Sunday, February 22, 2026
Sunday, February 22, 2026
Home Blog Page 1667

ಪೇಟಿಎಂ ನಲ್ಲಿ ಡೇಟಾ ಸುರಕ್ಷಿತ

0

ಆರ್‌ಬಿಐ ತನ್ನ ಅಸೋಸಿಯೇಟ್ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ಹೊಸ ಗ್ರಾಹಕರನ್ನು ಆನ್‌ಬೋರ್ಡಿಂಗ್ ಮಾಡುವುದನ್ನು ನಿರ್ಬಂಧಿಸಿದ ನಂತರ ಪೇಟಿಎಂ one97 ಸಂವಹನಗಳ ಷೇರುಗಳು ದಿನಕ್ಕೆ ಸುಮಾರು 13% ಕುಸಿದವು.

ಸಂದರ್ಶನವೊಂದರಲ್ಲಿ, ಕಂಪನಿಯ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರು ನಿರ್ಬಂಧವು ಹೊಸ ವಾಲೆಟ್ ಅಥವಾ ಉಳಿತಾಯ ಬ್ಯಾಂಕ್ ಖಾತೆಯನ್ನು ತೆರೆಯಲು ಮಾತ್ರ. ಆದರೆ ಅಸ್ತಿತ್ವದಲ್ಲಿರುವ 6.9 ಕೋಟಿ ಮಾಸಿಕ ವಹಿವಾಟು ಬಳಕೆದಾರರಿಗೆ ಎಲ್ಲಾ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು.
ಪೇಟಿಎಂ ಚೀನಾಗೆ ಗ್ರಾಹಕರ ಡೇಟಾವನ್ನು ಹಂಚಿಕೊಳ್ಳುತ್ತಿದೆ ಎಂಬ ಆರೋಪವನ್ನೂ ಅಲ್ಲಗೆಳೆದಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕಚ್ಚಾತೈಲ ಅನಿಲಕ್ಕಾಗಿ ರಷ್ಯದ ಅವಲಂಬನೆ ತಪ್ಪಿಸಿ- ಜಾನ್ಸನ್

0

ರಷ್ಯಾ ವಿರುದ್ಧ ಅಂತರರಾಷ್ಟ್ರೀಯ ಮಟ್ಟದ ಕೂಟವನ್ನು ರಚಿಸಲು ಮುಂದಾಗಿರುವ ಇಂಗ್ಲೆಂಡ್‌ ಪ್ರಧಾನಿ ಬೋರಿಸ್‌ ಜಾನ್ಸನ್‌, ಕಚ್ಚಾ ತೈಲ, ಅನಿಲಕ್ಕಾಗಿ ರಷ್ಯಾದ ಅವಲಂಬನೆಯಿಂದ ಹೊರಬರುವಂತೆ ವಿಶ್ವಕ್ಕೆ ಕರೆ ನೀಡಿದ್ದಾರೆ.

ಗಲ್ಫ್‌ ರಾಷ್ಟ್ರಗಳ ಪ್ರವಾಸದಲ್ಲಿರುವ ಬೋರಿಸ್‌ ಜಾನ್ಸನ್‌ ಬುಧವಾರ, ಉಕ್ರೇನ್‌ ಮೇಲಿನ ರಷ್ಯಾದ ಅತಿಕ್ರಮಣವನ್ನು ಪ್ರತಿಭಟಿಸಲು ಅಲ್ಲಿನ ಕಚ್ಚಾ ತೈಲ, ಅನಿಲ ಖರೀದಿಯನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಅಬುಧಾಬಿ ಮತ್ತು ರಿಯಾದ್‌ ಮುಖಂಡರನ್ನು ಭೇಟಿ ಮಾಡಲಿರುವ ಜಾನ್ಸನ್‌ ಅವರು ಉಕ್ರೇನ್‌ ಸಂಘರ್ಷ ಸೇರಿದಂತೆ ಪ್ರಾದೇಶಿಕ ಭದ್ರತೆ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ.

ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಜಾಗತಿಕ ಇಂಧನ ಮತ್ತು ಆಹಾರ ಉತ್ಪನ್ನಗಳ ಬೆಲೆ ಏರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ರಷ್ಯಾವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಟ್ಟಿಹಾಕುವ ಪ್ರಯತ್ನಕ್ಕೆ ಸೌದಿ ಅರೇಬಿಯಾ ಮತ್ತು ಯುಎಇ ರಾಷ್ಟ್ರಗಳು ಪ್ರಮುಖ ಭಾಗಿದಾರರು. ಈ ರಾಷ್ಟ್ರಗಳೊಂದಿಗೆ ಪ್ರಾದೇಶಿಕ ಭದ್ರತೆ, ಮಾನವೀಯ ಪರಿಹಾರ ಮತ್ತು ಜಾಗತಿಕ ಇಂಧನ ಮಾರುಕಟ್ಟೆ ನಿಯಂತ್ರಣದ ವಿಚಾರವಾಗಿ ಜೊತೆಯಾಗಿ ಕೆಲಸ ಮಾಡುತ್ತೇವೆ ಎಂದು ಜಾನ್ಸನ್‌ ಅವರು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯದಲ್ಲಿ ಹಲವೆಡೆ ವಿದ್ಯಾರ್ಥಿನಿಯರಿಂದ ತರಗತಿ ಬಹಿಷ್ಕಾರ

0

ಹಿಜಾಬ್ ಧಾರಣೆ ಕುರಿತು ಹೈ ಕೋರ್ಟ್ ಹಿಜಾಬ್ ಇಸ್ಲಾಂ ಧರ್ಮದ ಅಗತ್ಯವಾದ ಭಾಗವಲ್ಲ ಎಂದು ಅಭಿಪ್ರಾಯ ಕೊಟ್ಟಿದೆ. ಹೀಗಾಗಿ, ತರಗತಿ ಪ್ರವೇಶಿಸುವಾಗ ಯಾವುದೇ ಧರ್ಮ ಸೂಚಕ ವಸ್ತುಗಳನ್ನು ಧರಿಸುವಂತಿಲ್ಲ. ಹೀಗಿದ್ದರೂ, ಈ ನಡುವೆ ರಾಜ್ಯದ ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬಂದಿರುವ ಘಟನೆ ನಡೆದಿದೆ.

ಶಿವಮೊಗ್ಗ ನಗರದ ಕಮಲಾನೆಹರು ಕಾಲೇಜಿನಲ್ಲಿ ತರಗತಿಯಲ್ಲಿ ಹಿಜಾಬ್ ಅವಕಾಶ ನೀಡಿಲ್ಲ ಎಂದು 15 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಮನೆಗೆ ವಾಪಸ್ ಹೋಗಿದ್ದಾರೆ.

ವಿಜಯಪುರದಲ್ಲಿ ಕೆಲ ವಿದ್ಯಾರ್ಥಿನಿಯರು ಪ್ರಾಯೋಗಿಕ ಮತ್ತು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಬಹಿಷ್ಕರಿಸಿದ್ದಾರೆ. ವಿಜಯಪುರ ನಗರದ ಸರ್ಕಾರಿ ಬಾಲಕಿಯರ ಪಿಯು ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿನಿಯರು ತರಗತಿಗಳಿಂದ ವಾಪಸ್ ಮನೆಗೆ ಹೋಗಿದ್ದಾರೆ.

ಯಾದಿಗರಿ ಉರ್ದು ಪ್ರೌಢಶಾಲೆಯಲ್ಲಿ ಹಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದಿದ್ದಾರೆ. ಈ ವೇಳೆ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆಯುವಂತೆ ಮನವಿ ಮಾಡಿದ್ದಾರೆ. ಆದರೆ ವಿದ್ಯಾರ್ಥಿ ನಿಯರು ಹಿಜಾಬ್ ಧರಿಸಿ ತರಗತಿ ಒಳಗಡೆಯೇ ಕುಳಿತುಕೊಂಡಿದ್ದಾರೆ.

ಇನ್ನೂ ಮಡಿಕೇರಿಯ ಎಫ್​ಎಂಸಿ ಕಾಲೇಜು, ಸರ್ಕಾರಿ ಜ್ಯೂನಿಯರ್ ಕಾಲೇಜು ಸೇರಿದಂತೆ ಹಲವೆಡೆ ಸಹಜ ಸ್ಥಿತಿ ನೆಲೆಸಿದೆ. ಕಾಲೇಜಿಗೆ ಬರುವಾಗ ಹಿಜಾಬ್ ಮತ್ತು ಬುರ್ಖಾ ಧರಿಸಿದ್ದರೂ ಲೇಡೀಸ್ ರೂಮ್​ನಲ್ಲಿ ಅವನ್ನು ತೆಗೆದಿರಿಸಿ, ಸಮವಸ್ತ್ರದಲ್ಲಿ ತರಗತಿಗಳಿಗೆ ಹಾಜರಾಗಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮಾರ್ಚ್ 22 ರಿಂದ ಶಿವಮೊಗ್ಗ ಪ್ರಸಿದ್ಧ ಮಾರಿಕಾಂಬ ಜಾತ್ರೆ ಆರಂಭ

0

ಶಿವಮೊಗ್ಗ ಸಾಂಸ್ಕೃತಿಕ ರಾಜಧಾನಿ. ಇದು ಸಾಹಿತ್ಯ ಕಲೆಯ ಬೀಡಾಗಿದೆ. ಇಲ್ಲಿರುವ ಕೋಟೆ ಸೀತಾರಾಮಾಂಜನೇಯ ಮತ್ತು ಮಾರಿಕಾಂಬ ಗದ್ದಿಗೆ ದೇವಾಲಯಗಳ ಜಾತ್ರೆ ರಾಜ್ಯಾದ್ಯಂತ ಹೆಸರುವಾಸಿಯಾಗಿದೆ.

ಶಿವಮೊಗ್ಗದ ಮಾರಿಕಾಂಬ ಇಡೀ ಪ್ರದೇಶದ ಸರ್ವ ಜನಾಂಗವನ್ನ ಕಾಪಾಡುವ ಶಕ್ತಿ.
ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ
ಊರಿನ ಹಬ್ಬವೇ ಆಗಿ ಆಚರಿಸಲ್ಪಡುತ್ತದೆ.
ವಿಶೇಷವೆಂದರೆ
ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಮೊದಲ ಹೆಸರು ಶಿರಸಿ ಮಾರಿಕಾಂಬೆ ಜಾತ್ರೆ.
ನಿಜ.ಆದರೆ ವೈಶಿಷ್ಟ್ಯಗಳ ದೃಷ್ಟಿಯಲ್ಲಿ ಶಿವಮೊಗ್ಗ ಮಾರಿಕಾಂಬ ಜಾತ್ರೆ ಬಹಳವೇ ಅಪರೂಪದ ಮಾಹಿತಿಗಳನ್ನ ಹೊಂದಿದೆ.

ಶಿವಮೊಗ್ಗದ ಮಾರಿಕಾಂಬೆ ಜಾತ್ರೆಯು ಮಾರ್ಚ್ 22 ರಿಂದ 26 ರವರೆಗೆ ಅದ್ಧೂರಿಯಿಂದ ನಡೆಯಲಿದೆ.
ಶಿರಸಿ,ಸಾಗರ ನಂತರ
ಈ ಪ್ರದೇಶದಲ್ಲಿ ಸಡಗರ ತುಂಬುವ ಅತ್ಯಂತ ಪ್ರಾಚೀನ ಆಚರಣೆಯೂ ಇದಾಗಿದೆ.
ಕೋವಿಡ್ ಕಾರಣ ಈ ಬಾರಿ ಜಾತ್ರೆ ನಡೆಯುತ್ತೋ ಇಲ್ಲವೋ ಎಂಬ ಸಂದೇಹ ಭಕ್ತರಲ್ಲಿ ಉಂಟಾಗಿತ್ತು.
ಅಡೆತಡೆಗಳೆಲ್ಲವೂ ಪರಿಹಾರವಾಗಿ ಈಗ ಶಿವಮೊಗ್ಗ ಮಾರಿಕಾಂಬ ಜಾತ್ರೆಗೆ ಸಜ್ಜಾಗಿದೆ.

ಕೋವಿಡ್ ಸಂಬಂಧಿಸಿದಂತೆ ಜಿಲ್ಲಾಡಳಿತದೊಂದಿಗೆ ಸಂಪರ್ಕಿಸಿ ಜಾತ್ರೆಗೆ ಪೂರ್ವಾನ್ವಯ
ಅನುಮತಿ ಬೇಡಿದೆವು.
ಜಿಲ್ಲಾಧಿಕಾರಿಗಳು‌ ಅತ್ಯಂತ ಸಂತೋಷದಿಂದ ಒಪ್ಪಿಗೆ ನೀಡಿದರು” ಎಂದು ಜಾತ್ರಾ ಸಮಿತಿಯ ಅಧ್ಯಕ್ಷ ಶ್ರೀ ಮರಿಯಪ್ಪನವರು ಪತ್ರಿಕಾಗೋಷ್ಠಿಯಲ್ಲಿ
ತಿಳಿಸಿದರು.

ಜಾತ್ರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಮಂಜುನಾಥ್ ಅವರು ಮಾತನಾಡಿ, ಈ ಬಾರಿ ಪ್ರಸಾದದ ಕೌಂಟರುಗಳನ್ನ ಸ್ವಲ್ಪ ದೂರದಲ್ಲೇ ಸ್ಥಾಪಿಸುವ ಯೋಜನೆ ಮಾಡಿದ್ದೇವೆ.ಗಾಂಧಿ ಬಜಾರ್ ನಲ್ಲೂ ಜನ ನೂಕು ನುಗ್ಗಲಾಗದಂತೆ ವ್ಯವಸ್ಥೆ ಮಾಡಿದ್ದೇವೆ.
ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಜಾತ್ರಾ
ಪೆಂಡಾಲ್ ನಲ್ಲಿ ಒಂದೆಡೆ ದೊರಕುವಂತೆ ಸೌಲಭ್ಯ ಕಲ್ಪಿಸಲಾಗುವುದು.
ಒಟ್ಟಾರೆ ಸಾರ್ವಜನಿಕರು ಮುಖ್ಯವಾಗಿ ಮಾಧ್ಯಮದವರೂ ಜಾತ್ರೆ ಸುಲಲಿತ
ವಾಗಿ ನಡೆಸುವಂತೆ ಸಹಕರಿಸಲು ಕೋರಿದರು.

ಕಳೆದ ಜಾತ್ರಾ ಮಹೋತ್ಸವದಲ್ಲಿ ಸಾರ್ವಜನಿಕರಿಗೆ ಉಂಟಾದ ಅನಾನುಕೂಲಗಳನ್ನ ಈ ಬಾರಿ ಸರಿಪಡಿಸಿದ್ದೇವೆ ಎಂದು ಅವರು ಹೇಳಿದರು.

ಇದೇ 22ರಂದು ಮಂಗಳವಾರ ಜಾತ್ರೆ ಆರಂಭವಾಗುತ್ತದೆ. ಬೆಳಗಿನ ಜಾವ 10 ಗಂಟೆಗೆ ಬ್ರಾಹ್ಮಣ ನಾಡಿಗ ಕುಟುಂಬದ ಮನೆಗೆ ಹೋಗಿ ವೀಳ್ಯ ಕೊಟ್ಟು ವಾದ್ಯದಲ್ಲಿ ಕರೆತಂದು ಪೂಜಿಸುವ ಪದ್ಧತಿ ಇದೆ. ಬರುವಾಗ ಕುಂಬಾರ ಜನಾಂಗದವರಿಂದ ಬಾಸಿಂಗದ ಜೊತೆ ಅವರನ್ನೂ ಕರೆತರುತ್ತಾರೆ.

ಬ್ರಾಹ್ಮಣ ಸುಹಾಸಿನಿಯರು ದೇವಿಗೆ ಉಡಿ ತುಂಬಿ ಪೂಜಿಸಿದ ಮೇಲೆ ವಿದ್ಯುಕ್ತವಾಗಿ ಜಾತ್ರೆ ಪ್ರಾರಂಭವಾದಂತೆ, ನಂತರ ವಿಶ್ವಕರ್ಮ ಜನಾಂಗದವರಿಂದ ದಿನವಿಡೀ ಪೂಜೆ ನಡೆಯುತ್ತದೆ. ದೇವಿಯ ದರ್ಶನಕ್ಕೆ ಭಕ್ತರಿಗೆ ಅನುವು ಮಾಡಿ ಕೊಡಲಾಗುವುದು. ರಾತ್ರಿ ಒಂಬತ್ತರ ಸುಮಾರಿಗೆ ಉಪ್ಪಾರ ಕುಲದವರು ದೇವಿಯನ್ನು ಗದ್ದುಗೆಗೆ ಕರೆತರುತ್ತಾರೆ. ಈ ಮಧ್ಯೆ ದೇವಿಯನ್ನು ಗಂಗಮತಸ್ಥ ಸಮಾಜದವರು ಗಟೇವುನೊಂದಿಗೆ ಗಾಂಧಿ ಬಜಾರ್ ನಲ್ಲಿ ದೇವಿಗೆ ಎದುರುಗೊಂಡು ಪೂಜೆ ಸಲ್ಲಿಸುತ್ತಾರೆ.

ತದ ನಂತರ ಗದ್ದುಗೆ ಬಳಿ ದೇವಿ ಬಂದಾಗ ವಿದ್ಯಾನಗರದ ಕರ್ಲಹಟ್ಟಿಯ ಹರಿಜನ ಬಾಂಧವರು ಪೂಜೆ ಸಲ್ಲಿಸುತ್ತಾರೆ. ಗದ್ದುಗೆಯಲ್ಲಿ ದೇವಿ ಕೂರಿಸುತ್ತಿದ್ದಂತೆ ಕುರುಬ ಸಮಾಜದ ಚೌಡಿಕೆ ಮನೆತನದವರು ದೇವಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸುತ್ತಾರೆ. ಬುಧವಾರ ಬೆಳಿಗ್ಗೆ 6:30ರಿಂದ ವಾಲ್ಮೀಕಿ ಜನಾಂಗದವರು ನಂತರ ಉಪ್ಪಾರರು ತದನಂತರ ಮಡಿವಾಳರು ರಾತ್ರಿವರೆಗೂ 4 ದಿನಗಳ ಕಾಲ ಗದ್ದುಗೆಯಲ್ಲಿ ಅಮ್ಮನವರಿಗೆ ಪೂಜೆ ಮಾಡುತ್ತಾರೆ. ಶನಿವಾರ ರಾತ್ರಿ 8ಗಂಟೆಗೆ ಅಮ್ಮನವರ ರಾಜಬೀದಿ ಉತ್ಸವ ಗಾಂಧಿಬಜಾರ್ ಬಿ.ಹೆಚ್.ರಸ್ತೆ, ಟ್ಯಾಂಕ್ ಬಾಂಡ್ ರಸ್ತೆಯಿಂದ ಹೊನ್ನಾಳಿ ರಸ್ತೆಯ ಸೇತುವೆ ಮೂಲಕ ಅರಣ್ಯದಲ್ಲಿ ಮೂರ್ತಿ ವಿಸರ್ಜಿಸುವ ಮೂಲಕ ಜಾತ್ರೆಯ ಸಂಪನ್ನಗೊಳ್ಳುವುದು.

Teaching Staff Recruitment

Application are invited for the following posts. Candidates shall appear for the Walk in Interview at Mandara Jnanadayini School and College

Sl No.PostQualificationVacanciesExperience
1PRINCIPALM.A/M.Sc, M.Ed15 – 10 years
2PGT- KANNADA, ENGLISH, HINDI, MATHEMATICS, SCIENCE (CBZ &PCM) SOCIAL SCIENCEM.A/M.Sc., B. Ed70-5 years
3TGT- KANNADA, ENGLISH, HINDI, MATHEMATICS, SCIENCE (CBZ &PCM) SOCIAL SCIENCEB.A/B.Sc., B. Ed70-5 years
4PRT-EVS, SCIENCE, KANNADA, ENGLISH, HINDI, MATHEMATICSB.A./B.Sc.
D.Ed/B.Ed
60-5 years
5P.E TM.P.Ed/ B.P.Ed20-5 years
6OFFICE ASSISTANCEM.Com/B.Com11-5 years
7ATTENDERSSLC/PUC11-5 years

Note:

Attractive Salary will be given as per the efficiency of work
Interview Date: 24/03/2022 Time: 11:00 a.m
Venue: Mandara Campus Gopasetty koppa, Gopala, Shivamogga 577205
Note: Please bring updated resume along with a passport size photograph, photocopies of Educational, Experience Certificates and Originals for Verification.
Send softcopy info@mjsc.edu.in

ಹೈಕೋರ್ಟ್ ತೀರ್ಪು ಸೂಕ್ತವಾಗಿದೆ – ತಾರಾ

0

ಹಿಜಾಬ್‌ ಪ್ರಕ​ರಣಕ್ಕೆ ಸಂಬಂಧಿಸಿದಂತೆ ಹೈಕೋಟ್‌ ನೀಡಿದ ತೀರ್ಪು ನ್ಯಾಯು​ತ​ವಾಗಿದೆ ಎಂದು ಚಿತ್ರನಟಿ, ವಿಧಾನಪರಿಷತ್‌ ಮಾಜಿ ಸದಸ್ಯೆ ತಾರಾ ಅನು​ರಾಧಾ ಅವರು ತಿಳಿಸಿದ್ದಾರೆ.

ಗದಗದಲ್ಲಿ ಈ ಕುರಿತು ಮಾತನಾಡಿದ್ದಾರೆ.
ಸಮವಸ್ತ್ರ ಎಂಬುವುದು ಶಾಲೆಗಳಲ್ಲಿ ಇರಬೇಕು. ಧರ್ಮವನ್ನು ಮನೆಯಲ್ಲಿ ಪಾಲನೆ ಮಾಡೋದು ತಪ್ಪಿಲ್ಲ. ಎಲ್ಲ ಜಾತಿ, ಧರ್ಮವನ್ನು ಸಮಾನವಾಗಿ ಕಾಣುವ ದೇಶ ಭಾರತ. ಬೇರೆ ಧರ್ಮೀ​ಯ​ರಿಗೆ ಹಲವು ದೇಶಗಳಿವೆ. ಹಿಂದೂ ಧರ್ಮಕ್ಕೆ ಇರುವುದು ಭಾರತ ದೇಶ ಒಂದೇ. ಶ್ರೀಮಂತ, ಬಡವ, ಜಾತಿ, ಮತ ಇಲ್ಲದೇ ಕೂತು ಪಾಠ ಕಲೆಯುವ ದೇವಾಲಯ ಶಾಲೆಗಳು. ಆ ದೇವಾಲಯದಲ್ಲಿ ಧರ್ಮ ಪಾಲಿಸದೇ ಸಮನಾಗಿ ಕಾಣಲು ಸಮ​ವ​ಸ್ತ್ರ ಬೇಕು ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಇನ್ನು ಮುಂದೆ ಇಲಾಖಾ ಸಚಿವರಿಗೆ ನೌಕರರ ವರ್ಗಾ ವರ್ಗಿ ಹೊಣೆ

0

ಮುಂಬರುವ ಏಪ್ರಿಲ್ ನಿಂದ ಸರ್ಕಾರಿ ನೌಕಕರರಿಗೆ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಈ ಪ್ರಕ್ರಿಯೆಯನ್ನು ಕೈಗೊಳ್ಳುವ ಅಧಿಕಾರವನ್ನು ಆಯಾ ಇಲಾಖೆಯ ಸಚಿವರಿಗೆ ವಹಿಸುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ಧರಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸಂಪುಟದ ಸಚಿವರು ಆಗ್ರಹಿಸಿದ್ದರು. ಅವರ ಆಗ್ರಹಕ್ಕೆ ಮಣಿದಿರುವಂತ ಸಿಎಂ ಬಸವರಾಜ ಬೊಮ್ಮಾಯಿ ಅವರು , ಇದೀಗ ನೌಕರರ ಸಾಮಾನ್ಯ ವರ್ಗಾವಣೆ ಅಧಿಕಾರವನ್ನು ಇನ್ನೂ ಸಚಿವರ ಹೆಗಲಿಗೆ ವಹಿಸೋದಕ್ಕೆ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದಾರೆಂದು ಸುದ್ದಿ ಮೂಲಗಳಿಂದ ತಿಳಿದು ಬಂದಿದೆ.

ಪ್ರತಿ ವರ್ಷ ಹೊಸ ಆರ್ಥಿಕ ವರ್ಷಾರಂಭದಲ್ಲಿ, ನಿರ್ಧಿಷ್ಟ ಮಿತಿಗೆ ಒಳಪಟ್ಟು ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ. ಈ ಪ್ರಕ್ರಿಯೆಯು ಬಹುತೇಕ ಮುಖ್ಯಮಂತ್ರಿ ಕಾರ್ಯಾಲಯದ ಉಸ್ತುವಾರಿಯಲ್ಲೇ ನಡೆಯುವುದು ಪದ್ಧತಿಯಾಗಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕಸಬೊರಕೆಯಾಗಿಳೆಗೆ……

1

ನಮ್ಕಡೆ ಪೊರಕೆಗೆ ಹಿಡಿ ಅಂತ ಕರೀತೀವಿ.ಆದರೆ ಎಲ್ಲಾಕಡೆ ಅದನ್ನ ಪೊರಕೆ,ಕಸಬರಿಕೆ,ಕಸ್ಬರ್ಕೆ ಹೀಗೆ
ಕರೀತಾರೆ. ಪಾಪ ಮನೆಯನ್ನೆಲ್ಲಾ ಸ್ವಚ್ಛಮಾಡಿ ಕೊನೆಗೆ ಮೂಲೆ ಸೇರಿ ಕೂರತ್ತೆ. ಅದರ ಮಹತ್ವವೇ ಅಷ್ಟು.
ಈ ಕಸಪೊರಕೆ ಮಾಡಿದ ಜಾದು ನಿಮಗೆ ಗೊತ್ತಿಲ್ಲ ಅಂತಲ್ಲ.ಈಗ ಮಾಧ್ಯಮಗಳ ಮೂಲಕ ನೋಡಿರ್ತೀರಿ,ಕೇಳಿರ್ತೀರಿ.

ಬಹಳ ಸಾಮಾನ್ಯ ರೂಪದ,ಅದರಲ್ಲೂ ಸುಂದರವೇ ಅಲ್ಲದ ಅಸ್ತಿತ್ವ ಇದರದ್ದು. ವೆರಿ ಬ್ಯೂಟಿಫುಲ್, ವೆರಿ ಹ್ಯಾಂಡ್ ಸಮ್
ಅಂತ ಹೇಳೋಕೂ ಬರಲ್ಲ. ಯಾಕಂದ್ರೆ ಅದಕ್ಕೆ ಲಿಂಗಭೇದವೇ ಇಲ್ಲ.ಜಾತ್ಯಾತೀತವೂ ಹೌದು.
ಯಾರೇ ಕೈಯಲ್ಲಿ ಹಿಡಿದ್ರೂ ಮಾಡೋ ಘನಂದಾರಿ ಕೆಲಸ ಒಂದೇ.

ಈ ಪೊರಕೆ ಇದೂವರೆಗೆ ಮೂಲೇಲೇ ಇರ್ತಿತ್ತು. ಅದಕ್ಕೆ ಅಂಗಡೀಲಿ ಕೊಳ್ಳೋ ಬೆಲೆ ಇತ್ತಷ್ಟೆ. ಈಗ ಅದೇನು‌
ಮ್ಯಾಜಿಕ್ಕೋ ರಾಜಕೀಯರಂಗಕ್ಕೂ ಪ್ರವೇಶಮಾಡಿದೆ. ರಾಜಕೀಯ ಪಕ್ಷದ ಚಿನ್ಹೆಯಾಗಿ ರಾರಾಜಿಸುತ್ತಿದೆ.
ದೆಹಲಿ ಕೇದ್ರಾಡಳಿತ ಪ್ರದೇಶದಲ್ಲಿ ಈಗ ಅದರ ಗುರುತಿನ ಬಲದಿಂದ ಆಮ್ ಆದ್ಮಿ ಪಾರ್ಟಿ ಆಡಳಿತ ಸಿಂಹಾಸನದಲ್ಲಿದೆ. ಅಲ್ಲಿಂದ ಅದರ
ಸ್ವಚ್ಛತಾ ಕೆಲಸ ಶುರುವಾಯಿತು ನೋಡಿ!. ಈಗ ಪಕ್ಕದ ಪಂಜಾಬ್ ರಾಜ್ಯಕ್ಕೂ ಕಸಗುಡಿಸಲು ಪುಟುಪುಟು ಓಡಿಬಿಟ್ಟಿದೆ.

ನಿಜ ..ರಾಜಕೀಯ ಬಹಳ ಹೊಲಸಾಗಿದೆ ಅಂತ ಬಹಳ ರಾಜಕಾರಣಿಗಳು ತಮ್ಮ ಭಾಷಣದಲ್ಲಿ ಹೇಳ್ತಿರ್ತಾರೆ.ಅದಕ್ಕೆ ಸರಿಯಾಗಿ ಈ ಪೊರಕೆ ತನ್ನ ಡ್ಯೂಟಿ
ಆರಂಭಿಸಿಬಿಟ್ಟಿದೆ. ಎಂತೆಂಥವರು ಈ ಪೊರಕೆ ಮಹಿಮೆಯಲ್ಲಿ ಗೆದ್ದರು ಅಂದ್ರೆ ನಂಬಲಿಕ್ಕೇ ಆಗಲ್ಲ. ಬಹಳ ಅನುಭವಿಗಳು, ಹಣವಂತರು, ಮಹಾ ಬುದ್ಧಿವಂತರು ಮಾತ್ರ ರಾಜಕೀಯಮಾಡಬಹುದು ಅಂತ ಬಹಳ ಮಂದಿ ಮಾತಾಡಿಕೊಳ್ತಾರೆ.
ಆದರೆ ಈ ಪೊರಕೆ ಅದನ್ನೆಲ್ಲ ಸುಳ್ಳು ಮಾಡಿಬಿಟ್ಟಿದೆ.

ಇತ್ತಿಚೆಗೆ ನಡೆದ ಪಂಜಾಬಿನ ವಿಧಾನ ಸಭಾ ಚುನಾವಣೆಯಲ್ಲಿ ಚಮತ್ಕಾರವನ್ನೇ ಮಾಡಿಬಿಟ್ಟಿತು.
ಹಾಲಿ ಮುಖ್ಯಮಂತ್ರಿಗಳು ಮೂವತ್ತೇಳು ಸಾವಿರ ಮತಗಳ ಅಂತರದಲ್ಲಿ ಸೋಲಪ್ಪುವಂತೆ ಮಾಡಿದೆ.
ಸಾಮಾನ್ಯ ಓರ್ವ ಅಂಗಡಿಯವ ಅದರಲ್ಲೂ ಒಂದು ಮೊಬೈಲ್ ಷಾಪಿನ ಓನರ್ರು ಗೆದ್ದು ಎಮ್ಮಲ್ಯೆ ಆಗಿ ಬಿಗುವಂತಾಗಿದೆ. ಅಂದ್ರೆ
ಆಪ್ ಮುಖ್ಯಸ್ಥ ಕೇಜ್ರಿವಾಲ್ ಹೇಳುವಂತೆ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲೂ ಗೆಲ್ಲುವ ಸಾಮರ್ಥ್ಯ ಇದೆ. ಈ ಸಂಗತಿಯನ್ನು ಪಂಜಾಬಿನ ಚುನಾವಣೆ ತಿಳಿಸಿದೆ.
ಆ ವ್ಯಕ್ತಿಯ ಹೆಸರು ಲಾಭ್ ಸಿಂಗ್ ಉಗೋಕೆ.ಈತ ಹಳ್ಳಿಯೊಂದರಲ್ಲಿ ಮೊಬೈಲ್ ಷಾಪ್ ನಡೆಸ್ತಾರೆ.

ನಿಮಗೆ ಅಚ್ಚರಿಯಾಗಬಹುದು. ಚರನ್ಜಿತ್ ಸಿಂಗ್ ಚನ್ನಿ ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು.ಒಂದು ಬಹಾದೂರ್ ಮತ್ತೊಂದು ಚಮಕೌರ್ ಸಾಹಿಬ್. ಅಲ್ಲೂಕೂಡ ಆಮ್ ಆದ್ಮಿ ಅಭ್ಯರ್ಥಿ ಎದುರೇ ಸೋತಿದ್ದಾರೆ.

ಗೆದ್ದ ಅಭ್ಯರ್ಥಿಯ ಹೆಸರೂ ಚರನ್ ಜಿತ್ ಸಿಂಗ್. ಈ ಚರನ್ ಜಿತ್ ಸಿಂಗ್ ಕಣ್ಣಿನ ವೈದ್ಯರು. ಸಮಾಜ ಸೇವಕರು. ಹಿಂದಿನ ಚುನಾವಣೆಯಲ್ಲಿ ಸೋತಿದ್ದರು. ಪೊರಕೆ ಎರಡೂ ಕಡೆ ಸ್ವಚ್ಛಗೊಳಿಸಿಬಿಟ್ಟಿದೆ.

ಸೋತ ಮುಖ್ಯಮಂತ್ರಿ ಕಡಿಮೆ ಆಸಾಮಿಯೇನಲ್ಲ.ಯಾಕಂದ್ರೆ ಅಧಿಕಾರದಲ್ಲಿ ಇದ್ದವ್ರು.ಆದರೆ ಪೊರಕೆ ಬಿಡಲಿಲ್ಲ. ಕಸ ಗುಡಿಸೋ
ಹಾಗೆ ಅಲ್ಲಿನ ರಾಜಕೀಯದ ಮಲ್ಲಾದಿಮಲ್ಲರನ್ನ ಗುಡಿಸಿ ಗುಪ್ಪೆ ಹಾಕಿಬಿಟ್ಟಿತು.ನವಜೋತ್ ಸಿಂಗ್ ಸಿಧು, ಕ್ಯಾ .ಅಮರಿಂದರ್ ಸಿಂಗ್,
ಹೀಗೆ ಖ್ಯಾತನಾಮರನ್ನ ಪೊರಕೆ ಮಕಾಡೆ ಮಾಡಿದೆ.

ಪೊರಕೆಯನ್ನ ರೂಪಕವಾಗಿ ನೋಡೋದಾದ್ರೆ ಅದು ಬಹಳ
ಕರಾರುವಾಕ್ಕಾದ ಕೆಲಸಮಾಡಿದೆ ಅನ್ನಬಹುದು. ಆಡಳಿತದಲ್ಲಿ ಈಗಾಗಲೇ ವಿವಿಧ ಕಸ ತುಂಬಿದೆ. ಆ ಕಸಗಳೆಂದರೆ ಭ್ರಷ್ಟಾಚಾರ , ಸೋಂಬೇರಿತನ, ಸ್ವಜನಪಕ್ಷಪಾತ ಇತ್ಯಾದಿ …ಇತ್ಯಾದಿ. ಅವನ್ನೆಲ್ಲಾ ಗುಡಿಸಿ ಸ್ವಚ್ಛವಾದ ಆಡಳಿತ ಕೊಡೋದೇ ಗುರಿ. ಜನ ಕೂಡ ಸ್ವಚ್ಛ ಪರಿಸರದಲ್ಲಿ ಉಸಿರಾಡಬಹುದು.
ಅಧಿಕಾರ ಅನ್ನೋದು ಕಸಪೊರಕೆ ಹಾಗಿರಬೇಕು. ಗುಡಿಸಿದ ಮೇಲೆ ಅದರ ಜಾಗ ಮೂಲೇನೇ..!
ಅದನ್ನ ತಲೆ ಮೇಲೆ ಹೊತ್ತರೆ ಜನ ನಗಾಡಿ ಕೊಳ್ತಾರೆ.

ಪೊರಕೆ ಒಂದು ಗುಟ್ಟಿನ ಮಾತನ್ನ ಹೇಳತ್ತೆ. ಇದನ್ನ ಬ್ರಹ್ಮಾಂಡ ಗುರೂಜಿ ಅಂಥವರೂ ಹೇಳೋಕಾಗಲ್ಲ. ಮೊದಲು ದೆಹಲಿ,ಈಗ ಪಂಜಾಬ್ ಆಮೇಲೆ ಹರಿಯಾನ…ಇನ್ನು ಹೀಗೇ ಉತ್ತರದಲ್ಲಿ ಅಭಿಯಾನ ಶುರು. ದಕ್ಷಿಣಕ್ಕೆ ಬರುವ ಕಾಲವೂ ದೂರವಿಲ್ಲ. ಬಿಜೇಪಿ ಮೇಲೆ ಕಾಂಗ್ರೆಸ್,ಕಾಂಗ್ರೆಸ್ ಮೇಲೆ ಬಿಜೇಪಿ
ಇವರೆಡರ ಮೇಲೆ ಟಿಎಂಸಿ. ಮತ್ತೆ ಕಿಂಗ್ ಮೇಕರ್ ಅಗಿ ಸುಳಿದಾಡುವ ಜೆಡಿಎಸ್…ಚೆನೈ ,ಆಂಧ್ರ , ತೆಲಂಗಾಣ ಈ ಕಡೆ ಏನೇನು ವರಸೆ ಹಾಕುತ್ತೋ ಗೊತ್ತಿಲ್ಲ. ಹೀಗೆ ಇವೆಲ್ಲವನ್ನೂ ಈ ಪೊರಕೆ ಕಾಲಕಸ ಮಾಡಿಬಿಡುತ್ತೋ ಏನೋ ಆ ಪರಶಿವನೇ ಬಲ್ಲ.!.

ದಾರ್ಶನಿಕ ಡಿವಿಜಿ ಅವರು ಹಿಂದೆಯೇ ಕಸಪೊರಕೆಯ ಮಹತ್ವ ಮತ್ತು ಅದರ ಯಕಃಶ್ಚಿತ್ ಸೇವೆಯಾದರೂ ಪಾರಮ್ಯದ ಬಗ್ಗೆ
ಹೇಳಿದ್ದಾರೆ.ನೆನಪು ಮಾಡಿಕೊಳ್ಳುವುದು ಈಗ ಬಹಳ ಸೂಕ್ತ.

ಹೆಸರು ಹೆಸರೆಂಬುದೇಂ? ಕಸರು ಬೀಸುವ ಗಾಳಿ ।
ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ ? ।।
ಶಿಶುವಾಗು ನೀಂ ಮನದಿ, ಹಸುವಾಗು, ಸಸಿಯಾಗು ।
ಕಸಬೊರಕೆಯಾಗಿಳೆಗೆ – ಮಂಕುತಿಮ್ಮ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಬೆಂಗಳೂರು ರಸ್ತೆ ಗುಂಡಿ ಮುಚ್ಚಲು ಕೋರ್ಟ್ ಸೂಚನೆ

0

ರಸ್ತೆ ಗುಂಡಿ ವಿಚಾರದಲ್ಲಿ ಬಿಬಿಎಂಪಿಯನ್ನು ಹೈಕೋರ್ಟ್ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದೆ. ಮುಂದಿನ 15 ದಿನ ಗಳಲ್ಲಿ ಬೆಂಗಳೂರಿನ ಸಿಬಿಡಿ ಏರಿಯಾದ ಎಲ್ಲಾ ರಸ್ತೆಗಳ ಗುಂಡಿ ಮುಚ್ಚುವಂತೆ ಬಿಬಿಎಂಪಿಗೆ ಡೆಡ್ಲೈನ್ ನೀಡಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸಿಜೆ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠ, ಎಂಎಸ್ ಪಾಳ್ಯದಲ್ಲಿ ರಸ್ತೆ ಗುಂಡಿಗೆ ಬಲಿಯಾದ ಅಶ್ವಿನ್ ಪ್ರಕರಣವನ್ನು ಪ್ರಸ್ತಾಪಿಸಿತು. ರಸ್ತೆಗುಂಡಿಯಿಂದ ಆಗುವ ಪ್ರತಿಯೊಂದು ಸಾವು ನಮ್ಮಲ್ಲಿ ಅಪರಾಧಿ ಪ್ರಜ್ಞೆ ಮೂಡಿಸುತ್ತಿದೆ ಎಂದು ಬೇಸರವನ್ನು ವ್ಯಕ್ತಪಡಿಸಿತು. ಬಿಬಿಎಂಪಿಯ ಗುಂಡಿ ಮುಚ್ಚುವ ನಿಮ್ಮ ಕಾರ್ಯ ಯೋಜನೆ ಸಮಾಧಾನ ತಂದಿಲ್ಲ. 3 ದಿನಗಳಲ್ಲಿ ಗುಂಡಿ ಗಳ ಸರ್ವೇ ಮುಗಿಸಿ, 15 ದಿನಗಳಲ್ಲಿ ಗುಂಡಿ ಮುಚ್ಚುವ ಕೆಲಸ ಯುದ್ಧೋಪಾದಿಯಲ್ಲಿ ನಡೆಸಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು, ಮುಖ್ಯ ಎಂಜಿನಿಯರ್ ಗೆ ಕೋರ್ಟ್ ಆದೇಶಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹಿಜಾಬ್ ಪ್ರಚೋದಿಸುವ ಸಂಘಟನೆಗಳ ಮೇಲೆನಿಷೇಧ ಹೇರಲು ಚಿಂತನೆ

0

ಹಿಜಾಬ್ ವಿವಾದ ಪ್ರಚೋದಿಸುವ ಕೆಲವು ಸಂಘಟನೆಗಳ ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿವಾದಕ್ಕೆ ಪ್ರಚೋದನೆ ನೀಡುವ ಸಂಘಟನೆಗಳ ಚಟುವಟಿಕೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅವುಗಳನ್ನು ನಿಷೇಧಿಸುವ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಸಂಘಟನೆಗಳು ಮಕ್ಕಳನ್ನು ತರಗತಿಗಳಿಗೆ ಹಾಜರಾಗದಂತೆ ನಿರ್ಬಂಧಿಸುವ ಮಟ್ಟಕ್ಕೆ ಇಳಿದಿದ್ದಾರೆ. ಪೋಷಕರು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.

ಇನ್ನು ಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದೆ. ನಿಷೇಧಾಜ್ಞೆ ಜಾರಿ ಕುರಿತು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠರು ತಮ್ಮ ಜಿಲ್ಲೆಗಳ ಪರಿಸ್ಥಿತಿ ಆಧರಿಸಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.