Saturday, February 28, 2026
Saturday, February 28, 2026
Home Blog Page 1590

ಗೃಹಬಳಕೆ ಸಿಲಿಂಡರ್ ಬೆಲೆಯೇರಿಕೆ:ರಾಹುಲ್ ಗೇಲಿ

0

ಈಗಿನ ಬೆಲೆಗೆ 2014ರಲ್ಲಿ ಎರಡು ಗ್ಯಾಸ್‌ ಸಿಲಿಂಡರ್‌ಗಳು ಬರುತ್ತಿದ್ದವು ಎಂದು ರಾಹುಲ್‌ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ಗೇಲಿ ಮಾಡಿದ್ದಾರೆ.

ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಶನಿವಾರ ₹50 ಹೆಚ್ಚಳ ಮಾಡಲಾಗಿತ್ತು.
ಹೀಗಾಗಿ 14.2 ಕೆ.ಜಿ ತೂಕದ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ ₹1002.50ಕ್ಕೆ ತಲುಪಿತ್ತು.
ಅಡುಗೆ ಅನಿಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ ಅವರು, 2014ಕ್ಕೂ ಹಿಂದಿನ ಬೆಲೆ ಮತ್ತು ಈಗಿನ ಬೆಲೆಯನ್ನು ತುಲನೆ ಮಾಡಿದ್ದಾರೆ.

ಎಲ್‌ಪಿಜಿ ಸಿಲಿಂಡರ್‌ 2014ರಲ್ಲಿ ₹410 ಇತ್ತು. ₹827 ಸಬ್ಸಿಡಿ ದೊರೆಯುತ್ತಿತ್ತು. ಈಗ ಎಲ್‌ಪಿಜಿ ₹999 (ದೆಹಲಿ ದರ) ದಾಟಿದೆ. ಶೂನ್ಯ ಸಬ್ಸಿಡಿ ದೊರೆಯುತ್ತಿದೆ.

ಭಾರತೀಯ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಕಲ್ಯಾಣಕ್ಕಾಗಿ ಕಾಂಗ್ರೆಸ್ ಆಡಳಿತವೇ ಸೂಕ್ತ. ಇದು ನಮ್ಮ ಆರ್ಥಿಕ ನೀತಿಯೂ ಆಗಿದೆ ಎಂದು ಬರೆದುಕೊಂಡಿದ್ದಾರೆ.

ಮಹನೀಯರ ಜಯಂತಿ ಬರೀ ಆಚರಣೆಯಾಗಬಾರದು-ವೀರಮಲ್ಲಪ್ಪ

0

ಮಹನೀಯರ ಜಯಂತಿಗಳು ಕೇವಲ ಆಚರಣೆಯಾಗದೆ ಅನುಸರಣೆ ಆಗಬೇಕು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಅವರು ಮಾತನಾಡಿದರು.

ಇವತ್ತು ನೀರು ಹಾಗೂ ಉಪ್ಪು ಇಲ್ಲದ ಯಾವುದೇ ಪದಾರ್ಥಗಳು ರುಚಿಯಾಗಿರುವುದಿಲ್ಲ. ಭಗೀರಥ ಮಹರ್ಷಿರವರ ಜಯಂತಿಯು ಬರಿ ಆಚರಣೆಯಾಗಬಾರದು ಬದಲಿಗೆ ಅನುಸರಣೆ ಆಗಬೇಕು. ಭಗಿರಥ ಮಹರ್ಷಿ ಅಂತಹ ಮಹನೀಯರ ಯಶೋಗಾಥೆಯನ್ನು ನಮ್ಮ ಮಕ್ಕಳಿಗೂ ತಿಳಿಸಬೇಕು. ನಾವೆಲ್ಲರೂ ಅವರ ಮಾರ್ಗದಲ್ಲಿ ಸಾಗಿ ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡೋಣ ಎಂದರು.

ಶಿವಮೊಗ್ಗ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅನಂದ್ ಮಾತನಾಡಿ, ಇವತ್ತಿನ ದಿನ ನಾವು ನೀರನ್ನು ಹಣಕೊಟ್ಟು ಕುಡಿಯುವಂತಹ ಪರಿಸ್ಥಿತಿಗೆ ಬಂದಿದೆ, ನಾವೆಲ್ಲರೂ ಭಗೀರಥ ಮಹಾಋಷಿ ಅವರಂತೆ ನಮ್ಮ ಮುಂದಿನ ಪೀಳಿಗೆಗೋಸ್ಕರ ನೀರನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಶ್ ಮಾತನಾಡಿ, ಇಡೀ ಮನುಕುಲಕ್ಕೆ ಮಹಾನೀಯ ಭಗೀರಥ ರವರ ಕೊಡುಗೆ ಅಪಾರವಾದದ್ದು, ನಾವೆಲ್ಲರೂ ಆಧುನಿಕ ಭಗೀರಥ ಆಗಬೇಕು ಎಲ್ಲಿ ನೀರು ವ್ಯರ್ಥವಾಗಿ ಪೋಲಾಗಿರುತ್ತದೆಯೋ ಅದನ್ನು ತಡೆಯುವ ನಿಟ್ಟಿನಲ್ಲಿ ಜಲ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಸಮಾಜದ ಮುಖಂಡ ಅಂಜಿನಪ್ಪ ಉಪನ್ಯಾಸ ನೀಡಿ, ಗಂಗೆಯನ್ನು ಭೂಮಿಗೆ ಇಳಿಸಿದ ಮಹಾನಿಯ ಶ್ರೀ ಭಗೀರಥ ಮಹರ್ಷಿ, ಗಂಗೆ ಕೇವಲ ನೀರಲ್ಲ, ಅದು ಪ್ರಜ್ಞೆಯ ಪ್ರವಾಹ. ಭಗೀರಥ ಮಹರ್ಷಿಯವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲದೆ ಕರ್ಮ ತತ್ವದ ಮೂಲಕ ಇಡೀ ಮನುಕುಲದ ಸಕಲ ಜೀವರಾಶಿಗಳಿಗೂ ಅನುಕೂಲ ಮಾಡಿಕೊಟ್ಟ ಮಹಾಪುರುಷರಾಗಿದ್ದಾರೆ ನಾವೆಲ್ಲರೂ ನಮ್ಮ ನಮ್ಮ ಕ್ಷೇತ್ರದಲ್ಲಿ ಭಗೀರಥರಂತೆ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮಾಜದ ರಾಜ್ಯ ಉಪಾಧ್ಯಕ್ಷರಾದ ಬಸವರಾಜಪ್ಪ ಹಾಗೂ ಭರತ್ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ರುದ್ರೇಶ್ ಚಿರಡೋಣಿ ಹಾಗೂ ಸಂಗಡಿಗರಿಂದ ಶ್ರೀ ಭಗೀರಥ ಮಹರ್ಷಿ ಅವರ ಹಾಡನ್ನು ಹಾಡಿದರು.

ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಉಪ್ಪಾರ ಸಮಾಜದ ಮಾಜಿ ಉಪಮೇಯರ್ ಮಂಜುಳಾ, ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಚಂದ್ರಪ್ಪ, ದಾವಣಗೆರೆ ಶಿಕ್ಷಣತಜ್ಞ ಬಸವರಾಜ್ ಸಾಗರ್, ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.

ಶಿವಮೊಗ್ಗದಲ್ಲಿ ಭಗೀರಥ ಜಯಂತಿ

0

ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಪ್ಪಾರ ಸಮಾಜ, ಶಿವಮೊಗ್ಗ ವತಿಯಿಂದ ಶ್ರೀ ಭಗೀರಥ ಜಯಂತಿಯನ್ನು ಕುವೆಂಪು ರಂಗಮಂದಿರದಲ್ಲಿ ಆಚರಿಸಲಾಯಿತು.

ಶಿವಮೊಗ್ಗ ಮಹಾನಗರ ಪಾಲಿಕೆ ಪೂಜ್ಯ ಮಹಾಪೌರರಾದ ಸನ್ಮಾನ್ಯ ಶ್ರೀಮತಿ ಸುನೀತಾ ಅಣ್ಣಪ್ಪ‌ರವರು ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಸಮುದಾಯದ ಬಾಂಧವರಿಗೆ ಶುಭ ಹಾರೈಸಿದರು.

ಅಪರ ಜಿಲ್ಲಾಧಿಕಾರಿಗಳಾದ ಸನ್ಮಾನ್ಯ ಡಾ.ನಾಗೇಂದ್ರ ಎಫ್. ಹೊನ್ನಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಮಹಾನಗರ ಪಾಲಿಕೆ ಸದಸ್ಯರಾದ ಸನ್ಮಾನ್ಯ ಶ್ರೀ ನಾಗರಾಜ್ ಕಂಕಾರಿ, , ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಸ್.ಟಿ.ಹಾಲಪ್ಪ, ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉಮೇಶ್ ಹೆಚ್., ಉಪ್ಪಾರ ಸಮಾಜ ಬಾಂಧವರು ಹಾಗೂ ಇಲಾಖಾ ಸಿಬ್ಬಂದಿಗಳು ಹಾಜರಿದ್ದರು.

ಶ್ರೀ ಭಗೀರಥರವರ ಬಗ್ಗೆ ವಿಶೇಷ ಉಪನ್ಯಾಸವನ್ನು ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕರಾದ ಡಾ. ಮೋಹನ್ ಚಂದ್ರಗುತ್ತಿ ರವರು ನೀಡಿದರು.

ಸ್ವಾಗತವನ್ನು ಇಲಾಖೆಯ ಸಹಾಯಕ ನಿರ್ದೇಶಕರಾದ
ಶ್ರೀ ಉಮೇಶ್ ಹೆಚ್. ನೆರವೇರಿಸಿದರು.

ನಾಡಗೀತೆಯನ್ನು ಶಾರದಾ ಸಂಗೀತ ವಿದ್ಯಾಲಯ, ಶಿವಮೊಗ್ಗದ ವಿದ್ಯಾರ್ಥಿಗಳು ಹಾಡಿದ್ದು,
ಶ್ರೀ ಚನ್ನಬಸಪ್ಪ ನಿರೂಪಿಸಿದರು.

ಮದುವೆ‌ ಮನೆ ಊಟ ಹಲವರು ಅಸ್ವಸ್ಥ; ಮೆಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ

0

ವಿವಾಹ ಕಾರ್ಯಕ್ರಮದಲ್ಲಿ ಊಟ ಮಾಡಿದ್ದ 85ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾದ ಪರಿಣಾಮ ಸ್ಥಳೀಯ ಆಸ್ಪತ್ರೆಗೆ ದಾಖಲಾದ ಘಟನೆ ಶಿವಮೊಗ್ಗದ ಗೆಜ್ಜೇನಹಳ್ಳಿಯಲ್ಲಿ ನಡೆದಿದೆ.

ಶಿವಮೊಗ್ಗದ ಗೆಜ್ಜೇನಹಳ್ಳಿಯಲ್ಲಿ ನಿನ್ನೆ ಶುಕ್ರವಾರ ವಿವಾಹ ಸಮಾರಂಭ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿ ಊಟ ಮಾಡಿದ್ದರು. ಊಟ ಮಾಡಿದವರಲ್ಲಿ ಮಕ್ಕಳು ಸೇರಿದಂತೆ ಹಲವರಿಗೆ ವಾಂತಿ, ಭೇಧಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು.

ಅಸ್ವಸ್ಥಗೊಂಡವರನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರಸ್ತುತ ಸಂದರ್ಭದಲ್ಲಿ ಎಲ್ಲರಿಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆಹಾರದಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಈ ಘಟನೆ ನಡೆದಿದೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೆಗ್ಗಾನ್ ಆಸ್ಪತ್ರೆ ವೈದ್ಯರಾದ ಡಾ.ಶ್ರೀಧರ್ ಅವರು ಮಾಹಿತಿ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಕಾರಿಗೆ ಕಲ್ಲೇಟು ಬಿಗುವಿನ ವಾತಾವರಣ

0

ಶಿವಮೊಗ್ಗದ ಸೂಳೆಬೈಲು ಸಮೀಪದ ಇಂದಿರಾ ನಗರದಲ್ಲಿ ಕಾರಿನ ಮೇಲೆ ದಾಳಿ ನಡೆಸಲಾಗಿದೆ. ಕಾರಿನ ಗಾಜು ಪುಡಿಯಾಗಿದೆ. ಇದರಿಂದ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಘಟನೆ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಜನರು ಗುಂಪು ಗೂಡಿದರು. ಹಾಗಾಗಿ ಸೂಳೆಬೈಲಿನಲ್ಲಿ ಗೊಂದಲ ಸೃಷ್ಟಿಯಾಯಿತು. ಕೂಡಲೇ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ.

ಹಿಂದೂ ಸಂಘಟನೆ ಪ್ರಮುಖರು, ಕಾರ್ಯಕರ್ತರು ಸೂಳೆಬೈಲಿನಲ್ಲಿ ಜಮಾಯಿಸಿದರು. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಅಂಗಡಿ ಮುಂಗಟ್ಟು ಬಂದ್ ಮಾಡಿಸಿದರು. ಗುಂಪು ಸೇರದಂತೆ ನಿಯಂತ್ರಿಸಿದರು.

ಶಿವಮೊಗ್ಗದಿಂದ ಕಾರು ಮತ್ತೂರು ಕಡೆಗೆ ತೆರಳುತ್ತಿತ್ತು. ಈ ವೇಳೆ ಹಿಂಬದಿಯಿಂದ ಕಲ್ಲು ತೂರಾಟ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಬೆಂಗಳೂರಿನಿಂದ ಆಗಮಿಸಿದ್ದ ವ್ಯಕ್ತಿಯೊಬ್ಬರು ಮತ್ತೂರಿನಲ್ಲಿರುವ ತಮ್ಮ ಸಂಬಂಧಿಯ ಮನೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.

ಇನ್ನು ಕಾರಿಗೆ ಕಲ್ಲು ತೂರಿದ ವಿಚಾರ ಗೊತ್ತಾಗುತ್ತಿದ್ದಂತೆ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿದರು. ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ.

ತುಂಗಾ ನಗರ ಠಾಣೆ ಪೊಲೀಸರು ಸೇರಿದಂತೆ ಹೆಚ್ಚುವರಿ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜನೆ ಮಾಡಿದ್ದಾರೆ.
ಮತ್ತೊಂದೆಡೆ ಹಿಂದೂ ಸಂಘಟನೆ, ಬಿಜೆಪಿ ಮುಖಂಡರು, ಕಾರ್ಯಕರ್ತರು ದೂರು ನೀಡಲು ರಾತ್ರೋರಾತ್ರಿ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಭೇಟಿಗೆ ನೀಡಲು ನಿರ್ಧರಿಸಿದ್ದರು. ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಅವರು ಭೇಟಿ ನೀಡಿದ್ದರಿಂದ ಅಲ್ಲಿಯೇ ಅವರನ್ನು ಭೇಟಿಯಾದರು.

ಸೂಳೆಬೈಲು ರಸ್ತೆಯಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ನೀಡಿದರು.ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಕಲ್ಲು ಹೊಡೆದವರ ಪತ್ತೆ ಕಾರ್ಯ ನಡೆಯುತ್ತಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಎನ್ನ ಜೀವನವೇ ನಿನಗರ್ಪಣೆ

0

ಪ್ರತಿವರ್ಷ ಮೇ 8ರಂದು ತಾಯಂದಿರ ದಿನಾಚರಣೆ,
ಯನ್ನು ಆಚರಿಸಲಾಗುತ್ತದೆ. ಅಮ್ಮ ಎಂಬ ಪದ ಅಮೃತವಿದ್ದಂತೆ. ಅಮ್ಮ ಆದವಳು ಎಲ್ಲಾ ಸ್ಥಾನವನ್ನು ಕೂಡ ನಿರ್ವಹಿಸುತ್ತಾಳೆ.

ತಾಯಿಯ ತ್ಯಾಗ, ಪ್ರೀತಿ, ಮಮತೆಗೆ ಧನ್ಯವಾದವನ್ನು ವ್ಯಕ್ತಪಡಿಸುವ ದಿನ ಎಂದರೆ ಅದು ತಾಯಿಯಂದಿರ ದಿನ.

ಅಮ್ಮ ಎಂದರೆ ಏನೋ ಹರುಷವು… ನಮ್ಮ ಪಾಲಿಗೆ ಅವಳೇ ದೈವವು…

ಈ ಸಾಲುಗಳು ಅಕ್ಷರಸಹ ಸತ್ಯ. ಅಮ್ಮ ಎಂದರೆ ತ್ಯಾಗದ ಪ್ರತೀಕ. ಮಾತೃತ್ವ ಎಂಬುದು ಎಲ್ಲಾ ಶಕ್ತಿಗಳಿಗಿಂತ ಮಿಗಿಲಾಗಿದ್ದು ಎಂದರೆ ತಪ್ಪಾಗಲಾರದು. ಏಕೆಂದರೆ ಗೆದ್ದಾಗ ಬೆನ್ನು ತಟ್ಟಿ, ಸೋತಾಗ ಹೆಗಲು ಕೊಟ್ಟು ನಮ್ಮನ್ನು ಹುರಿದುಂಬಿಸುವುದು ಅಮ್ಮ. ಪ್ರತಿಯೊಬ್ಬರ ಜೀವನದಲ್ಲಿ ವಿಶೇಷವಾದ ವ್ಯಕ್ತಿಯಲ್ಲಿ ಮೊದಲ ಸ್ಥಾನ ಇರುವುದು ಅಮ್ಮನಿಗಾಗಿ

ಪ್ರತಿಯೊಬ್ಬರ ಅಭಿವೃದ್ಧಿಯ ಹಿಂದೆ ತಾಯಿಯ ಪಾತ್ರ ಬಹಳ ಮುಖ್ಯ. ನವಮಾಸಗಳು ಹೊತ್ತು, ತಾಳಲಾರದ ನೋವಿನ ವ್ಯೇಥೆಯನ್ನು ಸಹಿಸಿ, ಜಗವನ್ನ ಪರಿಚಯಿಸಿದ ಮಹಾನ್ ವ್ಯಕ್ತಿ. ತಪ್ಪು ಮಾಡಿದಾಗ ಬೈದು, ಸರಿದಾರಿಗೆ ತರುವ ಗುರುದೇವ ಎಂದರೆ ಅದು ತಾಯಿ. ಮಗು ಅತ್ತಾಗ ತಾನು ನೋವನ್ನು ಅನುಭವಿಸಿ, ನಕ್ಕಾಗ ನಗುವಿನೊಂದಿಗೆ ಬೆರೆಯುವಳು ತಾಯಿ.

ಅಮ್ಮ ಎಂದರೆ ನಿಸ್ವಾರ್ಥದ ಸಂಕೇತ. ತನಗಾಗಿ ಕಿಂಚಿತ್ತೂ ಯೋಚಿಸದೆ ಸದಾ ತನ್ನವರಿಗಾಗಿ ಒಳಿತನ್ನು ಬಯಸುವ ಹೃದಯವಂತೆ. ತಾಯಿಯನ್ನು ದೇವಸ್ವರೂಪನೇ ಎನ್ನುವುದು ಇದೇ ಕಾರಣಕ್ಕೆ…

ಎಷ್ಟು ಹೇಳಿದರೂ ಮುಗಿಯದು ತ್ಯಾಗಮಯಿ ವರ್ಣನೆ…
ಎನ್ನ ಜೀವನವೇ ನಿನಗೆ ಅರ್ಪಣೆ…

ರಾಜ್ಯ ಸರ್ಕಾರದೊಂದಿಗೆ ಟೊಯೋಟಾ ಸಂಸ್ಥೆ ಒಡಂಬಡಿಕೆಗೆ ಸಹಿ

0

ರಾಜ್ಯದಲ್ಲಿ ಪವರ್ ಟ್ರೇನ್ ಭಾಗಗಳು ಹಾಗೂ ಇತರ ವಿದ್ಯುತ್ ಚಾಲಿತ ವಾಹನಗಳ ಸ್ಥಳೀಯ ಉತ್ಪಾದನೆಗಾಗಿ ಟೊಯೊಟಾ ಗ್ರೂಪ್ ಸಂಸ್ಥೆಗಳು 4,800 ಕೋಟಿ ರೂಪಾಯಿ ಹೂಡಿಕೆ ಮಾಡಲು ಯೋಜಿಸಿವೆ. ಅದರಂತೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಹಾಗೂ ಟೊಯೊಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ನಿನ್ನೆ ಶನಿವಾರ ರಾಜ್ಯ ಸರ್ಕಾರದೊಂದಿಗೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದವು.

ಒಟ್ಟು ಹೂಡಿಕೆಯಲ್ಲಿ, ಟಿಕೆಎಂ ಹಾಗೂ ಟಿಕೆಎಪಿ ಒಟ್ಟಿಗೆ 4,100 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಮತ್ತೊಂದು ಸಂಬಂಧಿತ ಕಂಪನಿ ಟೊಯೋಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಉಳಿದ 700 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ.

ಟಿಕೆಎಂ ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಟೊಯೊಟಾ ಗ್ರೂಪ್ ಮತ್ತು ಟಿಐಇಐ ಒಟ್ಟಿಗೆ ಸುಮಾರು 4,800 ಕೋಟಿ ರೂಪಾಯಿ ಹೂಡಿಕೆ ಮಾಡಲಿವೆ. ನಾವು ಇದನ್ನು ಎಂಬ ಮನೋಭಾವದಿಂದ ಮಾಡುತ್ತಿದ್ದೇವೆ. ಇನ್ನು ನಮ್ಮ ದೇಶದ ಇಂಗಾಲದ ಹೊರಸೂಸುವಿಕೆಯನ್ನ ವೇಗವಾಗಿ ಕಡಿಮೆ ಮಾಡುವ ಮತ್ತು ಭಾರತದಲ್ಲಿ ತಯಾರಿಸಿ ಎಂಬ ಧ್ಯೇಯಕ್ಕೆ ಕೊಡುಗೆ ನೀಡುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

ಕೆಕೆಆರ್ ವಿರುದ್ಧ ಲಖನೌ ಜೈಂಟ್ಸ್ ಜಯ

ಕ್ವಿಂಟನ್ ಡಿ ಕಾಕ್ ಆಕರ್ಷಕ ಅರ್ಧಶತಕ (50) ಮತ್ತು ಆವೇಶ್ ಖಾನ್ (19ಕ್ಕೆ 3) ಸೇರಿದಂತೆ ಬೌಲರ್‌ಗಳ ಮಾರಕ ದಾಳಿ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಐಪಿಎಲ್ 2022 ಟೂರ್ನಿಯಲ್ಲಿ ಶನಿವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 75 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ಐಪಿಎಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಆಡುತ್ತಿರುವ ಲಖನೌ, ಗುಜರಾತ್ ಟೈಟನ್ಸ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.

ಇದಲ್ಲದೆ 11 ಪಂದ್ಯಗಳಲ್ಲಿ ಎಂಟನೇ ಗೆಲುವಿನೊಂದಿಗೆ ಒಟ್ಟು 16 ಅಂಕ ಸಂಪಾದಿಸಿದೆ.
ಅತ್ತ ಕೆಕೆಆರ್ 11 ಪಂದ್ಯಗಳಲ್ಲಿ ಏಳನೇ ಸೋಲಿಗೆ ಶರಣಾಗಿದೆ. ಈ ಮೂಲಕ ಎಂಟನೇ ಸ್ಥಾನದಲ್ಲೇ ಉಳಿದುಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಲಖನೌ ಏಳು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಕೋಲ್ಕತ್ತ 14.3 ಓವರ್‌ಗಳಲ್ಲಿ 101 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಸವಾಲಿನ ಮೊತ್ತ ಬೆನ್ನಟ್ಟಿದ ಕೆಕೆಆರ್ ಆರಂಭ ಉತ್ತಮವಾಗಿರಲಿಲ್ಲ. ತಂಡವು 25 ರನ್ ಗಳಿಸುವಷ್ಟರಲ್ಲಿ ಬಾಬಾ ಇಂದ್ರಜಿತ್ (0), ಆಯರನ್ ಫಿಂಚ್ (14) ನಾಯಕ ಶ್ರೇಯಸ್ ಅಯ್ಯರ್ (6) ಹಾಗೂ ನಿತೀಶ್ ರಾಣಾ (2) ವಿಕೆಟ್‌ಗಳನ್ನು ಕಳೆದುಕೊಂಡಿತು.

ಬಳಿಕ ಆಯಂಡ್ರೆ ರಸೆಲ್ ಅಲ್ಪ ಹೊತ್ತು ಹೋರಾಟ ತೋರಿದರೂ ಯಾವುದೇ ಪ್ರಯೋಜನ ಉಂಟಾಗಲಿಲ್ಲ. 19 ಎಸೆತಗಳನ್ನು ಎದುರಿಸಿದ ರಸೆಲ್ ಐದು ಸಿಕ್ಸರ್ ಹಾಗೂ ಮೂರು ಬೌಂಡರಿ ನೆರವಿನಿಂದ 45 ರನ್ ಗಳಿಸಿದರು.
ಅಂತಿಮವಾಗಿ 14.3 ಓವರ್‌ಗಳಲ್ಲಿ 101 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಇನ್ನುಳಿದಂತೆ ಸುನಿಲ್ ನಾರಾಯಣ್ 22 ರನ್ ಗಳಿಸಿದರು.

ಲಖನೌ ಪರ ಆವೇಶ್ ಖಾನ್ ಹಾಗೂ ಜೇಸನ್ ಹೋಲ್ಡರ್ ತಲಾ ಮೂರು ವಿಕೆಟ್ ಕಿತ್ತು ಮಿಂಚಿದರು. ಮೊಹಸಿನ್ ಖಾನ್ (6ಕ್ಕೆ 1) ಹಾಗೂ ದುಶ್ಮಿಂತ ಚಮೀರ (14ಕ್ಕೆ 1) ಸಹ ಪ್ರಭಾವಿ ದಾಳಿ ಸಂಘಟಿಸಿದರು.

ಐಪಿಎಲ್‌ನಲ್ಲಿ ಇದೇ ಮೊದಲ ಬಾರಿ ಆಡುತ್ತಿರುವ ಲಖನೌ, ಇದುವೆರೆಗೆ 10 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಮೂರು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ಈ ಮೂಲಕ ಒಟ್ಟು 14 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ.
ಅತ್ತ ಕೋಲ್ಕತ್ತ 10 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು, ಎಂಟು ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.
ಈ ಹಿನ್ನೆಲೆಯಲ್ಲಿ ಕೆಕೆಆರ್ ಪಾಲಿಗೆ ಈ ಪಂದ್ಯ ಮಹತ್ವದೆನಿಸಿದೆ. ಅಲ್ಲದೆ ಮಗದೊಂದು ರೋಚಕ ಪಂದ್ಯವನ್ನು ನಿರೀಕ್ಷಿಸಲಾಗುತ್ತಿದೆ.

ಯತ್ನಾಳ್ ಹಿರಿಯರು ಹಣ ಕೇಳಿದ ಬಗ್ಗೆ ಅವರೇ ಹೇಳಬೇಕು

0

ಮುಖ್ಯಮಂತ್ರಿ ಹುದ್ದೆಗೆ ಹಣ ಕೇಳಿದ್ದರು ಎಂಬ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ಕೇಂದ್ರದ ವರಿಷ್ಠರು, ರಾಜ್ಯದ ಸಿಎಂ ಹಾಗೂ ಪಕ್ಷದ ಅಧ್ಯಕ್ಷರು ಗಮಿಸಿದ್ದಾರೆ. ಈ ಕುರಿತು ಹಿರಿಯ ನಾಯಕರೇ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಹೆಸರನ್ನು ಪ್ರಸ್ತಾಪಿಸದೆ ಅವರು ಹಿರಿಯ ನಾಯಕರಿದ್ದಾರೆ. ಅವರಿಗೆ ಯಾರು ಒತ್ತಡ ಹಾಕಿದ್ದರು ಮತ್ತು ಹಣ ಕೇಳಿದ್ದರು ಎಂಬುವುದನ್ನು ಅವರೇ ಹೇಳಬೇಕು. ಅವರ ಹೇಳಿಕೆಯನ್ನು ಪಕ್ಷದ ಎಲ್ಲರೂ ಗಮಸಿದ್ದಾರೆ. ಪಕ್ಷದ ಹಿರಿಯ ಮುಖಂಡರು, ರಾಜ್ಯಾಧ್ಯಕ್ಷರು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರು ಕೊಟ್ಟಿರುವ ಹೇಳಿಕೆ ಬಹಳ ಗಂಭೀರವಾದದ್ದು ಎಂದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್​ ನಾಯಕರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಇಲ್ಲ- ಸಲ್ಲದ ಆರೋಪ ಮಾಡುತ್ತಿದ್ದರು.
ಕಮಿಷನ್ ಬಗ್ಗೆಯಾಗಲಿ, ಭ್ರಷ್ಟಾಚಾರದ ಬಗ್ಗೆಯಾಗಲಿ ಮಾತನಾಡುವ ನೈತಿಕತೆ ಕಾಂಗ್ರೆಸ್ ಪಕ್ಷ ಉಳಿಸಿಕೊಂಡಿಲ್ಲ. ರಾಜ್ಯ ಹಾಗೂ ರಾಷ್ಟ್ರದಲ್ಲಿ ಕಾಂಗ್ರೆಸ್ ಕೆಳಮಟ್ಟಕ್ಕೆ ಹೋಗಿದೆ. ಕೇಂದ್ರದಲ್ಲಿ ಅಧಿಕೃತ ವಿರೋಧ ಪಕ್ಷವಾಗಿ ಉಳಿಸಿಕೊಳ್ಳಲು ಆಗಿಲ್ಲ. ಇದು ಚುನಾವಣಾ ವರ್ಷ ಅಗಿರುವುದರಿಂದ ಈ ರೀತಿಯ ಆರೋಪ ಮಾಡುತ್ತಿದ್ದಾರೆ.

ಪಿಎಸ್‌ಐ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸರ್ಕಾರ ತಿಳಿಸಿದೆ ಎಂದರು.

ನಾನು ಸಂಪುಟ ಸೇರುವ ಯಾವುದೇ ಚರ್ಚೆ ನಡೆದಿಲ್ಲ. ನಾನಾಗಲಿ, ನಮ್ಮ ತಂದೆ ಯಡಿಯೂರಪ್ಪನವರಾಗಲಿ ಯಾವುದೇ ಒತ್ತಡ ಹಾಕಿಲ್ಲ. ಹಾಲಿ ನಾನು ಉಪಾಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಬರುವಂತಹ ದಿನಗಳಲ್ಲಿ ನಾನು ಯಾವ ಸ್ಥಾನದಲ್ಲಿದ್ದರೆ ಉತ್ತಮ ಎಂಬುವುದನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ವಿಜಯೇಂದ್ರ ತಿಳಿಸಿದರು.

ಶಿವಮೊಗ್ಗದಲ್ಲಿ ನಿನ್ನೆ ಕಾರಿನ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣ ಸಣ್ಣದಲ್ಲ, ಯಡಿಯೂರಪ್ಪ ಸಿಎಂ ಆಗಿದ್ದಾಗ ಶಿವಮೊಗ್ಗ ಶಾಂತಿಯುತವಾಗಿತ್ತು. ಹಿಂದೂ ಮುಸ್ಲಿಮರು ಒಟ್ಟಾಗಿದ್ದರು‌. ವಾತಾವರಣ ಹದಗೆಡಿಸುವ ನಿಟ್ಟಿನಲ್ಲಿ ಕೆಲ ದುಷ್ಟ ಶಕ್ತಿಗಳು ಕೆಲಸ ಮಾಡುತ್ತಿವೆ. ಎಲ್ಲವನ್ನೂ ಸಿಎಂ ಹಾಗೂ ಗೃಹ ಸಚಿವರು ಗಮನಿಸಿದ್ದಾರೆ ಎಂದರು
ಶಿವಮೊಗ್ಗ, ಶಿಕಾರಿಪುರದಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂದು ಹಿರಿಯರು ತೀರ್ಮಾನ ಮಾಡುತ್ತಾರೆ. ನನಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಅಭಿಲಾಷೆ ಇದೆ. ಪಕ್ಷ ಏನೇ ತೀರ್ಮಾನ ಮಾಡಿದರೂ ಅದರ ಪ್ರಕಾರ ನಡೆದು ಕೊಳ್ಳುತ್ತೇನೆ ಎಂದರು.

ಶ್ರೀಲಂಕಾ ರಾಜಪಕ್ಸ ಪದತ್ಯಾಗಕ್ಕೆ ಒಪ್ಪಿಗೆ

0

ರಾಜೀನಾಮೆಯ ಒತ್ತಡಕ್ಕೆ ಕಡೆಗೂ ಮಣಿದಿರುವ ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸ, ತಮ್ಮ ಸ್ಥಾನವನ್ನು ತ್ಯಜಿಸಲು ಒಪ್ಪಿದ್ದಾರೆ.

ಶುಕ್ರವಾರ ಮಧ್ಯರಾತ್ರಿಯಿಂದಲೇ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದು ಅದರ ಬೆನ್ನಲ್ಲೇ ಮಹಿಂದಾ ಅವರಿಂದ ಪದತ್ಯಾಗದ ನಿರ್ಧಾರ ಪ್ರಕಟವಾಗಿದೆ.

ಶನಿವಾರದಂದು, ರಾಷ್ಟ್ರಪತಿ ಗೊಟಬಾಯ ರಾಜಪಕ್ಸ ಅವರ ನಿವಾಸದಲ್ಲಿ ನಡೆದ ಮಹಿಂದಾ ಸಂಪುಟದ ವಿಶೇಷ‌ ಸಭೆಯಲ್ಲಿ ರಾಜೀನಾಮೆಗೆ ಗೊಟಬಾಯ ಅವರು ನೀಡಿದ ಸೂಚನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಆರ್ಥಿಕ ದುಸ್ಥಿತಿಗೆ ತಲುಪಿರುವ ಶ್ರೀಲಂಕಾದ ಸುಮಾರು 80 ಸಾವಿರ ಬಡವರಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದಾಗಿ ಧನಸಹಾಯ ನೀಡಲಾಗುತ್ತದೆ ಎಂದು ಐರೋಪ್ಯ ಒಕ್ಕೂಟ (ಇ.ಯು.) ಪ್ರಕಟಿಸಿದೆ.

ಮತ್ತೊಂದೆಡೆ, ಔಷಧಿ ಕೊಳ್ಳಲು ಹಣವಿಲ್ಲದೆ ಪರಿತಪಿಸುತ್ತಿರುವ ಶ್ರೀಲಂಕಾದ ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಸಹಾಯ ನೀಡುವುದಾಗಿ ಬಾಂಗ್ಲಾದೇಶ ಸರ್ಕಾರ ತಿಳಿಸಿದೆ.