Friday, February 20, 2026
Friday, February 20, 2026
Home Blog Page 1684

ಜಿಎಸ್ ಟಿ ಕುರಿತ ಸ್ಲ್ಯಾಬ್ ವರದಿ ಸದ್ಯದಲ್ಲೇ ಸಲ್ಲಿಕೆ

0

ರಾಜ್ಯ ಹಣಕಾಸು ಸಚಿವರ ಸಮಿತಿಯು ಈ ತಿಂಗಳ ಅಂತ್ಯದೊಳಗೆ ತನ್ನ ವರದಿಯನ್ನು ಕೌನ್ಸಿಲ್ ಗೆ ಸಲ್ಲಿಸುವ ಸಾಧ್ಯತೆಯಿದೆ. ಇದರಲ್ಲಿ ಕಡಿಮೆ ಸ್ಲ್ಯಾಬ್ ಅನ್ನು ಏರಿಸುವುದು ಮತ್ತು ಸ್ಲ್ಯಾಬ್ ಅನ್ನು ತರ್ಕಬದ್ಧಗೊಳಿಸುವುದು ಸೇರಿದಂತೆ ಆದಾಯವನ್ನು ಹೆಚ್ಚಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನಲಾಗುತ್ತಿದೆ.

ಪ್ರಸ್ತುತ, ಜಿಎಸ್ಟಿ ನಾಲ್ಕು ಹಂತದ ರಚನೆಯಾಗಿದ್ದು, ಕ್ರಮವಾಗಿ 5%, 12%, 18% ಮತ್ತು 28% ತೆರಿಗೆ ದರವನ್ನು ವಿಧಿಸಲಾಗುತ್ತಿದೆ.

ಅಗತ್ಯ ವಸ್ತುಗಳಿಗೆ ವಿನಾಯಿತಿ ನೀಡಲಾಗುತ್ತದೆ. ಕಡಿಮೆ ಸ್ಲ್ಯಾಬ್ ನಲ್ಲಿ ತೆರಿಗೆ ವಿಧಿಸಲಾಗುತ್ತದೆ. ಆದರೆ ಐಷಾರಾಮಿ ಮತ್ತು ಡಿಮೆರಿಟ್ ವಸ್ತುಗಳು ಅತ್ಯುನ್ನತ ಸ್ಲ್ಯಾಬ್ ಅನ್ನು ವಿಧಿಸಲಾಗುತ್ತಿದೆ. ಐಷಾರಾಮಿ ಮತ್ತು ಸಿನ್ ಸರಕುಗಳು ಅತಿ ಹೆಚ್ಚು 28% ಸ್ಲ್ಯಾಬ್ ಮೇಲೆ ಸೆಸ್ ಅನ್ನು ವಿಧಿಸಿದೆ. ಜಿಎಸ್ಟಿ ಜಾರಿಯಿಂದಾಗಿ ಆದಾಯ ನಷ್ಟವನ್ನು ರಾಜ್ಯಗಳಿಗೆ ಸರಿದೂಗಿಸಲು ಈ ಸೆಸ್ ಸಂಗ್ರಹವನ್ನು ಬಳಸಲಾಗುತ್ತದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮತ್ತೊಮ್ಮೆ ಸಂಧಾನಕ್ಕೆ ರಷ್ಯ ಉಕ್ರೇನ್ ಪ್ರಯತ್ನ

0

ರಷ್ಯಾ- ಉಕ್ರೇನ್ ಯುದ್ಧವು 11ನೇ ದಿನವೂ ಮುಂದುವರಿಯುತ್ತಿದ್ದು, ಎರಡು ರಾಷ್ಟ್ರಗಳ ಮಧ್ಯೆ ಎರಡು ಸುತ್ತಿನ ಮಾತುಕತೆಗಳು ನಡೆದಿದ್ದರೂ ಸಹ, ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ.

ರಷ್ಯಾ ಉಕ್ರೇನ್ ಮೇಲೆ ಭಾರಿ ಪ್ರಮಾಣದಲ್ಲಿ ಬಾಂಬ್ ದಾಳಿ ನಡೆಸುತ್ತಿದೆ. ಅನೇಕ ನಗರಗಳು ನಾಶಗೊಂಡಿದೆ. ಉಕ್ರೇನ್ ನಲ್ಲಿ ಅನಿಲ ಪೂರೈಕೆಯು ಸ್ಥಗಿತಗೊಂಡಿದೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸುವ ಸಂಬಂಧ ಇದುವರೆಗೆ ಮಾತುಕತೆಗಳನ್ನು ನಡೆಸಲಾಗಿದೆ. ಆದರೆ ಮಾತುಕತೆ ಫಲಪ್ರದವಾಗದ ಹಿನ್ನೆಲೆಯಲ್ಲಿ ಈಗ ಮೂರನೇ ಸುತ್ತಿನ ಮಾತುಕತೆ ದಿನಗಳು ನಿಗದಿಯಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಮುಂದಿನ ಸುತ್ತಿನ ಮಾತುಕತೆ ನಾಳೆ ನಡೆಯಲಿದೆ ಎಂದು ಉಕ್ರೇನಿಯನ್ ಅಧಿಕಾರಿ ಡೇವಿಡ್ ಅರ್ಖಾಮಿಯಾ ಅವರು ಹೇಳಿದ್ದಾರೆ.

ಆರ್ಖಾಮಿಯಾ ಅವರು ಉಕ್ರೇನಿಯನ್ ಅಧ್ಯಕ್ಷ ಝೆಲೆನ್ ಸ್ಕಿ ಯ ಸರ್ವೆಂಟ್ ಆಫ್ ದಿ ಪೀಪಲ್ ಪಾರ್ಟಿಯಸಂಸದೀಯ ಪಕ್ಷದ ಮುಖ್ಯಸ್ಥರಾಗಿದ್ದು, ರಷ್ಯಾದೊಂದಿಗೆ ಮಾತುಕತೆಗಾಗಿ ನಿಯೋಗದ ಸದಸ್ಯರಾಗಿದ್ದಾರೆ.

ಸೋಮವಾರ ಮೂರನೇ ಸುತ್ತಿನ ಮಾತುಕತೆ ನಡೆಯಲಿದ್ದು, ಎರಡೂ ಕಡೆಯವರು ಕದನ ವಿರಾಮ ಮತ್ತು ನಾಗರಿಕರಿಗೆ ಸುರಕ್ಷಿತ ಮಾರ್ಗದ ಕುರಿತು ಮಾತುಕತೆ ನಡೆಸಲು ಪ್ರಯತ್ನಿಸಲಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ವಿಶೇಷ ಚೇತನರ ಟಿ20 ಕ್ರಿಕೆಟ್ ಕರ್ನಾಟಕ ಚಾಂಪಿಯನ್

0

ಓಡಿಶಾ ತಂಡವನ್ನು ಫೈನಲ್ ಪಂದ್ಯದಲ್ಲಿ 5 ವಿಕೆಟ್ ಗಳಿಂದ ಸೋಲಿಸಿದ ಕರ್ನಾಟಕದ ಮಹಿಳೆಯರ ತಂಡ ಎರಡನೇ ಆವೃತ್ತಿಯ ಇಂಡಸ್ ಇಂಡ್ ದೃಷ್ಟಿ ವಿಶೇಷಚೇತನ ಮಹಿಳೆಯರ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಒಡಿಶಾ ಮಹಿಳೆಯರು 20 ಓವರ್ಗಳಲ್ಲಿ 7 ವಿಕೆಟ್ ಗೆ 148 ರನ್ ಗಳಿಸಿದ್ದರು.
ಕರ್ನಾಟಕ ಮಹಿಳೆಯರು 16.5 ಓವರ್ ಗಳಲ್ಲಿ 5 ವಿಕೆಟ್ ಗೆ 150 ರನ್ ಗಳಿಸುವ ಮೂಲಕ ಜಯ ಸಾಧಿಸಿದರು.

ಬೆಂಗಳೂರಿನ ಆಲ್ಟಿಯಾರ್ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಕಳೆದ ಬಾರಿಯ ಚಾಂಪಿಯನ್ ಒಡಿಶಾ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 148 ರನ್ ಬಾರಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಕರ್ನಾಟಕ 16.5 ಓವರ್ ಗಳಲ್ಲಿ 5 ನಷ್ಟಕ್ಕೆ 150 ರನ್ ಬಾರಿಸಿ ಜಯ ಸಾಧಿಸಿತು.
ವರ್ಷಾ ಯು. ಸರಣಿ ಶ್ರೇಷ್ಠ ಹಾಗೂ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮೇಕೆದಾಟು ಯೋಜನೆ ಹಣ ಮೀಸಲಿಟ್ಟ ಸಿಎಂಗೆ ಅಭಿನಂದನೆಗಳು- ನಾಗರಾಜ್

0

ಕಾಂಗ್ರೆಸ್ ಪಕ್ಷದ ನಿರಂತರ ಹೋರಾಟದಿಂದ ಮೇಕೆದಾಟು ನೀರಾವರಿ ಯೋಜನೆಗೆ ಒಂದಿಷ್ಟು ಜಯ ಸಿಕ್ಕಿದ್ದು, ಸರ್ಕಾರ ಬಜೆಟ್ ನಲ್ಲಿ ಮಾಡಿದಂತೆ ಆದಷ್ಟು ಬೇಗ ನೀರಾವರಿ ಯೋಜನೆಗಳು ಕಾರ್ಯಗತವಾಗಬೇಕು ಎಂದು ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ವೈ.ಹೆಚ್. ನಾಗರಾಜ್ ಅವರು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಮತ್ತು ರಾಜ್ಯದ ವಿವಿಧೆಡೆಯಿಂದ ಪಾದಯಾತ್ರೆಗೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರ ಹೋರಾಟದ ಫಲವಾಗಿ ನೀರಾವರಿ ಯೋಜನೆಗಳಿಗೆ ಸರ್ಕಾರ ಈಗ ಹಣ ಮೀಸಲಾಗಿಟ್ಟಿದೆ.

ಮೇಕೆದಾಟು ಯೋಜನೆಗೆ ಸಾವಿರ ಕೋಟಿ ಘೋಷಿಸಲಾಗಿದೆ. ಪಕ್ಷದ ಸಂಘಟನೆಯ ಹೋರಾಟದ ಫಲವಾಗಿ ಜಯ ಸಿಕ್ಕಿದೆ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ, ಸಂಬಂಧಪಟ್ಟ ಸಚಿವರಿಗೆ ಅಭಿನಂದನೆಗಳು ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಜನರ ಧ್ವನಿಯಾಗಿ ಹೋರಾಟ ಹಮ್ಮಿಕೊಂಡಿತ್ತು. ಆದರೆ ಸರ್ಕಾರದ ಘೋಷಣೆಗಳು ಕೇವಲ ಕಾಗದದಲ್ಲಿ ಮಾತ್ರ ಉಳಿಯಬಾರದು. ಕಾರ್ಯಗತಗೊಳ್ಳುವ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆಯ ಯೋಜನೆಜಾರಿಗೆ ನ್ಯಾಯಾಲಯದ ಹೋರಾಟ ಸೇರಿದಂತೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಹಾಗೂ ಪರಿಸರ ಇಲಾಖೆಯ ಒಪ್ಪಿಗೆ ಪಡೆಯುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ಎಲ್ಲಾ ಜವಾಬ್ದಾರಿಗಳನ್ನು ಆದಷ್ಟು ಬೇಗ ಕಾರ್ಯಗತಗೊಳಿಸಬೇಕು ಎಂದು ಅವರು ತಿಳಿಸಿದ್ದಾರೆ.

ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್ ಪಕ್ಷದ ಮೈಲಿಗಲ್ಲಾಗಿದೆ. ಸತ್ಯಕ್ಕೆ ಒಂದಿಷ್ಟು ಜಯ ಸಿಕ್ಕಿದೆ. ಹೋರಾಟದಲ್ಲಿ ಭಾಗವಹಿಸಿದ ಎಲ್ಲಾ ಕಾಂಗ್ರೆಸ್ ಮುಖಂಡರಿಗೆ, ಕಾರ್ಯಕರ್ತರಿಗೆ ಯೋಜನೆಗಾಗಿ ಬಜೆಟ್ ನಲ್ಲಿ ಹಣ ಮೀಸಲಿಟ್ಟ ರಾಜ್ಯದ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು. ಆದಷ್ಟು ಬೇಗ ಯೋಜನೆ ಆಗಲಿ ಎಂದು ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮಾರ್ಚ್ 9 ರಿಂದ ರೈತ ಸಂಘದಿಂದ ಜನ ಜಾಗೃತಿ ಜಾಥಾ

0

ಜನಾಂದೋಲನಗಳ ಮಹಾಮೈತ್ರಿ ವತಿಯಿಂದ ಕರ್ನಾಟಕ ಸರ್ಕಾರದ 3 ಕರಾಳ ಕೃಷಿ ಕಾಯ್ದೆಗಳ ವಾಪಸಾತಿಗೆ ಆಗ್ರಹಿಸಿ ಕಾಗೋಡಿನಿಂದ ತುಮಕೂರು ಜಿಲ್ಲೆಯ ಜುಂಜಪ್ಪನ ಗುಡ್ಡೆ ಮಾರ್ಗವಾಗಿ ಬೆಂಗಳೂರಿಗೆ ಜನ ಜಾಗೃತಿ ಜಾಥಾವನ್ನು ಮಾರ್ಚ್ 9 ರಿಂದ 15ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎನ್. ಶಿವಾನಂದ ಕುಗ್ವೆ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ರೈತರ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ರೈತ ಸಂಘಟನೆಗಳು ಈಗಾಗಲೇ ಈ ಕಾಯ್ದೆಗಳನ್ನು ವಿರೋಧಿಸಿವೆ. ರಾಜ್ಯ ಸರ್ಕಾರ ಇದುವರೆಗೂ ಇವುಗಳನ್ನು ವಾಪಸ್ ತೆಗೆದುಕೊಂಡಿಲ್ಲ. ವಾಪಸ್ ತೆಗೆದುಕೊಳ್ಳುವಂತೆ ಆಗ್ರಹಿಸಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ 2020, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ, ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ ಗಳಿಂದ ರೈತರಿಗೆ ಆರ್ಥಿಕ ಹೊರೆಯಾಗುತ್ತದೆ. ಉಳುವವನೇ ಭೂಮಿಯ ಒಡೆಯ ಎಂಬ ಆಶಯದ ವಿರುದ್ಧವಾಗಿ ಉಳ್ಳವರಿಗೆ ಎಲ್ಲಾ ಭೂಮಿ ಸಿಗುತ್ತಿದೆ. ಎಪಿಎಂಸಿಗೆ ಬಂಡವಾಳ ಹೂಡಿಕೆದಾರರು ಬಂದು ಜೂಜು ವ್ಯಾಪಾರ ಮಾಡುತ್ತಾರೆ. ಜಾನುವಾರುಗಳ ಹತ್ಯಾ ನಿಷೇಧ ಕಾಯ್ದೆ ಇಂದ ರೈತರಿಗೆ ಸಾಕಲು ಆರ್ಥಿಕ ಹೊರೆಯಾಗುತ್ತಿದೆ. ಆದ್ದರಿಂದ ಈ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮಾರ್ಚ್ 9 ರಂದು ಬೆಳಗ್ಗೆ 10 ಗಂಟೆಗೆ ಕಾಗೋಡಿನಲ್ಲಿ ಜಾಥಾಕ್ಕೆ ಚಾಲನೆ ನೀಡಲಾಗುವುದು. ಈ ಜಾಥಾ ಜುಂಜಪ್ಪ ಗುಡ್ಡೆ ಮಾರ್ಗವಾಗಿ ಬೆಂಗಳೂರು ತಲುಪಲಿದೆ. ಮಾರ್ಚ್15ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಜಿಲ್ಲಾ ಸಂಯೋಜಕ ಎನ್.ಡಿ. ವಸಂತ್ ಕುಮಾರ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಮಂಜುನಾಥಗೌಡ ನಿಸರಾಣಿ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಬಿ. ಸೇನಾಪತಿ ಗೌಡ, ಎಎಪಿ ಜಿಲ್ಲಾ ಸಂಚಾಲಕ ಮನೋಹರ್ ಗೌಡ, ಎಎಪಿ ನಗರ ಸಂಚಾಲಕ ಸುರೇಶ್ ಕೋಟೆಗಾರು ಸೇರಿ ಇನ್ನಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮಾರ್ಚಿಯಲ್ಲೇ ಮಳೆರಾಯ ಬರುವ ಸೂಚನೆ ಹವಾಮಾನ ಇಲಾಖೆ

0

ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣಹವೆ ಇರುವುದರಿಂದ ಮಾರ್ಚ್ ತಿಂಗಳ ಬಿಸಿಲಿಗೆ ಜನರು ತತ್ತರಿಸಿದ್ದಾರೆ.

ಇದರೊಂದಿಗೆ ರಾಜ್ಯದ ಹಲವು ಕಡೆ ಮಾರ್ಚ್ 7ರ ನಂತರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರದಲ್ಲಿ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.
ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಬರುವ ಕೆಲವು ಜಿಲ್ಲೆಗಳಲ್ಲಿ ಮಾರ್ಚ್ 7,8,9,ರಂದು ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಮಾರ್ಚ್ 8ರಂದು ಉತ್ತರ ಕನ್ನಡ,ದಕ್ಷಿಣ ಕನ್ನಡ, ಉಡುಪಿ, ಜಿಲ್ಲೆಗಳಲ್ಲಿ ಹಾಗೂ ಹಾವೇರಿ ಬೆಳಗಾವಿ, ಧಾರವಾಡ, ಗದಗ, ಜಿಲ್ಲೆಯ ಕೆಲವು ಕಡೆ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ ಎನ್ನಲಾಗಿದೆ.

ರಾಜ್ಯದ ಇತರ ಜಿಲ್ಲೆಗಳಲ್ಲಿ ಬಿಸಿಲು, ಒಣ ಹವೆ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರೈತಾಭಿಮಾನಕ್ಕೆ ಪಾತ್ರ ಯಡಿಯೂರಪ್ಪನವರ ಸಾಧನೆ

0

ದೂರದೃಷ್ಟಿಯ ನಾಯಕತ್ವ ಇದ್ದವರು ಇದ್ದರೆ ರಾಜ್ಯ ಸುಭೀಕ್ಷ ವಾಗುತ್ತದೆ ಎಂಬುದಕ್ಕೆ ಯಡಿಯೂರಪ್ಪನವರೇ ನಿದರ್ಶನ. ಶಿಕಾರಿಪುರ ತಾಲೂಕು ಸಂಪೂರ್ಣ ನೀರಾವರಿಯಾಗುತ್ತಿದೆ. ಯಡಿಯೂರಪ್ಪನವರು ರಾಜ್ಯದ ಮೂಲೆ ಮೂಲೆಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಕೆಲಸಗಳು ಇಂದು ಮಾತನಾಡುತ್ತಿವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಯಡಿಯೂರಪ್ಪನವರನ್ನು ಹೊಗಳಿದ್ದಾರೆ.

ಶಿಕಾರಿಪುರದಲ್ಲಿ‌ ನಡೆದ ರೈತಾಭಿಮಾನ‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ, ಯಡಿಯೂರಪ್ಪ ಅವರು ಯಾವುದೇ ಕೆಲಸ ಮಾಡಬೇಕು ಎಂದು ಕೊಂಡರೆ ಅದನ್ನು ಮಾಡುತ್ತಿರುವವರು. ನಾಯಕನಿಗೆ ಸೂಕ್ಷ್ಮತೆ ಇರಬೇಕು ಎಂಬುದನ್ನು ನಾವು ಯಡಿಯೂರಪ್ಪ ಅವರನ್ನು ನೋಡಿ ಕಲಿಯಬೇಕಿದೆ ಎಂದರು.

ನಾನು ನೀರಾವರಿ ಸಚಿವನಾದಾಗ ನಾನು ಚಾಮರಾಜ ನಗರಕ್ಕೆ ಹೋಗಿದ್ದೆ.ಆಗ ಸುತ್ತೂರು ಶ್ರೀಗಳು ನೀರಾವರಿ ಯೋಜನೆ ರೂಪಿಸುವಂತೆ ಸಲಹೆ ನೀಡಿದರು.ಆಗ ಕಬಿನಿ ಸೆಕೆಂಡ್ ಸ್ಟೇಜ್ ಯೋಜನೆ ರೂಪಿಸಲು ಕಾರಣಿಕರ್ತರಾದವರು ಯಡಿಯೂರಪ್ಪ ಅವರು.ಬಳಿಕ ನಾವು ಅಧಿಕಾರ ಕಳೆದುಕೊಂಡೆವು. ಆದರೂ ಜನ ಯಡಿಯೂರಪ್ಪ ಅವರನ್ನು ಹುಡುಕಿಕೊಂಡು ಬಂದು ಸನ್ಮಾನ ಮಾಡುತ್ತಿದ್ದರು ಎಂದರು.
ರೈತರಿಗೆ ಹತ್ತು ಎಚ್ ಪಿ ಪಂಪ್ ವರೆಗೆ ಉಚಿತ ವಿದ್ಯುತ್ ನೀಡಿದ್ದು ಯಡಿಯೂರಪ್ಪ ಅವರು. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 58 ಲಕ್ಷ ರೈತರಿಗೆ ತಲಾ 4 ಸಾವಿರ ರೂಪಾಯಿ ರಾಜ್ಯದ ಪಾಲನ್ನು ನೀಡಿದ್ದು ಯಡಿಯೂರಪ್ಪ ಅವರು.ಅವರು ಎಂದು ವೈಯಕ್ತಿಕವಾಗಿ ಯೋಚಿಸುವುದಿಲ್ಲ‌. ಅವರು ಅಧಿಕಾರ ಬಿಟ್ಟಾಗಲೂ ಅವರಲ್ಲಿ ಕಹಿ ಎಂಬುದಿರಲಿಲ್ಲ‌. ಮತ್ತೆ ರಾಜ್ಯ ಸುತ್ತಿ ಪಕ್ಷ ಅಧಿಕಾರಕ್ಕೆ ತರುತ್ತೇನೆ ಎಂಬುದ ಅವರ ಬದ್ಧತೆ ತೋರುತ್ತಿದೆ ಎಂದರು.

ರಾಜ್ಯದಲ್ಲಿ ಕೋವಿಡ್ ಯಶಸ್ವಿಯಾಗಿ ನಿಭಾಯಿಸಿದ್ದು ಯಡಿಯೂರಪ್ಪ ಅವರು‌.ಬಜೆಟ್ ನಲ್ಲಿ ಇದನ್ನು‌ನಾನು ಹೇಳಿದ್ದೇನೆ.ಯಡಿಯೂರಪ್ಪ ಹಾಕಿಕೊಟ್ಟ ಯೋಜನೆಗಳು ಹಾಗೂ ಹಾದಿಯಲ್ಲಿ ನಾವು ನಡೆಯುತಿದ್ದೆವೆ. ನಾನು ಬಜೆಟ್ ನಲ್ಲಿ ದುಡಿಮೆಯೇ ದೊಡ್ಡಪ್ಪ ಎಂದು ಹೇಳಿದ್ದೇನೆ.
ನಾನು‌ ಜನರಲ್ಲಿ ನಂಬಿಕೆ ಇಟ್ಟಿದ್ದೇನೆ. ಅವರಿಗೆ ಸಹಾಯ ಮಾಡಿದಾರೆ ದುಡಿದು ಹೆಚ್ಚಿನ ಆದಾಯ ಗಳಿಸುತ್ತಾರೆ ಎಂಬ ನಂಬಿಕೆ ನನಗಿದೆ. ಕರ್ನಾಟಕ ಇಡೀ ದೇಶದಲ್ಲಿ ಮಾದರಿಯಾಗಬೇಕು‌ ಎಂಬ ಯಡಿಯೂರಪ್ಪ ಅವರ ಆಸೆಯಂತೆಯೇ ನಾನು ಕೆಲಸ ಮಾಡುತ್ತೇನೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಬಾಂಬ್ ಯುದ್ಧದ ಜೊತೆ ಸೈಬರ್ ಅಸ್ತ್ರ ಬಳಕೆ

0

ರಷ್ಯಾ-ಉಕ್ರೇನ್‌ ಯುದ್ಧ ನಡೆಯುತ್ತಿರುವಂತೆಯೇ ಅಲ್ಲಿ ಸೈಬರ್‌ ಯುದ್ಧ ತೀವ್ರ ಗೊಂಡಿದೆ. ಉಕ್ರೇನ್‌ನ ಡಿಜಿಟಲ್‌ ಸೇನೆಯು ಸೈಬಲ್‌, ಇನ್ಫೋ ವಾರ್‌ ಮತ್ತು ಇಂಟೆಲ್ ಮೂಲಕ ರಷ್ಯಾದ ವಿರುದ್ಧ ಸೈಬರ್ ಯುದ್ಧ ಪ್ರಾರಂಭಿಸಿವೆ.

ಉಕ್ರೇನ್‌ನ ಹ್ಯಾಕರ್‌ಗಳ ಗುಂಪು ಸ್ವಯಂ ಪ್ರೇರಿತವಾಗಿ, ರಷ್ಯಾಗೆ ಇಂಟರ್‌ನೆಟ್‌ ಪೂರೈಕೆ ಮಾಡುವ ವ್ಯವಸ್ಥೆಯನ್ನೇ ಹ್ಯಾಕ್‌ ಮಾಡಿದೆ ಎಂದು ತಿಳಿದುಬಂದಿದೆ.

ಇದರಿಂದಾಗಿ ಒಟ್ಟಾರೆಯಾಗಿ ಇಡೀ ಐರೋಪ್ಯ ಒಕ್ಕೂಟದಲ್ಲಿ ಬಳಕೆದಾರರಿಗೆ ಇಂಟರ್‌ನೆಟ್‌ ಸಮಸ್ಯೆ ಉಂಟಾಗಿದೆ.

ಫ್ರಾನ್ಸ್‌ನಲ್ಲಿ ನಾರ್ಡ್‌ನೆಟ್‌ ಎಂಬ ಸಂಸ್ಥೆ ನೀಡುವ ಉಪಗ್ರಹ ಇಂಟರ್‌ನೆಟ್‌ ವ್ಯವಸ್ಥೆಯನ್ನು ಬಳಕೆ ಮಾಡುವ 9 ಸಾವಿರ ಮಂದಿಗೆ ತೊಂದರೆಯಾಗಿದೆ. ಬಿಗ್‌ ಬ್ಲೂ ಎಂಬ ಸ್ಯಾಟಲೈಟ್‌ ಇಂಟರ್‌ನೆಟ್‌ ಕಂಪನಿಯು ಜರ್ಮನಿ, ಫ್ರಾನ್ಸ್‌, ಹಂಗೇರಿ, ಗ್ರೀಸ್‌, ಇಟೆಲಿ, ಪೋಲೆಂಡ್‌ಗಳಲ್ಲಿ 40 ಸಾವಿರ ಮಂದಿ ಗ್ರಾಹಕರಿಗೆ ತೊಂದರೆಯಾಗಿದೆ ಎಂದು ತಿಳಿಸಿದೆ. ಈ ಮೂಲಕ ಸೈಬರ್ ಹ್ಯಾಕರ್ ಗಳು ರಷ್ಯಾದ ನಿದ್ದೆಗೆಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಬೃಹತ್ ಕಟ್ಟಡಗಳ ಪರವಾನಗಿಗೆ ಹಸಿರು ಪರಿಸರ ಕಡ್ಡಾಯ

0

ಪರಿಸರ ಸಂರಕ್ಷಣೆಗೆ ಒತ್ತು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಹೊಸ ನಿಯಮ ಜಾರಿಗೆ ಚಿಂತನೆ ನಡೆಸಿದೆ. ದೊಡ್ಡ ಕಟ್ಟಡಗಳ ಸುತ್ತ ಶೇಕಡ 10 ರಷ್ಟು ಗಿಡ ಮರ ಬೆಳೆಸುವುದು ಕಡ್ಡಾಯಗೊಳಿಸಲಾಗಿದೆ.

ದೇಶದಲ್ಲಿ ಇನ್ನು ಮುಂದೆ ನಿರ್ಮಾಣವಾಗಲಿರುವ ಹೊಸ ಲೇಔಟ್ ಗಳಲ್ಲಿ ಗಿಡಮರಗಳನ್ನು ಬೆಳೆಸಬೇಕಿದೆ. ವಾಣಿಜ್ಯ ಕಟ್ಟಡಗಳ ಸುತ್ತಲೂ ಮರಗಳನ್ನು ಬೆಳೆಸಬೇಕಿದೆ. ಕೇಂದ್ರ ಪರಿಸರ ಸಚಿವಾಲಯದಿಂದ ವಸತಿ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಹಸಿರು ಹೊದಿಕೆ ಹೆಚ್ಚಿಸುವ ಹೊಸ ಪ್ರಸ್ತಾಪ ಮಾಡಲಾಗಿದೆ. ‘ಕಟ್ಟಡ ನಿರ್ಮಾಣ ಪರಿಸರ ನಿರ್ವಹಣೆ ನಿಯಂತ್ರಣ -2022’ ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಸಾರ್ವಜನಿಕರಿಂದ ಸಲಹೆ, ಮತ್ತು ಆಕ್ಷೇಪಣೆ ಕೇಳಲಾಗಿದೆ ಎಂದು ತಿಳಿದುಬಂದಿದೆ.

5 ಸಾವಿರ ಚ.ಮೀ.ಗಿಂತಲೂ ಹೆಚ್ಚಿನ ವಿಸ್ತೀರ್ಣದ ಹೊಸ ಕಟ್ಟಡ ಯೋಜನೆ, ಬಡಾವಣೆಗಳ ನಿರ್ಮಾಣ, ಹಳೆ ಕಟ್ಟಡಗಳ ನವೀಕರಣದ ಸಂದರ್ಭದಲ್ಲಿ ಪ್ರತಿ 80 ಚ.ಮೀ. ಒಂದು ಮರ ಇರಬೇಕು.

ಇಡೀ ಕಟ್ಟಡ ಪ್ರದೇಶದಲ್ಲಿ ಶೇಕಡ 10 ರಷ್ಟು ಹಸಿರು ವಲಯ ಇರಬೇಕು. ಮಳೆ ನೀರು ಕೊಯ್ಲು ಯೋಜನೆ ಅನುಷ್ಠಾನಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ವ್ಯವಸ್ಥೆ ಅಳವಡಿಸುವಂತೆ ತಿಳಿಸಲಾಗಿದೆ.
5000 ಚ.ಮೀ.ಗಾತ್ರದ ಕಟ್ಟಡಗಳಿಗೆ ಇದು ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನಾಗರಿಕರ ಸಹಕಾರದಿಂದ ಏಕರೂಪ ತೆರಿಗೆ ಯಶಸ್ಸು

0

ಹತ್ತಕ್ಕೂ ಅಧಿಕ ರೀತಿಯ ತೆರಿಗೆಗಳಿದ್ದ ದಿನಗಳನ್ನು ಕೊನೆಗಾಣಿಸಿ ಏಕರೂಪದ, ಸರಳವಾದ ಜಿಎಸ್‌ಟಿ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಆದರೆ ಇದರ ಸಂಪೂರ್ಣ ಯಶಸ್ಸು ನಾಗರಿಕರ ಜಾಗೃತಿ ಮೇಲೆ ಅವಲಂಬಿತವಾಗಿದೆ ಎಂದು ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತ ಡಾ. ಬಿ. ವಿ. ಮುರಳಿಕೃಷ್ಣ ಅಭಿಪ್ರಾಯಪಟ್ಟರು.

ಕುವೆಂಪು ವಿವಿಯ ನಿರ್ವಹಣಾ ಶಾಸ್ತ್ರ ವಿಭಾಗವು ವಿವಿಯ ಬಸವ ಸಭಾಭವನದಲ್ಲಿ “ಭಾರತದಲ್ಲಿ ತೆರಿಗೆ ನೀತಿ ಮತ್ತು ವ್ಯವಹಾರಗಳು: ಜಿ.ಎಸ್.ಟಿ.” ಕುರಿತು ಆಯೋಜಿಸಿರುವ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಭಾರತದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ಮತ್ತು ಕಸ್ಟಮ್ ತೆರಿಗೆಯೆಂಬ ಕೇವಲ ಎರಡು ತೆರಿಗೆಗಳಿವೆ. ಈ ಮೊದಲಿನ ವ್ಯಾಟ್ ಸೇರಿದಂತೆ ಹಲವು ಬಗೆಯ ತೆರಿಗೆಗಳನ್ನು ತೆಗೆದುಹಾಕಲಾಗಿದೆ. ವಾರ್ಷಿಕವಾಗಿ 40 ಲಕ್ಷಕ್ಕಿಂತ ಅಧಿಕ ವ್ಯವಹಾರ ನಡೆಸುವ ಸರಕು ವರ್ತಕರು ಮತ್ತು 20 ಲಕ್ಷಕ್ಕಿಂತ ಅಧಿಕ ವ್ಯವಹಾರ ನಡೆಸುವ ಸೇವೆ ನೀಡುವ ವರ್ತಕರು ಜಿ.ಎಸ್.ಟಿ.ಗೆ ನೊಂದಾಯಿಸಿಕೊಳ್ಳುವುದು ಕಡ್ಡಾಯ. ಈ ಸರಳ ತೆರಿಗೆ ವ್ಯವಸ್ಥೆಯನ್ನು ರೂಪಿಸುವ ಮತ್ತು ಜಾರಿಗೊಳಿಸುವ ಹಿಂದೆ 12 ವರ್ಷಗಳ ಶ್ರಮವಿದೆ ಎಂದರು.

ಗ್ರಾಹಕರಾದ ನಾವು ಯಾವುದೇ ವಸ್ತುವನ್ನು ಅಂಗಡಿಗಳಲ್ಲಿ ಕೊಂಡುಕೊಂಡಾಗ ರಶೀದಿ ಪಡೆಯಬೇಕು. ದೊಡ್ಡ ಅಂಗಡಿಗಳು, ಉದ್ಯಮಗಳ ಪ್ರತೀ ವ್ಯವಹಾರದ ಹಿಂದೆ ರಶೀದಿಯ ಅಗತ್ಯತೆಯಿರುತ್ತದೆ ಮತ್ತು ಆ ಮೂಲಕ ಸರ್ಕಾರಕ್ಕೆ ತೆರಿಗೆ ಸಲ್ಲಬೇಕಿರುತ್ತದೆ. ಜಾಗೃತತೆಯಿಂದ ರಶೀದಿಗಳನ್ನು ಪಡೆಯುವುದೇ ದೇಶದ ಬೆಳವಣಿಗೆಗೆ ನಾವು ನೀಡುವ ಕೊಡುಗೆಯಾಗಿರುತ್ತದೆ. ಕೊರೊನಾ ಸಂದರ್ಭದಲ್ಲಿಯೂ ಸಹ 1.31 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ. ಜಿಎಸ್‌ಟಿಯಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಅವುಗಳ ಗುರುತಿಸುವಿಕೆ ಹಾಗೂ ಸರಿಪಡಿಸುವಿಕೆ ನಿರಂತರವಾಗಿ ಜಾರಿಯಲ್ಲಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಜಗತ್ತಿನಾದ್ಯಂತ 166 ದೇಶಗಳು ಈ ಮೊದಲೇ ಜಿಎಸ್‌ಟಿ ಅಳವಡಿಸಿಕೊಂಡಿವೆ. ಭಾರತವು ಒಂದು ವಿಶಿಷ್ಟ, ವೈವಿಧ್ಯಮಯ ದೇಶವಾದ ಕಾರಣ ಜಿಎಸ್‌ಟಿ ಜಾರಿ ತಡವಾಯಿತು. ನಾವು ಪ್ರಾಮಾಣಿಕವಾಗಿ ಬಿಲ್‌ಗಳನ್ನು ಪಡೆಯುವ ಮೂಲಕ ದೇಶದ ತೆರಿಗೆ ವ್ಯವಸ್ಥೆ ಪಾಲಿಸೋಣ ಹಾಗೂ ದೇಶದ ಅಭಿವೃದ್ಧಿಗೆ ಕೈಜೋಡಿಸೋಣ ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.

ಈ ಸಂದರ್ಭದಲ್ಲಿ ವಿವಿಯ ಕುಲಸಚಿವೆ ಅನುರಾಧ ಜಿ, ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್ ಕುಮಾರ್, ನಿರ್ವಹಣಾ ವಿಭಾಗದ ಪ್ರೊ. ಹೆಚ್. ಎನ್. ರಮೇಶ್, ಪ್ರೊ. ಹಿರೇಮಣಿ ನಾಯ್ಕ್, ಪ್ರೊ. ವೆಂಕಟೇಶ್, ಡಾ. ಕೆ. ಆರ್. ಮಂಜುನಾಥ್, ಸೇರಿದಂತೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಹಾಜರಿದ್ದರು.

ಉದ್ಘಾಟನಾ ಕಾರ್ಯಕ್ರಮದ ನಂತರ ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗಿದ್ದು, ಶಿವಮೊಗ್ಗದ ಚಾರ್ಟೆಡ್ ಅಕೌಂಟೆಂಟ್ ಸಿ.ಎ. ಗೌರೀಶ್ ಭಾರ್ಗವ್, ಶಿವಮೊಗ್ಗದ ಆಡಿಟರ್ ಮತ್ತು ಟ್ಯಾಕ್ಸ್ ಕನ್ಸಲ್ಟೆಂಟ್ ಪರಮೇಶ್ವರ, ಶಿವಮೊಗ್ಗದ ವಾಣಿಜ್ಯ ತೆರಿಗೆಗಳ ಜಂಟಿ ನಿಯಂತ್ರಕ ಕೆ. ಮಂಜುನಾಥ ತೆರಿಗೆ ನೀತಿಗಳ ಕುರಿತು ವಿವಿಧ ವಿಷಯಗಳ ಮೇಲೆ ವಿಶೇಷ ಉಪನ್ಯಾಸ ನೀಡಿದರು.