Saturday, February 21, 2026
Saturday, February 21, 2026
Home Blog Page 1678

ಶಾಸಕ ಅರುಣ್ ಗೆ ಬೆದರಿಕೆ ಕರೆ

0

ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಸಂಬಂಧ ನೀಡಿದ್ದ ಹೇಳಿಕೆ ಹಿನ್ನೆಲೆ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್‌ಗೆ ಜೀವ ಬೆದರಿಕೆ ಕರೆ ಮಾಡಲಾಗಿದೆ.

ನಿಮ್ಮ ತಲೆಲಿ ಇವತ್ತು ಕೇವಲ ಒಬ್ಬ ಹಿಂದೂ ಕಾರ್ಯಕರ್ತ ಸತ್ತಿದ್ದಾನೆ ಅಷ್ಟೆ. ಆದರೆ ಮುಂದಿನ ದಿನ ನಿಮ್ಮ ಹೆಂಡಿರು, ಮಕ್ಕಳೇ ನಮ್ಮ ಟಾರ್ಗೆಟ್ ನೆನಪಿಡಿ. ಷಂಡ ಸರ್ಕಾರದ ಭಂಡರಂತೆ ವರ್ತಿಸುವ ಪ್ರಚಂಡರೇ,” ಎಂದು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಒಡ್ಡಲಾಗಿದೆ.

ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಈ ಹಿನ್ನಲೆಯಲ್ಲಿ ಫೆ.21ರಂದು ಡಿ.ಎಸ್. ಅರುಣ್ ಅವರಿಗೆ ಬೆದರಿಕೆ ಕರೆ ಬಂದಿದೆ. ಮುಸ್ತಾಕ್ ಅಲಿ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಸಂದೇಶವನ್ನು ಪ್ರಕಟಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಹರ್ಷ ಹತ್ಯೆ ಪ್ರಕರಣದ ಸಂಬಂಧ ನೀಡಿದ್ದ ಹೇಳಿಕೆ ಹಿನ್ನೆಲೆ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್‌ಗೆ ಜೀವ ಬೆದರಿಕೆ ಕರೆ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ಸಂಬಂಧ ಡಿ.ಎಸ್. ಅರುಣ್ ಅವರ ಆಪ್ತ ಸಹಾಯಕ ವಾಗೀಶ್ ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಅಲ್ಲದೆ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ.

ಬೆದರಿಕೆ ಕುರಿತು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲಿಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಎಲ್ಲರೂ ಮರಗಳನ್ನು ನೆಟ್ಟು ಆರೈಕೆ ಮಾಡಿ- ಪದ್ಮಶ್ರೀ ತುಳಸಿಗೌಡ

0

ನಾನು ಈಗಾಗಲೇ ನೂರಾರು ಜಾತಿ ಮರಗಳನ್ನು ಬೆಳೆಸಿದ್ದೇನೆ. ಕೆಲವು ಫಲ ಕೊಡುತ್ತವೆ. ಕೆಲವು ನೆರಳು ಕೊಡುತ್ತವೆ. ಮತ್ತು ಕೆಲವು ಮರಗಳನ್ನು ಕಡಿದರೂ ಮತ್ತೆ ಚಿಗುರಿ ಬೆಳೆಯುತ್ತವೆ. ನನ್ನ ಹಾಗೆ ಎಲ್ಲರೂ ಮರಗಳನ್ನು ನೆಟ್ಟು ಮತ್ತು ಅದನ್ನು ಆರೈಕೆ ಮಾಡಬೇಕು ಎಂದು ಪದ್ಮಶ್ರೀ ಮತ್ತು ಮದರ್ ತೆರೇಸಾ ರಾಷ್ಟ್ರೀಯ ಪ್ರಶಸ್ತಿ ಪುರಸ್ಕತರಾದ ಅಂಕೋಲದ ತುಳಸಿಗೌಡ ಕರೆ ನೀಡಿದ್ದಾರೆ.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ವತಿಯಿಂದ ಮಾ.8 ರಂದು ನವಿಲೆ ಆವರಣದ ಕೃಷಿ ಮಹಾವಿದ್ಯಾಲಯದ ಎಂ. ಎಸ್. ಸ್ವಾಮಿನಾಥನ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಟೀಲು ಅಶೋಕ ಪೈ ಸ್ಮಾರಕ ಕಾಲೇಜು ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಮಾತನಾಡಿ, ನೈಸರ್ಗಿಕವಾಗಿ, ಜೀವಿವೈವಿಧ್ಯತೆಯನ್ನು ಉಳಿಸಿಕೊಳ್ಳುತ್ತಲೇ ಮಹಿಳೆಯರು ಸುಸ್ಥಿರತೆ ಕಾಪಾಡಿಕೊಳ್ಳಬೇಕು. ಹಾಗೂ ಪ್ರತಿಯೊಬ್ಬರೂ ಹೆಣ್ಣನ್ನು ಗೌರವದಿಂದ ಕಾಣಬೇಕು ಎಂದು ತಿಳಿಸಿದ್ದಾರೆ.

ಹೆಣ್ಣನ್ನು ಗೌರವಿಸುವ ಸಂಸ್ಕತಿ ಮನೆಯಿಂದಲೇ, ತಾಯಿ-ತಂದೆಯರಿಂದಲೇ ಬರಬೇಕಿದೆ. ವೈಜ್ಞಾನಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಜಾತಿ ಧರ್ಮ, ವರ್ಗದ ನೆಲೆಯಲ್ಲಿ ಮಹಿಳೆಯರನ್ನು ಸಮಾನತೆಯಿಂದ ಕಾಣಬೇಕಾಗಿದೆ. ಹೆಣ್ಣನ್ನು ಶೋಷಣೆ ಮುಕ್ತವಾಗಿಸಿ ಅಲ್ಲಿ ಪ್ರೀತಿ ಮತ್ತು ಗೌರವದಿಂದ ಕಾಣುವಂತೆ ಆಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಎಂ. ಕೆ. ನಾಯಕ್ ಅವರು ಮಾತನಾಡಿ, ಎಲ್ಲಾ ವರ್ಗದ ಮಹಿಳೆಯರಿಗೆ ಸಮಾನತೆಯನ್ನು ಕಲ್ಪಿಸಿಕೊಟ್ಟಂತಹ ದಿನವಾಗಿ ನಾವು ಮಹಿಳಾ ದಿನವನ್ನು ಆಚರಿಸುತ್ತಿದ್ದೇವೆ. ಕಳೆದ ಎರಡು ವರ್ಷದಿಂದ ಪ್ರತಿ ಸಾವಿರ ಪುರುಷರಿಗೆ ಮಹಿಳೆಯರ ಸಂಖ್ಯೆ ಸಮಾನವಾಗಿಲ್ಲ.

ಹೆಣ್ಣಿಲ್ಲದ ಸಮಾಜವನ್ನು ಊಹಿಸಲೂ ಸಾಧ್ಯವಿಲ್ಲ. ದೇವರು ಎಲ್ಲಾ ಕಡೆ ಇರನು, ಅದಕ್ಕಾಗಿ ತಾಯಂದಿರನ್ನು ಸೃಷ್ಟಿಸಿದ್ದಾನೆ. ತಾಯಂದಿರ ತ್ಯಾಗ, ಸಂಯವದಿಂದಲೇ ಪ್ರಪಂಚ ನಡೆಯುತ್ತಿದೆ ಇದಕ್ಕೆ ನೆಪೋಲಿಯನ್ ಬೋನಾಪಾರ್ಟೆ ಹೇಳಿದಂತೆ ಒಳ್ಳೆಯ ತಾಯಂದಿರನ್ನು ನೀಡಿದರೆ ಉತ್ತಮ ದೇಶವನ್ನು ಕಟ್ಟುವೆ ಎಂದಿರುವುದನ್ನು ಉಲ್ಲೇಖಸಿದಿರು. ಹಾಗಾಗಿ ನಾವುಗಳೆಲ್ಲರೂ ಹೆಣ್ಣನ್ನು ಪೂಜಿಸಿ, ಪ್ರೀತಿಸಿ, ಗೌರವಾದರಗಳಿಂದ ಕಾಣಬೇಕಿದೆ. ಆಗ ಮಾತ್ರ ಸಮಾನ ಜಗತ್ತು ಸಶಕ್ತ ಜಗತ್ತು ಆಗಲು ಸಾಧ್ಯವಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಆಸ್ಪತ್ರೆಯ ಶುಶ್ರೂಷಕಿ ಶ್ರೀಮತಿ ಎನ್. ಲೀಲಾವತಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಜಯಲಕ್ಷ್ಮಿ ನಾರಾಯಣ ಹೆಗಡೆ, ಪ್ರಾಧ್ಯಾಪಕರು ಮತ್ತು ನೋಡಲ್ ಅಧಿಕಾರಿ (ಜೆಂಡರ್ ಬಜೆಟ್) ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿವರ್ಷ ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಹಿಂದೆ ಮಹಿಳೆ ಮತ್ತು ಪುರುಷರ ನಡುವೆ ವೇತನ ತಾರತಮ್ಯ ಮಾಡಿದ್ದರ ಪ್ರತಿಫಲ ಮಹಿಳೆಯರು ಒಟ್ಟುಗೂಡಿ ಸಮಾನತೆ ಬೇಕೆಂದು ಧರಣಿ ಮಾಡಿದ ದಿನವನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದು ಆಚರಿಸಲಾಗುತ್ತಿದೆ. ಅಕ್ಷರಸ್ಥ ಕುಟುಂಬದಲ್ಲೂ ಮಹಿಳೆಯರ ಶೋಷಣೆ ನಡೆಯುತ್ತಿದೆ. ಇದು ನಿಲ್ಲಬೇಕೆಂದರೆ ನಾವೆಲ್ಲರೂ ಜಾಗೃತರಾಗಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ಶಿಕ್ಷಣ ನಿರ್ದೇಶಕ ಡಾ. ಎಂ. ಹನುಮಂತಪ್ಪ, ಸಂಶೋಧನಾ ನಿರ್ದೇಶಕ
ಡಾ. ಮೃತ್ಯುಂಜ ಸಿ. ವಾಲಿ, ಕುಲಸಚಿವ ಡಾ. ಆರ್. ಲೋಕೇಶ, ಡೀನ್ (ಸ್ನಾತಕೋತ್ತರ) ಡಾ. ಎಂ. ದಿನೇಶ್ ಕುಮಾರ್, ಗ್ರಂಥಪಾಲಕ ಡಾ. ಡಿ. ತಿಪ್ಪೇಶ, ಆಡಳಿತಾಧಿಕಾರಿ ಡಾ. ಜಿ. ಕೆ. ಗಿರಿಜೇಶ್, ವಿಸ್ತರಣಾ ನಿರ್ದೇಶಕ ಡಾ. ಬಿ. ಹೇಮ್ಲಾನಾಯಕ್, ಡೀನ್(ವಿದ್ಯಾರ್ಥಿಕಲ್ಯಾಣ)ಹಣಕಾಸು ನಿಯಂತ್ರಣಾಧಿಕಾರಿ ಡಾ. ಎನ್. ಶಿವಶಂಕರ್ ಹಾಗೂ ವಿಶ್ವ ವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಕಾರ್ಮಿಕ ವರ್ಗದವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕುರಿ ಸಾಹುಕಾರ ಪ್ರದೀಪ್

0

ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಕುರಿ ಶೆಡ್ ನಿರ್ಮಿಸಿಕೊಂಡ ಪ್ರದೀಪ್ ಉತ್ತಮ ಆದಾಯ ಗಳಿಸುತ್ತಾ ಸ್ವಗ್ರಾಮದಲ್ಲೇ ನೆಲೆ ಕಂಡುಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಭಾರಂಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಣ್ಣಿಗೆರೆಯ ಪ್ರದೀಪ್ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಕೋವಿಡ್ ವೇಳೆ ಕೆಲಸವಿಲ್ಲದೇ ಊರಿಗೆ ಬಂದಾಗ ಅವರು ಆರಂಭಿಸಿದ ಉದ್ಯೋಗ ಕುರಿ ಸಾಕಾಣಿಕೆ. ತಮ್ಮ ಉಳಿತಾಯದ ಹಣದಲ್ಲಿ ಮೊದಲಿಗೆ 10 ಕುರಿಗಳನ್ನು ಸಾಕಿದ ಅವರು ಏಳರಿಂದ ಎಂಟು ತಿಂಗಳಲ್ಲಿ ಈ ಕುರಿಗಳನ್ನು ಮಾರಿ ಉತ್ತಮ ಆದಾಯ ಗಳಿಸಿ, ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕುರಿಗಳನ್ನು ಖರೀದಿಸಿದ್ದಾರೆ.

ಪ್ರಸ್ತುತ 40 ಕುರಿಗಳನ್ನು ಹೊಂದಿದ್ದು, ಕುರಿ ಗೊಬ್ಬರದಿಂದ ಸಹ ಉತ್ತಮ ಆದಾಯ ಬರುತ್ತಿದೆ. ಇದಕ್ಕೆಲ್ಲಾ ಸಹಕಾರಿಯಾಗಿದ್ದು ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಿಕೊಂಡ ಕುರಿ ಶೆಡ್. ಸುಸಜ್ಜಿತ ಕುರಿ ಶೆಡ್‍ನಿಂದಾಗಿ ಕುರಿ ಸಾಕಾಣಿಕೆ ಉದ್ಯೋಗ ವ್ಯವಸ್ಥಿತವಾಗಿದ್ದು, ಸಾಕಾಣಿಕೆ ಕೂಡ ಸುಲಭವಾಗಿದೆ. ಇವರ ಕುರಿ ಶೆಡ್ ಇತರರಿಗೆ ಮಾದರಿಯಾಗಿದ್ದು ಸುತ್ತಮುತ್ತಲಿನ ರೈತರು ಕುರಿ ಶೆಡ್‍ಗೆ ಭೇಟಿ ನೀಡಿ ಕುರಿ ಸಾಕಾಣಿಕೆ ಬಗ್ಗೆ ಪ್ರದೀಪ್‍ರಿಂದ ಮಾಹಿತಿ ಪಡೆಯುತ್ತಿದ್ದಾರೆ.

ಬೆಂಗಳೂರಿನಿಂದ ವಾಪಸ್ಸಾದ ಪ್ರದೀಪ್, ನರೇಗಾ ಯೋಜನೆಯ ಸೌಲಭ್ಯಗಳ ಕುರಿತು ಗ್ರಾಮದಲ್ಲಿ ಅಂಟಿಸಲಾದ ಪ್ರಚಾರದ ಪೊಸ್ಟರ್‍ಗಳನ್ನು ಓದಿಕೊಂಡು, ಗ್ರಾ.ಪಂ ಗೆ ಭೇಟಿ ನೀಡಿ, ಪಿಡಿಓ ಅವರಿಂದ ಕುರಿ ಶೆಡ್ ಕುರಿತು ಹೆಚ್ಚಿನ ಮಾಹಿತಿ ಪಡೆದು ಯೋಜನೆಯ ಸದುಪಯೋಪ ಪಡೆದಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮಹದಾಯಿ ವಿವಾದ ಪರಸ್ಪರ ಪರಿಹರಿಸಿ ಎಂದರೆ ಅರ್ಥವಿಲ್ಲ

0

ಮಹದಾಯಿ ಹೋರಾಟಗಾರರಿಗೆ ಪೊಲೀಸರಿಂದ ಹೊಡೆಸಿದವರು ಈಗ ನಮ್ಮ ನೀರು, ನಮ್ಮ ಹಕ್ಕು ಎಂದು ಹೊರಟಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಬಜೆಟ್ ಚರ್ಚೆಯಲ್ಲಿ ಜೆಡಿಎಸ್ ಪರವಾಗಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಏನಾದರೂ ಅನುಷ್ಠಾನವಾಗಬೇಕಿದ್ದರೆ ರಾಜ್ಯ ಸರ್ಕಾರ ಕೇಂದ್ರದ ಮನವೊಲಿಸಬೇಕು. ಅದನ್ನು ಬಿಟ್ಟು ನಮ್ಮ ನೀರು, ನಮ್ಮ ಹಕ್ಕು ಎಂದು ಹೇಳುತ್ತಾ ಹೊರಟರೆ ಏನೂ ಆಗುವುದಿಲ್ಲ ಎಂದು ಹೆಚ್. ಡಿ. ಕುಮಾರಸ್ವಾಮಿ ಅವರು ಟೀಕಿಸಿದ್ದಾರೆ.

ಕೇಂದ್ರ ಸರಕಾರ ಪದೇ ಪದೇ ಉಭಯ ರಾಜ್ಯಗಳು ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಿ ಎಂದು ಹೇಳುತ್ತಿರುವುದು ಅರ್ಥವಾಗುವುದಿಲ್ಲ. ಮುಖ್ಯಮಂತ್ರಿಗಳು ತಕ್ಷಣ ಕೇಂದ್ರ ಸರಕಾರದ ಮನವೊಲಿಸಬೇಕು. ಇಲ್ಲವಾದರೆ ಸಿಡಬ್ಲ್ಯುಸಿ ಏಜೆ ಬೇಕು? ಎಂದು ಪ್ರಶ್ನಿಸಿದ್ದಾರೆ.

ಬಜೆಟ್ ನಲ್ಲಿ ನೀವು ಒಂದು ಸಾವಿರ ಕೋಟಿ ರೂ.ನ್ನು ಮೇಕೆದಾಟು ಯೋಜನೆಗೆ ಮೀಸಲಿಟ್ಟಿದ್ದೀರಿ. ಆದರೆ ಇದರಿಂದ ಯಾವ ಪ್ರಯೋಜನವೂ ಇಲ್ಲ. ಪಾದಯಾತ್ರೆಗೆ ಹೆದರಿ ಸರಕಾರ ಹಣ ಮೀಸಲಿಟ್ಟಿದೆ ಎಂದು ಯಾರೊಬ್ಬರೋ ಭಾಷಣ ಶುರು ಮಾಡಿದ್ದಾರೆ. ಪಾದಯಾತ್ರೆಯಿಂದ ಏನು ಆಗುವುದಿಲ್ಲ. ಯಾರೂ ಕೇಳಲ್ಲ. ಪಾದಯಾತ್ರೆ ಮೂಲಕ ಭದ್ರ ಕೋಟೆಗೆ ಲಗ್ಗೆ ಇಟ್ಟಿದ್ದಾರೆಂದು ಬರೆಸಿಕೊಂಡಿದ್ದಾರೆ. ಇದೆಲ್ಲ ನಾವು ಬಹಳ ನೋಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಹೆಚ್. ಡಿ. ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕುವೆಂಪು ವಿವಿ ಅತಿಥಿ ಉಪನ್ಯಾಸಕರ ಸಂಭಾವನೆ ಪರಿಷ್ಕರಣೆ

0

ಕುವೆಂಪು ವಿಶ್ವವಿದ್ಯಾಲಯದ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳ ಮಾಸಿಕ ಸಂಭಾವನೆಯನ್ನು ಪರಿಷ್ಕರಿಸಲು ಕುಲಸಚಿವರ ಅಧ್ಯಕ್ಷತೆಯಲ್ಲಿ ಕುಲಸಚಿವ (ಪರೀಕ್ಷಾಂಗ), ಸಿಂಡಿಕೇಟ್ ಸದಸ್ಯರಾದ ಶ್ರೀ ಜಿ. ಧರ್ಮಪ್ರಸಾದ್, ಶ್ರೀ ಮಂಜುನಾಥ ಎನ್.ಆರ್. ಮತ್ತು ಹಣಕಾಸು ಅಧಿಕಾರಿಗಳನ್ನು ಒಳಗೊಂಡಂತೆ ರಚಿಸಲಾಗಿತ್ತು.

ಈ ಸಮಿತಿಯು ಸಲ್ಲಿಸಿದ ವರದಿಯನ್ನು ಪರಿಶೀಲನೆ ಮತ್ತು ನಿರ್ಣಯಕ್ಕಾಗಿ ದಿನಾಂಕ:08-03-2022 ರ ಸಿಂಡಿಕೇಟ್ ಸಭೆಗೆ ಮಂಡಿಸಲಾಗಿತ್ತು. ಇದನ್ನು ಜಾರಿಗೆ ತರಬೇಕೆಂದು ಸಿಂಡಿಕೇಟ್ ಸದಸ್ಯರಾದ ಶ್ರೀ ಬಿ. ನಿರಂಜನಮೂರ್ತಿ, ಶ್ರೀ ಹೆಚ್.ಬಿ. ರಮೇಶ್ ಬಾಬು, ಶ್ರೀ ಬಳ್ಳೇಕೆರೆ ಸಂತೋಷ್, ಶ್ರೀ ಕಿರಣ್ ರವೀಂದ್ರ ದೇಸಾಯಿ, ಶ್ರೀ ರಾಮಲಿಂಗಪ್ಪ ಹೆಚ್. ಮತ್ತು ಶ್ರೀ ಎಸ್ ಆರ್. ನಾಗರಾಜ್ ಇವರು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಸದರಿ ಸಭೆಯು ಕೆಲವೊಂದು ತಿದ್ದುಪಡಿಗಳೊಂದಿಗೆ ವರದಿಯನ್ನು ಅಂಗೀಕರಿಸಿದೆ. ಅದರಂತೆ ಈ ಕೆಳಕಂಡಂತೆ 8 ವಿವಿಧ ಹಂತಗಳಲ್ಲಿ ಸಂಭಾವನೆ ಅಥವಾ ವೇತನವನ್ನು ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಹಾಗೂ ಸದರಿ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಕೆಲವೊಂದು ಸೌಲಭ್ಯಗಳನ್ನು ವಿಸ್ತರಿಸಲು ನಿರ್ಣಯಿಸಲಾಗಿದೆ.
•15 ವರ್ಷ ಮತ್ತು ಹೆಚ್ಚು ವರ್ಷಗಳಿಗಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ – ರೂ. 45000-00

• 15 ವರ್ಷ ಮತ್ತು ಹೆಚ್ಚು ವರ್ಷಗಳಿಗಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿಲ್ಲದೇ ಇರುವ ಅತಿಥಿ ಉಪನ್ಯಾಸಕರಿಗೆ – ರೂ. 40000-00

• 10 ವರ್ಷ ಮತ್ತು ಹೆಚ್ಚು ವರ್ಷಗಳಿಗಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ 15 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿರುವ ಮತ್ತು ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ – ರೂ. 35000-00

• 10 ವರ್ಷ ಮತ್ತು ಹೆಚ್ಚು ವರ್ಷಗಳಿಗಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ 15 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿರುವ ಮತ್ತು ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿಲ್ಲದೇ ಇರುವ ಅತಿಥಿ ಉಪನ್ಯಾಸಕರಿಗೆ – ರೂ. 36000-00

• 5 ವರ್ಷ ಮತ್ತು ಹೆಚ್ಚು ವರ್ಷಗಳಿಗಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ 10 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿರುವ ಮತ್ತು ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ – ರೂ.35000-00

• 5 ವರ್ಷ ಮತ್ತು ಹೆಚ್ಚು ವರ್ಷಗಳಿಗಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ 10 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿರುವ ಮತ್ತು ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿಲ್ಲದೇ ಇರುವ ಅತಿಥಿ ಉಪನ್ಯಾಸಕರಿಗೆ – ರೂ. 33000-00

• 5 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿರುವ ಮತ್ತು ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ – ರೂ. 31000-00

• 5 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿರುವ ಮತ್ತು ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿಲ್ಲದೇ ಇರುವ ಅತಿಥಿ ಉಪನ್ಯಾಸಕರಿಗೆ – ರೂ. 30000-00

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸುಡು ಬೇಸಿಗೆ ಕುಡಿಯಿರಿ ಕೊಂಚ ತಣ್ಣಗೆ

0

ಬೇಸಿಗೆ ಬಂತೆಂದರೆ ತಂಪು ಪಾನೀಯಗಳ ಬೇಡಿಕೆಗಳು ಹೆಚ್ಚಾಗುತ್ತವೆ. ಲೆಕ್ಕಕ್ಕೆ ಸಿಗದಷ್ಟು ಸಂಖ್ಯೆಯಲ್ಲಿ ವಿವಿಧ ರೀತಿಯ ಪಾನೀಯಗಳನ್ನು, ನಾವು ಕುಡಿದು ಆನಂದಿಸುತ್ತೇವೆ. ಬೇಸಿಗೆಯಲ್ಲಿ ಬಾಯಾರಿಕೆಯೂ ಹೆಚ್ಚು. ಶೆಕೆಯಂತೂ ಹೇಳತೀರದು. ಬೇಸಿಗೆಯ ಹೊತ್ತಿನಲ್ಲಿ ಬಹಳಷ್ಟು ಜನರು ದಿನಕ್ಕೆರಡು ಸಲ ಸ್ನಾನ ಮಾಡುವುದನ್ನೂ ರೂಢಿಸಿಕೊಂಡಿರುತ್ತಾರೆ. ಈ ಸಮಯದಲ್ಲಿ, ಐಸ್ ಕ್ರೀಮ್ ಅಂಗಡಿಗಳು, ತಂಪುಪಾನೀಯದ ಅಂಗಡಿ , ಎಳನೀರು ಅಂಗಡಿಗಳ ಮುಂದೆ ಜನರು ಸಾಲು ಸಾಲಾಗಿ ನಿಂತಿರುತ್ತಾರೆ.
ಹಲವರು ಮನೆಯಲ್ಲಿಯೇ ನಿಂಬೇ ಹಣ್ಣಿನ ಜ್ಯೂಸ್ ಅಥವಾ ವಿವಿಧ ಬಗೆಯ ತಂಪು ಪಾನೀಯಗಳನ್ನು ಮಾಡಿ ಕುಡಿಯುತ್ತಾರೆ.
ಬೇಸಿಗೆ ಸಮಯದಲ್ಲಿ ಅತಿಯಾಗಿ ಸೇವಿಸುವ ಕೃತಕ ತಂಪುಪಾನೀಯಗಳಿಂದ ಹಲವಾರು ರೋಗಗಳು ಉಲ್ಬಣಗೊಳ್ಳಬಹುದು.ಕೆಲವರಿಗೆ ಕೆಮ್ಮು, ಗಂಟಲು ನೋವು ಕೂಡ ಕಾಣಿಸಿಕೊಳ್ಳುತ್ತದೆ.

ಅಂಗಡಿಗಳಿಗೆ ಹೋಗಿ ದುಬಾರಿ ಬೆಲೆ ಬಾಳುವ ತಂಪುಪಾನೀಯಗಳನ್ನು ಸೇವಿಸುವುದಕ್ಕಿಂತ ಮನೆಯಲ್ಲಿಯೇ ಆರೋಗ್ಯಕರವಾದ ಆಹಾರವನ್ನು ಸೇವಿಸುವುದು ಉತ್ತಮ.
ದಿನಕ್ಕೊಂದು ಎಳನೀರು ಕುಡಿಯಬಹುದು, ಸೌತೆಕಾಯಿ ಜ್ಯೂಸ್ ಕೂಡ ಸೇರಿಸಬಹುದು. ಕಾಮ್ ಕಸ್ತೂರಿ ಬೀಜಗಳನ್ನು ಹಾಕಿ ಮಾಡುವ ಜ್ಯೂಸ್ ಬಾಯಾರಿಕೆಗೆ ಹೇಳಿ ಮಾಡಿಸಿದ ಪಾನೀಯ.

ದೇಶದ ಉಷ್ಣಾಂಶ ಹೆಚ್ಚಿರುವವರು ಇದನ್ನು ಸೇವಿಸುವುದು ಒಳಿತು. ಹಲವರು ಬಾಯಾರಿಕೆ ಅದು ತಕ್ಷಣ ಕಲ್ಲಂಗಡಿ ಹಣ್ಣು, ಐಸ್ ಕ್ರೀಂ, ಗಳನ್ನೇ ಹೆಚ್ಚಾಗಿ ಸೇವಿಸುತ್ತಾರೆ. ಆದರೆ, ಆ ಸಮಯದಲ್ಲಿ ತಕ್ಷಣಕ್ಕೆ ತಂಪು ನೀಡಿದರೂ ಅವು ಉಷ್ಣಾಂಶವನ್ನು ಹೆಚ್ಚಿಸುವ ಪದಾರ್ಥಗಳಾಗಿವೆ.
ಒಂದಷ್ಟು ದೂರ ನಡೆದ ತಕ್ಷಣ ಎಲ್ಲಾದರೂ ನೆರಳು ಸಿಗಬಹುದೇನೋ ಎಂದು ನಾವು ಯೋಚಿಸುತ್ತೇವೆ. ಆದರೆ, ನಮಗೆ ನೆರಳು ನೀಡುವ ಮರಗಿಡಗಳ ಬಗ್ಗೆ , ಪ್ರಾಣಿ-ಪಕ್ಷಿಗಳ ಬಗ್ಗೆ ಕಿಂಚಿತ್ತೂ ಯೋಚಿಸುವುದೇ ಇಲ್ಲ.

ಈಗಾಗಲೇ ಬೇಸಿಗೆಗಾಲ ಶುರುವಾಗಿದೆ. ಪ್ರಾಣಿ ಪಕ್ಷಿಗಳು ಬಾಯಾರಿಕೆಯಿಂದ ಬಳಲುತ್ತಿವೆ. ನಮ್ಮಿಂದ ಹೆಚ್ಚಿನ ಮಾಡಲು ಸಾಧ್ಯವಾಗದೇ ಇದ್ದರೂ, ಮನೆಯ ಮೇಲೆ ಅಥವಾ ಅಂಗಳದಲ್ಲಿ ಒಂದು ಸಣ್ಣ ಬಟ್ಟಲಿನಲ್ಲಿ ನೀರು ಹಾಗೂ ಆಹಾರವನ್ನು ಪಕ್ಷಿಗಳಿಗಾಗಿ ಇರಬಹುದು.

ಮನೆಯ ಸುತ್ತಲು ಗಿಡಮರಗಳು, ತೋಟವಿದ್ದರೆ , ಉಪಯೋಗಿಸಿ ಬಿಟ್ಟ ಬಾಟಲಿಗಳು, ಅಥವಾ ಹಳೆಯ ಪಾತ್ರೆಗಳಲ್ಲಿ ಆಹಾರವನ್ನು ಇಟ್ಟು ಮರದ ಮೇಲೆ ನೇತು ಹಾಕಬಹುದು.
ಈ ಮೂಲಕ ನಮ್ಮ ಸುತ್ತಮುತ್ತಲಿನ ಪರಿಸರ, ಪ್ರಾಣಿ ಪಕ್ಷಿಗಳನ್ನು ಸಂರಕ್ಷಿಸುವ ಕೆಲಸ ನಮ್ಮಿಂದಲೇ ಆರಂಭಗೊಳ್ಳಲಿ.

Book Your Advertisement Now

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮಹಿಳೆ ಶಕ್ತಿಯ ಪ್ರತೀಕ ಅವರಿಂದಲೇ ದೇಶದ ಪ್ರಗತಿ- ಬೊಮ್ಮಾಯಿ

0

ಸ್ವಾವಲಂಬಿಗಳಾಗುವ ಮೂಲಕ ರಾಜ್ಯದಲ್ಲಿ ಆರ್ಥಿಕ ಕ್ರಾಂತಿಗೆ ಮಹಿಳೆಯರು ಮುನ್ನುಡಿ ಬರೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು.
ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ವಿಶೇಷವಾದ ಸ್ಥಾನಮಾನವಿದೆ. ಮಹಿಳೆ ಶಕ್ತಿಯ ಪ್ರತೀಕ. ಆಕೆಯಿಂದಲೇ ಈ ಜಗತ್ತು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ದೇಶ ಪ್ರಗತಿಯಾಗುತ್ತದೆ. ಭಾರತ ದೇಶ ಉಳಿತಾಯಮುಖಿ ಆರ್ಥಿಕತೆ ಹೊಂದಿದೆ. ಖರ್ಚುಗಳನ್ನು ಕಡಿಮೆ ಮಾಡಿ ಆಪತ್ಕಾಲಕ್ಕೆ ಹಣವನ್ನು ಉಳಿತಾಯ ಮಾಡುವ ಸಂಸ್ಕೃತಿ ನಮ್ಮ ಮಹಿಳೆಯರಲ್ಲಿದೆ. ಅವರಿಂದ ಮುಂದೆ ದೇಶದಲ್ಲಿ ದೊಡ್ಡ ಆರ್ಥಿಕ ಬದಲಾವಣೆ ಆಗಲಿದೆ ಎಂದ ವಿಶ್ವಾಶ ವ್ಯಕ್ತಪಡಿಸಿದರು.

ಮುಂದುವರಿದ ದೇಶಗಳ ಬ್ಯಾಂಕುಗಳಿಗೆ ಹೋಲಿಸಿದರೆ, ಭಾರತ ದೇಶದಲ್ಲಿ ಉಳಿತಾಯ ಸಂಸ್ಕೃತಿ ಆರಂಭವಾಗುವುದು ಅಡುಗೆ ಮನೆಯಲ್ಲಿ. ಮಹಿಳೆಯರು ಚಿಲ್ಲರೆ ಹಣವನ್ನು ಸಾಸಿವೆ, ಜೀರಿಗೆ ಡಬ್ಬಿಯಲ್ಲಿ ಇಡುವ ಸಂಸ್ಕೃತಿಯನ್ನು ಅನುಸರಿಸಿಸುವ ಮೂಲಕ ಉಳಿತಾಯ ಸಂಸ್ಕೃತಿಯನ್ನು ಬೆಳೆಸಿದವರು. ಇದು ದೊಡ್ಡ ದೊಡ್ಡ ಬ್ಯಾಂಕುಗಳಿಗಿಂತ ಸದೃಢವಾದದ್ದು ಎಂದರು.

ಕಾರ್ಯಕ್ರಮದಲ್ಲಿ ಕಲೆ, ಕ್ರೀಡೆ, ಶಿಕ್ಷಣ, ಸಾಹಿತ್ಯ, ವೀರಮಹಿಳೆ ಸೇರಿ ಮಹಿಳಾ ಅಭಿವೃದ್ಧಿಗಾಗಿ ಶ್ರಮಿಸಿದ ವಿವಿಧ ಕ್ಷೇತ್ರಗಳ 20 ಸಾಧಕ ಮಹಿಳೆಯರು ಹಾಗೂ 6 ಸಂಸ್ಥೆಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಜತೆಗೆ ರಾಜ್ಯಮಟ್ಟದ ಅತ್ಯುತ್ತಮ ಸ್ತ್ರೀ ಶಕ್ತಿ ಗುಂಪುಗಳಿಗೆ, ಮಕ್ಕಳ ಕ್ಷೇತ್ರದ ಪ್ರಶಸ್ತಿಗಳನ್ನು ಹಾಗೂ ಅಸಾಧಾರಣ ಸಾಧನೆಗಾಗಿ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ – 22 ನೀಡಿ ಗೌರವಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್, ಶಾಸಕರಾದ ತಮ್ಮಣಗೌಡ ಪಾಟೀಲ, ಅರುಣ್ ಷಹಾಪೂರ, ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ಆರ್. ನಾಯ್ಡು ಮೊದಲಾದವರು ಉಪಸ್ಥಿತರಿದ್ದರು.

ಮಹಿಳೆಗೆ ಸಮಾನ ಅವಕಾಶ: ಮಹಿಳೆ ಹಾಗೂ ಮಕ್ಕಳ ಕಲ್ಯಾಣ ಕಾರ್ಯಕ್ರಮಗಳಿಗಾಗಿಯೇ ಸರ್ಕಾರ 43,118 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಗುಡಿಕೈಗಾರಿಕೆಯಿಂದ ಸ್ಟಾರ್ಟ್ ಅಪ್​ವರೆಗೂ ಸಮಾನ ಅವಕಾಶ ನೀಡಲಾಗುವುದು. ಸ್ವಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳಿಗೆ ಬ್ರಾಂಡಿಂಗ್ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಅಮೆಜಾನ್ ಸಂಸ್ಥೆಯೊಂದಿಗೆ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದೆ. ಜತೆಗೆ ಮಹಿಳೆ ಮತ್ತು ಮಕ್ಕಳ ಆರೋಗ್ಯಕ್ಕೆ ವಿಶೇಷ ಗಮನ ಹರಿಸಲಾಗಿದೆ ಎಂದು ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶೂಟಿಂಗ್ ವಿಶ್ವಕಪ್ ಸ್ಪರ್ಧೆ ಭಾರತಕ್ಕೆ ಚಿನ್ನದ ಪದಕ ಅಗ್ರಸ್ಥಾನ

0

ಈಜಿಪ್ಟ್ ನ ಕೈರೊದಲ್ಲಿ ನಡೆದ ಐಎಸ್ಎಸ್ಎಫ್ ವಿಶ್ವಕಪ್ ನ ಕೊನೆಯ ದಿನವಾದ ಸೋಮವಾರ ಭಾರತ ಮತ್ತು ಮತ್ತೆರಡು ಬಂಗಾರದ ಪದಕ ಗಳಿಗೆ ಗುರಿ ನೀಡುವುದರೊಂದಿಗೆ ಅಗ್ರಸ್ಥಾನಿಯಾಗಿ ಸ್ಪರ್ಧೆ ಮುಗಿಸಿದೆ. ಭಾರತ ಒಟ್ಟು ಏಳು ಪದಕ ಗೆದ್ದರೆ, ನಾರ್ವೆ 6 ಪದಕ ಗೆದ್ದು ಪದಕ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಸ್ಪರ್ಧೆ ಗೆದ್ದ 20 ಪದಕಗಳ ಪೈಕಿ ಮೂರು ಚಿನ್ನದ ಪದಕ ಗೆದ್ದ ಫ್ರಾನ್ಸ್ ಗೆ ಮೂರನೇ ಸ್ಥಾನ ದೊರಕಿದೆ.

ಸೋಮವಾರ ತಡ ರಾತ್ರಿ ನಡೆದ 25 ಮೀಟರ್ ರಾಪಿಡ್ ಫೈರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತದ ರೀದಮ್ ಸಂಗ್ವಾನ್ ಹಾಗೂ ಅನಿಶ್ ಭಾನ್ವಾಲಾ ಥೈಲ್ಯಾಂಡ್ ಸ್ಪರ್ಧಿಗಳನ್ನು 17-7 ರ ಅಂತರದಿಂದ ಸೋಲಿಸಿ ಚಿನ್ನದ ಪದಕ ಗಳಿಸಿಕೊಂಡಿದ್ದರು.

ದಿನದ ಆರಂಭದಲ್ಲಿ ನಡೆದ ಸ್ಪರ್ಧೆಯಲ್ಲಿ ಗುರುಪ್ರೀತ್ ಸಿಂಗ್, ಅನೀಶ್ ಭಾನ್ವಾಲಾ ಮತ್ತು ಭಾವೇಶ್ ಶೆಖಾವತ್ ಅವರಿದ್ದ ಭಾರತ ತಂಡ ಪುರುಷರ 25 ಮೀಟರ್ ರಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಜರ್ಮನಿ ತಂಡದ ಎದುರು 7-17ರಿಂದ ಸೋತಿದ್ದರಿಂದ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟು ಕೊಳ್ಳುವಂತಾಗಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸುಮಿಯಿಂದ 694 ಭಾರತೀಯರು ಸುರಕ್ಷಿತ ವಾಪಸಾತಿ

0

ಉಕ್ರೇನ್‌ನ ಸುಮಿ ನಗರದಲ್ಲಿ ಸಿಲುಕಿ ಪರದಾಡುತ್ತಿದ್ದ 694 ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಈ ಕಾರ್ಯಾಚರಣೆ ಬಹು ಸವಾಲಾಗಿತ್ತು.

ಮಾರ್ಚ್ 7 ರಂದು ಸುಮಿ ಮೇಲಿನ ದಾಳಿಯಿಂದ ಕಾರ್ಯಾಚರಣೆ ಸ್ಥಗಿತವಾಗಿತ್ತು. ನಂತರ ಪುಟಿನ್ ಮತ್ತು ಝೆಲೆನ್‌ಸ್ಕೀ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆ ನಡೆಸಿದರು.

ಭಾರತಕ್ಕೆ ರಷ್ಯಾ ಮತ್ತು ಉಕ್ರೇನ್ ಬೆಂಬಲ ನೀಡಿದ್ದವು. ಅದರಂತೆ 12 ಬಸ್ಸುಗಳನ್ನು ಸಜ್ಜುಗೊಳಿಸಿ ಭಾರತೀಯರನ್ನು ಸುಮಿಯಿಂದ 175 ಕಿ.ಮೀ ದೂರದ ಪೊಲ್ಟಾವಾ ನಗರಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿಂದ ಭಾರತಕ್ಕೆ ಸುರಕ್ಷಿತವಾಗಿ ತಲುಪಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಯುದ್ಧದಿಂದ ಬಸವಳಿದ ಉಕ್ರೇನಿಗೆ ಐಎಂಎಫ್ ನಿಂದ ತುರ್ತು ನೆರವು

0

ರಷ್ಯಾ ಆಕ್ರಮಣದಿಂದ ತತ್ತರಿಸಿರುವ ಉಕ್ರೇನ್‍ಗೆ 140 ಕೋಟಿ ಡಾಲರ್ ತುರ್ತು ನೆರವು ನೀಡಲು ಐಎಂಎಫ್ ಮಂಡಳಿ ನಿರ್ಧರಿಸಿದೆ. ಉಕ್ರೇನ್‍ಗೆ 140 ಕೋಟಿ ಡಾಲರ್ ತುರ್ತು ನೆರವನ್ನು ನೀಡಲು ಅಂತಾರಾಷ್ಟ್ರೀಯ ಹಣಕಾಸು ಕಾರ್ಯ ನಿರ್ವಾಹಕ ಮಂಡಳಿ ಸಿದ್ದವಾಗಿದೆ ಎಂದು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವ ಅವರು ತಿಳಿಸಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ಉಕ್ರೇನ್‍ಗೆ 70 ಕೋಟಿ ಡಾಲರ್ ಗಳಿಗಿಂತಲೂ ಹೆಚ್ಚು ಹಣವನ್ನು ಐಎಂಎಫ್ ನೀಡಿದೆ. ಆಗಸ್ಟ್ ನಲ್ಲಿ ಐಎಂಎಫ್ ಹಂಚಿಕೆ ಭಾಗವಾಗಿ 270 ಕೋಟಿ ಡಾಲರ್ ತುರ್ತು ಮೀಸಲು ಹಣ ಪಡೆದಿದೆ ಎಂದು ಕ್ರಿಸ್ಟಲಿನಾ ಜಾರ್ಜೀವ ಅವರು ತಿಳಿಸಿದ್ದಾರೆ.

ರಷ್ಯಾ ಆಕ್ರಮಣದಿಂದ ಉಕ್ರೇನ್ ತತ್ತರಿಸಿದೆ. ಈ ಸಂದರ್ಭದಲ್ಲಿ ಉಕ್ರೇನ್ ಗೆ ನೆರವು ನೀಡಲು ಯೂರೋಪ್ ದೇಶಗಳು ಮುಂದಾಗಿದೆ.