Sunday, March 1, 2026
Sunday, March 1, 2026
Home Blog Page 1588

16 ವರ್ಷದೊಳಗಿನ ಮಕ್ಕಳಿಗೆ ಲೈವ್ ಸ್ಟ್ರೀಮಿಂಗ್ ನಿಷೇಧಿಸಿದ ಚೀನ

0

ಅಪ್ರಾಪ್ತರ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಿಸಲು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲೈವ್-ಸ್ಟ್ರೀಮಿಂಗ್ ಮಾಡುವುದನ್ನು ನಿಷೇಧಿಸಲು ಚೀನಾ ಮುಂದಾಗಿದೆ.

ಹೊಸ ನಿಯಮಗಳ ಪ್ರಕಾರ, 16 ವರ್ಷದೊಳಗಿನವರನ್ನು ಲೈವ್-ಸ್ಟ್ರೀಮಿಂಗ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

.16 ಮತ್ತು 18 ರ ನಡುವಿನ ವಯಸ್ಸಿನ ಬಳಕೆದಾರರು ಲೈವ್ ಸ್ಟ್ರೀಮ್ ಮಾಡುವ ಮೊದಲು ತಮ್ಮ ಪೋಷಕರು ಅಥವಾ ಪೋಷಕರಿಂದ ಅನುಮತಿಯನ್ನು ಪಡೆಯಬೇಕು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಇಂಟರ್ನೆಟ್ ಪ್ಲಾಟ್‌ ಫಾರ್ಮ್‌ ಗಳಲ್ಲಿ ನೈಜ ಹೆಸರಿನ ನೋಂದಣಿ ಅಗತ್ಯವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
ನಗದು ಟಾಪ್-ಅಪ್, ಉಡುಗೊರೆ ಖರೀದಿ ಮತ್ತು ಆನ್‌ ಲೈನ್ ಪಾವತಿಯಂತಹ ಅಪ್ರಾಪ್ತ ವಯಸ್ಕರ ಟಿಪ್ಪಿಂಗ್ ಸೇವೆಗಳನ್ನು ನೀಡುವುದನ್ನು ನಿಷೇಧಿಸಬೇಕು ಎಂದು ಹೇಳಲಾಗಿದೆ.

ದಾಖಲೆ ಪುಡಿ ಮಾಡಿ ಹೊಸ ದಾಖಲೆಯತ್ತಕೆಜಿಎಫ್ 2

0

ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘ಕೆಜಿಎಫ್ 2’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಿನದಿಂದ ದಿನಕ್ಕೆ ಒಂದೊಂದೇ ದಾಖಲೆಗಳನ್ನು ಮುರಿಯುತ್ತಾ ಮುಂದೆ ಸಾಗುತ್ತಿದೆ.

25ನೇ ದಿನದತ್ತ ಮುನ್ನುಗ್ಗಿದ್ದರೂ, ಕಲೆಕ್ಷನ್ ಮಾತ್ರ ಯಾವುದೇ ರೀತಿಯಲ್ಲಿ ಕಡಿಮೆಯಾಗಿಲ್ಲ.
ಈವರೆಗೂ ಕೆಜಿಎಫ್ 2 ಅಂದಾಜು 1129.38 ಕೋಟಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ.

ಈ ಮೂಲಕ ಆರ್.ಆರ್.ಆರ್ ಸಿನಿಮಾದ ವರ್ಲ್ಡ್ ವೈಡ್ ಕಲೆಕ್ಷನ್ ದಾಖಲೆಯನ್ನೂ ಕೆಜಿಎಫ್ 2 ಪುಡಿಪುಡಿ ಮಾಡಿದೆ.

2022 ನಲ್ಲಿ ಅತೀ ಹೆಚ್ಚು ಬಾಕ್ಸ್ ಆಫೀಸಿನಲ್ಲಿ ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆಗೂ ಕೆಜಿಎಫ್ 2 ಕಾರಣವಾಗಿದ್ದರೆ, ಭಾರತೀಯ ಸಿನಿಮಾ ರಂಗದಲ್ಲಿ ಅತೀ ಹೆಚ್ಚು ದುಡ್ಡು ಮಾಡಿದ ಮೂರನೇ ಸಿನಿಮಾ ಎಂಬ ಖ್ಯಾತಿಯೂ ಈ ಸಿನಿಮಾದ್ದು. ದೇಶದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಇನ್ನೂ ಭರ್ಜರಿ ಪ್ರದರ್ಶನ ಕಾಣುತ್ತಿರುವುದರಿಂದ ಈವರೆಗಿನ ಎಲ್ಲ ದಾಖಲೆಗಳನ್ನು ಕೆಜಿಎಫ್ 2 ಮುರಿದು, ಹೊಸ ದಾಖಲೆಯನ್ನು ಬರೆಯಲಿದೆ ಎಂದು ಅಂದಾಜಿಸಲಾಗಿದೆ.

25ನೇ ದಿನದೊಳಗಿನ ಆರ್.ಆರ್.ಆರ್ ಸಿನಿಮಾದ ಒಟ್ಟು ಲೆಕ್ಕಾಚಾರ 1127.65 ಕೋಟಿ ಎಂದು ಹೇಳಲಾಗಿತ್ತು. ಕೆಜಿಎಫ್ 2 ಸಿನಿಮಾ 1129.38 ಕೋಟಿ ಗಳಿಕೆ ಮಾಡುವ ಮೂಲಕ ಆರ್.ಆರ್.ಆರ್ ದಾಖಲೆಯನ್ನು ಮುರಿಯಲಾಗಿದೆ.

ಅಲ್ಲಿಗೆ ಭಾರತೀಯ ಸಿನಿಮಾ ರಂಗದಲ್ಲೇ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಕೀರ್ತಿಗೆ ಕೆಜಿಎಫ್ 2 ಪಾತ್ರವಾಗಿದೆ.

ಬೇಸಿಗೆ ತಾಪಮಾನ:ಮೇ 30 ರವರೆಗೆ ರಜೆ ವಿಸ್ತರಿಸಲು ಮನವಿ-ಷಡಕ್ಷರಿ

0

ರಾಜ್ಯದಲ್ಲಿ ಮೇ 16 ರಿಂದ ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಈ ನಿರ್ಧಾರಕ್ಕೆ ಕೈಬಿಟ್ಟು ಮೇ 30 ರವರೆಗೆ ಬೇಸಿಗೆ ರಜೆ ವಿಸ್ತರಿಸಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮನವಿ ಮಾಡಿದ್ದಾರೆ.

ವಿಧಾನಪರಿಷತ್ ಸದಸ್ಯ ಚಿದಾನಂದ ಗೌಡ ಅವರು ಕೂಡ ರಜೆಯನ್ನು ಮೇ 30 ರವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘ ಮೇ 30ರವರೆಗೆ ರಜೆ ವಿಸ್ತರಿಸಬೇಕೆಂದು ಪತ್ರ ಬರೆದಿರುವುದಕ್ಕೆ ರಾಜ್ಯ ಖಾಸಗಿ ಶಾಲಾ ಕಾಲೇಜು ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆ, ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಆಡಳಿತ ಮಂಡಳಿಗಳ ಸಂಘ, ನೋಂದಾಯಿತ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘದಿಂದ ವಿರೋಧ ವ್ಯಕ್ತವಾಗಿದೆ.

ಈ ಕುರಿತಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಪತ್ರ ಬರೆದಿದ್ದು, 15 ದಿನ ಮೊದಲೇ ಶಾಲೆ ಆರಂಭಿಸಲು ಮುಂದಾಗಿರುವುದರಿಂದ ದೂರದ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ವರ್ಷಕ್ಕೊಮ್ಮೆ ನೀಡುವ ಕನಿಷ್ಠ ರಜೆ, ಬೇಸಿಗೆ ರಜೆ ಅವಧಿಯಲ್ಲಿ ಕುಟುಂಬದೊಂದಿಗೆ ಕಾಲ ಕಳೆಯಲು ಸಾಧ್ಯವಾಗುವುದಿಲ್ಲ. ಈ ಬಾರಿ ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗಿರುವುದರಿಂದ ಬೇಸಿಗೆ ರಜೆಯನ್ನು ವಿಸ್ತರಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ನಿಗದಿಯಂತೆ ಶಾಲೆ ಆರಂಭಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಅಧಿಕ ಸಂಖ್ಯೆಯಲ್ಲಿ ಈಜು ತರಬೇತಿ ಪಡೆದಿರುವುದು ಹೆಮ್ಮೆಯ ಸಂಗತಿ- ದತ್ತಾತ್ರಿ

0

ಮಲೆನಾಡಿನ ಪ್ರಸಿದ್ಧ ಫ್ಯಾಮಿಲಿ ಕ್ಲಬ್, “ಕಾಸ್ಮೋ ಕ್ಲಬ್” ನಲ್ಲಿ ನಡೆದ ಈಜು ತರಬೇತಿ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಈಜು ಪ್ರಮಾಣಪತ್ರವನ್ನು (Swimming Certificate) ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹರಾದ “ಶ್ರೀ ಪಟ್ಟಾಭಿರಾಮ್” ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ “ಈಜು ಪ್ರಮಾಣಪತ್ರವನ್ನು ವಿತರಿಸಿದರು. ಹಾಗೂ ಕಾಸ್ಮೋ ಕ್ಲಬ್ ಉಪಾಧ್ಯಕ್ಷರು ಹಾಗೂ ಎಲ್ಲಾ ನಿರ್ದೇಶಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಕ್ಕಳನ್ನು ಪ್ರೋತ್ಸಾಹಿಸಿದರು.

ಕಾಸ್ಮೋ ಕ್ಲಬ್ ನಲ್ಲಿನ ಈಜುಕೊಳವು ದೊಡ್ಡದಾದ ವಿಸ್ತೀರ್ಣ ಹೊಂದಿದ್ದು ಸುಂದರವಾದ ಹಸಿರಿನ ಆವರಣದಿಂದ ಕೂಡಿದೆ. ದಿನನಿತ್ಯ ಅದನ್ನು ಸ್ವಚ್ಛಗೊಳಿಸುವುದು ಹಾಗೂ ನೀರಿನ ಶುದ್ಧಿಕರಣದೊಂದಿಗೆ ಅದು ವಿಶೇಷವಾಗಿ ಕಂಗೊಳಿಸುತ್ತಿರುತ್ತದೆ. ಹಾಗೂ ಎಲ್ಲರನ್ನೂ ತನ್ನತ್ತ ಆಕರ್ಷಿಸುವಂತಹ ಈಜುಕೊಳ ಇದಾಗಿದೆ. ಹಾಗಾಗಿ 2018 ರಿಂದ ಆರಂಭವಾದ ನಮ್ಮ ಕಾಸ್ಮೂ ಕ್ಲಬ್ ನ ಈ ಬೇಸಿಗೆ ಈಜು ತರಬೇತಿ ಶಿಬಿರದಲ್ಲಿ ಇದುವರೆಗೂ ಸುಮಾರು 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿ ಈಜು ತರಬೇತಿಯನ್ನು ಪೂರ್ಣಗೊಳಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿ…

ಶಿವಮೊಗ್ಗ ಜಿಲ್ಲಾ ತೃತೀಯ ಜಾನಪದ ಸಮ್ಮೇಳನ

0

ಭದ್ರಾವತಿ ತಾಲ್ಲೂಕು ಗೋಣಿಬೀಡು ಗ್ರಾಮದಲ್ಲಿ ಸಂಭ್ರಮದ ಜಾನಪದ ಕಲರವ. ಕರ್ನಾಟಕ ಜಾನಪದ ಪರಿಷತ್ತು ಮತ್ತು ಶ್ರೀ ಶೀಲಸಂಪಾದನಾ ಮಠದ ಸಹಯೋಗದಲ್ಲಿ ಊರವರ ಸಹಕಾರದಿಂದ ಶಿವಮೊಗ್ಗ ಜಿಲ್ಲಾ ಮೂರನೇ ಜಾನಪದ ಸಮ್ಮೇಳನ ಉತ್ಸಾಹ, ಸಡಗರ, ಸಂಭ್ರಮದಿಂದ ನಡೆಯಿತು.

ದೂರದೂರುಗಳಿಂದ ಬಂದ ವಿವಿಧ ಪ್ರಕಾರದ ಜನಪದ ಕಲಾತಂಡಗಳು ತಮ್ನ ಉಡುಗೆ ತೊಡುಗೆಗಳ ಮೂಲಕ ರಂಗು ತಂದರೆ, ಊರವರು ತಳಿರು ತೋರಣ ಕಟ್ಟಿ ಊರನ್ನು ಶೃಂಗಾರ ಮಾಡಿದ್ದರು. ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆ ಚಂದಗಾಣಿಸಿದರು.

ಊರಿನ ಯುವ ರೈತ ಮುಖಂಡರು ಶೃಂಗರಿಸಿದ ಎತ್ತಿನ ಗಾಡಿಗಳಲ್ಲಿ ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿದರು. ಸಾರೋಟ್ ವಾಹನದಲ್ಲಿ ಬಸವೇಶ್ವರರ ಪುತ್ಥಳಿ , ವಿವಿಧ ಟ್ಯ್ರಾಕ್ಟರ್ ಗಳಲ್ಲಿ ಸ್ಥಬ್ದಚಿತ್ರಗಳು, ತೆರೆದ ವಾಹನದಲ್ಲಿ ಶ್ರೀ ಸಿದ್ದಲಿಂಗ ಸ್ವಾಮಿಗಳು, ಸಮ್ಮೇಳನ ಅಧ್ಯಕ್ಷ ಜಿ.ಸಿ. ಮಂಜಪ್ಪ, ಹಿಂದಿನ ಸಮ್ಮೇಳನದ ಅಧ್ಯಕ್ಷ ಡೊಳ್ಲಿನ ಹುಚ್ಚಪ್ಪ ಇದ್ದರು. ಬಿಸಿಲಿನ ಧಗೆ ಹೆಚ್ಚಾದಂತೆ ಹಳ್ಳಿಗರು ಮೆರವಣಿಗೆಯಲ್ಲಿದ್ದ ಸಾವಿರಾರು ಜನರಿಗೆ ನೀರು, ಬೆಲ್ಲ, ಪಾನಕ, ಟೀ ಕೊಟ್ಟು ಹುರಿದುಂಬಿಸಿದರು.

ಜಾತ್ಯತೀತ ಜನತಾದಳ ಜಿಲ್ಲಾ ಅಧ್ಯಕ್ಷರಾದ ಎಂ. ಶ್ರೀಕಾಂತ್, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ‌. ಮಂಜುನಾಥ, ತಾಲ್ಲೂಕು ಅಧ್ಯಕ್ಷರಾದ ಕೋಡ್ಲು ಯಜ್ಞಯ್ಯ, ಹಿರಿಯೂರು ಹೋಬಳಿ ಅಧ್ಯಕ್ಷರಾದ ಗೊಂದಿ ಜಯರಾಮ, ಗ್ರಾ. ಪಂ. ಅಧ್ಯಕ್ಷರಾದ ಸುಬ್ರಮಣಿ ಜಿ. ಬಿ., ಎಂ. ರಮೇಶ್, ಯಶೋಧಮ್ಮ, ಸಿದ್ದೋಜಿರಾವ್, ಭಾರತಿ ರಾಮಕೃಷ್ಣ, ಗ್ರಾ. ಪಂ. ಸದಸ್ಯರು, ವಿವಿಧ ತಾಲ್ಲೂಕು ಕಜಾಪ, ಕಸಾಪ, ಕಸಾಸಾಂ ವೇದಿಕೆ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.
ಉದ್ಘಾಟನೆ ಸಮಾರಂಭದಲ್ಲಿ ಪೂಜ್ಯ ಶ್ರೀ ಸಿದ್ಧಲಿಂಗಮಹಾಸ್ವಾಮಿಗಳು ದಿವ್ಯ ಸಾನಿಧ್ಯದಲ್ಲಿ ಭದ್ರಾವತಿ ಶಾಸಕರಾದ ಬಿ. ಕೆ. ಸಂಗಮೇಶ್ವರ, ಎಂ. ಶ್ರೀಕಾಂತ್, ಜೆ.ಸಿ.ಮಂಜಪ್ಪ, ಡೊಳ್ಳಿನ ಹುಚ್ಚಪ್ಪ, ಮೊದಲಾದವರು ಭಾಗವಹಿಸಿದ್ದರು ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ, ಹೆಚ್. ಸಿ. ರಮೇಶ್, ಹಿಂದಿನ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ರಾಗಿದ್ದ ಮನೋಜ್ ಜನ್ನೇಹಕ್ಲು, ಸತ್ಯನಾರಾಯಣ ಸಿರುವಂತೆ ಅವರನ್ನು ಅಭಿನಂದಿಸಲಾಯಿತು. ಎಸ್. ದಯಾಶಂಕರ್ ಆಶಯದ ಮಾತುಗಳನ್ನಾಡಿದರು.

ಉಪನ್ಯಾಸಕ ಡಾ. ಚನ್ನೇಶ್ ಹೊನ್ನಾಳಿ ಉಪನ್ಯಾಸ ನೀಡಿದರು. ಮಂಗೋಟೆ ರುದ್ರೇಶ್, ಮಧುಕರ್, ಟಿ. ಜಿ. ಚಂದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಂಜೆ ಸಮಾರೋಪ ಸಮಾರಂಭದಲ್ಲಿ ಜನಪದ ಸಿರಿ ಪ್ರಶಸ್ತಿ, ಸಮ್ಮೇಳನಾಧ್ಯಕ್ಷರಿಗೆ ಅಭಿನಂದನೆ ಮಾಡಲಾಯಿತು. ಸ್ನೇಹಜೀವಿ ಉಮೇಶ್ ಅವರು ಪೂಜ್ಯರು, ಅತಿಥಿಗಳ ಸಮ್ಮುಖದಲ್ಲಿ ಎಲ್ಲರನ್ನೂ ಸನ್ಮಾನಿಸಿದರು. ಕೋಡ್ಲು ಯಜ್ಞಯ್ಯ ಅಧ್ಯಕ್ಷತೆ ವಹಿಸಿದ್ದರು. ಡಿ. ಮಂಜುನಾಥ, ಡಾ. ಮೋಹನ್ ಚಂದ್ರಗುತ್ತಿ, ಬಿ. ಚಂದ್ರೇಗೌಡರು, ಮಮತಾ ಶಿವಣ್ಣ, ಕೃಷ್ಣಮೂರ್ತಿ ಹಿಳ್ಳೋಡಿ, ಮಹಾದೇವಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅನ್ನಪೂರ್ಣ ಸತೀಶ್ ಸ್ವಾಗತಿಸಿದರು.

ತಾ. ಕಜಾಪ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್, ಕೋಶಾಧ್ಯಕ್ಷರಾದ ಲತಾ ಎಲ್. ಕೆ., ಶ್ರೀಧರೇಶ್, ಹೇಮಾವತಿ ವಿಶ್ವನಾಥ, ಭಾರತಿ ಎಸ್.ಬಿ., ಭಾಗ್ಯಮ್ಮ ಮಂಜುನಾಥ ಸೇರಿದಂತೆ ಹಲವರು ವೇದಿಕೆ ನಿರ್ವಹಿಸಿದರು

ದೇಶದ್ರೋಹ ವಿವರಣೆ ಮರು ಪರಿಶೀಲಿಸಲಾಗುತ್ತದೆ-ಕೇಂದ್ರದ ಹೇಳಿಕೆ ಸಲ್ಲಿಕೆ

0

ಕೇಂದ್ರ ಸರ್ಕಾರವು ಭಾರತೀಯ ದಂಡ ಸಂಹಿತೆಯಲ್ಲಿರುವ ದೇಶದ್ರೋಹ ವಿವರಿಸುವ ವಿಧಿಯನ್ನು ಮರು ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್​ಗೆ ತಿಳಿಸಿದೆ.

ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರವು ಭಾರತೀಯ ದಂಡ ಸಂಹಿತೆಯ (Indian Penal Code – IPC) 124ಎ ವಿಧಿಯನ್ನು ಮರುಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್​ಗೆ ತಿಳಿಸಿದೆ.

ದೇಶದ್ರೋಹದ ಅಪರಾಧವನ್ನು ಐಪಿಸಿ 124ಎ ವಿಧಿಯು ವಿವರಿಸುತ್ತದೆ. ಎಸ್​.ಜಿ.ಒಂಬತ್​ಕೆರೆ vs ಭಾರತ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್​ಗೆ ಸಲ್ಲಿಸಿರುವ ಸತ್ಯಾಪನಾ ಪತ್ರದಲ್ಲಿ (ಅಫಿಡವಿಟ್) ಈ ಮಾಹಿತಿ ನೀಡಲಾಗಿದೆ. ವಸಾಹತುಶಾಹಿಯ ಕಾಲದಲ್ಲಿ ರೂಪುಗೊಂಡಿದ್ದ ಕಾನೂನುಗಳ ಹೊರೆಯಿಂದ ದೇಶವನ್ನು ಪಾರು ಮಾಡಬೇಕು ಎಂದು ಕೇಂದ್ರ ಸರ್ಕಾರವು ಶ್ರಮಿಸುತ್ತಿದೆ.

ದೇಶದ್ರೋಹ ಕಾಯ್ದೆಗೆ ಸಂಬಂಧಿಸಿದಂತೆ ಈವರೆಗೆ ವ್ಯಕ್ತವಾಗಿರುವ ದೃಷ್ಟಿಕೋನಗಳ ಬಗ್ಗೆ ಭಾರತ ಸರ್ಕಾರಕ್ಕೆ ಸಂಪೂರ್ಣ ಮಾಹಿತಿಯಿದೆ. ನಾಗರಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ. ದೇಶದ ಸಾರ್ವಭೌಮತೆ ಮತ್ತು ಏಕತೆಯನ್ನು ಸಂರಕ್ಷಿಸಲು ಕೇಂದ್ರ ಸರ್ಕಾರವು ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿಯೇ ಐಪಿಸಿ ಸೆಕ್ಷನ್ 124ಎ ವಿಧಿಯನ್ನು ಸಂಪೂರ್ಣ ಮರುಪರಿಶೀಲಿಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಅಫಿಡವಿಟ್ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಹ ಇದೇ ಚಿಂತನೆ ಹಂಚಿಕೊಂಡಿದ್ದಾರೆ. ದೇಶವು ಸುವರ್ಣ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಇರುವಾಗಲೇ ವಸಾಹತುಶಾಹಿ ಹಿಡಿತದಿಂದ ತಪ್ಪಿಸಿಕೊಳ್ಳುವ ಪ್ರಯತ್ನಗಳು ಆರಂಭವಾಗಿವೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.

ದೇಶದ್ರೋಹ ಕಾನೂನು ಭಾರತ ಸರ್ಕಾರವೇ ಮರುಪರಿಶೀಲನೆಗೆ ಒಳಪಡಿಸಲು ಉದ್ದೇಶಿಸಿರುವುದರಿಂದ ಈ ಕಾನೂನಿನ ಸಾಂವಿಧಾನಿಕ ಮಾನ್ಯತೆಯ ಬಗ್ಗೆ ಪರಿಶೀಲಿಸಲು ಈ ಹಂತದಲ್ಲಿ ಸುಪ್ರೀಂಕೋರ್ಟ್​ ಮುಂದಾಗುವ ಅಗತ್ಯವಿಲ್ಲ ಎಂದು ಭಾರತ ಸರ್ಕಾರವು ಕೋರಿದೆ.

ವಸಾಹತುಶಾಹಿ ಕಾಲದಲ್ಲಿ ಜಾರಿಯಾಗಿದ್ದ ಕಾನೂನಿನ ಔಚಿತ್ಯ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರವು ತನ್ನ ಅಭಿಪ್ರಾಯವನ್ನು ಅಫಿಡವಿಟ್ ಮೂಲಕ ಸ್ಪಷ್ಟಪಡಿಸಿದೆ.

ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕ್ರಮ- ಪಾಟೀಲ್

0

ಕೆಲವರು ಬೇಕಂತಲೇ ಕೃತಕವಾಗಿ ರಸಗೊಬ್ಬರ,ಬಿತ್ತನೆ ಬೀಜಗಳನ್ನು ಕಾಳಸಂತೆಯಲ್ಲಿ ಕಾಯತದಿಟ್ಟು ಮಾರಾಟ ಮಾಡಲು ಕೃತಕವಾಗಿ ರಸಗೊಬ್ಬ, ಬಿತ್ತನೆಬೀಜ ಅಭಾವ ಸೃಷ್ಟಿಸುತ್ತಿದ್ದಾರೆ.ಹೀಗೆ ಕೃತಕವಾಗಿ ಯಾರಾದರೂ ರಸಗೊಬ್ಬರ,ಬಿತ್ತನೆ ಬೀಜ ಅಭಾವ ಸೃಷ್ಟಿಸಿದರೆ ಅಂತವರ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಸಿದ್ದಾರೆ.

ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಸಜಾಲಕ್ಕೆ ರಸಗೊಬ್ಬರ ಬಿತ್ತನೆಬೀಜ ಕೊರತೆಯಾಗದಂತೆ ಹಂತಹಂತವಾಗಿ ನೋಡಿಕೊಳ್ಳಲಾಗುತ್ತಿದೆ.ಯಾವುದೇ ಕಾರಣಕ್ಕೂ ರೈತನಿಗೆ ತೊಂದರೆಯಾಗಲು ಬಿಡುವುದಿಲ್ಲ.

2022-23ನೇ ಸಾಲಿನ ಮುಂಗಾರು ಹಂಗಾಮಿನ ರಸಗೊಬ್ಬರ ಸರಬರಾಜು ವಿವರ – 2022-23ರ ಸಾಲಿನ ಮುಂಗಾರು ಹಂಗಾಮಿಗೆ ( ಏಪ್ರಿಲ್ -2022 ರಿಂದ ಸೆಪ್ಟೆಂಬರ್ 2022 ರವರೆಗೆ ) 26.76 ಲಕ್ಷ ಮೆ.ಟನ್ ( ಯೂರಿಯಾ -10.50 ಲಕ್ಷ ಮೆ.ಟನ್ , ಡಿ.ಎ.ಪಿ – 4.00 ಲಕ್ಷ ಮೆ.ಟನ್ , ಎಂ ಒ ಪಿ – 2.00 ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್- 10.26 ಲಕ್ಷ ಮೆ.ಟನ್ ) ಪ್ರಮಾಣದ ವಿವಿಧ ಗ್ರೇಡ್ ಗಳ ರಸಗೊಬ್ಬರದ ಬೇಡಿಕೆಯಿರುತ್ತದೆ . ಏಪ್ರಿಲ್ 2022 ರ ಮಾಹೆಯಿಂದ ಮೇ ಮಾಹೆಯವರೆಗೆ ಒಟ್ಟು 7.61 ಲಕ್ಷ ಮೆ.ಟನ್ ( ಯೂರಿಯಾ – 2.23 ಲಕ್ಷ ಮೆ.ಟನ್ , ಡಿ.ಎ.ಪಿ – 1.56 ಲಕ್ಷ ಮೆ.ಟನ್ , ಎಂ ಒ ಪಿ – 0.64 ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್- 3.18 ಲಕ್ಷ ಮೆ.ಟನ್ ) ಬೇಡಿಕೆಯಿರುತ್ತದೆ . ದಿನಾಂಕ 01.04.2022 ರಂತೆ ಆರಂಭಿಕ ಶಿಲು ಒಟ್ಟು 5.94 ಲಕ್ಷ ಮೆ.ಟನ್ ( ಯೂರಿಯಾ -3,12 ಲಕ್ಷ ಮೆ.ಟನ್ , ಡಿ.ಎ.ಪಿ – 0.58 ಲಕ್ಷ ಮೆ.ಟನ್ , ಎಂ ಒ ಪಿ – 0.19 ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್- 2.05 ಲಕ್ಷ ಮೆ.ಟನ್ ) ಇರುತ್ತದೆ . ದಿನಾಂಕ 09.05.2022 ರ ಅಂತ್ಯಕ್ಕೆ 3.91 ಮೆ.ಟನ್ ( ಯೂರಿಯಾ -1.74 ಲಕ್ಷ ಮೆ.ಟನ್ , ಡಿ.ಎ.ಪಿ – 0.88 ಲಕ್ಷ ಮೆ.ಟನ್ ಎಂ . ಒ . ಪಿ – 0.10 ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್- 1.19 ಮ.ಟನ್ ) ಪಮಾಣದ ರಸಗೊಬ್ಬರ ಸರಬರಾಜಾಗಿರುತ್ತದೆ . ಒಟ್ಟು 9.85 ಲಕ್ಷ ಮೆ.ಟನ್ ದಾಸ್ತಾನಿನಲ್ಲಿ 2.70 ಲಕ್ಷ ಮೆ.ಟನ್ ಲಕ್ಷ ಮೆ.ಟನ್ ಪುಮಾಣದ ರಸಗೊಬ್ಬರವು ಮಾರಾಟವಾಗಿರುತ್ತದೆ . ಪುಸ್ತುತ ಒಟ್ಟು 7.15 ಲಕ್ಷ ಮೆ.ಟನ್ ( ಯೂರಿಯಾ -3.45 ಲಕ್ಷ ಮೆ.ಟನ್ , ಡಿ.ಎ.ಪಿ – 1.02 ಲಕ್ಷ ಮೆ.ಟನ್ , ಎಂ ಒ ಪಿ – 0.20 ಲಕ್ಷ ಮ.ಟನ್ ಮತ್ತು ಕಾಂಪ್ಲೆಕ್ಸ್- 2.48 ಲಕ್ಷ ಮೆ.ಟನ್ ) ಪುಮಾಣದ ರಸಗೊಬ್ಬರವು ಖಾಸಗಿ ಮಾರಾಟಗಾರರು ಮತ್ತು ಸಹಕಾರ ಸಂಘಗಳಲ್ಲಿ ( ಒಟ್ಟು , 0.83 ಲಕ್ಷ ಮೆ.ಟನ್ ಕಾಪು ದಾಸ್ತಾನು ಒಳಗೊಂಡಿದದಾಸ್ತಾನಿದ್ದು , ರಸಗೊಬ್ಬರದ ಯಾವುದೇ ಕೊರತ ಇರುವುದಿಲ್ಲ.

ರಾಜ್ಯ ಸರ್ಕಾರದ ರಿಯಾಯಿತಿ ಯೋಜನೆಯಡಿ ಭತ್ತ , ರಾಗಿ , ಜೋಳ , ಮೆಕ್ಕೆಜೋಳ , ಉದ್ದು , ಹೆಸರು , ಕಡಲೆ , ಅಲಸಂದೆ , ನೆಲಗಡಲೆ , ಸೋಯಾವರೆ , ಸೂರ್ಯಕಾಂತಿ , ಗೋದಿ , ಕುಸುಬೆ ಮತ್ತು ನವಣೆ ಬಿತ್ತನೆ ಬೀಜಗಳನ್ನು ರಾಜ್ಯದ ಎಲ್ಲಾ ವರ್ಗದ ರೈತರಿಗೆ ( ಸಾಮಾನ್ಯ ರೈತರಿಗೆ ಶೇ 50 ರ ವರೆಗೆ ಹಾಗು ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದ ವರಿಗೆ ಶೇ .75 ರ ವರೆಗೆ ) ಒಟ್ಟಾರೆ ಗರಿಷ್ಟ 2.00 ಹೆಕ್ಟೇರ್‌ ಅಥವಾ ಅವರ ವಾಸ್ತವಿಕ ಹಿಡುವಳಿ ಯಾವುದಿದೆಯೋ ಆ ವಿಸ್ತೀರ್ಣದ ಮಿತಿಯೊಳಗೆ ರೈತರಿಗೆ ಸಕಾಲದಲ್ಲಿ ಹೋಬಳಿ ಮಟ್ಟದಲ್ಲಿಯೇ ಉತ್ತಮ ಬಿತ್ತನೆ ಬೀಜಗಳು ಲಭ್ಯವಾಗುವಂತೆ ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳು ಗುರುತಿಸಿದ ಹೆಚ್ಚುವರಿ ಮಾರಾಟ ಕೇಂದ್ರಗಳು ಹಾಗೂ ಗ್ರಾಮ ಮಟ್ಟದಲ್ಲಿಯೇ ಲಭ್ಯವಾಗುವಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ.

ಬಿತ್ತನೆ ಪೂರ್ವ • 2022 ರ ಮುಂಗಾರು ಹಂಗಾಮಿನಲ್ಲಿ ರಾಜ್ಯ ಸರ್ಕಾರದ ಬೀಜಗಳ ಪೂರೈಕೆ ಮತ್ತು ಇತರೆ ಹೂಡುವಳಿ ಯೋಜನೆಯಡಿ 8267 ಲಕ್ಷ ಹೆಕ್ಟೇರು ಪ್ರದೇಶದಲ್ಲಿ ಕೈಗೊಳ್ಳುವ ಗುರಿ ಇದ್ದು ಇದುವರೆವಿಗೆ 1.30 ಲಕ್ಷ ಹೆಕ್ಟೇರು ಪ್ರದೇಶದಲ್ಲಿ ಮುಂಗಾರು ಬಿತ್ತನೆ ಕೈಗೊಳ್ಳಲಾಗಿರುತ್ತದೆ . 5.38 ಲಕ್ಷ ಕ್ವಿಂ . ಬಿತ್ತನೆ ಬೀಜಗಳ ಬೇಡಿಕೆಗೆ , 8.65 ಲಕ್ಷ ಕ್ವಿಂ ಬಿತ್ತನೆ ಬೀಜಗಳು ಲಭ್ಯವಿದ್ದು , ರಾಜ್ಯಾದ್ಯಂತ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ದಿನಾಂಕ : 09.05.2022 ರವರೆಗೆ ರೈತ ಸಂಪರ್ಕ ಕೇಂದ್ರಗಳಲ್ಲಿ 3505.8 ಕ್ವಿಂಟಾಲ್ ಗಳಷ್ಟು ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದ್ದು , 2185.8 ಕ್ವಿಂಟಾಲ್ ಗಳಷ್ಟು ದಾಸ್ತಾನು ಇರುತ್ತದೆ . ವಿತರಣೆ ಕಾರ್ಯ ಪ್ರಗತಿಯಲ್ಲಿದೆ . ಯಾವುದೇ ಬಿತ್ತನೆ ಬೀಜದ ಕೊರತೆಯಿರುವುದಿಲ್ಲ .

2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 12.67 ಲಕ್ಷ ರೈತರು ಬೆಳೆವಿಮೆಗಾಗಿ ನೊಂದಣಿ ಮಾಡಿಕೊಂಡಿದ್ದು , ಇದರ ಪೈಕಿ ಈಗಾಗಲೇ ರಾಜ್ಯದ ವಿವಿಧೆಡೆ ಬಿತ್ತನೆ ವಿಫಲಗೊಂಡಲ್ಲಿ ಮಧ್ಯಂತರ ಬೆಳೆವಿಮಾ ನಷ್ಟ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳು ಹಾಗೂ ಕೊಲ್ಲೋತ್ತರ ನಷ್ಟ ಅಡಿಯಲ್ಲಿ ಒಟ್ಟು 2.10 ಲಕ್ಷ ರೈತರಿಗೆ ರೂ . 135,72 ಕೋಟಿ ಬೆಳೆವಿಮೆ ಪರಿಹಾರ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ . ಉಳಿದ ರೈತರ ಬೆಳೆ ವಿಮೆಯನ್ನು ಈಗಾಗಲೇ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೆಶನಾಲಯದಿಂದ ಬೆಳೆ ಇಳುವರಿ ಮಾಹಿತಿ ಬಂದಿದ್ದು , ಬೆಳೆ ಸಮೀಕ್ಷೆ ವಿವರವನ್ನು ತಾಳೆ ಮಾಡಲಾಗಿದ್ದು , ಇನ್ನು ಒಂದು ವಾರದೊಳಗೆ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸಲಾಗುವುದು ಎಂದರು.

ಪಕ್ಷದ ವರಿಷ್ಠರು ಅವರ ಕರ್ತವ್ಯ ಮಾಡುತ್ತಾರೆ.ಅಂತೆಯೇ ಪಕ್ಷದ ಆಜ್ಞೆಯನ್ನು ನಾವು ಪಾಲಿಸುತ್ತಾ ನಮ್ಮ ಕರ್ತವ್ಯ ನಿಭಾಯಿಸುತ್ತೇವೆ.ಕ್ಷದ ಸಂಘಟನೆ ಬೂತ್ ಮಟ್ಟದಲ್ಲಿ ಸಂಘಟನೆ ಚೆನ್ನಾಗಿದೆ.ನಮ್ಮ ಪ್ತಧಾನಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ಸಾಧನೆಯನ್ನು ಕಾರ್ಯವೈಖರಿ ನೋಡಿ ಬಹಳಷ್ಟು ಜನ ಬಿಜೆಪಿಯತ್ತ ವಾಲುತ್ತಿದ್ದಾರೆ.ಬಿಜೆಪಿ ಸರ್ಕಾರದಲ್ಲಿ ಹೇಳಲು ಸಾಧನೆಗಳು ಸಾಕಷ್ಟು ಇವೆ
ಬಿಜೆಪಿಯಾದರೆ ನಮ್ಮ ಸಾಧನೆ ಪ್ರಗತಿ ಹೇಳಲು ಸಾಕಷ್ಟು ಇದೆ.ಕಾಂಗ್ರೆಸ್‌ ಸ್‌ನವರಿಗೆ ಆರೋಪ ಮಾಡುವುದನ್ನು ಬಿಟ್ಟರೆ ಬೇರೇನೂ ಇಲ್ಲ.ಪ್ರಚಾರಕ್ಕಾಗಿ ಕಾಂಗ್ರೆಸ್.ನವರು ಬರೀ ಆರೋಪ ಮಾಡುತ್ತಾರೆ.ಕೆಲವರಿಗೆ ಪ್ರಚಾರವೇ ಕಾಯಿಲೆಯೇ ಆಗಿದೆ.ಆರೋಪ ಮಾಡಿದ ಮಾತ್ರಕ್ಕೆ ಎಲ್ಲವೂ ಸತ್ಯವಾಗುವುದಿಲ್ಲ.ಬಿಜೆಪಿಯಲ್ಲಿ ಶಿಷ್ಟಾಚಾರ ವ್ಯವಸ್ಥೆಯಿದೆ.ಬಿಜೆಪಿ ಬಿಟ್ಟರೆ ಬೇರ್ಯಾವ ಪಕ್ಷದಲ್ಲೂ ಇಂತಹ ಶಿಸ್ತಿನ ವ್ಯವಸ್ಥೆ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಬಿ.ಸಿ.ಪಾಟೀಲ್ ಸಮರ್ಪಕವಾಗಿ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಉಪಸ್ಥಿತರಿದ್ದರು.

2022-23ನೇ ಸಾಲಿನ ಮುಂಗಾರು ಹಂಗಾಮಿನ ವಿವರ ಈ ಕೆಳಗಿನಂತಿದೆ.

ಆರೋಗ್ಯದ ದೃಷ್ಟಿಯಿಂದ ನೋನಿ ಹಣ್ಣಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ

0

ನೋನಿ ಹಣ್ಣಿನಿಂದ ತಯಾರಾಗುವ ಉತ್ಪನ್ನಗಳು ಜನರ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತಿರುವ ಕಾರಣಕ್ಕೇ ವಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆ ಉತ್ಪಾದಿಸುತ್ತಿರುವ ನೋನಿ ಉತ್ಪನ್ನಗಳಿಗೆ ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಉತ್ತಮ ಬೇಡಿಕೆ ಸೃಷ್ಠಿಯಾಗಿದೆ ಎಂದು ಉದ್ಯಮಿ ಹಾಗೂ ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ ಅಭಿಪ್ರಾಯಪಟ್ಟರು.

ರಾಮಿನಕೊಪ್ಪ ಗ್ರಾಮದಲ್ಲಿರುವ ಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದ್ದ ಸಂಸ್ಥೆಯ 13ನೇ ಅಮೃತೋತ್ಸವ, ಮೂರನೇ ಬೃಹತ್ ಕೈಗಾರಿಕಾ ಘಟಕದ ಉದ್ಘಾಟನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದವರನ್ನು ಸನ್ಮಾನಿಸಿ ಬಳಿಕ ಅವರು ಮಾತನಾಡಿದರು.

ನೈಸರ್ಗಿಕವಾಗಿ ದೊರೆಯುವ ಹಾಗೂ ಆರೋಗ್ಯಕ್ಕೆ ಪೂರಕವಾದ ಹಣ್ಣುಗಳನ್ನು ಸಂಶೋಧನೆಗೆ ಒಳಪಡಿಸಿ ಅದರಿಂದ ಔಷಧಿ ಕಂಡುಹಿಡಿದು ಲಕ್ಷಾಂತರ ಜನರಿಗೆ ಉಪಯೋಗವಾಗುವ ಉತ್ಪನ್ನಗಳನ್ನು ಉತ್ಪಾದಿಸಿ ಅವುಗಳನ್ನು ಸಮಾಜಕ್ಕೆ ಸಮರ್ಪಿಸಿರುವ ಹೆಮ್ಮೆಯ ಸಂಸ್ಥೆಯಾಗಿ ವ್ಯಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆ ಬೆಳೆದಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತದೆ ಎಂದರು.

ಸಂಸ್ಥೆಯ ಬೆಳವಣಿಗೆ ನಿಜಕ್ಕೂ ಆಶ್ಚರ್ಯ ತರಿಸುತ್ತದೆ. 13ನೇ ವರ್ಷಕ್ಕೆ ಕಾಲಿಟ್ಟಿರುವ ಸಂಸ್ಥೆ ಇಂದು ನೋನಿಯಿಂದ ಉತ್ಪಾದಿಸಲ್ಪಡುವ ಹಲವಾರು ಉತ್ಪನ್ನಗಳನ್ನು ಗ್ರಾಹಕರಿಗೆ ನೀಡಿದೆ. ಉತ್ಪನ್ನಗಳಿಗೆ ಬೇಡಿಕೆ ಎಷ್ಟಿದೆ ಎಂದರೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ನಂಬಿಕೆ ಇರುವುದರಿಂದಲೇ ವ್ಯಾಲ್ಯೂ ಪ್ರೋಡಕ್ಸ್ ಸಂಸ್ಥೆಯ ನೋನಿ ಉತ್ಪನ್ನಗಳಿಗೆ ಅಷ್ಟೊಂದು ಬೇಡಿಕೆ ಕಂಡು ಬಂದಿದೆ ಎಂದರು.

ಔಷಧಿ ಗುಣ ಹೊಂದಿರುವ ನೋನಿಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿ ಅದನ್ನು ಇಡೀ ರಾಷ್ಟ್ರಕ್ಕೆ, ಸಮಾಜಕ್ಕೆ ಅರ್ಪಿಸಿದ್ದಾರೆ. ಯಾವುದೇ ಒಂದು ವ್ಯಾಪಾರ ಅಥವಾ ಉದ್ಯಮ ಯಶಸ್ಸು ಪಡೆಯಲು ಒಳ್ಳೆಯ ತಂಡ ಕಟ್ಟಬೇಕು. ಒಳ್ಳೆಯ ತಂಡ ಇದ್ದರೆ ಸಾಲದು ಉತ್ಪನ್ನಗಳು ಮಾರುಕಟ್ಟೆಗೆ ತಲುಪಿಸಬೇಕು. ಜೊತೆಗೆ ಉತ್ಪನ್ನಗಳು ಗ್ರಾಹಕರನ್ನು ಸೆಳೆಯಬೇಕು. ಈ ನಿಟ್ಟಿನಲ್ಲಿ ವ್ಯಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆ ಕೇವಲ 13 ವರ್ಷದಲ್ಲಿ ದೊಡ್ಡ ಪ್ರಯತ್ನಗಳನ್ನು ವ್ಯವಸ್ಥಿತವಾಗಿ ಕೈಗೊಂಡು, ಅಚ್ಚುಕಟ್ಟಾಗಿ ಗ್ರಾಹಕರನ್ನು ತಲುಪಿರುವುದು ಹೆಮ್ಮೆಯನ್ನುಂಟುಮಾಡುತ್ತದೆ. ಇದಕ್ಕೆ ಮುಖ್ಯವಾಗಿ ಇಲ್ಲಿನ ಸಿಬ್ಬಂದಿಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ಹೇಳಿದರು.

ಯಾವುದೇ ಒಂದು ಉತ್ಪನ್ನ ಮನುಷ್ಯನ ದೇಹಕ್ಕೆ ಸೇರುವುದಾದರೆ ಅತ್ಯಂತ ಜಾಗರೂಕತೆಯಿಂದ ಉತ್ಪಾದನೆ ಮಾಡಬೇಕಾಗುತ್ತದೆ. ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕು. ಅಡ್ಡ ಪರಿಣಾಮ ಬೀರದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ವ್ಯಾಲ್ಯೂ ಪ್ರೊಡಕ್ಟ್ ಸಂಸ್ಥೆ ಶ್ರಮವಹಿಸಿ ಅತ್ಯಂತ ವ್ಯವಸ್ಥಿತವಾಗಿ ಉತ್ಪನ್ನಗಳನ್ನು ಉತ್ಪಾದನೆ ಮಾಡುತ್ತಿದೆ. ಈ ಕಾರಣಕ್ಕೆ  ಸಂಸ್ಥೆಯ ಉತ್ಪನ್ನಗಳಿಗೆ ಇಷ್ಟೊಂದು ಬೇಡಿಕೆ ಬಂದಿದೆ ಎಂದರು.

ಮನುಷ್ಯನ ಆರೋಗ್ಯಕ್ಕೆ ಅತ್ಯವಶ್ಯಕವಾಗಿ ಬೇಕಾದಂತಹ ಸಸ್ಯ ಸಂಕುಲಗಳು ಪ್ರಕೃತಿಯಲ್ಲಿಯೇ ಇದೆ. ಅದರಲ್ಲೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಸಾಕಷ್ಟು ಸಸ್ಯ ಸಂಕುಲಗಳಿವೆ, ಗಿಡಮೂಲಿಕೆಗಳಿವೆ. ಈ ಕಾರಣಕ್ಕಾಗಿಯೇ ಪಶ್ಚಿಮಘಟ್ಟ ಪ್ರದೇಶವನ್ನು ಸಂರಕ್ಷಿತ ವಲಯ ಎಂದು ಘೋಷಣೆ ಮಾಡಲಾಗಿದೆ. ಪ್ರಪಂಚದ ಯಾವುದೇ ಭಾಗದಲ್ಲಿ ಸಿಗದಂತಹ ಸಸ್ಯ ಪ್ರಭೇದಗಳು ನಮ್ಮ ಪಶ್ಚಿಮಘಟ್ಟ ಪ್ರದೇಶದಲ್ಲಿ ಇದೆ ಎನ್ನುವುದು ಹೆಮ್ಮೆಯ ಸಂಗತಿ ಎಂದರು.

ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ನಂತರ ಭಾರತೀಯ ಔಷಧ ಪದ್ಧತಿಗೆ ವಿಶೇಷ ಸ್ಥಾನಮಾನ ದೊರಕಿದೆ. ಹಿಂದೆ ನಮ್ಮ ಔಷಧ ಪದ್ಧತಿ ಬಗ್ಗೆ ನಾವೇ ದೂಷಣೆ ಮಾಡುತ್ತಿದ್ದೆವು. ಆದರಿಂದು ಆಯುರ್ವೇದ ಔಷಧ ಪದ್ಧತಿಗೆ ಸಾಕಷ್ಟು ಬೇಡಿಕೆ ಕಂಡುಬರುತ್ತಿದೆ. ಆಯುರ್ವೇದ ಚಿಕಿತ್ಸೆ ಅತ್ಯಂತ ಸರಳ ಹಾಗೂ ಕಡಿಮೆ ಖರ್ಚಿನಲ್ಲಿ ದೊರಕುತ್ತದೆ. ಹೀಗಾಗಿ ಆಯುರ್ವೇದ ಚಿಕಿತ್ಸೆಗೆ ಇನ್ನೂ ಹೆಚ್ಚಿನ ಪ್ರಾಶಸ್ತ್ಯ, ಒತ್ತು ದೊರಕಬೇಕಿದೆ ಎಂದು ಹೇಳಿದರು.

ವ್ಯಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉತ್ಪನ್ನಗಳು ಹೊರಬರಬೇಕು. ಗ್ರಾಹಕರುಗಳಿಗೆ ಕೈಗೆಟಕುವ ದರದಲ್ಲಿ ದೊರೆಯುವಂತಾಗಬೇಕು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಔಷಧಿಗಳು ರಾರಾಜಿಸುವಂತಾಗಬೇಕೆಂದು ಆಶಿಸಿದರು.

ವ್ಯಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಏ.ಕೆ. ಶ್ರೀನಿವಾಸಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿ, ಪ್ರಾಮಾಣಿಕ ಕಾರ್ಮಿಕ ವರ್ಗ, ಸಂಶೋಧನಾ ತಂಡ, ವೈದ್ಯರ ತಂಡ, ಸಿಬ್ಬಂದಿಗಳು ಇವರೆಲ್ಲರ ಪ್ರಯತ್ನದ ಫಲವಾಗಿ ವ್ಯಾಲ್ಯೂ ಪ್ರೋಡಕ್ ನೋನಿ ಉತ್ಪನ್ನಗಳು ಇಂದು ಇಷ್ಟೊಂದು ಪ್ರಮಾಣದಲ್ಲಿ ಗ್ರಾಹಕರನ್ನು ತಲುಪಲು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಂಸ್ಥೆಯ ಯೋಚನೆ-ಯೋಜನೆ- ಕನಸು ಇನ್ನೂ ಬಹಳಷ್ಟಿದೆ. ಯಾವುದೇ ಒಂದು ಕೆಲಸವನ್ನು ಕೈಗೊಳ್ಳುವಾಗ ನಿರ್ದಿಷ್ಟ ಗುರಿ ಇರಬೇಕು. ಆಗ ಯಶಸ್ಸು, ಅಭಿವೃದ್ಧಿ ಕಾಣುವುದಕ್ಕೆ ಸಾಧ್ಯ. ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಕಳೆದ 13 ವರ್ಷಗಳಿಂದ ಅಮೃತ್ ನೋನಿ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸುತ್ತಾ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣುವುದಕ್ಕೆ ದೈವಿಕ ಶಕ್ತಿ ಜತೆಗೆ ಗ್ರಾಹಕರು, ರೈತರು ಹಾಗೂ ಹಿತೈಷಿಗಳ ಆಶೀರ್ವಾದ ಕಾರಣವಾಗಿದೆ ಎಂದರು.

ನೋನಿ ಹಣ್ಣಿನಲ್ಲಿ ಆರೋಗ್ಯಕ್ಕೆ ಪೂರಕವಾದ ಸಾಕಷ್ಟು ಅಂಶಗಳಿವೆ. ಈ ಬಗ್ಗೆ ಇನ್ನಷ್ಟು ಅಧ್ಯಯನ, ಸಂಶೋಧನೆ ನಡೆಯಬೇಕಿದೆ. ನೋನಿ ಸಂಶೋಧನೆ ಕೇಂದ್ರ ಪ್ರಾರಂಭ ಆಗಬೇಕು. ರೈತರಿಗೆ ಇನ್ನಷ್ಟು ಉತ್ತೇಜನ ದೊರಕಬೇಕು, ಉದ್ಯೋಗ ಸೃಷ್ಟಿಯಾಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ಸಹಕಾರ ನೀಡಬೇಕಿದೆ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಅಮೃತೋತ್ಸವ -2022 ಹಾಗೂ ನೋನಿಯತ್ತ ಜಗದ ಚಿತ್ತ ಮೂರನೇ ಆವೃತ್ತಿ ಪುಸ್ತಕ ಬಿಡುಗಡೆಗೊಂಡಿತು. 

ಕಾರ್ಯಕ್ರಮದಲ್ಲಿ ವ್ಯಾಲ್ಯೂ ಪ್ರೊಡಕ್ಟ್ಸ್ ಸಂಸ್ಥೆ ನಿರ್ದೇಶಕಿ ಅಂಬುಜಾಕ್ಷಿ, ಓಂ ಶ್ರೀ ಎಂಟರ್ಪ್ರೈಸಸ್ ವ್ಯವಸ್ಥಾಪಕ ನಿರ್ದೇಶಕಿ ಮಂಗಳಾಂಬಿಕೆ, ನಿರ್ದೇಶಕ ನಾರಾಯಣ್, ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಕೃಷಿ ವಿಶ್ವವಿದ್ಯಾನಿಲಯದ ನಿಕಟಪೂರ್ವ ಉಪಕುಲಪತಿ ಡಾ‌. ಎಂ.ಕೆ. ನಾಯಕ್, ಟಿವಿ ವಾಹಿನಿ ನಿರೂಪಕ ಮುರಳಿ, ಹರಿಕೃಷ್ಣ, ಶಶಿಕಾಂತ್, ಗಂಗಾಧರ ವರ್ಮಾ, ಶ್ರೀಕಾಂತ್ ಉಪಸ್ಥಿತರಿದ್ದರು. ಶಶಿಕಾಂತ್ ನಾಡಿಗ್ ಸ್ವಾಗತಿಸಿದರು, ಪೃಥ್ವಿ ಗೌಡ ಪ್ರಾರ್ಥಿಸಿದರು, ಸಮನ್ವಯ ಕಾಶಿ ನಿರೂಪಿಸಿದರು.

ಕ್ಯಾನ್ಸರ್‌ ರೋಗಕ್ಕೆ ರಾಮಬಾಣವಾಗಿರುವ ಹಾಗೂ ನೋನಿ ಹಣ್ಣಿನಿಂದ ತಯಾರಿಸಲ್ಪಟ್ಟ ಸಂಸ್ಥೆಯ ನೂತನ ಉತ್ಪನ್ನ ಆಯೂರ್ ಕೇರ್ ಉತ್ಪನ್ನ ಇದೇ ಸಂದರ್ಭದಲ್ಲಿ ಬಿಡುಗಡೆಗೊಂಡಿತು. ಉದ್ಯಮಿ ಹಾಗೂ ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ ಮತ್ತಿತರರು ನೂತನ ಉತ್ಪನ್ನವನ್ನು ಬಿಡುಗಡೆಗೊಳಿಸಿದರು. 

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಹಲವು ಗಣ್ಯರನ್ನು 
ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಗಮಕ ಕಲಾವಿದ ಹಾಗೂ ಪದ್ಮಶ್ರೀ ಪುರಸ್ಕೃತ ಕೇಶವಮೂರ್ತಿ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಸಕ್ಕರಾಯಪಟ್ಟಣದ ರೈತ ಎಸ್. ಸಚ್ಚಿದಾನಂದ ಅವರಿಗೆ ರೈತ ಪ್ರಶಸ್ತಿ, ಅಂಕಣಕಾರ್ತಿ ರಂಜನಿ ಎಸ್. ದತ್ತಾತ್ರಿ ಅವರಿಗೆ ಸಾಮಾಜಿಕ ಪ್ರಶಸ್ತಿ, ಗಂಗಾಧರ ವರ್ಮಾ ಅವರಿಗೆ ವೈದ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ಸಂಜೀವಿನಿ ಯೋಗ ಕೇಂದ್ರದ ಲತಾ ಶೇಖರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದವರನ್ನು ಸನ್ಮಾನಿಸಲಾಯಿತು.

ರಾಂಚಿ ವಿಮಾನ ನಿಲ್ದಾಣ: ವಿಶೇಷ ಚೇತನರೊಂದಿಗೆ ಅನುಚಿತ ವರ್ತನೆ

0

ರಾಂಚಿ ವಿಮಾನ ನಿಲ್ದಾಣದಲ್ಲಿ ಗಾಬರಿಯ ಸ್ಥಿತಿಯಲ್ಲಿದ್ದ ವಿಶೇಷ ಚೇತನ ಮಗುವನ್ನು ವಿಮಾನ ಹತ್ತುವುದನ್ನು ಇಂಡಿಗೋ ನಿರ್ಬಂಧಿಸಿದೆ. ಈ ಘಟನೆ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

ವಿಮಾನಯಾನ ನಿಯಂತ್ರಕ ಡಿಜಿಸಿಎ ತನಿಖೆಯನ್ನು ಪ್ರಾರಂಭಿಸಿದ್ದು ವರದಿಯನ್ನು ಸಲ್ಲಿಸಲು ವಿಮಾನಯಾನ ಸಂಸ್ಥೆಯನ್ನು ಕೇಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಂಚಿ ವಿಮಾನ ನಿಲ್ದಾಣದಲ್ಲಿ ಗಾಬರಿಯ ಸ್ಥಿತಿಯಲ್ಲಿದ್ದ ವಿಶೇಷ ಚೇತನ ಮಗುವನ್ನು ವಿಮಾನ ಹತ್ತುವುದನ್ನು ಇಂಡಿಗೋ ಶನಿವಾರ ನಿರ್ಬಂಧಿಸಿತ್ತು. ಈ ಘಟನೆ ನಂತರ ವಿಮಾನಯಾನ ನಿಯಂತ್ರಕ ಡಿಜಿಸಿಎ ತನಿಖೆಯನ್ನು ಪ್ರಾರಂಭಿಸಿದ್ದು ವರದಿಯನ್ನು ಸಲ್ಲಿಸಲು ವಿಮಾನಯಾನ ಸಂಸ್ಥೆಯನ್ನು ಕೇಳಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮುಖ್ಯಸ್ಥೆ ಪ್ರಿಯಾಂಕ್ ಕಾನೊಂಗ್ ರಾಂಚಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ಸಿಬ್ಬಂದಿ ವಿಶೇಷ ಚೇತನ ಮಗುವಿನೊಂದಿಗೆ ಅನುಚಿತವಾಗಿ ವರ್ತಿಸಿರುವುದು ತಿಳಿದುಬಂದಿದೆ. ಸೂಕ್ತ ಕ್ರಮಕ್ಕಾಗಿ ಗಮನ ಹರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮುಂಬೈನಲ್ಲಿ ಧ್ವನಿವರ್ಧಕ ಶಬ್ದ ಕಡಿಮೆಗೊಳಿಸಿದ ಮಸೀದಿಗಳ ವ್ಯವಸ್ಥಾಪಕರು

0

ಆಜಾನ್ ವೇಳೆ ಧ್ವನಿವರ್ಧಕಗಳಿಂದ ಹೊರಡುವ ಶಬ್ದವನ್ನು ಕಡಿಮೆ ಮಾಡಬೇಕು ಎಂದು ಹಿಂದೂ ಸಂಘಟನೆಗಳು ಬೇಡಿಕೆ ಇಟ್ಟ ಬೆನ್ನಲ್ಲೇ, ಮುಂಬೈನ ಹಲವಾರು ಮಸೀದಿಗಳು ಧ್ವನಿವರ್ಧಕದ ಶಬ್ದವನ್ನು ಕಡಿಮೆ ಮಾಡಿವೆ.

ಈ ವಿಷಯದಲ್ಲಿ ಪೊಲೀಸರು ಮಧ್ಯಪ್ರವೇಶಿಸಿದೆ. ಧ್ವನಿವರ್ಧಕಗಳ ಶಬ್ದವನ್ನು ಕಡಿಮೆ ಮಾಡುವುದಾಗಿ ಮಸೀದಿಗಳು ತಿಳಿಸಿವೆ ಎಂದು ಮೂಲಗಳು ತಿಳಿಸಿವೆ.

ಆಜಾನ್‌ನ ಶಬ್ದವು ಈಗ ರಾಜಕೀಯ ವಿಷಯವಾಗಿದೆ. ಆದರೆ, ಇದು ಕೋಮು ಬಣ್ಣ ಪಡೆಯುವುದು ನನಗೆ ಇಷ್ಟ ಇಲ್ಲ ಎಂದು ನಗರದಲ್ಲಿರುವ ಜುಮಾ ಮಸೀದಿಯ ಮುಖ್ಯ ಬೋಧಕ ಮೊಹಮ್ಮದ್‌ ಅಶ್ಫಾಕ್ ಕಾಜಿ ಹೇಳಿದ್ದಾರೆ.

ಸ್ಥಳೀಯ ಹಿಂದೂ ಮುಖಂಡರೊಬ್ಬರ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ, 900ಕ್ಕೂ ಅಧಿಕ ಮಸೀದಿಗಳು ಆಜಾನ್‌ ಸಮಯದಲ್ಲಿ ಧ್ವನಿವರ್ಧಕದ ಶಬ್ದವನ್ನು ಕಡಿಮೆ ಮಾಡಿವೆ ಎಂದು ಪ್ರಭಾವಿ ಇಸ್ಲಾಮಿಕ್ ವಿದ್ವಾಂಸರಲ್ಲೊಬ್ಬರಾಗಿರುವ ಕಾಜಿ ಹೇಳಿದ್ದಾರೆ.

ಧ್ವನಿವರ್ಧಕ ಬಳಕೆ ವಿಷಯದಲ್ಲಿ ನ್ಯಾಯಾಲಯದ ಆದೇಶವನ್ನು ಗೌರವಿಸಬೇಕು. ಯಾವುದೇ ಸಂದರ್ಭದಲ್ಲಿಯೂ ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ ಎಂದು ಮುಂಬೈನ ಹಿರಿಯ ಪೊಲೀಸ್ ಅಧಿಕಾರಿ ವಿ.ಎನ್‌.ಪಾಟೀಲ ಹೇಳಿದ್ದಾರೆ.

ಮಹಾರಾಷ್ಟ್ರ ನವನಿರ್ಮಾಣ ಸೇನಾದ ಮುಖಂಡ ರಾಜ್‌ ಠಾಕ್ರೆ ಅವರು, ಮಸೀದಿ ಹಾಗೂ ಇತರ ಸ್ಥಳಗಳಲ್ಲಿನ ಧ್ವನಿವರ್ಧಕಗಳ ಶಬ್ದವು ನಿಯಮಗಳಂತೆ ಮಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಕಳೆದ ಏಪ್ರಿಲ್‌ನಲ್ಲಿ ಆಗ್ರಹಿಸಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಸಂಘಟನೆಯ ಕಾರ್ಯಕರ್ತರು ಮಸೀದಿಗಳ ಮುಂದೆ ಪ್ರತಿಭಟನೆ ರೂಪದಲ್ಲಿ ಹಿಂದೂ ಶ್ಲೋಕಗಳನ್ನು ಪಠಿಸುವುದಾಗಿ ಎಚ್ಚರಿಸಿದ್ದರು.

ಠಾಕ್ರೆ ಅವರ ಮಾತುಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದರ ಬೆನ್ನಲ್ಲೇ, ಹಿರಿಯ ಪೊಲೀಸ್‌ ಅಧಿಕಾರಿಗಳು ಕಾಜಿ ಅವರೂ ಸೇರಿದಂತೆ ಧರ್ಮ ಗುರುಗಳ ಸಭೆ ನಡೆಸಿದ್ದರು. ಧ್ವನಿವರ್ಧಕಗಳ ಶಬ್ದವನ್ನು ಕಡಿಮೆ ಮಾಡುವ ಬಗ್ಗೆ ಅವರೊಂದಿಗೆ ಚರ್ಚಿಸಿದ್ದರು.