Friday, February 20, 2026
Friday, February 20, 2026
Home Blog Page 1682

Women’s day- ನಾರಿಯರಿಗೊಂದು ಸಲಾಂ…

0

ಇಡೀ ಜಗತ್ತು ಮಾರ್ಚ್ 8ರಂದು ಅತ್ಯಂತ ಹೆಮ್ಮೆ, ಸಂತಸದಿಂದ ಮಹಿಳಾ ದಿನವನ್ನು ಆಚರಿಸುತ್ತಿದೆ. ಇಂದಿನ ವರ್ಷದ ಧ್ಯೇಯ ವಾಕ್ಯ ಎಂದರೆ ಸುಸ್ಥಿರ ನಾಳೆಗಾಗಿ, ಇಂದು ಲಿಂಗ ಸಮಾನತೆ.

ರಣಜಿ ಕ್ರಿಕೆಟ್ ನಾಕ್ ಔಟ್ ಹಂತಕ್ಕೆ ಕರ್ನಾಟಕ

0

ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅಮೋಘ ಪ್ರದರ್ಶನ ನೀಡಿದ ಕರ್ನಾಟಕ ತಂಡ ರಣಜಿ ಟ್ರೋಫಿ ಎಲೈಟ್ ಸಿ ಗುಂಪಿನ ತನ್ನ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಇನಿಂಗ್ಸ್ ಮತ್ತು 20 ರನ್ ಗಳ ಅಂತರದಿಂದ ಪುದುಚೇರಿ ತಂಡ ವನ್ನು ಸೋಲಿಸಿ ನಾಕೌಟ್ ಹಂತಕ್ಕೆ ಅರ್ಹತೆ ಗಳಿಸಿದೆ. ಐಪಿಎಲ್ ನಂತರ ಮೇನಲ್ಲಿ ನಾಕೌಟ್ ಹಂತದ ಪಂದ್ಯಗಳು ನಡೆಯಲಿವೆ.

ಈ ಗೆಲುವಿನಿಂದ ದೊರೆತ 7 ಅಂಕ ಸೇರಿ ಒಟ್ಟು 16 ಅಂಕಗಳನ್ನು ಕಲೆಹಾಕಿದ ಕರ್ನಾಟಕ ಸಿ ಗುಂಪಿನಲ್ಲಿ ಪ್ರಥಮ ಸ್ಥಾನಿಯಾಗಿ ಲೀಗ್ ಹಂತ ಮುಗಿಸಿದರೆ, ರೈಲ್ವೇಸ್, ಜಮ್ಮು ಮತ್ತು ಕಾಶ್ಮೀರ ಮತ್ತು ಪುದುಚೇರಿ ಕ್ರಮವಾಗಿ ನಂತರದ ಮೂರು ಸ್ಥಾನ ಗಳಿಸಿದವು.

ನಿನ್ನೆ 4 ವಿಕೆಟ್ ಗೆ 62 ರನ್ ಗಳಿಂದ ದ್ವಿತೀಯ ಇನ್ನಿಂಗ್ಸ್ ಮುಂದುವರಿಸಿದ ಪುದುಚೇರಿ ತಂಡ, ಕರ್ನಾಟಕದ ಪರಿಣಾಮಕಾರಿ ಬೌಲಿಂಗ್ ಗೆ ತತ್ತರಿಸಿ 61 ಓವರ್ ಗಳಲ್ಲಿ 192 ರನ್ಗಳಿಗೆ ಸರ್ವ ಪತನಗೊಂಡಿತು. ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಐದು ವಿಕೆಟ್ ಉರುಳಿಸಿದರೆ, ವೇಗಿ ಪ್ರಸಿದ್ದ ಕೃಷ್ಣ 3 ವಿಕೆಟ್ ಕಬಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶ್ರೀಲಂಕಾ ವಿರುದ್ಧ ಭಾರತ ಇನ್ನಿಂಗ್ಸ್ & 222 ರನ್ ಭರ್ಜರಿ ಜಯ

0

ರವೀಂದ್ರ ಜಡೇಜಾ ಭಾರತ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ಶ್ರೇಷ್ಠ ಆಲ್ ರೌಂಡ್ ಪ್ರದರ್ಶನ ನೀಡುವ ಮೂಲಕ ಪ್ರವಾಸಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ ಇನ್ನಿಂಗ್ಸ್ ಹಾಗೂ 222 ರನ್ ಗಳ ಭರ್ಜರಿ ಜಯ ತಂದುಕೊಟ್ಟರು.

ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೂರೇ ದಿನದಲ್ಲಿ ಮುಕ್ತಾಯವಾಯಿತು.
ಅದರಲ್ಲೂ ಮೂರನೇ ದಿನ ಶ್ರೀಲಂಕಾದ 16 ವಿಕೆಟ್ ಗಳನ್ನು ಪಡೆಯುವ ಮೂಲಕ ಭಾರತೀಯ ಬೌಲರ್ ಗಳು ಬಂದಿದ್ದಲ್ಲಿ ಸಂಪೂರ್ಣ ಪಾರಮ್ಯ ಸಾಧಿಸಿದರು.

ರವೀಂದ್ರ ಜಡೇಜಾ ಅವರ ಅತ್ಯುತ್ತಮ ಪ್ರದರ್ಶನ ದಿಂದ 100ನೇ ಟೆಸ್ಟ್ ಪಂದ್ಯವಾಡಿದ ಕೊಹ್ಲಿಗೆ ಸ್ಮರಣೀಯ ಉಡುಗೊರೆ ಲಭಿಸಿದರೆ, ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡ ರೋಹಿತ್ ಶರ್ಮ ಅದ್ದೂರಿ ಶುಭಾರಂಭ ಮಾಡಿದರು.

ಈ ಗೆಲುವಿನೊಂದಿಗೆ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿರುವ ಭಾರತ ತಂಡ, ಮಾರ್ಚ್ 12ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ಅಹರ್ನಿಶಿ ಪಂದ್ಯದಲ್ಲಿ ಗೆದ್ದು ಪೂರ್ಣ 24 ಅಂಕಗಳನ್ನು ಬಾಚಿಕೊಳ್ಳುವ ವಿಶ್ವಾಸ ವೃದ್ಧಿಸಿಕೊಂಡಿದೆ.

ಶನಿವಾರ ಮೊದಲ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್ ಕಲೆಹಾಕಿದ ಪ್ರವಾಸಿ ಶ್ರೀಲಂಕಾ ಭಾನುವಾರದ ಬೆಳಗಿನ ಅವಧಿಯಲ್ಲಿ ಸ್ವಲ್ಪ ಪ್ರತಿರೋಧ ತೋರಿಸಿತು.

ಹಿರಿಯ ಬ್ಯಾಟ್ಸ್ ಮನ್ ಚರಿತ್ ಅಸಲಂಕಾ (29) ಪಾಥುಮ್ ನಿಸ್ಸಾಂಕ (61) ಸೇರಿ 5ನೇ ವಿಕೆಟ್ ಗೆ 59 ರನ್ ಗಳ ಜೊತೆಯಾಟ ನೀಡಿದರು.

ನಂತರ ದಾಳಿಗಿಳಿದ ಜಡೇಜಾ ಶ್ರೀಲಂಕಾ ಬ್ಯಾಟಿಂಗ್ ಬೆನ್ನೆಲುಬು ಮುರಿದು 13 ಓವರ್ ಗಳಲ್ಲಿ 41 ರನ್ ಗಳಿಗೆ 5 ವಿಕೆಟ್ ಗಳಿಸಿದರು. ಇದರಿಂದಾಗಿ 174 ರನ್ ಗಳಿಗೆ ಆಲ್ ಔಟ್ ಆದ ಶ್ರೀಲಂಕಾಗೆ ರವೀಂದ್ರ ಜಡೇಜಾ ಅವರ ವೈಯಕ್ತಿಕ ಮೊತ್ತವನ್ನೂ ಮುಟ್ಟಲಾಗಲಿಲ್ಲ.
ಅಲ್ಲದೆ, 400 ರನ್ ಗಳ ಭಾರಿ ಹಿನ್ನಡೆ ಅನುಭವಿಸಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಷ್ಯದ ವಿರುದ್ಧ ಹೋರಾಡಲು ಉಕ್ರೇನ್ ವಾಸಿ ರಷ್ಯನ್ನರಿಗೆ ಝೆಲೆನ್ಸ್ಕಿಕರೆ

0

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ತಮ್ಮ ದೇಶದ ಮೇಲಿನ ಆಕ್ರಮಣವನ್ನು ವಿರೋಧಿಸಿ ಬೀದಿಗಿಳಿಯಲು ನೇರವಾಗಿ ರಷ್ಯನ್ನರಿಗೆ ಮನವಿ ಮಾಡಿದರು.

ಕಳೆದ ವಾರದಿಂದ, ರಷ್ಯಾದಲ್ಲಿ ಸಾವಿರಾರು ಜನರನ್ನು ಉಕ್ರೇನ್ ಆಕ್ರಮಣದ ವಿರುದ್ಧ ಪ್ರತಿಭಟಿಸುವುದಕ್ಕಾಗಿ ಬಂಧಿಸಲಾಗಿದೆ. ಇದರೊಂದಿಗೆ ರಷ್ಯಾದ ಅಧಿಕಾರಿಗಳು ಈ ಆಕ್ರಮಣವನ್ನು ಫೆಬ್ರವರಿ 24 ರಂದು ವಿಶೇಷ ಮಿಲಿಟರಿ ಕಾರ್ಯಾಚರಣೆ ಎಂದು ಕರೆಯುತ್ತಿದ್ದಾರೆ.

ಅಂತರಾಷ್ಟ್ರೀಯ ನಿರ್ಬಂಧಗಳ ನಂತರ ರಷ್ಯಾದವರು ಈಗ ಅನಿಶ್ಚಿತ ಮತ್ತು ಪ್ರತ್ಯೇಕವಾದ ಭವಿಷ್ಯವನ್ನು ಎದುರಿಸುತ್ತಿದ್ದಾರೆ.

ಆರ್ಥಿಕತೆಯು ಬಿಕ್ಕಟ್ಟಿಗೆ ಸಿಲುಕಿದೆ. ರಷ್ಯಾದ ಅಧಿಕಾರಿಗಳು ಮಾಧ್ಯಮಗಳನ್ನು ನಿಷೇಧಿಸಿದ್ದಾರೆ. ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮ ಸೈಟ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ರಷ್ಯಾದ ನಾಗರಿಕರೇ , ಈಗಲಾದರೂ ಎಚ್ಚೆತ್ತುಕೊಳ್ಳಿ. ಇದು ಉಕ್ರೇನ್‌ನಲ್ಲಿ ಶಾಂತಿಗಾಗಿ ಮಾತ್ರವಲ್ಲ, ಇದು ನಿಮ್ಮ ದೇಶಕ್ಕಾಗಿ ಹೋರಾಟವಾಗಿದೆ ಎಂದು ಝೆಲೆನ್ಸ್ಕಿ ಅವರು ತಿಳಿಸಿದ್ದಾರೆ.

ನೀವು ಈಗ ಮೌನವಾಗಿದ್ದರೆ, ನಂತರ ನಿಮ್ಮ ಬಡತನ ಮಾತ್ರ ಪರವಾಗಿ ಮಾತನಾಡುತ್ತದೆ. ನಂತರದ ದಿನಗಳಲ್ಲಿ ವಿನಾಶವೇ ಉತ್ತರ ನೀಡಲಿದೆ ಎಂದರು.

ಕರೋನವೈರಸ್ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ರಷ್ಯಾದಲ್ಲಿ ಎಲ್ಲಾ ರೀತಿಯ ಪ್ರತಿಭಟನೆಗಳು ಮೂಲಭೂತವಾಗಿ ಕಾನೂನುಬಾಹಿರವಾಗಿವೆ.

ಏಕೆಂದರೆ ಅಧಿಕಾರಿಗಳು ಇದು ಸುರಕ್ಷತೆಯ ಕಾರಣಗಳಿಗಾಗಿ ಎನ್ನುತ್ತಾರೆ. ಉಕ್ರೇನಿಯನ್ ಜನರಂತೆ, ಈಗ ರಷ್ಯನ್ ಜನರು ಜೀವನ ಮತ್ತು ಗುಲಾಮಗಿರಿಯ ನಡುವಿನ ಆಯ್ಕೆಯನ್ನು ಎದುರಿಸುವಂತಾಗಲಿದೆ ಎಂದರು.

ಆಕ್ರಮಣದ 11 ನೇ ದಿನದಂದು, ರಷ್ಯಾದ ಪಡೆಗಳು ದಾಳಿಯನ್ನು ಮುಂದುವರೆಸುತ್ತಿವೆ. ಇದಲ್ಲದೆ , ಕಪ್ಪು ಸಮುದ್ರದ ಬಂದರು ನಗರವಾದ ಒಡೆಸ್ಸಾ ಮೇಲೆ ಬಾಂಬ್ ದಾಳಿ ಮಾಡಲು ತಯಾರಿ ನಡೆಸುತ್ತಿವೆ ಎಂದು ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹೈಬ್ರೀಡ್ ಪವರ್ ಪಾರ್ಕ್ ಸ್ಥಾಪನೆ ಬಗ್ಗೆ ಚಿಂತನೆ- ಸುನೀಲ್ ಕುಮಾರ್

0

ರಾಜ್ಯದಲ್ಲಿ5000 ಮೆಗಾ ವ್ಯಾಟ್ ಸಾಮರ್ಥ್ಯದ ಹೈಬ್ರಿಡ್ ಪವರ್ ಪಾರ್ಕ್ ಸ್ಥಾಪನೆಯ ಸಾಧ್ಯಾ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರು ಹೇಳಿದ್ದಾರೆ.

ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೊಪ್ಪಳ, ಧಾರವಾಡ, ಗದಗ, ವಿಜಯಪುರ, ದಾವಣಗೆರೆ, ಚಿತ್ರದುರ್ಗ, ವಿಜಯನಗರ ಹಾಗೂ ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿ ಹೈಬ್ರಿಡ್ ಪಾರ್ಕ್ ಸ್ಥಾಪನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇಲ್ಲಿ ಉತ್ಪಾದನೆಯಾದ ವಿದ್ಯುತ್ ಅನ್ನು ರಾಜ್ಯದ ವಿದ್ಯುತ್ ಕಂಪನಿಗಳು ಅಥವಾ ಹೊರ ರಾಜ್ಯಗಳಿಗೆ ವಿದ್ಯುತ್ ಸರಬರಾಜು ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ವಿ. ಸುನಿಲ್ ಕುಮಾರ್ ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ ನವ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ 2020ರ ನವೆಂಬರ್ ತಿಂಗಳಲ್ಲಿ ವಿಂಡ್ ಪಾರ್ಕ್ ಮತ್ತು ವಿಂಡ್ ಸೋಲಾರ್ ಹೈಬ್ರಿಡ್‌ ಪಾರ್ಕ್ ಪರಿಕಲ್ಪನೆ ಟಿಪ್ಪಣಿಯನ್ನು ಜಾರಿಗೊಳಿಸಿದೆ.

ಆದರೆ ಅಂತಿಮ ಮಾರ್ಗಸೂಚಿ ಇನ್ನೂ ಬಿಡುಗಡೆಯಾಗಬೇಕಿದೆ. ಹೈಬ್ರೀಡ್ ಯೋಜನೆಗಳನ್ನು ಸೌರ, ಗಾಳಿ ಮತ್ತು ಶೇಖರಣಾ ತಂತ್ರಜ್ಞಾನಗಳನ್ನು ಮಿಶ್ರಣ ಮಾಡುವುದರಿಂದ ಉತ್ತಮ ವಿದ್ಯುತ್ ಪೂರೈಕೆಯನ್ನು ಸ್ಪರ್ಧಾತ್ಮಕ ದರದಲ್ಲಿ ನೀಡಬಹುದಾಗಿದೆ ಎಂದು ವಿ. ಸುನಿಲ್ ಕುಮಾರ್ ಅವರು ವಿವರಿಸಿದ್ದಾರೆ.

ಹೆಚ್ಚುವರಿ ವಿದ್ಯುತ್ ಸ್ವಚ್ಚ ಮತ್ತು ಹಸಿರು ಯೋಜನೆಗಳಿಂದ ರಾಜ್ಯ ಸರಕಾರ ಹೆಚ್ಚುವರಿ ವಿದ್ಯುತ್ ಪಡೆಯುತ್ತಿದೆ. ಹೀಗಾಗಿ, ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಲಭ್ಯವಿರುತ್ತದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಬೆಂಗಳೂರು ನ್ಯಾನೋ ತಂತ್ರಜ್ಞಾನದ ತೊಟ್ಟಿಲಾಗಲಿ-ಸಿಎಂ

0

ನ್ಯಾನೋ ತಂತ್ರಜ್ಞಾನದ ಮೂಲಕ ತಯಾರಿಸಿರುವ ನ್ಯಾನೋ ಯೂರಿಯಾ ರಸಗೊಬ್ಬರವು ಪರೀಕ್ಷಾ ಹಂತದಲ್ಲಿ ಯಶಸ್ವಿಯಾಗಿದೆ. ಇದು ಮುಂಬರುವ ದಿನಗಳಲ್ಲಿ ರೈತರ ಬದುಕನ್ನು ಹಸನಾಗಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವರ್ಚುಯಲ್ ಮಾದರಿಯಲ್ಲಿ ಏರ್ಪಡಿಸಿರುವ ಮೂರು ದಿನಗಳ 12ನೇ ವರ್ಷದ ಬೆಂಗಳೂರು ಇಂಡಿಯಾ ನ್ಯಾನೋ ಸಮಾವೇಶವನ್ನು ಉದ್ಘಾಟಿಸಿ ಮಾನ್ಯ ಮುಖ್ಯಮಂತ್ರಿ ಅವರು ಮಾತನಾಡಿದರು.
ಈ ಸಮಾವೇಶವು ಇಂದು ಮತ್ತು ನಾಳೆ ನಡೆಯಲಿದೆ.

ನ್ಯಾನೋ ಯೂರಿಯಾವನ್ನು ರಾಜ್ಯದ ಎಲ್ಲ ಕೃಷಿ ವಿ.ವಿ.ಗಳಲ್ಲಿ ಈಗಾಗಲೇ ಪರೀಕ್ಷೆಗೆ ಒಳಪಡಿಸಲಾಗಿದ್ದು, ಒಳ್ಳೆಯ ಫಲಿತಾಂಶ ಬಂದಿದೆ. ಇದು ಮುಂಬರುವ ದಿನಗಳಲ್ಲಿ ಕೃಷಿಕರ ಅವಿಭಾಜ್ಯ ಅಂಗವಾಗಲಿದೆ. ನ್ಯಾನೋ ತಂತ್ರಜ್ಞಾನವು ಬದುಕಿನಲ್ಲಿ ಮಹತ್ತರ ಬದಲಾವಣೆಗಳನ್ನು ತರಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಮೂಲಕ ಜನಜೀವನವನ್ನು ಸುಧಾರಿಸಬೇಕು ಎನ್ನುವುದು ಪ್ರಧಾನಿ ಮೋದಿಯವರ ಕನಸಾಗಿದೆ ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ಆದ್ದರಿಂದ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ನಗರವು ನ್ಯಾನೋ ತಂತ್ರಜ್ಞಾನದ ತೊಟ್ಟಿಲು ಕೂಡ ಆಗಬೇಕು. ಇದಕ್ಕೆ ಸರ್ಕಾರವು ಸಂಪೂರ್ಣ ಸಹಕಾರ ನೀಡಲಿದೆ. ಅಗತ್ಯ ನೀತಿಗಳನ್ನು ರೂಪಿಸಲಿದೆ ಎಂದು ಬಸವರಾಜ್ ಬೊಮ್ಮಾಯಿ ಅವರು ಆಶ್ವಾಸನೆ ನೀಡಿದ್ದಾರೆ.

ಆಧ್ಯಾತ್ಮಿಕತೆ ಮತ್ತು ವಿಜ್ಞಾನ ಎರಡೂ ಒಂದೇ ನಾಣ್ಯದ ಎರಡು ಮುಖಗಳಾಗಿದೆ. ಇವುಗಳು ಒಂದನ್ನೊಂದು ಪ್ರೇರೇಪಿಸುತ್ತವೆ. ಇವುಗಳ ಜೊತೆಗೆ ಆವಿಷ್ಕಾರದ ಶಕ್ತಿಯು ಸೇರಿಕೊಂಡಾಗ ಅದು ಮನುಷ್ಯನ ಬದುಕನ್ನು ನಿರ್ಣಾಯಕವಾಗಿ ಬದಲಿಸುತ್ತದೆ. ಇದಕ್ಕೆ ನ್ಯಾನೋ ತಂತ್ರಜ್ಞಾನ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಬಸವರಾಜ ಬೊಮ್ಮಾಯಿ ಅವರು ವರ್ಣಿಸಿದ್ದಾರೆ.

ಬೆಂಗಳೂರಿನಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯ ಎರಡೂ ಸೇರಿ ವಿಶ್ವದರ್ಜೆಯ 180 ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿವೆ. ಇವು ನ್ಯಾನೋ ತಂತ್ರಜ್ಞಾನವನ್ನು ಜನರ ಬಳಿಗೆ ಕೊಂಡೊಯ್ಯಲಿವೆ. ಒಂದು ಅಣುವಿನಲ್ಲಿರುವ ಅಗಾಧ ಶಕ್ತಿಯನ್ನು ಮನುಕುಲದ ಒಳಿತಿಗೆ ಹೇಗೆ ಉಪಯೋಗಿಸಿಕೊಳ್ಳಬಹುದು ಎನ್ನುವುದೇ ನ್ಯಾನೋ ತಂತ್ರಜ್ಞಾನದ ವೈಶಿಷ್ಟ್ಯವಾಗಿದೆ. ಆದ್ದರಿಂದ, ಇದು ಸೀಡ್ ತಂತ್ರಜ್ಞಾನವಾಗಿದೆ. ಸುಸ್ಥಿರತೆ ಮತ್ತು ಅವಕಾಶ ಎರಡನ್ನೂ ಹೊತ್ತು ತರಲಿದೆ ಎಂದು ಬೊಮ್ಮಾಯಿ ಪ್ರತಿಪಾದಿಸಿದರು.

ಈ ಸಮಾವೇಶದಲ್ಲಿ ಮಾತನಾಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸರ್ಕಾರವು, ಶೀಘ್ರದಲ್ಲೇ ಸಮಗ್ರ ನ್ಯಾನೋ ತಂತ್ರಜ್ಞಾನ ನೀತಿಯನ್ನು ಹೊರತರಲಿದೆ. ಈ ಮೂಲಕ ಸಂಶೋಧನಾ ಮತ್ತು ಔದ್ಯಮಿಕ ವಲಯಗಳನ್ನೂ ಪರಸ್ಪರ ಹತ್ತಿರಕ್ಕೆ ತರಲಾಗುತ್ತದೆ. ಇದರಿಂದಾಗಿ, ನ್ಯಾನೋ ತಂತ್ರಜ್ಞಾನದ ಲಾಭವು ಸಮಾಜಕ್ಕೆ ಸಿಗಲಿದೆ ಎಂದು ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.

ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಪ್ರೀತಿಯನ್ನು ಬೆಳೆಸಬೇಕೆನ್ನುವ ಉದ್ದೇಶದಿಂದ ವಿಜ್ಞಾನ ಪ್ರತಿಭಾ ಶೋಧವನ್ನು ಹಮ್ಮಿಕೊಳ್ಳಲಾಗಿದೆ. ಶಿಷ್ಯವೇತನಗಳ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಅಲ್ಲದೆ, ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಪ್ರಾದೇಶಿಕ ಮತ್ತು ಉಪಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ವೈಜ್ಞಾನಿಕ ಚಿಂತನೆಯ ಬೆಳವಣಿಗೆಗೆ ಒತ್ತು ನೀಡುವಂತಿದೆ. ಇದುವರೆಗಿದ್ದ ಅಂತರವನ್ನು ನೀಗಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಮ್ಮೇಳನದ ಕಾರ್ಯಕಾರಿ ಸಮಿತಿ ಮುಖ್ಯಸ್ಥ ಪ್ರೊ.ಅಜಯಕುಮಾರ್ ಸೂದ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಕೆಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕ ಎ.ಬಿ.ಬಸವರಾಜು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮರಳಿ ಬಂದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ-ಎಚ್. ಡಿ.ಕೆ.

0

ಉಕ್ರೇನ್ ದೇಶದಿಂದ ವಾಪಸ್ ಬಂದು ವೈದ್ಯ ಶಿಕ್ಷಣದಲ್ಲಿ ಅತಂತ್ರರಾಗಿರುವ ಎಲ್ಲ ವಿದ್ಯಾರ್ಥಿಗಳ ನೆರವಿಗೆ ಕೇಂದ್ರ ಸರಕಾರ ಧಾವಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಒತ್ತಾಯಿಸಿದ್ದಾರೆ.

ಅಲ್ಲದೆ, ಜೀವ ಉಳಿಸಿಕೊಂಡು ರಾಜ್ಯಕ್ಕೆ ವಾಪಸ್ ಬಂದಿರುವ ಎಲ್ಲ ವಿದ್ಯಾರ್ಥಿಗಳಿಗೂ ರಾಜ್ಯ ಸರಕಾರ ಮಾನವೀಯ ದೃಷ್ಟಿಯಿಂದ ಉಚಿತ ವೈದ್ಯ ಶಿಕ್ಷಣ ನೀಡಬೇಕು ಎಂದು ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.

ಈ ಬಗ್ಗೆ ಇಂದು ಬೆಳಗ್ಗೆ ಸರಣಿ ಟ್ವೀಟ್ ಮಾಡಿರುವ ಹೆಚ್. ಡಿ. ಕುಮಾರಸ್ವಾಮಿ ಅವರು, ‘ಆಪರೇಷನ್ ಗಂಗಾ’ ಹೆಸರಿನಲ್ಲಿ ಕೇಂದ್ರ ಸರಕಾರ ಉಕ್ರೇನ್ʼನಿಂದ ವಿದ್ಯಾರ್ಥಿಗಳನ್ನು ಏರ್ ಲಿಫ್ಟ್ ಮಾಡಿದೆ ಎಂಬುದೇನೋ ಸರಿ. ಆದರೆ, ಆ ವೈದ್ಯ ವಿದ್ಯಾರ್ಥಿಗಳ ಭವಿಷ್ಯವೇನು? ಮತ್ತೇ, ಆ ದೇಶಕ್ಕೆ ವಿದ್ಯಾರ್ಥಿಗಳು ಹೋಗಲು ಸಾಧ್ಯವಿಲ್ಲ. ಅಲ್ಲಿನ ಶಿಕ್ಷಣ ಸಂಸ್ಥೆ, ವಿವಿಗಳನ್ನೂ ರಷ್ಯಾ ಸೇನೆ ಧ್ವಂಸ ಮಾಡಿದೆ ಎಂದು ಮಾಧ್ಯಮಗಳು ತಿಳಿಸಿವೆ ಎಂದು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

‘ಆಪರೇಷನ್‌ ಗಂಗಾ’ ಹೆಸರಿನಲ್ಲಿ ಕೇಂದ್ರ ಸರಕಾರ ಉಕ್ರೇನ್‌ʼನಿಂದ ವಿದ್ಯಾರ್ಥಿಗಳನ್ನು ಏರ್‌ʼಲಿಫ್ಟ್‌ ಮಾಡಿದೆ ಎಂಬುದೇನೋ ಸರಿ. ಆದರೆ, ಆ ವೈದ್ಯ ವಿದ್ಯಾರ್ಥಿಗಳ ಭವಿಷ್ಯವೇನು? ಮತ್ತೆ ಆ ದೇಶಕ್ಕೆ ಹೋಗಲು ಸಾಧ್ಯವಿಲ್ಲ. ಅಲ್ಲಿನ ಶಿಕ್ಷಣ ಸಂಸ್ಥೆ, ವಿವಿಗಳನ್ನೂ ರಷ್ಯಾ ಸೇನೆ ಧ್ವಂಸ ಮಾಡಿದೆ ಎಂದು ಮಾಧ್ಯಮಗಳೇ ತೋರಿಸುತ್ತಿವೆ ಎಂದು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಸ್ತೆಯಲ್ಲಿ ಕಾದಿದ್ದಾನೆ ಯಮರಾಜ

0

ಭೂಮಿಯ ಮೇಲೆ ಹುಟ್ಟಿದ ನಂತರ ಸಾವು ನಿಶ್ಚಿತ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಪ್ರಪಂಚದಾದ್ಯಂತ ದಿನನಿತ್ಯ ಸಾವಿರಾರು ಜನರು ತಮ್ಮ ಪ್ರಾಣವನ್ನು ಬಿಡುತ್ತಾರೆ. ಸಾವು ಯಾವ ರೂಪದಲ್ಲಾದರೂ ನಮ್ಮ ಮುಂದೆ ಬಂದು ನಿಲ್ಲಬಹುದು.

ವಯೋಸಹಜ ಸಾವು, ಅನಾರೋಗ್ಯದಿಂದ ಸಾವು, ಹಾರ್ಟ್ ಅಟ್ಯಾಕ್, ಇವೆಲ್ಲವನ್ನೂ ಕೂಡ ನಾವು ಎಷ್ಟೇ ಪ್ರಯತ್ನ ಪಟ್ಟರೂ ಸಹ ನಮ್ಮಿಂದ ತಪ್ಪಿಸಲು ಸಾಧ್ಯವಿಲ್ಲ.
ಆದರೆ, ಆಕ್ಸಿಡೆಂಟ್ ಗಳನ್ನು ತಪ್ಪಿಸಬಹುದು.

ಭಾರತದಲ್ಲಿ ಪ್ರತಿವರ್ಷ ಸರಿ ಸುಮಾರು 450000ಕ್ಕೂ ಹೆಚ್ಚು ರೋಡ್ ಆಕ್ಸಿಡೆಂಟ್ ಆಗುತ್ತವೆ. ಅದರಲ್ಲಿ ಅಂದಾಜು 1,50,000 ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ.
ಕೇವಲ ರಸ್ತೆ ಅಪಘಾತದಿಂದಲೇ ಸಾಯುವವರ ಸಂಖ್ಯೆ ವಯೋಸಹಜ ಸಾವು, ಅನಾರೋಗ್ಯದಿಂದ ಸಾವು, ಆತ್ಮಹತ್ಯೆಯಿಂದ ಸಾವು ಇವೆಲ್ಲವುಗಳನ್ನು ಮೀರಿ ಹೆಚ್ಚಿನ ಸಂಖ್ಯೆಯಲ್ಲಿವೆ.

ವಾಹನಗಳಲ್ಲಿ ಚಲಿಸುವಾಗ, ಹೆಲ್ಮೆಟ್ ಧರಿಸದೆ, ಅಗತ್ಯ ಕ್ರಮಗಳನ್ನು ಅನುಸರಿಸದೆ, ಕಾರ್ ನಲ್ಲೋ,ಅಥವಾ ವ್ಯಾನ್ ನಲ್ಲಿ ಸಂಚರಿಸುವಾಗ ಸೀಟ್ ಬೆಲ್ಟ್ ಧರಿಸದೇ, ತಮ್ಮ ನಿರ್ಲಕ್ಷದಿಂದ ಸಾಯುವವರ ಸಂಖ್ಯೆಯೇನು ಕಡಿಮೆ ಇಲ್ಲ.

ಇದರೊಂದಿಗೆ ಘಾಟ್ ರಸ್ತೆಗಳಲ್ಲಿ ಸಂಚರಿಸುವಾಗ ಸೂಚನಾ ಫಲಕಗಳನ್ನು ನಿರ್ಲಕ್ಷಿಸುವವರೂ ಜಾಸ್ತಿ ಇದ್ದಾರೆ. ರಾತ್ರಿಯ ಅಪವೇಳೆಯಲ್ಲಿ ರಸ್ತೆ ಡಿವೈಡರ್ ಗಳಿಗೆ ವಾಹನ ಡಿಕ್ಕಿಸಿ ,ಪ್ರಾಣಾಪಾಯ ತಂದು ಕೊಳ್ಳುವವರೂ ಇದ್ದಾರೆ.

ಕಾಲೇಜು ಯುವಕರೂ ಸಹ ಮೋಜಿಗಾಗಿ ಅಗತ್ಯ ಸ್ಪೀಡ್ ಗಿಂತಲೂ ಹೆಚ್ಚಿನ ವೇಗದಲ್ಲಿ ಗಾಡಿಗಳನ್ನು ಓಡಿಸಿ ತಮ್ಮ ಪ್ರಾಣವನ್ನು ಬಿಡುತ್ತಾರೆ.

ಎಲ್ಲಾದರೂ ಆಕ್ಸಿಡೆಂಟ್ ಆಗಿ ಬಿಟ್ಟರೆ ಅವರಿಗೆ ಸಹಾಯ ಮಾಡುವ ಬದಲಿಗೆ, ಜನರು ಫೋಟೋ ಕ್ಲಿಕ್ಕಿಸಲು, ವಿಡಿಯೋ ಮಾಡಲು ಮುಂದಾಗುತ್ತಾರೆ. ಇನ್ನೂ ಕೆಲವು ಮಂದಿ ಸಹಾಯ ಮಾಡಲು ಬಯಸಿದರೂ ಕೋರ್ಟ್ ಕಚೇರಿಯ ಅಲೆದಾಟ ನಮಗೇಕೆ ಎಂದು ಕಂಡರೂ ಕಾಣದಂತೆ ಸುಮ್ಮನೆ ಹೋಗಿ ಬಿಡುತ್ತಾರೆ. ಆಧುನಿಕತೆ ಬೆಳೆದಂತೆ ಮಾನವನ ಮಾನವೀಯ ಗುಣಗಳು ಸಹ ಗೌಣವಾಗುತ್ತಾ ಸಾಗಿವೆ…

ಈ ಎಲ್ಲಾ ರೀತಿಯ ಅಪಘಾತಗಳನ್ನು ತಡೆಯಲು ಪ್ರತಿ ವರ್ಷವೂ ಸಹ ಸರ್ಕಾರ ಹಲವಾರು ಅಗತ್ಯ ಕ್ರಮಗಳನ್ನು , ನಿಯಮಗಳನ್ನು ಜಾರಿಗೊಳಿಸುತ್ತಲೇ ಇದೆ.

ಇದೀಗ ರಸ್ತೆ ಅಪಘಾತಗಳ ಪ್ರಕರಣಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ದೆಹಲಿ ಹೈಕೋರ್ಟ್ ಮಹತ್ತರವಾದ ನಿರ್ಣಯವನ್ನು ತೆಗೆದುಕೊಂಡಿದೆ.
ಏಪ್ರಿಲ್ 1 ರ ನಂತರದಿಂದ ಸಂಭವಿಸುವ ರಸ್ತೆ ಅಪಘಾತ ಪ್ರಕರಣಗಳ ತನಿಖೆಯನ್ನು ಪೊಲೀಸರು ನಡೆಸಬೇಕೆಂದು ಕಡ್ಡಾಯಗೊಳಿಸಲಾಗಿದೆ.
ಇದರೊಂದಿಗೆ ಅಪಘಾತಗಳ ಬಗ್ಗೆ ಪೊಲೀಸರು 48 ಗಂಟೆಗಳ ಒಳಗೆ ಮೋಟಾರು ಅಪಘಾತ ಕ್ಲೈಮ್ ಟ್ರಿಬ್ಯೂನಲ್‌ಗಳು ಮತ್ತು ವಿಮಾ ಸಂಸ್ಥೆಗಳಿಗೆ ತಿಳಿಸಬೇಕು ಎಂದು ದೆಹಲಿ ಹೈಕೋರ್ಟ್ ಆದೇಶವನ್ನು ನೀಡಿದೆ.

ರಸ್ತೆ ಸಾರಿಗೆ ಸಚಿವಾಲಯವು ವಿಮಾ ಪ್ರಮಾಣಪತ್ರದಲ್ಲಿ ಮೌಲ್ಯೀಕರಿಸಿದ ಮೊಬೈಲ್ ಸಂಖ್ಯೆಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ.
ರಸ್ತೆ ಸಾರಿಗೆ ಸಚಿವಾಲಯವು ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ಪರಿಹಾರಗಳನ್ನು ತ್ವರಿತವಾಗಿ ವಿತರಿಸುವ ಗುರಿಯನ್ನು ಹೊಂದಿದ್ದು, ರಸ್ತೆ ಅಪಘಾತಗಳ ತನಿಖೆ, ವಿವರವಾದ ಅಪಘಾತ ವರದಿಗಳ ತಯಾರಿ ಮತ್ತು ವಿಮಾ ಕ್ಲೈಮ್‌ಗಳ ಇತ್ಯರ್ಥಕ್ಕಾಗಿ ವಿವಿಧ ಮಧ್ಯಸ್ಥಗಾರರಿಗೆ ಸಮಯವನ್ನು ನಿಗದಿಪಡಿಸುವ ಕಡ್ಡಾಯ ಕಾರ್ಯವಿಧಾನವನ್ನು ನಿಗದಿಪಡಿಸಲಾಗಿದೆ.

ಹೈಕೋರ್ಟ್ ನ ಅಧಿಸೂಚನೆಯ ಪ್ರಕಾರ, ಪೊಲೀಸರು ಅಪಘಾತದ ಸ್ಥಳಗಳಿಗೆ ಭೇಟಿ ನೀಡಬೇಕು. ಸಾಕ್ಷ್ಯಗಳನ್ನು ಸಂಗ್ರಹಿಸಬೇಕು ಮತ್ತು ಅಪಘಾತಗಳ ಬಗ್ಗೆ ಮೋಟಾರು ಅಪಘಾತ ಕ್ಲೈಮ್ ಟ್ರಿಬ್ಯೂನಲ್‌ಗಳಿಗೆ ನಿಕಟವಾಗಿ ಪ್ರಕ್ರಿಯೆಯು ಪ್ರಾರಂಭವಾಗಬೇಕು. ತನಿಖಾ ಅಧಿಕಾರಿಯು ಅವರ ಹಕ್ಕುಗಳು ಮತ್ತು ಹಕ್ಕುಗಳ ಬಗ್ಗೆ ಅವರ ಕಾನೂನು ಪ್ರತಿನಿಧಿಗಳ ಸಂತ್ರಸ್ತರಿಗೆ ತಿಳಿಸಲು ಕರ್ತವ್ಯ ಬದ್ಧನಾಗಿರಬೇಕು. ದೆಹಲಿಯಲ್ಲಿ ಯಶಸ್ವಿಯಾಗಿ ಮಾಡಲಾದ ಈ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ.

ಈ ಮೂಲಕ ಇನ್ನು ಮುಂದೆ ಪೊಲೀಸರು ತಮ್ಮ ಕರ್ತವ್ಯದ ಜೊತೆ ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಲಿದ್ದಾರೆ.

ಮೊದಲಾದರೆ, ಅಪಘಾತ ನಡೆದ ಸ್ಥಳಕ್ಕೆ ಅಂಬುಲೆನ್ಸ್ ಬಂದು ಅಪಘಾತಕ್ಕೆ ಒಳಗಾದವರು ಆಸ್ಪತ್ರೆಗೆ ಸೇರಿಸಿ ನಂತರ ವಿಚಾರಣೆ ನಡೆಯುತ್ತಿತ್ತು.
ಅಪಘಾತದಲ್ಲಿ ಹಾನಿಗೊಳಗಾಗಿರುವ ವಾಹನ ಹಾಗೂ ವ್ಯಕ್ತಿಗೆ ಪರಿಹಾರವನ್ನು ದೊರಕಿಸಿಕೊಡುವುದು ಬಹಳ ಕಷ್ಟಕರವಾಗಿತ್ತು.
ಆದರೆ ಇನ್ನು ಮುಂದೆ ಅಪಘಾತ ನಡೆದಲ್ಲಿ ಪೊಲೀಸರು ಖುದ್ದಾಗಿ ಬಂದು ವಿಚಾರಣೆ ನಡೆಸಲಿದ್ದಾರೆ. ಈ ಮೂಲಕ ಅಪಘಾತದಿಂದ ಹಾನಿಗೊಳಗಾದವರು ಪರಿಹಾರವನ್ನು ಪಡೆಯುವ ಅವಧಿ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ.

ಅಪಘಾತಕ್ಕೆ ಒಳಗಾದ ವ್ಯಕ್ತಿಯ ವೈದ್ಯಕೀಯ ಕಾನೂನು ಮತ್ತು ಮರಣೋತ್ತರ ವರದಿಗಳನ್ನು ನೀಡುವ ಜವಾಬ್ದಾರಿಯೂ ಸಹ ಪೋಲಿಸರ ಹೆಗಲಿಗೇರಿದೆ.

ಇಂತಹ ಪ್ರಕರಣಗಳನ್ನ ಇತ್ಯರ್ಥಪಡಿಸುವಲ್ಲಿ ದೆಹಲಿ ಸರ್ಕಾರ ನೂತನ ವಿಚಾರಣಾ ಕಾನೂನನ್ನು ಕೈಗೆತ್ತಿಕೊಂಡಿದೆ. ನಮ್ಮ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಶೀಘ್ರವಾಗಿ ಕ್ರಿಯಾಶೀಲವಾದರೆ ಚೆನ್ನ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉಕ್ರೇನ್ ನ ನಾಲ್ಕು ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮ

0

ಉಕ್ರೇನ್ ಮೇಲಿನ ಸಮರ ಮುಂದುವರೆಸಿರುವ ರಷ್ಯಾ ಸೇನೆ ಇದೀಗ ರಾಜಧಾನಿ ಕೀವ್ ಸೇರಿದಂತೆ ನಾಲ್ಕು ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ.

ಕೀವ್, ಕಾರ್ಖೀವ್, ಮರಿಯಪೋಲ್ ಹಾಗೂ ಸುಮಿ ನಗರಗಳಲ್ಲಿ ರಷ್ಯಾ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ.

ಉಕ್ರೇನ್ ನಗರಗಳಾದ ಮಾರಿಯುಪೋಲ್ ಮತ್ತು ವೊಲ್ನೊವಾಖಾದಿಂದ ಮಾನವೀಯ ಕಾರಿಡಾರ್ ಗಳಿಗೆ ಅವಕಾಶ ನೀಡಲು ರಷ್ಯಾ ಶನಿವಾರ ಭಾಗಶಃ ಕದನ ವಿರಾಮ ಘೋಷಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿರುವಂತ ರಷ್ಯಾ ರಕ್ಷಣಾ ಸಚಿವಾಲಯು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರ ವಿನಂತಿ ಮೇರೆಗೆ ಇಂದು ಮಧ್ಯಾಹ್ನ 12.30ರಿಂದ ಉಕ್ರೇನ್ ನಲ್ಲಿ ಮಾನವೀಯ ಕಾರಿಡಾರ್ ಗಳನ್ನು ತೆರೆಯಲು ರಷ್ಯಾದ ಮಿಲಿಟರಿ ಉಕ್ರೇನ್ ನಲ್ಲಿ ಕದನ ವಿರಾಮ ಘೋಷಿಸಿದೆ ಎಂದು ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಚಿತ್ರದುರ್ಗ ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಿಷೇಧ ರಥ ಅಭಿಯಾನ

0

ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಒತ್ತಾಯಪೂರ್ವಕವಾಗಿ ಬಾಲ್ಯವಿವಾಹಕ್ಕೆ ಮುಂದಾದರೆ ತಾವೇ ಪ್ರತಿಭಟನೆಗೆ ಮುಂದಾಗಬೇಕು ಎಂದು ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಅವರು ತಿಳಿಸಿದರು.
ಚಿತ್ರದುರ್ಗದ ಚಿತ್ರಾ ಡಾನ್ ಬೋಸ್ಕೋ ಸಂಸ್ಥೆಯಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಚಿತ್ರಾ ಡಾನ್ ಬೋಸ್ಕೋ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬಾಲ್ಯವಿವಾಹ ನಿಷೇಧ ಕುರಿತು ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

18 ವರ್ಷದೊಳಗೆ ವಿವಾಹ ಮಾಡುವುದು ಅಪರಾಧ. ಕೇಂದ್ರ ಸರ್ಕಾರ ಇದನ್ನು 21 ವರ್ಷಕ್ಕೆ ಹೆಚ್ಚಿಸಬೇಕೆಂದು ಕಾಯ್ದೆಯನ್ನು ಅನುಮೋದಿಸಿದ್ದು, ನಿಯಮಗಳು ಜಾರಿಯಾಗಬೇಕು. 21 ವರ್ಷದ ವೇಳೆಗೆ ಅವರ ಶೈಕ್ಷಣಿಕಯಾಗಿ ಪದವಿ ಪೂರ್ಣಗೊಳಿಸಲು ಸಾಧ್ಯವಾಗಲಿದೆ. ಜೊತೆಗೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುತ್ತಾರೆ ಎಂದರು.

  ಬಾಲ್ಯವಿವಾಹ ನಿಷೇಧ ಕುರಿತು ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ವಿನೂತನ ಕಾರ್ಯಕ್ರಮವಾಗಿದ್ದು, ನಮ್ಮಲ್ಲಿ ಎಚ್ಚರಿಕೆ ಹಾಗೂ ಪ್ರಜ್ಞೆ ಮೂಡಿಸುವ ಕಾರ್ಯಕ್ರಮವಾಗಿದೆ. ಕಾಯ್ದೆ, ಕಾನೂನು ಇದ್ದರೂ ಸಹ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮ ಆಯೋಜನೆ ಮಾಡಿದೆ ಎಂದರು.

ಬಾಲ್ಯವಿವಾಹ ಅಪರಾಧ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದಾಗ್ಯೂ ತಂದೆ-ತಾಯಿಗಳು ಬಾಲ್ಯವಿವಾಹವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಸಮಾಜ ಹಾಗೂ ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ, ಸಂಸಾರದ ಬಗ್ಗೆ ಅರಿವಿಲ್ಲದೇ, ಮಕ್ಕಳ ಪಾಲನೆ ಪೋಷಣೆ ಅರಿವಿಲ್ಲದೇ, ಸಮಾಜ, ಸಂಸಾರವನ್ನು ತಿಳಿದುಕೊಳ್ಳದೇ ಇರುವ ವಯಸ್ಸಿನಲ್ಲಿ ಸಂಸಾರ ಮಾಡುವುದು ಘೋರ ಅಪರಾಧವಾಗಿದೆ.

ಈ ಹಿನ್ನಲೆಯಲ್ಲಿ ಬಾಲ್ಯವಿವಾಹ ನಿಷೇಧದ ಕುರಿತು ಜನಜಾಗೃತಿ ಮೂಡಿಸುವುದು ಬಹಳ ಉಪಯುಕ್ತವಾದುದು.
ಬಾಲ್ಯವಿವಾಹ ನಿಷೇಧ ಕುರಿತು ಹೆಚ್ಚಿನ ಜನ ಜಾಗೃತಿ ಮೂಡಿಸುವುದರಿಂದ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು ಎಂದು ಹೇಳಿದರು.

 ಬಾಲ್ಯವಿವಾಹ ನಿಷೇಧ ಅಭಿಯಾನ ರಥಕ್ಕೆ ಚಾಲನೆ:
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬಾಲ್ಯವಿವಾಹ ನಿಷೇಧ ಅಭಿಯಾನದ ರಥಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

 ಬಾಲ್ಯ ವಿವಾಹ ನಿಷೇಧ ಅಭಿಯಾನದ ಎಲ್‍ಇಡಿ ರಥವು ಮಾರ್ಚ್ 06 ರಿಂದ ಮಾರ್ಚ್ 23 ರವರೆಗೆ ಜಿಲ್ಲೆಯ ಆಯ್ದ 90 ಗ್ರಾಮಗಳಲ್ಲಿ ಸಂಚರಿಸಲಿದೆ.  ಮಾರ್ಚ್ 06 ರಿಂದ 8 ರವರೆಗೆ ಚಿತ್ರದುರ್ಗ ತಾಲ್ಲೂಕು ಪ್ರತಿ ನಿತ್ಯ ಐದು ಗ್ರಾಮಗಳಲ್ಲಿ ಸಂಚರಿಸಲಿದೆ. ಮಾರ್ಚ್ 09 ರಿಂದ 11 ರವರೆಗೆ ಚಳ್ಳಕೆರೆ ತಾಲ್ಲೂಕು, ಮಾರ್ಚ್ 12 ರಿಂದ 14ರವರೆಗೆ ಹಿರಿಯೂರು ತಾಲ್ಲೂಕು, ಮಾರ್ಚ್ 15 ರಿಂದ 17 ರವರೆಗೆ ಹೊಳಲ್ಕೆರೆ ತಾಲ್ಲೂಕು, ಮಾರ್ಚ್ 18 ರಿಂದ 20 ರವರೆಗೆ ಹೊಸದುರ್ಗ ತಾಲ್ಲೂಕು ಹಾಗೂ ಮಾರ್ಚ್ 21 ರಿಂದ 23 ರವರೆಗೆ ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಸಂಚರಿಸಿ, ಜಾಗೃತಿ ಮೂಡಿಸಲಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಸ್.ರಾಜಾನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಲೋಕೇಶ್ವರಪ್ಪ, ಚಿತ್ರಾ ಡಾನ್ ಬೋಸ್ಕೋ ನಿದೇಶಕ ಫಾದರ್ ಜೋಸೆಫ್ ಸೇರಿದಂತೆ ಮತ್ತಿತರರು ಇದ್ದರು.