ನವರಸನಾಯಕ ಎಂದೇ ಖ್ಯಾತಿ ಪಡೆದಿರುವ ನಟ ಜಗ್ಗೇಶ್ ಅವರ ನಟನೆಯ ವಿಜಯ್ ಪ್ರಸಾದ್ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಎಂಟರ್ ಟೇನರ್ ಸಿನಿಮಾ ತೋತಾಪುರಿ ಚಿತ್ರದ ಬಾಗ್ಲು ತಗಿ ಮೇರಿ ಜಾನ್ ಎಂಬ ಹಾಡು ಈಗಾಗಲೇ ಎಲ್ಲೆಡೆ ಸದ್ದು ಮಾಡುತ್ತಿದೆ.
ಈಗ ತೋತಾಪುರಿ ಚಿತ್ರದ ಬಿಡುಗಡೆ ದಿನಾಂಕವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ. ಈ ಸಿನಿಮಾವನ್ನು ವೀಕ್ಷಿಸಲು ಸಿನಿ ಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ತೋತಾಪುರಿ ಚಿತ್ರವು ಸೆಪ್ಟೆಂಬರ್ 30ರಂದು ರಾಜ್ಯಾದ್ಯಂತ ಈ ಸಿನಿಮಾ ತೆರೆ ಕಾಣಲಿದೆ.
ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಗೆ ಜೋಡಿಯಾಗಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ. ಕೆ. ಎ. ಸುರೇಶ್ ನಿರ್ಮಾಣ ಮಾಡಿದ್ದಾರೆ. ಸುಮನ್ ರಂಗನಾಥ್, ಡಾಲಿ ಧನಂಜಯ್, ದತ್ತಾತ್ರೆಯ, ವೀಣಾ ಸುಂದರ್ ಸೇರಿದಂತೆ ಇನ್ನೂ ಅನೇಕ ಕಲಾವಿದರು ತೆರೆ ಮೇಲೆ ಬಣ್ಣ ಹಚ್ಚಿದ್ದಾರೆ.