Saturday, February 21, 2026
Saturday, February 21, 2026
Home Blog Page 1680

ಸುಮಿಯಲ್ಲಿದ್ದ ನಾಗರಿಕರ ಸ್ಥಳಾಂತರಕ್ಕೆ ಕದನ ವಿರಾಮ ಘೋಷಣೆ

0

ನಾಗರಿಕರ ಸ್ಥಳಾಂತರಕ್ಕೆ ಅನುವಾಗುವ ನಿಟ್ಟಿನಲ್ಲಿ ಮಾನವೀಯ ನೆಲೆಯ ಮೇಲೆ ರಷ್ಯಾ ಬುಧವಾರ ಉಕ್ರೇನ್‌ನಲ್ಲಿ ಕದನ ವಿರಾಮ ಘೋಷಿಸಿರುವುದಾಗಿ ರಷ್ಯಾದ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ರಷ್ಯಾ ಕಾಲಮಾನದ ಪ್ರಕಾರ, ಇಂದು 10 ಗಂಟೆಯಿಂದ (ಮಾರ್ಚ್‌ 9) ರಷ್ಯಾ ಒಕ್ಕೂಟವು ಕದನ ವಿರಾಮ ಘೋಷಿಸಿದೆ. ಮಾನವೀಯ ಕಾರಿಡಾರ್‌ ಕಲ್ಪಿಸುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯದ ಘಟಕವು ತಿಳಿಸಿದೆ.
ಮಾರ್ಚ್‌ 9ರಂದು 3:00 ಗಂಟೆಗೂ ಮುನ್ನವೇ( ಮಾಸ್ಕೊ ಕಾಲಮಾನ) ಉಕ್ರೇನ್‌ ಜೊತೆಗೆ ನಿಗದಿತ ಮಾರ್ಗಗಳಲ್ಲಿ ಮಾನವೀಯ ಕಾರಿಡಾರ್‌ಗಳನ್ನು ತೆರೆಯುವುದಾಗಿ ಹೇಳಿದೆ.

ಸುಮಿಯಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ತೆರವು ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ರಷ್ಯಾ ಮತ್ತು ಉಕ್ರೇನ್‌ ‘ಸುರಕ್ಷಿತ ಕಾರಿಡಾರ್’ ಘೋಷಿಸಿದ್ದರಿಂದ ಮಂಗಳವಾರ ತೆರವು ಕಾರ್ಯಾಚರಣೆ ಸಾಧ್ಯವಾಯಿತು.

ಸುಮಿ ನಗರದಲ್ಲಿ ಸಿಲುಕಿದ್ದ 694 ಭಾರತೀಯ ವಿದ್ಯಾರ್ಥಿಗಳನ್ನು ಅಲ್ಲಿಂದ ತೆರವು ಮಾಡಲಾಗಿದೆ.
ರಾಜಧಾನಿ ಕೀವ್‌ನ ಹೊರ ಭಾಗದಲ್ಲಿಯೂ ನಾಗರಿಕರನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆದಿದೆ. ಆದರೆ, ಬಂದರು ನಗರಿ ಮರಿಯೊಪೋಲ್‌ನೊಂದ ಜನರನ್ನು ಸ್ಥಳಾಂತರಿಸುವ ಪ್ರಯತ್ನಗಳು ಇತ್ತೀಚೆಗೆ ಹಲವು ಬಾರಿ ವಿಫಲವಾಗಿವೆ. ಈ ಬಗ್ಗೆ ಉಕ್ರೇನ್‌ ಮತ್ತು ರಷ್ಯಾ ಪರಸ್ಪರ ದೂಷಿಸಿಕೊಂಡಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಇನ್ನು ಮುಂದೆ ವರ್ಷದಲ್ಲಿ ಎರಡು ಬಾರಿ ಟಿಇಟಿ ಪರೀಕ್ಷೆ

0

ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಇಲ್ಲಿದೆ. ಇನ್ನು ಮುಂದೆ ವರ್ಷಕ್ಕೆ ಎರಡು ಬಾರಿ ಟಿಇಟಿ ನಡೆಸಲಾಗುತ್ತದೆ ರಾಜ್ಯ ಸರ್ಕಾರ ತಿಳಿಸಿದೆ.

ರಾಜ್ಯ ಸರ್ಕಾರ ಜನವರಿ ಮತ್ತು ಜೂನ್ ನಲ್ಲಿ ವರ್ಷಕ್ಕೆ ಎರಡು ಬಾರಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.

2022 -23 ನೇ ಸಾಲಿನಿಂದ ವರ್ಷಕ್ಕೆ ಎರಡು ಬಾರಿ ಟಿಇಟಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.

ಟಿಇಟಿ ಪರೀಕ್ಷೆ ಕಷ್ಟವಾಗಿರುವುದರಿಂದ ಅರ್ಹತೆ ಪಡೆಯುವ ಅಭ್ಯರ್ಥಿಗಳ ಸಂಖ್ಯೆ ಶೇಕಡ 20 ಕ್ಕಿಂತ ಕಡಿಮೆ ಇದೆ. ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕವಾಗಲು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿದೆ. ಬಿಎಡ್ ಮತ್ತು ಡಿಎಡ್ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳು ಶಿಕ್ಷಕ ವೃತ್ತಿ ಕೈಗೊಳ್ಳಲು ಕಡ್ಡಾಯವಾಗಿ ಟಿಇಟಿ ಪಾಸಾಗಿ ಅರ್ಹತೆ ಪಡೆಯಬೇಕಿದೆ.

ಈ ಪರೀಕ್ಷೆಯನ್ನು ಇನ್ನುಮುಂದೆ ವರ್ಷಕ್ಕೆ ಎರಡು ಬಾರಿ ನಡೆಸಲಾಗುವುದು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಷ್ಯ ಪ್ರಸ್ತುತ ಅತೀ ಹೆಚ್ಚು ದಿಗ್ಬಂಧನಕ್ಕೊಳಗಾದ ರಾಷ್ಟ್ರ

0

ಉಕ್ರೇನ್‌ ವಿರುದ್ಧ ಆಕ್ರಮಣಗೈದ 12 ದಿನಗಳಲ್ಲೇ ರಷ್ಯಾವು ಇರಾನ್‌ ಮತ್ತು ಉತ್ತರ ಕೊರಿಯಾವನ್ನು ಹಿಂದಿಕ್ಕಿ, ಜಗತ್ತಿನಲ್ಲೇ ಅತೀ ಹೆಚ್ಚು ದಿಗ್ಬಂಧನಗಳಿಗೆ ಗುರಿಯಾದ ರಾಷ್ಟ್ರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳ ಆರ್ಥಿಕ ನಿರ್ಬಂಧಗಳ ಬಳಿಕ ಹೊಸದಾಗಿ 2,778 ಹೊಸ ದಿಗ್ಬಂಧನಗಳು ರಷ್ಯಾವನ್ನು ಕಟ್ಟಿಹಾಕಿದೆ ಎನ್ನಲಾಗಿದೆ.

ಹೀಗಾಗಿ ಒಟ್ಟು ದಿಗ್ಬಂಧನಗಳ ಸಂಖ್ಯೆ 5,530ಕ್ಕೇರಿದೆ.

ಇದು ಆರ್ಥಿಕ ಅಣ್ವಸ್ತ್ರದ ಯುದ್ಧ ಹಾಗೂ ಇತಿಹಾಸದಲ್ಲೇ ಅತೀ ಹೆಚ್ಚಿನ ಆರ್ಥಿಕ ದಿಗ್ಬಂಧನದ ಸಮರ ಎನ್ನಲಾಗಿದೆ.

ಕೇವಲ 2 ವಾರಗಳಲ್ಲಿ ರಷ್ಯಾ ಜಾಗತಿಕನಿರ್ಬಂಧದ ಅತೀ ದೊಡ್ಡ ಟಾರ್ಗೆಟ್‌ ಆಗಿ ಬದಲಾಯಿತು.

ನಿರ್ಬಂಧ ಎದುರಿಸಿದ ರಾಷ್ಟ್ರಗಳು
ಅಣ್ವಸ್ತ್ರ ಯೋಜನೆಗಳು ಹಾಗೂ ಭಯೋತ್ಪಾದನೆಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಇರಾನ್‌ಗೆ ಈ ಹಿಂದೆಯೇ ನಿರ್ಬಂಧಗಳನ್ನು ವಿಧಿಸಲಾಗಿದೆ.

ರಷ್ಯಾ, ಇರಾನ್‌ ಮಾತ್ರವಲ್ಲದೇ ಅತೀ ಹೆಚ್ಚು ನಿರ್ಬಂಧಕ್ಕೊಳಗಾದ ಇತರೆ ದೇಶಗಳೆಂದರೆ ಉತ್ತರ ಕೊರಿಯಾ, ವೆನಿಜುವೆಲಾ, ಮ್ಯಾನ್ಮಾರ್‌ ಮತ್ತು ಕ್ಯೂಬಾ ಎಂದು ತಿಳಿದುಬಂದಿದೆ.

ಉಕ್ರೇನ್‌ ಮೇಲೆ ಯುದ್ಧ ಸಾರುವುದಕ್ಕೂ ಮೊದಲೇ ರಷ್ಯಾದ ವಿರುದ್ಧ ಅಮೆರಿಕವು ಕೆಲವು ನಿರ್ಬಂಧಗಳನ್ನು ಹೇರಿತ್ತು.
2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ, ರಷ್ಯಾದಲ್ಲಿ ರಾಜಕೀಯ ಭಿನ್ನಮತೀಯರ ವಿರುದ್ಧ ದಾಳಿ ಮತ್ತಿತರ ಕಾರಣಗಳಿಗಾಗಿ ಒಟ್ಟು 2,778 ನಿರ್ಬಂಧಗಳನ್ನು ಹೇರಲಾಗಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಯುದ್ಧದ ನಶೆ ಪರಸ್ಪರ ನಾಶವಾಗಿದ್ದೆಷ್ಟು?

0

ಉಕ್ರೇನ್-ರಷ್ಯಾ ನಡುವೆ ಯುದ್ಧ ಮುಂದುವರೆದಿದೆ. ಉಕ್ರೇನ್ ನಲ್ಲಿ ರಷ್ಯಾ 202 ಶಾಲೆಗಳನ್ನು 34 ಆಸ್ಪತ್ರೆಗಳನ್ನು ನಾಶಪಡಿಸಿದೆ ಎಂದು ಉಕ್ರೇನ್ ಸರ್ಕಾರ ಮಾಹಿತಿ ತಿಳಿಸಿದೆ.

ಸುಮಿ ದಾಳಿಯಲ್ಲಿ ಈವರೆಗೆ 18 ಜನರನ್ನು ಬಲಿ ಪಡೆದುಕೊಂಡಿದೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ.

ಉಕ್ರೇನ್ ನಲ್ಲಿ ರಷ್ಯಾದ ಸೇನೆ 500 ಕೆಜಿ ಬಾಂಬ್ ನಿಂದ ದಾಳಿ ಮಾಡಿದೆ. ರಷ್ಯಾದ ದಾಳಿಯಲ್ಲಿ 202 ಶಾಲೆಗಳು ನಾಶವಾಗಿವೆ. 34 ಆಸ್ಪತ್ರೆಗಳು ಧ್ವಂಸವಾಗಿವೆ. ಜೈಟೋಮಿರ್ ನ ಶಾಲೆಯ ಮೇಲೆ ಕ್ಷಿಪಣಿ ದಾಳಿ ಮಾಡಲಾಗಿದೆ.

ಉಕ್ರೇನ್ ನ ರಕ್ಷಣಾ ಇಲಾಖೆಯ ಪ್ರಕಾರ, ಫೆಬ್ರವರಿ 24 ರಿಂದ 12,000 ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ. ಇದೇ ವೇಳೆ 303 ಕೆರೆಗಳು ನಾಶವಾಗಿವೆ. ಇಷ್ಟಲ್ಲದೆ, 1036 ಯೂನಿಟ್ ಶಸ್ತ್ರಸಜ್ಜಿತ ಯುದ್ಧ ವಾಹನಗಳು, 120 ಫಿರಂಗಿ ವ್ಯವಸ್ಥೆಗಳು, 56 ಎಂಎಲ್‌ಆರ್‌ಎಸ್, 27 ವಾಯು ರಕ್ಷಣಾ ವ್ಯವಸ್ಥೆಗಳು, 48 ವಿಮಾನಗಳು, 80 ಹೆಲಿಕಾಪ್ಟರ್ ಗಳು, 474 ಆಟೋಮೋಟಿವ್ ತಂತ್ರಜ್ಞಾನ ಮತ್ತು 3 ದೋಣಿಗಳನ್ನು ನಾಶಪಡಿಸಲಾಗಿದೆ ಎಂದು ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸಮಾನತೆ ಜನ್ಮ ಸಿದ್ದ ಹಕ್ಕು

0

ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಮಹಿಳೆಯರ ಸಾಧನೆಯನ್ನ ಮತ್ತು ಮಹಿಳಾ ಹಕ್ಕುಗಳನ್ನು ಉತ್ತೇಜಿಸುವ ಉದ್ದೇಶದಿಂದ ಮಾರ್ಚ್ 8ರಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಇಂದು ದೇಶದ ಪ್ರಗತಿಯ ಹಾದಿಯಲ್ಲಿ ಸಾಗಲು ಮಹಿಳೆಯರೂ ಕೂಡ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.
ಮಹಿಳೆ ತನ್ನ ಜೀವನದಲ್ಲಿ, ತಾಯಿಯಾಗಿ, ಅತ್ತೆಯಾಗಿ, ಸೊಸೆಯಾಗಿ, ಮಗಳಾಗಿ, ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾಳೆ.
ಎಲ್ಲಾ ಅಡೆತಡೆಗಳನ್ನು ಮೀರಿ ಕಲೆ, ಸಾಹಿತ್ಯ, ರಾಜಕೀಯ, ನೃತ್ಯ, ತಂತ್ರಜ್ಞಾನ, ಆರ್ಥಿಕತೆ, ಸಾಮಾಜಿಕ, ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಲಕ್ಷಾಂತರ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ.

ಆದರೆ, ಬಹಳಷ್ಟು ಹೆಣ್ಣು ಮಕ್ಕಳು ಹೆಣ್ಣಾಗಿ ಹುಟ್ಟುವುದು ಸುಲಭದ ಮಾತಲ್ಲ ಅಂತಾರೆ. ಅವರು ಹೀಗೆ ಹೇಳಲು ಕಾರಣವೂ ಇದೆ. ಹೆಣ್ಣೊಂದು ಹುಟ್ಟುತ್ತಲೇ ಈ ಸಮಾಜ ಅವಳ ಮೇಲೆ ನಿರ್ಬಂಧಗಳ ಬಲೆಯಲ್ಲಿ ಸಿಲುಕಿಸಿ ಬಿಡುತ್ತದೆ.
ಮನೆಯಲ್ಲಿ ಹೆಣ್ಣು ಮಗು ಹುಟ್ಟಿತೋ ಸಂತೋಷ ಪಡುವವರಿಗಿಂತ ಅಯ್ಯೋ, ಹೆಣ್ಣು ಮಗುವಾಯ್ತಾ? ಹೆಣ್ಣು ಹುಟ್ತು ಅಂದ್ರೆ ಹುಣ್ಣು ಹುಟ್ತು ಅಂತಾರೆ. ಈಗಿನ ಕಾಲದಲ್ಲಿ ಹೆಣ್ಣು ಮಗುವನ್ನ ಬೆಳೆಸುವುದು ತುಂಬಾ ಕಷ್ಟವಿದೆಯಂದು ಉದ್ಗಾರ ತೆಗೆದೇ ಬಿಡುತ್ತಾರೆ.

ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಮನೆಯಲ್ಲಿದ್ದಂತೂ ಮುಗಿಯಿತು.

ಮೊದಲು ಮದುವೆ ಮಾಡಿಸಿ ಬಿಡೋಣ ಎಂದು ಯೋಚಿಸುತ್ತಾರೆಯೇ ವಿನಃ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ತನ್ನ ಕಾಲ ಮೇಲೆ ನಿಂತುಕೊಂಡು ಬದುಕು ಸಾಗಿಸಲಿ ಎನ್ನುವ ತಂದೆ-ತಾಯಿ ಬೆರಳೆಣಿಕೆಯಷ್ಟು ಮಾತ್ರ ಸಿಗುತ್ತಾರೆ.

ಇಂದು ಪ್ರಪಂಚ ಎಷ್ಟೇ ಮುಂದುವರೆದಿದ್ದರೂ, ನಾವು ಚಂದ್ರಗ್ರಹಕ್ಕೆ ಕಾಲಿಟ್ಟಿದ್ದರೂ ಸಮಾಜದಲ್ಲಿನ ಜನರ ಆಲೋಚನೆಗಳು ಇನ್ನೂ ನಾಲ್ಕು ಗೋಡೆಯ ಮಧ್ಯೆಯೇ ಇವೆ.

ಹೆಣ್ಣುಮಕ್ಕಳ ನಡೆ-ನುಡಿ, ಮಾತು ಎಲ್ಲದರ ಮೇಲೂ ನಿರ್ಬಂಧಗಳು ಸಾಲುಸಾಲಾಗಿ ನಿಂತಿವೆ. ಅದೇನೆ ಈ ರೀತಿ ನಡೆಯುತ್ತಿದೆಯಾ .. ಹೆಣ್ಣುಮಕ್ಕಳು ತಗ್ಗಿ-ಬಗ್ಗಿ ನಡಿಬೇಕು. ಅದೇನು ಅಷ್ಟು ಜೋರಾಗಿ ನಗುತ್ತಿಯಲ್ಲಾ? ನೋಡಿದವರು ಎನ್ನೆಂದುಕೊಳ್ಳುತ್ತಾರೆ ಎನ್ನುವ ಸೌಜನ್ಯವೂ ಇಲ್ವಾ? ಮಾತು ಕಡಿಮೆ ಮಾಡಮ್ಮ.
ಸ್ವಲ್ಪ ಸಿಟ್ಟಾದರೂ ಸಾಕು, ಅಯ್ಯೋ ಹೆಣ್ಣುಮಕ್ಕಳಿಗೆ ತಾಳ್ಮೆ ಸಹನೆ ಇರಬೇಕು ಅಂತೆಲ್ಲಾ ನಿರ್ಬಂಧಗಳು ಅವಳ ಸುತ್ತಲೂ ಸುಳಿದಾಡುತ್ತವೆ.

ಒಂದು ವೇಳೆ ಮದುವೆಯಾಗಿ ಗಂಡನ ಮನೆಗೆ ಹೋದರಂತೂ ಮುಗಿಯಿತು. ಎಷ್ಟೇ ಕಷ್ಟಗಳಿದ್ದರೂ, ಸುಮ್ಮನಿದ್ದು ಬಿಡಬೇಕು. ಗಂಡನ ಮನೆಯಲ್ಲಿ ಹೊಂದಿಕೆ ಆಗುತ್ತಿಲ್ಲಾ ಎಂದರೆ, ಅಯ್ಯೋ ನೀನು ಹೆಣ್ಣುಮಗಳಮ್ಮ ಎಲ್ಲಾ ಅನುಸರಿಸಿಕೊಂಡು ಹೋಗಬೇಕು ಎನ್ನುವವರೇ ಹೆಚ್ಚು.

ಇಂದು ಹೆಣ್ಣು ಮನೆ ಮಂದಿಯ ನಿರ್ಬಂಧಗಳು, ಸಮಾಜದ ಚೌಕಟ್ಟಿನಿಂದ ಹೊರಬಂದು ಎಲ್ಲಾ ಕ್ಷೇತ್ರದಲ್ಲಿಯೂ ಸಹ ಪುರುಷರಿಗೆ ಸರಿಸಮಾನಳಾಗಿ ನಿಂತಿದ್ದಾಳೆ.

ಕಾಲದೊಂದಿಗೆ ಜೀವನಶೈಲಿಯ ನಷ್ಟೇ ಅಲ್ಲದೆ, ಹೆಣ್ಣುಮಕ್ಕಳು ಯೋಚಿಸುವ ರೀತಿಯಲ್ಲೂ ಬದಲಾವಣೆ ಮೂಡಿದೆ. ತನ್ನ ಜೀವನವೆಂದರೆ ಕೇವಲ ಮದುವೆ,ಸಂಸಾರ, ಮಕ್ಕಳು ಎನ್ನುವುದಷ್ಟೇ ಜೀವನವಲ್ಲ. ಅದು ಜೀವನದ ಒಂದು ಭಾಗವಷ್ಟೇ ಎಂದು ಯೋಚಿಸುವ ಮಟ್ಟಕ್ಕೆ ಬೆಳೆದಿದ್ದಾರೆ.

ಹೆಣ್ಣು ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಿದಾಗ ಕಾನೂನು ರೂಪಿಸುವ ಅಧಿಕಾರವನ್ನು ಸಹ ತನ್ನ ಕೈಗೆತ್ತಿಕೊಳ್ಳಬೇಕು.
ಪುರುಷಪ್ರಧಾನ ಸಮಾಜದಲ್ಲಿ ನಮಗೂ ಹಕ್ಕು ನೀಡಿ ಎಂದು ಬೇಡಿಕೊಳ್ಳದೇ, ತನ್ನ ಅಧಿಕಾರ ಮತ್ತು ಹಕ್ಕುಗಳನ್ನು ಪಡೆಯುವಲ್ಲಿ ಕಾರ್ಯಪ್ರವೃತ್ತರಾಗಬೇಕು.

ಈ ಕಾರ್ಯಗಳು ನಡೆದಾಗಲೇ ಮಹಿಳಾ ದಿನಾಚರಣೆಗೂ ಒಂದು ಮಹತ್ವ ಸಿಕ್ಕಂತಾಗುತ್ತದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸುಮಿ ನಗರದಿಂದ ಪಾರಾಗಲು ರಷ್ಯಾದ ಮಾರ್ಗಸೂಚಿ

0

ರಷ್ಯಾ ಮತ್ತು ಉಕ್ರೇನ್ ನ ಯುದ್ಧದಿಂದಾಗಿ ಅಲ್ಲಿನ ಸಾರ್ವಜನಿಕರ ಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲಿರುವ ವಿವಿಧ ದೇಶಗಳ ಜನರು ತಮ್ಮ ತಮ್ಮ ದೇಶಗಳಿಗೆ ತೆರಳಲು ಪರದಾಡುವಂತಾಗಿದೆ.

ಆದರೆ, ಈಗ ಉಕ್ರೇನ್‍ನ ಪ್ರಮುಖ 4 ನಗರಗಳಲ್ಲಿ ಕದನ ವಿರಾಮ ಘೋಷಣೆಯಾಗಿದೆ. ಸುಮಿಯಲ್ಲಿ ಸಿಲುಕಿರುವ ಭಾರತೀಯರಿಗೆ ದೇಶಕ್ಕೆ ಮರಳಲು ರಷ್ಯಾದ 2 ಮಾರ್ಗಗಳನ್ನು ತೆರೆದಿದೆ.

ಸುಮಿ-ಸುದ್ಝಾ-ಬಲ್ಗ್ರೋಡಾ ಒಂದು ಮಾರ್ಗವಾದರೆ ಮತ್ತು ಮಾರ್ಗ ಸುಮಿ-ಗೊಲುಬೊವ್ಕಾ- ರೊಮ್ನಿ-ಲೋಖ್ತಿಟ್ಸಾ- ಲುಬ್ನಿ -ಪೋಲ್ಟವಾದ ಮೂಲಕ ತೆರಳಲು ಅವಕಾಶ ನೀಡಲಾಗಿದೆ.

ಇದರಿಂದಾಗಿ ಸುಳಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ ಸಿಕ್ಕಿದಂತಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಚಿತ್ರರಂಗದಲ್ಲಿನ ನಟಿಯರ ಉಡುಗೆ ವಿಚಾರಕ್ಕೆ ವಿರೋಧವಿದೆ- ಚಿತ್ರನಟಿ ಭಾರತಿ

0

ಯಾವತ್ತೂ ಹೆಣ್ಣು ಹೆಣ್ಣಾಗಿರಬೇಕು. ನಮ್ಮನ್ನು ನಾವು ಯಾವ ರೀತಿ ಬಿಂಬಿಸುತ್ತಿವೆಯೋ ಅದೇ ರೀತಿ ಗೌರವ ನಮಗೆ ಸಿಗುತ್ತದೆ. ನಾವು ಇನ್ನೊಬ್ಬರನ್ನು ಪ್ರಚೋದಿಸುವಂತಹ ಉಡುಗೆ ತೊಟ್ಟರೆ, ಅವರನ್ನು ದೂಷಿಸಲು ಆಗುವುದಿಲ್ಲ. ನಮ್ಮನ್ನು ನಾವೇ ದೂಷಣೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ ಎಂದು ಖ್ಯಾತ ನಟಿ ಭಾರತಿ ವಿಷ್ಣುವರ್ಧನ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಅವರು, ಯುಗ ನಟಿಯರಿಗೆ ಹೆಣ್ಣು ಮಕ್ಕಳಿಗೆ ಏನು ಕಿವಿ ಮಾತು ಹೇಳಿದ್ದೀರಿ ಎಂಬ ಪ್ರಶ್ನೆಯನ್ನು ಅನುಪ್ರಭಾಕರ್ ಅವರು ಮುಂದಿಟ್ಟಾಗ ಅತ್ಯುತ್ತಮ ನಟನೆಯ ಕೌಶಲ ಇರುವ ನಟಿಯರು, ಕಲಾವಿದರು ಪ್ರಸ್ತುತ ಚಿತ್ರರಂಗದಲ್ಲಿದ್ದಾರೆ.
ಆದರೆ ಅವರ ಉಡುಗೆ ವಿಚಾರಕ್ಕೆ ನನ್ನ ವಿರೋಧವಿದೆ. ಈ ರೀತಿ ಉಡುಗೆ ತೊಟ್ಟವರನ್ನು ನೋಡಿದಾಗ ನನಗೆ ಮುಜುಗರ ಆಗುತ್ತದೆ ಎಂದರು.

ಸಿನಿಮಾಗಳಲ್ಲಿ ಒಂದು ಪಾತ್ರಕ್ಕಾಗಿ ಇಂತಹ ಉಡುಗೆ ಹಾಕಿದರೆ ತೊಂದರೆಯಿಲ್ಲ. ಆದರೆ ಈ ರೀತಿ ರಸ್ತೆಯಲ್ಲಿ ಹಾಕಿಕೊಂಡು ಹೋದರೆ ಹೇಗೆ. ಇವರಿಗೆ ಹೇಳುವವರೇ ಇಲ್ಲವೇ ಎನ್ನಿಸುತ್ತದೆ ಎಂದರು.

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತಿ ವಿಷ್ಣುವರ್ಧನ್ ಅವರ ಸಿನಿಮಾ, ಜೀವನ ಪಯಣಕ್ಕೆ ಸಂಬಂಧಿಸಿದ ಸಾಕ್ಷ್ಯ ಚಿತ್ರ ಬಾಳೆ ಬಂಗಾರ ಪ್ರದರ್ಶನಗೊಂಡಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶಿವಮೊಗ್ಗ ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆ ವಿಡಿಯೋ ಆನ್ ವೀಲ್ಸ್ ಸಂಚಾರ

0

ದೇಶದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ ಬಾಲ್ಯ ವಿವಾಹಗಳು ನಡೆಯುತ್ತಿದ್ದು, ರಾಜ್ಯದಲ್ಲಿ ಸಂಪೂರ್ಣವಾಗಿ ಇದನ್ನು ತಡೆಗಟ್ಟುವ ಸಲುವಾಗಿ ‘ವಿಡಿಯೋ ಆನ್ ವೀಲ್ಸ್ ವಾಹನದ ಮುಖಾಂತರ ಬಾಲ್ಯ ವಿವಾಹ ನಿಷೇಧ ಜಾಗೃತಿ ಅಭಿಯಾನ ಕೈಗೊಂಡಿರುವುದು ಉತ್ತಮ ಹೆಜ್ಜೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿ.ಪಂ, ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಬಾಲ್ಯ ವಿವಾಹ ನಿಷೇಧ ಅಭಿಯಾನ ಕುರಿತು ‘ವಿಡಿಯೋ ಆನ್ ವೀಲ್ಸ್’ ವಾಹನಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಬಾಲ್ಯ ವಿವಾಹದಿಂದ ಮಕ್ಕಳ ಭವಿಷ್ಯ ಕುಂಠಿತಗೊಳ್ಳುತ್ತಿದ್ದು, ಈ ಪದ್ದತಿ ಸಮಾಜಕ್ಕೆ ಮಾರಕವಾಗಿದೆ. ಆದ್ದರಿಂದ ಸರ್ಕಾರ ರಾಜ್ಯದ ಎಲ್ಲಾ ಭಾಗದಲ್ಲಿಯೂ ಏಕ ಕಾಲದಲ್ಲಿ ವಿನೂತನವಾಗಿ ವಾಹನದಲ್ಲಿ ಬಾಲ್ಯ ವಿವಾಹ ನಿಷೇಧದ ಕುರಿತು ವಿಡಿಯೋ ಪ್ರದರ್ಶನ ಮಾಡುವುದರ ಮೂಲಕ ಸಾರ್ವಜನಿಕರಲ್ಲಿ ವ್ಯಾಪಕವಾದ ಅರಿವು ಮೂಡಿಸುತ್ತಿದೆ.
ಈ ಜಾಗೃತಿ ಅಭಿಯಾನವು 30 ದಿನಗಳ ಕಾಲ ನಡೆಯಲಿದ್ದು ಜಿಲ್ಲೆಯಲ್ಲಿನ 41 ಹೋಬಳಿಯ ಎಲ್ಲಾ ಶಾಲಾ, ಕಾಲೇಜು, ಹಾಸ್ಟೆಲ್‍ಗಳಲ್ಲಿ ವೀಡಿಯೋ ಆನ್ ವೀಲ್ಸ್ ವಾಹನದ ಮೂಲಕ ಬಾಲ್ಯ ವಿವಾಹದ ಬಗ್ಗೆ ದಿನಕ್ಕೆ 5 ಪ್ರದರ್ಶನದಂತೆ ತಿಂಗಳಿಗೆ 150 ಪ್ರದರ್ಶನ ನೀಡಲಾಗುವುದು ಎಂದು ತಿಳಿಸಿದರು.

ಬಾಲ್ಯ ವಿವಾಹ ತಡೆಗಟ್ಟುವುದು ಕೇವಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೀಮಿತವಾಗಿಲ್ಲ ಬದಲಿಗೆ ಜನಪ್ರತಿನಿಧಿಗಳು, ಸಾರ್ವಜನಿಕರು ಸೇರಿದಂತೆ ಗ್ರಾಮ ಮಟ್ಟದಿಂದ ಉನ್ನತ ಮಟ್ಟದವರೆಗೆ ಎಲ್ಲ ಸಮಾಜ ಸೇವಕರು ಒಟ್ಟಾಗಿ ಈ ಬಾಲ್ಯ ವಿವಾಹವನ್ನ ಸಂಪೂರ್ಣವಾಗಿ ತಡೆಗಟ್ಟಬೇಕಿದೆ ಎಂದರು.

ಪಾಲಿಕೆ ಮಹಾಪೌರರಾದ ಸುನಿತಾ ಅಣ್ಣಪ್ಪ ಟೇಪ್ ಕತ್ತರಿಸುವ ಮೂಲಕ ವಿಡಿಯೋ ಆನ್ ವೀಲ್ಸ್’ ವಾಹನಕ್ಕೆ ಚಾಲನೆ ನೀಡಿದರು.
“ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳ ಶಿಕ್ಷಣ ಕುಂಟಿತವಾಗಿ ಅವರ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅಭಿವೃದ್ಧಿ ಹೊಂದುವ ಹಕ್ಕು, ಭಾಗವಹಿಸುವಿಕೆಯ ಹಕ್ಕು ಉಲ್ಲಂಘನೆಯಾಗುತ್ತದೆ. ಆದ್ದರಿಂದ ಎಲ್ಲರು ಕೂಡ ಬಾಲ್ಯ ವಿವಾಹವನ್ನು ತಡೆಗಟ್ಟಿ ಮುಕ್ತ ಸಮಾಜ ನಿರ್ಮಿಸಲು ಬದ್ಧನಾಗಿರುತ್ತೇವೆ” ಎಂಬ ಪ್ರತಿಜ್ಞಾ ವಿಧಿಯನ್ನು ಜಿ.ಪಂ ಸಿಇಓ ಎಂ.ಎಲ್.ವೈಶಾಲಿ ಬೋಧಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಮುಖ್ಯರಸ್ತೆಯಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆರು, ಮಹಿಳಾ ಹೋರಾಟಗಾರರು ಮಾನವ ಸರಪಳಿ ನಿರ್ಮಿಸುವ ಮೂಲಕ ಬಾಲ್ಯ ವಿವಾಹ ನಿಷೇಧದ ಬಗ್ಗೆ ವಿಶೇಷವಾಗಿ ಜಾಗೃತಿ ಮೂಡಿಸಿ, ಬಾಲ್ಯವಿವಾಹ ನಿಷೇಧ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರ ಸಹಿ ಸಂಗ್ರಹಿಸಿದರು.
ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಿ.ಜಿ.ಸುರೇಶ್ ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮರಳಿ ಟೆಸ್ಟ್ ತಂಡಕ್ಕೆ ಅಕ್ಷರ್ ಪಟೇಲ್

0

ಫಿಟ್ನೆಸ್ ಗಳಿಸಿಕೊಂಡಿರುವ ಆಲ್-ರೌಂಡರ್ ಅಕ್ಷರ್ ಪಟೇಲ್ ಅವರು ಶನಿವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಶ್ರೀರಂಗ ವಿರುದ್ಧ ದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಬದಲಿಗೆ ಸ್ಥಾನ ಪಡೆದುಕೊಂಡಿದ್ದಾರೆ.

ಅಕ್ಷರ ಪಟೇಲ್ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಕುಲ್ದೀಪ್ ಅವರನ್ನು ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್ ತಂಡದಿಂದ ಕೈಬಿಟ್ಟಿದೆ. ಕಣಕಾಲು ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದ ಅಕ್ಷರ್ ಪಟೇಲ್, ಕಳೆದ ದಕ್ಷಿಣ ಆಫ್ರಿಕಾ ಪ್ರವಾಸ ಮತ್ತು ವೆಸ್ಟ್ ಇಂಡೀಸ್ ಟಿ-20 ಸರಣಿಗೆ ಅಲಭ್ಯರಾಗಿದ್ದ ರು. ಅಲ್ಲದೆ ಅವರಿಗೆ ಇತ್ತೀಚಿಗೆ ಕೊರೋನಾ ಸೋಂಕು ಸಹ ದೃಢ ಪಟ್ಟಿತ್ತು.

ಅಕ್ಷರ್ ನಮ್ಮ ಮೊದಲ ಆಯ್ಕೆಯಾಗಿದ್ದರು. ಆದರೆ, ಅವರು ಗಾಯದಿಂದಾಗಿ ಚೇತರಿಸಿಕೊಳ್ಳುತ್ತಿದ್ದರು. ಆದ್ದರಿಂದ ಕುಲ್ದೀಪ್ ಅವರನ್ನು ಪರಿಗಣಿಸಲಾಗಿತ್ತು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಪ್ರಸ್ತುತ ಅಕ್ಷರ್ ಪಟೇಲ್ ಫಿಟ್ ಆಗಿದ್ದಾರೆ. ಆದ್ದರಿಂದ ಕುಲ್ದೀಪ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೊಹಾಲಿಯಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಪ್ರಥಮ ಟೆಸ್ಟ್ ನಲ್ಲಿ ಭಾರತ ತಂಡ ಇನ್ನಿಂಗ್ಸ್ ಮತ್ತು 222ರನ್ ಜಯ ಗಳಿಸಿದೆ. ಎರಡು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮಹಿಳೆಯರೇ ಆಪತ್ತಿನಲ್ಲಿ ಕಾಪಾಡುವ ಆ್ಯಪ್ ಗಳಿವೆ ನೋಡಿ

0

ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಪ್ರಸ್ತುತ ಸಂದರ್ಭದಲ್ಲಿ ಮಹಿಳೆ ತನಗಿರುವ ಎಲ್ಲಾ ಸಂಕಷ್ಟ, ಸವಾಲುಗಳನ್ನು ಎದುರಿಸಿ ತನ್ನದೇ ಗುರಿಯನ್ನು ತಲುಪಿದ್ದಾಳೆ. ಮತ್ತು ಎತ್ತರದ ಶಿಖರ ಏರಿದ್ದಾಳೆ.

ಆದರೂ ಸಹ ಮಹಿಳಾ ಶೋಷಣೆ ಇನ್ನು ನಿಂತಿಲ್ಲ. ಬದಲಿಗ ದಿನೇ ದಿನೇ ಹೆಚ್ಚುತ್ತಿದೆ. ಅತ್ಯಾಚಾರ, ದೌರ್ಜನ್ಯ, ಕಿರುಕುಳ ನೀಡುವವರು ಕೂಡ ಹೆಚ್ಚಾಗುತ್ತಿದ್ದಾರೆ.

ಪ್ರತಿ ನಿತ್ಯವೂ ಸಹಾ ಇಂತಹ ಒಂದಲ್ಲ ಒಂದು ಕೆಟ್ಟ ಸುದ್ದಿಗಳನ್ನ ಕೇಳುತ್ತಲೆ ಇರುತ್ತೇವೆ. ಆದ್ದರಿಂದ ನಮ್ಮ ರಕ್ಷಣೆ ನಮ್ಮ ಜವಾಬ್ದಾರಿ. ಮಹಿಳೆಯರ ರಕ್ಷಣೆಗೆ ಎಂದೇ ಹಲವಾರು ಮೊಬೈಲ್ ಅಪ್ಲಿಕೇಷನ್‌ ಗಳು ಲಭ್ಯವಿವೆ. ಅವುಗಳನ್ನು ಬಳಸಿಕೊಳ್ಳುವುದರಿಂದ ಮಹಿಳೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಹಾಯವಾಗುತ್ತದೆ. ಅಪ್ಲಿಕೇಶನ್ ಗಳಾವುವು ಎಂಬುವುದನ್ನು ತಿಳಿಯೋಣ…

ರಕ್ಷಾ:
ಈ ಅಪ್ಲಿಕೇಶನ್ ಅನ್ನು ಫೋನ್‌ನಲ್ಲಿ ಇನ್ಸ್ಟಾಲ್ ಮಾಡಿದ ನಂತರ, ಕರೆ ಮಾಡುವ ವ್ಯವಸ್ಥೆಗೆ ತನ್ನನ್ನು ಬೈಂಡ್ ಮಾಡಿಕೊಳ್ಳುತ್ತದೆ.‌ ಸಂಕಟದ ಸಂದರ್ಭದಲ್ಲೀ ಒಂದೇ ಒಂದು ಬಟನ್ ಒತ್ತಿದರೆ ನೀವು ಆಯ್ಕೆ ಮಾಡಿದ ಸಂಪರ್ಕಗಳಿಗೆ ಇದು ಎಚ್ಚರಿಕೆಗಳನ್ನು ಕಳುಹಿಸುತ್ತದೆ. ಅಷ್ಟೇ ಅಲ್ಲಾ, ನೀವು ಆಯ್ಕೆ ಮಾಡಿದ ಸಂಪರ್ಕಗಳು ನಿಮ್ಮ ಲೊಕೇಷನ್ ಅನ್ನು ಸಹ ನೋಡಬಹುದು. ಅಪ್ಲಿಕೇಶನ್ ಕಾರ್ಯನಿರ್ವಹಿಸದಿದ್ದರೂ ಸಹ, ಮೂರು ಸೆಕೆಂಡುಗಳ ಕಾಲ ವಾಲ್ಯೂಮ್ ಬಟನ್ ಒತ್ತುವ ಮೂಲಕ ಎಚ್ಚರಿಕೆಗಳನ್ನು ಕಳುಹಿಸಬಹುದು. ಹಾಗೆ ಮಾಡಲು ಇಂಟರ್ನೆಟ್ ಅವಶ್ಯಕತೆ ಬೇಕಿಲ್ಲ.

ಸೇಫ್ಟಿಪಿನ್:

ಈ ಅಪ್ಲಿಕೇಶನ್ ಸುರಕ್ಷಿತ ಸ್ಥಳ ತಲುಪಲು ಪರ್ಫೆಕ್ಟ್ ಆಯ್ಕೆಯಾಗಿದೆ. ಕೆಟ್ಟ ಪರಿಸ್ಥಿತಿಗಳಲ್ಲಿಯೂ ಸರಿಯಾದ ದಾರಿ ತೋರಿಸುವ ಈ ಆಪ್ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ತುರ್ತು ಸಂಪರ್ಕ ಸಂಖ್ಯೆಗಳು, ಜಿಪಿಎಸ್ ಟ್ರ್ಯಾಕಿಂಗ್, ಸುರಕ್ಷಿತ ಸ್ಥಳಗಳಿಗೆ ನಿರ್ದೇಶನ ನೀಡುವ ಅಂಶಗಳು ಈ ಅಪ್ಲಿಕೇಶನ್ ಅನ್ನು ಉತ್ತಮ ಆಯ್ಕೆಯನ್ನಾಗಿ ಮಾಡುತ್ತದೆ. ಅಪ್ಲಿಕೇಶನ್ ಅನ್ನು ಸೇಫ್ಟಿಪಿನ್ ಎಂದು ಏಕೆ ಕರೆಯಲಾಗಿದೆ ಎಂದರೆ ಅದು ನೀವು ಹೋಗಲು ಸುರಕ್ಷಿತ ಸ್ಥಳಗಳನ್ನು ಪಿನ್ ಮಾಡುತ್ತದೆ. ಮತ್ತು ಅಸುರಕ್ಷಿತ ಸ್ಥಳಕ್ಕೆ ಹೋಗುವುದನ್ನು ತಡೆಯುತ್ತದೆ.

ಸ್ಮಾರ್ಟ್ 24×7 :
ಈ ಅಪ್ಲಿಕೇಶನ್ ಕಾಲ್ ಸೆಂಟರ್ ಬೆಂಬಲ, ಪ್ಯಾನಿಕ್ ಎಚ್ಚರಿಕೆಗಳನ್ನು ಕಳುಹಿಸುವ ವ್ಯವಸ್ಥೆ ಮತ್ತು ತುರ್ತು ಸಂಪರ್ಕಗಳೊಂದಿಗೆ ಸಂಪರ್ಕಿಸಲು ಒಂದು ಪ್ರೆಸ್ ಬಟನ್ ಅನ್ನು ಹೊಂದಿದೆ. ಇದು ಸ್ಮಾರ್ಟ್ ಅಪ್ಲಿಕೇಶನ್ ಆಗಿದೆ. ಸಮಸ್ಯಾತ್ಮಕ ಸಂದರ್ಭಗಳಲ್ಲಿ ಚಿತ್ರಗಳನ್ನು ಕ್ಲಿಕ್ ಮಾಡಿ, ಅವುಗಳನ್ನು ಪೊಲೀಸರಿಗೆ ವರ್ಗಾಯಿಸುವ ಆಯ್ಕೆ ಕೂಡ ಈ ಅಪ್ಲಿಕೇಶನ್ ಒಳಗೊಂಡಿದೆ.

ಬೀಸೇಫ್:
ವ್ಯಾಪಕ ಶ್ರೇಣಿಯ ವೈಶಿಷ್ಟ್ಯಗಳೊಂದಿಗೆ ಬರುವ ಮತ್ತೊಂದು ಅಪ್ಲಿಕೇಶನ್ ಬೀಸೇಫ್. ತುರ್ತು ಸಂಪರ್ಕ, ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡುವುದು. ಚಿತ್ರಗಳು, ಆಡಿಯೋ ಮತ್ತು ನಿಮ್ಮ ಸುತ್ತಮುತ್ತಲಿನ ವೀಡಿಯೊಗಳನ್ನು ತೆಗೆದುಕೊಳ್ಳಲು ಮತ್ತು ವಿವಿಧ ತುರ್ತು ಸಂಪರ್ಕಗಳಿಗೆ ಎಚ್ಚರಿಕೆ ಕಳುಹಿಸಲು ಬಿ ಸೇಫ್ ಅನುಮತಿಸುತ್ತದೆ. ನಕಲಿ ಕರೆ ಆಯ್ಕೆಯನ್ನು ಸಹ ಹೊಂದಿರುವ ಬಿ ಸೇಫ್ ನೀವು ಕರೆಯಲ್ಲಿರುವಂತೆ ನಟಿಸಲು ಸಹಾಯ ಮಾಡುತ್ತದೆ. ಈ‌ ಮೂಲಕ ಸಂಭಾವ್ಯ ಹಾನಿಕಾರಕ ಪರಿಸ್ಥಿತಿಯಿಂದ ಹೊರಬರಲು ನಿಮಗೆ ಸಹಾಯಮಾಡುತ್ತದೆ.

ಚಿಲ್ಲಾ:

ಇತರ ಅಪ್ಲಿಕೇಶನ್‌ಗಳಂತೆ, ಚಿಲ್ಲಾ ಕೂಡ ತುರ್ತು ಬಟನ್ ಅನ್ನು ಹೊಂದಿದೆ. ಆದರೂ, ಕೆಲವು ಪರಿಸ್ಥಿತಿಗಳಲ್ಲಿ ಆ ಬಟನ್ ಅನ್ನು ಒತ್ತಲು ಸಾಧ್ಯವಾಗದ ಪರಿಸ್ಥಿತಿ ಇರಬಹುದು. ಈ ವಿಚಾರದಲ್ಲಿ ಚಿಲ್ಲಾ ವಿಭಿನ್ನ ವೈಶಿಷ್ಟ್ಯ ಹೊಂದಿದೆ. ಸಂಕಷ್ಟದಲ್ಲಿರುವವರು ಜೋರಾಗಿ ಕೂಗಿಕೊಂಡಾಗ, ಈ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಸಕ್ರಿಯಗೊಂಡು, ತುರ್ತು ಸಂಪರ್ಕಗಳಿಗೆ ಎಚ್ಚರಿಕೆಗಳನ್ನು ಕಳುಹಿಸುತ್ತದೆ.