Sunday, March 8, 2026
Sunday, March 8, 2026
Home Blog Page 1538

ನೈಋತ್ಯ ರೈಲ್ವೆ ಮಾರ್ಗ ಬಂಟ್ವಾಳದವರೆಗೆ ವಿಸ್ತರಣೆ

0

ನೈಋತ್ಯ ರೈಲ್ವೇ ಮೈಸೂರು ವಿಭಾಗವು ಮೈಸೂರು ನಿಲ್ದಾಣದಲ್ಲಿ ಪ್ರಾರಂಭಿಸಿದ್ದ ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯನ್ನು ಸುಬ್ರಹ್ಮಣ್ಯ ರೋಡ್‌, ಕಬಕ ಪುತ್ತೂರು ಮತ್ತು ಬಂಟ್ವಾಳ ನಿಲ್ದಾಣಗಳಿಗೆ‌ ವಿಸ್ತರಿಸಿದೆ.

ನಿಲ್ದಾಣಗಳಲ್ಲಿ ಸ್ಥಳೀಯ ವಿಶೇಷ ಉತ್ಪನ್ನಗಳು ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ಒದಗಿಸುವ ಮೂಲಕ ಅವುಗಳನ್ನು ಉತ್ತೇ ಜಿಸುವುದು ಉದ್ದೇಶ.

ಪ್ರಯಾಣಿಕರಿಗೆ ಭಾರತದ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ ಸಲುವಾಗಿ ಮತ್ತು ರೈಲು ನಿಲ್ದಾಣಗಳಲ್ಲಿ ಸ್ಥಳೀಯ ಉತ್ಪನ್ನಗಳನ್ನು ಜನಪ್ರಿಯಗೊಳಿಸಿ ಸಮಾಜದ ಕೆಳಸ್ತರದಲ್ಲಿರುವ ವರ್ಗಕ್ಕೆ ಹೆಚ್ಚುವರಿ ಆದಾಯದ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ 2022-23ರ ಕೇಂದ್ರ ಬಜೆಟ್‌ನಲ್ಲಿ ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆ ಘೋಷಿಸಿ ಮೈಸೂರು ನಿಲ್ದಾಣದಲ್ಲಿ ಆರಂಭಿಸಲಾಗಿತ್ತು.

ಪ್ರಯಾಣಿಕರ ಸಕಾರಾತ್ಮಕ ಪ್ರತಿಕ್ರಿಯೆಯ ಫ‌ಲವಾಗಿ ಸುಬ್ರಹ್ಯಣ್ಯ, ಪುತ್ತೂರು, ಬಂಟ್ವಾಳ ಒಳಗೊಂಡಂತೆ ಒಟ್ಟು 67 ನಿಲ್ದಾಣಗಳಿಗೆ ವಿಸ್ತರಿಸಲಾಗಿದೆ.

ಈ ಉತ್ಪನ್ನಗಳ ಮೂಲಕ ವ್ಯವಹಾರ ನಡೆಸುವ ಏಜೆನ್ಸಿಗಳು, ಕುಶಲಕರ್ಮಿಗಳು, ನೇಕಾರರು, ಕರಕುಶಲಿಗಳು, ಸ್ವ ಸಹಾಯ ಗುಂಪುಗಳು, ಬುಡಕಟ್ಟು ಸಹಕಾರ ಸಂಘಗಳು ಮತ್ತು ಸಮಾಜದ ಕಟ್ಟಕಡೆಯ ಮತ್ತು ದುರ್ಬಲ ವರ್ಗಗಳಿಂದ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಿರ್ದಿಷ್ಟ ನಿಲ್ದಾಣಕ್ಕೆ ಒಂದಕ್ಕಿಂತ ಹೆಚ್ಚು ಅರ್ಜಿಗಳು ಬಂದಲ್ಲಿ, ಆದ್ಯತಾ ಪಟ್ಟಿಯ ಪ್ರಕಾರ ಅಥವಾ ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಗುತ್ತದೆ. ಪಟ್ಟಿಯಲ್ಲಿರುವ ಎಲ್ಲ ಅರ್ಜಿದಾರರು ಮುಗಿಯುವ ವರೆಗೆ ಇದನ್ನು ಮುಂದುವರಿಸಲಾಗುತ್ತದೆ.

ಪ್ರಯಾಣಿಕರಿಗೆ ಸುಲಭವಾಗಿ ಪ್ರವೇಶ ಸಾಧ್ಯವಾಗುವ ಸ್ಥಳ ದಲ್ಲಿ ತಾತ್ಕಾಲಿಕ ಕ್ರಿಯಾತ್ಮಕ ಅಂಗಡಿಯನ್ನು ಭಾಗವಹಿಸುವವರಿಗೆ ಲಭ್ಯವಾಗುವಂತೆ ಮಾಡ ಲಾಗುತ್ತದೆ. ಭಾಗವಹಿಸುವವರು ಉತ್ಪನ್ನಗಳನ್ನು ನಿಲ್ದಾಣದಲ್ಲಿ ಮತ್ತು ಪ್ಲಾಟ್‌ಫಾರ್ಮ್ ಗಳಲ್ಲಿ ಮಾರಾಟ ಮಾಡಬಹುದು.

ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಗೆ 14 ದಿನಗಳನ್ಯಾಯಾಂಗ ಬಂಧನ

0

ದೆಹಲಿ ಆರೋಗ್ಯ ಸಚಿವ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸತ್ಯೇಂದ್ರ ಜೈನ್ ಅವರನ್ನು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ರಿಮಾಂಡ್ ಮುಗಿದ ನಂತರ ಜೈನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಜೈನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯೆಲ್ ಅವರು ಜೈನ್‌ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು.

ಮೇ 30 ರಂದು ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಸತ್ಯೇಂದ್ರ ಜೈನ್‌ ಅವರನ್ನು ಬಂಧಿಸಲಾಯಿತು. ಇಡಿ ಪರ ನ್ಯಾಯವಾದಿ ಎಸ್‌ವಿ ರಾಜು, ಜೈನ್‌ ಕಸ್ಟಡಿಯಲ್ಲಿರುವ ವೇಳೆ ಇಡಿ ಹಲವಾರು ಸ್ಥಳಗಳಲ್ಲಿ ಶೋಧ ನಡೆಸಿದ್ದು, ನಗದು ಮತ್ತು ದಾಖಲೆಗಳು ಸೇರಿದಂತೆ ಕೆಲವು ದೋಷಾರೋಪಣೆಯ ವಸ್ತುಗಳು ಪತ್ತೆಯಾಗಿವೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

ಸೇರಿಗೆ ಸವ್ವಾಸೇರು… ಈ ಘಟನೆ!

0

ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ವಿಚಿತ್ರ ಘಟನೆ ನಡೆದಿದೆ.

ಲೈನ್‌ಮ್ಯಾನ್‌ ಒಬ್ಬಾತನ ಬೈಕ್‌ಗೆ ದಾಖಲೆ ಪತ್ರಗಳಲ್ಲಿ ಎಂದು ಪೊಲೀಸ್‌ ಅಧಿಕಾರಿ ದಂಡ ವಿಧಿಸಿದರು. ಇದಕ್ಕೆ ಪ್ರತಿಯಾಗಿ ಇದೇ ಲೈನ್‌ಮ್ಯಾನ್‌, ಪೊಲೀಸ್‌ ಠಾಣೆಗೆ ಮೀಟರ್‌ ಸಂಪರ್ಕವಿಲ್ಲ ಎಂದು ಪವರ್‌ ಕಟ್‌ ಮಾಡಿ ಸುದ್ದಿಯಾಗಿದ್ದಾರೆ.

ಹರ್ದಾಸ್‌ಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಕುರಿತು ತನಿಖೆಗೆ ವಿದ್ಯುತ್‌ ಇಲಾಖೆ ಆದೇಶ ನೀಡಿದೆ.

ಹರ್ದಾಸ್‌ಪುರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸ್‌ ಅಧಿಕಾರಿ ಮೋದಿ ಸಿಂಗ್‌ ವಾಹನ ತಪಾಸಣೆ ಮಾಡುತ್ತಿದ್ದರು. ಆಗ ಅದೇ ದಾರಿಯಲ್ಲಿ ಲೈನ್‌ಮ್ಯಾನ್‌ ಭಗವಾನ್‌ ಸ್ವರೂಪ್ ಬೈಕ್‌ ಚಲಾಯಿಸಿಕೊಂಡು ಬಂದಿದ್ದರು. ಅವರ ಬೈಕ್‌ ಅನ್ನು ತಡೆದ ಮೋದಿ ಸಿಂಗ್‌, ಅಗತ್ಯ ದಾಖಲೆಗಳನ್ನು ತೋರಿಸಲು ಹೇಳಿದ್ದರು. ಈಗ ಇಲ್ಲ, ಮನೆಗೆ ಹೋಗಿ ತಂದು ತೋರಿಸುವೆ ಎಂದು ಭಗವಾನ್‌ ಮನವಿ ಮಾಡಿದ್ದರು.

ಆದರೆ, ಭಗವಾನ್‌ ಅವರ ಮನವಿಯನ್ನು ತಿರಸ್ಕರಿಸಿದ ಮೋದಿ ಸಿಂಗ್‌, 500 ರೂಪಾಯಿ ದಂಡ ಪಾವತಿಸುವಂತೆ ಚಲನ್‌ ನೀಡಿದ್ದರು. ಇದರಿಂದ ನೊಂದ ಭಗವಾನ್‌, ತನ್ನ ಸಹೋದ್ಯೋಗಿಗಳಿಗೆ ಕರೆ ಮಾಡಿ ವಿವರ ನೀಡಿದ್ದ. ಅಲ್ಲದೆ, ಪೊಲೀಸ್‌ ಠಾಣೆಯ ಪವರ್‌ ಕಟ್‌ ಮಾಡುವಂತೆ ಕೇಳಿಕೊಂಡಿದ್ದ.

ಶನಿವಾರ ರಾತ್ರಿ ವಿದ್ಯುತ್‌ ಇಲಾಖೆ ಸಿಬ್ಬಂದಿ ಹರ್ದಾಸ್‌ಪುರ ಪೊಲೀಸ್‌ ಠಾಣೆಯ ಪವರ್‌ ಕಟ್‌ ಮಾಡಿದ್ದರು. ಏಕೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಕೇಳಿದಾಗ ಭಗವಾನ್‌ ಹೆಸರು ಪ್ರಸ್ತಾಪವಾಗಿದೆ. ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಆತ, ಪೊಲೀಸ್‌ ಠಾಣೆಯಲ್ಲಿ ವಿದ್ಯುತ್‌ ಮೀಟರ್‌ ಇರಲಿಲ್ಲ. ಹೀಗಾಗಿ ಅದು ಅಕ್ರಮ ವಿದ್ಯುತ್‌ ಸಂಪರ್ಕ ಎಂದು ಹೇಳಿದ್ದಾನೆ.

ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಷ್ಯಾದಲ್ಲಿ ಪ್ರವೇಶ ನೀಡಿಕೆ

0

ರಷ್ಯಾ-ಉಕ್ರೇನ್ ನಡುವಿನ ಸಂಘರ್ಷದಿಂದ ಅರ್ಧದಲ್ಲೇ ಓದು ಬಿಟ್ಟು ಸ್ಥಳಾಂತರವಾದ ಭಾರತೀಯ ವಿದ್ಯಾರ್ಥಿಗಳಿಗೆ ರಷ್ಯಾದಲ್ಲಿ ಅಡ್ಮಿಷನ್​ ನೀಡಲು ನಿರ್ಧರಿಸಲಾಗಿದೆ.

ವಿದ್ಯಾರ್ಥಿಗಳು ತಮ್ಮ ಹಿಂದಿನ ಶೈಕ್ಷಣಿಕ ವರ್ಷದಿಂದ ವಂಚಿತರಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ರಷ್ಯಾದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ನೀಡಲಾಗುವುದು ಎಂದು ನವದೆಹಲಿಯಲ್ಲಿರುವ ರಷ್ಯಾದ ರಾಯಭಾರಿ ಕಚೇರಿಯ ಉಪ ಮುಖ್ಯಸ್ಥ ರೋಮನ್ ಬಾಬುಶ್ಕಿನ್ ತಿಳಿಸಿದರು.

ರಷ್ಯಾದ ಒಕ್ಕೂಟದ ಗೌರವ ರಾಯಭಾರಿ ಮತ್ತು ತಿರುವನಂತಪುರಂನಲ್ಲಿರುವ ರಷ್ಯನ್ ಹೌಸ್‌ನ ನಿರ್ದೇಶಕ ರತೀಶ್ ಸಿ.ನಾಯರ್ ಮಾತನಾಡಿ, ಉಕ್ರೇನ್​​ನಲ್ಲಿ ಭಾರತೀಯ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವನ್ನು ಹೊಂದಿದ್ದರೆ, ಅದನ್ನು ರಷ್ಯಾದ ವಿಶ್ವವಿದ್ಯಾಲಯಗಳಲ್ಲಿ ಪಡೆಯಲು ಸಾಧ್ಯತೆಯಿದೆ ಎಂದು ತಿಳಿಸಿದರು.

ಫೆಬ್ರುವರಿಯಿಂದಲೂ ಉಕ್ರೇನ್ ಮತ್ತು ರಷ್ಯಾ ಯುದ್ಧ ನಡೆಯುತ್ತಿದೆ. ಇದರಿಂದ ಉಕ್ರೇನ್​ನಲ್ಲಿ ಶಿಕ್ಷಣ ಪಡೆಯುತ್ತಿದ್ದ ಭಾರತದ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸಿ ತವರಿಗೆ ಮರಳಿದ್ದಾರೆ. ಈ ವಿದ್ಯಾರ್ಥಿಗಳ ಭವಿಷ್ಯದ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಭಾರತೀಯ ವಿದ್ಯಾರ್ಥಿಗಳಿಗೆ ರಷ್ಯಾದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ನೀಡಲಾಗುವುದು. ರಷ್ಯಾದಲ್ಲಿ ವಿದ್ಯಾರ್ಥಿಗಳು ಈ ಹಿಂದಿನ ವರ್ಷ ಬಿಟ್ಟುಹೋದ ಕೋರ್ಸ್‌ಗಳನ್ನು ಮುಂದುವರಿಸಬಹುದು ಎಂದು ಹೇಳಿದರು.

ಉಕ್ರೇನ್‌ನಲ್ಲಿ ಪಾವತಿಸುವ ಶುಲ್ಕಕ್ಕಿಂತ ರಷ್ಯಾದಲ್ಲಿ ಅಧಿಕವಾಗಿರುತ್ತದೆ ಎಂಬ ಸುಳಿವು ಕೂಡ ನೀಡಿದರು.
ಕೇರಳದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಗಳು ಮತ್ತು ಇತರ ಶೈಕ್ಷಣಿಕ ದಾಖಲೆಗಳೊಂದಿಗೆ ತಿರುವನಂತಪುರಂನಲ್ಲಿರುವ ರಷ್ಯನ್ ಹೌಸ್​ಗೆ ಭೇಟಿ ಕೊಡಬಹುದು. ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಇಚ್ಛಿಸುವ ರಷ್ಯಾದ ವಿಶ್ವವಿದ್ಯಾಲಯಗಳಿಗೆ ದಾಖಲಾತಿಗಳನ್ನು ರವಾನಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.ಭಾರತೀಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಅವರ ಸಾವಿಗೆ ರಷ್ಯ ಕಾರಣವಾದ ಸುದ್ದಿಯನ್ನ ಇಲ್ಲಿ ಸ್ಮರಿಸಬಹುದಾಗಿದೆ.

ನವೀನ್ ಜಿಂದಾಲ್ ಹೆಸರಿನ ಪ್ರಸ್ತಾಪದ ಬಗ್ಗೆ ಜಿಂದಾಲ್ ಕಂಪೆನಿ ಸ್ಪಷ್ಟೀಕರಣ

0

ಪ್ರವಾದಿ ಮಹಮ್ಮದರ ಅವಹೇಳನಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ನವೀನ್‌ ಕುಮಾರ್‌ ಜಿಂದಾಲ್‌ ಅವರಿಗೂ ಜಿಂದಾಲ್‌ ಸಂಸ್ಥೆಯ ಅಧ್ಯಕ್ಷ ನವೀನ್‌ ಜಿಂದಾಲ್‌ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಜಿಂದಾಲ್‌ ಸಮೂಹ ಸಂಸ್ಥೆ ಸ್ಪಷ್ಟಪಡಿಸಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಜಿಂದಾಲ್‌ ಸಂಸ್ಥೆ, ‘ನವೀನ್ ಕುಮಾರ್ ಜಿಂದಾಲ್ ಹೆಸರಿನ ವ್ಯಕ್ತಿಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳಿಗೂ, ನಮ್ಮ ಸಂಸ್ಥೆಯ ಅಧ್ಯಕ್ಷರಾದ ನವೀನ್ ಜಿಂದಾಲ್‌ಗೂ ಯಾವುದೇ ರೀತಿಯಲ್ಲೂ ಸಂಬಂಧಿಸಿಲ್ಲ. ವರದಿ ಮಾಡುವಾಗ ನಮ್ಮ ಅಧ್ಯಕ್ಷರ ಚಿತ್ರಗಳನ್ನು ತಪ್ಪಾಗಿ ಬಳಸದಂತೆ ನಾವು ಮಾಧ್ಯಮಗಳಿಗೆ ಮನವಿ ಮಾಡುತ್ತೇವೆ. ಹಾಗೆ ಬಳಸಿದರೆ ಅದು ಗುರುತು ಪತ್ತೆಯಲ್ಲಿನ ಪ್ರಮಾದವಾಗಲಿದೆ ಎಂದು ತಿಳಿಸಿದೆ.

ಪ್ರವಾದಿ ಅವಹೇಳನ ಖಂಡಿಸಿ ಅರಬ್ ರಾಷ್ಟ್ರಗಳಿಂದ ಮತ್ತು ಟ್ವಿಟರ್‌ನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಜೆಪಿ ಈ ಕ್ರಮ ಕೈಗೊಂಡಿತ್ತು.

ಪ್ರವಾದಿ ಮಹಮ್ಮದ್ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ದೆಹಲಿ ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್‌ ಕುಮಾರ್‌ ಜಿಂದಾಲ್‌ ಅವರನ್ನು ಬಿಜೆಪಿ ಉಚ್ಚಾಟನೆ ಮಾಡಿತ್ತು.

ಗಡಿರೇಖೆಯಲ್ಲಿ ಉದ್ವಿಗ್ನತೆ: ಭಾರತದ ಮೇಲೆ ಗೂಬೆ ಕೂರಿಸಿದ ಚೀನಾ

0

ಭಾರತ ಮತ್ತು ಚೀನ ನಡುವಿನ ನೈಜ ಗಡಿ ರೇಖೆಯಲ್ಲಿ ಗಡಿಯಲ್ಲಿ ಆಗಾಗ ಉಂಟಾಗುತ್ತಿರುವ ಶಾಂತಿ ಭಂಗದ ಪ್ರಕರಣಗಳಿಗೆ, ಅಲ್ಲಿ ಎದ್ದಿರುವ ಉದ್ವಿಗ್ನತೆಗೆ ಭಾರತವೇ ಕಾರಣ ಎಂದು ಚೀನದ ವಿದೇಶಾಂಗ ಸಚಿವ ವೀ ಫೆಂಘೆ ಆರೋಪಿಸಿದ್ದಾರೆ.

ಸಿಂಗಾಪುರದಲ್ಲಿ ನಡೆದ ಶಾಂಗ್ರಿ ಲಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ಘರ್ಷಣೆಗೆ ಪ್ರಚೋದನೆ ನೀಡಿದ್ದೇ ಭಾರತ ಎಂಬುದು ನಮಗೆ ತಿಳಿದುಬಂದಿದೆ. ಗಡಿಯಲ್ಲಿ ಭಾರತ ಹೆಚ್ಚೆಚ್ಚು ಶಸ್ತ್ರಾಸ್ತ್ರಗಳನ್ನು ಜಮಾವಣೆ ಮಾಡಿದ್ದಲ್ಲದೆ, ಹೆಚ್ಚುವರಿ ಯೋಧರನ್ನು ಚೀನ ಗಡಿಯ ಕಡೆಗೆ ರವಾನಿಸಿದೆ. ಇಂಥ ಘಟನೆಗಳು ಘರ್ಷಣೆಗೆ ಪ್ರೇರಣೆ ನೀಡುತ್ತವೆ” ಎಂದಿದ್ದಾರೆ.
ಎಲ್‌ಎಸಿಯಲ್ಲಿ ಚೀನ ಸೈನಿಕರಿಂದ ಶಾಂತಿ ಭಂಗವಾಗುವ ನಿಟ್ಟಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಭಾರತವೇ ನೇರ ಹೊಣೆ.
ಆಗಾಗ ಅಲ್ಲಿ ಆಗಿರುವ ಗಲಭೆಗಳಿಗೆ ಭಾರತವೇ ಕಾರಣ ಎಂದರು.

ಸಂವಾದದಲ್ಲಿ ಹಾಜರಿದ್ದ ಅಮೆರಿಕದ ಚಿಂತಕರ ಚಾವಡಿಯ ಸದಸ್ಯರಾದ ಡಾ. ತನ್ವಿ ಮದನ್‌, “ಎಲ್‌ಎಸಿಯಲ್ಲಿ 2 ವರ್ಷಗಳ ಹಿಂದೆ ಚೀನ ಸೈನಿಕರು ಶಾಂತಿ ಉಲ್ಲಂಘಿಸಿದ್ದರು. ಈಗಲೂ ಗಡಿಯಲ್ಲಿ ಅನಗತ್ಯವಾಗಿ ಚೀನ ತನ್ನ ಸೈನಿಕರನ್ನು ಹೆಚ್ಚುವರಿ ಸಂಖ್ಯೆಯಲ್ಲಿ ಜಮಾಯಿಸಿದೆ.

ಇದಕ್ಕೆ ಪ್ರತಿಯಾಗಿ ಭಾರತವೂ ತನ್ನ ಸೇನೆಯನ್ನು ಜಮಾವಣೆ ಮಾಡುವಂತಾಗಿದೆ. ಈ ಸಮಸ್ಯೆಯನ್ನು ಇತ್ಯರ್ಥಗೊಳಿಸುವಲ್ಲಿ ಚೀನ ಯಾವ ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆಯನ್ನು ಕೇಳಿದಾಗ, ವೆಯ್‌ ಮೇಲಿನಂತೆ ಉತ್ತರಿಸಿದ್ದಾರೆ.

ರಾಷ್ಟ್ರಪತಿ ಆಯ್ಕೆ ಬಗ್ಗೆ ಒಮ್ಮತ ಅಭ್ಯರ್ಥಿಗೆ ಬಿಜೆಪಿ ಪ್ರಯತ್ನ ಪ್ರಾರಂಭ

0

ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ವಿಪಕ್ಷಗಳ ಬೆನ್ನಲ್ಲೇ ಬಿಜೆಪಿ ಕೂಡ ಅಧಿಕೃತವಾಗಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಆದರೆ ಬಿಜೆಪಿ ಅಥವಾ ಎನ್‌ಡಿಎ ಕೂಟದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಬದಲು ಎಲ್ಲ ಪಕ್ಷಗಳಿಂದ ಒಮ್ಮತದ ಆಯ್ಕೆ ಮಾಡುವ ಇರಾದೆಯನ್ನು ಬಿಜೆಪಿ ವ್ಯಕ್ತಪಡಿಸಿದೆ.

ಇದಕ್ಕೆಂದೇ ಆಡಳಿತ ಹಾಗೂ ವಿರೋಧ ಪಕ್ಷಗಳ ಜತೆ ಮಾತುಕತೆ ನಡೆಸುವ ಹೊಣೆಗಾರಿಕೆಯನ್ನು ಪಕ್ಷಾಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಸಚಿವ ರಾಜನಾಥ ಸಿಂಗ್‌ ಅವರಿಗೆ ವಹಿಸಿದೆ.

ನಡ್ಡಾ ಹಾಗೂ ರಾಜನಾಥ್‌ ಅವರು ಎನ್‌ಡಿಎ, ಯುಪಿಎ ಅಂಗಪಕ್ಷಗಳು, ಇತರ ರಾಜಕೀಯ ಪಕ್ಷಗಳು ಹಾಗೂ ಸ್ವತಂತ್ರ ಸಂಸದರ ಜೊತೆಗೆ ಮಾತುಕತೆ ನಡೆಸಲಿದ್ದಾರೆ ಎಂದು ನಿನ್ನೆ ಭಾನುವಾರ ಸಂಜೆ ಬಿಜೆಪಿ ಪ್ರಕಟಣೆ ತಿಳಿಸಿದೆ.

2017ರಲ್ಲಿ ಮೊದಲು ರಾಮನಾಥ ಕೋವಿಂದ್‌ ಅವರನ್ನು ಅಧ್ಯಕ್ಷ ಹುದ್ದೆ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿತ್ತು ಹಾಗೂ ನಂತರ ವಿಪಕ್ಷಗಳಿಗೆ ಅವರನ್ನು ಬೆಂಬಲಿಸುವಂತೆ ಕೋರಿತ್ತು. ಆದರೆ ತಮ್ಮ ಜತೆ ಸಮಾಲೋಚಿಸದೇ ಕೋವಿಂದ್‌ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿ ಕೊನೇ ಕ್ಷಣದಲ್ಲಿ ಮಾತುಕತೆಗೆ ಕರೆದಿದ್ದಕ್ಕೆ ಬಿಜೆಪಿಯನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದವು. ಹೀಗಾಗಿ ಈಗ ಆರಂಭಿಕ ಹಂತದಲ್ಲೇ ಅಭ್ಯರ್ಥಿಯ ಬಗ್ಗೆ ಒಮ್ಮತ ಮೂಡಿಸಲು ಬಿಜೆಪಿ ಯತ್ನ ಆರಂಭಿಸಿದೆ.

ಈಗಾಗಲೇ ವಿಪಕ್ಷಗಳ ನೇತಾರರಾದ ಕಾಂಗ್ರೆಸ್‌ನ ಸೋನಿಯಾ ಗಾಂಧಿ ಹಾಗೂ ಟಿಎಂಸಿಯ ಮಮತಾ ಬ್ಯಾನರ್ಜಿ, ವಿಪಕ್ಷದ ಒಮ್ಮತದ ಅಭ್ಯರ್ಥಿ ಹೆಸರಿಸಲು ಪ್ರಕ್ರಿಯೆ ಆರಂಭಿಸಿದ್ದಾರೆ. ಸೋನಿಯಾ ದೂತರಾಗಿ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ವಿವಿಧ ವಿಪಕ್ಷಗಳ ಜತೆ ಮಾತುಕತೆ ಆರಂಭಿಸಿದ್ದಾರೆ. ಮಮತಾ ಕೂಡ ಒಂದು ಸುತ್ತಿನಲ್ಲಿ ಸೋನಿಯಾ ಜೊತೆ ಮಾತನಾಡಿದ್ದಾರೆ. ಜೂ.15ರಂದು ದೆಹಲಿಯಲ್ಲಿ ವಿಪಕ್ಷಗಳ ಸಭೆ ಆಯೋಜಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ರಾಮನಾಥ ಕೋವಿಂದ್‌ ಅವರು ಯುಪಿಎ ಅಭ್ಯರ್ಥಿ ಮೀರಾಕುಮಾರ್‌ರನ್ನು ಸೋಲಿಸಿದ್ದರು.

ರಾಜ್ಯದಲ್ಲಿ 7 ಡಿಜಿಟಲ್ ವಿವಿ ಸ್ಥಾಪನೆ ಗೆ ನಿರ್ಧಾರ – ಬೊಮ್ಮಾಯಿ

0

ರಾಜ್ಯ ಸರ್ಕಾರವು ರಾಜ್ಯದಾದ್ಯಂತ 7 ಡಿಜಿಟಲ್ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಈ ವಿಷಯದ ಕುರಿತು ಮಾತನಾಡಿದ ಬೊಮ್ಮಾಯಿ ಅವರು, ಕರ್ನಾಟಕದಲ್ಲಿ ನುರಿತ ಮಾನವ ಸಂಪನ್ಮೂಲದ ದೊಡ್ಡ ಸಮೂಹವಿದೆ.

ಇದನ್ನು ಬಳಸಿಕೊಂಡು, ಸರ್ಕಾರವು ಡಿಜಿಟಲ್ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುತ್ತದೆ. ಅಸ್ತಿತ್ವದಲ್ಲಿರುವ ಭೌತಿಕ ವಿಶ್ವವಿದ್ಯಾಲಯಗಳು ಆಡಳಿತಾತ್ಮಕ ಹೊರೆಯಿಂದ ತತ್ತರಿಸುತ್ತಿವೆ. ಅಲ್ಲಿ, ಶಿಕ್ಷಣವು ಹಿಮ್ಮುಖವಾಗಿದೆ. ಆದ್ದರಿಂದ, ಗುಣಮಟ್ಟದ ಶಿಕ್ಷಣದ ಮೇಲೆ ಗಮನ ಹರಿಸುವ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಶೀಘ್ರದಲ್ಲೇ ವೈದ್ಯಕೀಯ ಸಂಶೋಧನೆಯಲ್ಲಿ ಉತ್ಕೃಷ್ಟತಾ ಕೇಂದ್ರವನ್ನು ಹೊಂದಲಿದೆ. ರಾಜ್ಯ ಸರ್ಕಾರ ಕಳೆದ ಒಂದು ವರ್ಷದಲ್ಲಿ 7,000 ತರಗತಿ ಕೊಠಡಿಗಳನ್ನು ನಿರ್ಮಿಸಿದೆ. ಇದಲ್ಲದೆ, 6,000 ಸ್ಮಾರ್ಟ್ ತರಗತಿಗಳನ್ನು ನಿರ್ಮಿಸಲು ನಾನು ಆದೇಶ ಹೊರಡಿಸಿದ್ದೇನೆ. ಐಐಟಿ ಮಾದರಿಯಲ್ಲಿ 7 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಚಿಂತಾಜನಕ ಸ್ಥಿತಿಯಲ್ಲಿ ಪಾಕ್ ಮಾಜಿ ಅಧ್ಯಕ್ಷ ಮುಷ್ರಫ್

0

ಗಂಭೀರ ಅನಾರೋಗ್ಯದ ಕಾರಣದಿಂದಾಗಿ ಸಾಕಷ್ಟು ವರ್ಷಗಳಿಂದ ದುಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನುವ ಸುದ್ದಿ ವೈರಲ್ ಆಗಿವೆ.

ಗಂಭೀರ ಆರೋಗ್ಯ ಸಮಸ್ಯೆಗಳಿಂದಾಗಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ (ನಿವೃತ್ತ) ಪರ್ವೇಜ್ ಮುಷರಫ್ಅವರನ್ನು ದುಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈದ್ಯಕೀಯ ವರದಿಗಳ ಪ್ರಕಾರ, ಮುಷರಫ್ ಹೃದಯ ಮತ್ತು ರಕ್ತದೊತ್ತಡದ ಸಮಸ್ಯೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

2016 ರಿಂದಲೂ ವೈದ್ಯಕೀಯ ಚಿಕಿತ್ಸೆಯ ಕಾರಣದಿಂದಾಗಿ ಅವರು ದುಬೈನಲ್ಲಿ ವಾಸ ಮಾಡುತ್ತಿದ್ದರು. ಅಂದಿನಿಂದ ಅವರು ಸ್ವದೇಶವಾದ ಪಾಕಿಸ್ತಾನಕ್ಕೂ ಮರಳಿರಲಿಲ್ಲ. ಪಾಕಿಸ್ತಾನದಲ್ಲಿ ಪರ್ವೇಜ್ ಮುಷರಫ್ ವಿರುದ್ಧ ದೇಶದ್ರೋಹದ ಪ್ರಕರಣವೂ ದಾಖಲಾಗಿತ್ತು. ವಿಚಾರಣೆಗೆ ಸ್ವದೇಶಕ್ಕೆ ಆಗಮಿಸುವಂತೆ ಕೋರ್ಟ್ ಹಲವು ಬಾರಿ ನೋಟಿಸ್ ನೀಡಿತ್ತು.

ಪಾಕಿಸ್ತಾನದ ಮಾಜಿ ಅಧ್ಯಕ್ಷ ತೀವ್ರ ಅನಾರೋಗ್ಯದಿಂದ
ಮುಷ್ರಫ್ ದುಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಹಿತಿ; ಪರ್ವೇಜ್ ಮುಷರಫ್ ಅವರು ಅಮೈಲೋಯಿ ಡೊಸೀಸ್ (Amyloidosis) ಎಂಬ ಅಪರೂಪದ ಕಾಯಿಲೆಗೆ ತುತ್ತಾಗಿದ್ದಾರೆ. ಇದು ಪ್ರೋಟೀನ್ ಗಳ ಅಸಾಧಾರಣ ಬೆಳವಣಿಗೆಯಿಂದ ಜೀವಕೋಶದ ಕಾರ್ಯವಿಧಾನವನ್ನು ಬದಲಾಯಿಸುವ ಪ್ರಕ್ರಿಯೆ ಒಳಗೊಂಡಿದೆ. ಫೋಟ್ರೀಸ್ ಹಿರಾನಂದನ್‌ ಆಸ್ಪತ್ರೆಯ ವೈದ್ಯರಾದ ಡಾ. ಅಥುಲ್ ಇಂಗಲೆ‌ ಅವರು ಈ ಕಾಯಿಲೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಮುಷ್ರಫ್ ಅವರ ಕುಟುಂಬದ ಸದಸ್ಯರು ಟ್ವಿಟರ್ ನಲ್ಲಿ ತಿಳಿಸಿರುವಂತೆ ನಿಧನದ ಸುದ್ದಿ ಅಲ್ಲಗೆಳೆದಿದ್ದಾರೆ. ಮುಷ್ರಫ್ ಅವರು ವೆಂಟಿಲೇಟರ್ ನಲ್ಲಿ ಇಲ್ಲ. ಕಳೆದ ಮೂರು ವಾರಗಳಿಂದ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ. ನಿಧನದ ಬಗ್ಗೆ ಅಧಿಕೃತ ಹೇಳಿಕೆ ಬಂದಿಲ್ಲ.

ಭಾರತಕ್ಕೆ ಹಿಂದಿರುಗಿದ ಕೆಲವು ಪುರಾತನ ಕಲಾಕೃತಿಗಳು

0

ಭಾರತವು ವಾಸ್ತು ಶಿಲ್ಪದ ಕಲೆ ಬೀಡು. ಇಲ್ಲಿನ ಕಲೆ, ಶಿಲ್ಪಗಳಿಗೆ, ಪುರಾತನ ವಸ್ತುಗಳಿಗೆ ಹೆಸರುವಾಸಿಯಾಗಿದೆ. ಹಿಂದೆ ರಾಜರ ಆಳ್ವಿಕೆ ಕಾಲದಿಂದ ಹಿಡಿದು ಸ್ವಾತಂತ್ರ್ಯ ಪೂರ್ವದವರೆಗೂ ಭಾರತದ ಅನೇಕ ಪರಂಪರಾಗತ ವಸ್ತುಗಳು ವಿದೇಶಿಯರ ಕೈ ವಶವಾಗಿದ್ದವು.

ಇದರಲ್ಲಿ ಕೆಲವೊಂದನ್ನು ವಶಪಡಿಸಿಕೊಂಡರೆ, ಇನ್ನೂ ಕೆಲವು ಕಳುವಾಗಿ ಅವರ ಪಾಲಾಗಿದ್ದವು. ಸ್ವಾತಂತ್ರ್ಯದ ನಂತರವೂ ಪುರಾತನ ವಸ್ತುಗಳು ಭಾರತದಿಂದ ಕಾಣೆಯಾಗಿವೆ. ಇಂತರಹದ್ದಲ್ಲಿ ಪ್ರಮುಖವಾದದ್ದು ಕೋಹಿನೂರ್ ವಜ್ರ. ಇದು ಭಾರತಕ್ಕೆ ಸೇರಿದ್ದು ಎಂದು ಹೇಳಲಾಗುತ್ತದೆ. ಪ್ರಸ್ತುತ ಅದು ಬ್ರಿಟನ್ ನಲ್ಲಿದೆ.

ಕೆಲವು ಕಿಡಿಗೇಡಿಗಳು ದೇವಾಲಯದಲ್ಲಿ ಮೂರ್ತಿಗಳನ್ನು ಕದ್ದು ಮಾರಾಟ ಮಾಡಿರುವುದು ಕೂಡ ಇದೆ. ಇಂತಹ ಕೆಲವು ದೇವರ ವಿಗ್ರಹಗಳು ವಿದೇಶಕ್ಕೆ ರವಾನೆ ಕೂಡ ಆಗುತ್ತವೆ. ಆದ್ದರಿಂದ, ಹಳೆಯ ಅನೇಕ ವಸ್ತುಗಳು ವಿದೇಶದ ನೆಲದಲ್ಲಿ ಇಂದಿಗೂ ಇವೆ ಎಂದು ಹೇಳಬಹುದು. ಈ ನಿಮಿತ್ತ ಭಾರತ ಸರ್ಕಾರವು ಅವುಗಳನ್ನು ತಾಯ್ನಾಡಿಗೆ ಮರಳಿ ತರುವ ಕೆಲಸವನ್ನು ಈವರೆಗೂ ನಡೆಸುತ್ತಲೇ ಇದೆ. ಕಳೆದ ವಾರವಷ್ಟೇ ತಮಿಳುನಾಡು ಮೂಲದ ಹಲವಾರು ದೇವರ ಮೂರ್ತಿಗಳನ್ನು ಕೇಂದ್ರ ವಿದೇಶದಿಂದ ಹಿಂಪಡೆದಿದೆ.

ದ್ವಾರಪಾಲ,ನಟರಾಜ,ಕಂಕಲಮೂರ್ತಿ, ನಂದಿಕೇಶ್ವರ,ನಾಲ್ಕು ತೋಳುಗಳ ವಿಷ್ಣು, ಪಾರ್ವತಿ ದೇವಿ,ನಿಂತಿರುವ ಮಗು ಸಂಬಂಧರ್ ಹೀಗೆ ಮುಂತಾದ ವಿಗ್ರಹಗಳು ಕಳುವು ಆಗಿತ್ತು. ಈಗ ಭಾರತಕ್ಕೆ ಇವುಗಳು ಹಿಂದಿರುಗಿವೆ.