Sunday, March 1, 2026
Sunday, March 1, 2026
Home Blog Page 1587

ಮತ್ತಷ್ಟು ಚುರುಕಾಗಿರುವ ಅಸಾನಿ ಚಂಡಮಾರುತ ಮಳೆ ತರುತ್ತಿದೆ.

0

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಚಂಡಮಾರುತ ಆಗಿ ಪರಿವರ್ತನೆ ಆಗಲಿದೆ. ಕಳೆದ 4 ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತಷ್ಟು ಚುರುಕು ಪಡೆದುಕೊಂಡಿದೆ.

ಕಳೆದ ಭಾನುವಾರ ಮಧ್ಯಾಹ್ನದಿಂದಲೇ ಚಂಡಮಾರುತ ಪರಿಣಾಮ ನೆರೆಯ ಆಂಧ್ರ ಪ್ರದೇಶ, ತಮಿಳು ನಾಡು ಮತ್ತು ಒಡಿಶಾ ರಾಜ್ಯಗಳಲ್ಲಿ ತೀವ್ರ ಮಳೆಯಾಗುತ್ತಿದೆ. ಕರ್ನಾಟಕದ ಕರಾವಳಿ, ರಾಜಧಾನಿ ಬೆಂಗಳೂರು ಮತ್ತು ಬೆಂಗಳೂರಿನ ಸುತ್ತಮುತ್ತ ಜಿಲ್ಲೆಗಳಲ್ಲಿ ಪ್ರಭಾವ ಬೀರಿದೆ.

ಚಂಡಮಾರುತದ ವೇಗ ಹೆಚ್ಚಾಗಿರುವ ಕಾರಣ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ಕೊಡಗು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಹೇಮರೆಡ್ಡಿ ಮಲ್ಲಮ್ಮ ,ಸಹನೆ ಮತ್ತು ಶಾಂತಿಯ ಸಂಕೇತ

0

ಸಾಮಾನ್ಯರಂತೆ ಜನಸಿ, ಕೌಟುಂಬಿಕ ಕಷ್ಟ, ನೋವು, ದುಮ್ಮಾನಗಳನ್ನು ಸಹಿಸುಕೊಂಡು ಸಹನೆ ಮತ್ತು ಶಾಂತಿಯ ಮೂಲಕ ಸಮಾಜಕ್ಕೆ ಒಳಿತನ್ನು ನೀಡಿದವರು ಶಿವಶರಣೆ ಮಲ್ಲಮ್ಮ ಎಂದು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಘದ ಕಾರ್ಯದರ್ಶಿ ಶಶಿಕುಮಾರ್ ಬಣ್ಣಿಸಿದರು.

ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಮಾಜ, ಶಿವಮೊಗ್ಗ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪವನ್ನುಅರ್ಪಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.

ಕಠಿಣವಾದ ತಪಸ್ಸನು ಮಾಡಿ, ಮಲ್ಲಿಕಾರ್ಜುನರ ಮೇಲೆ ಅಗಾಧವಾದ ಭಕ್ತಿಯನ್ನು ಹೊಂದಿದ್ದ ಮಲ್ಲಮ್ಮನವರನ್ನು 598 ವರ್ಷ ಕಳೆದರು ಕೂಡ ಇಂದಿಗೂ ಸ್ಮರಿಸಲು ಕಾರಣ ಅವರ ವಿಚಾರಧಾರೆಗಳು ಮತ್ತು ಚಿಂತನೆಗಳು ಎಂದರು.

ಡಿಸಿ ಕಚೇರಿಯ ತಹಶೀಲ್ದಾರ್ ಚನ್ನಪ್ಪ ಮಾತನಾಡಿ ನಮ್ಮ ನೆಲದಲ್ಲಿ ಅನೇಕ ಶಿವ ಶರಣರು ಜನ್ಮತಾಳಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರು ನಡೆಯಬೇಕು ಎಂದು ಹೇಳಿದರು.

ಸಮಾಜದ ಅಧ್ಯಕ್ಷ ಎನ್.ಕುಮಾರಸ್ವಾಮಿ ಮಾತನಾಡಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಆಚರಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಉಮೇಶ್, ಸಮಾಜದ ಮುಖಂಡರು ಸೇರಿದಂತೆ ಹಲವರು ಭಾಗಿಯಾಗಿದ್ದರು.

ರೈಲ್ವೆ ಸಂಚಾರದಲ್ಲಿ ಕೆಲವು ಭಾಗಶಃ ರದ್ದುಮತ್ತು ನಿಯಂತ್ರಣ ಮಾಹಿತಿ

0

ದೇವನೂರು ಮತ್ತು ಬಾಣಾವರ ರೈಲ್ವೇ ಯಾರ್ಡ್‍ಗಳಲ್ಲಿ ಥಿಕ್ ವೆಬ್‍ಸ್ವಿಚ್ ಅಳವಡಿಸುವ ಕಾರ್ಯದ ಪ್ರಯುಕ್ತ ಲೈನ್ ಅಡಚಣೆಯಾಗಿರುವುದರಿಂದ ಕೆಳಕಂಡ ರೈಲುಗಳನ್ನು ರದ್ದು/ಭಾಗಶಃ ರದ್ದು/ನಿಯಂತ್ರಣಗೊಳಿಸಲಾಗುವುದು.

ರದ್ದು: ರೈಲು ಸಂಖ್ಯೆ 06591 ತುಮಕೂರು-ಶಿವಮೊಗ್ಗ ಪಟ್ಟಣ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲನ್ನು ದಿನಾಂಕ: 10-05-2022, 17-05-2022, 22-05-2022, 27-05-2022 ರಂದು ರದ್ದುಪಡಿಸಲಾಗಿದೆ. ಹಾಗೂ ರೈಲು ಸಂಖ್ಯೆ 06592 ಶಿವಮೊಗ್ಗ ಪಟ್ಟಣ-ತುಮಕೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್

ರೈಲನ್ನು ದಿನಾಂಕ: 11-05-2022, 18-05-2022, 23-05-2022 ಮತ್ತು 28-05-22 ರಂದು ರದ್ದುಪಡಿಸಲಾಗಿದೆ.

ಭಾಗಶಃ ರದ್ದು : ರೈಲು ಸಂಖ್ಯೆ 07368 ಎಸ್‍ಎಸ್‍ಎಸ್ ಹುಬ್ಬಳ್ಳಿಯಿಂದ ಹೊರಡುವ ಎಸ್‍ಎಸ್‍ಎಸ್ ಹುಬ್ಬಳ್ಳಿ-ಅರಸೀಕೆರೆ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲನ್ನು ದಿನಾಂಕ 10-05-2022, 17-05-2022, 27-05-2022 ರಂದು ಬೀರೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಪಡಿಸಲಾಗುವುದು ಹಾಗೂ ಬೀರೂರು ಸ್ಟೇಷನ್‍ನಲ್ಲಿ ಸಮಾಪ್ತಿಗೊಳಿಸಲಾಗುವುದು.
ಅರಸೀಕೆರೆಯಿಂದ ಹೊರಡುವ ರೈಲು ಸಂಖ್ಯೆ 07367 ಅರಸೀಕೆರೆ –ಎಸ್‍ಎಸ್‍ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ಸ್ಪೆಷಲ್ ರೈಲನ್ನು ದಿನಾಂಕ: 10.05.2022, 17.05.2022, 22.05.2022 & 27.05.2022 ರಂದು ಅರಸೀಕೆರೆ ಮತ್ತು ಶಿವಮೊಗ್ಗ ಪಟ್ಟಣದ ನಡುವೆ ಭಾಗಶಃ ರದ್ದುಪಡಿಸಲಾಗುವುದು ಹಾಗೂ ಅರಸೀಕೆರೆ ಸ್ಟೇಷನ್‍ನಲ್ಲಿ ಸಮಾಪ್ತಿಗೊಳಿಸಲಾಗುವುದು.

ಶಿವಮೊಗ್ಗ ಪಟ್ಟಣದಿಂದ ಹೊರಡುವ ರೈಲು ಸಂಖ್ಯೆ 12090 ಶಿವಮೊಗ್ಗ ಪಟ್ಟಣ-ಕೆಎಸ್‍ಆರ್ ಬೆಂಗಳೂರು ಜನಶತಾಬ್ದಿ ಡೈಲಿ ಎಕ್ಸ್‍ಪ್ರೆಸ್ ರೈಲನ್ನು 11.05.2022, 18.05.2022, 23.05.2022 & 28.05.2022 ರಂದು ಶಿವಮೊಗ್ಗ ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಪಡಿಸಲಾಗುವುದು ಹಾಗೂ ನಿಗದಿತ ವೇಳಾಪಟ್ಟಿಯಂತೆ ಈ ರೈಲು ಶಿವಮೊಗ್ಗದ ಬದಲಾಗಿ ಅರಸೀಕೆರೆಯಿಂದ ಪ್ರಾರಂಭಿಸಲಾಗುವುದು.

ನಿಯಂತ್ರಣ : ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 16535 ಮೈಸೂರು-ಸೋಲಾಪುರ್ ಗೋಲ್‍ಗುಂಬಜ್ ಡೈಲಿ ಎಕ್ಸ್‍ಪ್ರೆಸ್ ರೈಲನ್ನು 10.05.2022, 17.05.2022, 22.05.2022 & 27.05.2022 ರಂದು ಸ್ಟೇಷನ್ ಮಾರ್ಗದಲ್ಲಿ 70 ನಿಮಿಷಗಳ ಕಾಲ ನಿಯಂತ್ರಣದಲ್ಲಿಡಲಾಗುವುದು(regulated).
ಮಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 07378 ಮಂಗಳೂರು ಜೆಎನ್-ವಿಜಯಪುರ ಡೈಲಿ ಎಕ್ಸ್‍ಪ್ರೆಸ್ ಸ್ಪೆಷಲ್ ರೈಲನ್ನು 10.05.2022, 17.05.2022, 22.05.2022 & 27.05.2022 ರಂದು ಸ್ಟೇಷನ್ ಮಾರ್ಗದಲ್ಲಿ 70 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.

ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 16545 ಯಶವಂತಪುರ-ಕಾರಟಗಿ ಡೈಲಿ ಎಕ್ಸ್‍ಪ್ರೆಸ್ ರೈಲನ್ನು 10.05.2022, 17.05.2022, 22.05.2022 & 27.05.2022ಸ್ಟೇಷನ್ ಮಾರ್ಗದಲ್ಲಿ 15 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು ಎಂದು ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ ಶಿವಮೊಗ್ಗದಲ್ಲಿ ಕಾಂಗ್ರೆಸ್ ಜನಧ್ವನಿ ಜಾಥಾ

0

ಬಿಜೆಪಿ ಸರಕಾರದ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯವನ್ನು ಖಂಡಿಸಿ ಇಂದು ಶಿವಮೊಗ್ಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಜನಧ್ವನಿ ಜಾಥಾ ಹಾಗೂ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾಮಗಾರಿಯಲ್ಲಿ ಶೇ.40 ಕಮಿಷನ್, ಪಿ. ಎಸ್. ಐ ನೇಮಕಾತಿಯಲ್ಲಿ ಕರ್ಮಕಾಂಡ, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆಎಸ್ ಈಶ್ವರಪ್ಪ ರವರನ್ನು ಬಂಧಿಸಿಲ್ಲ. ಪಿಎಸ್ಐ ನೇಮಕಾತಿಯಲ್ಲಿ ಕರ್ಮಕಾಂಡದಲ್ಲಿ ಸಿಐಡಿ ತನಿಖೆಯಲ್ಲಿ ಬಗೆದಷ್ಟೂ ಹಗರಣಗಳು ಹೊರಬರುತ್ತಿವೆ. ಆದರೆ ವಿಧಾನಸೌಧದಲ್ಲಿರುವ ಹಗರಣದ ರೂವಾರಿಗಳನ್ನು ಬಿಟ್ಟು ಕೇವಲ ಮಧ್ಯವರ್ತಿಗಳನ್ನು ಬಂಧಿಸಲಾಗುತ್ತಿದೆ ಎಂದು ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಪ್ರಾಮಾಣಿಕವಾಗಿ ಅಭ್ಯರ್ಥಿಗಳಿಗೆ ಹುದ್ದೆಗಳು ಸಿಗದೆ ಉಳ್ಳವರ ಪಾಲಾಗುತ್ತಿದೆ. ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು ಜನರನ್ನು ಬೇರೆ ವಿಷಯಗಳತ್ತ ಸೆಳೆಯಲು ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಅಶೋಕ ವೃತ್ತದಿಂದ ಹೊರಡುವ ಜಾಥಾ ಬಿ.ಎಚ್.ರಸ್ತೆ, ನೆಹರು ರಸ್ತೆ, ಗೋಪಿ ವೃತ್ತದ ಮುಖಾಂತರ ಬಾಲರಾಜ ಅರಸ್ ರಸ್ತೆಯಲ್ಲಿರುವ ಭೋವಿ ಸಮುದಾಯ ಭವನ ತಲುಪಿದ ನಂತರ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಯುದ್ಧದ ನಡುವೆಯೂ ಉಕ್ರೇನ್ ನಿಂದ ಭಾರತಕ್ಕೆ ರೈಲಿನಗಾಲಿಗಳ ರಫ್ತು

0

ರಷ್ಯಾದಿಂದ ಸತತ ದಾಳಿ ಎದುರಿಸುತ್ತಿರುವ ಉಕ್ರೇನ್‌ನಿಂದ ಭಾರತದ ವಂದೇ ಭಾರತ್‌ ರೈಲಿನ ಗಾಲಿಗಳ ಮೊದಲ ಬ್ಯಾಚ್‌ ಮೇ 12ರಂದು ಚೆನ್ನೈಗೆ ಬಂದು ತಲುಪಲಿದೆ.

ಸದ್ಯ 128 ಗಾಲಿಗಳು ತಯಾರಾಗಿದ್ದು, ಅದನ್ನು ಭೂ ಮಾರ್ಗವಾಗಿ ರೊಮೇನಿಯಾಕ್ಕೆ ಕಳುಹಿಸಿಕೊಡಲಾಗಿದೆ. ಅಲ್ಲಿಂದ ಮೂರು ಪ್ರತ್ಯೇಕ ಬ್ಯಾಚ್‌ಗಳಲ್ಲಿ ಅವುಗಳನ್ನು ಭಾರತಕ್ಕೆ ವಾಯುಮಾರ್ಗದಲ್ಲಿ ತರಲಾಗುವುದು. ಮೊದಲ ಬ್ಯಾಚ್‌ನಲ್ಲಿ 40 ಗಾಲಿಗಳು ಬರಲಿವೆ.

ಉಕ್ರೇನ್‌ನ ಸಂಸ್ಥೆಯಿಂದ 36,000 ಗಾಲಿಗಳ ಖರೀದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.
ಆದರೆ ಯುದ್ಧದ ಹಿನ್ನೆಲೆ ಅಲ್ಲಿನ ಗಾಲಿ ತಯಾರಿ ಕಾರ್ಖಾನೆಯ ಕೆಲಸಗಾರರೆಲ್ಲರೂ ದೇಶಕ್ಕಾಗಿ ಹೋರಾಡುತ್ತಿದ್ದಾರೆ.

ಅದನ್ನು ಬಳಕೆ ಮಾಡಲಿರುವ ವಂದೇ ಭಾರತ್‌ ರೈಲು ಇದೇ ಜುಲೈನಲ್ಲಿ ಹಳಿಗಿಳಿಯಲಿದೆ. ಉಕ್ರೇನ್‌ ಜತೆ ಅಮೆರಿಕ, ಜೆಕ್‌ ಗಣರಾಜ್ಯ ಮತ್ತು ಪೋಲೆಂಡ್‌ನಿಂದಲೂ ಗಾಲಿಗಳನ್ನು ಖರೀದಿಸಲು ಭಾರತ ಒಪ್ಪಂದ ಮಾಡಿಕೊಂಡಿದೆ

ಭಾರತದ 4 ಪತ್ರಕರ್ತರಿಗೆ 2022 ರ ಪುಲಿಟ್ಜರ್ ಪ್ರಶಸ್ತಿ ಪ್ರಕಟ

0

ಅಮೆರಿಕದ ಮಾಧ್ಯಮ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ನೀಡಲಾಗುವ ಪುಲಿಟ್ಜರ್ ಪ್ರಶಸ್ತಿ ಪ್ರಕಟಗೊಂಡಿದೆ.

2022ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ನಾಲ್ವರು ಭಾರತೀಯರಿಗೆ ಸಿಕ್ಕಿರುವುದು ವಿಶೇಷ.

ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಸರಕಾರಿ ವಿಶೇಷ ಪಡೆಗಳ ಮಧ್ಯೆ ನಡೆದ ಸಂಘರ್ಷ ಘಟನೆ ವೇಳೆ ಬಲಿಯಾಗಿದ್ದ ದಾನಿಶ್ ಸಿದ್ದಿಕಿಗೆ ಮರಣೋತ್ತರ ಪ್ರಶಸ್ತಿ ಗೌರವ ಲಭಿಸಿದೆ.

ಈ ವರ್ಷ ತನಿಖಾ ವರದಿ ವಿಭಾಗದಲ್ಲಿ ಟಂಪಾ ಬೇ ಟೈಮ್ಸ್ (Tampa Bay Times) ಪತ್ರಿಕೆಯ ಮೂವರು ಪತ್ರಕರ್ತರಿಗೆ ಪುಲಿಟ್ಜರ್ ಪ್ರಶಸ್ತಿ ಬಂದಿದೆ. ಫ್ಲೋರಿಡಾ ರಾಜ್ಯದ ಬ್ಯಾಟರಿ ಸಂಸ್ಕರಣೆ ಘಟಕದೊಳಗೆ ವಿಷಯುಕ್ತ ವಾತಾವರಣ ಇರುವುದರ ಕುರಿತು ಈ ಮೂವರು ಸರಣಿ ತನಿಖಾ ವರದಿಗಳನ್ನು ಬರೆದು ಪ್ರಕಟಿಸಿದ್ದರು.

ಕಳೆದ ವರ್ಷ, ಭಾರತ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್‌ಗೆ 2021ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ಲಭಿಸಿತ್ತು. ಚೀನಾದ ಷಿನ್‌ಜಿಯಾಂಗ್ (Xin Jiang) ಪ್ರಾಂತ್ಯದಲ್ಲಿ ಮುಸ್ಲಿಮರನ್ನು ಕೂಡಿಹಾಕಲು ಬೃಹತ್ ಜೈಲುಗಳನ್ನು ನಿರ್ಮಿಸಿರುವುದರ ಬಗ್ಗೆ ಅವರ ತನಿಖಾ ವರದಿ ಗಮನ ಸೆಳೆದಿದೆ.

ಇಂಥ ವಿಶೇಷ ತನಿಖಾ ವರದಿಗಳನ್ನು ಕೊಟ್ಟಿದ್ದಕ್ಕೆ ಮೇಘಾ ರಾಜಗೋಪಾಲನ್‌ಗೆ ಕಳೆದ ವರ್ಷ ಪುಲಿಟ್ಜರ್ ಗೌರವ ಪ್ರಾಪ್ತವಾಗಿತ್ತು. ಈ ವರ್ಷ ನಾಲ್ವರು ಭಾರತೀಯರಿಗೆ ಈ ಗೌರವ ಸಿಕ್ಕಿರುವುದು ವಿಶೇಷ. ಫೀಚರ್ ಫೋಟೋಗ್ರಫಿ ವಿಭಾಗದಲ್ಲಿ ಭಾರತದ ಈ ನಾಲ್ವರಿಗೆ ಪ್ರಶಸ್ತಿ ಸಂದಾಯವಾಗಿದೆ.

ಇದರ ಪರಿಣಾಮವಾಗಿ ಘಟಕದಲ್ಲಿ ಅಧಿಕಾರಿಗಳು ಸುರಕ್ಷಿತ ಕ್ರಮಗಳನ್ನ ಕೈಗೊಂಡರು.
ಬ್ರೇಕಿಂಗ್ ನ್ಯೂಸ್ ವರದಿಯಲ್ಲಿ ಮಿಯಾಮಿ ಹೆರಾಲ್ಡ್ ಪತ್ರಿಕೆಯ ಸಿಬ್ಬಂದಿಗೆ ಪುಲಿಟ್ಜರ್ ಪ್ರಶಸ್ತಿ ಸಿಕ್ಕಿದೆ. ಫ್ಲೋರಿಡಾದ ಸೀಸೈಡ್ ಅಪಾರ್ಟ್ಮೆಂಟ್ ಟವರ್‌ಗಳು ಕುಸಿದ ಘಟನೆಯನ್ನು ಇವರು ಬಹಳ ಚೆನ್ನಾಗಿ ಪ್ರಕಟಿಸಿದ್ದರೆನ್ನಲಾಗಿದೆ.

ಸುಪ್ರೀಂ ಆದೇಶವನ್ನ ಎಲ್ಲರೂ ಪಾಲಿಸಬೇಕು- ಬೊಮ್ಮಾಯಿ

0

ಅಜಾನ್ ವಿರುದ್ಧ ಸುಪ್ರಭಾತ ವಿವಾದಕ್ಕೆ ಸಂಬಂಧಿಸಿ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದ್ದಾರೆ. ಧ್ವನಿವರ್ಧಕಗಳ ಕುರಿತು ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಕರ್ನಾಟಕ ಸರ್ಕಾರವೂ 2002ರಲ್ಲಿ ವಿಶೇಷ ಆದೇಶ ಮಾಡಿದೆ.

ಈ ಆದೇಶಗಳನ್ನ ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.

ಈ ಕುರಿತು ನೆಲಮಂಗಲದಲ್ಲಿ ಮಾಧ್ಯಮಮಿತ್ರರೊಂದಿಗೆ ಮಾತನಾಡಿದ ಸಿಎಂ, ಅಜಾನ್ ವಿರುದ್ಧ ಸುಪ್ರಭಾತ ವಿಚಾರದ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚೆ ನಡೆಸಲಾಗಿದೆ. ಧ್ವನಿವರ್ಧಕಗಳ ಬಗ್ಗೆ ಸುಪ್ರೀಂಕೋರ್ಟ್‌ ಆದೇಶವನ್ನ ನೀಡಿದೆ. ಕರ್ನಾಟಕ ಸರ್ಕಾರವೂ 2002ರಲ್ಲಿ ವಿಶೇಷ ಆದೇಶ ಮಾಡಿದೆ. ಈ ಆದೇಶಗಳನ್ನ ಎಲ್ಲರೂ ಪಾಲಿಸಬೇಕೆಂಬ ನಿರ್ಧಾರ ಮಾಡಲಾಗಿದೆ ಎಂದರು.

ಇನ್ನು ಸಭೆ ವಿವರಗಳನ್ನ ಪ್ರತ್ಯೇಕ ಆದೇಶ ಮೂಲಕ ಹೊರಡಿಸ್ತೇವೆ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಎಲ್ಲೂ ಸರ್ಕಾರ ಹೊರಡಿಸುವ ಹೊಸ ಆದೇಶ ಪಾಲಿಸಬೇಕು. ಇದೇ ನಿಯಮಗಳು ಯುಪಿ, ಬೇರೆ ಬೇರೆ ರಾಜ್ಯಗಳಲ್ಲಿ ಇವೆ ಎಂದು ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.

ಭಾರತೀಯ ರೈಲುಗಳಲ್ಲಿ ರಾತ್ರಿ ಪ್ರಯಾಣದಲ್ಲಿ ಮೊಬೈಲ್ ಲೌಡ್ ಸ್ಪೀಕರ್ ನಿಷೇಧ

0

ರೈಲ್ವೆ ಪ್ರಯಾಣಿಕರು ರಾತ್ರಿ ಪ್ರಯಾಣದ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಏರಿದ ಧ್ವನಿಯಲ್ಲಿ ಮಾತನಾಡುವುದನ್ನು ಅಥವಾ ಲೌಡ್‌ ಸ್ಪೀಕರ್‌ ನಲ್ಲಿ ಸಂಗೀತ ಕೇಳುವುದನ್ನು ಭಾರತೀಯ ರೈಲ್ವೆ ನಿಷೇಧಿಸಿದೆ.

ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಖಾತರಿಪಡಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಹೊಸದಾಗಿ ಪ್ರಯಾಣಿಕ ಸ್ನೇಹಿ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಅದರ ಪ್ರಕಾರ, ಪ್ರಯಾಣಿಕರು ದೂರು ನೀಡಿದರೆ, ಆ ಸಮಸ್ಯೆ ಪರಿಹರಿಸುವ ಜವಾಬ್ದಾರಿ ರೈಲಿನಲ್ಲಿರುವ ಸಿಬ್ಬಂದಿಯದ್ದಾಗಿರುತ್ತದೆ.

ರೈಲಿನಲ್ಲಿರುವ ರೈಲ್ವೆ ತಪಾಸಣೆ ಸಿಬ್ಬಂದಿ, ಆರ್‌ಪಿಎಫ್, ಎಲೆಕ್ಟ್ರಿಷಿಯನ್, ಅಡುಗೆ ಮತ್ತು ನಿರ್ವಹಣೆ ಸಿಬ್ಬಂದಿ ಈ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ರೈಲ್ವೆ ತಿಳಿಸಿದೆ.

ರಾತ್ರಿ 10 ಗಂಟೆಯ ಬಳಿಕ ಪ್ರಯಾಣಿಕರು ಮೊಬೈಲ್‌ನಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಷರತ್ತುಗಳ ನಡುವೆಯೂ 60 ವರ್ಷ ಮೇಲಿನ ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಒಂಟಿ ಮಹಿಳಾ ಪ್ರಯಾಣಿಕರಿಗೆ ರೈಲ್ವೆ ಸಿಬ್ಬಂದಿ ಅಗತ್ಯ ನೆರವು ನೀಡುತ್ತಾರೆ.

ಹೊಸ ಮಾರ್ಗಸೂಚಿಗಳ ಕುರಿತು ರೈಲ್ವೆ ವಲಯ ಮಟ್ಟದಲ್ಲಿ, ಪ್ರಯಾಣಿಕರಿಗೆ ಜಾಗೃತಿ ಮೂಡಿಸಬೇಕು. ರೈಲಿನಲ್ಲಿ ಏರಿದ ಧ್ವನಿಯಲ್ಲಿ ಮೊಬೈಲ್‌ನಲ್ಲಿ ಮಾತನಾಡದಂತೆ ಹಾಗೂ ಇಯರ್‌ ಫೋನ್‌ ಇಲ್ಲದೆ ಸಂಗೀತ ಕೇಳದಂತೆ ಪ್ರಯಾಣಿಕರರಿಗೆ ಸಲಹೆಗಳನ್ನು
ಟಿಕೆಟ್‌ ಪರಿಶೀಲಕರು ಮತ್ತು ಇತರ ರೈಲ್ವೆ ಸಿಬ್ಬಂದಿ ನೀಡಬೇಕು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಕೋವಿಡ್ ಪ್ರಕರಣಗಳ ಇಳಿಕೆದೈನಿಕ ಪಾಸಿಟಿವಿಟಿ ದರ ಶೇ 0.47

0

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಂದು ಕೊಂಚ ಕಡಿಮೆಯಾಗಿದೆ. ಭಾರತದಲ್ಲಿ 2,288 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ.

ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನಿಂದ 10 ಜನ ಸಾವನ್ನಪ್ಪಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2,288 ಹೊಸ ಪ್ರಕರಣಗಳು, 3,044 ಚೇತರಿಕೆಗಳು ಮತ್ತು 10 ಸಾವುಗಳು ವರದಿಯಾಗಿವೆ. ಒಟ್ಟು ಸಕ್ರಿಯ ಪ್ರಕರಣಗಳು 19,637. ದೈನಂದಿನ ಪಾಸಿಟಿವಿಟಿ ದರ 0.47% ಇದೆ.

ಶ್ರೀಲಂಕಾ ಸಂಸದನ ಕೊಲೆ:ವಿಶ್ವ ರಾಜಕೀಯ ಕ್ಷೇತ್ರದಲ್ಲಿಭಾರಿ ಸಂಚಲನ

0

ಶ್ರೀಲಂಕಾದಲ್ಲಿ ನಡೆದ ಘರ್ಷಣೆಯಲ್ಲಿ ಆಡಳಿತ ಪಕ್ಷದ ಸಂಸದನ ಹತ್ಯೆ ಮಾಡಲಾಗಿದೆ. ಪ್ರಧಾನಿ ಮಹಿಂದಾ ರಾಜಪಕ್ಷ ರಾಜೀನಾಮೆಯ ಬಳಿಕ ಈ ಘರ್ಷಣೆ ನಡೆದಿದೆ. ಆಡಳಿತ ಪಕ್ಷದ ಸಂಸದ ಅಮರಕೀರ್ತಿ ಆತುಕೋರಾಲ ಅವರನ್ನು ಥಳಿಸಿ ಹತ್ಯೆ ಮಾಡಲಾಗಿದೆ.

ಮಹಿಂದಾ ರಾಜಪಕ್ಸೆ ರಾಜೀನಾಮೆಯಿಂದ ಕೆರಳಿದ ಆಡಳಿತ ಪಕ್ಷದ ಸಂಸದ ಅಮರಕೀರ್ತಿ ಅತುಕೋರಾಲ ಅವರು ರಾಜಧಾನಿ ಕೊಲಂಬೊ ಬಳಿ ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ 3 ಪ್ರತಿಭಟನಾಕಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಸದರ ಈ ನಡೆಯಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ನಿಟ್ಟಂಪುರದಲ್ಲಿ ಅಮರಕೀರ್ತಿ ಅವರ ಕಾರ್ ತಡೆದು ನಿಲ್ಲಿಸಿದೆ. ಅವರ ಮೇಲೆ ದಾಳಿ ಮಾಡಿ ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಶ್ರೀಲಂಕಾದಲ್ಲಿ ಆಡಳಿತ ಪಕ್ಷದ ಸಂಸದರೊಬ್ಬರನ್ನು ನಾಗರಿಕರು ಥಳಿಸಿ ಕೊಂದಿರುವ ಘಟನೆ ವಿಶ್ವ ವೇದಿಕೆಯಲ್ಲಿ ಭಾರೀ ಸಂಚಲನ ಮೂಡಿಸಿದೆ.