Sunday, February 22, 2026
Sunday, February 22, 2026
Home Blog Page 1665

ಅಂತಾರಾಷ್ಟ್ರೀಯ ಕೋರ್ಟ್ ಗೂ ಕ್ಯಾರೆ ಅನ್ನದೆ ದಾಳಿ ಮುಂದುವರೆಸಿದ ರಷ್ಯ

0

ಕೂಡಲೇ ಯುದ್ಧ ನಿಲ್ಲಿಸಿ ಎಂಬ ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿರುವ ರಷ್ಯಾ, ಗುರುವಾರ ಉಕ್ರೇನ್‌ ಮೇಲಿನ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದೆ.

ಗುರುವಾರ ಬೆಳ್ಳಂಬೆಳಗ್ಗೆಯೇ ಕೀವ್‌ನ ಕಟ್ಟಡಗಳನ್ನು ರಷ್ಯಾ ರಾಕೆಟ್‌ಗಳು ಅಪ್ಪಳಿಸಿವೆ. 16 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿದ್ದ 30 ಮಂದಿಯನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

ಮೆರೆಫಾದಲ್ಲಿ ಶಾಲೆ ಮತ್ತು ಸಮುದಾಯ ಕೇಂದ್ರವೊಂದನ್ನು ಪುಟಿನ್ ಸೇನೆ ನಾಶಗೊಳಿಸಿದೆ. ಖಾರ್ಕಿವ್‌ನಲ್ಲಿ ಭಾರೀ ಸ್ಫೋಟ, ಗುಂಡಿನ ಕಾಳಗ ನಡೆದಿದೆ. ಚೆರ್ನಿಹಿವ್‌ನಲ್ಲಿ ರಷ್ಯಾ ವೈಮಾನಿಕ ದಾಳಿಯಲ್ಲಿ 53 ನಾಗರಿಕರು ಸಾವಿಗೀಡಾಗಿದ್ದಾರೆ.

ಈ ಪೈಕಿ ಅಮೆರಿಕನ್‌ ನಾಗರಿಕರೂ ಇರುವುದಾಗಿ ಮೂಲಗಳು ತಿಳಿಸಿವೆ.
ರಷ್ಯಾದ ಉದ್ಧಟತನದ ವಿರುದ್ಧ ಕಿಡಿಕಾರಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, “ಪುಟಿನ್ ಒಬ್ಬ ಯುದ್ಧಾಪರಾಧಿ’ ಎಂದು ಬಣ್ಣಿಸಿದ್ದಾರೆ.

ಬೈಡೆನ್‌ ಹೇಳಿಕೆಗೆ ಆಕ್ರೋಶ ಹೊರ ಹಾಕಿರುವ ರಷ್ಯಾ, ದೇಶವೊಂದರ ನಾಯಕ ಈ ರೀತಿಯ ಹೇಳಿಕೆ ನೀಡುವುದು ಅಕ್ಷಮ್ಯ ಎಂದಿದೆ. ಇದಕ್ಕೆ ಪ್ರತಿ ಕ್ರಿಯಿಸಿರುವ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್‌ ಸಾಕಿ, ಯುದ್ಧಭೂಮಿಯಲ್ಲಿನ ಮನಕಲಕುವ ದೃಶ್ಯಗಳೇ ಎಲ್ಲ ಕಥೆಗಳನ್ನೂ ಹೇಳುತ್ತಿವೆ. ಆ ಭೀಕರತೆಯನ್ನು ನೋಡಿ ನೊಂದು ಬೈಡೆನ್‌ ಈ ಮಾತುಗಳನ್ನಾಡಿದ್ದಾರೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ನ್ಯಾಟೋ ಸದಸ್ಯ ರಾಷ್ಟ್ರವಾದ ಪೋಲೆಂಡ್‌ಗೆ ಕ್ಷಿಪಣಿ ರಕ್ಷಣ ವ್ಯವಸ್ಥೆಯನ್ನು ರವಾನಿಸುವುದಾಗಿ ಯುಕೆ ಘೋಷಿಸಿದೆ.

ಉಕ್ರೇನ್‌ ಜತೆ ಪೋಲೆಂಡ್‌ ಗಡಿ ಹಂಚಿಕೊಂಡಿದ್ದು, ರಷ್ಯಾದ ಆಕ್ರಮಣದಿಂದ ಪೋಲೆಂಡ್‌ ಅನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ. ರಷ್ಯಾ ಆಕ್ರಮಣ ಖಂಡಿಸುವಂತೆ ಭಾರತದ ನಾಯಕರನ್ನು ಮನವೊಲಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅಮೆರಿಕ ಹೇಳಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮತ್ತೆ ನೆರವು ನೀಡಿ ಉಕ್ರೇನ್ ಬೆಂಬಲಿಸಿದ ಅಮೆರಿಕ

0

ರಷ್ಯಾವು ಯುರೋಪಿನಾದ್ಯಂತ ಶೀತಲ ಸಮರದ ಹೊಸ ಗೋಡೆ ನಿರ್ಮಿಸುತ್ತಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡೊಮಿರ್‌ ಝೆಲೆನ್‌ಸ್ಕಿ ಆರೋಪಿಸಿದ್ದಾರೆ.

ರಷ್ಯಾದ ಶೆಲ್ ದಾಳಿಯಲ್ಲಿ 21 ನಾಗರಿಕರು ಹತರಾದ ಬೆನ್ನಲ್ಲೇ ಝೆಲೆನ್‌ಸ್ಕಿ ಈ ಹೇಳಿಕೆ ನೀಡಿದ್ದಾರೆ.
ಮರಿಯುಪೋಲ್‌ನಲ್ಲಿ ಸುಮಾರು 1000 ಜನರಿದ್ದ ರಂಗಮಂದಿರವೊಂದರ ಮೇಲೆ ರಷ್ಯಾ ಬುಧವಾರ ರಾತ್ರಿ ಬಾಂಬ್‌ ದಾಳಿ ನಡೆಸಿತ್ತು.

ಇದರಲ್ಲಿ ಮೃತಪಟ್ಟವರ ಸಂಖ್ಯೆ ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ ಈ ದಾಳಿಯು ರಷ್ಯಾ ಭಯೋತ್ಪಾದಕ ರಾಷ್ಟ್ರ ಎಂಬುದನ್ನು ಸಾಬೀತುಪಡಿಸಿದೆ ಎಂದರು.

ಬುಧವಾರ ಅಮೆರಿಕದ ಸೆನೆಟ್‌, ಜನ ಪ್ರತಿನಿಧಿಗಳ ಸಭೆ ಉದ್ದೇಶಿಸಿ ವರ್ಚುವಲ್ ವೇದಿಕೆಯಲ್ಲಿ ಮಾತನಾಡಿದ್ದ ಝೆಲೆನ್‌ಸ್ಕಿ, ಗುರುವಾರ ಜರ್ಮನಿಯ ಸಂಸತ್ ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ರಷ್ಯಾ ದಾಳಿ ಹಾಗೂ ಶೀತಲ ಸಮರ ವಿಚಾರ ಪ್ರಸ್ತಾಪಿಸಿದ್ದಾರೆ.
ಝೆಲೆನ್‌ಸ್ಕಿ ಅವರು ಅಮೆರಿಕದ ಸೆನೆಟ್‌, ಜನ ಪ್ರತಿನಿಧಿಗಳ ಸಭೆ ಉದ್ದೇಶಿಸಿ ಮಾತನಾಡಿದ ಬೆನ್ನಲ್ಲೇ ಉಕ್ರೇನ್‌ಗೆ 800 ದಶಲಕ್ಷ ಡಾಲರ್‌ ಮೊತ್ತದ ಬೃಹತ್‌ ಮಿಲಿಟರಿ ನೆರವಿನ ಮತ್ತೊಂದು ಪ್ಯಾಕೇಜ್‌ಗೆ ಅಧ್ಯಕ್ಷ ಜೋ ಬೈಡನ್ ಸಹಿಹಾಕಿದ್ದಾರೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಯುದ್ಧದಲ್ಲಿ ರಷ್ಯಕ್ಕಾಗಿರುವ ಹಿನ್ನಡೆ ಬಗ್ಗೆ ಅಮೆರಿಕಮಾಹಿತಿ

0

ರಷ್ಯಾ ಹಾಗೂ ಉಕ್ರೇನ್ ಬಿಕ್ಕಟ್ಟು 23ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ದಾಳಿ ಮುಂದುವರೆಸಿದ್ದು, ಶಾಂತಿ ಮಾತುಕತೆಗೆ ಸಿದ್ಧ ಎಂದೂ ಹೇಳಿಕೊಂಡಿದೆ. ರಷ್ಯಾ ದಾಳಿಯನ್ನು ವಿರೋಧಿಸುವಂತೆ ಅಮೇರಿಕಾದ ಭಾರತ ರಾಯಭಾರಿಗೆ ಅಲ್ಲಿನ ಸಂಸದರು ಒತ್ತಾಯಿಸಿದ್ದಾರೆ.

ರಷ್ಯಾದ ಆಕ್ರಮಣದ ಸಾಮರ್ಥ್ಯ ಕುಸಿತವಾಗಿದೆ ಎಂದು ಬ್ರಿಟನ್ ಹೇಳಿದೆ. ಗುಪ್ತಚರ ಮೂಲಗಳನ್ನು ಆಧರಿಸಿ ಮಾಹಿತಿ ನೀಡಿರುವ ಅದು, ರಷ್ಯಾ ಸೇನೆಗೆ ಗಾಳಿಯನ್ನು ಎದುರಿಸುವಲ್ಲಿ ಸಮಸ್ಯೆ ಎದುರಿಸುತ್ತಿದೆ.ಹ ಸೀಮಿತ ಸೇತುವೆ ಅನುಕೂಲಗಳು ಸೇನೆಯ ಮುಂದುವರಿಕೆಗೆ ಅಡ್ಡಗಾಲಾಗಿದೆ ಎಂದು ತಿಳಿಸಿದೆ.
ಇದಲ್ಲದೇ ಆಹಾರ ಹಾಗೂ ಇಂಧನದಂತಹ ಮೂಲಭೂತ ಅಗತ್ಯಗಳೂ ರಷ್ಯಾ ಸೇನೆಗೆ ಸವಾಲಾಗಿದೆ ಎನ್ನಲಾಗಿದೆ. ಇದರ ಹೊರತಾಗಿಯೂ ರಷ್ಯಾ ತನ್ನ ಆಕ್ರಮಣ ಮುಂದುವರೆಸಿದೆ. ಉಕ್ರೇನ್​ನಲ್ಲಿ ಅದರಲ್ಲೂ ಬಂದರು ನಗರಿ ಮರಿಯುಪೋಲ್​ನಲ್ಲಿಜನರು ಬಹಳ ಭಯದಿಂದ, ಬಾಂಬ್​ಗಳ ಹೊಡೆತದ ನಡುವೆ ಬದುಕುತ್ತಿದ್ದಾರೆ. ಕಳೆದ 20 ದಿನದಲ್ಲಿ ರಷ್ಯಾದ 7 ಸಾವಿರ ಸೈನಿಕರು ಮೃತಪಟ್ಟಿದ್ದಾರೆ ಎಂದು ಅಮೇರಿಕಾ ಹೇಳಿದೆ.
ಉಕ್ರೇನ್ ದೇಶದಲ್ಲಿ ರಷ್ಯಾ ಸೇನೆ ಯುದ್ಧ ಮುಂದುವರೆಸಿದ್ದು, 24 ಗಂಟೆಯಲ್ಲಿ ಚೆರ್ನಿಹಿವ್ ನಗರದಲ್ಲಿ 53 ಜನರು ಮರಣವನ್ನಪ್ಪಿದ್ದಾರೆ.

ಯುದ್ಧದಲ್ಲಿ ಈವರೆಗೆ ಉಕ್ರೇನ್‌ನ 108 ಮಕ್ಕಳು ಮೃತಪಟ್ಟಿದ್ದಾರೆ. ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ರಷ್ಯಾ ದಾಳಿ ಹಾಗೂ ಉಕ್ರೇನ್ ಪ್ರತಿದಾಳಿ ಮುಂದಯವರೆದಿದೆ. ಖಾರ್ಕಿವ್ ಒಬ್ಲಾಸ್ಟ್ ರಷ್ಯಾ ದಾಳಿಯಲ್ಲಿ 21 ಜನರು ಸಾವಿಗೀಡಾಗಿದ್ದು, 25 ಜನರು ಗಾಯಗೊಂಡಿದ್ದಾರೆ. ಎಂದು ತಿಳಿದುಬಂದಿದೆ.

ಮರಿಯುಪೋಲ್​ನಲ್ಲಿ ರಷ್ಯಾದ ದಾಳಿಗೆ ರಂಗಮಂದಿರ ನಾಶವಾಗಿದೆ. ಈ ದಾಳಿಯಲ್ಲಿ 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ರಂಗಮಂದಿರಗಳು ಮಾನವ ಪರಂಪರೆಗೆ ಸೇರಿದವುಗಳು ಎಂದಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅದನ್ನು ಮರುನಿರ್ಮಾಣ ಮಾಡಲು ಸಹಾಯ ಮಾಡುವುದಾಗಿ ತಿಳಿಸಿದ ಇಟಲಿಗೆ ಧನ್ಯವಾದ ಹೇಳಿದ್ದಾರೆ.

ಉಕ್ರೇನ್ ಮೇಲೆ ದಾಳಿ ಮುಂದುವರಿಸಿದ ಹಿನ್ನೆಲೆಯಲ್ಲಿ ರಷ್ಯಾಗೆ ಜಪಾನ್ ದೇಶವು ಮತ್ತಷ್ಟು ನಿರ್ಬಂಧ ವಿಧಿಸಿದೆ. ರಷ್ಯಾದ 15 ಅಧಿಕಾರಿಗಳು ಹಾಗೂ 9 ಸಂಸ್ಥೆಗಳಿಗೆ ನಿರ್ಬಂಧ ಹೇರಿ ಜಪಾನ್ ಆದೇಶಿಸಿದೆ ಎಂದು ತಿಳಿದುಬಂದಿದೆ.

ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನ ಭಾರತ ಖಂಡಿಸಬೇಕು ಎಂದು ಅಮೆರಿಕ ಸಂಸದರಿಂದ ಭಾರತದ ರಾಯಭಾರಿಗೆ ಒತ್ತಾಯಿಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪಂಜಾಬ್ ನಲ್ಲಿ ಲಂಚ ಕೇಳಿದರೆ ಕೊಡಿ ಆ ಮೇಲೆ ಅದರ ಪರಿಣಾಮ ನೋಡಿ-ಮಾನ್

0

ಯಾರಾದ್ರೂ ನಿಮ್ಮ ಹತ್ತಿರ ಲಂಚ ಕೇಳಿದಾಗ ಇಲ್ಲ ಎಂದು ಹೇಳಬೇಡಿ ಎಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಸಾರ್ವಜನಿಕರಿಗೆ ಒಂದು ಉಪಾಯ ಹೇಳಿದ್ದಾರೆ.

ಪಂಜಾಬ್​​ನಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ನೂತನ ಸಿಎಂ ಭಗವಂತ್ ಮಾನ್​ ಮಹತ್ವದ ನಿರ್ಧಾರ ಕೈಗೊಂಡಿದ್ದು, ಭ್ರಷ್ಟಾಚಾರ ತಡೆ ಸಂಬಂಧ ಸಹಾಯವಾಣಿ ಆರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ.

ಈ ವಿಚಾರವಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ಕೂಡಾ ಮಾತನಾಡಿದರು.

ಲಂಚ ಕೇಳುವರಿಗೆ ಇಲ್ಲ ಎನ್ನದೆ ಹಣ ನೀಡಿ, ಅವರಿಗೆ ಹಣ ನೀಡಿದ ಸಂಭಾಷಣೆ ಅಥವಾ ಅದರ ರೆಕಾರ್ಡ್ ಮಾಡಿಕೊಳ್ಳಿ. ಬಳಿಕ, ಆಡಿಯೋ/ವಿಡಿಯೋ ವನ್ನು ನೇರವಾಗಿ ಸಿಎಂ ಅವರ ವಾಟ್ಸಾಪ್​ ಸಂಖ್ಯೆಗೆ ರವಾನಿಸಿ ಎಂದಿದ್ದಾರೆ.

ಭ್ರಷ್ಟರ ವಿರುದ್ಧ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪಂಜಾಬ್​ ಜನತೆಗೆ ನಾವು ಭರವಸೆ ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಪಂಜಾಬ್ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗಿನಿಂದಲೂ ಭಗವಂತ್ ಮಾನ್ ಜನಸ್ನೇಹಿ ಹೊಸ ಹೊಸ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಮಾರ್ಚ್​​ 23ರಂದು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್​​ ಸಿಂಗ್​ ‘ಶಹೀದ್ ದಿವಸ್’​​ ಅಂಗವಾಗಿ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಪ್ರಾರಂಭಿಸುವುದಾಗಿ ಮಾನ್​ ಘೋಷಣೆ ಮಾಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆ- ಸಚಿವ ನಾಗೇಶ್

0

ರಾಜ್ಯದಲ್ಲಿ ಹೋಬಳಿಗೊಂದು ಮೂಲ ಸೌಕರ್ಯವಿರುವ ಶಾಲೆಗಳನ್ನು ಮಾದರಿ ಶಾಲೆಗಳಾಗಿ ಉನ್ನತೀಕರಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಚಿವರು, ಹೋಬಳಿ ಮಟ್ಟದಲ್ಲಿ ಮೂಲ ಸೌಕರ್ಯವಿರುವ ಶಾಲೆಗಳನ್ನು ಮಾದರಿ ಶಾಲೆಗಳಾಗಿ ಉನ್ನತೀಕರಿಸಲಾಗುವುದು.
ಹಣಕಾಸಿನ ಲಭ್ಯತೆಯ ನಂತರ ಅವುಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸಲಾಗುವುದು ಎಂದರು.

2019-20ರಲ್ಲಿ 276 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗಿದೆ. 2022-23 ನೇ ಸಾಲಿನ ಅಯವ್ಯಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಮಟ್ಟವನ್ನು ಉತ್ತಮಪಡಿಸಲು ಮಾದರಿ ಶಾಲೆಗಳನ್ನಾಗಿ ಉನ್ನತೀಕರಿಸಲು ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ವಿದೇಶಿ ಶಿಕ್ಷಣದಲ್ಲಿ ಅಧ್ಯಯನ & ಇಂಟರ್ನ್ ಶಿಪ್ ಮಿಳಿತ ಸೌಲಭ್ಯ ಚರ್ಚೆ- ಅಶ್ವತ್ಥ ನಾರಾಯಣ

0

ಪ್ರಸ್ತುತ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಇರುವ ಟ್ವಿನ್ನಿಂಗ್ ಡಿಗ್ರಿ ಯೋಜನೆಯನ್ನು ಪದವಿ, ಸ್ನಾತಕೋತ್ತರ ಪದವಿ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ವಿಸ್ತರಿಸಲು ಅಮೆರಿಕ ವಿವಿಗಳು ಹಾಗೂ ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಚರ್ಚೆ ನಡೆಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಅಮೆರಿಕದ ಪೆನ್ಸಿಲ್ವೇನಿಯಾ ರಾಯಭಾರಿ ಕನ್ನಿಕಾ ಚೌಧರಿ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್ ಅವರು ಪಾಲ್ಗೊಂಡಿದ್ದರು.

ಈ ಬಗ್ಗೆ ಮಾಹಿತಿ ನೀಡಿದ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು, ಟ್ವಿನ್ನಿಂಗ್ ಕಾರ್ಯಕ್ರಮದಡಿ ನಮ್ಮ ವಿದ್ಯಾರ್ಥಿಗಳನ್ನು ಪದವಿ, ಸ್ನಾತಕೋತ್ತರ ಪದವಿಯ ನಿರ್ದಿಷ್ಟ ವರ್ಷಗಳಲ್ಲಿ ಅಮೆರಿಕದ ವಿವಿಗಳಿಗೆ ನೇರವಾಗಿ ಕಳುಹಿಸಿಕೊಡಲಾಗುತ್ತದೆ. ವೇತನರಹಿತ ಇಂಟರ್ನ್ಶಿಪ್ ವ್ಯವಸ್ಥೆ ಇದರ ಭಾಗವಾಗಿರಲಿದೆ. ಇಷ್ಟವಿರುವವರು ಅಮೆರಿಕದಲ್ಲಿ ಉದ್ಯೋಗಿಗಳಾಗಿ ನೆಲೆಯೂರಲು ಅವಕಾಶವಿರುತ್ತದೆ ಎಂದು ಹೇಳಿದ್ದಾರೆ.

ಒಡಂಬಡಿಕೆ ಜಾರಿಗೆ ಬಂದರೆ 6 ವರ್ಷಗಳ ಟ್ವಿನ್ನಿಂಗ್ ಡಿಗ್ರಿ, ಐದು ವರ್ಷಗಳ ಇಂಟಿಗ್ರೇಟೆಡ್ ಸ್ನಾತಕೋತ್ತರ ಪದವಿ, ನಾಲ್ಕು ವರ್ಷಗಳ ಟ್ವಿನ್ನಿಂಗ್ ಸ್ನಾತಕೋತ್ತರ ಪದವಿ, ಎಂ.ಎಸ್. ನರ್ಸಿಂಗ್ ಮತ್ತು ಎಂ.ಎಸ್. ಬಯೋ ಕೆಮಿಸ್ಟ್ರಿ ಪದವಿ ಹೊಂದಲು ಅವಕಾಶ ಸಿಗಲಿದೆ. ಇಂತಹ ಒಡಂಬಡಿಕೆ ಗಳಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉನ್ನತ ಅಧ್ಯಯನಕ್ಕೆಅವಕಾಶ ಸಿಗಲಿದೆ. ಆಯ್ಕೆಯಾಗುವ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೇ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ತಗಲುವ ವೆಚ್ಚವನ್ನು ಸರ್ಕಾರವೇ ಸಂಪೂರ್ಣವಾಗಿ ಭರಿಸುವ ಅವಕಾಶವಿದೆ ಎಂದು ಸಿ.ಎನ್ ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರೈಲ್ವೆಯನ್ನ ಖಾಸಗೀಕರಣ ಮಾಡುವ ಯೋಜನೆಯಿಲ್ಲ- ಅಶ್ವಿನಿ ವೈಷ್ಣವ್

0

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯಾವುದೇ ಯೋಜನೆಯನ್ನು ಸರ್ಕಾರ ಹೊಂದಿಲ್ಲ. ಮತ್ತು ಈ ನಿಟ್ಟಿನಲ್ಲಿ ವಿರೋಧ ಪಕ್ಷಗಳ ವಿವಾದ ಕಾಲ್ಪನಿಕವಾಗಿದೆ ಎಂದು ಬುಧವಾರ ತಿಳಿಸಿದ್ದಾರೆ.

ಲೋಕಸಭೆಯಲ್ಲಿ 2022-23ನೇ ಸಾಲಿಗೆ ರೈಲ್ವೆ ಸಚಿವಾಲಯಕ್ಕೆ ಅನುದಾನದ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರಿಸಿದ ಸಚಿವರು, ಇತ್ತೀಚಿನ ತಪ್ಪು ತಿಳುವಳಿಕೆಯನ್ನು ರೈಲ್ವೆಯು ಸಹಾನುಭೂತಿಯ ರೀತಿಯಲ್ಲಿ ಪರಿಹರಿಸಿದೆ ಎಂದು ಹೇಳಿದರು. ನೇಮಕಾತಿಗೆ ಯಾವುದೇ ನಿಷೇಧವಿಲ್ಲ. 1.4 ಲಕ್ಷ ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎಂದು ಚರ್ಚೆಯ ವೇಳೆ ಸಂಸದರು ಪ್ರಸ್ತಾಪಿಸಿದ ವಿವಿಧ ವಿಷಯಗಳಿಗೆ ಪ್ರತಿಕ್ರಿಯಿಸಿದರು.

ಲೋಕಸಭೆ ನಂತರ ಧ್ವನಿ ಮತದೊಂದಿಗೆ ರೈಲ್ವೆಗೆ ಅನುದಾನದ ಬೇಡಿಕೆಗೆ ಒಪ್ಪಿಗೆ ನೀಡಿತು. ಚರ್ಚೆಯ ಸಂದರ್ಭದಲ್ಲಿ ಹಲವಾರು ಸಂಸದರ ಮುಖ್ಯಸ್ಥರು ರೈಲ್ವೆಯನ್ನು ಖಾಸಗೀಕರಣಗೊಳಿಸಲು ಸರ್ಕಾರಗಳು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದು ಕೇವಲ ಒಂದು ಕಾಲ್ಪನಿಕ ಅಂಶವಾಗಿದೆ. ಟ್ರ್ಯಾಕ್ ರೈಲ್ವೇಗೆ ಸೇರಿದ್ದು, ನಿಲ್ದಾಣಗಳು ರೈಲ್ವೇಗೆ ಸೇರಿದ್ದು, ಇಂಜಿನ್ ಗಳು ರೈಲ್ವೇಗೆ ಸೇರಿದ್ದು, ರೈಲುಗಳು ರೈಲ್ವೆಗೆ ಸೇರಿದ್ದು, ಸಿಗ್ನಲಿಂಗ್ ವ್ಯವಸ್ಥೆಗಳು ರೈಲ್ವೆಗೆ ಸೇರಿದೆ. ಖಾಸಗೀಕರಣದ ಉದ್ದೇಶವಿಲ್ಲ, ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯಾವುದೇ ಯೋಜನೆ ಇಲ್ಲ ಎಂದು ಸಚಿವರು ಹೇಳಿದರು.

ಸರಕು ಸಾಗಣೆ ಕಾರಿಡಾರ್ ಅನ್ನು ಖಾಸಗೀಕರಣಗೊಳಿಸುವ ಯಾವುದೇ ಯೋಜನೆ ಇಲ್ಲ ಎಂದು ಒತ್ತಿ ಹೇಳಿದರು. ರೈಲ್ವೆಯು ಸಾಮಾಜಿಕ ಜವಾಬ್ದಾರಿಗಳನ್ನು ಪೂರೈಸುವುದನ್ನು ಮುಂದುವರಿಸುತ್ತದೆ ಎಂದರು. ಪ್ರಯಾಣಿಕರ ದರದಲ್ಲಿ ಅರವತ್ತು ಸಾವಿರ ಕೋಟಿ ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ ಎಂದು ಅವರು ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯದ 20 ಜಿಲ್ಲೆಗಳಲ್ಲಿ ಎಸಿಬಿ ಹಠಾತ್ ದಾಳಿ

0

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಸಂಬಂಧಿಸಿದಂತೆ 20 ಜಿಲ್ಲೆಗಳಲ್ಲಿ ನಿನ್ನೆ ಏಕಕಾಲಕ್ಕೆ ಶೋಧ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ, 9.4 ಕೆಜಿ ಚಿನ್ನ,60.3 ಕೆಜಿ ಬೆಳ್ಳಿ, 82. 74 ಲಕ್ಷ ರುಪಾಯಿ ನಗದು ಸೇರಿದಂತೆ 50 ಕೋಟಿಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಪತ್ತೆ ಮಾಡಲಾಗಿದೆ.

ಆಪಾದಿತ ಅಧಿಕಾರಿಗಳು, ಅವರ ಸಂಬಂಧಿಗಳು, ಬೇನಾಮಿ ವೈವಾಟು ನಡೆಸುವವರ ಮನೆಗಳು, ಖಾಸಗಿ ವಾಣಿಜ್ಯ ಸಂಸ್ಥೆಗಳ ಕಚೇರಿಗಳು ಮತ್ತು ವಿವಿಧ ಸರ್ಕಾರಿ ಕಚೇರಿಗಳಲ್ಲಿ ಶೋಧ ನಡೆದಿದೆ. ಎಸಿಬಿ ಯ 300 ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಜ್ಯದ 77 ಸ್ಥಳಗಳಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ಶೋಧ ನಡೆಸಿದ್ದಾರೆ. ಕೆಲವೆಡೆ ತಡರಾತ್ರಿಯೂ ಕಾರ್ಯಚರಣೆ ಮುಂದುವರೆದಿತ್ತು.

ವಿಜಯಪುರ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥ ಸಾ ಮಾಲಜಿ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮತ್ತು ವಿವಿಧ ಹೂಡಿಕೆ ರೂಪದಲ್ಲಿ 9.46 ಕೋಟಿ ರೂಪಾಯಿ ಹೊಂದಿರುವುದು ಪತ್ತೆಯಾಗಿದೆ. ಇದಲ್ಲದೆ ಮ್ಯುಚುವಲ್ ಫಂಡ್ ನಲ್ಲಿ 1.31ಕೋಟಿ ಹೂಡಿಕೆ ಮಾಡಿದ್ದಾರೆ. 41ಎಕರೆ 4 ಗುಂಟೆ ಕೃಷಿ ಜಮೀನು, ಒಂದು ಮನೆ,8 ನಿವೇಶನ ಗಳನ್ನೂ ಎಸಿಬಿ ಪತ್ತೆಹಚ್ಚಿದೆ.

ಕೆ ಎ ಎಸ್ ಅಧಿಕಾರಿಯಾಗಿರುವ ರಾಮನಗರ ಉಪ ವಿಭಾಗಾಧಿಕಾರಿ ಸಿ.ಮಂಜುನಾಥ್ ಬಳಿ ಬೆಂಗಳೂರಿನಲ್ಲಿ 4 ಅಂತಸ್ತಿನ 1 ಮನೆ,2ನಿವೇಶನ, ಬ್ಯಾಟ ರಾಯನಪುರದಲ್ಲಿ ವಾಣಿಜ್ಯ ಉದ್ದೇಶದ 7 ಬ್ಯಾಡ್ಮಿಂಟನ್ ಕೋರ್ಟ್ ಗಳಿರುವ ಬೃಹತ್ ಸ್ಥಿರಾಸ್ತಿ, ವಿವಿಧ ಕಂಪನಿಯ 5 ಕಾರುಗಳು ಪತ್ತೆಯಾಗಿವೆ. ಅವರ ಮನೆಯಲ್ಲಿ 19 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ತಿಳಿಸಿದೆ.

ಕೈಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಬಿ.ಕೆ. ಶಿವಕುಮಾರ್ ಹತ್ತಿರ ಬೆಂಗಳೂರಿನಲ್ಲಿ 2ಮನೆ, 6 ನಿವೇಶನ ಇರುವುದನ್ನು ಪತ್ತೆಮಾಡಲಾಗಿದೆ. ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಜೆ. ಜ್ಞಾನೇಂದ್ರ ಕುಮಾರ್ ಅವರು ಬೆಂಗಳೂರಿನಲ್ಲಿ 3 ನಿವೇಶನ ಹೊಂದಿದ್ದಾರೆ.

ಕೃಷ್ಣಾ ಭಾಗ್ಯ ಜಲ ನಿಗಮ ದ ದೇವದುರ್ಗ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಅಶೋಕ್ ರೆಡ್ಡಿ ಪಾಟೀಲ್ ಮನೆಯಲ್ಲಿ ಕಸದ ಬುಟ್ಟಿಯಲ್ಲಿ ಚಿನ್ನಾಭರಣ ಅಡಗಿಸಿಟ್ಟಿದ್ದರು. ಮನೆಯ ಪಕ್ಕದ ಖಾಲಿ ನಿವೇಶದಲ್ಲಿ ನಗದು ಬಚ್ಚಿಟ್ಟಿದ್ದರು. ಅದನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇವರ ಬಳಿ 3ಮನೆ, 2ನಿವೇಶನ, 22ಎಕರೆ ಕೃಷಿ ಜಮೀನು ಸೇರಿದಂತೆ ಹಲವು ಆಸ್ತಿಗಳು ಪತ್ತೆಯಾಗಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪರೀಕ್ಷೆಗೆ ಗೈರಾದವರಿಗೆ ಮರು ಅವಕಾಶ ಇಲ್ಲ-ಮಾಧುಸ್ವಾಮಿ

0

ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಪರೀಕ್ಷೆ ತಪ್ಪಿಸಿಕೊಂಡರೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸಚಿವ ಜೆ. ಮಾಧುಸ್ವಾಮಿ ಅವರು ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ರಘುಪತಿ ಭಟ್, ಹಿಜಾಬ್ ಸಂಘರ್ಷದ ವೇಳೆ ಪರೀಕ್ಷೆಯಿಂದ ವಂಚಿತರಾದವರಿಗೆ ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ಕೊಡಬೇಕು.
ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮನವಿ ಮಾಡಿದರು.
ಅಲ್ಲದೇ ಕೋರ್ಟ್ ತೀರ್ಪು ಬಂದ ಬಳಿಕವೂ ಕೆಲ ಕಾಲೇಜಿನಲ್ಲಿ ವಿವಾದ ಮುಂದುವರೆದಿದೆ. ಅನಗತ್ಯ ವಿವಾದ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಹಿಜಾಬ್ ಕಾರಣಕ್ಕೆ ಪರೀಕ್ಷೆ ತಪ್ಪಿಸಿಕೊಂಡರೆ ಮರು ಪರೀಕ್ಷೆ ಬರೆಯಲು ಅವಕಾಶವಿಲ್ಲ. ಕೋರ್ಟ್ ಮಧ್ಯಂತರ ಆದೇಶದ ಬಳಿಕವೂ ಪರೀಕ್ಷೆ ತಪ್ಪಿಸಿಕೊಂಡರೆ ಅಂತಹ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ನಾವು ಒಂದು ವ್ಯವಸ್ಥೆಯಲ್ಲಿದ್ದೇವೆ. ಈಗ ಮರು ಪರೀಕ್ಷೆಗೆ ಅವಕಾಶ ಕೊಟ್ಟರೆ ಅದು ಬೇರೆ ರೀತಿ ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದರು.

ಒಂದು ವೇಳೆ ಮಧ್ಯಂತರ ಆದೇಶಕ್ಕಿಂತಲೂ ಮೊದಲೇ ಪರೀಕ್ಷೆ ಬರೆಯದವರಿಗೆ ಮತ್ತೆ ಅವಕಾಶ ಕೊಡುವ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕ್ಷಿಪಣಿಯ ನೆಪವೊಡ್ಡಿ ಭಾರತದ ಮೇಲೆ ದಾಳಿಮಾಡಲು ಮುಂದಾದ ಪಾಕ್ ಗೆ ಮನವರಿಕೆ

0

ಕಳೆದ ವಾರ ಭಾರತದಿಂದ ಆಕಸ್ಮಿಕವಾಗಿ ಪಾಕಿಸ್ತಾನದತ್ತ ಹಾರಿಹೋಗಿದ್ದ ಬ್ರಹ್ಮೋಸ್‌ ಕ್ಷಿಪಣಿ ಪ್ರಕರಣವನ್ನು ಆರಂಭದಲ್ಲಿ ತಪ್ಪಾಗಿ ಅರ್ಥೈಸಿದ್ದ ಪಾಕಿಸ್ತಾನ ಸರ್ಕಾರ, ಭಾರತದ ಮೇಲೆ ತಾನೂ ಒಂದು ಕ್ಷಿಪಣಿ ಹಾರಿಸಲು ಸಿದ್ಧತೆ ನಡೆಸಿತ್ತು ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ.

ಆದರೆ, ಭಾರತದ ಮೇಲೆ ಕ್ಷಿಪಣಿ ಹಾರಿಸುವ ಮುನ್ನ ನಡೆಸಲಾದ ತನಿಖೆಯಲ್ಲಿ ಇದು ಆಕಸ್ಮಿಕವಾಗಿ ಸಿಡಿದ ಕ್ಷಿಪಣಿ ಎಂದು ತಿಳಿದು ಬಂದಿದ್ದರಿಂದ ತನ್ನ ದಾಳಿಯ ನಿರ್ಧಾರದಿಂದ ಪಾಕಿಸ್ತಾನ ಹಿಂದೆ ಸರಿಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದ ಪಂಜಾಬ್‌ನಲ್ಲಿರುವ ಸಿರ್ಸಾದಲ್ಲಿರುವ ಭೂಸೇನಾ ನೆಲೆಯಿಂದ ತಾಂತ್ರಿಕ ದೋಷದಿಂದಾಗಿ ಆಕಸ್ಮಿಕವಾಗಿ ಉಡಾವಣೆಗೊಂಡಿದ್ದ ಬ್ರಹ್ಮೋಸ್‌, ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿರುವ ಮಿಯಾನ್‌ ಚನ್ನು ಎಂಬ ಪಟ್ಟಣದ ಬಳಿ ಹೋಗಿ ಬಿದ್ದಿತ್ತು. ಯಾವುದೇ ಜೀವ ಹಾನಿಯಾಗಿರಲಿಲ್ಲ.

ಘಟನೆಯ ಬೆನ್ನಲ್ಲೇ ಪ್ರಕಟಣೆ ನೀಡಿದ್ದ ಭಾರತ ಸರ್ಕಾರ, ಇದು ತಾಂತ್ರಿಕ ದೋಷದಿಂದ ಆಗಿರುವ ಘಟನೆಯಷ್ಟೇ. ಇದನ್ನು ತಪ್ಪಾಗಿ ತಿಳಿಯಬೇಕಿಲ್ಲ ಎಂದು ಸ್ಪಷ್ಟನೆ ನೀಡಿತ್ತು.