Sunday, March 1, 2026
Sunday, March 1, 2026
Home Blog Page 1589

ಉಕ್ರೇನ್ ಶಾಲೆಯ ಮೇಲೆ ರಷ್ಯ ಬಾಂಬ್ದಾಳಿ:6೦ ಸಾವು

0

ಪೂರ್ವ ಉಕ್ರೇನ್​ ನ ಲುಹಾನ್ ಸ್ಕ್​ ಪ್ರಾಂತ್ಯದ ಬಿಲೋಹೊರಿವ್ಕಾ ಎಂಬಲ್ಲಿನ ಶಾಲೆಯ ಮೇಲೆ ರಷ್ಯಾ ಸೇನೆ ನಡೆಸಿದ ಬಾಂಬ್​ ದಾಳಿಗೆ ಮಕ್ಕಳು ಸೇರಿ 60 ಜನ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಜನರನ್ನು ಸ್ಥಳದಿಂದ ಪಾರುಮಾಡಲಾಗಿದ್ದು, ಏಳು ಜನ ಗಂಭೀರ ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್​ ಸೆರ್​ಹಿಯ್​ ಗೈಡಾಯ್​ ತಿಳಿಸಿದ್ದಾರೆ.

ಶಾಲೆಯನ್ನು ನಿರಾಶ್ರಿತರ ಕೇಂದ್ರವನ್ನಾಗಿ ಪರಿವರ್ತಿಸಲಾಗಿತ್ತು. ಅಲ್ಲಿ ಮಕ್ಕಳು ಸೇರಿ 90ಕ್ಕೂ ಹೆಚ್ಚು ಜನ ಆಶ್ರಯ ಪಡೆದುಕೊಂಡಿದ್ದರು. ಭಾನುವಾರ ಅಪರಾಹ್ನ ರಷ್ಯಾ ಸೇನೆ ಈ ಶಾಲೆಯ ಮೇಲೆ ಬಾಂಬ್​ ದಾಳಿ ನಡೆಸಿತು.

ಸ್ಫೋಟದಿಂದ ಉಂಟಾದ ಬೆಂಕಿ ನಾಲ್ಕು ಗಂಟೆ ಕಾಲ ಹೊತ್ತಿ ಉರಿದಿದೆ ಎಂದು ಗೈಡಾಯ್​ ವಿವರಿಸಿದರು.

ದಾಳಿ ನಡೆಸುತ್ತಿರುವ ರಷ್ಯಾ ವನ್ನು ಎದುರಿಸುವುದಕ್ಕೆ ಅಗತ್ಯವಾದ ಹೆಚ್ಚುವರಿ ಸೇನಾ ನೆರವು ನೀಡುವುದನ್ನು ಬ್ರಿಟನ್​ ಖಾತರಿಪಡಿಸಿದೆ. 1.3 ಶತಕೋಟಿ ಪೌಂಡ್ಸ್​ ಸೇನಾ ನೆರವು ನೀಡುವುದಾಗಿ ಬ್ರಿಟನ್​ ಘೋಷಿಸಿದೆ.

ರಷ್ಯಾ ಸೇನೆ ವಿಶೇಷ ಸೇನಾ ಕಾರ್ಯಾಚರಣೆ ಹೆಸರಿನಲ್ಲಿ ನಾಗರಿಕರ ಮೇಲೆ ದಾಳಿ ನಡೆಸುತ್ತಿದೆ. ಮರಿಯುಪೋಲ್​ ಸುತ್ತಮುತ್ತ ನಾಗರಿಕರಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವುದಕ್ಕೆ ಸಾಕ್ಷ$್ಯಗಳು ಬಹಿರಂಗವಾಗಿವೆ ಎಂದು ಯೂಕ್ರೇನ್​ ಮತ್ತು ಅದರ ಪಾಶ್ಚಾತ್ಯ ಮಿತ್ರ ರಾಷ್ಟ್ರಗಳು ಆರೋಪಿಸಿವೆ. ಆದರೆ, ಈ ಆರೋಪವನ್ನು ಮಾಸ್ಕೋ ನಿರಾಕರಿಸಿದೆ.

ಮರಿಯುಪೋಲ್​ ವಶಕ್ಕೆ ಯತ್ನ
ಯೂಕ್ರೇನ್​ನ ಬಂದರು ನಗರ ಮರಿಯುಪೋಲ್​ ಬಹುತೇಕ ನಾಶವಾಗಿದ್ದು, ರಷ್ಯಾ ವಶದಲ್ಲಿದೆ. ಈ ನಗರದ ಸ್ಟೀಲ್​ ಟಕ ಆವರಣದಲ್ಲಿ ನಾಗರಿಕರು ಮತ್ತು ಯೂಕ್ರೇನ್​ ಸೇನೆ ಆಶ್ರಯ ಪಡೆದುಕೊಂಡಿದ್ದು, ರಷ್ಯಾ ಸೇನೆಗೆ ತೀವ್ರ ಪ್ರತಿರೋಧ ತೋರಿದ್ದಾರೆ.

ಇವರನ್ನೆಲ್ಲ ಹೊರ ಹಾಕಿ ಅಥವಾ ಶರಣಾಗುವಂತೆ ಮಾಡಿ ಮರಿಯುಪೋಲ್​ ಅನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಳ್ಳಲು ರಷ್ಯಾ ಸೇನೆ ಪ್ರಯತ್ನ ಮುಂದುವರಿಸಿದೆ.

ಎರಡನೇ ವಿಶ್ವ ಮಹಾಯುದ್ಧದಲ್ಲಿ 1945 ಮೇ 8ರಂದು ಗೆಲುವು ಸಾಧಿಸಿದ ನೆನಪಿಗಾಗಿ ವಿಕ್ಟರಿ ಇನ್​ ಯುರೋಪ್​ ಡೇ ಆಚರಿಸಲಾಗುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ಜಿ7 ನಾಯಕರು ವರ್ಚುವಲ್​ ಆಗಿ ಮಾತುಕತೆ ನಡೆಸಿದ ವೇಳೆ, ಬ್ರಿಟನ್​ ಈ ನೆರವನ್ನು ಖಾತರಿಪಡಿಸಿದೆ.

ಇಡ್ಲಿಯಜ್ಜಿಗೆ ₹12 ಲಕ್ಷದ ಮನೆ ಕೊಡುಗೆ

0

85 ವರ್ಷ ವಯಸ್ಸಿನ ವೃದ್ಧೆ. ಹೊಟ್ಟೆಪಾಡಿಗಾಗಿ ಇಡ್ಲಿ ಮಾರಾಟ ಮಾಡಿ ಜೀವಿಸುತ್ತಿದ್ದರು. ಈಗಾಗಲೇ ಮೂವತ್ತು ವರ್ಷಗಳು ಕಳೆದಿವೆ.
ಆರಂಭದಲ್ಲಿ ಇದ್ದ ಬೆಲೆ ಇಪ್ಪತ್ತೈದು ಪೈಸೆಗೆ ಒಂದು ಇಡ್ಲಿ. ಈಗ ಆರಾರು ತಿಂಗಳಿಗೆ ಬೆಲೆ ಏರೀಯೇರಿ‌ ಪಟ್ಟಣದ ಹೋಟೆಲುಗಳಲ್ಲಾದರೆ ಈಗ ಒಂದು ಇಡ್ಲಿಗೆ ಹದಿನೈದು ರೂಪಾಯಿ. ಆದರೆ ಈ ಇಡ್ಲಿ ಅಜ್ಜಿ
ಹೋಟೆಲಲ್ಲಿ ಎಷ್ಟಿರಬಹುದು ಊಹಿಸಿ. ಐದು ರೂ,ಎಂಟು ರೂ..!?
ನಿಮ್ಮೆಣಿಕೆ ಸರಿಯಿಲ್ಲ ಎಂದರೆ ಅಚ್ಚರಿಪಡುವಿರಿ. ಈಗ ಅಲ್ಲಿ‌ ಒಂದು ಇಡ್ಲಿಗೆ ಒಂದೇ ರೂಪಾಯಿ!.
ಮೂವತ್ತು ವರ್ಷದಲ್ಲಿ ಪೇಟೆ ಧಾರಣೆ ಎಷ್ಟು ಏರಿರಬಹುದು ಲೆಕ್ಕಾಚಾರ ಮಾಡಿ ನೋಡಿ.

ಹತ್ತಿರದ ಹಳ್ಳಿಗಳಿಂದ ಅಂದರೆ ಎರಡು ಕಿಮೀ ದೂರದಿಂದ ಅಲ್ಲಿಗೆ ಬಂದು ಅಜ್ಜಿಯ ಕೈ ಇಡ್ಲಿ ತಿನ್ನುವ ಅಭ್ಯಾಸವಾಗಿಬಿಟ್ಟಿದೆ.
ಅಜ್ಜಿ ಇಡ್ಲಿ ಬಹಳ ಸೋವಿ ಅಂತ ತಿಳಿದು ಕಾರ್ಮಿಕರು, ದಿನಗೂಲಿಗಳು
ಅಲ್ಲಿ ಮುತ್ತಿರುತ್ತಾರೆ.ಏನಿಲ್ಲಾ ಅಂದರೂ ಅಜ್ಜಿ ದಿನಕ್ಕೆ ಒಂದು ಸಾವಿರ ಇಡ್ಲಿ ಬೇಯಿಸುತ್ತಾರೆ. ಸಾಂಬಾರ್ ,ಚಟ್ನಿ ಸೇರಿ ಒಂದುರೂಗೆ ಒಂದು ಇಡ್ಲಿ!
ಸೌದೆ ಒಲೆ, ಹಳೇಪಾತ್ರೆಗಳು,ಇಕ್ಕಟ್ಟು
ಜಾಗ ,ಸರಿಯಾದ ಚಾವಣಿಯಿಲ್ಲ.
ಕೋವಿಡ್ ಲಾಕ್ ಡೌನ್ ನಲ್ಲೂ ಇಡ್ಲಿ
ನಾಟೌಟ್ ಸಪ್ಲೆ.


ಆ ಅಜ್ಜಿಯ ಹೆಸರು ಕಮಲಾಥಲ್.
ಸ್ಥಳ ತಮಿಳುನಾಡಿನ ತೊಂಡಮುತೂರ್.
ಇದನ್ನೆಲ್ಲಾ ಒಮ್ಮೆ ಟ್ವಿಟರ್ ನಲ್ಲಿ ಉದ್ಯಮಿ ಆನಂದ್ ಮಹೀಂದ್ರ
2019 ರಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದರು. ಅದು ವೈರಲ್ಲಾಗಿ ಇಡ್ಲಿ ಅಜ್ಜಿಯ ಸಾಮಾಜಿಕ ಸೇವೆ, ಬದ್ಧತೆಯನ್ನ ಎಲ್ಲರೂ ಮೆಚ್ಚುವಂತೆ ಮಾಡಿತು.ನೆರವಿನ ಹಸ್ತ ನೀಡಲು ಹಲವರು ಮುಂದೆ ಬಂದರು. 2022 ರ ವಿಶ್ವ ಅಮ್ಮಂದಿರ ದಿನ, ಆನಂದ್ ಮಹೀಂದ್ರ ಅವರು ಅಜ್ಜಿಗೆ ಮನೆ ಮತ್ತು ಇಡ್ಲಿ ಬೇಯಿಸಲು ಸಾಧ್ಯವಾದ ಸಜ್ಜಾದ ಸ್ಥಳಾವಕಾಶವನ್ನ ನೂತನವಾಗಿ ನಿರ್ಮಿಸಿ ಕೊಡುಗೆ ನೀಡಿದ್ದಾರೆ.

ನಮ್ಮ ಜನ್ ಎಂಥವರೂ ಅಂದರೆ ಇಡ್ಲಿಗೆ ಬೆಲೆ ಅಷ್ಟು ಸೋವಿ ಇದ್ದರೂ
ಹತ್ತು ಇಡ್ಲಿ ಗುಳುಂ ಮಾಡಿ ಐದುರೂಪಾಯಿ ನೀಡುವ ರುಸ್ತುಮರು ಈಗಲೂ ಇದ್ದಾರೆ.
ಜನ ತಿಂದು ಹೋಗಲಿ ಬಿಡಿ ಎಂದು
ಇಡ್ಲಿ ಅಜ್ಜಿ ಬೊಚ್ಚುಬಾಯಿ ಬಿಟ್ಟು ನಗುತ್ತಾರೆ.!
ಏನೇ ಆಗಲಿ ಮಾನವೀಯ ಅನುಕಂಪ ತೋರಿದ ಉದ್ಯಮಿ
ಆನಂದ್ ಮಹೀಂದ್ರ ಅವರಿಗೆ
ನಾವು ಬೆನ್ನುತಟ್ಟಬಹುದು ಅಲ್ಲವೆ?

ಉಕ್ರೇನ್ ಪಡೆಯಿಂದ ರಷ್ಯದ ಮ್ಯಾಕರೋವ್ ಹಡಗು ಧ್ವಂಸ

0

ರಷ್ಯಾ, ಉಕ್ರೇನ್ ಮೇಲೆ ಯುದ್ಧ ಆರಂಭಿಸಿ ಸುಮಾರು ಎರಡು ತಿಂಗಳೇ ಆದರೂ ಕೂಡ ಯುದ್ಧ ಶಾಂತಿ ಸ್ವರೂಪವನ್ನು ಪಡೆದಿಲ್ಲ. ಇದರ ಮಧ್ಯದಲ್ಲಿ ರಷ್ಯಾದ ಅಡ್ಮಿರಲ್‌ ಮ್ಯಾಕರೋವ್ ಯುದ್ಧ ಹಡಗನ್ನು ಉಕ್ರೇನ್ ಸೇನೆ ಧ್ವಂಸಗೊಳಿಸಿದೆ. ಸಮುದ್ರ ಮಧ್ಯೆಯೇ ಕ್ಷಿಪಣಿ ದಾಳಿ ನಡೆಸಿದ ಉಕ್ರೇನ್ ಸೇನೆ ಹಡಗನ್ನು ನಾಶ ಮಾಡಿದೆ ಎನ್ನಲಾಗಿದೆ.

ಆದರೆ ಇದನ್ನು ಒಪ್ಪಿಕೊಳ್ಳಲು ರಷ್ಯಾ ನಿರಾಕರಿಸಿದೆ. ಕಪ್ಪು ಸಮುದ್ರದಲ್ಲಿ ನಡೆದ ದಾಳಿಯ ಬಗ್ಗೆ ರಷ್ಯಾ ಕೂಡ ಚಿಂತೆ ಆರಂಭವಾಗಿದೆ. ಉಕ್ರೇನ್‌ನ ಹಲವು ಯುದ್ಧ ವಿಮಾನಗಳು ಎರಗಿ ಬಂದಿದ್ದವು. ಸಮುದ್ರದ ಮಧ್ಯೆ ಚಲಿಸುತ್ತಿದ್ದ ಯುದ್ಧ ನೌಕೆಯನ್ನು ಹೊಡೆದುರುಳಿಸಿ ಉಕ್ರೇನ್‌ ಸೇನೆ ಗೆದ್ದು ಬೀಗಿದೆ. ಉಕ್ರೇನ್‌ಗೆ ತಕ್ಕ ಉತ್ತರ ನೀಡಲು ರಷ್ಯಾ ಸಜ್ಜಾಗುತ್ತಿದೆ.

ಟಾಟಾ ಐಪಿಎಲ್ ಸನ್ ರೈಸರ್ಸ್ ವಿರುದ್ಧ ಆರ್ ಸಿಬಿ ಗೆಲುವು

ಭಾನುವಾರ ಐಪಿಎಲ್ ಅಂಗಳದಲ್ಲಿ ಎರಡು ಮುಖಾಮುಖಿ ನಡೆಸಿದೆ. ಮೊದಲ ಮುಖಾಮುಖಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದರೆ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದೆ.

ಈ ಪಂದ್ಯಗಳಲ್ಲಿ ಮೊದಲ ಮುಖಾಮುಖಿಯಲ್ಲಿ ಆರ್‌ಸಿಬಿ ತಂಡ ಅಮೋಘ ಗೆಲುವು ಸಾಧಿಸಿದ್ದರೆ 2ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅದ್ಭುತ ಗೆಲುವು ದಾಖಲಿಸಿದೆ.

ಈ 2 ಪಂದ್ಯಗಳ ಫಲಿತಾಂಶ ಆರ್‌ಸಿಬಿ ಅಭಿಮಾನಿಗಳಿಗೆ ಹೆಚ್ಚು ಖುಷಿ ನೀಡುವಂತಿದೆ. ಪ್ಲೇಆಫ್ ಹಂತಕ್ಕೇರಲು ಆರ್‌ಸಿಬಿಗೆ ಪೂರಕವಾಗುವಂತಾ ಫಲಿತಾಂಶಗಳು 2 ಪಂದ್ಯದಲ್ಲಿಯೂ ಬಂದಿದೆ. ಅಲ್ಲದೆ ನೆಟ್ ರನ್‌ರೇಟ್‌ಅನ್ನು ಕೂಡ ಆರ್‌ಸಿಬಿಗೆ ಈ ಪಂದ್ಯದಲ್ಲಿ ಉತ್ತಮ ಪಡಿಸಿಕೊಳ್ಳಲು ಯಶಸ್ವಿಯಾಗಿದೆ.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧಧ ಪಂದ್ಯದಲ್ಲಿ ಆರ್‌ಸಿಬಿ ಮೊದಲಿಗೆ ಬ್ಯಾಟಿಂಗ್ ಮಾಡಿ ಫಾಫ್ ಡು ಪ್ಲೆಸಿಸ್, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ದಿನೇಶ್ ಕಾರ್ತಿಕ್ ಅವರ ಅಮೋಘ ಬ್ಯಾಟಿಂಗ್‌ನಿಂದಾಗಿ ಭರ್ಜರಿ ಪ್ರದರ್ಶನ ನೀಡಿತ್ತು. ನಿಗದಿತ 20 ಓವರ್‌ಗಳಲ್ಲಿ ಆರ್‌ಸಿಬಿ 3 ವಿಕೆಟ್ ಕಳೆದುಕೊಂಡು 192 ರನ್‌ ಗಳಿಸಿತ್ತು. ಇದನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಸಂಪೂರ್ಣವಾಗಿ ಮುಗ್ಗರಿಸಿತು. ರಾಹುಲ್ ತ್ರಿಪಾಠಿ ಹೊರತುಪಡಿಸಿದರೆ ಉಳಿದ ಯಾವ ಆಟಗಾರ ಕೂಡ ಆರ್‌ಸಿಬಿ ವಿರುದ್ಧ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದರು. ಇದರ ಪರಿಣಾಮವಾಗಿ ಎಸ್‌ಆರ್‌ಹೆಚ್ ತಂಡ 125 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 67 ರನ್‌ಗಳ ಗೆಲುವು ದಾಖಸಿದೆ.

ಜೂನ್ ಅಂತ್ಯದೊಳಗೆ ನೀರಾವರಿ ಕಾಮಗಾರಿ ಪೂರೈಸಿ-ಕಾರಜೋಳ

0

ಜೂನ್ ಅಂತ್ಯದೊಳಗೆ ನೀರಾವರಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರ ವಿರುದ್ಧ ನೋಟಿಸ್ ಜಾರಿ ಮಾಡಿ, ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಕಲಘಟಗಿ ತಾಲ್ಲೂಕಿನ ಬೆಲವಂತರ ಗ್ರಾಮದ ಹತ್ತಿರ ಬೇಡ್ತಿ (ಶಾಲ್ಮಲಾ) ನದಿಗೆ ಚೆಕ್‌ಡ್ಯಾಮ್‌ ನಿರ್ಮಿಸಿ ಅಲ್ಲಿಂದ 153 ಕಿ.ಮೀ. ಉದ್ದದ ಪೈಪ್ ಲೈನ್ ಮೂಲಕ ತಾಲ್ಲೂಕಿನ 35 ನೀರಾವರಿ ಕೆರೆ ತುಂಬಿಸುವ ₹ 122 ಕೋಟಿ ಮೊತ್ತದ ಕಾಮಗಾರಿ ಭಾನುವಾರ ವೀಕ್ಷಣೆ ಹಾಗೂ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದರು.

ಏತ ನೀರಾವರಿ ಯೋಜನೆ ಪೂರ್ಣಗೊಳಿಸುವಲ್ಲಿ ವಿಳಂಬ ಮಾಡಿರುವ ಬೆಂಗಳೂರಿನ ಅಮೃತ ಕನ್‌ಸ್ಟ್ರಕ್ಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ್ ಮತ್ತು ಕಾರ್ಯನಿರ್ವಾಹಕ ಎಂಜನಿಯರ್ ಎಸ್.ಕೆ ಕುಲಕರ್ಣಿ ಗುತ್ತಿಗೆ ಸಂಸ್ಥೆಗೆ ತಕ್ಷಣ ನೋಟಿಸ್ ನೀಡಿ, ಶೀಘ್ರದಲ್ಲಿ ರಿಸ್ಕ್ ಆಯಂಡ್ ಕಾಸ್ಟ್ ಪ್ರಪೋಸಲ್ ಸಲ್ಲಿಸುವುದಾಗಿ ಹೇಳಿದರು.

ಕೊರೊನಾ ಹಿನ್ನೆಲೆ ಒಂದೂವರೆ ವರ್ಷ ಹೆಚ್ಚುವರಿ ಅವಧಿ ನೀಡಲಾಗಿದೆ. ನಿಗದಿತ ಅವಧಿಗಿಂತ ಒಂದು ವರ್ಷ ವಿಳಂಬವಾಗಿದ್ದರೂ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ಗುತ್ತಿಗೆದಾರರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸರ್ಕಾರದ ಹಣ ಅಪವ್ಯಯ ಆಗುತ್ತಿದೆ. ಹಾಗಾಗಿ ಗುತ್ತಿಗೆ ಸಂಸ್ಥೆಯ ವಿರುದ್ಧ `ರಿಸ್ಕ್ ಆಯಂಡ್ ಕಾಸ್ಟ್ ಪ್ರಪೋಸಲ್’ ಸಲ್ಲಿಸುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು.

ಏತ ನೀರಾವರಿ ಯೋಜನೆಗೆ ಬೆಲವಂತರ ಗ್ರಾಮದ 13 ರೈತರ ಭೂಮಿ ಬಳಕೆಯಾಗಿದೆ. ಭೂಸ್ವಾಧೀನ ಮಾಡಿಕೊಂಡು ನಾಲ್ಕು ವರ್ಷ ಕಳೆಯುತ್ತ ಬಂದರೂ ಇನ್ನೂ ತಮಗೆ ಪರಿಹಾರ ನೀಡಿಲ್ಲ, ಎಷ್ಟೇ ಗೋಗರೆದರೂ ಅಧಿಕಾರಿಗಳು ಕಣ್ತೆರೆದು ನೋಡುತ್ತಿಲ್ಲ ಎಂದು ಆ ರೈತರು ಸಚಿವರ ಎದುರು ತಮ್ಮ ಗೋಳು ತೋಡಿಕೊಂಡರು.

ಶಾಸಕ ಸಿ.ಎಂ.ನಿಂಬಣ್ಣವರ ಕೂಡ ಅವರ ಪರವಾಗಿ ಸಚಿವರಲ್ಲಿ ಮನವಿ ಮಾಡಿದರು.
ಈ ಮನವಿಗೆ ಸ್ಪಂದಿಸಿದ ಸಚಿವರು, ಒಪ್ಪಿಗೆ ನಿಯಮಾವಳಿ (ಕನ್ಸೆಂಟ್) ಅಡಿಯಲ್ಲಿ ಎರಡೇ ದಿನಗಳಲ್ಲಿ ಪರಿಹಾರ ನೀಡುವಂತೆ ಭೂಸ್ವಾಧೀನ ಅಧಿಕಾರಿಗೆ ತಾಕೀತು ಮಾಡಿದರು.

ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿ ಗುತ್ತಿಗೆದಾರ ನಿರ್ಲಕ್ಷದಿಂದ 4 ವರ್ಷಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಈಗ ತಡಮಾಡದೆ ರೈತರು ಮುಂಗಾರು ಬಿತ್ತನೆ ಮಾಡುವುದರೊಳಗಾಗಿ ರೈತರ ಜಮೀನಿನಲ್ಲಿ ಕೆರೆಗೆ ಪೈಪ್ ಲೈನ್ ಅಳವಡಿಕೆ ಮಾಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಸ್ ಪಾಟೀಲ, ಪಟ್ಟಣ ಪಂಚಾಯಿತಿ ಸದಸ್ಯರಾದ ಗಂಗಾಧರ ಗೌಳಿ, ಕೃಷ್ಣಾ ತಹಶೀಲ್ದಾರ್, ಜಿಲ್ಲಾ ಬಿಜೆಪಿ ಘಟಕದ ನಿಂಗಪ್ಪ ಸುತಗಟ್ಟಿ, ಸದಾನಂದ ಚಿಂತಾಮನಿ, ಅಶೋಕ ಆಡಿನವರ, ಶಿವಯ್ಯ ಸಿಂಧೋಗಿಮಠ, ಯಲ್ಲಪ್ಪ ಆಸಮಟ್ಟಿ, ಬೀರಪ್ಪ ಡೊಳ್ಳಿನ, ಪರಶುರಾಮ ಹುಲಿಹೊಂಡ ಇದ್ದರು

ಭದ್ರಾ ಜಲಾಶಯದಿಂದ ನೀರು ಬಿಡುಗಡೆ- ಮುನ್ನೆಚ್ಚರಿಕೆ ಮಾಹಿತಿ

0

2021-22 ನೇ ಸಾಲಿನಲ್ಲಿ ಗದಗ ಬೆಟಗೇರಿ ಹಾಗೂ ಇನ್ನಿತರೆ ಕುಡಿಯುವ ನೀರಿನ ಯೋಜನೆಗಳಿಗೆ ಭದ್ರಾ ಜಲಾಶಯದಿಂದ ಭದ್ರಾ ನದಿ ಮೂಲಕ ಮೇ 6 ರಿಂದ ರಾತ್ರಿ.10:30 ರಿಂದ ಈ ಕೆಳಕಂಡಂತೆ ನೀರನ್ನು ಹರಿಸಲಾಗುತ್ತಿದೆ.

ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.

ಮೇ 06 ರಂದು 3800 ಕ್ಯೂಸೆಕ್ಸ್, ಮೇ 07 ರಂದು 4340 ಕ್ಯೂಸೆಕ್ಸ್, ಮೇ 08 ರಂದು 4520 ಕ್ಯೂಸೆಕ್ಸ್, ಮೇ 09 ರಂದು 4520 ಕ್ಯೂಸೆಕ್ಸ್, ಮೇ 10 ರಂದು 4520 ಕ್ಯೂಸೆಕ್ಸ್ ಮತ್ತು ಮೇ 11 ರಂದು 4340 ಕ್ಯೂಸೆಕ್ಸ್ ಒಟ್ಟು 26040(2.25 ಟಿಎಂಸಿ) ಕ್ಯೂಸೆಕ್ಸ್ ನೀರು ಹರಿಸಲಾಗುವುದು.

ಆದ್ದರಿಂದ ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲಿ, ದನಕರುಗಳನ್ನು ನದಿಗೆ ಇಳಿಸುವುದಾಗಲೀ ಇತ್ಯಾದಿ ಚಟುವಟಿಕೆಗಾಗಿ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಮೇಲೆ ತಿಳಿಸಿದ ಅವಧಿಯಲ್ಲಿ ರೈತಬಾಂಧವರು ನದಿ ದಂಡೆಯಲ್ಲಿ ಅಳವಡಿಸಿರುವ ಪಂಪ್‍ಸೆಟ್‍ಗಳಿಂದ ನೀರೆತ್ತುವುದನ್ನು ಸಹ ನಿಷೇಧಿಸಲಾಗಿದೆ.

ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಅಗ್ನಿಸುರಕ್ಷಾ ಕ್ರಮ ಅನುಸರಣ-ಸುಧಾಕರ್

0

ರಷ್ಯಾ, ಉಕ್ರೇನ್ ಮೇಲೆ ಯುದ್ಧ ಆರಂಭಿಸಿ ಸುಮಾರು ಎರಡು ತಿಂಗಳೇ ಆದರೂ ಕೂಡ ಯುದ್ಧ ಶಾಂತಿ ಸ್ವರೂಪವನ್ನು ಇದರ ಮಧ್ಯದಲ್ಲಿ ರಷ್ಯಾದ ಅಡ್ಮಿರಲ್‌ ಮ್ಯಾಕರೋವ್ ಯುದ್ಧ ಹಡಗನ್ನು ಉಕ್ರೇನ್ ಸೇನೆ ಧ್ವಂಸಗೊಳಿಸಿದೆ. ಸಮುದ್ರ ಮಧ್ಯೆಯೇ ಕ್ಷಿಪಣಿ ದಾಳಿ ನಡೆಸಿದ ಉಕ್ರೇನ್ ಸೇನೆ ಹಡಗನ್ನು ನಾಶ ಮಾಡಿದೆ ಎನ್ನಲಾಗಿದೆ.

ಆದರೆ ಇದನ್ನು ಒಪ್ಪಿಕೊಳ್ಳಲು ರಷ್ಯಾ ನಿರಾಕರಿಸಿದೆ. ಕಪ್ಪು ಸಮುದ್ರದಲ್ಲಿ ನಡೆದ ದಾಳಿಯ ಬಗ್ಗೆ ರಷ್ಯಾ ಕೂಡ ಚಿಂತೆ ಆರಂಭವಾಗಿದೆ. ಉಕ್ರೇನ್‌ನ ಹಲವು ಯುದ್ಧ ವಿಮಾನಗಳು ಎರಗಿ ಬಂದಿದ್ದವು. ಸಮುದ್ರದ ಮಧ್ಯೆ ಚಲಿಸುತ್ತಿದ್ದ ಯುದ್ಧ ನೌಕೆಯನ್ನು ಹೊಡೆದುರುಳಿಸಿ ಉಕ್ರೇನ್‌ ಸೇನೆ ಗೆದ್ದು ಬೀಗಿದೆ. ಉಕ್ರೇನ್‌ಗೆ ತಕ್ಕ ಉತ್ತರ ನೀಡಲು ರಷ್ಯಾ ಸಜ್ಜಾಗುತ್ತಿದೆ.

ವಿಳಂಬ ಬೇಡ,ಒಂದು ತಂಡವಾಗಿ ಕೆಲಸಮಾಡಿ ಬೊಮ್ಮಾಯಿ

0

ಭ್ರಷ್ಟಾಚಾರ ಸಹಿಸಲ್ಲ. ಯೋಜನೆಗಳ ವಿಳಂಬವನ್ನು ಒಪ್ಪಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಡೆಸಿದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ನೀಡಿದ ಖಡಕ್ ಸೂಚನೆ ನೀಡಿದರು.

ಬಡವರಿಗೆ ಸಹಾಯ ಮಾಡಲು ಏನೇ ನಿರ್ಧಾರ ತೆಗೆದುಕೊಂಡರೂ ಸರ್ಕಾರ ನಿಮ್ಮ ರಕ್ಷಣೆಗೆ ನಿಲ್ಲುತ್ತದೆ. ಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಿದರೆ ಹೊಸ ಚೈತನ್ಯ ಮೂಡುತ್ತದೆ. ಅದರಿಂದ ನಿಮಗೂ ತೃಪ್ತಿ ದೊರೆಯುವುದು. ಜನಸಾಮಾನ್ಯರಿಗೆ ಆಡಳಿತದಲ್ಲಿ ಬದಲಾವಣೆ ಆಗುತ್ತಿದೆ ಎಂದರು.

ಆಡಳಿತ ಶೈಲಿಯಲ್ಲಿ ಬದಲಾವಣೆ ತರುವ ಸಂಕಲ್ಪ ಮಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳಿಗೆ ಕರೆ ನೀಡಿದರು.

ಸರಳ, ಸುಲಭ ಮತ್ತು ಸ್ವಚ್ಛವಾಗಿದೆ ಎಂಬ ಭಾವನೆ ಬರುವಂತೆ ಆಡಳಿತ ನೀಡಬೇಕು. ನಾವು ಒಂದು ತಂಡವಾಗಿ ಒಟ್ಟಾಗಿ ಕೆಲಸ ಮಾಡಬೇಕು. ನನ್ನ ಕಲ್ಪನೆಯ ನವ ಕರ್ನಾಟಕದ ಸಾಕಾರಕ್ಕೆ ನಿಮ್ಮ ಸಹಕಾರ ಅಗತ್ಯ ಎಂದರು.

ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಆರ್. ಅಶೋಕ್, ಸಿ.ಸಿ.ಪಾಟೀಲ್, ಕೆ.ಸಿ.ನಾರಾಯಣಗೌಡ, ಕೆ.ಗೋಪಾಲಯ್ಯ, ಬಿ.ಸಿ.ನಾಗೇಶ್, ಬಿ.ಸಿ ಪಾಟೀಲ್, ಸುನೀಲ್ ಕುಮಾರ್ , ಪ್ರಭು ಚೌಹಾಣ್, ಉಮೇಶ್ ಕತ್ತಿ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಂಗ್ರೆಸ್ ಗೆ ಅಧಿಕಾರ ಕೊಡಿ 10 ಕೆ.ಜಿ.ಅಕ್ಕಿ ಉಚಿತ ನೀಡುತ್ತೇವೆ-ಸಿದ್ಧರಾಮಯ್ಯ

0

ಮುಂದಿರುವ 2023ರ ಚುನಾವಣೆಯಲ್ಲಿ ಜನರ ಆಶೀರ್ವಾದಿಂದ ನಾವು ಅಧಿಕಾರಕ್ಕೆ ಬಂದರೆ 10ಕೆ.ಜಿ. ಅಕ್ಕಿ ಉಚಿ​ತ​ವಾಗಿ ಕೋಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು.

ರಾಮದುರ್ಗ ತಾಲೂಕಿನ ಅವರಾದಿ ಗ್ರಾಮದಲ್ಲಿ ಭಾನು​ವಾ​ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಉದ್ಘಾಟಿಸಿ ಮಾತನಾಡಿ, ಅಗತ್ಯವಸ್ತು ಬೆಲೆ ದುಪ್ಪ​ಟ್ಟಾ​ಗಿ​ದೆ.

ಒಂದು ಕಡೆ ಬೆಲೆ ಏರಿಕೆ ಇನ್ನೊಂದು ಕಡೆ ಲೂಟಿ ಹೊಡೆಯುವುದು ನಡೆ​ಯು​ತ್ತಿ​ದೆ. ಪಿಎಸ್‌ಐ ನೇಮಕಾತಿಯಲ್ಲಿ ಸುಮಾರು 300 ಕೋಟಿ ಹೊಡೆದಿದ್ದಾರೆ ಎಂದು ಆರೋಪಿಸಿದರು.

ಇಂಥ ಸರ್ಕಾರ ಯಾವುದೇ ಕಾರ​ಣಕ್ಕೂ ಇರ​ಬಾ​ರದು. ಇಂಥ ಸರ್ಕಾ​ರ​ವನ್ನು ಬೇರು ಸಮೇತ ಕಿತ್ತು ಎಸೆದಾಗ ದೇಶ, ನಾವು, ನೀವು ಉಳಿ​ಯು​ತ್ತೇ​ವೆ. ಈ ಸರ್ಕಾರಕ್ಕೆ ಕಣ್ಣು ಕಾಣಿಸಲ್ಲ. ಕಿವಿಯೂ ಕೇಳಿಸಲ್ಲ. ಈ ಸರ್ಕಾರದ್ದು ಎಮ್ಮೆ ಚರ್ಮ ಅಲ್ಲ. ಘೇಂಡಾಮೃಗದ ಚರ್ಮ ಎಂದು ತೀವ್ರ ಕಿಡಿಕಾರಿದರು.

ಅಸಾನಿ ಚಂಡಮಾರುತ:ರಾಜ್ಯದಲ್ಲಿ ಹಲವೆಡೆ ಮಳೆ

0

ಆಂಧ್ರಪ್ರದೇಶದ ದಕ್ಷಿಣ ಭಾಗ ಮತ್ತು ಒಡಿಶಾದಲ್ಲಿ ಚಂಡಮಾರುತದ ಪ್ರಭಾವ ಹೆಚ್ಚಾಗಿದೆ. ಕರ್ನಾಟಕ ಸೇರಿದಂತೆ ಅನೇಕ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇನ್ನು ಗಂಟೆಗೆ 80 ರಿಂದ 90 ಕಿಲೋ ಮೀಟರ್‌ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಅಂದಾಜು ಮಾಡಲಾಗಿದೆ. ಮೇ 10 ರ ಬಳಿಕ ಗಾಳಿಯ ವೇಗ ಕಡಿಮೆಯಾಗಲಿದೆ ಎನ್ನಲಾಗಿದೆ. ಮೇ 9 ಮತ್ತು 10 ರಂದು ಆಂಧ್ರಪ್ರದೇಶ ಹಾಗೂ ಒಡಿಶಾದ 17 ಜಿಲ್ಲೆಗಳಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆಯನ್ನೂ ಸಹ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ಮಂಡ್ಯ, ಮೈಸೂರು, ಚಾಮರಾಜನಗರ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದ್ದು, ಈ ಪ್ರದೇಶಗಳಲ್ಲಿ ಎಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಈ ಚಂಡಮಾರುತಕ್ಕೆ ಅಸಾನಿ ಎಂದು ಹೆಸರಿಡಲಾಗಿದೆ. ಅಸಾನಿ ಎಂದರೆ ಶ್ರೀಲಂಕಾದ ಸಿಂಹಳಿ ಭಾಷೆಯಲ್ಲಿ ಕ್ರೋಧ ಎಂದರ್ಥ. ಸದ್ಯ ಚಂಡಮಾರುತದ ಅಬ್ಬರ ಒಡಿಶಾ ಕಡೆಗೆ ಸಾಗುತ್ತಿದ್ದು, ಮೇ 9 ಮತ್ತು 10ರಂದು ಮಳೆಯಾಗುವ ಸಾಧ್ಯತೆಯಿದೆ.