Saturday, February 28, 2026
Saturday, February 28, 2026
Home Blog Page 1591

ಭಾರತದ ಗಡಿಯಲ್ಲಿ ಪಾಕ್ ಡ್ರೋನ್ ಹಾರಾಟ ತಡೆದ ಗಡಿ ಭದ್ರತಾ ಪಡೆ

0

ಜಮ್ಮುವಿನ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್‌ನ ಚಲನೆಯನ್ನು ಪತ್ತೆ ಹಚ್ಚಿದ ಗಡಿ ಭದ್ರತಾ ಪಡೆ ನಿನ್ನೆ ಶನಿವಾರ ಹಲವು ಸುತ್ತು ಗುಂಡು ಹಾರಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ತಿಳಿಸಿದ್ದಾರೆ.

ಗುಂಡು ಹಾರಿಸಿದ ವೇಳೆ ಡ್ರೋನ್ ಪಾಕಿಸ್ತಾನದ ಕಡೆಗೆ ಮರಳಿತು.

ಆದರೆ, ಹಾರುವ ವಸ್ತುವಿನಿಂದ ಪೇಲೋಡ್ ಅನ್ನು ಗಾಳಿಯಲ್ಲಿ ಬೀಳದಂತೆ ನೋಡಿಕೊಳ್ಳಲು ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅವರು ಹೇಳಿದರು.

ಪಾಕಿಸ್ತಾನದ ಕಡೆಯಿಂದ ಡ್ರೋನ್ ರಾತ್ರಿ 7.25 ಕ್ಕೆ ಅರ್ನಿಯಾ ಪ್ರದೇಶದಲ್ಲಿ ಭಾರತದ ಕಡೆಗೆ ಬರುತ್ತಿರುವುದನ್ನು ಗಮನಿಸಲಾಗಿದೆ. ಈ ವೇಳೆ ಗಡಿ ಭದ್ರತಾ ಪಡೆಗಳು ಗಮನ ವಹಿಸಿ ಕಾರ್ಯಾಚರಣೆ ಮುಂದುವರೆಸಿದವು ಎಂದು ಜಮ್ಮು ಫ್ರಾಂಟಿಯರ್‌ನ ಬಿಎಸ್‌ಎಫ್‌ನ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಎಸ್‌ಪಿ ಸಂಧು ತಿಳಿಸಿದ್ದಾರೆ.

ಡ್ರೋನ್ ಭಾರತದ ಕಡೆಗೆ ದಾಟಿದ ತಕ್ಷಣ ಅದನ್ನು ಹೊಡೆದುರುಳಿಸಲು ಎಚ್ಚೆತ್ತ ಬಿಎಸ್‌ಎಫ್ ಪಡೆಗಳು ಸುಮಾರು 8 ಸುತ್ತು ಗುಂಡು ಹಾರಿಸಿದವು. ಇದರಿಂದ ಅದು ಹಿಂತಿರುಗಲು ಯಶಸ್ವಿಯಾಯಿತು. ಇಡೀ ಪ್ರದೇಶವನ್ನು ಸುತ್ತುವರಿದಿದೆ. ಡ್ರೋನ್‌ನಿಂದ ಯಾವುದೇ ಏರ್‌ಡ್ರಾಪಿಂಗ್ ಆಗದಂತೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಬಿಎಸ್‌ಎಫ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿಯೂ ಆಗಿರುವ ಸಂಧು ಹೇಳಿದ್ದಾರೆ.

ಸಾಂಬಾ ಜಿಲ್ಲೆಯ ಚಕ್ ಫಕ್ವಿರಾ ಪ್ರದೇಶದಲ್ಲಿ ಭೂಗತ ಸುರಂಗವನ್ನು ಬಿಎಸ್‌ಎಫ್ ಪತ್ತೆ ಮಾಡಿದ 3 ದಿನಗಳ ನಂತರ ಪಾಕಿಸ್ತಾನದ ಡ್ರೋನ್ ಚಟುವಟಿಕೆಯು ಗಮನಕ್ಕೆ ಬಂದಿದೆ.

ದೇಶದಲ್ಲಿ ನಿನ್ನೆಗೆ ಕೋವಿಡ್ ಸೋಂಕು ಇಳಿಕೆ

0

ದೇಶದಲ್ಲಿ ಇಂದು ಕೊರೋನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 3,451 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 3,451 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ.

ಕಳೆದ 24 ಗಂಟೆಗಳಲ್ಲಿ 40 ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 524064 ಕ್ಕೆ ಏರಿಕಯಾಗಿದೆ.

ಕೊರೋನಾ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,451 ಹೊಸ ಪ್ರಕರಣಗಳು ಮತ್ತು 40 ಸಾವುಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 20,635 ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಹೈಬ್ರಿಡ್ ಶಿಕ್ಷಣ ನೀತಿ ಪಾಲಿಸಿ- ಪ್ರಧಾನಿ ಮೋದಿ

0

ಮಕ್ಕಳು ತಂತ್ರಜ್ಞಾನಕ್ಕೆ ಅತೀ ಹೆಚ್ಚು ತೆರೆದು ಕೊಳ್ಳುವುದನ್ನು ತಪ್ಪಿಸಲು ಶಾಲೆಗಳಲ್ಲಿ ಆಫ್ಲೈನ್‌ ಮತ್ತು ಆನ್‌ಲೈನ್‌ ಶಿಕ್ಷಣ ಇರುವಂತಹ ಹೈಬ್ರಿಡ್‌ ಶಿಕ್ಷಣ ನೀತಿ ಯನ್ನು ಪಾಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಶನಿವಾರ ಕರೆ ಕೊಟ್ಟಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಯ ಪರಿಶೀಲನ ಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ಅವರು ಈ ಅಭಿಪ್ರಾಯ ಮಂಡಿಸಿದ್ದಾರೆ.

ಕೊರೋನಾ ಸಮಯದಲ್ಲಿ ಮಕ್ಕಳು ಶಿಕ್ಷಣದಿಂದ ದೂರಾಗದಂತೆ ನೋಡಿಕೊಳ್ಳಲೆಂದು ಆನ್‌ಲೈನ್‌, ತೆರೆದ ಶಿಕ್ಷಣ ಮತ್ತು ಮಲ್ಟಿ ಮೋಡಲ್‌ ಶಿಕ್ಷಣಕ್ಕೆ ಒತ್ತು ನೀಡಲಾಯಿತು.

ಇದರಿಂದಾಗಿ ಹಳ್ಳಿ ಹಳ್ಳಿಯ ಮಕ್ಕಳಿಗೂ ಶಿಕ್ಷಣ ಲಭ್ಯವಾಗುವಂತಾಯಿತು ಎಂದು ಮೋದಿ ಅವರು ಹೇಳಿದ್ದಾರೆ.

ಎನ್‌ಪಿಯ ಮಲ್ಟಿ ಪಲ್‌ ಎಂಟ್ರೊಎಕ್ಸಿಟ್‌ ಸಿಸ್ಟಂನಿಂದ ವಿದ್ಯಾರ್ಥಿಗಳಿಗೆ ತಮ್ಮ ಇಷ್ಟದಂತೆ ಶಿಕ್ಷಣ ಪಡೆಯಲು ಅವಕಾಶ ಸಿಗಲಿದೆ ಎಂದು ಹೇಳಿದ್ದಾರೆ.

ಪಿಎಂ ಗರೀಬ್ ಕಲ್ಯಾಣ ಯೋಜನೆ ಪಡಿತರ ಕಡಿಮೆ ನೀಡುವಂತಿಲ್ಲ

0

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ 20 ಕೆ.ಜಿ ಅಕ್ಕಿ, 15 ಕೆ.ಜಿ ಜೋಳ, ಬಿಪಿಎಲ್ ಕಾರ್ಡಿನ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 3 ಕೆ.ಜಿ ಅಕ್ಕಿ ಮತ್ತು 2 ಕೆ.ಜಿ ಜೋಳ ಉಚಿತವಾಗಿ ವಿತರಿಸಲಾಗುತ್ತದೆ.

ಕಳೆದ ಏಪ್ರಿಲ್ ನಿಂದ ಗೋಧಿ ಹಂಚಿಕೆ ಸ್ಥಗಿತಗೊಳಿಸಲಾಗಿದೆ. ಕೆಲವೆಡೆ ಗೋಧಿ ದಾಸ್ತಾನು ಉಳಿದಿದ್ದು, ಆದ್ಯತೆಯ ಮೇಲೆ ಮೊದಲು ಬಂದ ಕಾರ್ಡುದಾರರಿಗೆ ಪ್ರತಿ ಕಾರ್ಡಿಗೆ 2 ಕೆಜಿ ಗೋಧಿ ವಿತರಿಸಲಾಗುತ್ತದೆ.

ಗ್ರಾಹಕರು ಹಂಚಿಕೆಯಾಗಿರುವ ಪಡಿತರವನ್ನು ನಿಗದಿತ ಸರಿಯಾದ ಪ್ರಮಾಣದಲ್ಲಿ ಪಡೆಯಬೇಕು. ನ್ಯಾಯಬೆಲೆ ಅಂಗಡಿಕಾರರು ಕಡಿಮೆ ಪ್ರಮಾಣದ ಆಹಾರ ಧಾನ್ಯ ನೀಡಿದರೆ ಜಿಲ್ಲಾಧಿಕಾರಿಗಳ ಕಚೇರಿಯ ಆಹಾರ ಶಾಖೆ ದೂರವಾಣಿ ಸಂಖ್ಯೆ 0836-2444594 ಮಾಹಿತಿ ನೀಡಿದರೆ ನಿಯಮಾನುಸಾರ ಕ್ರಮವಹಿಸಲಾಗುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಸುಧೀರ್ ಸಾವ್ಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲಿಬಾನ್ ಮಹಿಳೆಯರಿಗೆ ಕಡ್ಡಾಯ ವಸ್ತ್ರ ಸಂಹಿತೆ

0

ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರ ಮಹಿಳೆಯರ ಮೇಲೆ ಮತ್ತಷ್ಟು ಕಠಿಣ ನಿರ್ಬಂಧಗಳನ್ನು ವಿಧಿಸಿದೆ.

ಇನ್ಮುಂದೆ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಬುರ್ಖಾ ಧರಿಸುವುದು ಕಡ್ಡಾಯ ಎಂದು ಶನಿವಾರ ಆದೇಶಿಸಿದೆ.

ಅಫ್ಗಾನಿಸ್ತಾನ ಸರ್ವೋಚ್ಚ ನಾಯಕ ಮತ್ತು ತಾಲಿಬಾನ್ ಮುಖ್ಯಸ್ಥ ಹುಬತುಲ್ಲಾ ಅಖುಂದ್‌ಜಾದ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ವಸ್ತ್ರಸಂಹಿತೆ ಜಾರಿ ಮಾಡಿ ಆದೇಶಿಸಿದ್ದಾರೆ.

ಮಹಿಳೆಯರು ಇನ್ಮುಂದೆ ಮುಖ ಮತ್ತು ಇಡೀ ದೇಹವನ್ನು ಮುಚ್ಚುವ ನೀಲಿ ಬಣ್ಣದ ಸಾಂಪ್ರದಾಯಿಕ ಆಫ್ಗನ್‌ ಬುರ್ಖಾ ಧರಿಸಬೇಕು ಎಂದು ಆಜ್ಞೆ ಮಾಡಿದ್ದಾರೆ.
ಷರಿಯಾ ಕಾನೂನಿನ ಪ್ರಕಾರ ಪುರುಷರನ್ನು ಪ್ರಚೋದಿಸದಿರಲು, ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ಅಥವಾ ಯುವತಿಯರು ಕಣ್ಣನ್ನು ಹೊರತುಪಡಿಸಿ ಮುಖವನ್ನು ಮುಚ್ಚುವ ಬುರ್ಕಾ ಧರಿಸಬೇಕು. ಮಹಿಳೆಯರು ಘನತೆ ಮತ್ತು ಸುರಕ್ಷತೆಯಿಂದ ಬದುಕಬೇಕೆಂಬುದು ನಮ್ಮ ಬಯಕೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹಲವು ಘಟಾನುಘಟಿಗಳು ಬಿಜೆಪಿಗೆ ನೂತನ ಗೃಹಪ್ರವೇಶ

0

ರಾಜ್ಯ ವಿಧಾನಸಭಾ ಚುನಾವಣೆಗೆ ವರ್ಷ ಬಾಕಿಯಿರುವಾಗಲೇ, ಬಿಜೆಪಿ ಪಕ್ಷಕ್ಕೆ ಸಂಘಟನೆ ಚುರುಕುಗೊಳಿಸಿದೆ. ಈ ಬೆನ್ನಲ್ಲೇ ಬೇರೆ ಪಕ್ಷಗಳಿಂದ ರಾಜಕೀಯ ನಾಯಕರನ್ನು ಸೆಳೆಯುವ ಕಾರ್ಯವನ್ನು ಮುಂದುವರೆಸಿದೆ.

ಬೆಂಗಳೂರು ನಗರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮಹತ್ವದ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು.

ಸಚಿವರಾದಂತ ಡಾ.ಕೆ.ಸುಧಾಕರ್, ಮುನಿರತ್ನ, ಗೋಪಾಲಯ್ಯ ಸಮ್ಮುಖದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಮಾಜಿ ಶಾಸಕ ಮಂಜುನಾಥ್ ಬಿಜೆಪಿ ಸೇರ್ಪಡೆಗೊಂಡರು.

ಮಂಡ್ಯ ಹಾಗೂ ಕೋಲಾರ ಜಿಲ್ಲೆಯಲ್ಲಿ ಪಕ್ಷ ಬಲ ಪಡಿಸೋ ನಿಟ್ಟಿನಲ್ಲಿ ಮಹತ್ವದ ತಂತ್ರ ಹೆಣೆದಿದೆ. ಈ ನಿಟ್ಟಿನಲ್ಲಿಯೇ ಇಂದು ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಮಾಜಿ ಶಾಸಕ ಮಂಜುನಾಥ್ ಗೌಡ ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಇವರಲ್ಲದೇ ಮಾಜಿ ಐಆರ್ ಎಸ್ ಅಧಿಕಾರಿ ಲಕ್ಷ್ಮೀ ಹಾಗೂ ಮಾಜಿ ಸಚಿವ ಎಸ್ ಡಿ ಜಯರಾಂ ಅವರ ಪುತ್ರ, ಅಶೋಕ್ ಜಯರಾಂ ಕೂಡ ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು.

ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಂತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೂಡ, ಕಾಂಗ್ರೆಸ್ ತೊರೆದ ಒಂದೇ ಗಂಟೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.

ಹೀಗೆ ಘಟಾನುಘಟಿ ನಾಯಕರು ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಿಂದ, ಉಭಯ ಪಕ್ಷಗಳಲ್ಲಿ ಈಗ ಚುನಾವಣೆಗೆ ಮುನ್ನವೇ ಆತಂಕ ಹೆಚ್ಚಾಗಿದೆ ಎನ್ನಲಾಗಿದೆ.

ಅಸನಿ ಈಗ ಹೊಸ ಚಂಡಮಾರುತದ ಹೆಸರು

0

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಭಾನುವಾರ ಸಂಜೆ ವೇಳೆಗೆ ಚಂಡಮಾರುತ ಉಂಟಾಗಲಿದೆ. ಇದು ಗಂಟೆಗೆ 75 ಕಿ.ಮೀ. ವೇಗದಲ್ಲಿ ಉತ್ತರ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತಕ್ಕೆ ಅಸನಿ ಎಂದು ನಾಮಕರಣ ಮಾಡಲಾಗಿದೆ. ಸಿಂಹಳ ಭಾಷೆಯಲ್ಲಿ ಇದರ ಅರ್ಥ ಕ್ರೋಧ. ಇದು ತೀವ್ರ ಸ್ವರೂಪದಲ್ಲಿರಲಿದ್ದು ಇದು ಋತುಮಾನದ ಮೊದಲ ಚಂಡಮಾರುತವಾಗಿದೆ.

ಪೂರ್ವ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಭಾನುವಾರ ಚಂಡಮಾರುತ ಉಂಟಾಗಲಿದೆ. ನಂತರ ಇದು ಮೇ 10ರವರೆಗೆ ಈಶಾನ್ಯ ಭಾಗಕ್ಕೆ ಮುಂದುವರಿದು ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗಳಿಗೆ ಅಪ್ಪಳಿಸಲಿದೆ ಎಂದು ಐಎಂಡಿ ಪ್ರಕಟಣೆಯಿಂದ ಮಾಹಿತಿ ತಿಳಿದು ಬಂದಿದೆ.

ಪಿಎಸ್ಐ ಹಗರಣದ ಬಗ್ಗೆ ಹೇಳಿಕೆ ಕೊಟ್ಟವರೇ ಹೊಣೆ-ಸಿಎಂ ಖಡಕ್ ಮಾತು

0

ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿ ಅಕ್ರಮ ಕುರಿತಂತೆ ಈಗಾಗಲೇ ಸಿಐಡಿ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ತನಿಖೆ ಚುರುಕಿನಿಂದ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪ್ರಕರಣ ಸಂಬಂಧ ಯಾವುದೇ ಹೇಳಿಕೆಗಳನ್ನು ನೀಡಿದರೂ, ಯಾರು ಹೇಳಿಕೆಗಳನ್ನು ನೀಡುತ್ತಾರೋ, ಅವರೇ ಜವಾಬ್ದಾರಿ ಹೊರಬೇಕು ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ಆರ್‌ಟಿನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು,

ಇನ್ನೂ ಪ್ರಕರಣದ ಸಂಬಂಧ ಯಾವುದೇ ಹೇಳಿಕೆಗಳನ್ನು ನೀಡಿದರೂ, ಯಾರು ಹೇಳಿಕೆಗಳನ್ನು ನೀಡುತ್ತಾರೋ ಅವರೇ ಜವಾಬ್ದಾರಿ ಹೊರಬೇಕು ಎಂಬುದಾಗಿ ಎಚ್ಚರಿಕೆ ನೀಡಿದರು.

ಪಿಎಸ್‌ಐ ನೇಮಕಾತಿಯ ಅಕ್ರಮದಲ್ಲಿ ಯಾರ ಬಳಿ, ಯಾವುದೇ ದಾಖಲೆಗಳು ಇದ್ದರು ನೀಡಲಿ. ಅದನ್ನು ಸಿಐಡಿ ಅಧಿಕಾರಿಗಳು ಪರಿಶೀಲಿಸುತ್ತಾರೆ ಎಂದರು.

ಇನ್ನೂ ಪ್ರಕರಣದ ಸಂಬಂಧ ಯಾವುದೇ ಹೇಳಿಕೆಗಳನ್ನು ನೀಡಿದರೂ, ಯಾರು ಹೇಳಿಕೆಗಳನ್ನು ನೀಡುತ್ತಾರೋ ಅವರೇ ಜವಾಬ್ದಾರಿ ಹೊರಬೇಕು ಎಂಬುದಾಗಿ ಎಚ್ಚರಿಕೆ ನೀಡಿದರು.

ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ವಿಚಾರವಾಗಿ ಮಾತನಾಡಿ, ಖರ್ಗೆ ಕುಟುಂಬ ಮೂಲತಃ ಕಾಂಗ್ರೆಸ್‌ನವರಾಗಿದ್ದಾರೆ. ಹಲವು ದಶಕಗಳಿಂದ ಕಾಂಗ್ರೆಸ್ ಜೊತೆಗೆ ಇರುವವರು. ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿಯಾಗಿದೆ. ಈಗ ವಿಧಾನಸೌಧ ವ್ಯಾಪಾರಸೌಧ ಆಗಿಲ್ಲ. ಖರ್ಗೆ ಅವರು ಏನು ಎಂದು ನಾವು ಹೇಳಬೇಕಿಲ್ಲ. ಕಾಂಗ್ರೆಸ್ ಏನೆಂದು ನಾಡಿನ ಜನತೆಗೆ ಗೊತ್ತಿದೆ. ಅವರು ನಮಗೆ ಸರ್ಕಾರ ಹೇಗೆ ನಡೆಸಬೇಕೆಂದು ತಿಳಿಸುವುದು ಬೇಡ ಎಂದರು.

ಮುಂಬೈಗೆ ರೋಚಕ ಜಯ

ಐಪಿಎಲ್ 2022 ಟೂರ್ನಿಯಲ್ಲಿ ನಿನ್ನೆ ಶುಕ್ರವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟನ್ಸ್ ವಿರುದ್ಧ ಐದು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಈ ಮೂಲಕ ಟೂರ್ನಿಯಲ್ಲಿ ಮುಂಬೈ ಸತತ 2ನೇ ಗೆಲುವು ದಾಖಲಿಸಿದೆ.

ಅತ್ತ ಗುಜರಾತ್ ಸತತ 2ನೇ ಸೋಲಿಗೆ ಶರಣಾಗಿದೆ.

ಇದರೊಂದಿಗೆ ರಶೀದ್ ಖಾನ್ (24ಕ್ಕೆ 2 ವಿಕೆಟ್) ಮತ್ತು ವೃದ್ಧಿಮಾನ್ ಸಹಾ (55) ಹಾಗೂ ಶುಭಮನ್ ಗಿಲ್ (52) ಹೋರಾಟವು ವ್ಯರ್ಥವೆನಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ಆರು ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಗುಜರಾತ್, ಸಹಾ-ಗಿಲ್ ಶತಕದ ಜೊತೆಯಾಟದ ಹೊರತಾಗಿಯೂ ಐದು ವಿಕೆಟ್ ನಷ್ಟಕ್ಕೆ 172 ಗಳಿಸಲಷ್ಟೇ ಸಾಧ್ಯವಾಯಿತು.

10 ಪಂದ್ಯಗಳಲ್ಲಿ ಮುಂಬೈ ಎರಡನೇ ಗೆಲುವು ದಾಖಲಿಸಿದೆ. ಆದರೂ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅತ್ತ ಹಾರ್ದಿಕ್ ಪಾಂಡ್ಯ ಬಳಗ 11 ಪಂದ್ಯಗಳಲ್ಲಿ 3ನೇ ಸೋಲು ಅನುಭವಿಸಿದೆ. ಹಾಗಿದ್ದರೂ 16 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.

ಸವಾಲಿನ ಮೊತ್ತ ಬೆನ್ನಟ್ಟಿದ ಗುಜರಾತ್‌ಗೆ ವೃದ್ಧಿಮಾನ್ ಸಹಾ ಹಾಗೂ ಶುಭಮನ್ ಗಿಲ್ ಬಿರುಸಿನ ಆರಂಭವೊದಗಿಸಿದರು. ಆರಂಭದಲ್ಲಿ ಗಿಲ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ ವೃದ್ಧಿಮಾನ್ ಬಿರುಸಿನ ಆಟವಾಡಿದರು.

ಸ್ವಲ್ಪ ಹೊತ್ತಲ್ಲೇ ಗಿಲ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಇವರಿಬ್ಬರು ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು.

10 ಓವರ್‌ ಅಂತ್ಯಕ್ಕೆ ಗುಜರಾತ್ ವಿಕೆಟ್ ನಷ್ಟವಿಲ್ಲದೆ 95 ರನ್ ಗಳಿಸಿತ್ತು. ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ 83 ರನ್ ಬೇಕಾಗಿತ್ತು.

ಬ್ಯಾಟ್ ಮಾಡಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ತಂಡ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 5 ವಿಕೆಟ್ ನಷ್ಟಕ್ಕೆ 172 ಮಾತ್ರ ಗಳಿಸಲು ಶಕ್ತಗೊಂಡ ಸೋಲನ್ನೊಪ್ಪಿಕೊಂಡಿತ್ತು.

ಮನುಷ್ಯತ್ವ ಮರೆತಿದ್ದೇವೆಯೆ? ಪ್ರಶ್ನೆ ಹಾಕುತ್ತದೆ ಈ ಘಟನೆ

0

ಬೇಡಿಕೊಂಡರೂ ಯಾರೂ ಮುಂದೆ ಬರಲಿಲ್ಲ ಎಂದು ಹೈದರಾಬಾದ್‌ ನಲ್ಲಿ ಬರ್ಬರವಾಗಿ ಹತ್ಯೆಗೀಡಾದ ವ್ಯಕ್ತಿಯ ಪತ್ನಿ ಹೇಳಿದ್ದಾರೆ.

ಸಹಾಯ ಮಾಡಲು ಸುತ್ತಮುತ್ತಲಿನ ಜನರನ್ನು ಬೇಡಿಕೊಂಡರೂ ಯಾರೂ ಮುಂದೆ ಬರಲಿಲ್ಲ: ಅವರು ಸಹಾಯ ಮಾಡಬಹುದಿತ್ತು. ಆದರೆ ಯಾರೂ ನೆರವಿಗೆ ಬರಲಿಲ್ಲ. ನನ್ನ ಸಹೋದರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ನನ್ನ ಪತಿ ನನ್ನ ಸಹೋದರನಿಗೆ ತಾನು ಮುಸ್ಲಿಂ ಆಗುತ್ತೇನೆ. ನನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ. ಆದರೆ ನನ್ನ ಸಹೋದರ ಒಪ್ಪಲಿಲ್ಲ. ಮದುವೆಯಾಗಬಾರದೆಂದು ನನ್ನನ್ನು ಹೊಡೆದಿದ್ದ ಎಂದು ಹೇಳಿದ್ದಾರೆ.

ಹೈದರಾಬಾದ್‌ ನಲ್ಲಿ ಶುಕ್ರವಾರ ತನ್ನ ಪತಿಯನ್ನು ಬರ್ಬರವಾಗಿ ಹತ್ಯೆಗೈದ ಘಟನೆಯನ್ನು ಸ್ಮರಿಸಿದ ದಲಿತ ವ್ಯಕ್ತಿಯ ಪತ್ನಿ ಅಶ್ರಿನ್ ಸುಲ್ತಾನಾ, ಕಬ್ಬಿಣದ ರಾಡ್‌ ಗಳಿಂದ ಹೊಡೆದು ಸಾರ್ವಜನಿಕವಾಗಿ ಕೊಂದಿದ್ದು, ತನ್ನ ಪತಿಗೆ ಥಳಿಸುವಾಗ ಸುತ್ತಮುತ್ತಲಿನ ಜನರ ಸಹಾಯಕ್ಕಾಗಿ ಬೇಡಿಕೊಂಡಿದ್ದೇನೆ.
ಆದರೆ ಯಾರೂ ಮುಂದೆ ಬರಲಿಲ್ಲ ಎಂದು ಹೇಳಿದ್ದಾರೆ.
ಸುಲ್ತಾನಾ ಮತ್ತು ನಾಗರಾಜು ಬೈಕ್ ನಲ್ಲಿ ತೆರಳುವಾಗ ಅಡ್ಡಗಟ್ಟಿದ ಆಕೆಯ ಆಕೆಯ ಸಹೋದರ, ಇನ್ನೊಬ್ಬ ವ್ಯಕ್ತಿಯೊಂದಿಗೆ ನಾಗರಾಜು ಮೇಲೆ ಹಲ್ಲೆ ನಡೆಸಿ ಕಬ್ಬಿಣದ ರಾಡ್ ನಿಂದ ಥಳಿಸಿ, ಚಾಕುವಿನಿಂದ ಇರಿದಿದ್ದಾನೆ.
ನನ್ನ ಪತಿ(ನಾಗರಾಜು) ತಲೆಗೆ ರಾಡ್ ನಿಂದ ಹೊಡೆಯುತ್ತಲೇ ಇದ್ದರು, ಅವನಿಗೆ ತುಂಬಾ ರಕ್ತಸ್ರಾವವಾಯಿತು. ನಾನು ಸುತ್ತಮುತ್ತಲಿನವರಲ್ಲಿ ಸಹಾಯ ಕೇಳಿದೆ, ಆದರೆ ಯಾರೂ ಸಹಾಯಕ್ಕೆ ಬರಲಿಲ್ಲ, ನಾನು ನನ್ನ ಸಹೋದರನಿಗೆ ನನ್ನ ಗಂಡನನ್ನು ಬಿಟ್ಟು ಹೊಡೆಯುವುದನ್ನು ನಿಲ್ಲಿಸಿ ಎಂದು ಕೇಳಿದೆ, ಆದರೆ ಅವನು ನನ್ನ ಮಾತನ್ನು ಕೇಳಲಿಲ್ಲ. ನಾಗರಾಜು ಹೆಲ್ಮೆಟ್ ಧರಿಸಿದ್ದರೂ ರಾಡ್ ನಿಂದ ಹೊಡೆದ ಕಾರಣ ಅದು ಹಾನಿಗೊಳಗಾಯಿತು. ಅವನ ತಲೆಗೆ ತೀವ್ರ ಪೆಟ್ಟು ಬಿದ್ದಿತು ಎಂದು ತಿಳಿಸಿದ್ದಾರೆ.

ಬಿಲ್ಲಿಪುರಂ ನಾಗರಾಜು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆಶ್ರಿನ್ ಸುಲ್ತಾನಾ ಅಲಿಯಾಸ್ ಪಲ್ಲವಿಯ ಇಬ್ಬರು ಸಂಬಂಧಿಕರನ್ನು ಹೈದರಾಬಾದ್‌ ನ ಸರೂರ್‌ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಆಶ್ರಿನ್ ಸುಲ್ತಾನ ಸೋದರ ಮೊಹಮ್ಮದ್ ಮಸೂದ್ ಅಹ್ಮದ್, ಸೈಯದ್ ಮೊಬಿನ್ ಅಹ್ಮದ್ ಎಂದು ಗುರುತಿಸಲಾಗಿದೆ.