Friday, February 20, 2026
Friday, February 20, 2026
Home Blog Page 1681

ಮಹಿಳಾ ಉದ್ಯಮಿಗಳಿಗೆ ಇ- ಕಾಮರ್ಸ್ ವೇದಿಕೆ- ಅಶ್ವತ್ಥನಾರಾಯಣ

0

ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಮುಂದಿನ ಒಂದು ವರ್ಷದಲ್ಲಿ ತಲಾ 1 ಸಾವಿರ ಮಹಿಳಾ ಉದ್ಯಮಿಗಳನ್ನು ಬೆಳೆಸಲು ಜೀವನೋಪಾಯ ಸಂವರ್ಧನೆ ಇಲಾಖೆಯು ತೀರ್ಮಾನಿಸಿದೆ. ಈ ಮೂಲಕ 30 ಸಾವಿರ ಸಾಧಕಿಯರನ್ನು ಗುರುತಿಸಿ, ಮುನ್ನೆಲೆಗೆ ತರಲಾಗುತ್ತದೆ ಎಂದು ಜೀವನೋಪಾಯ ಇಲಾಖೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಂಗಳೂರು ಉತ್ತರ ಜಿಲ್ಲಾ ಘಟಕವು ಮಲ್ಲೇಶ್ವರಂನ ಚೌಡಯ್ಯ ಭವನದಲ್ಲಿ ಇಂದು ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಪಾಲ್ಗೊಂಡಿದ್ದರು.

ಮಹಿಳೆಯರ ಸಬಲೀಕರಣಕ್ಕೆ ಉತ್ತೇಜನ ನೀಡಲು ಸ್ವಸಹಾಯ ಸಂಘಗಳಲ್ಲಿ ಸಕ್ರಿಯರಾಗಿರುವ ಸ್ತೀ ಉದ್ಯಮಿಗಳಿಗೆ ಯಾವುದೇ ಖಾತ್ರಿ ಇಲ್ಲದೆ 1 ಕೋಟಿ ರೂ.ವರೆಗೂ ಬ್ಯಾಂಕ್ ಸಾಲ ಕೊಡಲಾಗುತ್ತಿದೆ. ಜೊತೆಗೆ, ಮಹಿಳೆಯರೇ ತಯಾರಿಸುತ್ತಿರುವ ಉತ್ಪನ್ನಗಳಿಗೆ ಸರ್ಕಾರವೇ ಇ-ಕಾಮರ್ಸ್ ವೇದಿಕೆಯನ್ನು ಒದಗಿಸಲಿದೆ. ಇಷ್ಟಲ್ಲದೆ,ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ತರಹದ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಮಾರುಕಟ್ಟೆ ಸೃಷ್ಟಿಸಲಾಗುತ್ತಿದೆ ಎಂದು ಸಿ.ಎನ್. ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ.

ಡಿಜಿಟಲೀಕರಣದ ಈ ಯುಗದಲ್ಲಿ ಮಹಿಳೆಯರು ವೈದ್ಯಕೀಯ, ಶಿಕ್ಷಣ, ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳಲ್ಲಿ ಮನೆಯಿಂದಲೇ ಸೇವೆ ಸಲ್ಲಿಸಬಹುದು. ಕೋವಿಡ್ ಸಾಂಕ್ರಾಮಿಕವು ಅನೇಕ ತೊಂದರೆಗಳನ್ನು ಸೃಷ್ಟಿಸಿದರೂ ಕೆಲವು ಸುಧಾರಣೆಗಳಿಗೂ ದಾರಿ ಮಾಡಿಕೊಟ್ಟಿತು. ಮಹಿಳೆಯರ ಸಬಲೀಕರಣದಲ್ಲಿ ಆಧುನಿಕ ತಂತ್ರಜ್ಞಾನದ ಪಾತ್ರ ನಿರ್ಣಾಯಕ ಮತ್ತು ಕ್ರಾಂತಿಕಾರಕವಾಗಿದೆ ಎಂದು ಅಶ್ವತ್ಥನಾರಾಯಣ ಅವರು ಅಭಿಪ್ರಾಯಪಟ್ಟಿದ್ದಾರೆ.

ಸಮಾಜದ ಆಧಾರಸ್ತಂಭವಾಗಿರುವ ಮಹಿಳೆಯರಿಗೆ ಅನುಕೂಲ ಕಲ್ಪಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಮನೆಮನೆಗೂ 24×7 ಕುಡಿಯುವ ನೀರನ್ನು ಜಲಜೀವನ್ ಮಿಷನ್ ಮತ್ತು ಮನೆಮನೆಗೆ ಗಂಗೆ ಯೋಜನೆಗಳ ಅಡಿ ಒದಗಿಸಲಾಗುತ್ತಿದೆ. ಇದಕ್ಕಾಗಿ ಸಾವಿರಾರು ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.

ಮಹಿಳೆಯರು ತಾಯಿ, ಪತ್ನಿ, ಮಗಳು, ಅಜ್ಜಿ ಇತ್ಯಾದಿ ಪಾತ್ರಗಳನ್ನು ಸಮರ್ಥವಾಗಿ ಕುಟುಂಬದಲ್ಲಿ ನಿರ್ವಹಿಸುತ್ತಿದ್ದಾರೆ. ಆಧುನಿಕ ಯುಗದಲ್ಲಿ ಸಮಾಜದ ಆರ್ಥಿಕ ಬೆಳವಣಿಗೆಯಲ್ಲೂ ಇವರ ಪಾತ್ರ ಶೇ.50ರಷ್ಟಾಗಬೇಕು. ಇದಕ್ಕಾಗಿ ಸಾಕಷ್ಟು ಶಾಸನಗಳನ್ನು ರೂಪಿಸಲಾಗಿದೆ. ಮಹಿಳೆಯರಿಗೆ ಕಾನೂನಿನ ರಕ್ಷಣೆಯನ್ನೂ ಒದಗಿಸಲಾಗಿದೆ ಎಂದು ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.

ಸಮಾಜದಲ್ಲಿ ನಿಜವಾದ ಮೀಸಲಾತಿ ಸೌಲಭ್ಯವನ್ನು ಮಹಿಳೆಯರಿಗೆ ಕೊಡಬೇಕಾಗಿದೆ. ಪುರುಷ ಪ್ರಧಾನ ವ್ಯವಸ್ಥೆಯಿಂದ ನಾವು ಹಂತಹಂತವಾಗಿ ಮಹಿಳಾ ಪ್ರಧಾನ ಸಮಾಜವಾಗಿ ಬದಲಾಗುತ್ತಿದ್ದೇವೆ. ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯ ಎರಡೂ ಇಂದಿನ ಮಹಿಳೆಯರಿಗೆ ಸಿಕ್ಕಿರುವ ಎರಡು ದೊಡ್ಡ ವರದಾನಗಳಾಗಿವೆ ಎಂದು ಅಶ್ವತ್ಥನಾರಾಯಣ ವ್ಯಾಖ್ಯಾನಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಹೆಸರಾಂತ ವೈದ್ಯೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ, ಮುಖಂಡರಾದ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಸ್. ಗಿರೀಶ್ ಮತ್ತು ಚನ್ನೇಗೌಡ ಇನ್ನು ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಟೋಕಿಯೊ ಪ್ಯಾರಾಲಿಂಪಿಕ್ಸ್ ಭಾರತಕ್ಕೆ 3 ಸುವರ್ಣ ಪದಕ

0

ಟೋಕಿಯೋ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಪ್ರಮೋದ್ ಭಗತ್ ಸ್ಪ್ಯಾನಿಶ್ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ -2 ಟೂರ್ನಿಯ ಎಲ್ಲಾ 3 ವಿಭಾಗಗಳಲ್ಲಿ ಸ್ವರ್ಣ ಪದಕ ಗೆದ್ದು ಗಮನಸೆಳೆದಿದ್ದಾರೆ.

ಸಿಂಗಲ್ಸ್ ವಿಭಾಗದ ಫೈನಾನ್ಸ್ ನಲ್ಲಿ ವಿಶ್ವದ ನಂಬರ್ ಒನ್ ಆಟಗಾರ ಭಗತ್ 17-21, 21-17, 21-17 ಗೇಮ್ ಗಳಿಂದ ಕುಮಾರ್ ನಿತೇಶ್ ವಿರುದ್ಧ ಜಯಗಳಿಸಿದ್ದಾರೆ.
ಒಂದು ಗಂಟೆ ನಡೆದ ಹೋರಾಟದ ಮೂರು ಗೇಮ್ ಗಳ ಪೈಕಿ ಆರಂಭಿಕ ಗೇಮ್ ಸೋತರೂ ಛಲಬಿಡದ ಪ್ರಮೋದ್, ಕೊನೆಯ ಎರಡು ಗೇಮ್ ಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ಬಂಗಾರಕ್ಕೆ ಮುತ್ತಿಟ್ಟರು.

ಮಿಸ್ಟರ್ ಡಬಲ್ಸ್ ವಿಭಾಗದ ಫೈನಲ್ ನಲ್ಲಿಯೂ ಪಲಕ್ ಕೊಹ್ಲಿ ಜೊತೆ ಕಣಕ್ಕಿಳಿದ ಭಗತ್ 14-21, 21-11, 21-14 ಗೇಮ್ ಗಳಿಂದ ಭಾರತದವರೇ ಆದ ರುತಿಕ್ ರಘುಪತಿ ಮತ್ತು ಮಾನಸಿ ಗಿರೀಶ್ ಚಂದ್ರ ಜೋಶಿ ಜೋಡಿಯನ್ನು ಸೋಲಿಸಿ ಮೂರನೇ ಬಂಗಾರ ಪದಕವನ್ನು ತಮ್ಮದಾಗಿಸಿಕೊಂಡರು.

ವಿಶ್ವದ ನಂಬರ್ 4 ಆಟಗಾರ ಸುಖಾಂತ್ ಕದಮ್ ಭಾನುವಾರ ಮುಕ್ತಾಯಗೊಂಡ ಟೂರ್ನಿಯಲ್ಲಿ ತಲಾ ಒಂದು ಬಂಗಾರ ಮತ್ತು ರಜತ ಪದಕಗಳೊಂದಿಗೆ ಯಶಸ್ವಿಯಾಗಿ ಅಭಿಯಾನ ಪೂರ್ಣಗೊಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕರ್ನಾಟಕ ಯಕ್ಷಗಾನ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಘೋಷಣೆ

0

ಕರ್ನಾಟಕ ಯಕ್ಷಗಾನ ಅಕಾಡೆಮಿ 2021ನೇ ಸಾಲಿನ “ಪಾರ್ತಿಸುಬ್ಬ ಪ್ರಶಸ್ತಿ’, “ಗೌರವ ಪ್ರಶಸ್ತಿ’ ಮತ್ತು “ಯಕ್ಷಸಿರಿ ಪ್ರಶಸ್ತಿ’ಗಳನ್ನು ಪ್ರಕಟಿಸಿದೆ.

ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರು:ಡಾ| ಕಬ್ಬಿನಾಲೆ ವಸಂತ ಭಾರದ್ವಾಜ್‌.ಗೌರವ ಪ್ರಶಸ್ತಿ ಪುರಸ್ಕೃತರು
ಸತ್ಯನಾರಾಯಣ ವರದ ಹಾಸ್ಯಗಾರ, ಕರ್ಕಿ (ಸಂಪೂರ್ಣ ಯಕ್ಷಗಾನ), ಮತ್ತುಪ್ಪ ತನಿಯ ಪೂಜಾರಿ-ಹೊರನಾಡ ಕನ್ನಡಿಗ (ಸಂಪೂರ್ಣ ಯಕ್ಷಗಾನ), ನರೇಂದ್ರ ಕುಮಾರ್‌ ಜೈನ್‌,ಉಜಿರೆ (ತೆಂಕುತಿಟ್ಟು ಯಕ್ಷಗಾನ ಗುರುಗಳು ಮತ್ತು ಸಂಘಟಕರು), ಮೂಡಲಗಿರಿಯಪ್ಪ ಕಡವೀಗೆರೆ, ತುಮಕೂರು ( ಭಾಗವತಿಕೆ ಮತ್ತು ಮುಖವೀಣೆ), ಎನ್‌.ಟಿ. ಮೂರ್ತಾಚಾರ್ಯ ನೆಲ್ಲಿಗೆರೆ, ಮಂಡ್ಯ (ಭಾಗವತಿಕೆ ಮತ್ತು ಮೂಡಲಪಾಯ ಕಲಾವಿದರು).

ಯಕ್ಷಸಿರಿ ಪ್ರಶಸ್ತಿ ಪುರಸ್ಕೃತರು
ಹಳ್ಳಾಡಿ ಜಯರಾಮ ಶೆಟ್ಟಿ, ಕುಂದಾಪುರ ( ಬಡಗಣತಿಟ್ಟು ಕಲಾವಿದರು), ಗೋಪಾಲ ಗಾಣಿಗ ಆಜ್ರಿ (ಬಡಗಣತಿಟ್ಟು ಕಲಾವಿದರು), ಬೋಳಾರ ಸುಬ್ಬಯ್ಯ ಶೆಟ್ಟಿ, ಮಂಗಳೂರು (ತೆಂಕುತಿಟ್ಟು), ಸೀತೂರು ಅನಂತ ಪದ್ಮನಾಭರಾವ್‌, ಸೀತೂರು, ಚಿಕ್ಕಮಗಳೂರು (ಬಡಗುತಿಟ್ಟು), ಕಡತೋಕ ಲಕ್ಷ್ಮೀನಾರಾಯಣ ಶಂಭು ಭಾಗವತರು, ಹೊನ್ನಾವರ ( ಬಡಗುತಿಟ್ಟು ಮತ್ತು ಭಾಗವತರು), ರಾಮ ಸಾಲಿಯಾನ್‌ ಮಂಗಲ್ವಾಡಿ, ಕಾಸರಗೋಡು (ತೆಂಕುತಿಟ್ಟು), ಕೊಕ್ಕಡ ಈಶ್ವರ ಭಟ್‌, ಬಂಟ್ವಾಳ (ತೆಂಕುತಿಟ್ಟು), ಅಡಿಗೋಣ ಬೀರಣ್ಣ ನಾಯ್ಕ, ಅಂಕೋಲ (ಸಂಪೂರ್ಣ ಯಕ್ಷಗಾನ), ಭದ್ರಯ್ಯ, ಬೆಂಗಳೂರು (ಮೂಡವಪಾಯ ಯಕ್ಷಗಾನ ಕಲಾವಿದರು), ಬಸವರಾಜಪ್ಪ, ಕೋಲಾರ (ಕೇಳಿಕೆ ಕಲಾವಿದರು).

2020ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ:
ಡಾ| ಕೆ. ರಮಾನಂದ ಬನಾರಿ (ಕಾಸರಗೋಡು), ಡಾ| ಎಚ್‌.ಆರ್‌. ಚೇತನ (ಮೈಸೂರು).

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯದಾದ್ಯಂತ ಇಂದ್ರಧನುಷ್ ಲಸಿಕಾ ಅಭಿಯಾನ ಚಾಲನೆ

0

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯಾದ್ಯಂತ ವಿವಿಧ ರೋಗಗಳ ತಡೆಗೆ ಹಮ್ಮಿಕೊಂಡಿರುವ ಮಿಷನ್ ಇಂದ್ರಧನುಷ್ 4.0 ಲಸಿಕಾ ಅಭಿಯಾನಕ್ಕೆ ಚಾಲನೆ ದೊರೆಯಿತು.

ಬೆಂಗಳೂರು ನಗರದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಲಸಿಕಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಅಭಿಯಾನಕ್ಕೆ ಚಾಲನೆ ನೀಡಿದರು.

ಅರುಂಧತಿ ಶೇಖರ್ ಅವರು ಮಾತನಾಡಿ, ಮಕ್ಕಳಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಹಿರಿಯ ಮಾರಣಾಂತಿಕ ಕಾಯಿಲೆಗಳಿಗೆ ಪೂರ್ಣಪ್ರಮಾಣದಲ್ಲಿ ಲಸಿಕೆ ಹಾಕುವ ಉದ್ದೇಶದಿಂದ ಮಿಷನ್ ಇಂದ್ರಧನುಷ್ ಯೋಜನೆ ಜಾರಿಗೆ ತರಲಾಗಿದೆ.

ಈ ಅಭಿಯಾನದಡಿ ಮೊದಲ ಸುತ್ತಿನಲ್ಲಿ 30,234 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಈವರೆಗೂ ಲಸಿಕೆಯನ್ನು ಪಡೆಯದ ಅಥವಾ ಬಿಟ್ಟುಹೋದ ಎರಡು ವರ್ಷದೊಳಗಿನ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಲಸಿಕೆ ನೀಡಲಾಗುವುದು. ಅಭಿಯಾನವು ಬಿಬಿಎಂಪಿ ಒಳಗೊಂಡಂತೆ ಬೆಂಗಳೂರು ನಗರ, ಬಾಗಲಕೋಟೆ, ದಾವಣಗೆರೆ, ವಿಜಯಪುರ, ದಕ್ಷಿಣ ಕನ್ನಡ, ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಕಲಬುರಗಿ, ಗದಗ ಜಿಲ್ಲೆಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಪೋಲಿಯೋ, ಹೆಪಟೈಟಿಸ್ ಬಿ, ನಾಯಿ ಕೆಮ್ಮು, ಗಂಟಲು ಮಾರಿ, ಬಾಲ ಕ್ಷಯ, ಇರುಳು ಕುರುಡು, ರುಬೆಲ್ಲ, ದಡಾರ, ಧನುರ್ವಾಯು, ಮೆದುಳು ಜ್ವರ ತಡೆಗೆ ಲಸಿಕೆಗಳು ಹಾಗೂ ಚುಚ್ಚುಮದ್ದುಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉಕ್ರೇನ್ ಗೆ ವಿಶ್ವಬ್ಯಾಂಕ್ ನಿಂದ ಸಾಲ ಮತ್ತು ಅನುದಾನ

0

ವಿಶ್ವ ಬ್ಯಾಂಕ್ ಸೋಮವಾರ ಉಕ್ರೇನ್‌ಗೆ USD 723 ಮಿಲಿಯನ್ ಸಾಲ ಮತ್ತು ಅನುದಾನವನ್ನು ಅನುಮೋದಿಸಿದೆ.

ರಷ್ಯಾದೊಂದಿಗಿನ ಸಂಪೂರ್ಣ ಸಂಘರ್ಷದ ನಡುವೆ ಸರ್ಕಾರದ ಬಜೆಟ್ ಬೆಂಬಲವನ್ನು ಒದಗಿಸುತ್ತದೆ.

ಅಂತರಾಷ್ಟ್ರೀಯ ಬ್ಯಾಂಕ್ ಉಕ್ರೇನ್‌ಗೆ ಪೂರಕ ಬಜೆಟ್ ಬೆಂಬಲ ಪ್ಯಾಕೇಜ್ ಅನ್ನು ಅನುಮೋದಿಸಿದೆ.
ಉಕ್ರೇನ್‌ನಲ್ಲಿ ಆರ್ಥಿಕ ತುರ್ತುಸ್ಥಿತಿಯಿಂದ ಚೇತರಿಕೆಯ ಹಣಕಾಸು ಅಥವಾ ಉಚಿತ ಉಕ್ರೇನ್ – USD 489 ಮಿಲಿಯನ್‌ಗೆ ಅನುಮೋದನೆ ನೀಡಲಾಗಿದೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

ಮಂಡಳಿಯು ಅನುಮೋದಿಸಿದ ಪ್ಯಾಕೇಜ್ USD 350 ಮಿಲಿಯನ್‌ಗೆ ಪೂರಕ ಸಾಲವನ್ನು ಒಳಗೊಂಡಿರುತ್ತದೆ ಮತ್ತು USD 139 ಮಿಲಿಯನ್ ಮೊತ್ತದಲ್ಲಿ ಖಾತರಿ ನೀಡುತ್ತದೆ ಮತ್ತು USD 134 ಮಿಲಿಯನ್‌ನ ಅನುದಾನ ಹಣಕಾಸು ಮತ್ತು USD 100 ಮಿಲಿಯನ್‌ನ ಸಮಾನಾಂತರ ಹಣಕಾಸು ಒದಗಿಸುತ್ತಿದೆ.

ಇದರ ಪರಿಣಾಮವಾಗಿ USD 723 ಮಿಲಿಯನ್ ಒಟ್ಟು ಹಣಕಾಸು ಬೆಂಬಲ ನೀಡಲಿದೆ ಎಂದು ತಿಳಿಸಿದೆ.

ಆಸ್ಪತ್ರೆಯ ಕೆಲಸಗಾರರಿಗೆ ವೇತನ, ವೃದ್ಧರಿಗೆ ಪಿಂಚಣಿ ಮತ್ತು ದುರ್ಬಲರಿಗೆ ಸಾಮಾಜಿಕ ಕಾರ್ಯಕ್ರಮಗಳು ಸೇರಿದಂತೆ ಉಕ್ರೇನಿಯನ್ ಜನರಿಗೆ ನಿರ್ಣಾಯಕ ಸೇವೆಗಳನ್ನು ಒದಗಿಸಲು ತ್ವರಿತ-ಹಂಚಿಕೆ ಬೆಂಬಲವು ಸರ್ಕಾರಕ್ಕೆ ಸಹಾಯ ಮಾಡುತ್ತದೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

ನೆದರ್‌ಲ್ಯಾಂಡ್‌ನಿಂದ 80 ಮಿಲಿಯನ್ ಯುರೋಗಳಿಗೆ (USD 89 ಮಿಲಿಯನ್ ಸಮಾನ) ಮತ್ತು ಸ್ವೀಡನ್ USD 50 ಮಿಲಿಯನ್‌ಗೆ ಖಾತರಿಯೊಂದಿಗೆ ಆರಂಭಿಕ ವಿಶ್ವ ಬ್ಯಾಂಕ್ ಬೆಂಬಲವನ್ನು ಹೆಚ್ಚಿಸಲಾಗಿದೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಯುದ್ಧ ಸನ್ನಿವೇಶ ನಾಗರಿಕರ ಸುರಕ್ಷಾ ಸ್ಥಳಾಂತರಕ್ಕೆ ಆದ್ಯತೆ ನೀಡಿ-ಮಾರ್ಟಿನ್ ಗ್ರಿಫಿತ್ಸ್

0

ವಿಶ್ವಸಂಸ್ಥೆಯ (ಯುಎನ್) ಮಾನವೀಯ ನೆರವು ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್‌ ಅವರು ಉಕ್ರೇನ್‌ಗೆ ಮಾನವೀಯ ನೆರವಿನ ತಕ್ಷಣದ ಅಗತ್ಯತೆಯ ಬಗ್ಗೆ ಭದ್ರತಾ ಮಂಡಳಿ ಸಭೆಯಲ್ಲಿ ಒತ್ತಿ ಹೇಳಿದ್ದಾರೆ.

ಉಕ್ರೇನ್‌ನಲ್ಲಿ ಸಂಘರ್ಷ ನಡೆಯುತ್ತಿರುವ ಪ್ರದೇಶಗಳಿಂದ ಸುರಕ್ಷಿತವಾಗಿ ಹೊರನಡೆಯಲು ನಾಗರಿಕರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಅಗತ್ಯ ಸಹಾಯವನ್ನು ತಕ್ಷಣವೇ ತಲುಪಿಸಲು ಒತ್ತು ನೀಡಲಾಗಿದೆ ಎಂದು ತಿಳಿಸಿದ್ದಾರೆ.

11 ದಿನಗಳ ಹಿಂದೆ ರಷ್ಯಾ ‘ಮಿಲಿಟರಿ ಕಾರ್ಯಾಚರಣೆ’ ಆರಂಭಿಸಿದ ನಂತರ ಯುಎನ್ ಮತ್ತು ಪಾಲುದಾರ ರಾಷ್ಟ್ರಗಳು, ಉಕ್ರೇನ್‌ನಲ್ಲಿ ಹೆಚ್ಚುತ್ತಿರುವ ಅಗತ್ಯಗಳಿಗೆ ತಕ್ಕಂತೆ ಹೇಗೆ ಪ್ರತಿಕ್ರಿಯಿಸುತ್ತಿವೆ ಎಂಬುದರ ಬಗ್ಗೆ ಅವರು ವಿವರಿಸಿದ್ದಾರೆ.

‘ಈ ಅನಗತ್ಯ ಸಂಘರ್ಷವು ನಗರಗಳು ಮತ್ತು ನಾಗರಿಕರಿಗೆ ಸಂಕಷ್ಟ ಉಂಟುಮಾಡುತ್ತಿರುವುದನ್ನು ಜಗತ್ತು ಗಮನಿಸುತ್ತಿದೆ. ಹಾಗೆಯೇ, ಉಕ್ರೇನ್‌ನಲ್ಲಿ ಏನು ನಡೆಯುತ್ತಿದೆ. ಇದರಿಂದ ಪ್ರಪಂಚದ ಮೇಲೆ ಆಗುವ ಪರಿಣಾಮಗಳು ಏನು ಎಂಬುದರ ಬಗ್ಗೆ ಜನರು ಆತಂಕ ಹೊಂದಿದ್ದಾರೆ ಎಂದರು.

ಮೊದಲನೆಯದಾಗಿ, ದಾಳಿ ಸಂದರ್ಭದಲ್ಲಿ ನಾಗರಿಕರು, ಮನೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ರಕ್ಷಿಸಲು ಆದ್ಯತೆ ನೀಡಬೇಕು. ಅದರೊಟ್ಟಿಗೆ, ಸಂಘರ್ಷದ ಸ್ಥಳದಿಂದ ತೆರಳಲು ಬಯಸುವ ಜನರನ್ನು ಸುರಕ್ಷಿತವಾಗಿ ಹೊರನಡೆಯಲು ಅವಕಾಶ ಮಾಡಿಕೊಡಬೇಕು.

ಎರಡನೇಯದಾಗಿ, ಮರಿಯುಪೋಲ್, ಹಾರ್ಕಿವ್ ಮತ್ತು ಇತರೆಡೆ ದಾಳಿಗೆ ಒಳಗಾದ ಸ್ಥಳಗಳಲ್ಲಿನ ನಾಗರಿಕರಿಗೆ ಸಹಾಯದ ಅಗತ್ಯವಿದೆ. ವಿಶೇಷವಾಗಿ ಜೀವ ಉಳಿಸುವ ವೈದ್ಯಕೀಯ ಸರಬರಾಜುಗಳು, ಮಾನವೀಯ ಸರಬರಾಜುಗಳಿಗೆ ಸುರಕ್ಷಿತ ಮಾರ್ಗ ಕಲ್ಪಿಸುವ ಅಗತ್ಯವಿದೆ.

ಅಂತಿಮವಾಗಿ, ನಾಗರಿಕರ ಅಗತ್ಯ ಪೂರೈಸಲು ಅವಕಾಶ ಮಾಡುವಂತೆ ಎರಡೂ ಬಣಗಳೊಂದಿಗೆ ನಿರಂತರ ಮಾತುಕತೆ ನಡೆಸುವುದು ಅಗತ್ಯ ಎಂದು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಷ್ಯಾದೊಂದಿಗೆ ವ್ಯವಹಾರ ಬಂದ್-ಐಬಿಎಂ

0

ತಂತ್ರಜ್ಞಾನ ವಲಯದ ಬಹುರಾಷ್ಟ್ರೀಯ ಐಬಿಎಂ ಕಂಪನಿ ರಷ್ಯಾದೊಂದಿಗೆ ತನ್ನ ಎಲ್ಲ ವ್ಯವಹಾರಗಳನ್ನು ಸ್ಥಗಿತಗೊಳಿಸಿದೆ.

ಉಕ್ರೇನ್‌ ಮತ್ತು ರಷ್ಯಾ ನಡುವಿನ ಸಂಘರ್ಷದ ಕಾರಣಗಳಿಂದಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಕಂಪನಿಯ ಸಿಇಒ ಅರವಿಂದ್ ಕೃಷ್ಣ ಅವರು ತಿಳಿಸಿದ್ದಾರೆ.

ಉಕ್ರೇನ್‌ನಲ್ಲಿ ಯುದ್ಧಕ್ಕೆ ಸಂಬಂಧಿಸಿದಂತೆ ಕಳೆದ ವಾರದಿಂದ ಹಲವರಿಂದ ಪ್ರತಿಕ್ರಿಯೆಗಳನ್ನು ಪಡೆದಿದ್ದೇನೆ. ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು. ನಾವು ರಷ್ಯಾದಲ್ಲಿ ನಮ್ಮ ಎಲ್ಲ ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದೇವೆ.

ಆ ಭಾಗದಲ್ಲಿರುವ ನಮ್ಮ ಸಹೋದ್ಯೋಗಿಗಳಿಗೆ ಎಲ್ಲ ರೀತಿಯಲ್ಲೂ ಅಗತ್ಯ ಬೆಂಬಲ ನೀಡಿರುವುದರ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಿದ್ದೇನೆ ಎಂದು ಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೂರ್ವ ಉಕ್ರೇನ್‌ನಲ್ಲಿ ಸಾರ್ವಜನಿಕರನ್ನು ರಕ್ಷಿಸಲು ಮಿಲಿಟರಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ರಷ್ಯಾ ಹೇಳಿಕೊಂಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಶೀಘ್ರದಲ್ಲೇ ಪಾವತಿ

0

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11 ನೇ ಕಂತಿನ ಹಣ ಶೀಘ್ರದಲ್ಲೇ ರೈತರ ಬ್ಯಾಂಕ್ ಖಾತೆಗಳಿಗೆ ಬರಲಿದೆ.
ಕೊರೊನಾ ಸಾಂಕ್ರಾಮಿಕ ತೆಯಿಂದ ತತ್ತರಿಸಿರುವ ಜನರಿಗೆ ಸರ್ಕಾರ ಹಣ ವರ್ಗಾವಣೆ ಮಾಡುವ ಮೂಲಕ ರೈತರಿಗೆ ಸಿಹಿಸುದ್ದಿ ನೀಡಲಿದೆ.

ಇನ್ನೂ ಕೂಡ ಈ ಯೋಜನೆಗೆ ನೋಂದಾಯಿಸದಿದ್ದರೆ, ಅದನ್ನು ಈಗಲೂ ನೊಂದಾಯಿಸಿಕೊಳ್ಳಬಹುದು.
ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರ ದೇಶದ ಕೋಟ್ಯಂತರ ರೈತರಿಗೆ ವರ್ಷಕ್ಕೆ ಆರು ಸಾವಿರ ರೂ. ಸಿಗಲಿದೆ. ಇದರಿಂದ ರೈತರಿಗೆ ಆರ್ಥಿಕವಾಗಿ ಸಹಾಯವಾಗುತ್ತದೆ.

ಸರ್ಕಾರ ಇದುವರೆಗೆ ಪಿಎಂ ಕಿಸಾನ್ ಯೋಜನೆಯ 10 ಕಂತುಗಳನ್ನು ವರ್ಗಾಯಿಸಿದೆ. ಈಗ ರೈತರು ಮುಂದಿನ 11ನೇ ಕಂತು ಪಡೆಯಲಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10 ನೇ ಕಂತಿನ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜನವರಿ 1, 2022 ರಂದು ವರ್ಗಾಯಿಸಲಾಯಿತು. ದೇಶದ ಕೋಟ್ಯಂತರ ರೈತರ ಖಾತೆಗಳಿಗೆ 2,000 ರೂ. ಜಮಾ ಆಯಿತು.

ಈ ಯೋಜನೆಯನ್ನು ಫೆಬ್ರವರಿ 24, 2019 ರಂದು ಪ್ರಾರಂಭಿಸಲಾಯಿತು. ಈ ರೀತಿಯಾಗಿ, ಯೋಜನೆಯು ಪ್ರಾರಂಭವಾಗಿ ಮೂರು ವರ್ಷಗಳಿಗಿಂತ ಹೆಚ್ಚು ಕಳೆದಿದೆ. ಇದುವರೆಗೆ ಕೋಟ್ಯಂತರ ರೈತರು ಯೋಜನೆಯ ಲಾಭವನ್ನು ಪಡೆದಿದ್ದಾರೆ. ಈ ಯೋಜನೆಯ ಮೂಲಕ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಬ್ಯಾಂಕ್ ಖಾತೆಗೆ ಎರಡು ಸಾವಿರ ರೂ. ಪ್ರತಿ ವರ್ಷ ಮೂರು ಕಂತುಗಳಲ್ಲಿ ಒಟ್ಟು ಆರು ಸಾವಿರ ರೂ. ನೀಡಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನವೀನ್ ಮೃತದೇಹ ಮಾರ್ಚರಿಯಲ್ಲಿದೆ – ಸಿ.ಎಂ

0

ಉಕ್ರೇನ್ ನ ಯುದ್ಧ ಭೂಮಿಯಲ್ಲಿ ಹುತಾತ್ಮರಾದ ಕನ್ನಡಿಗ ವೈದ್ಯ ವಿದ್ಯಾರ್ಥಿ ನವೀನ್ ಶವ ಪತ್ತೆಯಾಗಿದೆ. ಅಲ್ಲಿನ ಶವಾಗಾರದಲ್ಲಿ ಸಂರಕ್ಷಿಸಿಡಲಾಗಿದೆ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮಾಹಿತಿ ನೀಡಿದ್ದಾರೆ.

ನವೀನ್ ವಿಚಾರದಲ್ಲಿ ಜೈಶಂಕರ್ ಬಳಿ ಮಾತನಾಡಿದಾಗ, ಮಾರ್ಚರಿ ಎಂಬೆಮ್ ಅಲ್ಲಿ ಸ್ವೆಲಿಂಗ್ ಆಗುತ್ತಿದೆ ಅದು ನಿಂತ ತಕ್ಷಣ, ತರುವ ಪ್ರಯತ್ನ ಮಾಡುತ್ತಿದ್ದೇವೆ. ಮತ್ತು ಎಂಬೆಸ್ಸಿ ಕೂಡ ಸಂಬಂಧ ಪಟ್ಟಂತಹ ಮಾರ್ಚಲಿ ಅಧಿಕಾರಿಗಳೊಂದಿಗೆ ಟಚ್ ಲ್ಲಿ ಇದ್ದೇವೆ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನಾನು ಉಕ್ರೇನ್ ನಲ್ಲಿಯೇ ಇದ್ದೇನೆ- ಝೆಲೆನ್ಸ್ಕಿ

0

ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಉಕ್ರೇನ್ ತೊರೆದು ಬೇರೆ ಎಲ್ಲೋ ಅಡಗಿ ಕುಳಿತಿದ್ದಾರೆ.ಅವರು ನಾಪತ್ತೆಯಾಗಿದ್ದಾರೆ ಎಂಬ ರಷ್ಯಾ ಮಾಡಿರುವ ಆರೋಪಕ್ಕೆ ಝೆಲೆನ್ಸ್ಕಿ ಅವರು ತಿರುಗೇಟು ನೀಡಿದ್ದಾರೆ. ನಾನು ಎಲ್ಲಿಯೂ ನಾಪತ್ತೆಯಾಗಿಲ್ಲ ಉಕ್ರೇನ್ ನಲ್ಲಿಯೇ ಇದ್ದೇನೆ ಎಂದು ಹೇಳಿದ್ದಾರೆ.

ಝೆಲೆನ್ಸ್ಕಿ ಅವರು ಈ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದಾರೆ. ನಾನು ನಾಪತ್ತೆಯಾಗಿಲ್ಲ. ಕೀವ್ ನಲ್ಲಿಯೇ ಇದ್ದೇನೆ. ಯಾರಿಗೂ ಹೆದರುವ ಮಾತೇ ಇಲ್ಲ. ದೇಶ ತೊರೆಯುವ ಪ್ರಶ್ನೆಯೇ ಇಲ್ಲ. ನಿರಂತರವಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಝೆಲೆನ್ಸ್ಕಿ ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ, ಉಕ್ರೇನ್ ಸೈನಿಕರಿಗೆ ಸಾವಿರ ಡಾಲರ್ ವೇತನವನ್ನು ಉಕ್ರೇನ್ ಸರ್ಕಾರ ಹೆಚ್ಚಿಸಿದೆ. ಈ ನಡುವೆ ವಿಶ್ವ ಬ್ಯಾಂಕ್ ಅಗತ್ಯ ಸೇವೆಗಳಿಗಾಗಿ ಉಕ್ರೇನ್ ಗೆ 700 ಮಿಲಿಯನ್ ಡಾಲರ್ ನೆರವುವನ್ನು ಘೋಷಿಸಿದೆ ಎಂದು ಹೇಳಿದ್ದಾರೆ.