Youth Hostels Association of India ಸಾಹಸ ಹಾಗೂ ಪರಿಸರ ಪ್ರಿಯರಿಗೆ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಣೆಬೆನ್ನೂರು ‘ಕೃಷ್ಣಮೃಗ ಘಟಕ’ದಿಂದ ವಿಶೇಷ ಅವಕಾಶವೊಂದು ಒದಗಿ ಬಂದಿದೆ.
‘ಬ್ಲ್ಯಾಕ್ಬಕ್ – ದಿ ಗೇಟ್ವೇ ಟು ನಾರ್ತ್ ಕರ್ನಾಟಕ’ ಹೆಸರಿನಲ್ಲಿ ನಾಲ್ಕು ದಿನಗಳ ರಾಜ್ಯಮಟ್ಟದ ಶೈಕ್ಷಣಿಕ ತರಬೇತಿ ಹಾಗೂ ಚಾರಣ ಶಿಬಿರವನ್ನು ಆಯೋಜಿಸಲಾಗಿದೆ.
ಸೆಪ್ಟೆಂಬರ್ 25ರಿಂದ 28ರವರೆಗೆ ನಡೆಯಲಿರುವ ಈ ಶಿಬಿರವು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಲಿದೆ.
ಶಿಬಿರದಲ್ಲಿ ಪ್ರಕೃತಿ, ಪರಿಸರ ಹಾಗೂ ಸಾಹಸ ಚಟುವಟಿಕೆಗಳ ಜೊತೆಗೆ ವಿವಿಧ ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ ಕಲ್ಪಿಸಲಾಗಿದೆ.
ಶಿಬಿರದ ಮೊದಲ ದಿನವಾದ ಸೆಪ್ಟೆಂಬರ್ 25ರಂದು ಸಂಜೆ 4ರಿಂದ 6 ಗಂಟೆಯೊಳಗೆ ರಾಣೆಬೆನ್ನೂರಿನ ಅಶೋಕ್ ನಗರದ ಮೇಡ್ಲೇರಿ ರಸ್ತೆಯಲ್ಲಿರುವ ಓಂ ಆಸ್ಪತ್ರೆ ಬಳಿ ಶಿಬಿರಾರ್ಥಿಗಳು ವರದಿ ಮಾಡಿಕೊಳ್ಳಬೇಕು. ಅಲ್ಲಿಂದ ವಾಹನದ ಮೂಲಕ ಬೇಸ್ಕ್ಯಾಂಪ್ಗೆ ಕರೆದೊಯ್ಯಲಾಗುತ್ತದೆ.
ಎರಡನೇ ದಿನ ಮಲ್ಲಯ್ಯನ ಬೆಟ್ಟಕ್ಕೆ 12 ಕಿಲೋಮೀಟರ್ ಚಾರಣ ಕೈಗೊಳ್ಳಲಾಗುತ್ತದೆ. ಇದೇ ವೇಳೆ ಇರಾಣಿ ದೇವಸ್ಥಾನ ಹಾಗೂ ಕದರಮಂಡಲಗಿ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ.
Youth Hostels Association of India ಮೂರನೇ ದಿನ ಕೃಷ್ಣಮೃಗ ಅಭಯಾರಣ್ಯ ಹಾಗೂ ಚೌಡಯ್ಯದಾನಪುರ ದೇವಸ್ಥಾನಕ್ಕೆ ಭೇಟಿ ನೀಡಲಾಗುತ್ತದೆ. ಬಳಿಕ ದೇವರಗುಡ್ಡದಲ್ಲಿ ಬೆಳದಿಂಗಳ ಚಾರಣ ಆಯೋಜಿಸಲಾಗಿದ್ದು, ಒಟ್ಟು 18 ಕಿಲೋಮೀಟರ್ ಚಾರಣ ಇರಲಿದೆ.
ನಾಲ್ಕನೇ ದಿನ ವಿಶೇಷ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಮಧ್ಯಾಹ್ನದ ಊಟದ ಬಳಿಕ ಶಿಬಿರಾರ್ಥಿಗಳಿಗೆ ಬೀಳ್ಕೊಡುಗೆ ನೀಡಲಾಗುತ್ತದೆ.
ನಾಲ್ಕು ದಿನಗಳ ಈ ಶಿಬಿರಕ್ಕೆ ಪ್ರತಿ ವ್ಯಕ್ತಿಗೆ 6 ಸಾವಿರದ 500 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಶಿಬಿರ ಶುಲ್ಕದಲ್ಲಿ ವಾಸ್ತವ್ಯ, ಪೌಷ್ಟಿಕ ಸಸ್ಯಾಹಾರಿ ಊಟ, ಅರಣ್ಯ ಪ್ರವೇಶ ಮತ್ತು ಚಾರಣ ಶುಲ್ಕ, ಸ್ಥಳೀಯ ಸಾರಿಗೆ ಹಾಗೂ ಪರಿಣಿತ ಮಾರ್ಗದರ್ಶಕರ ವೆಚ್ಚ ಒಳಗೊಂಡಿದೆ.
ಶಿಬಿರದಲ್ಲಿ ಭಾಗವಹಿಸಲು ಆಸಕ್ತ ಪರಿಸರ ಹಾಗೂ ಚಾರಣಾಸಕ್ತರು ಸೆಪ್ಟೆಂಬರ್ 12ರೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಯೋಜಕರಾದ ಸುಧೀರ್ ಕುರುವತ್ತಿ – 94481 18237, ರೋಹಿತ್ ಅಗರ್ವಾಲ್ – 94498 56960 ಹಾಗೂ ಶಿಲ್ಪಾ ಎಂ. ಸಾವ್ಕಾರ್ – 98458 02364 ಅವರನ್ನು ಸಂಪರ್ಕಿಸಬಹುದಾಗಿದೆ.
ಹಾಗೆಯೇ yhai22k.rnr@gmail.com ಇ-ಮೇಲ್ ಮೂಲಕವೂ ಮಾಹಿತಿ ಪಡೆಯಬಹುದಾಗಿದೆ.
ಡಾ. ಮನೋಜ್ ಸಾವುಕಾರ್, ಕಾರ್ಯಾಧ್ಯಕ್ಷರು ತಿಳಿಸಿದ್ದಾರೆ.
