಪ್ಪ ಅವರು ಹೇಳಿದ್ದಾರೆ.