Saturday, February 28, 2026
Saturday, February 28, 2026
Home Blog Page 1599

ಮಹಾರಾಷ್ಟ್ರ ನಿಲುವಿಗೆ ಬೊಮ್ಮಾಯಿ ತಿರುಗೇಟು

0

ಕರ್ನಾಟಕದ ಗಡಿ ಬಗ್ಗೆ ಸರ್ಕಾರದ ನಿಲುವು ಬಹಳ ಸ್ಪಷ್ಟವಾಗಿದೆ. ರಾಜ್ಯದ ಗಡಿ ಪ್ರದೇಶದ ಒಂದಿಂಚೂ ಜಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ನಿನ್ನೆ ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿನ ರಾಜಕಾರಣಿಗಳು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಅದಕ್ಕಾಗಿ ರಾಜ್ಯದ ಗಡಿ ಭಾಷೆಗಳ ಬಗ್ಗೆ ಕೆದಕುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಅನೇಕ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳಿವೆ. ಅವುಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದರ ಚಿಂತನೆ ಸರ್ಕಾರ ಮಾಡುತ್ತಿದೆ. ಅವರ ರಾಜಕೀಯ ಉಳಿವಿಗಾಗಿ ರಾಜ್ಯದ ಗಡಿ ಭಾಷೆ ವಿಚಾರಗಳನ್ನು ಎತ್ತುವುದು ಸಣ್ಣತನ. ಅದನ್ನು ಕೈಬಿಡಬೇಕು ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ಮರಾಠಿ ಮಾತನಾಡುವ ಜನರು ಇರುವ ಕರ್ನಾಟಕದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವವರೆಗೂ ಅಲ್ಲಿನ ಜನರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಹೇಳಿದ್ದರು. ಅದಕ್ಕೆ ಬೊಮ್ಮಾಯಿ ಈ ರೀತಿ ತಿರುಗೇಟು ನೀಡಿದ್ದಾರೆ.

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಕರ್ನಾಟಕ ಮಹತ್ವದ ಹೆಜ್ಜೆಯಿರಿಸಿದೆ -ಬೊಮ್ಮಾಯಿ

0

ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ 22,900 ಕೋಟಿ ರೂ.ಗಳ ಹೂಡಿಕೆಯ ದೇಶದ ಮೊತ್ತ ಮೊದಲ ಪ್ರತಿಷ್ಠಿತ ಸೆಮಿಕಂಡಕ್ಟರ್ ಪ್ಲಾಂಟ್ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಮತ್ತು ಐಎಸ್‍ಎಂಸಿ ಅನಲಾಗ್ ಫ್ಯಾಬ್ ಪ್ರೈ.ಲಿ ನಡುವೆ ಒಪ್ಪಂದಕ್ಕೆ ನಿನ್ನೆ ಭಾನುವಾರದಂದು ಸಹಿ ಹಾಕಲಾಯಿತು.

7 ವರ್ಷಗಳ ಅವಧಿಯಲ್ಲಿ ಒಟ್ಟು 1500 ಜನರಿಗೆ ಉದ್ಯೋಗ ಒದಗಿಸುವ ನಿರೀಕ್ಷೆ ಇದೆ. ಕರ್ನಾಟಕ ಸರ್ಕಾರದ ಪರವಾಗಿ ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ.ರಮಣರೆಡ್ಡಿ ಮತ್ತು ಐ.ಎಸ್.ಎಂ.ಇ ಪರವಾಗಿ ನಿರ್ದೇಶಕ ಅಜಯ್ ಜಲನ್ ಸಹಿ ಹಾಕಿದರು.

ಸೆಮಿಕಂಡಕ್ಟರ್ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮತ್ತು ಐ.ಎಸ್.ಎಂ.ಸಿ ಅನಲಾಗ್ ಫ್ಯಾಬ್ ಪ್ರೈ.ಲಿ. ಸಂಸ್ಥೆ ಪರಸ್ಪರ ಮಾಡಿಕೊಂಡಿರುವ ಒಪ್ಪಂದವು ವಿಶ್ವದ ಸೆಮಿಕಂಡಕ್ಟರ್ ನಕ್ಷೆಯಲ್ಲಿ ಕರ್ನಾಟಕವನ್ನು ಗುರುತಿಸುವಂತೆ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿವಿಧ ರಾಜ್ಯಗಳು ಸೆಮಿಕಂಡಕ್ಟರ್ ಫ್ಯಾಬ್ ಹೂಡಿಕೆಗಳನ್ನು ಆಕರ್ಷಿಸಲು ಸ್ಪರ್ಧಿಸುತ್ತಿದ್ಧ ವೇಳೆಯಲ್ಲಿಯೇ ಈ ಮಹತ್ವದ ಒಪ್ಪಂದಕ್ಕೆ ಕರ್ನಾಟಕ ಸರ್ಕಾರ ಸಹಿ ಹಾಕಿದೆ.

ಕೇವಲ ಆರ್ಥಿಕ ಪ್ರೋತ್ಸಾಹಕಗಳು ಮಾತ್ರವಲ್ಲದೆ, ಒಟ್ಟಾರೆ ಕಾರ್ಯನಿರ್ವಹಣೆಗೆ ಅಗತ್ಯವಿರುವ ವಾತಾವರಣವನ್ನು ನಿರ್ಮಿಸುವುದೂ ಮುಖ್ಯ ಎನ್ನುವುದನ್ನು ಕರ್ನಾಟಕ ಸರ್ಕಾರ ಅರಿತಿದೆ.
ದೇಶದಲ್ಲಿಯೇ ಅತ್ಯುತ್ತಮ ಮೂಲಭೂತ ಸೌಕರ್ಯ ಹಾಗೂ ಕೌಶಲ್ಯಯುತ ಮಾನವ ಸಂಪನ್ಮೂಲವನ್ನು ಹೊಂದಿದೆ ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದರು.

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಇದೊಂದು ಬಹುದೊಡ್ಡ ಹೆಜ್ಜೆ. ಸವಾಲುಗಳು ಸಹ ದೊಡ್ಡಮಟ್ಟದಲ್ಲಿ ಇವೆ. ಈ ಸವಾಲುಗಳನ್ನು ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಳ್ಳಲೂ ಈ ಒಪ್ಪಂದ ಅವಕಾಶವನ್ನು ಕಲ್ಪಿಸಿದೆ ಎಂದು ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.

42 ವೈವಾಹಿಕ ವಸಂತ ಕಂಡ ಸಿನಿಮಾ ಚಮಕ್ ಚಮಕ್ ಜೋಡಿ ಧರ್ಮೇಂದ್ರ- ಹೇಮಾ

0

ಬಾಲಿವುಡ್ ಎವರ್​ ಗ್ರೀನ್​​ ಜೋಡಿಗಳಲ್ಲಿ​ ಹಿರಿಯ ನಟಿ ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಜೋಡಿ ಕೂಡ ಒಂದು. ಈ ಜೋಡಿ ವಿವಾಹವಾಗಿ 42 ವರ್ಷಗಳನ್ನು ಪೂರೈಸಿದೆ. ಪತಿಗೆ ಹೇಮಾ ಮಾಲಿನಿ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ಹೇಳಿದ್ದಾರೆ.

ಸಾಮಾಜಿಕ ಜಾಲತಾಣವಾದ ಟ್ವಿಟರ್​ನಲ್ಲಿ ಪತಿ ಧರ್ಮೇಂದ್ರ ಅವರೊಂದಿಗಿನ ಫೋಟೋ ಹಂಚಿಕೊಂಡಿರುವ ಹೇಮಾ ಮಾಲಿನಿ, ಇಂದು ನಮ್ಮ ವಿವಾಹ ವಾರ್ಪಿಕೋತ್ಸವ. ಈ ದಿನದಂದು ನಾನು ಎಲ್ಲಾ ವರ್ಷಗಳ ಸಂತೋಷಕ್ಕಾಗಿ ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ. ಪ್ರೀತಿಯ ಮಕ್ಕಳು , ಮೊಮ್ಮಕ್ಕಳು ಮತ್ತು ನಮ್ಮ ಹಿತೈಷಿಗಳ ಆಶೀರ್ವಾದಿಂದ ನೆಮ್ಮದಿಯಿಂದ ನೆಲಸಿದೆ ಎಂದು ಬರೆದಿದ್ದಾರೆ.

ಧರ್ಮೇಂದ್ರ ಅವರು ವ್ಯಾಯಾಮ ಮಾಡುತ್ತಿದ್ದ ವೇಳೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕಳೆದ 4 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇನ್ನು ಧರ್ಮೇಂದ್ರ ಅವರ ಆರೋಗ್ಯ ಬಗ್ಗೆ ವಿಚಾರಿಸಿದ್ದ ಅಭಿಮಾನಿಗಳಿಗೆ ಮಾಲಿನಿಯವರು ಧನ್ಯವಾದ ಅರ್ಪಿಸಿದ್ದಾರೆ.

ಪ್ರಸ್ತುತ ನಟ ಧರ್ಮೇಂದ್ರ ಅವರು ಕರಣ್ ಜೋಹರ್ ನಿರ್ದೇಶನದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ಜಯಾ ಬಚ್ಚನ್, ಶಬಾನಾ ಅಜ್ಮಿ, ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಸಹ ನಟಿಸುತ್ತಿದ್ದಾರೆ.

ಪಶುವೈದ್ಯಕೀಯ ವಿವಿ ಘಟಿಕೋತ್ಸವ ಪದಕಗಳನ್ನ ಬಾಚಿದ ಶಿವಮೊಗ್ಗ ಪ್ರತಿಭೆಗಳು

0

ಬೀದರ್ ನ ನಂದಿನಗರದಲ್ಲಿ ದಿನಾಂಕ 28.04.2022 ರಂದು ಏರ್ಪಡಿಸಲಾಗಿದ್ದ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗವು ಪ್ರತಿಷ್ಠಿತ ಪಶುವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಒಂದಾಗಿದೆ. ಪದವಿ ಮಟ್ಟದಲ್ಲಿ ಮಾತ್ರವಲ್ಲದೆ ಉನ್ನತ ವ್ಯಾಸಂಗಕ್ಕಾಗಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಐಸಿಎಆರ್ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯನ್ನು ಹೊಂದಿದ್ದಾರೆ. ಇದು ವೆಟರಿನರಿ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ಸೈನ್ಸಸ್, ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಕಾಲೇಜಾಗಿದೆ.

ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಡಾ. ಸತೀಶ್.ಜಿ.ಎಮ್., ಸಹಾಯಕ ಪ್ರಾಧ್ಯಾಪಕರು ಇವರು ಶೈಕ್ಷಣಿಕ ವರ್ಷ 2019-20 ನೇ ಸಾಲಿನಲ್ಲಿ ಪ್ರಾಣಿ ಅನುವಂಶೀಯತೆ ಮತ್ತು ತಳಿಶಾಸ್ತ್ರ ವಿಷಯದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ.) ಪದವಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದರಿಂದ ವಿಶ್ವವಿದ್ಯಾಲಯದ ಚಿನ್ನದ ಪದಕವನ್ನು ಪ್ರದಾನ ಮಾಡಲಾಯಿತು.

ಬಿ.ವಿ.ಎಸ್‍ಸಿ. ಮತ್ತು ಎ.ಎಚ್ ಸ್ನಾತಕ ಪದವಿ: ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಕನಿಕ ಯಾದವ್ ಇವರಿಗೆ 13, ಲಿಖಿತ ಬಿ.ಎನ್. ಇವರಿಗೆ 02, ಉರ್ಮಿಳ, ಎಸ್. ಇವರಿಗೆ 01, ರಜತ್ ಎಂ.ಎಸ್., ಇವರಿಗೆ 06 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.

ಎಂ.ವಿ.ಎಸ್‍ಸಿ. ಸ್ನಾತಕೋತ್ತರ ಪದವಿ: ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ವಿಶ್ವನಾಥ ಯು., ಪ್ರಾಣಿ ಆಹಾರ ಶಾಸ್ತ್ರ ಇವರಿಗೆ 01, ಪ್ರಶಾಂತ.ಎಮ್.ಕೆ. ಪಶುವೈದ್ಯಕೀಯ ಸೂಕ್ಷ್ಮಜೀವಾಣು ಶಾಸ್ತ್ರ ಇವರಿಗೆ 02, ರೇವಣ ಸಿದ್ಧಪ್ಪ ಯಡವಾಡ್ ಪಶುವೈದ್ಯಕೀಯ ಔಷಧ ಮತ್ತು ವಿಷಶಾಸ್ತ್ರ ಇವರಿಗೆ 02, ಮಹಮದ್ ಖಲೀಉಲ್ಲ ಪಶುವೈದ್ಯಕೀಯ ಜೀವರಸಾಯನಶಾಸ್ತ್ರ ಇವರಿಗೆ 02, ಪವಿತ್ರ.ಬಿ.ಎಸ್. ಪಶುವೈದ್ಯಕೀಯ ಸೂಕ್ಷ್ಮಜೀವಾಣು ಶಾಸ್ತ್ರ ಇವರಿಗೆ 03, ಮಣಿಕಂಠ.ಸಿ.ಎಲ್. ಪಶುವೈದ್ಯಕೀಯ ಔಷಧ ಮತ್ತು ವಿಷಶಾಸ್ತ್ರ ಇವರಿಗೆ 02, ಯಲ್ಲಪ್ಪ.ಕೆ ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ವಿಸ್ತರಣಾ ಶಿಕ್ಷಣ ಇವರಿಗೆ 01, ಸುನೀಲ್ ಕುಮಾರ್.ಬಿ.ಎಸ್. ಪಶುವೈದ್ಯಕೀಯ ರೋಗಶಾಸ್ತ್ರ ಇವರಿಗೆ 01 ಹಾಗೂ ಕಿರಣ್.ಹೆಚ್.ಜೆ. ಪಶುವೈದ್ಯಕೀಯ ರೋಗಶಾಸ್ತ್ರ ಇವರಿಗೆ 01 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು ಎಂದು ಕಾಲೇಜಿನ ಡೀನ್ ಡಾ. ಪ್ರಕಾಶ್ ನಡೂರ್ ರವರು ತಿಳಿಸಿದ್ದಾರೆ.

ಹೈದ್ರಾಬಾದ್ ವಿರುದ್ಧ ಚೆನ್ನೈ ಜಯ: ಧೋನಿ ಸಫಲ

ಮಹೇಂದ್ರ ಸಿಂಗ್ ಧೋನಿ ಮತ್ತೆ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವು ಸಾಧಿಸಿತ್ತು. ಐಪಿಎಲ್ ನ 46ನೇ ಪಂದ್ಯದಲ್ಲಿ ಎದುರಾಳಿ ಹೈದರಾಬಾದ್ ಗೆ 13 ರನ್ ಗಳಿಂದ ಸೋಲಿನ ರುಚಿ ತೋರಿಸಿದ ಚೆನ್ನೈ, ಒಟ್ಟಾರೆ 9 ಪಂದ್ಯಗಳಲ್ಲಿ ಮೂರನೇ ಗೆಲುವು ದಾಖಲಿಸಿ 6 ಅಂಕ ಸಂಪಾದಿಸಿತು ಆದ್ಯಾಗೋ ಅಂಕಪಟ್ಟಿಯಲ್ಲಿ 9ನೇ ಸ್ಥಾನದಿಂದ ಮೆಲಕ್ಕೇರಲಿಲ್ಲ.


ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ನಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಋತುರಾಜ ಗಾಯಕ್ವಾಡ್ (99 ರನ್ , 57 ಎಸೆತ, 6 ಫೋರ್, ಆರು ಸಿಕ್ಸರ್) ಹಾಗೂ ಡೇವೊನ್ ಕಾನ್ವ (85 ರನ್, 55 ಎಸೆತ, 8 ಫೋರ್, ಆರು ಸಿಕ್ಸರ್) ಅವರ ಅರ್ಧಶತಕಗಳ ನೆರವಿನಿಂದ ಚೆನ್ನೈ ತಂಡ ನಿಗದಿತ 20 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 202 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ ತನ್ನ ಪಾಲಿನ 20 ಓವರ್ ಗಳು ಪೂರ್ಣಗೊಂಡಾಗ ಆರು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಲಷ್ಟೇ ಶಕ್ತವಾಯಿತು.
ನಿಕೋಲಸ್ ಪೋರನ್ 33 ಎಸೆತಗಳಲ್ಲಿ 64 ರನ್ ಬಾರಿಸಿ ಗೆಲುವು ತಂದುಕೊಡಲು ಯತ್ನಿಸಿದರು ಆದರೆ ಅವರಿಗೆ ಯಶಸ್ಸು ದೊರೆಯಲಿಲ್ಲ.
ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡಕ್ಕೆ ಆರಂಭಿಕರಾದ ಡೇವೊನ್ ಹಾಗೂ ಋತುರಾಜ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ಜೋಡಿ 182 ರನ್ ಬಾರಿಸುವ ಮೂಲಕ ಆವೃತ್ತಿಯಲ್ಲಿ ಮೊದಲ ವಿಕೆಟ್ ಗೆ ಗರಿಷ್ಠ ರನ್ ಗಳ ಜೊತೆಯಾಟ ವಾಡಿದ ಹೆಗ್ಗಳಿಕೆಗೆ ಪಾತ್ರವಾಯಿತು. ಆದರೆ, 99ರನ್ ಬಾರಿಸಿ ನಟರಾಜನಿಗೆ ವಿಕೆಟ್ ಒಪ್ಪಿಸಿದ ಗಾಯಕ್ವಾಡ್ ಕೇವಲ ಒಂದು ರನ್ ನಿಂದ ಶತಕ ವಂಚಿತರಾದರು. ಕಾನ್ವೆ 85 ರನ್ ಬಾರಿಸಿ ಅಜೇಯರಾಗಿ ಉಳಿದರು.

ಸ್ವಂತ ಗೃಹಕ್ಕೆ ನರೇಂದ್ರ ಮೋದಿ ಹೆಸರಿಟ್ಟ ಅಭಿಮಾನಿ ಗೌ.ಹಾಲೇಶ್

0

ಅಭಿಮಾನಿ ಬಳಗ, ಸಂಘಗಳನ್ನು ಹೆಸರಾಂತ ವ್ಯಕ್ತಿಗಳ ಹೆಸರಲ್ಲಿ ಕಟ್ಟಿ ಕೊಂಡಿರುವುದನ್ನು ಸಾಮಾನ್ಯವಾಗಿ ನಾವು ಆದರೆ ಇಲ್ಲೊಬ್ಬ ತನ್ನ ಮನೆಗೆ ಮೋದಿ ಅವರ ಹೆಸರಿಟ್ಟು ತನ್ನ ಅಭಿಮಾನವನ್ನು ವ್ಯಕ್ತಪಡಿಸಿದ್ದಾನೆ.

ಚನ್ನಗಿರಿಯ ನಿವಾಸಿ ಗೌಡ್ರ ಹಾಲೇಶ್ ಕಟ್ಟಿಸಿದ ಹೊಸ ಮನೆಗೆ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಇಟ್ಟು ನಾಮಕರಣ ಮಾಡಿ ತಾಲ್ಲೂಕಿನ ಜನರ ಗಮನ ಸೆಳೆದಿದ್ದಾರೆ. ಹಾಲೇಶ್ ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದಾರೆ. ಅನೇಕ ವರ್ಷಗಳಿಂದ ಬಿಜೆಪಿಗಾಗಿ ದುಡಿಯುತ್ತಿದ್ದಾರೆ. ಇವರು ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದ ಬಳಿಯ ತೋಟದಲ್ಲಿ ಹೊಸ ಮನೆ ಕಟ್ಟಲು ತೀರ್ಮಾನಿಸಿದರು. ಅದರಂತೆ 42 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ನೂತನ ಮನೆಯೊಂದನ್ನು ನಿರ್ಮಿಸಿದ್ದಾರೆ.

ಹೊಸ ಮನೆ ಕಟ್ಟಿದ ಮೇಲೆ ಆ ಮನೆಗೆ ಯಾವುದಾದರೂ ಹೆಸರನ್ನು ನಾಮಕರಣ ಮಾಡುವುದು ಸಂಪ್ರದಾಯ. ಸಾಮಾನ್ಯವಾಗಿ ನಾವು ನಿರ್ಮಿಸಿದ ಹೊಸ ಮನೆಗೆ ಮನೆ ದೇವರು, ಮಕ್ಕಳು ಅಥವಾ ತಂದೆ ತಾಯಿಗಳ ಹೆಸರನ್ನು ನಾಮಕರಣ ಮಾಡುತ್ತಾರೆ. ಆದರೆ ಈತ ನರೇಂದ್ರ ಮೋದಿಯವರ ಅಭಿಮಾನಿಯಾದ ಇವರು ತಾವು ಕಟ್ಟಿಸಿದ ಹೊಸ ಮನೆಗೆ ಶ್ರೀ ನರೇಂದ್ರ ಮೋದಿ ನಿಲಯ ಎಂಬ ಹೆಸರು ಇಟ್ಟಿದ್ದಾರೆ.

ನರೇಂದ್ರ ಮೋದಿ ನಿಲಯದ ಉದ್ಘಾಟನೆಯನ್ನು ಮೇ. 3ರಂದು ಬಸವ ಜಯಂತಿಯ ದಿನ ಉದ್ಘಾಟಿಸಲು ತೀರ್ಮಾನಿಸಿದ್ದಾರೆ. ಈಗ ನರೇಂದ್ರ ಮೋದಿ ನಿಲಯವನ್ನು ನೋಡಲು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಜನರು ಬರುತ್ತಿದ್ದಾರೆ. ಈ
ಕಾರ್ಯಕ್ರಮಕ್ಕೆ ನರೇಂದ್ರ ಮೋದಿ ಅವರ ಅಭಿಮಾನಿಗಳಿಗೆ ಮಾತ್ರ ಆಹ್ವಾನವಿದೆ.

ನರೇಂದ್ರ ಮೋದಿಯವರು ರಾಜಕೀಯ ರಂಗಕ್ಕೆ ಪ್ರವೇಶ ಮಾಡಿದ ದಿನದಿಂದಲೂ ಅವರನ್ನು ಗಮನಿಸುತ್ತಾ ಬಂದಿದ್ದೆ. ಅವರು ಪ್ರಧಾನಿಯಾದ ಮೇಲೆ ಇನ್ನಷ್ಟು ಪ್ರೀತಿ ಬೆಳೆಯಿತು. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ಧುಗೊಳಿಸಲು ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಕೊರೊನಾವನ್ನು ಹಿಮ್ಮೆಟ್ಟಿಸಲು ದೇಶದ ಜನರಿಗೆ ಉಚಿತ ಲಸಿಕೆ ನೀಡಿ ದೇಶದ ಒಳಿತಿಗಾಗಿ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಇಡೀ ವಿಶ್ವವೇ ಗಮನಸೆಳೆಯುವಂತೆ ಮಾಡಿದ್ದಾರೆ. ಇದರಿಂದ ಅವರು ತುಂಬ ಇಷ್ಟ. ಆದ್ದರಿಂದ ನರೇಂದ್ರ ಮೋದಿ ಹೆಸರನ್ನು ಇಟ್ಟಿದ್ದೇನೆ. ನರೇಂದ್ರ ಮೋದಿ ಅಭಿಮಾನಿಗಳಿಗೆ ಮಾತ್ರ ಗೃಹ ಪ್ರವೇಶಕ್ಕೆ ಆಹ್ವಾನ ನೀಡಿದ್ದೇನೆ ಎಂದು ಗೌ. ಹಾಲೇಶ್ ತಿಳಿಸಿದ್ದಾರೆ.

ಲಕ್ನೊ ಜೈಂಟ್ಸ್ ಡೆಲ್ಲಿ ವಿರುದ್ಧ ಜಯಭೇರಿ

ನಾಯಕ ಕೆ ಎಲ್ ರಾಹುಲ್ (77, 51 ಎಸೆತ, 4 ಫೋರ್, 5 ಸಿಕ್ಸರ್) ಹಾಗೂ ದೀಪಕ್ (52 ರನ್, 34 ಎಸೆತ, 6 ಫೋರ್, ಒಂದು ಸಿಕ್ಸರ್) ಅವರ ಮಾರಕ ದಾಳಿಯ ನೆರವಿನಿಂದ ಲಕ್ನೋ ಸೂಪರ್ ಜಯಂಟ್ಸ್ ತಂಡ ಐಪಿಎಲ್ 15ನೇ ಆವೃತ್ತಿಯ 45ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗಳಿಂದ ಜಯ ಸಾಧಿಸಿದೆ. ಇದರೊಂದಿಗೆ ಆಡಿರುವ 10 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 14 ಅಂಕಗಳಿಗೆ ರಾಹುಲ್ ಬಳಗ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೆ ಎಲ್ ರಾಹುಲ್ ನೇತೃತ್ವದ ಲಕ್ನೋ ತಂಡ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 195 ರನ್ ಬಾರಿಸಿದರು. ಬೃಹತ್ ಗುರಿ ಬೆನ್ನಟ್ಟಿದ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಕ್ತಾಯಗೊಂಡಾಗ ಏಳು ವಿಕೆಟ್ ನಷ್ಟಕ್ಕೆ 189 ಮಾತ್ರ ಗಳಿಸಲು ಸಾಧ್ಯವಾಯಿತು.


ದೊಡ್ಡ ಮತ ಗುರಿ ಬೆನ್ನಟ್ಟಲು ಆರಂಭಿಸಿದ ಡೆಲ್ಲಿ ತಂಡ ಬಾರಿ ಅಗ್ಗದಲ್ಲಿ ಪೃಥ್ವಿ ಶಾ (5) ಹಾಗೂ ಡೇವಿಡ್ ವಾರ್ನರ್ (3) ಕ್ರಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭದಲ್ಲಿ ಹಿನ್ನಡೆ ಗೊಳಗಾಯಿತು. ಬಳಿಕ ಬ್ಯಾಟ್ ಹಿಡಿದು ಬಂದ ಮಿಚೆಲ್ ಮಾರ್ಷ್ (37) ಹಾಗೂ ತಂಡದ ಗರಿಷ್ಠ ಸ್ಕೋರ್ ರಿಷಬ್ ಪಂತ್ (44) ಮರು ಹೋರಾಟ ಸಂಘಟಿಸಿದರು. ಆದರೆ, ಕಳಪೆ ಅಂಪೈರಿಂಗ್ ಗೆ ಮಾರ್ಷ್ ಬಲಿಯಾದರು. ನಂತರ ಕ್ರೀಸಿಗೆ ಬಂದ ಲಲಿತ್ ಯಾದವ್ 3 ರನ್ ಗಳಿಗೆ ಸೀಮಿತ ಗೊಂಡರು. ವಿಂಡೀಸ್ ದೈತ್ಯ ಪೋವೆಲ್ (35) ಸಿಡಿದೇಳುವ ಸೂಚನೆ ನೀಡಿದರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಅಕ್ಷರ ಪಟೇಲ್ (42) ಕೊನೆತನಕ ತಂಡವನ್ನು ಗೆಲ್ಲಿಸುವ ಯತ್ನ ಮಾಡಿದರು ಆದರೆ ಸಾಪಲ್ಯ ಗಳಿಸಲಿಲ್ಲ.
ಮೊದಲು ಬ್ಯಾಟ್ ಮಾಡಿದ ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಬಾರಿಸಿದ ಅರ್ಧಶತಕ ಮೂಲಕ ಉತ್ತಮ ಆರಂಭ ಲಭಿಸಿತು. ಕ್ವಿಂಟನ್ ಡಿಕಾಕ್ 23 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ದೀಪಕ್ ವೇಗದ ಅರ್ಧಶತಕ ಬಾರಿಸಿದರು. ಕೊನೆಯಲ್ಲಿ ಮಾರ್ಕರ್ಸ್ (17) ಹಾಗೂ ಕೃನಾಲ್ ಪಾಂಡ್ಯ (9) 26ರನ್ ಗಳ ಕಾಣಿಕೆ ಕೊಟ್ಟರು.

ಉಕ್ರೇನಿನಲ್ಲಿ ಅಮೆರಿಕ ಶಸ್ತ್ರಾಸ್ತ್ರ ಗಳ ಮೇಲೆ ರಷ್ಯ ದಾಳಿ

0

ಉಕ್ರೇನ್‌ ಮೇಲಿನ ತನ್ನ ದಾಳಿಯನ್ನು ಮುಂದುವರೆಸಿರುವ ರಷ್ಯಾ, ಈಗ ಉಕ್ರೇನ್‌ಗೆ ಅಮೆರಿಕ ಹಾಗೂ ಯುರೋಪಿಯನ್‌ ದೇಶಗಳು ನೀಡಿದ್ದ ಶಸ್ತ್ರಾಸ್ತ್ರಗಳ ಮೇಲೆ ದಾಳಿ ನಡೆಸಿದೆ. ವಿದೇಶಗಳು ನೀಡಿದ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡೇ ಉಕ್ರೇನಿ ಪಡೆಗಳು ತನ್ನ ದಾಳಿಯನ್ನು ತಡೆಯುತ್ತಿರುವ ಹಿನ್ನೆಲೆಯಲ್ಲಿ ರಷ್ಯಾ ವೈರಿ ದೇಶದ ಬೆನ್ನು ಮುರಿಯಲು ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಇನ್ನೊಂದೆಡೆ ಉಕ್ರೇನಿನ ಒಡೆಸಾದಲ್ಲಿರುವ ಮಿಲಿಟರಿ ವಾಯುನೆಲೆಯ ರನ್‌ವೇಯನ್ನು ಧ್ವಂಸಗೊಳಿಸಿವೆ. ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿಯನ್ನು ಅಮೆರಿಕದ ಸ್ಪೀಕರ್‌ ನಾನ್ಸಿ ಪೊಲೊಸಿ ಭೇಟಿ ಮಾಡಿ ಬೆಂಬಲವನ್ನು ಘೋಷಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

ಅಲ್ಲದೇ ನಡುರಾತ್ರಿ ಖಾರ್ಕೀವ್‌ನಲ್ಲಿ ಉಕ್ರೇನಿನ ಸು-24ಎಂ ಬಾಂಬರ್‌ಗಳನ್ನು ರಷ್ಯಾದ ವಾಯುರಕ್ಷಣಾ ವ್ಯವಸ್ಥೆಯನ್ನು ಹೊಡೆದುರುಳಿಸಿವೆ ಎಂದು ರಷ್ಯಾ ಹೇಳಿದೆ.

ರಷ್ಯಾ ಬ್ಯಾಸ್ಟಿಯೊನ್‌ ಕ್ಷಿಪಣಿಯನ್ನು ಕ್ರಿಮಿಯಾದಿಂದ ಉಡಾವಣೆ ಮಾಡಿ ಒಡೆಸಾದ ವಾಯುನೆಲೆಯನ್ನು ಧ್ವಂಸಗೊಳಿಸಿದೆ ಎಂದು ಪ್ರಾಂತೀಯ ರಾಜ್ಯಪಾಲ ಮ್ಯಾಕ್ಸಿಮ್‌ ಮಾರ್ಚೆಂಕೊ ತಿಳಿಸಿದ್ದಾರೆ.

ನ್ಯಾಟೋ ರಾಷ್ಟ್ರಗಳು ಮೇ ತಿಂಗಳಿನಲ್ಲಿ ಸೇನಾ ಕವಾಯತು ನಡೆಸುವುದಾಗಿ ಘೋಷಿಸಿ ರಷ್ಯಾಕ್ಕೆ ಎಚ್ಚರಿಕೆ ನೀಡಿದ್ದವು. ಇದರ ಬೆನ್ನಲ್ಲೇ ರಷ್ಯಾ ದಾಳಿ ತೀವ್ರಗೊಳಿಸಿದೆ. ಮರಿಯುಪೋಲ್‌ನ ಉಕ್ಕಿನ ಘಟಕವನ್ನು ಹೊರತುಪಡಿಸಿ ಇಡೀ ನಗರವು ರಷ್ಯಾದ ತೆಕ್ಕೆಯಲ್ಲಿದೆ. ನೀರು, ಆಹಾರವಿಲ್ಲದೇ ಸತತ ಬಾಂಬ್‌, ಶೆಲ್‌ ದಾಳಿಯಿಂದಾಗಿ ಕಂಗೆಟ್ಟಸುಮಾರು 1000 ನಾಗರಿಕರು ಹಾಗೂ 2000ಕ್ಕೂ ಹೆಚ್ಚು ಉಕ್ರೇನಿನ ಯೋಧರು ಉಕ್ಕಿನ ಘಟಕದಲ್ಲಿ ನೆಲೆಸಿದ್ದಾರೆ. ವಿಶ್ವಸಂಸ್ಥೆಯು ಶೀಘ್ರ ಇವರನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಮಾಸ್ಕ್ ಧರಿಸದೇ ಇದ್ದರೆ ₹250 ದಂಡ ಫಿಕ್ಸ್

0

ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೋನಾ ನಿಯಂತ್ರಣ ಸಂಬಂಧ ಈಗಾಗಲೇ ಮಾಸ್ಕ್ ಅನ್ನು ಕಡ್ಡಾಯ ಕೂಡ ಗೊಳಿಸಲಾಗಿದೆ. ಪ್ರಸ್ತುತ ಮುಂದುವರೆದು ಮೇ.2 ರ ಇಂದಿನಿಂದ ಮಾಸ್ಕ್ ಧರಿಸದೇ ಇದ್ದರೇ ದಂಡ ಹಾಕೋ ತೀರ್ಮಾನವನ್ನು ಬಿಬಿಎಂಪಿ ಮಾಡಿದೆ.

ಆದ್ದರಿಂದ, ಸಿಲಿಕಾನ್ ಸಿಟಿಯ ಜನರು ಮಾಸ್ಕ್ ಇಲ್ಲದೇ ಹೊರಗೆ ಓಡಾಡಿದರೆ, ದಂಡ ವಿಧಿಸಲು ನಿರ್ಧರಿಸಲಾಗಿದೆ.

ಈ ಸಂಬಂಧ ಈಗಾಗಲೇ ಬಿಬಿಎಂಪಿಯಿಂದ ಮಾರ್ಷಲ್ ಗಳಿಗೆ ಸೂಚನೆ ನೀಡಲಾಗಿದೆ. ಮೇ.2ರ ಇಂದಿನಿಂದ ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣ ಕ್ರಮವಾಗಿ ಮಾಸ್ಕ್ ಧರಿಸದೇ ಓಡಾಡುವ ಜನರಿಗೆ ಫೈನ್ ಹಾಕೋದಕ್ಕೆ ಸೂಚಿಸಿದೆ.

ಈ ಹಿನ್ನಲೆಯಲ್ಲಿ ಇಂದಿನಿಂದ ಮಾಸ್ಕ್ ಧರಿಸದೇ ಹೊರಗೆ ಓಡಾಡಿದರೆ, ಅವರಿಗೆ ಮಾರ್ಷಲ್ ಗಳು ರೂ.250 ದಂಡವನ್ನು ವಿಧಿಸಲಿದ್ದಾರೆ. ಸೋ ಸಿಲಿಕಾನ್ ಸಿಟಿ ಜನರು ಎಚ್ಚರಿಕೆ ವಹಿಸೋದು ಮರೆಯಬೇಡಿ. ಮಾಸ್ಕ್ ಧರಿಸಿ, ಕೊರೋನಾವನ್ನು ತಡೆಗಟ್ಟಿ.