Thursday, February 19, 2026
Thursday, February 19, 2026
Home Blog Page 1694

ಮಾತುಕತೆಗೆ ಒಪ್ಪಿದ ಉಕ್ರೇನ್ -ರಷ್ಯಾ

0

ಉಕ್ರೇನ್ ಮೇಲೆ ನಾಲ್ಕನೆ ದಿನ ರಷ್ಯಾ ದಾಳಿ ಮುಂದುವರಿದ ನಡುವೆಯೇ ಉಭಯ ದೇಶಗಳು ಸಂಧಾನ ಮಾತುಕತೆಗೆ ಭಾನುವಾರ ಸಮ್ಮತಿ ವ್ಯಕ್ತಪಡಿಸಿವೆ.

ರಷ್ಯಾದ ರಾಯಭಾರಿಗಳು ಉಕ್ರೇನ್ ನ ರಾಯಭಾರಿಗಳನ್ನು ನಿಯೋಗವನ್ನು ಬೆಲಾರಸ್ ಗಡಿಯ ಅಜ್ಞಾತ ಪ್ರದೇಶದಲ್ಲಿ ಭೇಟಿಯಾಗಲಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕಿ ಅವರ ಕಚೇರಿ ತಿಳಿಸಿದೆ. ಆದರೆ ಮಾತುಕತೆಯ ಸಮಯವನ್ನು ತಿಳಿಸಿಲ್ಲ.

ಉಕ್ರೇನ್ ಜೊತೆ ಮಾತುಕತೆಗಾಗಿ ನಿಯೋಗವನ್ನು ಬೆಲಾರಸ್ ಗೆ ಕಳುಹಿಸಲಾಗಿದೆ ಎಂದು ರಷ್ಯಾ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಉಕ್ರೇನ್ ಈ ವಿಷಯವನ್ನು ಖಚಿತಪಡಿಸಿದೆ. ಇದಕ್ಕೂ ಮುಂಚೆ ರಷ್ಯಾದ ಭಾರಿ ಸೇನೆ ಜಮಾವಣೆಗೊಂಡಿರುವ ಬೆಲಾರಸ್ ನಲ್ಲಿ ಮಾತುಕತೆಗೆ ಬರುವಂತೆ ಪುಟಿನ್ ನೀಡಿದ ಪ್ರಸ್ತಾಪವನ್ನು ಉಕ್ರೇನ್ ತಿರಸ್ಕರಿಸಿತ್ತು. ಮಾತುಕತೆಯ ಸ್ಥಳದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಆದ್ದರಿಂದ ಎರಡೂ ದೇಶಗಳು ಗಡಿಯ ಅಜ್ಞಾತ ಸ್ಥಳವೊಂದರಲ್ಲಿ ಮಾತುಕತೆಗೆ ಮುಂದಾಗಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೆಳದಿ ಉತ್ಸವ ಸರಳ ಉದ್ಘಾಟನೆ

0

ಕರ್ನಾಟಕದ ಇತಿಹಾಸದಲ್ಲಿ ಸಾಗರ ತಾಲೂಕಿನ ಕೆಳದಿ ತನ್ನದೇ ಆದಂತಹ ಖ್ಯಾತಿಯನ್ನು ಪಡೆದಿದೆ. ಕೆಳದಿ ರಾಣಿ ಚೆನ್ನಮ್ಮ ಅವರ ಪಟ್ಟಾಭಿಷೇಕ ನಡೆದು 2022 ಫೆಬ್ರವರಿ 27 ಕ್ಕೆ 350 ವರ್ಷಗಳು ತುಂಬುತ್ತದೆ. ಆ ದಿನವನ್ನು ಉತ್ಸವದ ದಿನ ಎಂದು ರಾಣಿ ಚೆನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕೆಳದಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಸರ್ಕಾರ ಕೆಳದಿ ಉತ್ಸವಕ್ಕಾಗಿ 25 ಲಕ್ಷ ರೂಪಾಯಿ ನೀಡಿದೆ. ಆ ಹಣದಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸಚಿವ ಹರತಾಳು ಹಾಲಪ್ಪ ಅವರು ಹೇಳಿದರು.

ಸರ್ಕಾರ 3 ದಿನಗಳ ಹಿಂದೆ 25 ಲಕ್ಷ ರೂಪಾಯಿ ಹಣವನ್ನು ನೀಡಿದೆ. ಅದನ್ನ ಸಮರ್ಪಕವಾಗಿ ಬಳಸಿಕೊಂಡು ಉತ್ಸವ ಮಾಡುವುದು ಸೂಕ್ತ ಎಂದು ನಿರ್ಧರಿಸಿದ್ದೇವೆ. ಕೆಳದಿ ಉತ್ಸವಕ್ಕೆ ಹಣವನ್ನು ಮಂಜೂರು ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ.

ಉತ್ಸವದಲ್ಲಿ ಕೆಲವೇ ಜನರು ಭಾಗವಹಿಸಿದ್ದರು ಅವರಿಗೆ ಅಭಿನಂದನೆ ತಿಳಿಸುತ್ತೇನೆ. ವರ್ಷದಲ್ಲಿ ಕೆಳದಿ ಸಾಗರ ಇಕ್ಕೇರಿ ಸಾಧ್ಯವಾದರೆ ನಗರ ಒಂದೊಂದು ಕಡೆ ಕೆಳದಿ ಉತ್ಸವವನ್ನು ಆಚರಿಸುವ ಬಗ್ಗೆ ಚರ್ಚೆಯಾಗಿದೆ ನಾಲ್ಕು ವರ್ಷಕ್ಕೊಮ್ಮೆ ಅದ್ದೂರಿ ಉತ್ಸವ ಆಚರಿಸಲಾಗುವುದು ಎಂದು ಸಚಿವರು ತಿಳಿಸಿದರು.

ನಾಲ್ಕು ವರ್ಷದ ಅವಧಿಯಲ್ಲಿ ರಾಣಿ ಚೆನ್ನಮ್ಮ ಹಾಗೂ ಅವರ ಆದರ್ಶಗಳ ಬಗ್ಗೆ ಮಕ್ಕಳಿಗೆ ಶಾಲೆಗಳಲ್ಲಿ, ಜನಸಾಮಾನ್ಯರಿಗೆ ಹೇಳುವ ಜಾಗೃತಿ ಕಾರ್ಯಕ್ರಮಗಳು ಆಗಬೇಕಿದೆ ಎಂದು ಸಚಿವರು ಕೆ-ಲೈವ್ ಮೀಡಿಯಾಗೆ ತಿಳಿಸಿದರು.

ಕೆಳದಿ ಉತ್ಸವದಲ್ಲಿ ಭಾಗವಹಿಸಿದ ಕನ್ನಡ ಪೂಜಾರಿ ಎಂದೇ ಖ್ಯಾತಿಯಾಗಿರುವ ಹಿರೇಮಗಳೂರು ಕಣ್ಣನ್ ಅವರು ಕೆಳದಿಯ ವೀರಭದ್ರೇಶ್ವರ ದೇವಾಲಯದಲ್ಲಿ ಸಾಮೂಹಿಕವಾಗಿ ಕನ್ನಡದ ಮಂತ್ರಗಳನ್ನು ಎಲ್ಲರಿಗೂ ಹೇಳಿಕೊಟ್ಟಿದ್ದು ಒಂದು ವಿಶೇಷವಾಗಿತ್ತು.

ಕಾಲು ಪ್ರಕೃತಿ, ಗಜ್ಜೆ ಸಂಸ್ಕೃತಿ. ಕೈ ಪ್ರಕೃತಿ, ಬಳೆ ಸಂಸ್ಕೃತಿ. ಹಣೆ ಪ್ರಕೃತಿ, ಬೊಟ್ಟು ಸಂಸ್ಕೃತಿ. ಶ್ವಾಸ ಪ್ರಕೃತಿ, ವಿಶ್ವಾಸ ಸಂಸ್ಕೃತಿ. ಕೆಳದಿ ಪ್ರಕೃತಿ, ಹಾಲಪ್ಪ ಅವರಿಂದ ಹಾಕುವ ಕಾರ್ಯ ಸಂಸ್ಕೃತಿಯೆಂದು ಹಿರೇಮಗಳೂರು ಕಣ್ಣನ್ ಶಾಸಕ ಹಾಲಪ್ಪನವರ ಕ್ರಿಯಾಶೀಲತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಕೆಳದಿ ರಾಜಗುರು ಹಿರೇಮಠದ ಪೂಜ್ಯಶ್ರೀಗಳು, ಮುರುಘಾಮಠದ ಪೂಜ್ಯಶ್ರೀ.ಡಾ. ಮಲ್ಲಿಕಾರ್ಜುನಾ ಮುರುಘರಾಜೇಂದ್ರ ಮಹಾಸ್ವಾಮಿಗಳು, ಹಿರೇಮಗಳೂರು ಕಣ್ಣನ್ ಅವರು, ಎಸಿ, ತಹಶೀಲ್ದಾರ್, ಇಓ, ಟಿ.ಡಿ.ಮೇಘರಾಜ್, ರಮೇಶ್ ಹಾರೆಗೊಪ್ಪ, ದೇವೇಂದ್ರಪ್ಪ ಯಲಕುಂದ್ಲಿ, ಲೋಕನಾಥ್ ಬಿಳಿಸಿರಿ, ಚುನಾಯಿತ ಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.

ರಾಜ್ಯದ ದೇವಾಲಯಗಳಿಗೆ ಗಂಗಾಜಲ ವಿತರಣೆ

0

ಬಳಪೇಟೆಯ ಶ್ರೀ ಕಾಶಿವಿಶ್ವೇಶ್ವರ ಸ್ವಾಮಿ ದೇವಾಲಯದ ಆವರಣಕ್ಕೆ ಹರಿದ್ವಾರದಿಂದ ಗಂಗಾಜಲವನ್ನು ತರಲಾಗಿದೆ. ಅದನ್ನು ರಾಜ್ಯದ 2 ಸಾವಿರ ಶಿವನ ದೇವಾಲಯಗಳಲ್ಲಿ ಅಭಿಷೇಕಕ್ಕೆ ಮತ್ತು ಲಕ್ಷಾಂತರ ಭಕ್ತರಿಗೆ ವಿತರಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಗಿದೆ.

ಮಹಾಶಿವರಾತ್ರಿ ಮಾರ್ಚ್ 1 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಮುಂಚಿತವಾಗಿ ರಾಜ್ಯದ ಹಲವು ದೇವಾಲಯಗಳಿಗೆ ಗಂಗಾಜಲವನ್ನು ತಲುಪಿಸಲಾಗುತ್ತದೆ. ರಾಜ್ಯದ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಗಂಗಾಜಲವನ್ನು ನೀಡಲಾಗುತ್ತದೆ. ಮುಜರಾಯಿ ಇಲಾಖೆಯು ಜಿಲ್ಲಾಧಿಕಾರಿಗಳಿಂದ ಗಂಗಾಜಲ ಸ್ವೀಕರಿಸಿ ನಾನ ದೇವಾಲಯಗಳಿಗೆ ತಲುಪಿಸುವ ಹೊಣೆ ಹೊತ್ತಿದೆ.

ಸುಮಾರು 28 ವಾಹನಗಳಲ್ಲಿ ಗಂಗಾಜಲವನ್ನು ಜಿಲ್ಲಾ ಕೇಂದ್ರಗಳಿಗೆ ತಲುಪಿಸಲಾಗುತ್ತದೆ. ಒಟ್ಟು 40 ಸಾವಿರ ಲೀಟರ್ ಗಂಗಾಜಲವನ್ನು ವಿತರಿಸಲಾಗುತ್ತಿದೆ. 10 ಲೀಟರ್ ನ ಒಂದು ಸಾವಿರ ಕ್ಯಾನುಗಳು, 20 ಲೀಟರ್ ನ 500 ಕ್ಯಾನ್ ಗಳು ಮತ್ತು ಎರಡು ಲೀಟರ್ ನ 5 ಸಾವಿರ ಕ್ಯಾನ್ ಗಳಲ್ಲಿ ಗಂಗಾಜಲವನ್ನು ವಿತರಿಸಲಾಗುತ್ತಿದೆ. ಭಕ್ತರಿಗೆ ಮನೆಗೆ ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ 500 ಬ್ಯಾಟೆಲ್ ಗಳಲ್ಲಿ ಗಂಗಾಜಲ ತುಂಬಿಸಿ ಸಿದ್ಧಪಡಿಸಲಾಗಿದೆ.

ಗಂಗಾಜಲ ವಿತರಣಾ ಕಾರ್ಯಕ್ರಮ ವನ್ನು ಉದ್ಘಾಟಿಸಿದ ಮಹರ್ಷಿ ಆನಂದ ಗುರೂಜಿ ಅವರು ಮಾತನಾಡಿದರು. ಮಾಜಿ ಸಚಿವ ಮಾಲೂರು ಎಸ್. ಎನ್. ಕೃಷ್ಣಯ್ಯ ಶೆಟ್ಟಿ ಅವರು ಮಾತನಾಡಿ, ನಾನು ಮುಜರಾಯಿ ಸಚಿವನಾಗಿದ್ದಾಗ 2008ರಲ್ಲಿ ಗಂಗಾಜಲ ತರಿಸಿ ರಾಜ್ಯದ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೆ. ಈಗಲೂ ಮುಂದುವರಿಸುತ್ತಿದ್ದೇನೆ ಎಂದು ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕನ್ನಡಿಗರನ್ನ ಸುರಕ್ಷಿತ ತರಲು ಸರ್ವ ಪ್ರಯತ್ನ- ಸಿಎಂ ಬೊಮ್ಮಾಯಿ

0

ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆತರಲು ಸರ್ಕಾರವು ಅಗತ್ಯ ಸಹಕಾರ ನೀಡಲಿದೆ. ಈ ನಿಟ್ಟಿನಲ್ಲಿ ಸಕಲ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಬೆಂಗಳೂರಿನ ವಿಧಾನಸೌಧ ದಲ್ಲಿ ಮಾತನಾಡುತ್ತಿದ್ದರು. ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿರುವ ಹಿನ್ನೆಲೆಯಲ್ಲಿ ಕನ್ನಡಿಗ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್ ಅವರೊಂದಿಗೆ ಮಾತನಾಡಿದ್ದೇನೆ. ಕನ್ನಡಿಗರ ಪಟ್ಟಿಯನ್ನು ರವಾನಿಸಲಾಗಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

ಉಕ್ರೇನ್ ನಿಂದ ಆಗಮಿಸುವವರಿಗೆ ಸಾರಿಗೆ, ವಾಸ್ತವ್ಯ ಕಲ್ಪಿಸುವಂತೆ ದೆಹಲಿಯಲ್ಲಿರುವ ಮುಖ್ಯ ಆಯುಕ್ತರಿಗೆ ಸೂಚಿಸಲಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಈಶಾನ್ಯ ಭಾಗದ ಕಾರ್ಕಿವ್ ಎಂಬಲ್ಲಿದ್ದು, ಸುರಕ್ಷಿತ ಸ್ಥಳದಲ್ಲಿ ಇರುವಂತೆ ಅವರಿಗೆ ಸೂಚಿಸಲಾಗಿದೆ. ಅನಗತ್ಯವಾಗಿ ರಸ್ತೆಗೆ ಇಳಿಯದಂತೆಯೂ ತಿಳಿಸಲಾಗಿದೆ, ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದೇನೆ. ರಾಜತಾಂತ್ರಿಕವಾಗಿ ಪ್ರಧಾನಿಯವರ ಪ್ರಯತ್ನ ಯಶಸ್ವಿಯಾಗುತ್ತಿದೆ. ಆದ್ದರಿಂದ ದೊಡ್ಡ ಭರವಸೆ ಇದೆ. ಎಲ್ಲರನ್ನೂ ಸುರಕ್ಷಿತವಾಗಿ ತರಲಾಗುವುದು. ಯುದ್ಧದಲ್ಲಿ ರಷ್ಯಾದ ಮೇಲುಗೈ ಇರುವುದರಿಂದ ಅವರೊಂದಿಗೆ ಮಾತನಾಡಿ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಇದು ಸಹಕಾರಿಯಾಗಲಿದೆ ಎಂದು ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅಲ್ಲಿನ ಸಹಾಯವಾಣಿ ಯೊಂದಿಗೆ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ಕೇಂದ್ರ ಸರ್ಕಾರದ ಸಹಾಯವಾಣಿಯೂ ಇದೆ. ಕರ್ನಾಟಕದ ಇನ್ನೂರಕ್ಕೂ ಅಧಿಕ ಮಂದಿ ಸಹಾಯವಾಣಿ ಸಂಪರ್ಕಿಸಿದ್ದಾರೆ. ಯುದ್ಧ ನೀತಿಯಲ್ಲಿ ನಾಗರಿಕರಿಗೆ ತೊಂದರೆ ನೀಡುವ ಉದ್ದೇಶವಿರುವುದಿಲ್ಲ. ಆಕಸ್ಮಿಕವಾಗಿ ಒಮ್ಮೊಮ್ಮೆ ಅನಾಹುತಗಳು ಸಂಭವಿಸಬಹುದು. ಉಕ್ರೇನ್ ನಲ್ಲಿರುವ ಭಾರತದ ದೂತವಾಸ ಕಚೇರಿಯವರು ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮರುಕವಿಲ್ಲದ ರಷ್ಯನ್ ಸೇನೆಗೆ ಮಹಿಳೆಯರು ಮಕ್ಕಳು ಬಲಿ

0

ಸೇನಾ ದಾಳಿಯ ಮುಂಚೂಣಿ ಪ್ರದೇಶಗಳ ಸೇನಾ ನೆಲೆಗಳನ್ನು ಛಿದ್ರಗೊಳಿಸಿದ ದೈತ್ಯ ರಷ್ಯನ್ ಪಡೆಗಳು ನಿನ್ನೆಯ ವೇಳೆಗೆ ರಾಜಧಾನಿ ಕೀವ್ ನಗರದ ಹತ್ತಿರಕ್ಕೆ ಸಾಗಿ ಬಂದಿವೆ. ಬೆಳಗಿನ ವೇಳೆಗೆ ನಗರದ ಹೊರವಲಯದಲ್ಲಿ ರಷ್ಯಾದ ಯೋಧರು ಭದ್ರತಾ ಬ್ಯಾರಿಕೇಡ್ ಗಳನ್ನು ಕಿತ್ತು ಪ್ರಧಾನ ಪಡೆಗಳು ನುಗ್ಗಲು ಅನುವು ಮಾಡಿಕೊಟ್ಟರು. ಈ ವೇಳೆ ಸ್ಥಳೀಯರಿಂದ ಪ್ರತಿರೋಧ ಬಂದಾಗ ಹೊಡೆದಾಟ ನಡೆದು ಅನೇಕರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.

ರಷ್ಯಾದ ವಾಯು ಮತ್ತು ಭೂಸೇನೆ ನಡೆಸಿದ ಭೀಕರ ದಾಳಿಗೆ ಉಕ್ರೇನ್ ತತ್ತರಿಸಿದೆ. ಮೂರುದಿನಗಳಲ್ಲಿ ಮುಂಚೂಣಿ ಭಾಗವು ರಷ್ಯನ್ ಪಡೆಗಳ ಕೈವಶವಾಯಿತು. ನಂತರ ರಾಜಧಾನಿ ಕೀವ್ ನತ್ತ ಸಾಗಿ ಬಂದ ಪಡೆಗಳು, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಬುಡಮೇಲು ಮಾಡಲು ಅಣಿಯಾಗಿ ನಿಂತಿದೆ.

ಪ್ರತಿರೋಧವನ್ನೂ ಸಹಿಸದ ರಷ್ಯನ್ ಸೇನೆ, ಕಣ್ಣಿಗೆ ಕಾಣಿಸುವ ಕಟ್ಟಡಗಳನ್ನು ಧ್ವಂಸಗೊಳಿಸಿದೆ. ಕೀವ್ ಪ್ರವೇಶಿಸುವ ದಾರಿಯಲ್ಲಿ ನಾಗರಿಕರೇ ಪ್ರತಿರೋಧ ಒಡ್ಡಿದ್ದರಿಂದ ಸಂಘರ್ಷ ತಾರಕಕ್ಕೇರಿತು. ಮೊದಲ ಹಂತದಲ್ಲಿ ಮೆರೆದ ರಷ್ಯ ಪಡೆಗಳನ್ನು ಕೀವ್ ನಗರ ನಿವಾಸಿಗರು ಕೈಗೆ ಸಿಕ್ಕ ವಸ್ತುಗಳಿಂದಲೇ ಹೊಡೆದು ಹಿಮ್ಮೆಟ್ಟಲು ನೋಡಿದರು. ಆದರೆ ಇದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು. ಕಟ್ಟಿಗೆ, ಕಲ್ಲಿನ ಏಟುಗಳಿಂದ ಕೆರಳಿದ ರಷ್ಯನ್ ಯೋಧರು ಕಂಡಕಂಡ ಕಡೆ ಗುಂಡು ಹಾಗೂ ಕ್ಷಿಪಣಿಗಳನ್ನು ಉಡಾಯಿಸಿದ ರು. ಇದರಿಂದ ಸೇತುವೆಗಳು, ಶಾಲಾ ಕಟ್ಟಡಗಳು, ಅನೇಕ ಅಪಾರ್ಟ್ಮೆಂಟ್ ಗಳು ಕುಸಿದುಬಿದ್ದವು. ಈ ದಾಳಿಯಲ್ಲಿ ಅಪಾರ ಪ್ರಮಾಣದ ಜೀವಹಾನಿ ಉಂಟಾಗಿದೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಅಸಹಾಯಕ ರೀತಿಯಲ್ಲಿ ಪ್ರಾಣ ಬಿಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಆಯುಷ್ಮಾನ್ ಭಾರತ ಯೋಜನೆ ದೇಶಾದ್ಯಂತ ಜಾರಿಗೆ ಸಮ್ಮತಿ

0

ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್ ಯೋಜನೆಯನ್ನು ದೇಶಾದ್ಯಂತ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟದ ಸಮ್ಮತಿ ದೊರೆತಿದೆ.
ಮುಂದಿನ ಐದು ವರ್ಷಗಳಿಗಾಗಿ 1600 ಕೋಟಿ ರೂ. ಬಜೆಟ್ ಅನುದಾನವನ್ನು ಯೋಜನೆಗೆ ಕಾಯ್ದಿರಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಯೋಜನೆಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳಲಿದೆ ಎಂದು ತಿಳಿದುಬಂದಿದೆ.

ಈ ಯೋಜನೆಯಡಿ ನಾಗರಿಕರು ತಮ್ಮದೇ ಆದ ಪ್ರತ್ಯೇಕ ಡಿಜಿಟಲ್ ಆರೋಗ್ಯ ಖಾತೆ ತೆರೆಯಬಹುದಾಗಿದೆ. ಇರುವ ಡಿಜಿಟಲ್ ಆರೋಗ್ಯ ದಾಖಲೆಗಳನ್ನು ಖಾತೆಗೆ ಈ ಲಿಂಕ್ ಮಾಡಬಹುದಾಗಿದ್ದು, ಪ್ರತಿ ವ್ಯಕ್ತಿಯ ಸಂಪೂರ್ಣ ಆರೋಗ್ಯ ಕೈಪಿಡಿ ಸಿದ್ಧಗೊಳ್ಳಲಿದೆ. ಇದರಿಂದ ವೈದ್ಯಕೀಯ ಚಿಕಿತ್ಸೆಗೆ ದೊಡ್ಡಮಟ್ಟದಲ್ಲಿ ಅನುಕೂಲ ಸೃಷ್ಟಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಕೇಂದ್ರಾಡಳಿತ ಪ್ರದೇಶಗಳಾದ ಲಡಾಕ್, ಚಂಡಿಗಢ, ಪುದುಚೆರಿ, ಲಕ್ಷದ್ವೀಪ, ದಾದ್ರಾ ಮತ್ತು ನಗರ್ ಹವೇಲಿ,ದಿಯು ಮತ್ತು ದಮನ್ , ಅಂಡಮಾನ್ ಮತ್ತು ನಿಕೋಬಾರ್ ಗಳಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಅಲ್ಲಿ ಯಶಸ್ಸು ಸಿಕ್ಕ ಬಳಿಕ ದೇಶಾದ್ಯಂತ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ದೆಹಲಿಯಲ್ಲಿ ಕಾರ್ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯವಿಲ್ಲ

0

ಖಾಸಗಿ ವಾಹನದಲ್ಲಿ ಪ್ರಯಾಣ ಮಾಡುವಾಗ ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ನಿಯಮವನ್ನು ದಿಲ್ಲಿ ಸರ್ಕಾರ ರದ್ದುಪಡಿಸಿದೆ.

ಸೋಮವಾರದಿಂದ ಇದು ಜಾರಿಗೆ ಬರಲಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ ಧಾರಣೆ ಹೊರತುಪಡಿಸಿ ಉಳಿದೆಲ್ಲ ನಿರ್ಬಂಧಗಳನ್ನು ಸರ್ಕಾರ ತೆಗೆದು ಹಾಕಲಿದೆ. ಕೊರೊನಾ ಸೋಂಕಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಈ ಹಿಂದೆ ಖಾಸಗಿ ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗಲೂ ಮಾಸ್ಟರ್ ಧರಿಸುವುದು ಕಡ್ಡಾಯವಾಗಿತ್ತು. ರಸ್ತೆ ಸಹ ಸಾರ್ವಜನಿಕ ಪ್ರದೇಶ ಎಂದು ವ್ಯಾಖ್ಯಾನಿಸಿ ಈ ನಿಯಮ ಜಾರಿಗೆ ತರಲಾಗಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶಿವಮೊಗ್ಗ ನಗರದಲ್ಲಿ ಮಾರ್ಚ್4 ರವರೆಗೆ 144 ನೇ ಸೆಕ್ಷನ್ ಮುಂದುವರಿಕೆ- ಜಿಲ್ಲಾಧಿಕಾರಿ

0

ಶಿವಮೊಗ್ಗ ನಗರದಲ್ಲಿ ಮಾರ್ಚ್ 4 ರ ತನಕ 144 ನೇ ಸೆಕ್ಷನ್ ಮುಂದುವರೆಯುತ್ತದೆ.ಶಾಲೆಗಳು ಸೋಮವಾರದಿಂದ ಆರಂಭವಾಗುತ್ತವೆ.
ವ್ಯಾಪಾರ ಮಳಿಗೆಗಳು ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ.
ತುರ್ತುಸೇವೆಗಳು ರಾತ್ರಿ 7 ಗಂಟೆಯಿಂದ ಬೆಳಿಗ್ಗೆ6 ಗಂಟೆಯವರೆಗೆ ದೊರೆಯುತ್ತವೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

K.R.PET Market News For 27/02/2022

0
CommodityVarietyGradeArrivalsUnitsMin (Rs.)Max (Rs.)Modal (Rs.)
BeansBeans (Whole)Average45Quintal100010001000
CucumbarCucumbarAverage70Quintal100010001000
Tender CoconutTender CoconutAverage167650Thousands60002400012000
TomatoTomatoAverage25Quintal100010001000

*Content by Department of Agricultural Marketing, Govt. of Karnataka. 

KUSTAGI Market News For 27/02/2022

0
CommodityVarietyGradeArrivalsUnitsMin (Rs.)Max (Rs.)Modal (Rs.)
BajraHybridAverage728Quintal180018001800
CowpeaCowpea (Whole)Average25Quintal600060006000
GroundnutGejjeAverage521Quintal550065745577
Horse GramHorse gram (Whole)Average260Quintal345034503450
MaizeHybrid/LocalAverage1660Quintal198020001987
NavaneNavane HybridAverage199Quintal257025702570
Neem SeedNeem SeedAverage250Quintal100010001000
TurRedAverage861Quintal550055005500