Sunday, March 8, 2026
Sunday, March 8, 2026
Home Blog Page 1539

ಏಷ್ಯಾ ಫುಟ್ಬಾಲ್ ಟೂರ್ನಿ: ಆಫ್ಘನ್ ವಿರುದ್ಧ ಭಾರತ ಜಯ

0

ಏಷ್ಯಾ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ಫುಟ್ಬಾಲ್ ತಂಡ ಮತ್ತೊಂದು ರೋಚಕ ಪ್ರದರ್ಶನ ನೀಡಿತು.

ಕೋಲ್ಕತಾದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 2-1 ಗೋಲುಗಳ ಅಂತರದಿಂದ ಮಣಿಸಿ ಫುಟ್ಬಾಲ್ ಪ್ರೇಮಿಗಳ ಗಮನ ಸೆಳೆಯಿತು.

ದೇಶದ ಪ್ರತಿಭಾನ್ವಿತ ಫುಟ್ಬಾಲ್‌ ಆಟಗಾರ ಮತ್ತು ತಂಡದ ನಾಯಕ ಸುನಿಲ್‌ ಚೇಟ್ರಿ ತಮ್ಮ 83ನೇ ಅಂತರರಾಷ್ಟ್ರೀಯ ಗೋಲು ದಾಖಲಿಸುವ ಮೂಲಕ ಮತ್ತು ಗಾಯದ ಅವಧಿಯಲ್ಲಿ ಸಹಲ್‌ ಸಮದ್ ದಾಖಲಿಸಿದ 2ನೇ ಗೋಲು ಭಾರತ ತಂಡದ ಜಯಭೇರಿಯಲ್ಲಿ ಪ್ರಧಾನ ಪಾತ್ರವಹಿಸಿತು.

ಇದು ಏಷ್ಯಾ ಕಪ್‌ ಪಂದ್ಯಾವಳಿಯಲ್ಲಿ ಭಾರತದ ಸತತ 2ನೇ ಕ್ವಾಲಿಫೈಯರ್ ಪ್ರಯತ್ನವಾಗಿದೆ.

ಈ ಮೂಲಕ ಭಾರತ 2023ರ ಎಎಫ್‌ಸಿ ಏಷ್ಯಾ ಕಪ್‌ ಟೂರ್ನಿಗೆ ಅರ್ಹತೆ ಗಿಟ್ಟಿಸುವ ಸನಿಹ ತಲುಪಿದೆ.
ಈ ವಿಜಯದೊಂದಿಗೆ ಭಾರತ ಫುಟ್ಬಾಲ್‌ ತಂಡ ಏಷ್ಯಾಕಪ್‌ ಟೂರ್ನಿಯ ಗುಂಪು ಹಂತದಲ್ಲಿ ಸತತ 2ನೇ ಬಾರಿ ಮತ್ತು ಈವರೆಗೆ ಒಟ್ಟು 5 ಬಾರಿ ಅವಕಾಶ ಪಡೆಯಲು ನೆರವಾಯಿತು.

2019ರಲ್ಲಿ ಚೆಟ್ರಿ ಟೀಂ ಗುಂಪು ಹಂತದಲ್ಲೇ ಸೋತು ಟೂರ್ನಿಯಿಂದ ನಿರ್ಗಮಿಸಿರುವುದನ್ನು ಇಲ್ಲಿ ನೆನಪಿಸಬಹುದು.

ಬೀದರ್ ಜನತೆಗೆ ಜೂನ್15 ರಿಂದ ವಿಮಾನ ಯಾನ ಸೌಲಭ್ಯ

0

ಇದೇ ತಿಂಗಳ ಜೂ.15ರಂದು ಬೀದರ್ ಜಿಲ್ಲೆಗೆ ನಾಗರಿಕ ವಿಮಾನಯಾನ ಸೇವೆ ಒದಗಿಸುತ್ತಿರುವ ಸ್ಟಾರ್‌ಏರ್‌ ವಿಮಾನ ಸೇವೆ ಆರಂಭದ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೂಚಿಸಿದ್ದಾರೆ.

ಬೀದರ್ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ಟಾರ್‌ಏರ್‌ ನಾಗರಿಕ ವಿಮಾನಯಾನ ಸೇವೆ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತೆಗಾಗಿನ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸ್ಟಾರ್‌ ಏರ್‌ ವಿಮಾನ ಸೇವೆಯು ಕೇಂದ್ರ ಸರ್ಕಾರ ಉಡಾನ್‌ ಯೋಜನೆಯಡಿ ಒದಗಿಸುತ್ತದೆ.

ಈ ಕಾರ್ಯಕ್ರಮ ಉದ್ಘಾಟನೆಯನ್ನು ಕೇಂದ್ರದ ರಾಜ್ಯ ಸಚಿವ ಭಗವಂತ ಖೂಬಾ ಉದ್ಘಾಟಿಸಲಿದ್ದಾರೆ. ಜಿಲ್ಲೆಯ ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಬೀದರ್‌ ವಿಮಾನ ನಿಲ್ದಾಣದ ನಿರ್ದೇಶಕರಾದ ಅಮಿತ್‌ ಮಿಶ್ರಾ ಅವರು ಮಾತನಾಡಿ, ಜೂ. 15ರಂದು ಸ್ಟಾರ್‌ಏರ್‌ ಸೇವೆ ಬೀದರ್‌ ಜಿಲ್ಲೆಯಲ್ಲಿ ಆರಂಭಿಸುತ್ತಿದೆ. ಮಧ್ಯಾಹ್ನ 2.55ಕ್ಕೆ ಬೆಂಗಳೂರಿನಿಂದ ವಿಮಾನ ಹೊರಟು ಬೀದರ್‌ಗೆ 4.5ಕ್ಕೆ ಬಂದು ತಲುಪಲಿರುವ ಈ ಮೊದಲ ವಿಮಾನಕ್ಕೆ ವಾಟರ್‌ ಸೆಲ್ಯೂಟ್‌, ಲೈಟಿಂಗ್‌ ಲ್ಯಾಂಪ್‌, ರಿಬ್ಬನ್‌ ಕತ್ತರಿಸುವ ಮೂಲಕ ಸ್ವಾಗತಿಸಲಾಗುತ್ತದೆ.

ವಿಮಾನದಿಂದ ಮೊದಲು ಬರುವ ಪ್ರಯಾಣಿಕರಿಗೆ ಬೋರ್ಡಿಂಗ್‌ ಪಾಸ್‌ ನೀಡುವುದರ ಜೊತೆಗೆ ಇತರೆ ಎಲ್ಲ ಪ್ರಯಾಣಿಕರಿಗೆ ಕಾಣಿಕೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಸ್ಟಾರ್‌ ಏರ್‌ನ ಸೀನಿಯರ್‌ ಮ್ಯಾನೇಜರ್‌ ಕಿರಣ ಅವರು ಮಾತನಾಡಿ, ಸ್ಟಾರ್‌ಏರ್‌ ವಿಮಾನವು ಗೋದಾವತ್‌ ಎಂಟರ್‌ ಪ್ರೈಸೆಸ್‌ನ ಸಂಜಯ ಗೋದಾವತ್‌ ಮಾಲೀಕತ್ವದ ವಿಮಾನ ಸೇವೆಯಾಗಿದೆ. ಕೇಂದ್ರ ಸರ್ಕಾರದ ಉಡಾನ್‌ ಯೋಜನೆಯಲ್ಲಿ ಬೀದರ್‌ ಜಿಲ್ಲೆಗೆ ಸೇವೆ ಒದಗಿಸಲಿದೆ. ಸ್ಟಾರ್‌ ಏರ್‌ ವಿಮಾನವು ಜಟ್‌ ಎಂಜಿನ ಮೇಲೆ ಕೆಲಸ ನಿರ್ವಹಿಸುವುದರಿಂದ ಅತೀ ವೇಗದಲ್ಲಿ ಜನರಿಗೆ ಸೇವೆ ಒದಗಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಅಮೆರಿಕದಲ್ಲಿ 45 ಮಂಕಿಪಾಕ್ಸ್ ಪ್ರಕರಣಗಳು

0

ಈಗ ಪತ್ತೆಯಾಗಿರುವ ಮಂಕಿಪಾಕ್ಸ್ ಪ್ರಕರಣಗಳು ಸಾಮಾನ್ಯ ರೋಗ ಲಕ್ಷಣವನ್ನು ಹೆಚ್ಚಾಗಿ ಹೊಂದಿಲ್ಲದಿರುವುದರಿಂದ ರೋಗವನ್ನು ನಿರ್ಣಯಿಸಲು ಹೆಚ್ಚು ಕಷ್ಟಕರವಾಗುತ್ತದೆ ಎಂದು ಅಮೆರಿಕದ ಆರೋಗ್ಯ ತಜ್ಞರು ಹೇಳಿದ್ದಾರೆ.

ರೋಗದ ಹರಡುವಿಕೆಯನ್ನು ತಡೆಯಲು ಪ್ರಕರಣಗಳನ್ನು ಗುರುತಿಸುವುದು ನಿರ್ಣಾಯಕವಾಗಿದೆ ಎಂದು ದಿ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಯಂಡ್ ಪ್ರಿವೆನ್ಷನ್ ತಿಳಿಸಿದೆ.

ಈಗ ವರದಿಯಾಗುತ್ತಿರುವ ಮಂಕಿಪಾಕ್ಸ್ ಪ್ರಕರಣಗಳು ಸೌಮ್ಯ ಲಕ್ಷಣ ಹೊಂದಿದೆ. ಕೆಲವೊಮ್ಮೆ ದೇಹದ ಸೀಮಿತ ಭಾಗಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿವೆ. ಇವು ಪಶ್ಚಿಮ ಮಧ್ಯ ಆಫ್ರಿಕಾದ ಸ್ಥಳೀಯ ದೇಶಗಳಲ್ಲಿ ಕಂಡುಬರುವುದಕ್ಕಿಂತ ಭಿನ್ನವಾಗಿದೆ . ಇದರಿಂದಾಗಿ ಕೆಲವು ಪ್ರಕರಣಗಳು ಗುರುತಿಸಲಾಗದೆ. ಅಥವಾ ರೋಗಲಕ್ಷಣ ಮಾಡಲಾಗದೆ ಉಳಿದುಹೋಗಬಹುದು.
ಆದ್ದರಿಂದ, ವೈದ್ಯಕೀಯ ಕ್ಷೇತ್ರದ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಜಾಗರೂಕತೆವಹಿಸಬೇಕಾಗಿದೆ ಎಂದು ಸಿಡಿಸಿ ಮುಖ್ಯಸ್ಥೆ ರಚೆಲ್ ವಲೆಂಸ್ಕಿ ಅವರು ತಿಳಿಸಿದ್ದಾರೆ.

ಪ್ರಸ್ತುತ ಪತ್ತೆಯಾಗಿರುವ ಪ್ರಕರಣಗಳು ಫ್ಲೂ ರೀತಿಯ ಲಕ್ಷಣಜ್ವರ, ಮೈಕೈ ನೋವು, ಊದಿಕೊಂಡ ಗ್ರಂಥಿಗಳು ಇತ್ಯಾದಿಯನ್ನು ಹೊಂದಿಲ್ಲ. ಸಾಮಾನ್ಯವಾಗಿ ಮಂಕಿಪಾಕ್ಸ್ ಸಾಂಕ್ರಾಮಿಕದಲ್ಲಿ ದೇಹದ ಮೇಲೆಲ್ಲಾ ಗುಳ್ಳೆಗಳು ಕಾಣಿಸಿಕೊಂಡರೆ ಈಗ ಕಂಡುಬಂದಿರುವ ಕಾಯಿಲೆಯಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ಕಂಡುಬಂದಿದೆ. ಅಮೆರಿಕದಲ್ಲಿ ಈಗ ಮಂಕಿಪಾಕ್ಸ್ ಪ್ರಕರಣ 45ಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

ಶೀಘ್ರವೇ 15 ಸಾವಿರ ಶಿಕ್ಷಕರ ನೆಮಕ- ಬೊಮ್ಮಾಯಿ

0

ನಮ್ಮ ಸರ್ಕಾರ ಬಂದ ಮೇಲೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. 15 ಸಾವಿರ ಶಿಕ್ಷಕರನ್ನು ಶೀಘ್ರವೇ ಭರ್ತಿ ಮಾಡಲಾಗುತ್ತದೆ. ಕಾಲೇಜಿನಲ್ಲಿ 6 ಸಾವಿರ ಸ್ಮಾರ್ಟ್‌ ಕ್ಲಾಸ್‌ಗಳನ್ನು ಆರಂಭಿಸಲಾಗತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಬೆಳಗಾವಿಯಲ್ಲಿ ನಡೆದ ವಾಯವ್ಯ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಥಮ ಬಾರಿಗೆ ಒಂದೇ ವರ್ಷದಲ್ಲಿ 7 ಸಾವಿರ ಶಾಲಾ ಕೊಠಡಿಗಳನ್ನು ಗ್ರಾಮೀಣ ಭಾಗದಲ್ಲಿ ಕಟ್ಟಲು ಅನುದಾನ ನೀಡಿ, ಇದೇ ವರ್ಷದಲ್ಲಿ ಪೂರ್ತಿಗೊಳಿಸಲು ಸೂಚಿಸಲಾಗಿದೆ.

7 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಜೊತೆಗೆ ವಿದೇಶದ ವಿವಿಯೊಂದಿಗೆ ಒಡಂಬಡಿಕೆ ಮಾಡಲಾಗುತ್ತದೆ. ಆರ್‌ ಆಯಂಡ್‌ ಡಿ ನೀತಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಬೇಕಿದೆ

0

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೊಂಕು ಪ್ರಕರಣಗಳ ಹೆಚ್ಚಳವಾಗುತ್ತಿದೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 523 ಹೊಸ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ, 525 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿದೆ.

ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ
3,000 ಗಡಿ ದಾಟಿದೆ.

ಯಾವುದೇ ಸಾವುಗಳು ವರದಿಯಾಗಿಲ್ಲ. ಸೋಂಕಿತರಿಗ ಆಸ್ಪತ್ರೆಗಳು ನಿವಾಸಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಗ್ಯ ಇಲಾಖೆ 22,000 ಪರೀಕ್ಷೆಗಳನ್ನು ನಡೆಸಿತ್ತು. ಫೆಬ್ರವರಿ 26 ರಂದು ಒಟ್ಟು 516 ಕೊರೋನಾ ಪ್ರಕರಣಗಳು ವರದಿಯಾಗಿವೆ.

ಕಳೆದ ಹತ್ತು ದಿನಗಳಿಂದ, ರಾಜ್ಯವು ಕೋವಿಡ್ ಪ್ರಕರಣಗಳಲ್ಲಿ ನಿರಂತರ ಏರಿಕೆಗೆ ಸಾಕ್ಷಿಯಾಗುತ್ತಿದೆ. ಮಾಸ್ಕ್ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಶಿಫಾರಸು ಮಾಡಲು ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸೂಚನೆ ನೀಡಿದೆ.. ಮಾರ್ಷಲ್ ಗಳನ್ನು ನಿಯೋಜಿಸುವ ಮೂಲಕ ಜನರು ಕೊರೋನಾ ಸೂಕ್ತ ನಡವಳಿಕೆಯನ್ನು ಅನುಸರಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವು ಬಿಬಿಎಂಪಿ ಮತ್ತು ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದೆ.

ಎಂಟು ವರ್ಷಗಳಲ್ಲಿ ಮೋದಿ ಸರ್ಕಾರವು ಭಾರತದ ಗೌರವವನ್ನ ವರ್ಧಿಸಿದೆ

0

ನರೇಂದ್ರ ಮೋದಿ ಸರ್ಕಾರವು ಕಳೆದ ಎಂಟು ವರ್ಷಗಳಲ್ಲಿ ವಿಶ್ವದಲ್ಲಿ ಭಾರತದ ಗೌರವವನ್ನು ಮರುಸ್ಥಾಪಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದಾರೆ.

ಐಎನ್‌ಎಸ್ ಖುಕ್ರಿ ಯುದ್ಧ ಸ್ಮಾರಕ ಸೇರಿದಂತೆ ವಿವಿಧ ಯೋಜನೆಗಳನ್ನ ಉದ್ಘಾಟಿಸಿ ಮಾತನಾಡಿದರು.

ದಿಯುನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, ‘ಪ್ರಧಾನಿ ನರೇಂದ್ರ ಮೋದಿ ಅವರು ತಂತ್ರಜ್ಞಾನವನ್ನು ಹೇಗೆ ಬಳಸಿದ್ದಾರೆ ಎಂದು ಅನೇಕ ದೇಶಗಳು ಕೇಳುತ್ತಿವೆ, ಇದರ ಮೂಲಕ 130 ಕೋಟಿ ಜನರು ಯಾವುದೇ ಗೊಂದಲವಿಲ್ಲದೆ ಕೋವಿಡ್ -19 ಲಸಿಕೆಗಳ ಎರಡೂ ಡೋಸ್ಗಳನ್ನು ಸ್ವೀಕರಿಸಿದರು ಮತ್ತು ದೇಶವನ್ನ ಕೊರೊನಾ ವೈರಸ್‌ನಿಂದ ಮುಕ್ತಗೊಳಿಸಿದರು’ ಎಂದು ಅವರು ಹೇಳಿದರು.

2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಮೋದಿ ಸರ್ಕಾರದ ಸಾಧನೆಗಳನ್ನ ಪಟ್ಟಿ ಮಾಡಿದ ಶಾ, ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಮಯದಲ್ಲಿ ಕೇವಲ 45 ದಿನಗಳಲ್ಲಿ ವೈದ್ಯಕೀಯ ಆಮ್ಲಜನಕದ ಉತ್ಪಾದನೆಯು ಹತ್ತು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ಖಚಿತಪಡಿಸಿದ್ದಾರೆ ಎಂದು ಹೇಳಿದರು.

ಕೋವಿಡ್ -19 ವಿರುದ್ಧ ಲಸಿಕೆ ಪಡೆದ ಮೂರು ಸೆಕೆಂಡುಗಳಲ್ಲಿ ಭಾರತದ ಜನರು ತಮ್ಮ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು.
ಆದರೆ, ಅಭಿವೃದ್ಧಿ ಹೊಂದಿದ ದೇಶಗಳ ಜನರು ಸಹ ಸಮಯಕ್ಕೆ ಸರಿಯಾಗಿ ತಮ್ಮ ಕೋವಿಡ್ ಪ್ರಮಾಣಪತ್ರಗಳನ್ನು ಪಡೆಯಲು ಹೆಣಗಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ತನ್ನ 58 ವರ್ಷಗಳ ಆಡಳಿತದಲ್ಲಿ ಬಡತನವನ್ನ ತೊಡೆದುಹಾಕುವ ಹೆಸರಿನಲ್ಲಿ ಬಡವರನ್ನ ತೆಗೆದು ಹಾಕಿತು. ಆದ್ರೆ, ಪ್ರಧಾನಿ ಮೋದಿ ಕಳೆದ ಎಂಟು ವರ್ಷಗಳಲ್ಲಿ ಬಡತನವನ್ನ ತೊಡೆದುಹಾಕಲು ಶ್ರಮಿಸಿದರು ಎಂದು ಹಿರಿಯ ಬಿಜೆಪಿ ನಾಯಕ ಹೇಳಿದರು.

50 ವರ್ಷಗಳ ನಂತರವೂ, ಸಾಂಕ್ರಾಮಿಕ ರೋಗವು ಅಪ್ಪಳಿಸಿದರೆ, ಒಂದು ಲೀಟರ್ ಆಮ್ಲಜನಕವನ್ನು ಸಹ ವಿದೇಶದಿಂದ ಪಡೆಯಬೇಕಾಗಿಲ್ಲ. ಪಿಎಂ ಕೇರ್ ಮೂಲಕ, ಮೋದಿ ಆರೋಗ್ಯ ಮೂಲಸೌಕರ್ಯವನ್ನು ನಿರ್ಮಿಸಿದ್ದಾರೆ ಮತ್ತು ಪ್ರತಿ ಗ್ರಾಮವನ್ನು ಸ್ವಾವಲಂಬಿಗಳನ್ನಾಗಿ ಮಾಡಿದ್ದಾರೆ ಎಂದರು.

ಟೋಲ್ ಸಂಗ್ರಹಕ್ಕೆ ನವೀನ ವಿಧಾನ: ಸರ್ಕಾರದ ಚಿಂತನೆ

0

ಏಪ್ರಿಲ್ 1ರಿಂದ ಟೋಲ್ ತೆರಿಗೆ ಹೆಚ್ಚಳದ ಹೊರೆ ಎದುರಿಸುತ್ತಿರುವ ಚಾಲಕರಿಗೆ ಶೀಘ್ರದಲ್ಲೇ ದುಬಾರಿ ಟೋಲ್​ಗಳಿಂದ ಮುಕ್ತಿ ಪಡೆಯುವ ಭರವಸೆ ಹೆಚ್ಚಿದೆ.

ಜರ್ಮನಿ, ರಷ್ಯಾದಂತಹ ಯುರೋಪಿಯನ್ ರಾಷ್ಟ್ರಗಳಲ್ಲಿ ಈ ವ್ಯವಸ್ಥೆ ಮೂಲಕ ಟೋಲ್ ಸಂಗ್ರಹಿಸಲಾಗುತ್ತಿದೆ. ಈ ದೇಶಗಳಲ್ಲಿ ಈ ವ್ಯವಸ್ಥೆ ಯಶಸ್ವಿ ಆಗಿರುವುದರಿಂದ ಭಾರತದಲ್ಲೂ ಜಾರಿಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ.
ವಾಹನಗಳಲ್ಲಿ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆ
ಸದ್ಯಕ್ಕೆ, ಒಂದು ಟೋಲ್‌ನಿಂದ ಇನ್ನೊಂದು ಟೋಲ್‌ಗೆ ಇರುವ ಅಂತರದ ಸಂಪೂರ್ಣ ಮೊತ್ತವನ್ನು ವಾಹನಗಳಿಂದ ಸಂಗ್ರಹಿಸಲಾಗುತ್ತದೆ. ಅಲ್ಲಿಗೆ ಹೋಗದಿದ್ದರೂ ಮತ್ತು ಪ್ರಯಾಣವು ಮಧ್ಯದಲ್ಲಿ ಎಲ್ಲೋ ಮುಗಿದಿದ್ದರೂ ಟೋಲ್ ಅನ್ನು ಸಂಪೂರ್ಣವಾಗಿ ಪಾವತಿಸಬೇಕಾಗುತ್ತದೆ.

ಫಾಸ್​ಟ್ಯಾಗ್ ವ್ಯವಸ್ಥೆ ರದ್ದುಪಡಿಸಿ, ಟೋಲ್ ಸಂಗ್ರಹಕ್ಕೆ ಹೊಸ ವ್ಯವಸ್ಥೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ಇದರ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಯಲ್ಲಿ ಕಾರು ಎಷ್ಟು ಕಿಲೋಮೀಟರ್‌ಗಳಷ್ಟು ಓಡುತ್ತದೆಯೋ ಅದಕ್ಕೆ ಮಾತ್ರ ಟೋಲ್ ಅನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿದುಬಂದಿದೆ.

ಇದೀಗ ಕೇಂದ್ರ ಸರ್ಕಾರವು ಉಪಗ್ರಹ ಸಂಚಾರ ವ್ಯವಸ್ಥೆಯಿಂದ ಟೋಲ್ ತೆರಿಗೆ ಸಂಗ್ರಹಿಸಲು ಹೊರಟಿದೆ.
ವಾಹನವು ಹೆದ್ದಾರಿಯಿಂದ ಟೋಲ್ ಇಲ್ಲದ ರಸ್ತೆಗೆ ಚಲಿಸಿದ ತಕ್ಷಣ ಆ ಕಿಲೋಮೀಟರ್‌ನ ಟೋಲ್ ಅನ್ನು ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಟೋಲ್ ಕಡಿತಗೊಳಿಸುವ ವ್ಯವಸ್ಥೆಯು ಫಾಸ್​ಟ್ಯಾಗ್‌ನಂತೆಯೇ ಇರುತ್ತದೆ. ಸದ್ಯಕ್ಕೆ, ಭಾರತದಲ್ಲಿ ಶೇ 97ರಷ್ಟು ವಾಹನಗಳಿಗೆ ಫಾಸ್​ಟ್ಯಾಗ್‌ನಿಂದ ಟೋಲ್ ವಿಧಿಸಲಾಗುತ್ತಿದೆ.
ಹೊಸ ವ್ಯವಸ್ಥೆ ಜಾರಿಗೆ ತರುವ ಮುನ್ನ ಸಾರಿಗೆ ನೀತಿಯಲ್ಲೂ ಬದಲಾವಣೆ ತರಬೇಕಿದೆ. ಇದಕ್ಕೆ ಬೇಕಾದ ಅಂಶಗಳನ್ನು ತಜ್ಞರು ಸಿದ್ಧಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ರಾಷ್ಟ್ರಪತಿ ಚುನಾವಣೆ ಹಿನ್ನೆಲೆ: ಬಿಜೆಪಿಯೇತರ ಪಕ್ಷಗಳ ಸಭೆ ಕರೆದ ದೀದಿ

0

ರಾಷ್ಟ್ರಪತಿ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ನಾಯಕಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 22 ಬಿಜೆಪಿಯೇತರ ಪಕ್ಷಗಳ ಸಭೆ ಕರೆದಿದ್ದಾರೆ.

ಕಾಂಗ್ರೆಸ್‌ ಸೇರಿದಂತೆ ಎನ್‌ಡಿಎ ಮಿತ್ರಕೂಟದಿಂದ ಹೊರಗಿರುವ ಪಕ್ಷಗಳ ಸಭೆಯನ್ನು ಜೂ.15ರಂದು ದೆಹಲಿಯಲ್ಲಿ ಕರೆಯಲಾಗಿದೆ.
ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಬಿಜೆಪಿ ಆಡಳಿತವಿಲ್ಲದ ಎಲ್ಲಾ 8 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಜೂ.15ರಂದು ನವದೆಹಲಿಯ ಕಾನ್ಸ್ಟಿಟ್ಯೂಶನ್ ಕ್ಲಬ್‌ನಲ್ಲಿ ನಾವೆಲ್ಲರೂ ಒಟ್ಟಾಗಿ ಸೇರೋಣವೆಂದು ನಿಮ್ಮಲ್ಲಿ ಕೋರಿಕೊಳ್ಳುತ್ತೇನೆ ಎಂದು ತಮ್ಮ ಪತ್ರದಲ್ಲಿ ದೀದಿ ಉಲ್ಲೇಖಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿದಂತೆ ಬಿಜೆಪಿಯೇತರ ರಾಜಕೀಯ ಪಕ್ಷಗಳಿಗೆ ಮಮತಾ ಬ್ಯಾನರ್ಜಿ ಈ ಸಂದೇಶ ಕಳುಹಿಸಿದ್ದಾರೆಂದು ಮೂಲಗಳು ವರದಿ ಮಾಡಿವೆ.

ರಾಷ್ಟ್ರಪತಿ ಚುನಾವಣೆಯು ಘೋಷಣೆಯಾಗಿದೆ. ಇದು ಒಗ್ಗೂಡಲು ಪ್ರಶಸ್ತವಾದ ಸಮಯ. ಈ ಅವಕಾಶದ ಲಾಭ ಪಡೆದು ಎಲ್ಲಾ ಪ್ರಗತಿಪರ ವಿರೋಧ ಪಕ್ಷಗಳು ಒಟ್ಟಾಗಿ ಭಾರತದ ರಾಜಕೀಯದಲ್ಲಿ ಹೊಸ ಭವಿಷ್ಯ ಬರೆಯಲು ಸಜ್ಜಾಗಬೇಕಿದೆ.

ಸಮಾಜಘಾತುಕರಿಗೆ ಯುಪಿಯಲ್ಲಿ ಬುಲ್ಡೋಜರ್ ಕ್ರಮ ಜಾರಿ

0

ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್ ಅವರ ಕುರಿತು ನೀಡಿದ ನಿಂದನಾತ್ಮಕ ಹೇಳಿಕೆ ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಒಂದು ದಿನದ ಬಳಿಕ, ಉತ್ತರ ಪ್ರದೇಶ ಪೊಲೀಸರು ಸಹರಾನ್‌ಪುರದಲ್ಲಿ ಪ್ರತಿಭಟನಾಕಾರರ ಮನೆಗಳನ್ನು ಬುಲ್ಡೋಝರ್‌ ಬಳಸಿ ನೆಲಸಮಗೊಳಿಸಿದ್ದಾರೆ ಎಂದು Ndtv.com ವರದಿ ಮಾಡಿದೆ.

ಸಹರಾನ್‌ ಪುರದಲ್ಲಿ ಶಾಂತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಕದಡಿದ್ದಕ್ಕಾಗಿ ಇದುವರೆಗೆ 64 ಜನರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಭಾರೀ ಪೊಲೀಸ್ ನಿಯೋಜನೆಯ ನಡುವೆ ಬುಲ್ಡೋಜರ್‌ಗಳು ಎರಡು ಮನೆಗಳನ್ನು ಕೆಡವುತ್ತಿರುವುದು ವೈರಲ್‌ ಆದ ವಿಡಿಯೋದಲ್ಲಿ ದಾಖಲಾಗಿದೆ.
ಇಬ್ಬರು ಬಿಜೆಪಿ ನಾಯಕರು ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಆಕ್ಷೇಪಾರ್ಹ ಮತ್ತು ಕೋಮುವಾದಿ ಹೇಳಿಕೆ ನೀಡಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು, ರಾಜ್ಯದಲ್ಲಿ ಇದುವರೆಗೆ 230 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಏಳು ಜಿಲ್ಲೆಗಳಲ್ಲಿ 11 ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.

ಸ್ಥಳೀಯ ಆಡಳಿತದೊಂದಿಗೆ ಆರೋಪಿ ಮುಝಮ್ಮಿಲ್ ಮತ್ತು ಅಬ್ದುಲ್ ವಾಕಿರ್ ಅವರ ನಿವಾಸಗಳನ್ನು ತಲುಪಿದ ಪೊಲೀಸರು ಅಕ್ರಮ ನಿರ್ಮಾಣಗಳು ಎಂದು ಆರೋಪಿಸಿ ಅವರ ಮನೆಗಳ ಭಾಗಗಳನ್ನು ನೆಲಸಮಗೊಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಯುಪಿ ಪೊಲೀಸ್‌ನ ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್, ರಾಜ್ಯದಲ್ಲಿ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಪೊಲೀಸರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ

ಶಿವಮೊಗ್ಗದಲ್ಲಿ ಬುಲೆಟ್ ಬೈಕ್ ಜಾಥಾ

0

ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ 8ವರ್ಷದ ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ ಅಭಿಯಾನದ ಅಂಗವಾಗಿ ಇಂದು ಶಿವಮೊಗ್ಗ ದ ಯುವ ಮೋರ್ಚಾ ಬಿಜೆಪಿ ಅವರ ವತಿಯಿಂದ ವಿಕಾಸ ತೀರ್ಥ ಜಾಥಾ ನಡೆಯಿತು.

ಶಿವಮೊಗ್ಗ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ವಿನೋಬಾ ನಗರದ ಪೊಲೀಸ್ ಚೌಕಿ ವರೆಗೆ ಬುಲೆಟ್ ಬೈಕ್ ಮುಖಾಂತರ ಜಾಥಾ ನಡೆಯಿತು.

ಈ ಸಂದರ್ಭದಲ್ಲಿ ಶಿವಮೊಗ್ಗ ನಗರದ ಯುವ ಮೋರ್ಚಾ ಅಧ್ಯಕ್ಷರಾದ ದರ್ಶನ್ ಆರ್.ವಿ, ಜಿಲ್ಲಾ ಖಜಾಂಚಿ ರಾಮಣ್ಣ, ನಗರದ ಉಪಾಧ್ಯಕ್ಷರಾದ ಮಹೇಶ್ , ಮೆಸ್ಕಾಂ ನಿರ್ದೇಶಕರು ದಿನೇಶ್, ಪ್ರಧಾನ ಕಾರ್ಯದರ್ಶಿ ಜಗ್ಗಣ್ಣ ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು.