Sunday, March 8, 2026
Sunday, March 8, 2026
Home Blog Page 1537

ಜೂನ್ 16 ರಂದು ಕುವೆಂಪು ವಿವಿ ಘಟಿಕೋತ್ಸವ

0

ಕುವೆಂಪು ವಿಶ್ವವಿದ್ಯಾಲಯವು ಜೂನ್ 16ರಂದು ಏರ್ಪಡಿಸಿರುವ 31 ಮತ್ತು 32ನೇ ಘಟಿಕೋತ್ಸವದಲ್ಲಿ ಸಾರ್ವಜನಿಕ ಆಡಳಿತದಲ್ಲಿ ಅಪಾರ ಸೇವೆ ಸಲ್ಲಿಸಿರುವ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ. ಹೆಚ್. ಶಂಕರಮೂರ್ತಿ ಅವರು ಮತ್ತು ಇತರೆ ಐದು ಮಂದಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿದೆ.

ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗವು ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ವಿವಿಯ ಆಡಳಿತವು, ಎರಡು ಘಟಿಕೋತ್ಸವಗಳಿಂದ ಒಟ್ಟು ಆರು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿರುವ ವಿಷಯವನ್ನು ತಿಳಿಸಿದೆ. ಕೊರೊನಾ ಹಾವಳಿ ಹಾಗೂ ಅತಿಥಿಗಳ ಸಮಯ ಹೊಂದಾಣಿಕೆ ಸಾಧ್ಯವಾಗದ ಕಾರಣ ನೆನೆಗುದಿಗೆ ಬಿದ್ದಿದ್ದ ವಿವಿಯ ಎರಡು ಶೈಕ್ಷಣಿಕ ಘಟಿಕೋತ್ಸವಗಳನ್ನು ಪ್ರಸ್ತುತ ಜೂನ್ 16ರಂದು ಒಂದೇ ದಿನ ನಡೆಸಲು ವಿಶ್ವವಿದ್ಯಾಲಯವು ಮುಂದಾಗಿದೆ. 2019-20 ಮತ್ತು 2020-21ನೇ ಸಾಲಿನ ಘಟಿಕೋತ್ಸವಗಳನ್ನು ರಾಜ್ಯಪಾಲರ ಅನುಮತಿ ಮೇರೆಗೆ ಒಂದೇ ದಿನ ಆಯೋಜಿಸಲು ಸಿದ್ಧತೆ ಕೈಗೊಂಡಿದೆ.

31ನೇ ಘಟಿಕೋತ್ಸವದ ಭಾಗವಾಗಿ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ. ಹೆಚ್. ಶಂಕರಮೂರ್ತಿ, ಶಿಕ್ಷಣತಜ್ಞೆ ಗೀತಾ ನಾರಾಯಣನ್ ಹಾಗೂ ಯೋಗ ಗುರು ಭ. ಮ. ಶ್ರೀಕಂಠ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನಿಸಲಾಗುತ್ತಿದೆ. 32ನೇ ಘಟಿಕೋತ್ಸವದ ಭಾಗವಾಗಿ ಶಿಕ್ಷಣತಜ್ಞ, ಕುಲಪತಿ ಪ್ರೊ. ಟಿ. ವಿ. ಕಟ್ಟಿಮನಿ, ಅಂಧ ಕ್ರಿಕೆಟಿಗ ಮಹಾಂತೇಶ್ ಜಿ. ಕಿವಡಸಣ್ಣವರ್, ಯೋಗಗುರು ಬಾ. ಸು. ಅರವಿಂದ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.

ಘಟಿಕೋತ್ಸವ ಕಾರ್ಯಕ್ರಮಕ್ಕೆ ಕುಲಾಧಿಪತಿ ಮತ್ತು ರಾಜ್ಯ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಸಹಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಆಗಮಿಸಿಲಿದ್ದಾರೆ. ಎರಡೂ ಘಟಿಕೋತ್ಸವಗಳ ಮುಖ್ಯಭಾಷಣವನ್ನು ಮೈಸೂರಿನ ಭಾರತೀಯ ಆಹಾರ ತಾಂತ್ರಿಕ ಸಂಶೋಧನಾಲಯದ ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಅವರು ಮಾಡಲಿದ್ದಾರೆ.

31ನೇ ಘಟಿಕೋತ್ಸವದಲ್ಲಿ ವಿವಿಧ ರ‍್ಯಾಂಕ್ ಹಾಗು ಪದವಿ ಪಡೆಯುವವರ ಮಾಹಿತಿ: 2019-20ನೇ ಸಾಲಿನ ಘಟಿಕೋತ್ಸವದಲ್ಲಿ 61 ಪುರುಷರು ಹಾಗೂ 30 ಮಹಿಳೆಯರು ಸೇರಿ ಒಟ್ಟು 9194 ಅಭ್ಯರ್ಥಿಗಳು ಪಿಹೆಚ್.ಡಿ. ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಈ ಘಟಿಕೋತ್ಸವದಲ್ಲಿ 10214 ಪುರುಷರು ಹಾಗೂ 15221 ಮಹಿಳೆಯರು ಸೇರಿ ಒಟ್ಟು 25435ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ.
ಸದರಿ ಘಟಿಕೋತ್ಸವದಲ್ಲಿ 127 ಸ್ವರ್ಣಪದಕಗಳು ಇದ್ದು, ಅವುಗಳನ್ನು 20 ಪುರುಷರು ಹಾಗೂ 51 ಮಹಿಳೆಯರು ಸೇರಿ ಒಟ್ಟು 71 ವಿದ್ಯಾರ್ಥಿಗಳು ಹಂಚಿಕೊಂಡಿರುತ್ತಾರೆ. 17 ನಗದು ಬಹುಮಾನಗಳು ಇದ್ದು, ಎಲ್ಲವುಗಳನ್ನು 13 ಮಹಿಳಾ ವಿದ್ಯಾರ್ಥಿಗಳು ಹಂಚಿಕೊಂಡಿರುತ್ತಾರೆ.

ಕನ್ನಡ ಭಾರತಿ ವಿಭಾಗದ ಪ್ರಣೀತಾ ಎಂ. ಟಿ. ಅವರು ಒಟ್ಟು 8 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನಗಳನ್ನು ಪಡೆದಿರುತ್ತಾರೆ. ವಿವಿಯ ಎಂ. ಬಿ. ಎ. ಯ ಯತೀಶ್ ಕೆ. ಯು. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ಅನುಷಾ ಎಸ್., ಎನ್. ಇ. ಎಸ್. ಸಂಸ್ಥೆಯ ಬಿ. ಕಾಂ. ಕೋರ್ಸ್ ನ ನಿವ್ಯಾ ಕೆ. ನಾಯಕ್ ತಲಾ ಐದು ಸ್ವರ್ಣಪದಕಗಳನ್ನು ಪಡೆದಿದ್ದಾರೆ.

ದೂರಶಿಕ್ಷಣ ನಿರ್ದೇಶನಾಲಯದಡಿ ಕಲಾ, ವಾಣಿಜ್ಯ, ಕಾನೂನು, ವಿಜ್ಞಾನ ನಿಖಾಯಗಳಡಿ 12923 ವಿದ್ಯಾರ್ಥಿಗಳು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

32ನೇ ಘಟಿಕೋತ್ಸವದಲ್ಲಿ ವಿವಿಧ ರ‍್ಯಾಂಕ್ ಹಾಗು ಪದವಿ ಪಡೆಯುವವರ ಮಾಹಿತಿ: 2020-21ನೇ ಸಾಲಿನ ಘಟಿಕೋತ್ಸವದಲ್ಲಿ 82 ಪುರುಷರು ಹಾಗೂ 47 ಮಹಿಳೆಯರು ಸೇರಿ ಒಟ್ಟು 1294ಅಭ್ಯರ್ಥಿಗಳು ಪಿಹೆಚ್.ಡಿ. ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಈ ಘಟಿಕೋತ್ಸವದಲ್ಲಿ 8324 ಪುರುಷರು ಹಾಗೂ 1231 ಮಹಿಳೆಯರು ಸೇರಿ ಒಟ್ಟು 20638 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ.

ಸದರಿ ಘಟಿಕೋತ್ಸವದಲ್ಲಿ 132 ಸ್ವರ್ಣಪದಕಗಳು ಇದ್ದು, ಅವುಗಳನ್ನು 14 ಪುರುಷರು ಹಾಗೂ 52 ಮಹಿಳೆಯರು ಸೇರಿ ಒಟ್ಟು 66 ವಿದ್ಯಾರ್ಥಿಗಳು ಹಂಚಿಕೊಂಡಿರುತ್ತಾರೆ. 17 ನಗದು ಬಹುಮಾನಗಳು ಇದ್ದು, 13 ಅನ್ನು ಮಹಿಳಾ ವಿದ್ಯಾರ್ಥಿಗಳು ಹಾಗೂ ಎರಡನ್ನು ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 15 ವಿದ್ಯಾರ್ಥಿಗಳು ಹಂಚಿಕೊಂಡಿರುತ್ತಾರೆ.

ಕನ್ನಡ ಭಾರತಿ ವಿಭಾಗದ ದಿವ್ಯಾ ಹೆಚ್. ಎನ್. ಒಟ್ಟು 11 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನಗಳನ್ನು ಪಡೆದಿರುತ್ತಾರೆ. ಎ. ಬಿ. ಎ. ವಿಭಾಗದ ಪ್ರಿಯಾಂಕ ಟಿ. ಆರು ಸ್ವರ್ಣಪದಕಗಳನ್ನು ಜಯಿಸಿದ್ದಾರೆ. ಎಂ. ಎ. ಸಮಾಜಶಾಸ್ರ್ತ ವಿಭಾಗದ ತನೂಷಾ ಸಿ., ರಸಾಯನಶಾಸ್ತ್ರ ವಿಭಾಗದ ಸಂಯುಕ್ತ ಪೈ ಎಂ. ಹಾಗೂ ಎಟಿಎನ್‌ಸಿಸಿಯ ಬಿ. ಕಾಂ. ಕೋರ್ಸ್ ನ ಮೇಘನ ತಲಾ ಐದು ಚಿನ್ನದ ಪದಕಗಳನ್ನು ಗಳಿಸಿಕೊಂಡಿದ್ದಾರೆ.

ದೂರಶಿಕ್ಷಣ ನಿರ್ದೇಶನಾಲಯದಡಿ ಕಲಾ, ವಾಣಿಜ್ಯ, ಕಾನೂನು, ವಿಜ್ಞಾನ ನಿಕಾಯಗಳಡಿ 7188 ವಿದ್ಯಾರ್ಥಿಗಳು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

777 ಚಾರ್ಲಿ:‌ಮೊದಲ ಮೂರುದಿನದ ಗಳಿಕೆ ₹23.50 ಕೋಟಿ

0

ನಟ ರಕ್ಷಿತ್ ಅಭಿನಯದ 777 ಚಾರ್ಲಿ ಸಿನಿಮಾ ರಿಲೀಸ್ ಆಗಿದೆ. ಜೂನ್ 10ರಂದು ತೆರೆಕಂಡು ಈ ಸಿನಿಮಾ ಕಮರ್ಷಿಯಲ್ ಸಿನಿಮಾ ಮತ್ತು ಸದಭಿರುಚಿ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದೆ.

ಚಿತ್ರದಲ್ಲಿ ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯವನ್ನು ಉತ್ತಮವಾಗಿ ಚಿತ್ರಿಸಲಾಗಿದೆ.

ರಕ್ಷಿತ್ ಶೆಟ್ಟಿ ಜೊತೆಗೆ ಚಾರ್ಲಿ ನಾಯಿ ಕೂಡ ಸದ್ಯ ಹೀರೊ ಆಗಿ ಮಿಂಚುತ್ತಿದೆ.

777 ಚಾರ್ಲಿ ಚಿತ್ರ ಇನ್ನು ಕಲೆಕ್ಷನ್ ಕೂಡ ಉತ್ತಮ ರೀತಿಯಲ್ಲಿ ಇದೆ.

ಮೊದಲ ದಿನ 6 ಕೋಟಿ ರೂ.ಗೂ ಅಧಿಕ ಕಂಡ 777 ಚಾರ್ಲಿ ವಾರಾಂತ್ಯದಲ್ಲಿ ಈ ಕಲೆಕ್ಷನ್ ಮೊತ್ತವನ್ನು 3 ಪಟ್ಟು ಹೆಚ್ಚಿಸಿಕೊಂಡಿದೆ.

ಮೊದಲ ದಿನ ಅಷ್ಟು ದೊಡ್ಡ ಮಟ್ಟದ ಓಪನಿಂಗ್ ಪಡೆದು ಕೊಳ್ಳದ 777 ಚಾರ್ಲಿ ವಿಶ್ವದಾದ್ಯಂತ 6.7 ಕೋಟಿ ರೂ. ಗಳಿಸಿ ಸುಮ್ಮನಾಗಿತ್ತು. ಆದರೆ ವಾರಾಂತ್ಯದಲ್ಲಿ ಚಿತ್ರ ಉತ್ತಮ ಗಳಿಕೆ ಕಂಡಿದೆ. ಅದರಲ್ಲೂ ಶನಿವಾರದಂದು ಹೆಚ್ಚು ಗಳಿಕೆ ಕಂಡಿದೆ. ಭಾನುವಾರದ ಒಟ್ಟಾರೆ ಕಲೆಕ್ಷನ್ 9.50 ಕೋಟಿ ರೂ. ಎನ್ನಲಾಗಿದೆ. ಮೂಲಗಳ ಪ್ರಕಾರ ಭಾನುವಾರದ ಗಳಿಕೆ ಕೊಂಚ ಹೆಚ್ಚಾಗಿದೆ. ಆದರೆ ನಿರೀಕ್ಷೆಯ ಮಟ್ಟಕ್ಕೆ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡು ಬಂದಿಲ್ಲ.

777 ಚಾರ್ಲಿ’ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ. ಅಂದೆ ಈ ಚಿತ್ರ ಭಾರತದಾದ್ಯಂತ ಹಲವು ಭಾಷೆಗಳಲ್ಲಿ ತೆರೆಕಂಡಿದೆ. ಚಿತ್ರತಂಡದ ನಿರೀಕ್ಷೆಯಂತೆ ದಿನದಿಂದ ದಿನಕ್ಕೆ ಚಿತ್ರದ ಗಳಿಕೆ ಹೆಚ್ಚಾಗುತ್ತಲೆ ಇದೆ. ವಾರಾಂತ್ಯದಲ್ಲಿ ಸಿನಿಮಾದ ಗಳಿಕೆ ಹೆಚ್ಚಾಗಿದ್ದು. ಒಟ್ಟಾರೆ ಮೊದಲ ವೀಕೆಂಡ್ ಸೇರಿ, ಮೊದಲ ಮೂರು ದಿನದ ಗಳಿಗೆ 23.50 ಕೋಟಿ ರೂ.ಎನ್ನುವ ಅಂಕಿ ಅಂಶ ಹೊರ ಬಿದ್ದಿದೆ.

ದೇಶದ ಸಂಪೂರ್ಣ ಅಭಿವೃದ್ಧಿಯು ಬಾಲ ಕಾರ್ಮಿಕ ಪದ್ಧತಿ ತೊಲಗಿದಾಗ ಸಾಧ್ಯ

0

ಬಾಲಕಾರ್ಮಿಕ ಪದ್ದತಿಯಂತಹ ಅನಿಷ್ಟ ಪದ್ದತಿಗಳು ನಿರ್ಮೂಲನೆಯಾದಾಗ ಮಾತ್ರ ಯಾವುದೇ ಒಂದು ದೇಶ ಸಂಪೂರ್ಣವಾಗಿ ಅಭಿವೃದ್ದಿ ಹೊಂದಿದೆ ಎಂದು ಹೇಳಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ ಅಭಿಪ್ರಾಯಪಟ್ಟರು.
ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ವಕೀಲರ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಬಿ.ಹೆಚ್.ರಸ್ತೆ(ಸೈನ್ಸ್ ಮೈದಾನ) ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದ ಅನೇಕ ಕಡೆ ಬಾಲಕಾರ್ಮಿಕ ಪದ್ದತಿ ಜಾರಿಯಲ್ಲಿದೆ. ಆದ್ದರಿಂದಲೇ ವಿಶ್ವದಾದ್ಯಂತ ಜೂ.12 ರಂದು ಬಾಲಕಾರ್ಮಿಕ ಪದ್ದತಿ ವಿರೋಧಿ ದಿನ ಆಚರಿಸುವ ಮೂಲಕ ಈ ಪದ್ದತಿಯನ್ನು ಹೋಗಲಾಡಿಸಲು ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲ ದೇಶದಲ್ಲಿ ಇಂತಹ ಅನಿಷ್ಟ ಪದ್ದತಿ ತೊಲಗಿದಾಗ ಮಾತ್ರ ಅಭಿವೃದ್ದಿ ಸಾಧ್ಯ. ಪ್ರತಿ ಮಗುವಿಗೆ ಶಿಕ್ಷಣದ, ಉತ್ತಮವಾಗಿ ಜೀವಿಸುವ ಹಕ್ಕಿದೆ. ಈ ಪದ್ದತಿ ನಿವಾರಣೆಯಾಗಬೇಕಾದರೆ ಎಲ್ಲ ಮಕ್ಕಳಿಗೆ ಶಿಕ್ಷಣ ಅತ್ಯವಶ್ಯ. ಮಕ್ಕಳು ಉನ್ನತವಾಗಿ ಬೆಳೆಯಲು ಸಹ ಶಿಕ್ಷಣ ಬೇಕು ಎಂದರು.

ವಿದ್ಯಾರ್ಥಿಗಳು, ಅಧಿಕಾರಿ/ನೌಕರರು ಅಥವಾ ಸಾರ್ವಜನಿಕರಿಗೆ ಬಾಲಕಾರ್ಮಿಕತೆ ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರ ಬಳಿ ತಿಳಿಸಬೇಕು. ಬಾಲಕಾರ್ಮಿಕತೆ, ಬಾಲ್ಯವಿವಾಹ ಸೇರಿದಂತೆ ಮಕ್ಕಳ ಯಾವುದೇ ರೀತಿಯ ಸಮಸ್ಯೆಗಳಿಗೆ ಸ್ಪಂದಿಸಲು ಮಕ್ಕಳ ಸಹಾಯವಾಣಿ, ವಿವಿಧ ಇಲಾಖೆಗಳು, ಕಾನೂನು ಸೇವಾ ಪ್ರಾಧಿಕಾರಗಳು ಇವೆ. ಶಾಲೆಗಳಲ್ಲಿ ಲೀಗಲ್ ಕ್ಲಬ್ ಇದ್ದು ಮಕ್ಕಳು ಕರೆ ಮಾಡಿದಲ್ಲಿ ತಕ್ಷಣಕ್ಕೆ ಸ್ಪಂದಿಸಲಾಗುವುದು ಎಂದರು.

ನಾವು ಮಾತ್ರ ಚೆನ್ನಾಗಿದ್ದರೆ ಸಾಕು ಎನ್ನುವ ಮನೋಭಾವ ಹೋಗಬೇಕು. ಬಾಲ್ಯ ವಿವಾಹ, ಬಾಲಕಾರ್ಮಿಕತೆಯಿಂದ ಮಕ್ಕಳನ್ನು ಹೊರತರುವುದು ನಮ್ಮೆಲ್ಲರ ಕರ್ತವ್ಯ. ಸಮಾಜವನ್ನು ಸ್ವಚ್ಚಗೊಳಿಸಲುವಲ್ಲಿ ನಮ್ಮ ಅಲ್ಪ ಸೇವೆಯೂ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಇಂತಹ ಅನಿಷ್ಟ ಪದ್ದತಿಗಳ ನಿರ್ಮೂಲನೆ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಕರೆ ನೀಡಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ರೇಖಾ.ಜಿ.ಎಂ ಮಾತನಾಡಿ, 18 ವರ್ಷದೊಳಗಿನ ಎಲ್ಲರೂ ಮಕ್ಕಳು. ಮಕ್ಕಳಿಂದ ದುಡಿಸಿಕೊಳ್ಳುವುದು ಮತ್ತು ಪೋಷಕರು ಇದನ್ನು ಬೆಂಬಲಿಸುವುದು ಕೂಡ ಶಿಕ್ಷಾರ್ಹ ಅಪರಾಧ.

ಯಾವುದೇ ಮಕ್ಕಳಿಂದ ದುಡಿಸಿಕೊಳ್ಳುತ್ತಿರುವುದು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಕರೆ ಮಾಡಿ ತಿಳಿಸಬೇಕು. ಯಾವುದೇ ಮಗು ಸತತವಾಗಿ ಮೂರು ದಿನಗಳ ಕಾಲ ಶಾಲೆ ಬಿಟ್ಟಿದೆ ಎಂದರೆ ಅಂತಹ ಮಗುವನ್ನು ಶಾಲೆ ಬಿಟ್ಟ ಮಗು ಎಂದು ಪರಿಗಣಿಸಿ ವಿಚಾರಿಸಬೇಕು. ಶಾಲೆ ಬಿಟ್ಟ ಮಕ್ಕಳ ಅಪರಣವಾಗಿರಬಹುದು, ಬಾಲ್ಯವಿವಾಹವಾಗಿರಬಹುದು, ಬಾಲಕಾರ್ಮಿಕತೆಯಲ್ಲಿ ತೊಡಗಿರಬಹುದು ಹೀಗೆ ಅನೇಕ ಸಮಸ್ಯೆಗಳನ್ನು ಮಗು ಎದುರಿಸುತ್ತಿರಬಹುದು. ಆದ ಕಾರಣ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಗಮನಕ್ಕೆ ಬಂದ ಎಲ್ಲರೂ ಈ ಬಗ್ಗೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಮಕ್ಕಳು ಮೊಬೈಲ್ ಬಳಕೆ ವೇಳೆ ಅತೀ ಜಾಗರೂಕರಾಗಿರಬೇಕು. ತಂದೆ ತಾಯಿಯವರ ಗೂಗಲ್ ಅಕೌಂಟ್‍ನಲ್ಲಿರುವ ಇಂತಹ ಮೊಬೈಲ್‍ನ್ನು ಮಕ್ಕಳು ಅಚಾತುರ್ಯವಾಗಿ ದುರ್ಬಳಕೆ ಮಾಡಿದಲ್ಲಿ ಪೋಷಕರು ಸೈಬರ್ ಪ್ರಕರಣ ಎದುರಿಸುವ ಸಾಧ್ಯತೆ ಕೂಡ ಇದೆ. ಆದ್ದರಿಂದ ಮೊಬೈಲ್‍ನ್ನು ಒಳ್ಳೆಯ ಉದ್ದೇಶಗಳಿಗೆ ಸದ್ಬಳಕೆ ಮಾಡಿಕೊಳ್ಳಬೇಕು. ಹಾಗೂ ಹೆಣ್ಣುಮಕ್ಕಳು ಹದಿವಯಸ್ಸಿನಲ್ಲಿ ಯಾವುದೇ ಉಡುಗೊರೆ ಮತ್ತೊಂದು ಆಮಿಷಕ್ಕೆ, ಆಕರ್ಷಣೆಗೆ ಗುರಿಯಾಗದೇ ಎಚ್ಚರಿಕೆಯಿಂದ ಇದ್ದು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಕೊಡಬೇಕೆಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡ ಕಾರ್ಮಿಕ ನಿರೀಕ್ಷಕ ಭೀಮೇಶ್.ಪಿ ಬಾಲಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986 ಹಾಗೂ ತಿದ್ದುಪಡಿ 2016 ರ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳಿಗೆ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಸಲಾಯಿತು.
ಜಿಲ್ಲಾ ಕಾರ್ಮಿಕಾಧಿಕಾರಿ ಸೀಬಿರಂಗಯ್ಯ ಸ್ವಾಗತಿಸಿದರು. ಜಿಲ್ಲಾ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ರಘುನಾಥ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೋಟೆ ಪೊಲೀಸ್ ಠಾಣೆ ಸಿಪಿಐ ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಗಂಗೂಬಾಯಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕಮಲಮ್ಮ, ದೈಹಿಕ ಶಿಕ್ಷಣಾಧಿಕಾರಿ ನಾಗರಾಜ್, ಶಿಕ್ಷಣ ಇಲಾಖೆಯ ವೆಂಕಟೇಶ್ ಇತರೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

ಕಾನೂನು ಅರಿವು ಜಾಥಾ: ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಅಂಗವಾಗಿ ಜೂ.13 ರ ಬೆಳಿಗ್ಗೆ ಶಿವಪ್ಪನಾಯಕ ಸರ್ಕಲ್‍ನಲ್ಲಿ ಏರ್ಪಡಿಸಲಾಗಿದ್ದ ಸ್ತಬ್ದ ಚಿತ್ರ ವಾಹನ ಹಾಗೂ ಕರಪತ್ರ ಮೂಲಕ ಕಾನೂನು ಅರಿವು ಜಾಥಾ ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮುಸ್ತಫಾ ಹುಸೇನ್ ಎಸ್.ಎ. ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಆರ್. ಸೆಲ್ವಮಣಿ ಚಾಲನೆ ನೀಡಿದರು. ಈ ವೇಳೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪಲ್ಲವಿ.ಬಿ.ಆರ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ, ಜಿಲ್ಲಾ ಕಾರ್ಮಿಕ ಅಧಿಕಾರಿ ಸೀಬಿರಂಗಯ್ಯ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ರಾಹುಲ್ ಗಾಂಧಿ ಇಡಿ ವಿಚಾರಣೆ: ಕಾಂಗ್ರೆಸ್ ಪ್ರತಿಭಟನೆ

0

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇಡಿ ವಿಚಾರಣೆ ನಡೆಸುತ್ತಿದ್ದು, ಇದನ್ನು ವಿರೋಧಿ ದೆಹಲಿಯಲ್ಲಿ ಕಾಂಗ್ರೆಸ್‌ ನಾಯಕರು ಪಾದಯಾತ್ರೆ ಮೂಲಕ ಪ್ರತಿಭಟಿಸುತ್ತಿದ್ದಾರೆ.

ಸಧ್ಯ ಇಡಿ ಕಚೇರಿ ಬಳಿ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್‌ ನಾಯಕರನ್ನ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ರಾಹುಲ್‌ ಗಾಂಧಿ ವಿಚಾರಣೆಯನ್ನ ವಿರೋಧಿಸಿ ಪ್ರತಿಭಟಿಸುತ್ತಿದ್ದ ಇಡಿ ಕಚೇರಿ ಬಳಿಯಿದ್ದ ಕೆ.ಸಿ ವೇಣುಗೋಪಾಲ್‌, ಡಿ.ಕೆ ಸುರೇಶ್‌ರನ್ನ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಇನ್ನು ಪೊಲೀಸರ ನೂಕಾಟದ ವೇಳೆ ವೇಣುಗೋಪಾಲ್‌ ಅಸ್ವಸ್ಥರಾಗಿರುವ ಮಾಹಿತಿ ಲಭ್ಯವಾಗಿದೆ.

ಭಾರತದ ಚೀನಾ ಶಾಂತಿ ಸ್ಥಾಪನೆಗೆ ಒಟ್ಟಾಗಿ ಕೆಲಸ ಮಾಡುತ್ತಿವೆ- ಫೆಂಗೆ

0

ನೆರೆ ಹೊರೆಯ ದೇಶಗಳಾಗಿರುವ ಚೀನಾ ಮತ್ತು ಭಾರತ ಉತ್ತಮ ಬಾಂಧವ್ಯ ಕಾಪಾಡಿಕೊಂಡರೆ ಎರಡೂ ದೇಶಗಳ ಹಿತಾಸಕ್ತಿಯನ್ನು ಸಾಧಿಸಬಹುದು ಎಂದು ಚೀನಾ ರಕ್ಷಣಾ ಸಚಿವ ಜನರಲ್‌ ವೀಯೀ ಫೆಂಗೆ ಹೇಳಿದ್ದಾರೆ.

ಭಾರತ ಜೊತೆಗಿನ ಗಡಿ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿರುವ ಫೆಂಗೆ, ಲೈನ್‌ ಆಫ್‌ ಆಕ್ಚುವಲ್‌ ಕಂಟ್ರೋಲ್ ನಲ್ಲಿ ಶಾಂತಿ ಸ್ಥಾಪನೆಗೆ ಎರಡು ದೇಶಗಳು ಒಟ್ಟಾಗಿ ಕೆಲಸ ಮಾಡುತ್ತಿವೆ.
ಇದಕ್ಕಾಗಿ ಭಾರತದ ಜೊತೆ ಕಮಾಂಡರ್‌ ಹಂತದಲ್ಲಿ 15 ಸುತ್ತಿನ ಮಾತುಕತೆ ನಡೆದಿದೆ ಎಂದಿದ್ದಾರೆ.

ಮಿಸ್ಟರ್ ಕಬಿನಿ ಭೋಗೇಶ್ವರನ ಸಾವಿಗೆ ಪ್ರಾಣಿಪ್ರಿಯರ ಕಂಬನಿ

0

ಏಷ್ಯಾದಲ್ಲೇ ಅತಿ ಉದ್ದವಾದ ದಂತ ಹೊಂದಿದ್ದ ಮಿಸ್ಟರ್ ಕಬಿನಿ ಖ್ಯಾತಿಯ ಭೋಗೇಶ್ವರ (76) ಮೃತಪಟ್ಟಿದೆ.

ಕಬಿನಿಯ ಹಿನೀರಿನ ಗುಂಡ್ರೆ ಅರಣ್ಯ ಪ್ರದೇಶದಲ್ಲಿ ಆನೆಯ ಕಳೆಬರ ಪತ್ತೆಯಾಗಿದೆ. ಆನೆಗೆ ವಯೋಸಹಜ ಸಾವು ಎಂದು ತಿಳಿದು ಬಂದಿದೆ. ಕಬಿನಿಗೆ ಆಗಮಿಸುವ ಪ್ರವಾಸಿಗರ ಮುಖ್ಯ ಆಕರ್ಷಣೆಯಾಗಿದ್ದ ಭೋಗೇಶ್ವರನನ್ನು ನೋಡಲು ಜನರು ಎಲ್ಲೆಡೆಯಿಂದ ಆಗಮಿಸುತ್ತಿದ್ದರು.

ಸುಮಾರು 4ಅಡಿ ಉದ್ದವಾದ ನೀಳ ದಂತ, ಸುಂದರ ನಡಿಗೆ ಮೂಲಕ ಪ್ರಾಣಿಪ್ರಿಯರ ಅಚ್ಚುಮೆಚ್ಚಾಗಿದ್ದ ಭೋಗೇಶ್ವರ ದಿನಕ್ಕೆ ಆಹಾರ ಅರಿಸುತ್ತಾ 60 ರಿಂದ 70 ಕಿ.ಮೀ ದೂರ ಕ್ರಮಿಸುತ್ತಿತ್ತು ಎಂದು ತಿಳಿದು ಬಂದಿದೆ.

ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ಕಳೆಯುತ್ತಿರಲಿಲ್ಲ ಎಂದು ವರದಿಯಾಗಿದೆ.

ಭೋಗೇಶ್ವರನ ಸಾವಿಗೆ ಪ್ರಾಣಿ ಪ್ರಿಯರು ಸಂತಾಪ ಸೂಚಿಸಿದ್ದಾರೆ. ಆ ದೇವರು ಸದ್ಗತಿ ಕರುಣಿಸಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರ್ಥಿಸಿದ್ದಾರೆ.

ವಸತಿ ರಹಿತರಿಗೆಂದೇ 15 ಲಕ್ಷ ಮನೆಗಳ ನಿರ್ಮಾಣ- ಬೊಮ್ಮಾಯಿ

0

ರಾಜ್ಯದ ವಸತಿ ರಹಿತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಹಿ ಸುದ್ದಿ ನೀಡಿದ್ದಾರೆ. 15 ಲಕ್ಷ ಮನೆಗಳ ನಿರ್ಮಾಣ ಮಾಡುವ ಗುರಿ ಸರ್ಕಾರಕ್ಕೆ ಇದೆ ಎಂದು ಹೇಳಿದ್ದಾರೆ.

ಮನೆಗಳ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಇವತ್ತು ದೊಡ್ಡ ಬದಲಾವಣೆ, ಪರಿವರ್ತನೆಯ ದಿನ.

ಬೆಂಗಳೂರು ಅಭಿವೃದ್ಧಿಯ ವೇಗ ಪಡೆದುಕೊಂಡಿದೆ. ಬೆಂಗಳೂರಿನತ್ತ ಜಗತ್ತು ನೋಡ್ತಿದೆ. 15 ಲಕ್ಷ ಮನೆಗಳ ನಿರ್ಮಾಣ ಮಾಡುವ ಗುರಿ ಸರ್ಕಾರಕ್ಕಿದೆ. 1 ಲಕ್ಷ ಮನೆಗಳನ್ನ ನಗರ ಪ್ರದೇಶದಲ್ಲಿ ಮಾಡಲಿದ್ದೇವೆ. ಯಾರಿಗೆ ಲೋನ್‌ ಸಿಕ್ಕಿಲ್ವೋ ಅಂಥವರ ಪರವಾಗಿ 500 ಕೋಟಿ ಮೊತ್ತ ಬ್ಯಾಂಕ್ ಗ್ಯಾರೆಂಟಿಗೆ ಕೊಟ್ಟು ನಿರ್ಮಾಣ ಹಂತದ ಮನೆಗಳನ್ನ ಪೂರ್ಣಗೊಳಿಸುತ್ತೇವೆ ಎಂದರು. ಇನ್ನು ಎಸ್‌ಸಿ, ಎಸ್ಟಿ ಮನೆಗಳ ನಿರ್ಮಾಣಕ್ಕೆ 2 ಲಕ್ಷ ನೀಡುತ್ತೇವೆ’ ಎಂದು ಸಿಎಂ ಹೇಳಿದರು.

ವಿಶೇಷಚೇತನರಿಗೆಂದೇ ವಿಶೇಷ ಬಿಎಂಟಿಸಿ ಬಸ್ ಸೇವೆ

0

ಬೆಂಗಳೂರಿನಲ್ಲಿ ವಿಶೇಷಚೇತನರು ಇನ್ನು ಮುಂದೆ ಬಿಎಂಟಿಸಿ ಬಸ್ ಗಳಲ್ಲಿ ಯಾರ ಸಹಾಯವಿಲ್ಲದೇ ಓಡಾಡಬಹುದಾಗಿದೆ. ಈ ಸಂಬಂಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಿಶೇಷ ಚೇತನರಿಗೆ ಪ್ರಯಾಣವನ್ನು ಸುಲಭವಾಗಿಸಲು ಗಾಲಿಕುರ್ಚಿಗಳನ್ನು ಮೇಲೆತ್ತಬಹುದಾದ ಸೌಲಭ್ಯವುಳ್ಳ 300 ಎಸಿ ರಹಿತ ಎಲೆಕ್ಟ್ರಿಕ್ ಬಸ್‌ಗಳ ಸೌಲಭ್ಯ ನೀಡಲು ನಿರ್ಧರಿಸಿದೆ.

ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳ ವೇಗದ ಅಳವಡಿಕೆ ಮತ್ತು ಉತ್ಪಾದನೆ 2ನೇ ಯೋಜನೆಯಡಿ ಬಿಎಂಟಿಸಿ ಉದ್ದೇಶದಂತೆ ನಾನ್ ಎಸಿ 300 ಬಸ್ ಪೈಕಿ ಒಂದಷ್ಟು ಬಸ್ ಗಳನ್ನು ಈಗಾಗಲೇ ಖರೀದಿಸಿದೆ

ಬಸ್‌ಗಳು ಬೆಂಗಳೂರು ನಗರದ ರಸ್ತೆಗೆ ಇಳಿಯಲಿವೆ. ಈ ಬಸ್‌ಗಳಲ್ಲಿನ ವ್ಹೀಲ್ ಚೇರ್ ಲಿಫ್ಟಿಂಗ್ ವ್ಯವಸ್ಥೆಯ ನಿರ್ವಹಣೆಯನ್ನು ಬಿಎಂಟಿಸಿ ಸಿಬ್ಬಂದಿಯೇ ನಿರ್ವಹಸಲಿದ್ದಾರೆ ಎಂದು ಸಂಸ್ಥೆ ಮೂಲಗಳು ತಿಳಿಸಿದೆ.

ಗಲಭೆಯ ಮಾಸ್ಟರ್ ಮೈಂಡ್ ಮನೆಗೆ ಬುಲ್ಡೋಜರ್ ಲಗ್ಗೆ

0

ಪ್ರವಾದಿ ಮಹಮ್ಮದ್‌ರ ವಿರುದ್ಧ ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದಿದ್ದ ವ್ಯಾಪಕ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಜಾವೇದ್‌ ಅಹ್ಮದ್‌ ಅಕ್ರಮ ಮನೆ ತೆರವು ಕಾರ್ಯಾಚರಣೆಯನ್ನು ಅಲ್ಲಿನ ಸ್ಥಳಿಯಾಡಳಿತ ಬುಲ್ಡೊಜರ್ ಮೂಲಕ ನಡೆಸಿದೆ.

ಈ ವೇಳೆ ಗಲಭೆಯ ಮಾಸ್ಟರ್‌ಮೈಂಡ್ ಎಂದು ಹೇಳಲಾದ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾದ ನಾಯಕ ಜಾವೇದ್ ಅಹಮ್ಮದ್ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳು ಸಿಕ್ಕಿವೆ ಎಂದು ಪ್ರಯಾಗರಾಜ್ ಪೊಲೀಸರು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಪ್ರವಾದಿ ಮಹಮ್ಮದ್ ಅವರ ಬಗ್ಗೆ ಬಿಜೆಪಿಯ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಅವರ ಹೇಳಿಕೆ ಖಂಡಿಸಿ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ವ್ಯಾ‍ಪಕ ಹಿಂಸಾಚಾರ ನಡೆದಿತ್ತು.

‘ಪ್ರಯಾಗರಾಜ್ ಗಲಭೆಯಲ್ಲಿ ಪೊಲೀಸರತ್ತ ಕಲ್ಲೆಸೆಯಲು ಕಿಡಿಗೇಡಿಗಳು ಮಕ್ಕಳನ್ನೂ ಕೂಡ ಬಳಸಿಕೊಂಡಿದ್ದಾರೆ. ಅರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು, ಅವರ ಆಸ್ತಿ-ಪಾಸ್ತಿ ಜಪ್ತಿ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅಜಯ್ ಕುಮಾರ್ ತಿಳಿಸಿದ್ದಾರೆ.

ಒಂದು 12 ಬೋರ್ ಪಿಸ್ತೂಲ್ ಹಾಗೂ ಮತ್ತೊಂದು 315 ಬೋರ್ ಪಿಸ್ತೂಲ್ ಸಿಕ್ಕಿದೆ ಎಂದು ಎಸ್‌ಪಿ ಅಜಯ್ ಕುಮಾರ್ ತಿಳಿಸಿದ್ದಾರೆ. ಅಕ್ರಮ ಅಪಾರ್ಟ್‌ಮೆಂಟ್‌ ತೆರವಿನ ಬಗ್ಗೆ ಜಾವೇದ್ ಅವರಿಗೆ ನೋಟಿಸ್ ಕೊಟ್ಟಿದ್ದರೂ ಸಹ ಅವರು ಉತ್ತರ ನೀಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಮ್ಮ ಮುಂದಿನ ರಾಷ್ಡ್ರಪತಿ ಯಾರು?

0

ರಾಜ್ಯಸಭಾ ಚುನಾವಣೆ ಮುಗಿದಿದೆ. ಈಗ ಮುಂದಿನ ಕುತೂಹಲ ರಾಷ್ಟ್ರಪತಿ ಚುನಾವಣೆ. ದೇಶದ ಪ್ರಥಮ ಪ್ರಜೆಯ ಆಯ್ಕೆಗೆ ಜುಲೈ 18 ಅನ್ನು ನಿಗದಿ ಮಾಡಲಾಗಿದೆ.

ಜುಲೈ 21ಕ್ಕೆ ಮತ ಎಣೆಕೆ ನಡೆದು, ದೇಶದ ಹೊಸ ರಾಷ್ಟ್ರಪತಿ ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗಲಿದೆ.
ಹಾಗಾದರೆ, ರಾಷ್ಟ್ರಪತಿ ಯಾರಾಗ್ತಾರೆ? ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನಂತರ ದೇಶದ ಪ್ರಥಮ ಪ್ರಜೆಯ ಗೌರವ ಪಡೆಯಲಿರುವವರು ಯಾರು?
ಹೊಸ ರಾಷ್ಟ್ರಪತಿ ಯಾರು ಎನ್ನುವುದನ್ನು ನಿರ್ಧರಿಸಿರುವ
ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಯಾರ ಹೆಸರನ್ನು ಫೈನಲ್ ಮಾಡುತ್ತಾರೋ ಅವರೇ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಲಿದ್ದಾರೆ.

ಆಡಳಿತದಲ್ಲಿರುವ ಕಾರಣ ಎನ್‌ಡಿಎ ಅಭ್ಯರ್ಥಿಯೇ ಚುನಾವಣೆ ಗೆದ್ದು ರಾಷ್ಟ್ರಪತಿಯಾಗುವುದು ಖಚಿತವಾಗಿದೆ. ಹಾಗಾದರೆ ಮೋದಿಯವರ ಆಯ್ಕೆ ಯಾರು? ರಾಷ್ಟ್ರಪತಿ ಚುನಾವಣೆ ಸುತ್ತ ಎದ್ದು ಕುಳಿತಿರುವ ಈ ಎಲ್ಲಾ ಕುತೂಹಲದ ಪ್ರಶ್ನೆಗಳಿಗೆ ಸಿಗಬೇಕಿದೆ.