Sunday, February 22, 2026
Sunday, February 22, 2026
Home Blog Page 1666

ರಸ್ತೆ ಅಪಘಾತ ತಗ್ಗಿಸಲು ₹7500 ಕೋಟಿ ಯೋಜನೆ- ಗಡ್ಕರಿ

ಭಾರತದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ ಇಡೀ ವಿಶ್ವದಲ್ಲೇ ಅತೀ ಹೆಚ್ಚು ಅಂದರೆ 1.5 ಲಕ್ಷಕ್ಕೂ ಅಧಿಕ ಸಾವುಗಳನ್ನು ದಾಖಲಿಸಿದೆ ಎಂದು ಕೇಂದ್ರ ಸರ್ಕಾರ ಬುಧವಾರದಂದು ರಾಜ್ಯ ಸಭೆಗೆ ಮಾಹಿತಿ ನೀಡಿದೆ.

ಪ್ರಶ್ನೋತ್ತರ ವೇಳೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿನ ಅಪಘಾತದ ಪ್ರಮಾಣವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ವಿಶ್ವ ಬ್ಯಾಂಕ್​ನ ಸಹಾಯದೊಂದಿಗೆ 7500 ಕೋಟಿ ರೂಪಾಯಿಗಳ ಯೋಜನೆಯನ್ನು ಶೀಘ್ರದಲ್ಲಿಯೇ ಜಾರಿಗೆ ತರಲಿದೆ ಎಂದು ಹೇಳಿದರು.

ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಹಾಗೂ ಅಮೂಲ್ಯವಾದ ಜೀವಗಳನ್ನು ಉಳಿಸಲು ಗಡ್ಕರಿ ಜನ ಬೆಂಬಲವನ್ನು ಕೋರಿದ್ದಾರೆ.

ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ ಸಾಯುವವರಲ್ಲಿ ಶೇಕಡಾ 65 ಪ್ರತಿಶತದಷ್ಟು ಜನರು 18 ರಿಂದ 45 ವರ್ಷ ಪ್ರಾಯದವರು ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರವು ಈ ವಿಚಾರದಲ್ಲಿ ಬಹಳ ಸೂಕ್ಷ್ಮವಾಗಿದೆ. ನಾವು ಶೀಘ್ರದಲ್ಲಿಯೇ ವಿಶ್ವ ಬ್ಯಾಂಕ್​​ನ ಬೆಂಬಲದೊಂದಿಗೆ 7500 ಕೋಟಿ ಯೋಜನೆಯನ್ನು ಜಾರಿಗೊಳಿಸುತ್ತೇವೆ. ಈ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರುವಂತೆ ನಾವು ವಿಶ್ವ ಬ್ಯಾಂಕ್​ನ್ನು ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೇಂದ್ರದಂತೆ ಸರ್ಕಾರಿ ನೌಕರರಿಗೆ ಸಮಾನ ವೇತನ ಆಯೋಗ ರಾಜ್ಯದಲ್ಲಿ ರಚನೆ

0

ಕೇಂದ್ರ ಸರಕಾರಿ ನೌಕರರ ಸಮಾನ ವೇತನ ಆಯೋಗ ರಚನೆ ಮಾಡಬೇಕು ಎಂದು ಬೇಡಿಕೆ ಮುಂದಿಟ್ಟಿದ್ದ ರಾಜ್ಯ ಸರಕಾರಿ ನೌಕರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತೋಷದ ಸುದ್ದಿ ನೀಡಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರಿ ನೌಕರರ ವೇತನಕ್ಕೆ ಸಮನಾಗಿ ರಾಜ್ಯ ಸರಕಾರಿ ನೌಕರರಿಗೆ ವೇತನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರಿ ನೌಕರರ ಸಮಾನ ವೇತನ ಆಯೋಗ ರಚನೆ ಮಾಡಲಾಗುತ್ತದೆ ಎಂದು ಘೋಷಿಸಿದರು.

ಈ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿ, ಬೇರೆ ರಾಜ್ಯಗಳಲ್ಲಿನ ಪರಿಸ್ಥಿತಿ ನೋಡಿಕೊಂಡು ವರದಿ ಸಲ್ಲಿಸಲು ಆದಷ್ಟು ಬೇಗ ಆಯೋಗ ರಚನೆ ಮಾಡಲಾಗುವುದು ಎಂದು ಹೇಳಿದರು.

ಬಜೆಟ್‌ಗೂ ಮುನ್ನ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು, ಕೇಂದ್ರ ಸರಕಾರಿ ನೌಕರರ ಸಮಾನ ವೇತನ ಆಯೋಗ ರಚಿಸುವಂತೆ ಪತ್ರ ಬರೆದಿದ್ದರು. ಆದರೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿರಲಿಲ್ಲ. ಇದರಿಂದ ಸರಕಾರಿ ನೌಕರರು ಅಸಮಾಧಾನಗೊಂಡಿದ್ದರು.

ಇದಾದ ಮೇಲೂ ಬಿಎಸ್‌ವೈ ಮತ್ತು ಶಾಸಕರ ಕಡೆಯಿಂದ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಲಾಗಿತ್ತು.

7.60 ಲಕ್ಷ ಹುದ್ದೆಗಳು
ರಾಜ್ಯದಲ್ಲಿ ಒಟ್ಟು 7.60 ಲಕ್ಷ ಸರಕಾರಿ ಹುದ್ದೆಗಳಿವೆ. ಇದರಲ್ಲಿ 5.20 ಲಕ್ಷ ಮಂದಿ ಕಾರ್ಯ ನಿರ್ವಹಿಸುತ್ತಿದ್ದು, 2.40 ಲಕ್ಷ ಹುದ್ದೆ ಖಾಲಿ ಉಳಿದಿವೆ. ಖಾಲಿ ಹುದ್ದೆಗಳಿಂದ ಬೊಕ್ಕಸಕ್ಕೆ ಉಳಿತಾಯವಾಗುತ್ತಿದೆ. ಇದರ ಮಧ್ಯೆ ಕೇಂದ್ರ ಸರಕಾರಿ ನೌಕರರ ಸಮಾನ ವೇತನ ಆಯೋಗ ರಚಿಸಿ ಪರಿಷ್ಕೃತ ವೇತನ ನೀಡಲು 10,500 ಕೋಟಿ ರೂ. ಬೇಕಾಗುತ್ತದೆ ಎಂದೂ ಸಿಎಂ ಹೇಳಿದರು. ಅಲ್ಲದೆ, ಖಾಲಿ ಹುದ್ದೆಗಳ ಪೈಕಿ, 91 ಸಾವಿರ ಮಂದಿ ಹೊರಗುತ್ತಿಗೆ ನೌಕರರೂ ಇದ್ದಾರೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶ್ವೇತಭವನದ ಗಮನ ಸೆಳೆದ ಝಲೆನ್ಸ್ಕಿ ಭಾವನಾತ್ಮಕ ಭಾಷಣ

0

ವಾರ್‌ಟೈಮ್‌ ಲೀಡರ್‌ ಎಂದೇ ಖ್ಯಾತಿ ಗಳಿಸಿರುವ ಉಕ್ರೇನ್‌ ಅಧ್ಯಕ್ಷ ವೊಲೋಡಿಮಿರ್‌ ಝೆಲೆನ್‌ಸ್ಕಿ ಅವರು ನಿನ್ನೆ ಅಮೆರಿಕ ಸಂಸತ್‌ನಲ್ಲಿ ಮಾತನಾಡಿದ್ದಾರೆ.

ರಷ್ಯಾ ಆಕ್ರಮಣದ ವಿರುದ್ಧ ಜಾಗತಿಕ ಬೆಂಬಲ ಪಡೆಯುವ ನಿಟ್ಟಿನಲ್ಲಿ ಅವರು ಮಾಡಿರುವ ಭಾಷಣವನ್ನು ಸಂಸತ್‌ನಲ್ಲಿ ನೇರಪ್ರಸಾರ ಮಾಡಲಾಗಿದೆ.

ತಮ್ಮ ಭಾಷಣದಲ್ಲಿ ವಿನ್‌ಸ್ಟನ್‌ ಚರ್ಚಿಲ್‌, ಹ್ಯಾಮ್ಲೆಟ್‌ ಹೆಸರನ್ನು ಪ್ರಸ್ತಾವಿಸಿದ್ದಾರೆ. ಜಾಗತಿಕ ಅಭಿಮತದ ಶಕ್ತಿಯು ರಷ್ಯಾವನ್ನು ಹೇಗೆ ತಡೆಯಬಲ್ಲುದು ಎಂಬುದನ್ನು ವಿವರಿಸಿದ್ದಾರೆ.

ನನಗೆ ಈಗ 45 ವರ್ಷ ವಯಸ್ಸು. ಆದರೆ ನನ್ನ ದೇಶದ 100 ಮಕ್ಕಳು ಕೊನೆಯುಸಿರೆಳೆದಿದ್ದನ್ನು ನೋಡಿದ ಮೇಲೆ ನನಗೆ ಬದುಕುವ ಆಸೆಯೇ ಕಮರಿಹೋಗಿದೆ. ರಷ್ಯಾ ನಡೆಸುತ್ತಿರುವ ದಾಳಿಯು 2001ರಲ್ಲಿ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ಮತ್ತು ಜಪಾನ್‌ನ ಪರ್ಲ್ಹಾರ್ಬರ್‌ ಮೇಲೆ ನಡೆಸಿದ ದಾಳಿಗೆ ಸಮನಾಗಿದೆ. ರಷ್ಯಾದ ಆಕ್ರಮಣ ನಿಲ್ಲಬೇಕೆಂದರೆ ಇನ್ನಷ್ಟು ನಿರ್ಬಂಧ ಹೇರಬೇಕು. ಶಾಂತಿ ಮೂಡಬೇಕೆಂದರೆ, ಜವಾಬ್ದಾರಿಯುತ ದೇಶಗಳ ಹೊಸ ಮೈತ್ರಿ ಸೃಷ್ಟಿಯಾಗಬೇಕು.

ಅಮೆರಿಕದ ನಾಯಕ ಬೈಡೆನ್‌ ಜಗತ್ತಿನ ನಾಯಕರಾಗಿ ಹೊರಹೊಮ್ಮಬೇಕು. ಜಗತ್ತಿನ ಶಾಂತಿಯ ನಾಯಕರಾಗಬೇಕು. ಉಕ್ರೇನ್‌ನ ಆಗಸದಲ್ಲಿ ವಿಮಾನಗಳ ಹಾರಾಟ ನಿರ್ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಮೆರಿಕನ್ನರೇ, ನಾವೂ ನಿಮ್ಮಂತೆ ಮನುಷ್ಯರೇ.
ಭವಿಷ್ಯದ ಬಗ್ಗೆ ನಮಗೂ ನೂರಾರು ಕನಸುಗಳಿವೆ. ಆ ಕನಸುಗಳಿಗೆ ರಷ್ಯಾ ಕೊಳ್ಳಿಯಿಟ್ಟಿದೆ ಎಂದೂ ಝೆಲೆನ್‌ಸ್ಕಿ ಅವರು ತಿಳಿಸಿದ್ದಾರೆ. ಅವರು ಭಾಷಣ ಮುಗಿಸುತ್ತಿದ್ದಂತೆ, ಸಂಸತ್‌ನಲ್ಲಿದ್ದ ಎಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟಿ ಗೌರವ ಸೂಚಿಸಿದ್ದಾರೆ. ನಂತರ ಮಾತನಾಡಿರುವ ಬೈಡೆನ್‌, ಉಕ್ರೇನ್‌ಗೆ ದೀರ್ಘ‌ ವ್ಯಾಪ್ತಿಯ ವಿಮಾನನಿಗ್ರಹ ವ್ಯವಸ್ಥೆಯನ್ನು ರವಾನಿಸುವುದಾಗಿ ಘೋಷಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸಾಲ ಮಾಡದೇ ರೊಟ್ಟಿ ತಿಂತೀವಿ ಬಜೆಟ್ ಬಗ್ಗೆ ಸಿಎಂ ಸಮರ್ಥನೆ

0

ಸಾಲ ಮಾಡಿ ನಾವೇನು ಹೋಳಿಗೆ ತಿಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು,ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪಡೆದಿರುವ ಸಾಲದ ಪ್ರಮಾಣವೂ ಹೆಚ್ಚಾಗಿಲ್ಲ. ಕೇಂದ್ರದಿಂದ ಬರುವ ತೆರಿಗೆ ಪಾಲು ಕಡಿಮೆಯಾಗಿಲ್ಲ.

ಕೊರೊನಾ ನಡುವೆಯೂ ಆರ್ಥಿಕತೆ ಉತ್ತಮವಾಗಿ ನಿರ್ವಹಣೆ ಮಾಡಿ ಅಭಿವೃದ್ಧಿಯತ್ತ ಕೊಂಡೊಯ್ದಿದ್ದೇವೆ ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ಸಾಲ ಮಾಡಿ ಹೋಳಿಗೆ ತಿನ್ನುವ ಸ್ಥಿತಿ ನಮ್ಮದಲ್ಲ. ನಾವು ಸಾಲದ ಹೊರೆ ಇಲ್ಲದೆ ರೊಟ್ಟಿ ತಿನ್ನುವ ಜನ ಎಂದು ವಿಪಕ್ಷ ನಾಯಕರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಷ್ಯವನ್ನು ಖಂಡಿಸಲು ಡೆಮೊಕ್ರೆಟಿಕ್ ನಾಯಕರಿಂದಭಾರತಕ್ಕೆ ಒತ್ತಾಯ

0

ರಷ್ಯಾವು ಉಕ್ರೇನ್ ಮೇಲೆ ಮಾಡುತ್ತಿರುವ ಆಕ್ರಮಣವನ್ನ ಖಂಡಿಸುವಂತೆ ಮತ್ತು ಪುಟಿನ್ ವಿರುದ್ಧ ನಿಲ್ಲಲು ಅಮೆರಿಕದ ಜೊತೆ ನಿಕಟವಾಗಿ ಕೆಲಸ ಮಾಡುವಂತೆ ಭಾರತೀಯ ನಾಯಕರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಶ್ವೇತಭವನ ತಿಳಿಸಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಅವರು, ನಿಮಗೆ ತಿಳಿದಿರುವಂತೆ ನಾವು ಭಾರತದ ನಾಯಕರೊಂದಿಗೆ ಸಂಪರ್ಕದಲ್ಲಿದ್ದೇವೆ. ರಷ್ಯಾ ಅಧ್ಯಕ್ಷ ಪುಟಿನ್ ಅವರ ಉಕ್ರೇನ್ ಆಕ್ರಮಣದ ವಿರುದ್ಧ ನಿಲ್ಲಲು ನಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡುವಂತೆ ಭಾರತೀಯರನ್ನ ಪ್ರೋತ್ಸಾಹಿಸುವುದನ್ನು ಮುಂದುವರಿಸುತ್ತೇವೆ ಎಂದು ಜೆನ್ ಪ್ಸಾಕಿ ಅವರು ಹೇಳಿದ್ದಾರೆ.

ಒಂದು ಕಡೆ ಉಕ್ರೇನ್​​ ಮೇಲೆ ರಷ್ಯಾ ಆಕ್ರಮಣವನ್ನ ಅನೇಕ ರಾಷ್ಟ್ರಗಳು ಖಂಡಿಸಿವೆ. ಕೆಲವು ದೇಶಗಳು ರಷ್ಯಾವನ್ನು ಬೆಂಬಲಿಸಿವೆ. ಆದರೆ ಭಾರತ ಮಾತ್ರ ತಟಸ್ಥ ನೀತಿ ಕೈಗೊಂಡಿದೆ. ಈ ಹಿನ್ನೆಲೆ ಡೆಮಾಕ್ರಟಿಕ್ ನಾಯಕರು ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳನ್ನು ಖಂಡಿಸುವಂತೆ ಭಾರತಕ್ಕೆ ಒತ್ತಾಯಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ದೇಶದಲ್ಲಿ ದಿನೇದಿನೆ ಕೋವಿಡ್ ಸೋಂಕು ಇಳಿಕೆ

0

ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 2,539 ಜನರಿಗೆ ಹೊಸದಾಗಿ ಸೋಂಕು ದೃಢ ಪಟ್ಟಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಕಳೆದ 24 ಗಂಟೆಗಳಲ್ಲಿ 2,539 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ ಎಂದು ವರದಿಯಲ್ಲಿ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ 60 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.

ಕಳೆದ 24 ಗಂಟೆಗಳಲ್ಲಿ 2,539 ಹೊಸ ಕೊರೋನಾ ಪ್ರಕರಣಗಳ ಸಂಖ್ಯೆ 4,491. ಚೇತರಿಕೆಗಳು ಮತ್ತು 60 ಸಾವುಗಳು ಸಂಭವಿಸಿವೆ ಎಂದು ಭಾರತ ವರದಿಯನ್ನು ನೀಡಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 30,799 ಶೇ.0.07 ಆಗಿದೆ.

ದೈನಂದಿನ ಧನಾತ್ಮಕತೆ ದರ ಶೇ. 0.35ಆಗಿದೆ. ಒಟ್ಟು ಚೇತರಿಕೆಗಳ ಸಂಖ್ಯೆ 4,24,54,546. ಸಾವಿನ ಪ್ರಕರಣಗಳ ಸಂಖ್ಯೆ 5,16,132.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭಾರತೀಯತನಕ್ಕೆ ಮೊದಲ ಆದ್ಯತೆ-ಅಶ್ವತ್ಥನಾರಾಯಣ

0

ಬಿಜೆಪಿ ಯಾರೊಬ್ಬ ನಾಯಕರನ್ನು ಆಧರಿಸಿದ ಪಕ್ಷ ಅಲ್ಲ, ಇದು ಜನರ ಪಕ್ಷ. ನಾವು ನಮ್ಮ ಪಕ್ಷವನ್ನು ಹೇಗೆ ಕಟ್ಟಬೇಕು ಎಂದು ಯೋಚಿಸುತ್ತೇವೆ. ಜನರ ಭಾವನೆ, ಭಾರತೀಯತನಕ್ಕೆ ಮೊದಲು ಆದ್ಯತೆ ಕೊಡುತ್ತೇವೆ ಎಂದು ಸಚಿವ ಸಿ.ಎನ್. ಅಶ್ವತ್ ನಾರಾಯಣ್ ಅವರು ಹೇಳಿದ್ದಾರೆ.

ಇನ್ನು ಹಿಜಾಬ್ ವಿಚಾರದಲ್ಲಿ ನ್ಯಾಯಾಲಯವು ತಮಗೆ ಬೇಕಾದಂತೆ ತೀರ್ಪು ಕೊಡಬೇಕಿತ್ತು ಎನ್ನುವ ಮೊಂಡು ವಾದ ಸರಿಯಲ್ಲ. ಇಂತಹ ಬೆದರಿಕೆಗಳಿಗೆಲ್ಲ ಸರ್ಕಾರ ಮಣಿಯುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಪ್ರತಿಕ್ರಿಯಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನಗುವೆಂಬ ಗಿಫ್ಟ್!

0

ನಗು ಎಂಬುವುದು ನಮಗೆ ದೇವರು ನೀಡಿರುವಂತಹ ಗಿಫ್ಟ್. ನಮ್ಮ ಸಂತೋಷವನ್ನು ವ್ಯಕ್ತಪಡಿಸುವ ಒಂದು ಪರಿ. ನಗು ಎಂಬುದು ಸಕಲ ರೋಗಗಳಿಗೂ ಮದ್ದು ಇದ್ದ ಹಾಗೆ.

ನಾವು ಮೊದಲು ಯಾರಾದರೂ ವ್ಯಕ್ತಿಗಳು ಭೇಟಿ ಮಾಡಿದಾಗ, ಮಾತಿಗು ಮಂಚೆ ಮುಖದಲ್ಲಿ ಮೂಡುವ ನಗು ಅವರನ್ನು ನಮ್ಮತ್ತ ಆಕರ್ಷಿಸಲು ಸಹಾಯಕವಾಗುತ್ತದೆ. ಎದುರಿಗಿರುವ ವ್ಯಕ್ತಿಯೊಡನೆ ಒಂದೊಳ್ಳೆ ಭಾವನೆ ಮೂಡಲು ನಗು ನಮಗೆ ಸಹಾಯಕವಾಗಿದೆ.

ಮನುಷ್ಯ ಸದಾ ಹಸನ್ಮುಖಿಯಾಗಿ ರುವುದನ್ನು ಅನೇಕ ಉಪಯೋಗಗಳು ಆತನಿಗೆ ಲಭಿಸುತ್ತದೆ. ಮನುಷ್ಯ ದಿನದ ಹೆಚ್ಚು ಸಮಯ ಸಂತೋಷವಾಗಿ ನಗು ನಗುತ್ತಾ ಇದ್ದರೆ ಆತನ ಒತ್ತಡಗಳು ದೂರ ಮಾಡಲು ಸಹಾಯಕವಾಗುತ್ತದೆ.

ಮೇಲೆ ತಿಳಿಸಿರುವಂತೆ ನಗು ಎಂಬುದು ಸಕಲ ರೋಗಗಳನ್ನು ನಿವಾರಿಸುವ ಶಕ್ತಿ ಹೊಂದಿರುವ ಒಂದು ಔಷಧಿಯಾಗಿದೆ.

ಹಾಸ್ಯಪ್ರಜ್ಞೆ ಜೊತೆಗಿರುವಂತಹ ನಗು ಹೃದಯಾಘಾತವನ್ನು ದೂರ ಮಾಡಲು ಸಹಾಯಕವಾಗುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಇದರ ಜೊತೆಗೆ ಮಾನಸಿಕ ಒತ್ತಡಗಳನ್ನು ದೂರಮಾಡಲು ನಗು ಸಹಕಾರಿಯಾಗಿದೆ.

ನಗು ಎಂಬುದು ಒಂದು ಸಂದರ್ಭದಲ್ಲಿ ಹಾಸ್ಯಕ್ಕೆ, ಇನ್ನೊಂದು ಸಂದರ್ಭದಲ್ಲಿ ಸಂತೋಷಕ್ಕೆ ಇನ್ನು ಕೆಲವೊಮ್ಮೆ ವ್ಯಂಗ್ಯಕ್ಕೆ ಮೆದುಳು ನೀಡುವಂತಹ ಪ್ರತಿಕ್ರಿಯೆಯಾಗಿದೆ. ಮನುಷ್ಯ ನಗುವಾಗ ದೇಹದ ಭಂಗಿಯಲ್ಲಿ ಬದಲಾವಣೆಗಳಾಗುತ್ತದೆ. ನಗುವಿನಿಂದ ಶಬ್ದ ಉತ್ಪತ್ತಿಯಾಗುತ್ತದೆ. ಹೆಚ್ಚಿನ ನಗುವಿಗೆ ಕೆಲವೊಮ್ಮೆ ಕಣ್ಣಿನಲ್ಲಿ ನೀರು ಉಕ್ಕಿ ಬರುತ್ತದೆ.ಇವುಗಳು ಮನುಷ್ಯನಲ್ಲಿ ನಗೆ ಮೂಡಿದಾಗ, ನಮ್ಮಲ್ಲಿ ಮೂಡುವ ಪ್ರತಿಕ್ರಿಯೆಗಳಾಗಿವೆ.

ನಗುವು ಸಹಜದ ಧರ್ಮ …
ನಗಿಸುವುದು ಪರಧರ್ಮ…
ನಗುವ ಕೇಳುತ, ನಗುವುದತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ

ಈ ರೀತಿ ನಗುವಿನ ಬಗ್ಗೆ ಡಿವಿಜಿಯವರು ವಿವರಿಸಿದ್ದಾರೆ. ಅಂದರೆ ನಗುವೆಂಬುದು ಸಹಜವಾಗಿರುವ ಪ್ರತಿಕ್ರಿಯೆ. ನಾವು ನಗುತಾ, ನಮ್ಮವರನ್ನೂ ನಗಿಸುತ್ತ ಬಾಳಬೇಕು…

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಏಷಿಯನ್ ಯೂತ್ ಜ್ಯೂ.ಬಾಕ್ಸಿಂಗ್ ಭಾರತಕ್ಕೆ 39 ಪದಕಗಳು

0

ವಿಶ್ವನಾಥ್ ಸುರೇಶ್ ಮತ್ತು ವಂಶ ಜ್ ಅವರು ಚಿನ್ನದ ಪದಕ ಗಳಿಗೆ ಮುತ್ತಿಟ್ಟಿದ್ದಾರೆ. ಇದರೊಂದಿಗೆ ಏಷಿಯನ್ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಚಾಂಪಿಯನ್ ಷಿಪ್ ಅನ್ನು ಭಾರತ ತಂಡವು ಅಮೋಘ 39 ಪದಕಗಳೊಂದಿಗೆ ಕೊನೆಗೊಳಿಸಿತು.

ಜೋರ್ಡನ್ ನ ಅಮ್ಮಾನ್ ನಲ್ಲಿ ನಡೆದ ಚಾಂಪಿಯನ್ಶಿಪ್ನಲ್ಲಿ ಭಾರತ ಬಾಕ್ಸರ್ ಗಳಿಗೆ 15 ಚಿನ್ನ. 10 ಬೆಳ್ಳಿ ಮತ್ತು 14 ಕಂಚಿನ ಪದಕಗಳು ಲಭಿಸಿವೆ. ಯೂತ್ ವಿಭಾಗದಲ್ಲಿ 7 ಚಿನ್ನ,3 ಬೆಳ್ಳಿ ಹಾಗೂ 8 ಕಂಚು ಭಾರತದ ಜೂನಿಯರ್ ವಿಭಾಗದಲ್ಲಿ 8 ಚಿನ್ನ, 7 ಬೆಳ್ಳಿ ಹಾಗೂ 6 ಕಂಚಿನ ಪದಕಗಳು ಲಭಿಸಿವೆ.

ಪುರುಷರ ಯೂತ್ ವಿಭಾಗದ 48 ಕೆಜಿ ವಿಭಾಗದಲ್ಲಿ ವಿಶ್ವನಾಥ್ ಹಾಗೂ 63.5 ಕೆಜಿ ವಿಭಾಗದಲ್ಲಿ ವಂಶಜ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಚೆನ್ನೈ ನ ವಿಶ್ವನಾಥ್ ಅವರು ಸೋಮವಾರ ರಾತ್ರಿ ನಡೆದ ಫೈನಲ್ ಬೌಟ್ ನಲ್ಲಿ 5-0 ಯಿಂದ ಕಿರ್ಗಿಸ್ತಾನ ದ ಏರ್ಗೆ ಶೋವ್ ಬೆಕ್ಜತ್ ಅವರನ್ನು ಪರಾಭವಗೊಳಿಸಿ ದ್ದಾರೆ.

ವಂಶಜ್ ಅವರು ಚಿನ್ನದ ಪದಕ ಸುತ್ತಿನಲ್ಲಿ 4-1 ರಿಂದ ಉಜ್ಬೇಕಿಸ್ತಾನದ ಜಾವೋಕಿರ್ ಉಮ್ಮತಾಲಿಯೇವ್ ಎದುರು ಗೆದ್ದುಕೊಂಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ತಾಳ್ಮೆ… ಜಿಂದಾಬಾದ್!

0

ಬದುಕಿನಲ್ಲಿ ಎಲ್ಲರೂ ಸಹ ಒಂದಿಲ್ಲೊಂದು ಸಂಕಟ , ನೋವನ್ನು ಅನುಭವಿಸಿಯೇ ಇರುತ್ತಾರೆ. ಯಾವುದೇ ಕಷ್ಟ, ಅಥವಾ ಸಮಸ್ಯೆ ಎದುರಾದಾಗ ದಿಕ್ಕೇ ತೋಚದಂತಾಗುವುದು ಸಹಜ.
ಮನುಷ್ಯ ಕಷ್ಟಗಳು ಬಂದಾಗ ನಿರುತ್ಸಾಹಿ ನಿರಾಶಾವಾದಿಯಾಗಿ ತಮ್ಮ ಕಷ್ಟಕ್ಕೆ ಇತರರೇ ಕಾರಣ ಎಂದು ಬೇರೆಯವರನ್ನು ದೂಷಿಸಲು ಮುಂದಾಗುತ್ತಾರೆ.‌
ಇನ್ನೂ ಕೆಲವರು ಜೀವನದಿಂದ ಜಿಗುಪ್ಸೆಗೊಂಡು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಕ್ಕೆ ಬಂದು ಬಿಡುತ್ತಾರೆ.
ಭೂಮಿಯ ಮೇಲೆ ಸಮಸ್ಯೆಗಳು, ಕಷ್ಟಗಳು, ನಿರಾಶೆಗಳು ಇಲ್ಲದ ಮನುಷ್ಯರಿರಲು ಸಾಧ್ಯವೇ ಇಲ್ಲ.

ಹಾಗಾಗಿಯೇ ತಿಳಿದವರು ಹೇಳ್ತಾರೆ, ಕಷ್ಟ ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತಾ ಎಂದು. ಸುಖವಾಗಲಿ , ದುಃಖವಾಗಲಿ ಮನುಷ್ಯನ ಜೀವನದಲ್ಲಿ ಎಂದಿಗೂ ಶಾಶ್ವತವಲ್ಲ. ನಮಗೆ ಕೆಟ್ಟ ಹಣ್ಣುಗಳನ್ನು ತಿಂದಾಗಲೇ ಒಳ್ಳೆಯ ಹೆಣ್ಣಿನ ಬೆಲೆ ಅಥವಾ ರುಚಿ ಇಷ್ಟವಾಗುತ್ತೆ. ಅದೇ ರೀತಿ ಜೀವನದಲ್ಲಿ ಕಷ್ಟಗಳು ನಿರಾಶೆ, ಹತಾಶೆ ಎದುರಾದಾಗಲೇ ಸುಖದ, ಸಂತೋಷದ ಅರಿವಾಗುತ್ತದೆ.

ದುಃಖ ಕಷ್ಟಗಳನ್ನೂ ನಾವು ಇಷ್ಟ ಪಡದೇ ಇದ್ದರೂ ಅದು ಬಂದೇ ಬರುತ್ತವೆ. ಕಷ್ಟಗಳು ಎದುರಾದಾಗ ಅವುಗಳನ್ನು ಎದುರಿಸಿ ಹತಾಶರಾಗದೇ ಅದಕ್ಕೆ ಕಾರಣವೇನು ಎಂದು ಕಂಡುಹಿಡಿದು ಧೈರ್ಯಗೆಡದಂತೆ ಎದುರಿಸುವ ತಾಳ್ಮೆ ಬಹುಮುಖ್ಯ.
ತಾಳ್ಮೆ ಪ್ರೀತಿಯ ಹೊಸ್ತಿಲು ಎಂದರೆ ತಪ್ಪಾಗಲಾರದು. ಜೀವನ ಪ್ರೀತಿ, ಸುಖ-ದುಃಖ, ನೋವು-ನಲಿವುಗಳೊಂದಿಗೆ ತಾಳ್ಮೆಯೂ ಜೀವನದ ಬಹುಮುಖ್ಯ ಭಾಗವಾಗಿದೆ.

ಹಾಗಾಗಿಯೇ ಹಿರಿಯರು ತಾಳಿದವನು ಬಾಳಿಯಾನು ಎನ್ನುತ್ತಾರೆ. ಸಿಟ್ಟು ಬಂದಾಗ ಆ ಹೊತ್ತಿಗೆ ತಾಳ್ಮೆ ಎಷ್ಟೋ ವರ್ಷಗಳ ಸಂಬಂಧವನ್ನ ಗಟ್ಟಿಮಾಡಲು ತಳಪಾಯ.
ಸಿಟ್ಟು ಬಂದಾಗ ಧೃತಿಗೆಡದೆ ಸಮಾಧಾನದಿಂದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದು ಒಳ್ಳೆಯದು. ಸಿಟ್ಟಿನಿಂದ ಯಾವ ಪ್ರಯೋಜನವೂ ಇಲ್ಲ. ಸಿ ಟ್ಟು ಎನ್ನುವುದು ಇತರರು ಮಾಡುವ ತಪ್ಪಿಗೆ ನಮಗೆ ನಾವೇ ಕೊಟ್ಟುಕೊಳ್ಳುವ ದೊಡ್ಡ ಶಿಕ್ಷೆ ಎನ್ನಬಹುದೇನೋ…

ಕೋಪದಲ್ಲಿ ಕುಯ್ದುಕೊಂಡ ಮೂಗು ಶಾಂತವಾದ ಮೇಲೆ ಬಂದಿತೇ ಎನ್ನುವ ಮಾತು ಎಲ್ಲರಿಗೂ ತಿಳಿದೇ ಇದೆ. ಆದರೆ ಯಾರು ಪಾಲಿಸುವವರಿಲ್ಲ.
ತಾಳ್ಮೆಯ ಪ್ರತಿರೂಪವೇ ಪ್ರೀತಿ. ಪ್ರೀತಿ ಇದ್ದ ಕಡೆ ತಾಳ್ಮೆಯು ಸಹಜವಾಗಿಯೇ ಬಂದು ಬಿಡುತ್ತದೆ. ವಿನಾಕಾರಣ ಸಿಟ್ಟಿಗೇಳುವ ಬದಲು ತಾಳ್ಮೆಯಿಂದ ತೆಗೆದುಕೊಂಡ ನಿರ್ಧಾರ ಹಲವಾರು ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಅದಕ್ಕಾಗಿ ಪ್ರಸಿದ್ಧ ದಾಸರು ಗಳಲ್ಲಿ ಒಬ್ಬರಾದ ಕನಕದಾಸರು ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಂದು ಹೇಳಿದ್ದಾರೆ.