Sunday, March 8, 2026
Sunday, March 8, 2026
Home Blog Page 1536

ಬಿಬಿಎಂಪಿ ವ್ಯಾಪ್ತಿ ಶಾಲೆಗಳಿಗೆ ಕೋವಿಡ್ ಮಾರ್ಗಸೂಚಿ

0

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ 02 ಶಾಲೆಗಳಲ್ಲಿ ಮಕ್ಕಳಿಗೆ ಕೋವಿಡ್-19 ಸೋಂಕು ಪ್ರಕರಣಗಳು ಕಂಡು ಬಂದಿರುವುದರಿಂದ ಯಾವುದೇ ರೀತಿಯ ಊಹಾಪೋಹಗಳಿಗೆ ಭಯ ಪಡದೆ ಶಾಲೆಯ ಆಡಳಿತ ಮಂಡಳಿ ಮತ್ತು ಮಕ್ಕಳ ಪೋಷಕರು / ಸಾರ್ವಜನಿಕರು ಪಾಲಿಕೆ ಸೂಚಿಸುವ ಈ ಕೆಳಕಂಡ ಕ್ರಮಗಳನ್ನು ಪಾಲಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳಲಾಗಿದೆ.

ಈ ಕುರಿತಂತೆ ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ(ಸಾರ್ವಜನಿಕ ಆರೋಗ್ಯ) ಡಾ. ಬಾಲಸುಂದರ್ ಮಾಹಿತಿ ಬಿಡುಗಡೆ ಮಾಡಿದ್ದಾರೆ.

ಈ ಕೆಳಕಂಡ ಕೋವಿಡ್ ಮಾರ್ಗಸೂಚಿ ಕ್ರಮಗಳನ್ನು, ಬಿಬಿಎಂಪಿ ವ್ಯಾಪ್ತಿಯಲ್ಲಿನ ಶಾಲಾ-ಕಾಲೇಜುಗಳು, ಪೋಷಕರು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸುವಂತೆ ವಿನಂತಿಸಿದ್ದಾರೆ.

ಸಂಸ್ಥೆಯ ಯಾವುದೇ ವಿದ್ಯಾರ್ಥಿಗಳು / ಸಿಬ್ಬಂದಿಗಳಲ್ಲಿ ಕೋವಿಡ್-19 ಖಾಯಿಲೆಯ ಯಾವುದೇ ರೀತಿಯ ಲಕ್ಷಣ ಕಂಡು ಬಂದಲ್ಲಿ ಅಂತಹವರಿಗೆ ತಕ್ಷಣವೇ ಕೋವಿಡ್-19 ಪರೀಕ್ಷೆ ನಡೆಸಿ, ನಂತರ ಫಲಿತಾಂಶ ಬರುವವರೆಗೂ ಪ್ರತ್ಯೇಕವಾಗಿ ಇರಿಸುವುದು.

ಸಂಸ್ಥೆಯ ಆವರಣದಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡಿರುವುದನ್ನು ಎಲ್ಲಾ ಸಮಯದಲ್ಲೂ ಖಚಿತಪಡಿಸಿಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡುವುದು ಇತ್ಯಾದಿ ಕೋವಿಡ್-19 ಖಾಯಿಲೆ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದು.

ವಿದ್ಯಾಸಂಸ್ಥೆಗಳು ಅನುಸರಿಸಬೇಕಾದ ಕ್ರಮಗಳು ಹೀಗಿವೆ.
ತಮ್ಮ ಸಂಸ್ಥೆಯ ದ್ವಾರದಲ್ಲಿ ಪ್ರತೀ ದಿನ ಬೆಳಿಗ್ಗೆ ಪ್ರಾರಂಭದ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ, ಭೋದಕೀಯ ಮತ್ತು ಭೋದಕೇತರ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡುವುದು.

ಸಂಸ್ಥೆಯ ಎಲ್ಲಾ ಅರ್ಹ ಭೋದಕೀಯ ಮತ್ತು ಭೋದಕೇತರ ಸಿಬ್ಬಂದಿಗಳು ಸಂಪೂರ್ಣವಾಗಿ ಕೋವಿಡ್-19 ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳುವುದು. ಲಸಿಕೆ ಪಡೆಯದ ಯಾವುದೇ ಅರ್ಹ ಸಿಬ್ಬಂದಿ ಇದ್ದಲ್ಲಿ, ಅವರಿಗೆ ಕೂಡಲೇ ಲಸಿಕೆ ಪಡೆಯುವಂತೆ ವ್ಯವಸ್ಥೆ ಮಾಡುವುದು.

ಸಂಸ್ಥೆಯ ಆವರಣದಲ್ಲಿ ಮುಖ್ಯ ಸ್ಥಳಗಳಲ್ಲಿ ಸ್ಯಾನಿಟೈಸರ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು.
ಸಂಸ್ಥೆಯ ಆವರಣದಲ್ಲಿ ಸ್ವಚ್ಛತೆ ಕಾಪಾಡುವುದು.

ಸಂಸ್ಥೆಯ ಎಲ್ಲಾ ಅರ್ಹ ವಿದ್ಯಾರ್ಥಿಗಳು ಸಂಪೂರ್ಣವಾಗಿ ಕೋವಿಡ್-19 ಲಸಿಕೆ ಪಡೆಯುವಂತೆ ಪ್ರೇರೇಪಿಸಿ, ಅಗತ್ಯ ಕ್ರಮ ಕೈಗೊಳ್ಳುವುದು.

ನೂಪುರ್ ಶರ್ಮಾ ಅವರನ್ನ ಕ್ಷಮಿಸಿ-ಸುಹೈಬ್ ಖ್ವಾಸ್ಮಿ

0

ಪ್ರವಾದಿ ಮುಹಮ್ಮದ್ ಪೈಗಂಬರ್ ಕುರಿತು ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ನಾಯಕಿ ನೂಪುರ್ ಶರ್ಮಾ ಅವರನ್ನು ಇಸ್ಲಾಂ ಧರ್ಮದ ಪ್ರಕಾರ ಕ್ಷಮಿಸಬೇಕು ಎಂದು ಜಮಾತ್ ಉಲೇಮಾ ಎ ಹಿಂದ್ ನ ಅಧ್ಯಕ್ಷ ಸುಹೈಬ್ ಖ್ವಾಸ್ಮಿ ತಿಳಿಸಿರುವುದಾಗಿ ವರದಿಯಿಂದ ತಿಳಿದು ಬಂದಿದೆ.

ನೂಪುರ್ ಶರ್ಮಾ ಹೇಳಿಕೆಯನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದನ್ನು ಮುಸ್ಲಿಂ ವಿದ್ವಾಂಸರ ಸಂಘಟನೆ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಶುಕ್ರವಾರದ ಪ್ರಾರ್ಥನೆಯ ಬಳಿಕ ನೂಪುರ್ ಹೇಳಿಕೆ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆದ ನಂತರ ಜಮಾತ್ ಉಲೇಮಾ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ಇಸ್ಲಾಂ ಧರ್ಮ ಹೇಳುವ ಪ್ರಕಾರ ನೂಪುರ್ ಶರ್ಮಾಳನ್ನು ಕ್ಷಮಿಸಬೇಕಾಗಿದೆ. ಅಷ್ಟೇ ಅಲ್ಲ ನೂಪುರ್ ಹೇಳಿಕೆ ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆ ನಡೆಸುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಜಮಾತ್ ಉಲೇಮಾದ ಖ್ವಾಸ್ಮಿ ತಿಳಿಸಿದ್ದಾರೆ.

ಮತ್ತೊಂದು ಕಡೆ, ನೂಪುರ್ ಶರ್ಮಾ ಅವರನ್ನು ವಜಾಗೊಳಿಸಿರುವ ಭಾರತೀಯ ಜನತಾ ಪಕ್ಷದ ನಿರ್ಧಾರವನ್ನು ಸ್ವಾಗತಿಸುವುದಾಗಿ ಜಮಾತ್ ಉಲೇಮಾ ಎ ಹಿಂದ್ ಈ ಸಂದರ್ಭದಲ್ಲಿ ತಿಳಿಸಿದೆ. ಭಾರತ ಕಾನೂನಿನ ತವರಾಗಿದೆ. ಈ ನಿಟ್ಟಿನಲ್ಲಿ ನಾವು ಕಾನೂನನ್ನು ಕೈಗತ್ತಿಕೊಳ್ಳಬಾರದು. ನಾವು ಬೀದಿಗಿಳಿದು, ನಿಯಮವನ್ನು ಉಲ್ಲಂಘಿಸಲು ಕಾನೂನು ಅವಕಾಶ ನೀಡುವುದಿಲ್ಲ ಎಂದು ಖ್ವಾಸ್ಮಿ ಅವರು ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.

ಪುರುಷ ಮತ್ತು ಮಹಿಳೆ ಒಟ್ಟಾಗಿ ಜೀವಿಸಿ ಅವರಿಗೆ ಜನಿಸಿದ ಮಗನಿಗೆ ಆಸ್ತಿಹಕ್ಕು

0

ಪುರುಷ ಮತ್ತು ಮಹಿಳೆ ಒಟ್ಟಿಗೆ ವಾಸಿಸುತ್ತಿದ್ದರೆ ಕಾನೂನು ಮದುವೆಯನ್ನು ಊಹಿಸುತ್ತದೆ. ಹೀಗಾಗಿ, ಅವರಿಗೆ ಜನಿಸಿದ ಮಗನಿಗೆ ಆಸ್ತಿ ಹಕ್ಕುಗಳನ್ನು ನಿರಾಕರಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ವಿವಾಹದ ಸಾಕ್ಷ್ಯಾಧಾರಗಳ ಕೊರತೆಯ ಸಂದರ್ಭದಲ್ಲಿ, ಒಟ್ಟಿಗೆ ಸಹಬಾಳ್ವೆ ನಡೆಸಿದ ಪುರುಷ ಮತ್ತು ಮಹಿಳೆಯ ‘ಅಕ್ರಮ’ ಮಗ ಪೂರ್ವಜರ ಆಸ್ತಿಯಲ್ಲಿ ಆಸ್ತಿ ಹಕ್ಕುಗಳಿಗೆ ಅರ್ಹನಲ್ಲ ಎಂದು ಕೇರಳ ಹೈಕೋರ್ಟ್‌ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

ಆದಾಗ್ಯೂ, ತೀರ್ಪುಗಳನ್ನು ಉಲ್ಲೇಖಿಸುತ್ತಾ, ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ವಿಕ್ರಮ್ ನಾಥ್ ಅವರ ಪೀಠವು ‘ಒಬ್ಬ ಪುರುಷ ಮತ್ತು ಮಹಿಳೆ ದೀರ್ಘಕಾಲದವರೆಗೆ ಪತಿ-ಪತ್ನಿಯಾಗಿ ಒಟ್ಟಿಗೆ ವಾಸಿಸುತ್ತಿದ್ದು, ನಿರಂತರವಾಗಿ ಸಹಬಾಳ್ವೆ ನಡೆಸಿದಾಗ ಕಾನೂನು ವಿವಾಹದ ಪರವಾಗಿ ಊಹೆ ಇರುತ್ತದೆ ಎಂಬುದು ಚೆನ್ನಾಗಿ ಇತ್ಯರ್ಥವಾಗಿದೆ. ಎವಿಡೆನ್ಸ್ ಆಕ್ಟ್‌ನ ಸೆಕ್ಷನ್ 114 ರ ಅಡಿಯಲ್ಲಿ ಅಂತಹ ಊಹೆಯನ್ನು ತರಬಹುದು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಪುರುಷ ಹಾಗೂ ಮಹಿಳೆಯ ನಡುವಿನ ಸುದೀರ್ಘ ಸಂಬಂಧದಲ್ಲಿ ಜನಿಸಿದ ಮಗನಿಗೆ ಪೂರ್ವಜರ ಆಸ್ತಿಯಲ್ಲಿ ವಾರಸುದಾರರಿಗೆ ಪಾಲು ನೀಡುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ಎರ್ನಾಕುಲಂನಲ್ಲಿರುವ ಕೇರಳದ ಹೈಕೋರ್ಟ್ 2009 ರ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ ಮೇಲೆ ಈ ತೀರ್ಪು ಬಂದಿದೆ.

ಅಕ್ರಮ ಸಂತಾನದ ಮೊದಲ ಕಕ್ಷಿದಾರರ ಸ್ಥಾನ, ಅವರ ವಾರಸುದಾರರು ಕಾಪರ್ಸೆನರಿ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅದನ್ನು ಬದಿಗಿಟ್ಟು, ಸುಪ್ರೀಂ ಕೋರ್ಟ್, ಪುರುಷ ಮತ್ತು ಮಹಿಳೆ ಪುರುಷ ಮತ್ತು ಹೆಂಡತಿಯಾಗಿ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಸಾಬೀತಾದರೆ, ಕಾನೂನುಬದ್ಧವಾದ ಮದುವೆಯ ಪರಿಣಾಮವಾಗಿ ಅವರು ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ಸಾಬೀತಾಗದ ಹೊರತು ಕಾನೂನು ಭಾವಿಸುತ್ತದೆ ಎಂದಿದೆ.

ಅಂತಹ ಊಹೆಯನ್ನು ಪುರಾವೆಗಳ ಕಾಯಿದೆಯಡಿಯೂ ಎಳೆಯಬಹುದು.

ಊಹೆಯನ್ನು ನಿರಾಕರಿಸಬಹುದು. ಹಾಗೂ ಅಂತಹ ವಿವಾಹವನ್ನು ವಿವಾದಿಸುವ ವ್ಯಕ್ತಿಯ ಮೇಲೆ ಭಾರೀ ಹೊರೆ ಇರುತ್ತದೆ ಎಂದು ಅದು ತಿಳಿಸಿದೆ.

ವಿಭಜನಾ ಮೊಕದ್ದಮೆಯಲ್ಲಿ, ನ್ಯಾಯ ವಿತರಣೆಯಲ್ಲಿ ವಿಳಂಬವನ್ನು ತಪ್ಪಿಸಲು ದೇಶದಾದ್ಯಂತ ಎಲ್ಲಾ ನ್ಯಾಯಾಲಯಗಳು ಆರಂಭಿಕ ತೀರ್ಪುಗಳ ಬಳಿಕ, ಅಂತಿಮ ತೀರ್ಪು ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ವಿಭಜನಾ ಮೊಕದ್ದಮೆಗಳನ್ನು ನಿರ್ಧರಿಸುವಾಗ ವಿಚಾರಣಾ ನ್ಯಾಯಾಲಯಗಳು, ವಿಭಜನೆಗೆ ಪಕ್ಷಗಳ ಹಕ್ಕುಗಳು ಅಥವಾ ಷೇರುಗಳನ್ನು ಘೋಷಿಸುವ ಪ್ರಾಥಮಿಕ ತೀರ್ಪನ್ನು ಮೊದಲು ಅಂಗೀಕರಿಸುತ್ತವೆ.

ವಿಶ್ವ ರಕ್ತದಾನಿಗಳ ದಿನಾಚರಣೆ

0

ಜಗತ್ತಿನ ಅತಿ ದೊಡ್ಡ ಸಂಶೋಧನೆಯೆಂದರೆ ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಹಲವಾರು ಜನರು ಸಾವಿನಿಂದ ಪಾರಾಗಿದ್ದಾರೆ. ತನ್ನ ರಕ್ತವನ್ನು ಇನ್ನೊಬ್ಬರ ಜೀವ ಉಳಿಸಲು ಪ್ರತಿಫಲಾಪೇಕ್ಷೆಯಿಲ್ಲದೆ ಸ್ವಯಂ ಪ್ರೇರಣೆಯಿಂದ ನೀಡುವುದು ‘ರಕ್ತದಾನ’

ಜೂನ್ 14 ನ್ನು ವಿಶ್ವದಾದ್ಯಂತ ರಕ್ತದಾನಿಗಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಪ್ರಥಮ ಬಾರಿಗೆ ರಕ್ತದ ಗುಂಪು ಕಂಡು ಹಿಡಿದ ಕಾರ್ಲ್ ಲ್ಯಾಂಡ್‍ಸ್ಟೇನರ್ ಎಂಬ ವಿಜ್ಞಾನಿಯ ಹುಟ್ಟುಹಬ್ಬದ ನೆನಪಿಗಾಗಿ 2004 ರಿಂದ ವಿಶ್ವ ಆರೋಗ್ಯ ಸಂಸ್ಥೆ ಈ ದಿನಾಚರಣೆ ಜಾರಿಗೆ ತಂದಿದೆ.

ಪ್ರಸಕ್ತ ಸಾಲಿನಲ್ಲಿ ‘ರಕ್ತದಾನ ಮಾಡುವುದು ಒಗ್ಗಟ್ಟಿನ ಪ್ರಕ್ರಿಯೆ, ಈ ಪ್ರಯತ್ನಕ್ಕೆ ಕೈ ಜೋಡಿಸಿ ಜೀವ ಉಳಿಸೋಣ’ ಎಂ ಘೋಷವಾಕ್ಯದೊಂದಿಗೆ ವಿಶ್ವ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ರಕ್ತಕ್ಕೆ ವರ್ಷವಿಡೀ ನಿರಂತರವಾಗಿ ಬೇಡಿಕೆ ಇರುತ್ತದೆ. ಏಕೆಂದರೆ ಅಪಘಾತಗಳು, ತುರ್ತು ಚಿಕಿತ್ಸೆ ಸಂದರ್ಭಗಳು ಬರುತ್ತಲೇ ಇರುತ್ತವೆ. ಜೊತೆಯಲ್ಲಿ ಕ್ಯಾನ್ಸರ್ ರೋಗಿಗಳು, ಗರ್ಭಿಣಿ ಸ್ತ್ರೀಯರು, ತಲಸ್ಸೀಮಿಯ, ಹಿಮೊಫೀಲಿಯ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲಂಬಿಸಿರುತ್ತಾರೆ.

ಒಮ್ಮೆ ದಾನಿಗಳಿಂದ ಶೇಖರಿಸಿದ ರಕ್ತ 35 ದಿನಗಳವರೆಗೆ ಮಾತ್ರ ತನ್ನ ಶಕ್ತಿಯನ್ನು ಉಳಿಸಿಕೊಂಡಿರುತ್ತದೆ. 35 ದಿನಗಳ ನಂತರ ಅದು ಉಪಯೋಗಕ್ಕೆ ಬರುವುದಿಲ್ಲ. ಆದ್ದರಿಂದ 18 ವಯಸ್ಸಿನಿಂದ 60 ವರ್ಷದ ಒಳಗಿನ ಪ್ರತಿಯೊಬ್ಬ ಆರೋಗ್ಯವಂತರು ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ನಿರಂತರವಾಗಿ ಅವಶ್ಯಕತೆ ಇರುವವರಿಗೆ ರಕ್ತ ನೀಡಿ ಜೀವ ಉಳಿಸಲು ಸಾಧ್ಯವಾಗುತ್ತದೆ. ರಕ್ತವನ್ನು ನೀಡಿ ಇನ್ನೊಬ್ಬರ ಜೀವವನ್ನು ಉಳಿಸುವುದರೊಂದಿಗೆ ತಮ್ಮ ದೇಹದಲ್ಲಿ ಇರುವ ರಕ್ತದ ಗುಂಪು ಯಾವುದು ಎಂದು ತಿಳಿದುಕೊಳ್ಳುವುದು ಅಷ್ಟೆ ಮುಖ್ಯವಾಗಿರುತ್ತದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 09 ರಕ್ತನಿಧಿ ಕೇಂದ್ರಗಳು(1 ಸರ್ಕಾರಿ ರಕ್ತನಿಧಿ ಕೇಂದ್ರ, 8 ಖಾಸಗಿ ರಕ್ತನಿಧಿಕೇಂದ್ರಗಳು) ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ 6 ರಕ್ತ ಸಂರಕ್ಷಣಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. 2021-22 ನೇ ಸಾಲಿನಲ್ಲಿ 31553 ರಕ್ತದ ಯುನಿಟ್‍ಗಳನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ 18853 ಯುನಿಟ್‍ಗಳನ್ನು ರಕ್ತ ನಿಧಿ ಕೇಂದ್ರಗಳಲ್ಲಿ ಸ್ವಯಂ ಪ್ರೇರಿತರಾಗಿ ನೀಡಿದ್ದು, 290 ಶಿಬಿರಗಳಿಂದ 10333 ಯುನಿಟ್‍ಗಳನ್ನು ಹಾಗೂ 2367 ಯುನಿಟ್‍ಗಳನ್ನು ಬದಲಿ ರಕ್ತದಾನದ ಮೂಲಕ ಸಂಗ್ರಹಿಸಲಾಗಿರುತ್ತದೆ. ಗ್ರಾ.ಪಂ ಗಳು, ಸಂಘ ಸಂಸ್ಥೆಗಳು, ರೆಡ್ ರಿಬ್ಬನ್ ಕ್ಲಬ್, ಎನ್‍ಎಸ್‍ಎಸ್ ಘಟಕಗಳು, ನೌಕರರ ಸಂಘಗಳು ಹಾಗೂ ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿಯೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ರಕ್ತದ ಮಹತ್ವ : ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಮನುಷ್ಯರ ದಾನದಿಂದ ಮಾತ್ರ ಇದನ್ನು ಪಡೆಯಬಹುದು. ರಕ್ತದಾನ ಮಾಡಿದ ಕೆಲವೇ ಕ್ಷಣದಲ್ಲಿ ದಾನಿಯ ದೇಹದಲ್ಲಿ ರಕ್ತದ ಉತ್ಪತ್ತಿ ಪ್ರಾರಂಭವಾಗಿ 24 ಗಂಟೆ ಒಳಗಾಗಿ ದಾನ ಮಾಡಿದ ಪ್ರಮಾಣದಲ್ಲಿ ರಕ್ತ ದೇಹದಲ್ಲಿ ಪುನರುತ್ಪತ್ತಿಯಾಗುತ್ತದೆ. ರಕ್ತದಾನ ಮಾಡಲು ಮತ್ತು ಸುಧಾರಿಸಿಕೊಳ್ಳಲು ಒಟ್ಟು ಸೇರಿ 20 ನಿಮಿಷಕ್ಕೂ ಹೆಚ್ಚಿನ ಸಮಯ ಬೇಕಾಗಿಲ್ಲ.

ಯಾರು ರಕ್ತದಾನ ಮಾಡಬಹುದು: ಹೆಣ್ಣು ಗಂಡು ಬೇಧವಿಲ್ಲದೆ 18 ರಿಂದ 60 ವರ್ಷದ ಒಳಗಿನ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಪುರುಷರು 3 ತಿಂಗಳಿಗೊಮ್ಮೆ, ಮಹಿಳೆಯರು 4 ತಿಂಗಳಿಗೊಮ್ಮ ರಕ್ತದಾನ ಮಾಡಬಹುದು, ದಾನಿಯ ದೇಹದ ತೂಕ 45 ಕೆ.ಜಿ.ಗಿಂತ ಹೆಚ್ಚಿಗೆ ಇರಬೇಕು ಹಾಗೂ ಹಿಮೋಗ್ಲೊಬಿನ್ ಅಂಶ 12.5 ಗ್ರಾಂ ಗಿಂತ ಹೆಚ್ಚಿರಬೇಕು.

ಅನಾರೋಗ್ಯಪೀಡಿತರು, ಮಾದಕ ವ್ಯಸನಿಗಳು, ಗರ್ಭಿಣಿಯರು, ಎದೆಹಾಲುಣಿಸುವವರು, ಲಸಿಕೆ ಪಡೆದ 4 ವಾರದೊಳಗಿನವರು, ಮಲೇರಿಯಾ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವವರು, ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾದ 06 ತಿಂಗಳ ಒಳಗಿನವರು, ಕಾಮಾಲೆ, ಹೆಚ್‍ಐವಿ, ಕ್ಯಾನ್ಸರ್, ಹೃದಯದ ಕಾಯಿಲೆ, ಇತರೆ ರೋಗಗಳಿಗೀಡಾದವರು ರಕ್ತದಾನ ಮಾಡಬಾರದು.

ಮಲೇರಿಯಾ, ಲೈಂಗಿಕ ಸಂಪರ್ಕ ರೋಗಗಳು, ಹೆಪಟೈಟಿಸ್ ಬಿ, ಸಿ ಸೋಂಕಿನಿಂದಾಗುವ ಕಾಮಾಲೆ, ಹೆಚ್‍ಐವಿ ಸೋಂಕು ಮತ್ತು ಏಡ್ಸ್ ಬಗ್ಗೆ ರಕ್ತವನ್ನು ಯವುದೇ ವ್ಯಕ್ತಿಗೆ ನೀಡುವ ಮೊದಲು ಪಡೆದ ರಕ್ತವನ್ನು ಈ ರೋಗಗಳಿಂದ ಮುಕ್ತವಾಗಿದೆ ಎಂದು ಖಾತ್ರಿಪಡಿಸಿಕೊಳ್ಳಲು ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆಯಾಗುತ್ತದೆ. ಕಾರ್ಯತತ್ಪರತೆ, ಜ್ಞಾಪಕಶಕ್ತಿ ವೃದ್ದಿಯಾಗುತ್ತದೆ. ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು ಸಹಾಯವಾಗಿದ್ದು, ಹೃದಯಾಘಾತವನ್ನು ಶೇ.80 ಕ್ಕಿಂತಲೂ ಹೆಚ್ಚು ತಡೆಯಲು ಸಹಕಾರಿ ಹಾಗೂ ರಕ್ತದ ಒತ್ತಡ ಇತರೆ ಕೆಲ ರೋಗಗಳನ್ನು ತಡೆಗಟ್ಟಲು ಸಹಕಾರಿ.

ಹತ್ತನೇ ತರಗತಿ ಜಸ್ಟ್ ಪಾಸ್:ಈಗ ಐಎಎಸ್ ಅಧಿಕಾರಿ

0

ಐಎಎಸ್‌ ಅಧಿಕಾರಿಗಳೆಂದರೆ ಬುದ್ಧಿವಂತರೆಂಬ ಕಲ್ಪನೆ ಇರುತ್ತದೆ. ಆದರೆ,ಈ ಐಎಎಸ್‌ ಅಧಿಕಾರಿಯು 10ನೇ ತರಗತಿ ಪರೀಕ್ಷೆಯಲ್ಲಿ ಜಸ್ಟ್‌ ಪಾಸ್‌.

2012ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ತುಷಾರ್‌ ಸುಮೇರ್‌, 10ನೇ ತರಗತಿಯಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ 35 ಮತ್ತು ಗಣಿತದಲ್ಲಿ ಕೇವಲ 36 ಅಂಕ ಪಡೆದಿದ್ದರು.

ನಿನ್ನಿಂದ ಏನೂ ಸಾಧ್ಯವಿಲ್ಲ ಎಂದು ಶಾಲೆಯಲ್ಲಿ ಶಿಕ್ಷಕರ ಬಳಿ ಕುಟುಂಬಸ್ಥರಿಂದ ಬೈಯಿಸಿಕೊಂಡಿದ್ದರು. ಈಗ ಅದೇ ಜಸ್ಟ್‌ ಪಾಸ್‌ ವಿದ್ಯಾರ್ಥಿ ಗುಜರಾತ್‌ನ ಬರೂಚ್‌ನ ಜಿಲ್ಲಾಧಿಕಾರಿಯಾಗಿದ್ದಾರೆ.

ತುಷಾರ್‌ ಅವರ 10ನೇ ತರಗತಿ ಅಂಕಪಟ್ಟಿಯನ್ನು, ಇನ್ನೋಬ್ಬ ಐಎಎಸ್‌ ಅಧಿಕಾರಿಯಾಗಿರುವ ಅವನೀಶ್‌ ಶರಣ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತೆಂದು ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದ್ದಾರೆ.

ಭಾರತ ತನ್ನ ಅಣ್ವಸ್ತ್ರ ದಾಸ್ತಾನು ಹೆಚ್ಚಿಸಿಕೊಂಡಿದೆ

0

ಭಾರತ ತನ್ನ ಅಣ್ವಸ್ತ್ರಗಳ ದಾಸ್ತಾನನ್ನು ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿಸಿಕೊಂಡಿದೆ ಎಂಬ ರಹಸ್ಯ ಸಂಗತಿ ಬೆಳಕಿಗೆ ಬಂದಿದೆ. ಆದರೆ, ಚೀನಾ ಮತ್ತು ಪಾಕಿಸ್ತಾನ ಈ ಅವಧಿಯಲ್ಲಿ ತಮ್ಮಲ್ಲಿರುವ ಅಣು ಬಾಂಬ್‌ಗಳ ದಾಸ್ತಾನಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ ಎಂದೂ ವರದಿಯಾಗಿದೆ.

ಜಗತ್ತಿನಲ್ಲಿ ಅಣ್ವಸ್ತ್ರಗಳನ್ನು ಹೊಂದಿರುವ ಒಂಭತ್ತು ದೇಶಗಳಿವೆ. ಅವು ಅಮೆರಿಕ, ರಷ್ಯಾ, ಬ್ರಿಟನ್‌, ಫ್ರಾನ್ಸ್‌, ಚೀನಾ, ಭಾರತ, ಪಾಕಿಸ್ತಾನ, ಇಸ್ರೇಲ್‌ ಮತ್ತು ಉತ್ತರ ಕೊರಿಯಾ. ಈ ದೇಶಗಳು ತಮ್ಮಲ್ಲಿರುವ ಅಣ್ವಸ್ತ್ರಗಳ ಸಂಖ್ಯೆಯನ್ನು ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಆದರೆ, ಇವು ಅಣ್ವಸ್ತ್ರಗಳಿಗೆ ಸಂಬಂಧಿಸಿದಂತೆ ಕೈಗೊಳ್ಳುವ ಚಟುವಟಿಕೆಗಳ ಮೇಲೆ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಕಣ್ಣಿಟ್ಟಿರುತ್ತವೆ. ಅಂತಹ ಒಂದು ಸಂಸ್ಥೆಯಾಗಿರುವ ಸ್ಟಾಕ್‌ಹೋಮ್‌ ಇಂಟರ್‌ನ್ಯಾಷನಲ್‌ ಪೀಸ್‌ ರಿಸರ್ಚ್ ರ್ ಎಂಬ ಸಂಸ್ಥೆಯು ಪ್ರಕಟಿಸಿದ ಇತ್ತೀಚಿನ ವರದಿಯಲ್ಲಿ ಭಾರತವು 2021ರ ಜನವರಿಯಲ್ಲಿ 156 ಅಣು ಬಾಂಬ್‌ಗಳನ್ನು ಹೊಂದಿತ್ತು. ಆದರೆ, 2022ರ ಜನವರಿಯಲ್ಲಿ 160 ಅಣು ಬಾಂಬ್‌ಗೆ ತನ್ನ ದಾಸ್ತಾನು ಹೆಚ್ಚಿಸಿಕೊಂಡಿದೆ ಎಂದು ಹೇಳಿದೆ.

ಚೀನಾದಲ್ಲಿ 2021ರಲ್ಲಿ 350 ಅಣು ಬಾಂಬ್‌ ಇದ್ದವು. 2022ರಲ್ಲೂ ಅಷ್ಟೇ ಇವೆ. ಪಾಕಿಸ್ತಾನದಲ್ಲಿ 2021ರಲ್ಲಿ 165 ಅಣು ಬಾಂಬ್‌ ಇದ್ದವು, 2022ರಲ್ಲೂ ಅಷ್ಟೇ ಇವೆ. ಪಾಕ್‌ನಲ್ಲಿ ಅಣ್ವಸ್ತ್ರಗಳ ಸಂಖ್ಯೆ ಅಷ್ಟೇ, ಇದ್ದರೂ ಅಣು ಬಾಂಬ್‌ಗಳನ್ನು ಎಸೆಯುವ ಹೊಸ ರೀತಿಯ ವಿಧಾನಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಭಾರತವೂ ಈ ಕಾರ್ಯ ಮಾಡಿದೆ. ಆದ್ದರಿಂದ, ಭಾರತ ಮತ್ತು ಪಾಕ್‌ ತಮ್ಮ ಅಣ್ವಸ್ತ್ರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿವೆ ಎಂಬುದು ಉಪಗ್ರಹ ಚಿತ್ರದಿಂದ ಪತ್ತೆಯಾಗಿದೆ. ಚೀನಾ ಅಂತಹ ವಿಸ್ತರಣೆಗೆ ಕೈಹಾಕಿರುವುದು ಪತ್ತೆಯಾಗಿಲ್ಲ ಎಂದು ಎಸ್‌ಐಪಿಆರ್‌ಐ ತಿಳಿಸಿದೆ.

ಭಾರತದ ಗಡಿಯಲ್ಲಿ ಪಾಕಿಸ್ತಾನ ಮತ್ತು ಚೀನಾ ನಿರಂತರವಾಗಿ ಕ್ಯಾತೆ ತೆಗೆಯುವುದರಿಂದ ಅಣ್ವಸ್ತ್ರಗಳ ದಾಸ್ತಾನು ಹಾಗೂ ವಿಸ್ತರಣೆ ಕಾರ್ಯಾಚರಣೆಗಳ ಕುರಿತಾದ ಅಂಕಿಅಂಶಗಳು ಮಹತ್ವ ಪಡೆದಿವೆ.

ವಿಧಾನಪರಿಷತ್ ಚುನಾವಣೆ : ಶೇ 74.39 ಮತದಾನ

0

ವಿಧಾನಪರಿಷತ್ 2 ಪದವೀಧರ ಮತ್ತು 2 ಶಿಕ್ಷಕರ ಕ್ಷೇತ್ರಗಳಿಗೆ ಸೋಮವಾರ ಶಾಂತಿಯುತ ಮತದಾನ ನಡೆದಿದೆ.

ಈ ಬಾರಿ ಒಟ್ಟಾರೆ ಶೇ.74.39 ರಷ್ಟು ಮತದಾನ ನಡೆದಿದೆ.
ವಿಧಾನಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ 49 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆದಿದ್ದು, ಜೂನ್ 15 ರಂದು ಫಲಿತಾಂಶ ಹೊರಬೀಳಲಿದೆ.
ಆರು ವರ್ಷಗಳ ಹಿಂದೆ ಈ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ. 57.35 ರಷ್ಟು ಮತದಾನವಾಗಿತ್ತು.

ಈ ಬಾರಿ ಹೆಚ್ಚಿನ ಮತದಾನವಾಗಿದೆ.
ವಾಯು ಪದವೀಧರರ ಕ್ಷೇತ್ರದಲ್ಲಿ ಶೇ. 59.59 ಮತ್ತು ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಶೇ. 71.30 ರಷ್ಟು ಮತದಾನವಾಗಿದೆ. ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.80 ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಶೇ. 86.67 ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಲಿಂಗನಮಕ್ಕಿ ಜಲಾಶಯ ನೀರಿನ ಮಟ್ಟ ಇಳಿಕೆ!

0

ಮಳೆ ಮಾರುತಗಳು ಬಂದಿವೆ ಎಂಬ ಹವಾಮಾನ ಇಲಾಖೆ ವರದಿಗಳ ಹೊರತಾಗಿಯೂ ಕಳೆದ ಮೂರ‍್ನಾಲ್ಕು ದಿನಗಳಿಂದ ಮಳೆ ಸಂಪೂರ್ಣವಾಗಿ ಸಾಗರ ತಾಲೂಕಿನಲ್ಲಿ ಮಾಯವಾಗಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬೆಳಕು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಲಿಂಗನಮಕ್ಕಿ ಜಲಾಶಯದ ನೀರಿನ ಸಂಗ್ರಹ ಇಳಿಮುಖವಾಗಿದೆ ಎಂದು ತಿಳಿದುಬಂದಿದೆ.

ಜಲಾಶಯದ ನೀರಿನ ಮಟ್ಟ 1751.25 ಅಡಿಗೆ ಇಳಿದಿದ್ದು, ಕಳೆದ ಮೂರು ದಿನಗಳಿಂದ ಒಳಹರಿವು ಪ್ರಮಾಣ ಸಂಪೂರ್ಣ ನಿಂತಿದೆ. 4124 ಕ್ಯುಸೆಕ್ಸ್ ನೀರಿನ ಹೊರ ಹರಿವು ಇದೆ. ಹೀಗಾಗಿ ಮುಂಗಾರು ಉತ್ತಮವಾಗಿ ಸುರಿಯದಿದ್ದರೆ ವಿದ್ಯುತ್ ಉತ್ಪಾದನೆಗೆ ತೊಡಕಾಗುವ ಸಂಭವ ಇದೆ.

ಮುಂಗಾರು ಉತ್ತಮವಾಗಿ ಸುರಿಯದಿದ್ದರೆ ವಿದ್ಯುತ್ ಉತ್ಪಾದನೆಗೆ ತೊಡಕಾಗುವ ಪರಿಸ್ಥಿತಿ ಎದುರಾಗಿದೆ.
ರಾಜ್ಯದ ಜಲ ವಿದ್ಯುದಾಗಾರಗಳಾದ ಶರಾವತಿ, ಮಹಾತ್ಮಾಗಾಂಧಿ, ಲಿಂಗನಮಕ್ಕಿ, ಅಂಬುತೀರ್ಥ ಮತ್ತು ಶರಾವತಿ ಟೇಲ್ ರೇಸ್ ಯೋಜನೆಗೆ ನೀರು ಪೂರೈಸುವ ಕೆಲಸವನ್ನು ಲಿಂಗನಮಕ್ಕಿ ಜಲಾಶಯ ಮಾಡುತ್ತಾ ಬಂದಿದೆ. 156 ಟಿಎಂಸಿ ಅಡಿ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯವಿರುವ ಈ ಜಲಾಶಯದಲ್ಲಿ ಸದ್ಯ 47ಕ್ಕೂ ಕಡಿಮೆ ಟಿಎಂಸಿ ಅಡಿ ನೀರು ಮಾತ್ರ ಇದೆ.

ಜಲಾನಯನದ ಪ್ರದೇಶಗಳಾದ ಅಂಬುತೀರ್ಥ, ಹೊಸನಗರ, ತುಮರಿ, ಬ್ಯಾಕೋಡು, ಹೊಳೆಬಾಗಿಲು, ಸಾವೇಹಕ್ಲು ಪ್ರದೇಶಗಳಲ್ಲಿ ಉತ್ತಮ ಮಳೆ ಆದಲ್ಲಿ ಜಲಾಶಯಕ್ಕೆ ಒಳಹರಿವು ಆರಂಭವಾಗುತ್ತದೆ ಎಂದು ಕೆಪಿಸಿ ಅಧಿಕಾರಿಗಳು ತಿಳಿಸಿದರು.

ಪ್ರವಾದಿಗಳ ಅವಹೇಳನ ವಿವಾದ:ವೆಬ್ ಸೈಟ್ಗಳ ಹ್ಯಾಕ್

0

ಪ್ರವಾದಿ ಮುಹಮ್ಮದ್ ಬಗ್ಗೆ ಬಿಜೆಪಿಯ ಮಾಜಿ ನಾಯಕರ ಟೀಕೆಗಳು ತೀವ್ರ ಆಕ್ರೋಶಕ್ಕೆ ಕಾರಣವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಈಗಾಗಲೇ ಈ ಹೇಳಿಕೆಗಳು ಭಾರತಕ್ಕೆ ದೊಡ್ಡ ಹಾನಿ ತಂದಿದೆ. ಇತ್ತೀಚೆಗೆ, ದೇಶದಲ್ಲಿ ಸರ್ಕಾರಿ ಮತ್ತು ಖಾಸಗಿ ವೆಬ್‌ಸೈಟ್‌ಗಳ ಮೇಲೆ ಸೈಬರ್ ದಾಳಿಗಳು ಪ್ರಾರಂಭವಾಗಿವೆ.

ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಹಾಗೆಯೇ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರ್ ಮ್ಯಾನೇಜ್‌ಮೆಂಟ್ ಎಕ್ಸ್‌ಟೆನ್ಶನ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಹಲವಾರು ಪ್ರಮುಖ ಸಂಸ್ಥೆಗಳ ವೆಬ್‌ಸೈಟ್‌ಗಳ ಮೇಲೆ ಸೈಬರ್ ದಾಳಿಗೆ ಗುರಿಯಾಗಿದೆ.
ಸುಮಾರು 70 ವೆಬ್‌ಸೈಟ್‌ಗಳು ಮತ್ತು ಪೋರ್ಟಲ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದೆ.

ಪ್ರತಿಭಟನೆ ನಿಲ್ಲಿಸಲು ಮುಸ್ಲಿಂ ಸಂಘಟನೆಗಳ ಮನವಿ

0

ಪ್ರವಾದಿ ಮುಹಮ್ಮದ್ ಬಗ್ಗೆ ಬಿಜೆಪಿಯ ಮಾಜಿ ನಾಯಕರ ಟೀಕೆಗಳು ತೀವ್ರ ಆಕ್ರೋಶಕ್ಕೆ ಕಾರಣವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಈಗಾಗಲೇ ಈ ಹೇಳಿಕೆಗಳು ಭಾರತಕ್ಕೆ ದೊಡ್ಡ ಹಾನಿ ತಂದಿದೆ. ಇತ್ತೀಚೆಗೆ, ದೇಶದಲ್ಲಿ ಸರ್ಕಾರಿ ಮತ್ತು ಖಾಸಗಿ ವೆಬ್‌ಸೈಟ್‌ಗಳ ಮೇಲೆ ಸೈಬರ್ ದಾಳಿಗಳು ಪ್ರಾರಂಭವಾಗಿವೆ.

ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಹಾಗೆಯೇ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರ್ ಮ್ಯಾನೇಜ್‌ಮೆಂಟ್ ಎಕ್ಸ್‌ಟೆನ್ಶನ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಹಲವಾರು ಪ್ರಮುಖ ಸಂಸ್ಥೆಗಳ ವೆಬ್‌ಸೈಟ್‌ಗಳ ಮೇಲೆ ಸೈಬರ್ ದಾಳಿಗೆ ಗುರಿಯಾಗಿದೆ.
ಸುಮಾರು 70 ವೆಬ್‌ಸೈಟ್‌ಗಳು ಮತ್ತು ಪೋರ್ಟಲ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದೆ.