Sunday, March 23, 2025
Sunday, March 23, 2025

ಉರಿಯುತ್ತಿದೆ ಉಕ್ರೇನ್

Date:

ಉರಿಯುತ್ತಿದೆ ಉಕ್ರೇನ್.!
ಆದರೆ ನಾವು ಆ ದೇಶದ ಅಧ್ಯಕ್ಷ ಝೆಲೆನ್ಸ್ಕಿ ಅವರ ಧೈರ್ಯ ಮೆಚ್ವಲೇಬೇಕಿದೆ. ಒಬ್ಬ ಕಲಾವಿದನಾಗಿ ಸಾಮಾಜಿಕ ಕ್ಷೇತ್ರದಲ್ಲಿದ್ದು ಜನಪ್ರಿಯತೆ ಗಳಸಿಕೊಂಡಿದ್ದಾರೆ.ಆದರೆ ರಾಜಕೀಯದಲ್ಲೂ ಅವರಲ್ಲಿನ
ಕಲಾವಿದನಲ್ಲದ ಘಟ್ಟಿಯಾದ ರಾಜಕಾರಣಿ ನಮಗೆ ಕಾಣತೊಡಗಿದ್ದಾನೆ.

ಉಕ್ರೇನಿನ ಪ್ರತಿಯೊಬ್ಬ ನಾಗರಿಕನನ್ನೂ ಹುರಿದುಂಬಿಸುತ್ತಿರುವ ಅವರ
ಆತ್ಮವಿಶ್ವಾಸ ವಿಶ್ವದ ಎಲ್ಲರ ದೇಶಗಳ
ರಾಜತಾಂತ್ರಿಕರ ಮನ ಸೆಳೆದಿದೆ.

ಪ್ರತಿಯೊಬ್ಬರಿಗೂ ಗನ್ ನೀಡುವುದಾಗಿ ಹೇಳಿದ ಅವರ ಮಾತುಗಳು ಎಂತಹ ಉಕ್ರೇನ್
ನಾಗರಿಕನನ್ನೂ ಬಡಿದೆಬ್ಬಿಸುವಂತಿದೆ.
ಅಲ್ಲಿನ ಸಂಸದೆ ಕೀರಾ ,ತಾವೂ ಗನ್ ಹಿಡಿದು ರಷ್ಯದ ವಿರುದ್ಧ ಹೋರಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ಈಗ ತಾನೆ ಟೀವಿಯೊಂದರಲ್ಲಿ
ಒಂದು ವಿಶೇಷ ದೃಶ್ಯ ನೋಡಿದೆವು.
ಉಕ್ರೇನಿನ ರೈತ ತನ್ನ ಟ್ರ್ಯಾಕ್ಟರ್ ಗೆ
ರಷ್ಯನ್ ಟ್ಯಾಂಕರನ್ನ ಕಟ್ಟಿ ಎಳೆದೊಯ್ಯುತ್ತಿದ್ದ. ಅಬ್ಬ ಆತನ ದೇಶಭಕ್ತಿಯೆ! .

ಅತೀ ಸಣ್ಣಸಂಗತಿ ಕೂಡ ಇಂತಹ ಕ್ಲಿಷ್ಟ ಸನ್ನಿವೇಶಗಳಲ್ಲಿ ಸಾಮೂಹಿಕವಾಗಿ ಶಕ್ತಿ ತುಂಬುತ್ತದೆ.
ವಿಶ್ವದ ಅನ್ಯ ರಾಷ್ಟ್ರಗಳು ರಷ್ಯದ
ಈ ಆಕ್ರಮಣ ಎದುರಿಸಲು ಯುದ್ಧೋಪಕರಣಗಳನ್ನ ನೆರವಿನ
ರೀತಿ ಸರಬರಾಜು ಮಾಡುತ್ತಿವೆ.

ಮುಖ್ಯವಾಗಿ ಯುರೋಪ್ ದೇಶಗಳು ಹಣಕಾಸು,ರಕ್ಷಣಾ ಸಲಕರಣೆಗಳನ್ನ ಕಳಿಸುತ್ತಿವೆ.
ಜರ್ಮನಿಯು ಟ್ಯಾಂಕರ್ ಗಳನ್ನ ಧ್ವಂಸಮಾಡಬಲ್ಲ 400 ಶಸ್ತ್ರಾಸ್ತ್ರ ಗಳು, 14 ಸೇನಾ ವಾಹನಗಳು ಮತ್ತು 10,000 ಟನ್ ಇಂಧನವನ್ನ
ಕಳೆದ ಶನಿವಾರವೇ ಕಳಿಸಿದೆ.

ಜೆಕ್ ಗಣರಾಜ್ಯವು 188 ಮಿಲಿಯನ್ ಕ್ರೌನ್ ಮೌಲ್ಯದ ರಕ್ಷಣಾ ಉಪಕರಣಗಳನ್ನ ನೀಡಿದೆ. ಅಲ್ಲದೇ ಇನ್ನೂ ಹೆಚ್ಚಿನ ಅಂದರೆ 400 ಮಿಲಿಯನ್ ಕ್ರೌನ್ ಮೌಲ್ಯದ ಸೇನಾ ಸಲಕರಣೆಗಳನ್ನ ಕಳಿಸುವುದಾಗಿ ಉಕ್ರೇನ್ ಗೆ ಸ್ಥೈರ್ಯ ತುಂಬಿದೆ.

ಈಚಿನ ವಿದ್ಯಮಾನದಲ್ಲಿ ಡ್ರೋನ್ ಉಪಕರಣದ ಉಪಯೋಗ ಬಹಳ ಅಗತ್ಯವುಳ್ಳದ್ದಾಗಿದೆ. ಟರ್ಕಿದೇಶದ ಈ ಡ್ರೋನ್ ಗಳು ಕೀವ್ ‌ನಗರವನ್ನ
ಹದ್ದುಗಣ್ಣಿನಿಂದ ನೋಡುತ್ತಿವೆ.
ಈ ನಡುವೆ ಗ್ರೀಕ್ ನಾಗರಿಕರು ರಷ್ಯಾ ಸೇನಾಪಡೆಯಿಂದ ಹತರಾಗಿದ್ದಾರೆ.
ಗ್ರೀಕ್ ಗೆ ರೋಶವುಕ್ಕಿದೆ. ಅದರ ಸೇಡು ತೀರಿಸಿಕೊಳ್ಳಲು ಉಕ್ರೇನಿಗೆ ರಕ್ಷಣಾ ಸಲಕರಣೆ ನೀಡುವುದಾಗಿ ಭರವಸೆ ಕೊಟ್ಟಿದೆ.

ಇಟಲಿಯು ಸುಮ್ಮನೆ ಕುಳಿತಿಲ್ಲ.
110 ದಶಲಕ್ಷ ಯೂರೋಗಳ ಹಣಕಾಸಿನ ನೆರವನ್ನ ಕೊಟ್ಟಿದೆ.
ರೊಮೇನಿಯ ದೇಶವು ಮೂರು ಮಿಲಿಯನ್ ಯೂರೋ ಮೌಲ್ಯದ
ರಕ್ಷಣಾ ಉಪಕರಣ,ಇಂಧನ ಉಕ್ರೇನಿಗೆ ರವಾನಿಸಿದೆ .
ಮದ್ದುಗುಂಡುಗಳು,ಬುಲೆಟ್ ಪ್ರೂಫ್
ಜಾಕೆಟ್,ಹೆಲ್ಮೆಟ್ ಗಳು,ಸೇನಾ ಉಪಕರಣ,ಆಹಾರ ಮತ್ತು ನೀರು ಸೇರಿದೆ.
ಈಗಾಗಲೇ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ತಮಗೆ ಹಣಕ್ಕಿಂತ
ಮದ್ದುಗುಂಡುಗಳು ಅವಶ್ಯ ಎಂಬ
ಹೇಳಿಕೆ ಕೊಟ್ಟಿದ್ದನ್ನ ಇಲ್ಲಿ ಸ್ಮರುಸಬಹುದಾಗಿದೆ.

ರೊಮೇನಿಯ ಇನ್ನೂ ಒಂದು ಹೆಜ್ಜೆ
ಮುಂದಾಗಿ ಮಾನವೀಯತೆ ಮೆರೆದಿದೆ.ಸಾರ್ವಜನಿಕ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ
ಶುಶ್ರೂಷೆಗೈಯಲು ಸಿಬ್ಬಂದಿಯನ್ನೂ
ಕಳಿಸಿದೆ.
ಜಾಣನಾಗಿರುವ ದೊಡ್ಡಣ್ಣ ಅಮೇರಿಕ 350 ಮಿಲಿಯನ್ ಅಮೆರಕನ್ ಡಾಲರ್ ಗಳ ಹಣಕಾಸಿನ ನೆರವು ಘೋಷಿಸಿದೆ.
ಅದೊಂದು ರೀತಿ ವಿಚಿತ್ರ. ನ್ಯಾಟೊ
ಪಡಗಳು ಉಕ್ರೇನಿನ ಹೊರಗಿವೆ.ಉಕ್ರೇನ್
ನ್ಯಾಟೋ ಸದಸ್ಯನಲ್ಲ

ರಷ್ಯಾದ ರಕ್ತಪೀಪಾಸುತನಕ್ಕೆ
ಪ್ರತಿಯಾಗಿ ವ್ಯಾಟಿಕನ್ ಸಿಟಿಯ ಪೋಪ್ ಫ್ರಾನ್ಸಿಸ್ ಅವರ ಮಾತುಗಳಿಲ್ಕಿ ಮನನೀಯ.
” ದೇವರು ಶಾಂತಿ ಬಯಸುವವರೊಂದಿಗೆ ಇರುತ್ತಾನೆ.
ಹಿಂಸೆ ಆಶ್ರಯಿಸುವವರ ಜೊತೆಗಿರುವುದಿಲ್ಲ.
ನಿಮ್ಮ ಬಂದೂಕುಗಳ ಶಬ್ದವಡಗಿಸಿ.
ಉಕ್ರೇನಿನಲ್ಲಿ ನಡೆಯುತ್ತಿರುವ ಯುದ್ಧ ನಿಲ್ಲಿಸಿ.”
ಈ ಕರೆ ಎರಡೂ ದೇಶಗಳು ಮಾತ್ರವಲ್ಲ.ಮುಂದೆ ಯುದ್ಧಕ್ಕಾಗಿ
ಹಪಹಪಿಸುವ ವಿಶ್ವದ ಇತರ ರಾಷ್ಟ್ರಗಳಿಗೂ ಅನ್ವಯಿಸುತ್ತದೆ.

ನೋಡೋಣ ಈಗ ಸಂಧಾನದ ಮಾತು ಕೇಳಿ ಬರುತ್ತಿದೆ. ಏನೇ ಆದರೂ ಒಂದು ರಾಷ್ಡ್ರದ ಅಣೆಕಟ್ಟು, ಗಗನಚುಂಬಿ ವಸತಿಗೃಹ ಸಮುಚ್ಚಯ, ಕಾರ್ಖಾನೆಗಳು, ವಿಮಾನ ನಿಲ್ದಾಣ, ಮುಂತಾದ ಆಸ್ತಿಯನ್ನ ಯುದ್ಧದ ನೆಪದಲ್ಲಿ
ನಾಶಗೈದರೆ ಆ ಆಸ್ತಿಯ ಸೃಷ್ಟಿ ಮತ್ತೆ ಹೇಗೆ ಸಾಧ್ಯ?
ಆ ಹಾನಿಯನ್ನ ಭರಿಸುವುದು
ಆ ದೇಶದ ಸಾಮಾನ್ಯ, ಬಡ ಪ್ರಜೆಯೇ ತಾನೆ??.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Thawar Chand Gehlot ರಾಜಭವನದಲ್ಲಿ ಸಂಭ್ರಮಿಸಿದ “ಚಂದನ” ದ ಚೈತ್ರಾಂಜಲಿ, ಯುಗಾದಿ ಶುಭಾಶಯ ಕೋರಿದ ರಾಜ್ಯಪಾಲ‌ ಗೆಹ್ಲೋಟ್

Thawar Chand Gehlot ಬೆಂಗಳೂರು 22.03.2025: ಹಿಂದುಗಳ ಹೊಸ ವರ್ಷವೆಂದೇ ಕರೆಯಲ್ಪಡುವ...

PM Yoga Awards ಪ್ರಧಾನಮಂತ್ರಿಗಳ ಯೋಗ ಪ್ರಶಸ್ತಿಗೆ ಅರ್ಜಿ ಆಹ್ವಾನ

PM Yoga Awards ಯೋಗ ಕ್ರೀಡೆಗೆ ಅತ್ಯುನ್ನತವಾದ ಕೊಡುಗೆಯನ್ನು ನೀಡಿರುವಂತಹ ಕ್ರೀಡಾಪಟುಗಳಿಗೆ ಅಥವಾ...

PM Yoga Awards 2025 ಪ್ರಧಾನಮಂತ್ರಿಗಳ ಯೋಗ ಪ್ರಶಸ್ತಿಗೆ ಅರ್ಜಿ ಆಹ್ವಾನ

PM Yoga Awards 2025 ಯೋಗ ಕ್ರೀಡೆಗೆ ಅತ್ಯುನ್ನತವಾದ ಕೊಡುಗೆಯನ್ನು ನೀಡಿರುವಂತಹ...