Wednesday, September 9, 2026
Wednesday, September 9, 2026

ರೈತರೆ ಗಮನಿಸಿ! ಪರವಾನಗಿ ಇಲ್ಲದ ಪೀಡೆನಾಶಕ ವಿರುದ್ಧ ಕೃಷಿ ಇಲಾಖೆ ಕಠಿಣ ಕ್ರಮ

Date:

ದಿನಾಂಕ 17-02-2026 ರಂದು ಶ್ರೀಯುತ ರಾಮಕೃಷ್ಣ, ಮಾನ್ಯ ಜಂಟಿ ಕೃಷಿ ನಿರ್ದೇಶಕರು(ಜಾಗ್ರತ ಕೋಶ)
ಮೈಸೂರು, ರವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ನಗರದ ಮೂರ್ತಿ ಪ್ಯಾರಡೈಸ್ 60 ಅಡಿ ರಸ್ತೆ ವಿನೋಬನಗರದಲ್ಲಿರುವ
ಅಲ್ಟಿಮ ಸರ್ಚ್ ರವರ ಮಳಿಗೆಯಲ್ಲಿ ಪೀಡೆನಾಶಕಗಳ ಪರಿಶೀಲನೆ ನಡೆಸಲಾಯಿತು. ಮಳಿಗೆಯಲ್ಲಿ ರಾಟಾಲ್ ಎಂಬ 1008 ಕೆ
ಜಿ ಅಲ್ಟಿಮ ಸರ್ಚ್ ವಾಪಿ ಗುಜರಾತ್ ಕಂಪನಿಯ ಸುಮಾರು ರೂ.17,28,000/-(ಹದಿನೇಳು ಲಕ್ಷದ ಇಪ್ಪತ್ತೆಂಟು ಸಾವಿರ)
ಪೀಡೆನಾಶಕವನ್ನು ದಾಸ್ತಾನು ಮಾಡಿದ್ದು, ಸದರಿ ಪೀಡೆನಾಶಕವು ಸಿ ಐ ಆರ್ ಸಂಖ್ಯೆ ಹಾಗೂ ತಯಾರಿಕ ಪರವಾನಿಗೆ ಸಂಖ್ಯೆ
ನಮೂದಿಸದೆ ದಾಸ್ತಾನು ಮತ್ತು ಮಾರಾಟ ಮಾಡುತ್ತಿರುವು ಕಂಡು ಬಂದಿದ್ದು ಕೀಟನಾಶಕ ಅಧಿನಿಯಮ 1968 ಹಾಗೂ ಕೀಟನಾಶಕ
ಕಾಯಿದೆ 1971 ಉಲ್ಲಂಘನೆಯಾಗಿರುತ್ತದೆ. ಈ ಸಂಭಂದ ಸದರಿ ದಾಸ್ತಾನನ್ನು ಪಂಚರ ಸಮಕ್ಷಮ ಮಹಜರ್ ಜರುಗಿಸಿ ಜಪ್ತಿ
ಮಾಡಿ ಕಾನೂನು ಕ್ರಮ ಕೈಗೊಳ್ಳಲಾಯಿತು. ಈ ಸಂಧರ್ಭದಲ್ಲಿ ಜಾಗೃತ ಕೋಶ ಮೈಸೂರಿನ ಸಹಾಯಕ ಕೃಷಿ
ನಿರ್ದೇಶಕರುಗಳಾದ ಶ್ರೀ ಜಗದೀಶ್ ಮತ್ತು ಶ್ರೀ ಯಾದವ ಬಾಬು, ಶ್ರೀ ಬಿಸಿ ಶಶಿಧರ ಸಹಾಯಕ ಕೃಷಿ ನಿರ್ದೇಶಕರು (ಜಾಗೃತ
ಕೋಶ ಶಿವಮೊಗ್ಗ), ಶ್ರೀ ಮತಿ ಗಿರಿಜಾ ಪಟ್ಟಣ ಶೆಟ್ಟಿ, ಸಹಾಯಕ ಕೃಷಿ ನಿರ್ದೇಶಕರು, ಶ್ರೀ ಚೇತನ್ ಸಿ ಜಿ ತಾಂತ್ರಿಕ ಅಧಿಕಾರಿ
ಹಾಗೂ ಶ್ರೀ ಸುನಿಲ್ ಕೃಷಿ ಅಧಿಕಾರಿ ಕೃಷಿ ಇಲಾಖೆ ಶಿವಮೊಗ್ಗ ರವರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...