Sunday, February 22, 2026
Sunday, February 22, 2026
Home Blog Page 1668

ರಷ್ಯಾದಿಂದ ಭಾರತಕ್ಕೆ ಆಮದಾಗುವ ಶಸ್ತ್ರಾಸ್ತ್ರಗಳಲ್ಲಿ ಇಳಿಕೆ

0

ಭಾರತವು ಆಮದು ಮಾಡಿಕೊಳ್ಳುವ ಶಸ್ತ್ರಾಸ್ತ್ರಗಳಲ್ಲಿ ರಷ್ಯಾದ ಪಾಲು ಇಳಿಕೆಯಾಗಿದೆ. ಕಳೆದ 2012-17ರಲ್ಲಿ ಶೇ.69ರಷ್ಟಿದ್ದ ರಷ್ಯಾದ ಪಾಲು 2017-21ರ ವೇಳೆಗೆ ಶೇ.46ಕ್ಕೆ ಕುಸಿದಿದೆ ಎಂದು ಸ್ಟಾಕ್‌ಹೋಮ್ ಮೂಲದ ರಕ್ಷಣಾ ಚಿಂತಕರ ಚಾವಡಿ ಸಿಪ್ರಿ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವು 20ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ಫೆಬ್ರವರಿ 24ರಂದು ಉಕ್ರೇನ್ ಮೇಲೆ ಆಕ್ರಮಣ ನಡೆಸುತ್ತಿದ್ದಂತೆ ಜಾಗತಿಕ ಮಟ್ಟದಲ್ಲಿ ಹಲವು ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧವನ್ನು ಹೇರಿವೆ.

ಕಳೆದ 2012-2016ಕ್ಕೆ ಹೋಲಿಸಿದರೆ 2017-21ರ ಅವಧಿಯಲ್ಲಿ ಭಾರತದ ಶಸ್ತ್ರಾಸ್ತ್ರ ಆಮದು ಪ್ರಮಾಣವು ಶೇ.21ರಷ್ಟು ಇಳಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ 2017-21ನೇ ಸಾಲಿನಲ್ಲಿ ಪ್ರಮುಖ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ಬಹುದೊಡ್ಡ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ. ಈ ಅವಧಿಯಲ್ಲಿ ಒಟ್ಟು ಜಾಗತಿಕ ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತದ ಪಾಲು ಶೇ.11ರಷ್ಟಿದೆ ಎಂದು ವರದಿಯಿಂದ ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹಿಜಾಬ್ ಕೇಸ್ ದಾಖಲಿಸಿದ ವಿದ್ಯಾರ್ಥಿನಿಯರಿಗೆರಘುಪತಿ ಭಟ್ ಮನವಿ

0

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಕರ್ನಾಟಕದ ಹಿಜಾಬ್ ವಿವಾದ ಸಂಬಂಧ ಹೈಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ.

ರಾಜ್ಯ ಸರ್ಕಾರ ಸಮವಸ್ತ್ರ ಧರಿಸಿ ಕಾಲೇಜಿಗೆ ಬರುವಂತೆ ನೀಡಿರುವ ಆದೇಶ ಕಾನೂನು ಬಧ್ಧವಾಗಿದೆ ಎಂದಿರುವ ತ್ರಿಸದಸ್ಯ ಪೀಠ, ತರಗತಿಗಳಿಗೆ ಹಿಜಾಬ್, ಕೇಸರಿ ಶಾಲು ಹೀಗೆ ಯಾವುದೇ ಧರ್ಮದ ಸಂಕೇತಗಳನ್ನು ಧರಿಸಲು ಅವಕಾಶ ಇಲ್ಲ ಎಂದಿದೆ.

ಅಲ್ಲದೇ ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ ಎಂದೂ ಉಲ್ಲೇಖಿಸಿದೆ. ಹೀಗಿರುವಾಗ ಈ ವಿವಾದ ಆರಂಭವಾಗಿದ್ದ ಜಿಲ್ಲೆ, ಉಡುಪಿಯ ಶಾಸಕ ರಘುಪತಿ ಭಟ್ ಕೋರ್ಟ್‌ ಮೆಟ್ಟಿಲೇರಿದ ವಿದ್ಯಾರ್ಥಿಗಳಿಗೆ ಮಹತ್ವದ ಸಂದೇಶ ನೀಡಿದ್ದಾರೆ.

ಮಾಧ್ಯಮದ ಮೂಲಕ ಶಾಸಕ ರಘುಪತಿ ಭಟ್ ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ಕೋರ್ಟ್‌ ಮೆಟ್ಟಿಲೇರಿದ ಆರು ವಿದ್ಯಾರ್ಥಿಗಳ ಬಳಿ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ.

ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿಯರ ಬಗ್ಗೆ ಕಹಿ ಇಲ್ಲ. ನಾಳೆಯಿಂದ ಎಂದಿನಂತೆ ನೀವೆಲ್ಲ ಕಾಲೇಜಿಗೆ ಬನ್ನಿ. ಮತಾಂಧ ಶಕ್ತಿಗಳ ಮಾತಿಗೆ ನೀವೆಲ್ಲ ಬಲಿಯಾಗಬೇಡಿ. ಹೈಕೋರ್ಟ್ ಆದೇಶವನ್ನು ಪಾಲಿಸಿ, ಕಾಲೇಜಿಗೆ ಬನ್ನಿ ಎಂದಿದ್ದಾರೆ.
ಅಲ್ಲದೇ ಕೋರ್ಟ್ ಗೆ ಹೋಗಿದ್ದರೂ ನಿಮ್ಮ ಬಗ್ಗೆ ಬೇಧಭಾವ ಇಲ್ಲ. ಹಿಜಾಬ್ ಗಲಾಟೆಯಿಂದ ನಿಮ್ಮ ಕ್ಲಾಸ್ ಗಳು ಮಿಸ್ ಆಗಿದೆ. ಮಿಸ್ ಆದ ನೋಟ್ಸ್ ಗಳನ್ನು ನಿಮಗೆ ನೀಡಲಾಗುವುದು. ಹೈಕೋರ್ಟ್ ಗೆ ಹೋಗಿ ರಾಜ್ಯದ ತುಂಬಾ ಇದು ವಿವಾದ ಆಗಿದೆ. ಸುಪ್ರೀಂಕೋರ್ಟ್ ಗೆ ಹೋಗಿ ದೇಶಾದ್ಯಂತ ವಿವಾದ ಮಾಡಬೇಡಿ ಎಂದು ಶಾಸಕರು ವಿದ್ಯಾರ್ಥಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹಿಜಾಬ್ ವಿವಾದ ಹಾಸನದಲ್ಲಿ ವಿದ್ಯಾರ್ಥಿನಿಯರ ಧರಣಿ

0

ಹಿಜಾಬ್​ ವಿವಾದ ಕುರಿತಂತೆ ಹೈಕೋರ್ಟ್​​ ನೀಡಿರುವ ತೀರ್ಪನ್ನು ಖಂಡಿಸಿ ಹಾಸನದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ತರಗತಿಗಳಿಗೆ ತೆರಳದೇ ಧರಣಿ ನಡೆಸಿದರು.

ರಾಜ್ಯದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್​ ವಿವಾದ ಕುರಿತಂತೆ ಹೈಕೋರ್ಟ್​​ ಮಹತ್ವದ ತೀರ್ಪು ನೀಡಿದೆ.
ಆದರೆ, ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಕೋರ್ಟ್ ಆದೇಶವನ್ನು ಖಂಡಿಸಿ​ ತರಗತಿಗಳಿಗೆ ತೆರಳದೇ ಧರಣಿ ನಡೆಸಿದರು.

ಹೈಕೋರ್ಟ್ ತೀರ್ಪಿಗೆ ವಿರೋಧ ವ್ಯಕ್ತಪಡಿಸಿರುವ ವಿದ್ಯಾರ್ಥಿನಿಯರು, ನಮ್ಮ ಅಭಿಪ್ರಾಯವನ್ನು ಕೋರ್ಟ್ ಕೇಳಬೇಕಾಗಿತ್ತು. ನಮಗೆ ಅನ್ಯಾಯವಾಗಿದೆ. ನಮಗೆ ಶಿಕ್ಷಣ ಹಾಗೂ ಹಿಜಾಬ್ ಎರಡೂ ಬೇಕು. ಹಿಜಾಬ್ ಇಲ್ಲದೇ ಯಾವುದೇ ಕಾರಣಕ್ಕೂ ಕಾಲೇಜಿಗೆ ಹೋಗಲ್ಲ ಎಂದು ಹಠ ಹಿಡಿದಿದ್ದಾರೆ.

ಕಳೆದೊಂದು ತಿಂಗಳಿನಿಂದ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಗತಿಗೆ ಹೋಗದೇ ಕಾಲೇಜು ಹೊರಗೆ ಕುಳಿತ್ತಿದ್ದು, ನಮಗೆ ಹಿಜಾಬ್ ಧರಿಸಲು ಅವಕಾಶ ಕೊಡಬೇಕು. ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೆ ಕಾಲೇಜಿಗೆ ಬರಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇದೇ ಸನ್ನಿವೇಶವೂ ಕೂಡ ಶಿವಮೊಗ್ಗದ ಕಮಲಾ ನೆಹರು ಕಾಲೇಜಿನ ಬಳಿ ಕಂಡುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪಡಿತರ ಚೀಟಿ ಬಯೋಮೆಟ್ರಿಕ್ ಸಮಸ್ಯೆಗೆ ಸಚಿವರಿಂದ ಪರಿಹಾರ

0

ರಾಜ್ಯದ ಅನೇಕ ಪಡಿತರ ಚೀಟಿದಾರರಿಗೆ ಬಯೋಮೆಟ್ರಿಕ್ ವರ್ಕ್ ಆಗದ ಕಾರಣ, ಪಡಿತರ ವಿತರಣೆ ಆಗದೇ ಸಮಸ್ಯೆಗೆ ಸಿಲುಕುವಂತೆ ಆಗಿತ್ತು. ಹೀಗಾಗಿ ಇನ್ಮುಂದೆ ಬಯೋಮೆಟ್ರಿಕ್ ವರ್ಕ್ ಆಗದೇ ಇದ್ದರೂ ಪಡಿತರ ವಿತರಣೆ ಮಾಡಲಾಗುತ್ತದೆ ಎಂಬುದಾಗಿ ಸರ್ಕಾರ ತಿಳಿಸಿದೆ.

ವಿಧಾನಪರಿಷತ್ತಿನಲ್ಲಿ ಸದಸ್ಯ ಎಸ್. ರವಿ ಪ್ರಶ್ನೆಗೆ ಉತ್ತರಿಸಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು, ವಯೋವೃದ್ಧರೂ ಸೇರಿದಂತೆ ಕೆಲವು ಕಾರ್ಮಿಕರ ಬೆರಳು ಸವೆದು ಬಯೋಮೆಟ್ರಿಕ್ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗೆ ತೊಂದರೆಯಾಗುವಂತವರಿಗೆ ಬಯೋಮೆಟ್ರಿಕ್ ಹೊರತುಪಡಿಸಿ, ಪಡಿತರ ವಿತರಣೆ ಮಾಡಲಾಗುತ್ತದೆ ಎಂದರು.

ರಾಜ್ಯದಲ್ಲಿ ಬಯೋಮೆಟ್ರಿಕ್ ಹೊರತುಪಡಿಸಿ ಶೇ.2ರಷ್ಟು ಫಲಾನುಭವಿಗಳಿಗೆ ಪಡಿತರ ಹಂಚಿಕೆಗೆ ಅವಕಾಶವಿದೆ. ಅಗತ್ಯಬಿದ್ದರೇ, ಅದನ್ನು ಇನ್ನಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭಾರತೀಯ ರಕ್ಷಣೆಗೆ ನೆರವಾದ ರಷ್ಯಾ ಸೇನೆ

0

ರಷ್ಯಾ ವಶಪಡಿಸಿಕೊಂಡ ದಕ್ಷಿಣ ಉಕ್ರೇನಿಯನ್ ನಗರವಾದ ಖೆರ್ಸನ್‌ನಲ್ಲಿ ಸಿಲುಕಿರುವ ಮೂವರು ಭಾರತೀಯರನ್ನು ರಷ್ಯಾದ ಸೈನ್ಯದ ಸಹಾಯದಿಂದ ಸ್ಥಳಾಂತರಿಸಲಾಗಿದೆ.

ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಮೂವರು ಭಾರತೀಯರನ್ನು ಸ್ಥಳಾಂತರಿಸಿದೆ.
ಒಬ್ಬ ವಿದ್ಯಾರ್ಥಿ ಮತ್ತು ಇಬ್ಬರು ಉದ್ಯಮಿಗಳನ್ನು ಸಿಮ್ಫೆರೋಪೋಲ್(ಕ್ರೈಮಿಯಾ) ಮತ್ತು ಮಾಸ್ಕೋ ಮೂಲಕ ಸ್ಥಳಾಂತರಿಸಲು ಸಹಾಯ ಮಾಡಲಾಗಿದೆ.

ಮಾಸ್ಕೋದಲ್ಲಿರುವ ರಾಯಭಾರ ಕಚೇರಿಯಲ್ಲಿ ರಾಜತಾಂತ್ರಿಕರು ಮಂಗಳವಾರ ಮಾಹಿತಿ ನೀಡಿ, ನಾವು ಸಿಮ್ಫೆರೋಪೋಲ್‌ ಗೆ ಬಸ್‌ ಹತ್ತಲು ಅವರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ನಂತರ ರೈಲಿನಲ್ಲಿ ಮಾಸ್ಕೋಗೆ ಬರಲು ಸಹಾಯ ಮಾಡಿದೆವು. ಅವರು ಮಂಗಳವಾರ ತಮ್ಮ ವಿಮಾನವನ್ನು ಹತ್ತಿದರು. ಒಬ್ಬರು ಚೆನ್ನೈಗೆ ತೆರಳುತ್ತಿರುವ ವಿದ್ಯಾರ್ಥಿ. ಇಬ್ಬರು ಉದ್ಯಮಿಗಳು ಅಹಮದಾಬಾದ್‌ಗೆ ಹೋಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಉಕ್ರೇನ್ ಪ್ರದೇಶದಿಂದ ಭಾರತೀಯರನ್ನು ಸ್ಥಳಾಂತರಿಸಲು ರಷ್ಯಾದ ಮಿಲಿಟರಿ ಸಹಾಯ ಮಾಡಿರುವುದು ಇದೇ ಮೊದಲು.

ಭಾರತೀಯರು ಪೂರ್ವ ಗಡಿ ಮತ್ತು ರಷ್ಯಾದ ಮೂಲಕ ಹೊರಟು ಹೋದ ಮೊದಲ ನಿದರ್ಶನವೂ ಇದಾಗಿದೆ.

ಮಾರ್ಚ್ 3 ರಂದು ಅದೇ ಹೆಸರಿನ ಭೂಪ್ರದೇಶದ ರಾಜಧಾನಿಯನ್ನು ವಶಪಡಿಸಿಕೊಂಡ ನಂತರ, ರಷ್ಯಾದ ರಕ್ಷಣಾ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಅದರ ಪಡೆಗಳು ಖೆರ್ಸನ್‌ನ ಸಂಪೂರ್ಣ ಪ್ರದೇಶದ ಮೇಲೆ ಹಿಡಿತ ಸಾಧಿಸಿವೆ ಎಂದು ಹೇಳಿದ್ದಾರೆ.

ಇದರ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಆಪರೇಷನ್ ಗಂಗಾದಲ್ಲಿ ಭಾಗಿಯಾಗಿರುವ ಪಾಲುದಾರರೊಂದಿಗೆ ಸಂವಾದ ನಡೆಸಿದರು.

ಉಕ್ರೇನ್, ಪೋಲೆಂಡ್, ಸ್ಲೋವಾಕಿಯಾ, ರೊಮೇನಿಯಾ ಮತ್ತು ಹಂಗೇರಿಯಲ್ಲಿನ ಭಾರತೀಯ ಸಮುದಾಯ ಮತ್ತು ಖಾಸಗಿ ವಲಯದ ಪ್ರತಿನಿಧಿಗಳು ಸ್ಥಳಾಂತರಿಸುವ ಕಾರ್ಯಾಚರಣೆಯ ಭಾಗವಾಗಿರುವವರ ಅನುಭವ ಕೇಳಿ ಮೆಚ್ಚುಗೆ ಸೂಚಿಸಿದರು.

ಕಾರ್ಯಾಚರಣೆಯ ಯಶಸ್ಸಿಗೆ ಶ್ರಮಿಸಿದ ಭಾರತೀಯ ಸಮುದಾಯದ ಮುಖಂಡರು, ಸ್ವಯಂಸೇವಕ ಗುಂಪುಗಳು, ಕಂಪನಿಗಳು, ಖಾಸಗಿ ವ್ಯಕ್ತಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಪ್ರಧಾನಿ ಶ್ಲಾಘಿಸಿದರು.

ಸ್ಥಳಾಂತರಿಸುವ ಪ್ರಯತ್ನಗಳ ಕುರಿತು ಮಾತನಾಡುತ್ತಾ, ಉಕ್ರೇನ್ ಮತ್ತು ಅದರ ನೆರೆಯ ರಾಷ್ಟ್ರಗಳ ನಾಯಕರೊಂದಿಗಿನ ತಮ್ಮ ವೈಯಕ್ತಿಕ ಸಂವಾದಗಳನ್ನು ಪ್ರಧಾನಿ ನೆನಪಿಸಿಕೊಂಡರು.

ಎಲ್ಲಾ ವಿದೇಶಿ ಸರ್ಕಾರಗಳಿಂದ ಪಡೆದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸಹ್ಯಾದ್ರಿ ಕಾಲೇಜು ಹಾಸ್ಟೆಲ್ ಗೆ ಕುವೆಂಪು ವಿವಿ ಕುಲಸಚಿವರ ಭೇಟಿ

0

ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿನಿಯರು ಹಾಸ್ಟೆಲ್ ನ ಸಮಸ್ಯೆ ಕುರಿತು ಸೋಮವಾರ ದಿಢೀರ್ ಪ್ರತಿಭಟನೆ ಕೈಗೊಂಡು ವಿಶ್ವವಿದ್ಯಾಲಯ‌‌ ತತ್‍ಕ್ಷಣವೇ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಕುಲಸಚಿವೆ ಜಿ. ಅನುರಾಧ ಅವರು ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ‌ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ ಅವರ ಕುಂದು ಕೊರತೆಗಳನ್ನು ಆಲಿಸಿದರು. ವಿದ್ಯಾರ್ಥಿಗಳ‌ ಬೇಡಿಕೆಗೆ ಸ್ಪಂದಿಸಿದ ಕುಲಸಚಿವರು, ಆಹಾರದ ಗುಣಮಟ್ಟ ಕಾಯ್ದುಕೊಳ್ಳುವುದು, ಹಾಸ್ಟೆಲ್ ನ ಶುಚಿತ್ವ ಕಾಪಾಡುವುದು, ಮತ್ತಿತರ ಸಣ್ಣ ಪುಟ್ಟ ಸಮಸ್ಯೆಗಳಿಗೆ ಸಮಿತಿಯ ಮೂಲಕ ತಕ್ಷಣವೇ ಪರಿಹಾರ ಒದಗಿಸಲಾಗುವುದು‌‌‌ ಎಂದರು.

ಪ್ರತ್ಯೇಕ ಆಹಾರನಿಲಯದ ಕಟ್ಟಡ ನಿರ್ಮಾಣದಂತಹ ಬೇಡಿಕೆಗಳಿದ್ದರೆ ವಿಶ್ವವಿದ್ಯಾಲಯಕ್ಕೆ‌ ವರದಿ ಸಲ್ಲಿಸಲು ಪ್ರಾಂಶುಪಾಲರಿಗೆ ಸೂಚನೆ ನೀಡಿದರು.

ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಡಾ.‌ವಾಗ್ದೇವಿ, ಡಾ. ವೀಣಾ, ಡಾ. ರಮೇಶ್ ಬಾಬು, ಡಾ. ರಾಜೇಶ್ವರಿ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉಕ್ರೇನ್ ನಿಂದ ನಮ್ಮವರ ಜೊತೆ ವಿದೇಶಿಯರಿಗೂ ಸ್ಥಳಾಂತರ ನೆರವು

0

ಆಪರೇಷನ್‌ ಗಂಗಾ ಕಾರ್ಯಾಚರಣೆಯ ಭಾಗವಾಗಿ ಉಕ್ರೇನ್‌ನ ಸಂಘರ್ಷದ ಪರಿಸ್ಥಿತಿಯಲ್ಲಿ ಸಿಲುಕಿದ್ದ 18 ದೇಶಗಳ 147 ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸಿ ಭಾರತಕ್ಕೆ
ಕರೆತರಲಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ತಿಳಿಸಿದ್ದಾರೆ.

ಸಂಸತ್ತಿನ ಉಭಯ ಸದನಗಳಲ್ಲಿ ಉಕ್ರೇನ್‌ನ ಪರಿಸ್ಥಿತಿ ಬಗ್ಗೆ ಮಾತನಾಡಿದ ಜೈಶಂಕರ್, ಭಾರತದ ʻವಸುಧೈವ ಕುಟುಂಬಕಂʼ ತತ್ವಕ್ಕೆ ಅನುಗುಣವಾಗಿ, ವಿದೇಶಿ ಪ್ರಜೆಗಳನ್ನು ಸಹ ಸಂಘರ್ಷ ವಲಯಗಳಿಂದ ಸ್ಥಳಾಂತರಿಸಿ ಭಾರತಕ್ಕೆ ಕರೆತರಲಾಯಿತು. ಅವರಲ್ಲಿ 18 ದೇಶಗಳ 147 ನಾಗರಿಕರು ಸೇರಿದ್ದಾರೆ ಎಂದರು.

ಭಾರತೀಯ ಪ್ರಜೆಗಳ ಕುಟುಂಬದ ಸದಸ್ಯರಾಗಿರುವ ಅನೇಕ ಉಕ್ರೇನಿಯನ್ ಪ್ರಜೆಗಳನ್ನೂ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.

ಉದ್ವಿಗ್ನತೆ ಹೆಚ್ಚಾದಂತೆ, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು 2022 ರ ಜನವರಿಯಲ್ಲಿ ಭಾರತೀಯರಿಗಾಗಿ ನೋಂದಣಿ ಅಭಿಯಾನವನ್ನು ಪ್ರಾರಂಭಿಸಿತು. ಇದರ ಪರಿಣಾಮವಾಗಿ ಸುಮಾರು 20,000 ಭಾರತೀಯರು ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ರಷ್ಯಾದ ಗಡಿಯಲ್ಲಿರುವ ಪೂರ್ವ ಉಕ್ರೇನ್‌ನ ವಿಶ್ವವಿದ್ಯಾಲಯಗಳಲ್ಲಿದ್ದಾರೆ.

ಭಾರತದ 35 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಂದ ಬಂದ ವಿದ್ಯಾರ್ಥಿಗಳು ಕೇರಳ, ಯುಪಿ, ಹರಿಯಾಣ, ತಮಿಳುನಾಡು, ಗುಜರಾತ್, ಮಹಾರಾಷ್ಟ್ರ, ಬಿಹಾರ ಮತ್ತು ರಾಜಸ್ಥಾನದಿಂದ ತಲಾ 1,000 ವಿದ್ಯಾರ್ಥಿಗಳನ್ನು ಹೊಂದಿದ್ದಾರೆ ಎಂದರು.

ಮಾಸ್ಕೋ ಮತ್ತು ಕೈವ್ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ದೃಷ್ಟಿಯಿಂದ ಉಕ್ರೇನ್ ತೊರೆಯುವಂತೆ ಉಕ್ರೇನ್‌ನಲ್ಲಿರುವ ಭಾರತೀಯ ನಾಗರಿಕರಿಗೆ ನೀಡಿದ ಸಲಹೆಗಳ ಬಗ್ಗೆ ಶ್ರೀ ಜೈಶಂಕರ್ ಮಾತನಾಡಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೆಪಿಎಸ್ ಸಿ ತಾಂತ್ರಿಕೇತರ ಪರೀಕ್ಷೆ ಕೃಪಾಂಕ ನೀಡಿಕೆ

0

ಕೆಪಿಎಸ್ ಸಿಯ ಪದವಿ ಪೂರ್ವ ವಿದ್ಯಾರ್ಹತೆಯ ಗ್ರೂಪ್ ಸಿ (ತಾಂತ್ರಿಕೇತರ) ಹುದ್ದೆಗಳಿಗೆ ನಡೆಸಿ ಸ್ಪರ್ಧಾತ್ಮಕ ಪರೀಕ್ಷೆಗೆ 5 ಕೃಪಾಂಕಗಳನ್ನು ನೀಡಿದ್ದರೆ,
ಪದವಿ ಮಟ್ಟದ ತಾಂತ್ರಿಕೇತರ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆಗೆ 8 ಕೃಪಾಂಕಗಳನ್ನು ಘೋಷಿಸಲಾಗಿದೆ.
ಪದವಿ ಮಟ್ಟದ ಪರೀಕ್ಷೆಯ ಸಾಮಾನ್ಯಜ್ಞಾನ ಪತ್ರಿಕೆಯಲ್ಲಿ (ವಿಷಯ ಸಂಕೇತ-471) ಒಟ್ಟು 7 ಕೃಂಪಾಂಕಗಳನ್ನು ನೀಡಲಾಗಿದೆ.

ನಾಲ್ಕು ಪ್ರಶ್ನೆಗಳ ಉತ್ತರ ಬದಲಿಸಲಾಗಿದೆ. ಜೊತಗೆ 1 ಪ್ರಶ್ನೆಗೆ 3 ಉತ್ತರಗಳು ಸರಿ ಎಂದು ಘೋಷಿಸಲಾಗಿದೆ ಎಂದು ತಿಳಿದುಬಂದಿದೆ.

ಸಂವಹನ ಪತ್ರಿಕೆಯಲ್ಲಿ (ವಿಷಯ ಸಂಕೇತ-472) 1 ಕೃಪಾಂಕ ನೀಡಲಾಗಿದೆ. ಐದು ಉತ್ತರಗಳನ್ನು ಬದಲಿಸಲಾಗಿದೆ. 2021 ರ ಡಿಸೆಂಬರ್ 5 ರಂದು ಪರೀಕ್ಷೆ ನಡೆದಿದ್ದು, ಡಿಸೆಂಬರ್ 24 ರಂದು ತಾತ್ಕಾಲಿಕ ಸರಿಯುತ್ತರಗಳನ್ನು ಪ್ರಕಟಿಸಲಾಗಿತ್ತು.
ಪದವಿ ಪೂರ್ವ ವಿದ್ಯಾರ್ಹತೆ ಗ್ರೂಪ್ ಸಿ ಹುದ್ದೆಗಳ ಸಾಮಾನ್ಯ ಜ್ಞಾನ ಪತ್ರಿಕೆ 1 ರಲ್ಲಿ 3 ಗ್ರೇಸ್ ಮಾರ್ಕ್ಸ್ ಘೋಷಿಸಲಾಗಿದೆ.

ಎರಡು ಉತ್ತರ ಬದಲಾಗಿದ್ದು, ಮತ್ತೆರಡರ ಉತ್ತರಕ್ಕೆ ಪರ್ಯಾಯ ನೀಡಲಾಗಿದೆ. ಸಂವಹನ ಪತ್ರಿಕೆಯಲ್ಲಿ (ವಿಷಯ ಸಂಕೇತ-474) ಎರಡು ಕೃಪಾಂಕಗಳನ್ನು ನೀಡಲಾಗಿದೆ. ಈ ಪರೀಕ್ಷೆಯನ್ನು ಡಿಸೆಂಬರ್ 12 ರಂದು ನಡೆಸಲಾಗಿತ್ತು. ಹೆಚ್ಚಿನ ಮಾಹಿತಿಗಾಗಿ kpsc.kar.nic.in ಭೇಟಿ ನೀಡಬಹುದು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ವಿಜಯ ಪತಾಕೆ ಹಾರಿಸಿದ ಭಾರತ

0

ನಿನ್ನೆ ಸಂಜೆ ನಡೆದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ಭಾರತ ತಂಡವು ಶ್ರೀಲಂಕಾ ಎದುರಿನ ಸರಣಿ ಗೆಲುವನ್ನ ಸಂಭ್ರಮ ಆಚರಿಸಿದೆ. ಇದೇ ಪ್ರಥಮ ಬಾರಿ ಟೆಸ್ಟ್ ತಂಡದ ನಾಯಕತ್ವ ವಹಿಸಿದ್ದ ರೋಹಿತ್ ಶರ್ಮಾ, ಟ್ರೋಫಿ ಪಡೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಆಯೋಜನೆ ಗೊಂಡ ಮೊದಲ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಭಾರತ ತಂಡವು ನಿರೀಕ್ಷೆಯಂತೆ ಯೇ ಮೂರನೇ ದಿನದ ಊಟದ ವಿರಾಮಕ್ಕೆ ಮುಂಚೆ ಶ್ರೀಲಂಕಾ ಎದುರು 238 ರನ್ ಗಳಿಂದ ಗಳಿಸಿಕೊಂಡಿದೆ. ಸರಣಿಯನ್ನು 2-0 ಯಿಂದ ಗೆದ್ದುಕೊಂಡಿದೆ. ಸತತ 15ನೇ ಸರಣಿ ಜಯದ ಸಾಧನೆಯನ್ನು ಕೂಡ ಮಾಡಿದೆ.

ಲಂಕಾ ತಂಡದ ನಾಯಕ ದಿಮುತ ಕರುಣ ರತ್ನೆ ಅವರ ದಿಟ್ಟ ಶತಕ ಕ್ರಿಕೆಟ್ ಪ್ರೇಮಿಗಳ ನೆನಪಿನಲ್ಲಿ ಉಳಿಯಿತು. 447 ರನ್ ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಪ್ರವಾಸಿ ಬಳಗವು 59.3 ಓವರ್ ಗಳಲ್ಲಿ 208 ರನ್ ಗಳಿಸಿಕೊಂಡಿತು. ಭಾರತದಲ್ಲಿ ನಡೆದ ಮೂರು ಪಿಂಕ್ ಬಾಲ್ ಟೆಸ್ಟ್ ಗಳಲ್ಲಿ ಗೆದ್ದ ಸಾಧನೆಯನ್ನು ಭಾರತ ಮಾಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಐತಿಹಾಸಿಕ ತೀರ್ಪು- ಸಚಿವ ನಾಗೇಶ್

0

ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ವಾಗತಿಸಿದ್ದಾರೆ. ಇದು ಐತಿಹಾಸಿಕ ತೀರ್ಪಾಗಿದೆ. ನ್ಯಾಯಾಲಯದ ತೀರ್ಪು ಏನೇ ಆಗಿದ್ದರೂ ನಾವು ಗೌರವಿಸುತ್ತೇವೆ ಎಂದು ಹಿಂದೆಯೇ ಹೇಳಿದ್ದೆವು.

ಹೈಕೋರ್ಟ್‌ ತೀರ್ಪಿಗೆ ನಾವು ಬದ್ಧರಾಗಿದ್ದೇವೆ. ವಸ್ತ್ರಸಂಹಿತೆಗೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೂ ನ್ಯಾಯಾಲಯ ತನ್ನ ತೀರ್ಪಿನ ಮೂಲಕ ಉತ್ತರ ನೀಡಿದೆ. ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಇನ್ನು ಮುಂದೆ ಹೈಕೋರ್ಟ್ ತೀರ್ಪನ್ನು ಪಾಲನೆ ಮಾಡಬೇಕು. ವಿವಾದದ ಕಾರಣದಿಂದ ಶಾಲೆ-ಕಾಲೇಜುಗಳಿಂದ ಹೊರಗುಳಿದಿರುವ ವಿದ್ಯಾರ್ಥಿಗಳು ಮತ್ತೆ ಶಿಕ್ಷಣ ಸಂಸ್ಥೆಗಳಿಗೆ ಹಾಜರಾಗಬೇಕು ಎಂದು ಮನವಿ ಮಾಡಿದರು.

ರಾಷ್ಟ್ರೀಯತೆ ಜಾಗೃತಗೊಳಿಸುವಲ್ಲಿ ಸಮವಸ್ತ್ರ ಬಹುಮುಖ್ಯವಾದದು. ನಾವೆಲ್ಲರೂ ಭಾರತೀಯರು. ಕೆಲವೊಂದು ಗೊಂದಲಗಳಿಂದ ವಿವಾದ ಸೃಷ್ಟಿಯಾಗಿದೆ. ಈ ತೀರ್ಪನ್ನು ಆಧರಿಸಿ ಶಿಕ್ಷಣ ಕಾಯ್ದೆಯಲ್ಲಿ ಇರುವ ಕೆಲ ಗೊಂದಲಗಳನ್ನು ಸರಿಪಡಿಸುತ್ತೇವೆ ಎಂದು ಹೇಳಿದರು. ರಾಜ್ಯದಲ್ಲಿ ಸುಮಾರು 86 ಸಾವಿರ ಪಿಯು ವಿದ್ಯಾರ್ಥಿನಿದ್ದಾರೆ. ಈ ಪೈಕಿ 6 ಮಕ್ಕಳು ಮಾತ್ರ ಹಿಜಾಬ್ ಅನುಮತಿಗೆ ಒತ್ತಾಯಿಸಿದ್ದರು. ಶೇ 99.9ರಷ್ಟು ವಿದ್ಯಾರ್ಥಿನಿಯರು ಸಮವಸ್ತ್ರ ನೀತಿಯನ್ನು ಅನುಸರಿಸಿದ್ದಾರೆ. ತೀರ್ಪಿನ ನಂತರ ಗೊಂದಲಗಳು ಬಗೆಹರಿಯಲಿದೆ. ಜನರು ಸಹ ನ್ಯಾಯಾಲಯದ ತೀರ್ಪನ್ನು ಒಪ್ಪಿದ್ದಾರೆ. ಶಿಕ್ಷಣ ಸಂಸ್ಥೆಗಳಿಂದ ಹೊರಗುಳಿದ ವಿದ್ಯಾರ್ಥಿಗಳು ಶಾಲಾಕಾಲೇಜಿಗೆ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.