Tuesday, August 25, 2026
Tuesday, August 25, 2026

ಉಕ್ರೇನ್ ಶಾಲೆಯ ಮೇಲೆ ರಷ್ಯ ಬಾಂಬ್ದಾಳಿ:6೦ ಸಾವು

Date:

ಪೂರ್ವ ಉಕ್ರೇನ್​ ನ ಲುಹಾನ್ ಸ್ಕ್​ ಪ್ರಾಂತ್ಯದ ಬಿಲೋಹೊರಿವ್ಕಾ ಎಂಬಲ್ಲಿನ ಶಾಲೆಯ ಮೇಲೆ ರಷ್ಯಾ ಸೇನೆ ನಡೆಸಿದ ಬಾಂಬ್​ ದಾಳಿಗೆ ಮಕ್ಕಳು ಸೇರಿ 60 ಜನ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಜನರನ್ನು ಸ್ಥಳದಿಂದ ಪಾರುಮಾಡಲಾಗಿದ್ದು, ಏಳು ಜನ ಗಂಭೀರ ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್​ ಸೆರ್​ಹಿಯ್​ ಗೈಡಾಯ್​ ತಿಳಿಸಿದ್ದಾರೆ.

ಶಾಲೆಯನ್ನು ನಿರಾಶ್ರಿತರ ಕೇಂದ್ರವನ್ನಾಗಿ ಪರಿವರ್ತಿಸಲಾಗಿತ್ತು. ಅಲ್ಲಿ ಮಕ್ಕಳು ಸೇರಿ 90ಕ್ಕೂ ಹೆಚ್ಚು ಜನ ಆಶ್ರಯ ಪಡೆದುಕೊಂಡಿದ್ದರು. ಭಾನುವಾರ ಅಪರಾಹ್ನ ರಷ್ಯಾ ಸೇನೆ ಈ ಶಾಲೆಯ ಮೇಲೆ ಬಾಂಬ್​ ದಾಳಿ ನಡೆಸಿತು.

ಸ್ಫೋಟದಿಂದ ಉಂಟಾದ ಬೆಂಕಿ ನಾಲ್ಕು ಗಂಟೆ ಕಾಲ ಹೊತ್ತಿ ಉರಿದಿದೆ ಎಂದು ಗೈಡಾಯ್​ ವಿವರಿಸಿದರು.

ದಾಳಿ ನಡೆಸುತ್ತಿರುವ ರಷ್ಯಾ ವನ್ನು ಎದುರಿಸುವುದಕ್ಕೆ ಅಗತ್ಯವಾದ ಹೆಚ್ಚುವರಿ ಸೇನಾ ನೆರವು ನೀಡುವುದನ್ನು ಬ್ರಿಟನ್​ ಖಾತರಿಪಡಿಸಿದೆ. 1.3 ಶತಕೋಟಿ ಪೌಂಡ್ಸ್​ ಸೇನಾ ನೆರವು ನೀಡುವುದಾಗಿ ಬ್ರಿಟನ್​ ಘೋಷಿಸಿದೆ.

ರಷ್ಯಾ ಸೇನೆ ವಿಶೇಷ ಸೇನಾ ಕಾರ್ಯಾಚರಣೆ ಹೆಸರಿನಲ್ಲಿ ನಾಗರಿಕರ ಮೇಲೆ ದಾಳಿ ನಡೆಸುತ್ತಿದೆ. ಮರಿಯುಪೋಲ್​ ಸುತ್ತಮುತ್ತ ನಾಗರಿಕರಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವುದಕ್ಕೆ ಸಾಕ್ಷ$್ಯಗಳು ಬಹಿರಂಗವಾಗಿವೆ ಎಂದು ಯೂಕ್ರೇನ್​ ಮತ್ತು ಅದರ ಪಾಶ್ಚಾತ್ಯ ಮಿತ್ರ ರಾಷ್ಟ್ರಗಳು ಆರೋಪಿಸಿವೆ. ಆದರೆ, ಈ ಆರೋಪವನ್ನು ಮಾಸ್ಕೋ ನಿರಾಕರಿಸಿದೆ.

ಮರಿಯುಪೋಲ್​ ವಶಕ್ಕೆ ಯತ್ನ
ಯೂಕ್ರೇನ್​ನ ಬಂದರು ನಗರ ಮರಿಯುಪೋಲ್​ ಬಹುತೇಕ ನಾಶವಾಗಿದ್ದು, ರಷ್ಯಾ ವಶದಲ್ಲಿದೆ. ಈ ನಗರದ ಸ್ಟೀಲ್​ ಟಕ ಆವರಣದಲ್ಲಿ ನಾಗರಿಕರು ಮತ್ತು ಯೂಕ್ರೇನ್​ ಸೇನೆ ಆಶ್ರಯ ಪಡೆದುಕೊಂಡಿದ್ದು, ರಷ್ಯಾ ಸೇನೆಗೆ ತೀವ್ರ ಪ್ರತಿರೋಧ ತೋರಿದ್ದಾರೆ.

ಇವರನ್ನೆಲ್ಲ ಹೊರ ಹಾಕಿ ಅಥವಾ ಶರಣಾಗುವಂತೆ ಮಾಡಿ ಮರಿಯುಪೋಲ್​ ಅನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಳ್ಳಲು ರಷ್ಯಾ ಸೇನೆ ಪ್ರಯತ್ನ ಮುಂದುವರಿಸಿದೆ.

ಎರಡನೇ ವಿಶ್ವ ಮಹಾಯುದ್ಧದಲ್ಲಿ 1945 ಮೇ 8ರಂದು ಗೆಲುವು ಸಾಧಿಸಿದ ನೆನಪಿಗಾಗಿ ವಿಕ್ಟರಿ ಇನ್​ ಯುರೋಪ್​ ಡೇ ಆಚರಿಸಲಾಗುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ಜಿ7 ನಾಯಕರು ವರ್ಚುವಲ್​ ಆಗಿ ಮಾತುಕತೆ ನಡೆಸಿದ ವೇಳೆ, ಬ್ರಿಟನ್​ ಈ ನೆರವನ್ನು ಖಾತರಿಪಡಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...