Friday, April 25, 2025
Friday, April 25, 2025

ಮಂಕಿಪಾಕ್ಸ್ ಬಗ್ಗೆ ಜಾಗರೂಕರಾಗಿರಿ

Date:

ಕಳೆದೆರಡು ವರ್ಷಗಳಿಂದ ಕೋವಿಡ್‌-19 ಜನಜೀವನವನ್ನು ಹೈರಾಣಾಗಿಸಿದೆ. ಪ್ರಕರಣಗಳು ಕಡಿಮೆಯಾಗ್ತಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ಮತ್ತೆ ಹೆಚ್ಚಾಗ್ತಿದೆ. ಈ ಮಧ್ಯೆ ಈ ವರ್ಷದ ಮೇ ತಿಂಗಳಲ್ಲಿ ಏಕಾಏಕಿ ಮಂಕಿಪಾಕ್ಸ್ ಜಗತ್ತನ್ನು ಆವರಿಸಿದೆ. ಪ್ರಪಂಚದಾದ್ಯಂತ, ಸಂಖ್ಯೆಗಳು ಹೆಚ್ಚಾದಂತೆ, ಸಾರ್ವಜನಿಕ ಆತಂಕವೂ ಹೆಚ್ಚಾಗುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರು ಆಗಸ್ಟ್ 17 ರಂದು ನೀಡಿದ ವರದಿಯ ಪ್ರಕಾರ, 92 ರಾಷ್ಟ್ರಗಳು ಮತ್ತು ಪ್ರಾಂತ್ಯಗಳಲ್ಲಿ 12 ಸಾವುಗಳು ಮತ್ತು 35,000ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಪ್ರಕರಣದ ಸಾವಿನ ಪ್ರಮಾಣವು ಇತ್ತೀಚೆಗೆ 3-6% ವ್ಯಾಪ್ತಿಯಲ್ಲಿದೆ.

ಅದರಲ್ಲೂ ಆತಂಕ ಪಡುವ ವಿಚಾರವೆಣದರೆ, ಇತ್ತೀಚೆಗೆ, ಮಂಕಿಪಾಕ್ಸ್ ರೋಗನಿರ್ಣಯ ಮಾಡಿದ ವ್ಯಕ್ತಿಗಳಲ್ಲಿ ತೀವ್ರ ಹೃದಯ ಸಮಸ್ಯೆಗಳು ಕಂಡು ಬರುತ್ತಿವೆ.

ಈ ಪ್ರಕರಣ ಮಂಗನ ಕಾಯಿಲೆಯ ತೀವ್ರತೆಯ ಬಗ್ಗೆ ಗಮನ ಸೆಳೆದಿದ್ದು, ಆತಂಕ ಮೂಡಿಸಿದೆ. ಮಂಕಿಪಾಕ್ಸ್‌ನ ಆರಂಭಿಕ ಚಿಹ್ನೆಗಳು ಮತ್ತು ರೋಗಲಕ್ಷಣಗಳು ಜ್ವರ, ದೈಹಿಕ ನೋವು, ದಣಿವು ಮತ್ತು ಸಾಂದರ್ಭಿಕವಾಗಿ ಊದಿಕೊಂಡ ದುಗ್ಧರಸ ಗ್ರಂಥಿಗಳನ್ನು ಒಳಗೊಂಡಿರುತ್ತದೆ. ಈ ಸ್ಥಿತಿಯು ಚರ್ಮದ ಮೇಲೆ ಕೆಂಪು ಮೊಡವೆಗಳನ್ನು ಕೈಗಳು, ಪಾದಗಳು, ಮುಖ, ತುಟಿಗಳು ಅಥವಾ ಜನನಾಂಗಗಳ ಮೇಲೆ ರೂಪಿಸಲು ಕಾರಣವಾಗಬಹುದು. ಸೋಂಕಿತ ಪ್ರಾಣಿ, ವ್ಯಕ್ತಿ ಅಥವಾ ಕಲುಷಿತ ವಸ್ತುವಿನ ನೇರ ಸಂಪರ್ಕದ ಮೂಲಕ ಮಂಕಿಪಾಕ್ಸ್ ಸೋಂಕಿಗೆ ಒಳಗಾಗಬಹುದು, ಇದು ಜನರಿಗೆ ಮಂಕಿಪಾಕ್ಸ್ ಹರಡಲು ಕಾರಣವಾಗಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...