Saturday, March 7, 2026
Saturday, March 7, 2026
Home Blog Page 1540

ಆ್ಯಸಿಡ್ ಧಾಳಿ ಬಗ್ಗೆ ಕಠಿಣ ಕ್ರಮಕ್ಕೆ ಸೂಚನೆ- ಬೊಮ್ಮಾಯಿ

0

ರಾಜ್ಯದಲ್ಲಿ ಆ್ಯಸಿಡ್ ದಾಳಿಗಳು ಹೆಚ್ಚಾಗುತ್ತಿದೆ. ಆ್ಯಸಿಡ್ ದಾಳಿ ವಿರುದ್ಧ ಕಠಿಣ ಕಾನೂನು ರೂಪಿಸಲು ಕಾನೂನು ಸಚಿವರಿಗೆ ತಿಳಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ, ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆ್ಯಸಿಡ್ ದಾಳಿ ವಿರುದ್ಧ ಕಠಿಣ ಕಾನೂನು ರೂಪಿಸಲು ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದ ಹಾಗೇ ನೋಡಿಕೊಳ್ಳಲಾಗುತ್ತದೆ ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಗಲಾಟೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಈಗಾಗಲೇ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳ ಸಭೆ ಕರೆದು ಸೂಚನೆ ನೀಡಿದ್ದೇನೆ.

ರಾಜ್ಯದಲ್ಲಿ ಶಾಂತ ಪರಿಸ್ಥಿತಿ ಇದೆ.ಎಲ್ಲಾ ಸಮುದಾಯದ ನಾಯಕರು ಸೌಹಾರ್ದತೆ ಕಾಪಾಡಬೇಕೆಂದು ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ತೈವಾನ್ ಸುದ್ದಿ ಎತ್ತಬೇಡಿ: ಅಮೆರಿಕಾಗೆ ಚೀನಾ ವಾರ್ನಿಂಗ್

0

ತೈವಾನ್‌ ವಿಚಾರದಲ್ಲಿ ತುಂಬಾ ಕಾಳಜಿ ತೋರಿಸುತ್ತಿರುವ ಅಮೆರಿಕಗೆ ಚೀನಾ ಈಗ ನೇರಾನೇರ ಎಚ್ಚರಿಕೆ ಕೊಟ್ಟಿದೆ.

ತೈವಾನ್‌ ತಂಟೆಗೆ ಬಂದರೆ ನಾವು ಯುದ್ಧ ಮಾಡುವುದಕ್ಕೂ ಹಿಂಜರಿಯುವುದಿಲ್ಲ ಎಂದಿದೆ. ಉಕ್ರೇನ್‌ ಮೇಲೆ ಪುಟಿನ್‌ ದಂಡೆತ್ತಿ ಹೋದಂತೆ ತೈವಾನ್‌ನ್ನ ಚೀನಾ ಕೂಡ ಆಕ್ರಮಿಸಬಹುದು ಎನ್ನುವ ವದಂತಿಗಳು ಹರಿದಾಡುತ್ತಿವೆ.
ಅದರಲ್ಲೂ ತೈವಾನ್‌ನ್ನ ಆಕ್ರಮಿಸಲು ಚೀನಾ ತಯಾರಿ ನಡೆಸುತ್ತಿದೆ ಎಂಬ ಕೆಲ ಆಡಿಯೋಗಳು ಇತ್ತೀಚಿಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು.

ಇದರ ನಡುವೆಯೇ ದಕ್ಷಿಣ ಕೊರಿಯಾಗೆ ಬಂದಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ತೈವಾನ್‌ ರಕ್ಷಣೆಗೆ ನಮ್ಮ ಆಯುಧಗಳು ಬಳಕೆಯಾಗುತ್ತಿವೆ ಅಂದರೆ ಅಮೆರಿಕ ಯುದ್ದಕ್ಕೆ ಇಳಿಯುತ್ತದೆ ಎಂದು ಹೇಳಿದ್ದರು.

ತೈವಾನ್‌ ರಕ್ಷಣೆಗೆ ಅಮೆರಿಕ ನಿಲ್ಲುತ್ತದೆ ಎಂದು ಅದರ ಅಧ್ಯಕ್ಷರೇ ಹೇಳಿದ್ದನ್ನ ಚೀನಾಗೆ ಇನ್ನೂ ಕೂಡ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ.
ಈಗ ಅಮೆರಿಕ ವಿರುದ್ದ ಚೀನಾ ಮತ್ತೆ ಗುಟುರು ಹಾಕಿದ್ದು ನಾವು ಯುದ್ದಕ್ಕೂ ಹಿಂಜರಿಯುವುದಿಲ್ಲ ಎಂದು ವಾರ್ನಿಂಗ್‌ ಕೊಟ್ಟಿದೆ.

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಜೊತೆಗೆ ಈ ಬಗ್ಗೆ ಮಾತನಾಡಿರುವ ಚೀನಾ ರಕ್ಷಣಾ ಸಚಿವ ವೀಯಿ ಫೆಂಗೆ ʻತೈವಾನ್‌ನ್ನ ಚೀನಾದಿಂದ ಬೇರ್ಪಡಿಸಲು ನೋಡಿದರೆ ಚೀನಾ ಯುದ್ದ ಮಾಡಲು ಖಂಡಿತಾ ಹಿಂದೆ ಮುಂದೆ ನೋಡುವುದಿಲ್ಲ ಎಂದು ಹೇಳಿದ್ದಾರೆ.

ನೂಪುರ್ ಶರ್ಮಾ ಹೇಳಿಕೆ: ಘರ್ಷಣೆ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮ

0

ನೂಪೂರ್ ಶರ್ಮಾ ಅವರು ಅವಹೇಳನಕಾರಿ ಹೇಳಿಕೆ ನೀಡಿರುವ ಕುರಿತು ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ಘರ್ಷಣೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಎಲ್ಲಾ ಸಮುದಾಯಗಳ ನಾಯಕರೊಂದಿಗೆ ಮಾತುಕತೆ ನಡೆಸಿ, ಸೌಹಾರ್ದತೆಯನ್ನು ಕಾಪಾಡುವಂತೆ ಪೊಲೀಸ್ ಇನ್ಸಪೆಕ್ಟರ್ ಗಳಿಗೆ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜ್ಯದಲ್ಲಿ ಪ್ರಸ್ತುತ ಪರಿಸ್ಥಿತಿ ಶಾಂತಿಯುತವಾಗಿದ್ದು, ನಿಯಂತ್ರಣದಲ್ಲಿದೆ. ಪ್ರತಿಯೊಂದು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸೂಕ್ಷ್ಮ ಪ್ರದೇಶಗಳಿಗೆ ಪೊಲೀಸ್ ತುಕಡಿಗಳ ನಿಯೋಜನೆಗೆ ಸೂಚನೆ ನೀಡಲಾಗಿದೆ. ಈಗಾಗಲೇ ಕೆ.ಎಸ್.ಆರ್.ಪಿ ತುಕಡಿಗಳ ಚಲನೆ ಪ್ರಾರಂಭವಾಗಿದೆ. ಹುಬ್ಬಳ್ಳಿ ಪೊಲೀಸ್ ಆಯುಕ್ತರು ಮತ್ತು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದೆ ಎಂದರು.

ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದ ನಯನ-ವಿಘ್ನೇಶ್ ಜೋಡಿ

0

ನಿನ್ನೆಯಷ್ಟೇ ಅದ್ಧೂರಿಯಾಗಿ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಲೇಡಿ ಸೂಪರ್ ಸ್ಟಾರ್ ನಯನತಾರಾ ಸಪ್ತಪದಿ ತುಳಿದಿದ್ದಾರೆ.

ಮದುವೆಯ ನಂತರ ತಾವು ಆರಾಧಿಸುವ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದರು. ಅಲ್ಲಿ ನಯನತಾರಾ ಎಡವಟ್ಟು ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ನಯನತಾರಾ ಅವರ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ತಿರುಪತಿ ತಿರುಮಲ ಅಧಿಕಾರಿಗಳ ಮಧ್ಯಪ್ರವೇಶ ಕೂಡ ಆಗಿದೆ.

ಈ ಜೋಡಿ ಸಾಂಪ್ರದಾಯಿಕ ಉಡುಪಿನಲ್ಲೇ ದೇವಸ್ಥಾನ ಆವರಣಕ್ಕೆ ಪ್ರವೇಶ ಮಾಡಿದರು. ಹಳದಿ ಬಣ್ಣದ ಸೀರೆಯಲ್ಲಿ ನಯನತಾರಾ ಕಂಗೊಳಿಸುತ್ತಿದ್ದರೆ, ಬಿಳಿ ಬಣ್ಣದ ಅಂಗಿ ಮತ್ತು ಪಂಚೆ ತೊಟ್ಟಿದ್ದರು ವಿಘ್ನೇಶ್. ಆದರೆ, ನಯನತಾರಾ ದೇವಸ್ಥಾನದ ಆವರಣದ ಒಳಗೆ ಚಪ್ಪಲಿ ಧರಿಸಿದ್ದರು ಎನ್ನುವುದೇ ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.

ಪತಿ ವಿಘ್ನೇಶ್ ಬರಿಗಾಲಲ್ಲಿ ನಡೆದುಕೊಂಡು ಬಂದರೆ, ನಯನತಾರಾ ಚಪ್ಪಲಿ ಧರಿಸಿದ್ದರಂತೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನಯನತಾರಾ ವಿರುದ್ಧ ಭಕ್ತರು ಮುಗಿಬಿದ್ದಿದ್ದರು. ವಿವಾದ ಸೃಷ್ಟಿ ಆಗುತ್ತಿದ್ದಂತೆಯೇ ತಿರುಮಲ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ, ನಯನತಾರಾ ಚಪ್ಪಲಿ ಧರಿಸಿ ಓಡಾಡಿದ ಸ್ಥಳದಲ್ಲಿ ಭಕ್ತರಿಗೆ ಪಾದರಕ್ಷೆಗಳನ್ನು ತೊಡಲು ಅವಕಾಶವಿದೆ ಎಂದು ಹೇಳಿದ್ದಾರೆ.

ಜನಪ್ರಿಯ ಗಾಯಕ ಜಸ್ಟಿನ್ ಹಠಾತ್ ಪಾರ್ಶ್ವವಾಯು ಪೀಡಿತ

0

ಜಸ್ಟಿನ್ ಬೀಬರ್ ಅವರು ತಮ್ಮ ಜಸ್ಟೀಸ್ ವರ್ಲ್ಡ್ ಟೂರ್ ನಲ್ಲಿ ಇತ್ತೀಚಿನ ಹಲವಾರು ದಿನಾಂಕಗಳನ್ನು ಏಕೆ ತಪ್ಪಿಸಿಕೊಳ್ಳಬೇಕಾಯಿತು ಎಂಬುದರ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ.

ಖ್ಯಾತ ಗಾಯಕ ಜಸ್ಟಿನ್ ಅವರು ಇನ್‌ಸ್ಟಾಮ್‌ನಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.
ಅವರ ಮುಖಕ್ಕೆ ಪಾರ್ಶ್ವವಾಯು ಹೊಡೆದಿದೆಯಂತೆ. 28 ವರ್ಷದ ಕೆನಡಾ ಮೂಲದ- ಜಸ್ಟಿನ್ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 240 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಗ್ರ್ಯಾಮಿ ಪ್ರಶಸ್ತಿ ಪಡೆದ ಈ ಗಾಯಕ ತನ್ನ ಸ್ಥಿತಿ ಹೇಗಿದೆ ಎಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ramsay hunt syndrome ಕಾಯಿಲೆಯಿಂದ ( ವೈರಸ್ ) ಜಸ್ಟಿನ್ ಬಳಲುತ್ತಿದ್ದಾರೆ. ಇದರಿಂದ ಅವರ ಮುಖಕ್ಕೆ ಪಾರ್ಶ್ವವಾಯು ಹೊಡೆದಿದೆ. ‘ಕೆಲವರು ನಾನು ಕೆಲ ಕಾರ್ಯಕ್ರಮಗಳನ್ನು ಕ್ಯಾನ್ಸಲ್ ಮಾಡಿದೆ ಎಂದು ಹೇಳುತ್ತಿದ್ದಿರಿ. ಆದರೆ ನಾನು ದೈಹಿಕವಾಗಿ ಹಾಡು ಹಾಡಲಾಗುತ್ತಿಲ್ಲ. ಹಾಡುವ ಸ್ಥಿತಿಯಲ್ಲಿಯೂ ಇಲ್ಲ. ನಾನು ಸ್ವಲ್ಪ ನಿಧಾನವಾಗಬೇಕು ಎಂದು ದೇಹ ಹೇಳುತ್ತಿದೆ. ನಿಮಗಿದು ಅರ್ಥವಾಗಿದೆ ಎಂದು ಭಾವಿಸುವೆ’ ಎಂದು ಜಸ್ಟಿನ್ ಅವರು ತಿಳಿಸಿದ್ದಾರೆ.

ನೂಪುರ್ ಶರ್ಮ ಹೇಳಿಕೆಗೆ ಭಾರತಾದ್ಯಂತ ಮುಸ್ಲೀಮರ ಪ್ರತಿಭಟನೆ

0

ಪ್ರವಾದಿ ಮೊಹಮ್ಮದ್ ಪೈಗಂಬರ್​​​​ ಕುರಿತು ಬಿಜೆಪಿ ಮಾಜಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ನೀಡಿದ್ದ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಯುಎಇ, ಇಂಡೊನೇಷ್ಯಾ, ಸೌದಿ ಅರೇಬಿಯಾ, ಬಹರೈನ್‌, ಜೋರ್ಡನ್‌ ಮತ್ತು ಅಫ್ಗಾನಿಸ್ತಾನ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳು ನೂಪುರ್ ಶರ್ಮಾ ಹೇಳಿಕೆ ವಿರುದ್ಧ ತಿರುಗಿ ಬಿದ್ದಿವೆ.

ಇನ್ನೊಂದೆಡೆ ಭಾರತದಲ್ಲಿರು. ಮುಸ್ಲಿಮರು ಕೂಡ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.
ಉತ್ತರ ಪ್ರದೇಶದ ಮೊರಾದಾಬಾದ್, ಪ್ರಯಾಗ್ ರಾಜ್, ದೆಹಲಿ ಜಾಮಿಯ ಮಸೀದಿ, ಹೈದರಾಬಾದ್​​, ಅಹ್ಮದಾಬಾದ್​​, ಕಾಶ್ಮೀರದ ಶ್ರೀನಗರ, ಪಶ್ಚಿಮ ಬಂಗಾಳದ ಹಲವೆಡೆ ಮತ್ತು ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.

ಇಸ್ಲಾಂ ಧರ್ಮದ ಸಂಕೇತದ ವಿರುದ್ಧದ ಪೂರ್ವಗ್ರಹವನ್ನು ತಿರಸ್ಕರಿಸುತ್ತೇವೆ. ಯಾವುದೇ ಧರ್ಮದವರು ಇಸ್ಲಾಂ ಧರ್ಮದ ವಿರುದ್ಧ ಮಾತಾಡಿದ್ರೆ ಹೋರಾಟ ಮಾಡುತ್ತೇವೆ ಎಂದು ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯ ಹೇಳಿದೆ.

ಇನ್ನು, ಮುಸ್ಲಿಮರ ಪ್ರತಿಭಟನಾ ಕಾವು ಹಲವು ಕಡೆ ಹಿಂಸಾಚಾರಕ್ಕೂ ಕಾರಣವಾಗಿದೆ. ಉತ್ತರಪ್ರದೇಶದ ಪ್ರಯಾಗ್​ರಾಜ್ ಹಾಗೂ ಪಶ್ಚಿಮ ಬಂಗಾಳದ ಹೌರಾದಲ್ಲಿ ಕಲ್ಲು ತೂರಾಟ ನಡೆಸಲಾಗಿದೆ. ಈ ಪರಿಸ್ಥಿತಿ ನಿಯಂತ್ರಿಸಲು ಹೋದ ಪೊಲೀಸರ ಮೇಲೂ ಹಲ್ಲೆ ನಡೆದ ವರದಿಗಳಾಗಿವೆ. ದೆಹಲಿ, ಹೈದಾರಾಬಾದ್​, ಲಖನೌ, ಶ್ರೀನಗರ ಮತ್ತು ಅಹಮದಾಬಾದ್​​ನಲ್ಲೂ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರತ ಕ್ಷಮೆಗೆ ಪಟ್ಟು
ಇನ್ನೊಂದೆಡೆ ನೂಪುರ್ ಶರ್ಮಾ ಹೇಳಿಕೆಗೆ ಭಾರತ ಕ್ಷಮೆ ಯಾಚಿಸಬೇಕು ಎಂದು ಮುಸ್ಲಿಂ ರಾಷ್ಟ್ರಗಳು ಪಟ್ಟು ಹಿಡಿದಿವೆ.

ನೂಪುರ್ ಶರ್ಮಾ ಬಿಜೆಪಿ ಮಾಜಿ ರಾಷ್ಟ್ರೀಯ ವಕ್ತಾರರು. ಸುದ್ದಿ ವಾಹಿನಿಯೊಂದರ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ನೀಡಿದ ಹೇಳಿಕೆ ಕಾರಣದಿಂದಾಗಿ ನೂಪುರ್​ ಶರ್ಮಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ನೂಪುರ್​​ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸದಸ್ಯೆಯಾಗಿದ್ದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಬಿಬಿಎಂಪಿ ಚುನಾವಣಾ ಮೀಸಲಾತಿ ಶೇ 50 ಕ್ಕೆ ಹೆಚ್ಚಳ: ಸುಗ್ರೀವಾಜ್ಞೆ

0

ಬಿಬಿಎಂಪಿ ಚುನಾವಣೆಯ ಮೀಸಲಾತಿ ಮಿತಿಯನ್ನು ಶೇ. 50 ಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.ಇದರೊಂದಿಗೆ ರಾಜ್ಯಪಾಲರ ಅಂಕಿತ ದೊರೆತಿದೆ.

ಈ ಹಿಂದೆ ಬಿಬಿಎಂಪಿಯಲ್‌ಇ ಶೇ.
50 ರಷ್ಟಿದ್ದ ಮೀಸಲಾತಿಯನ್ನು 2020 ರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ಕಾಯಿದೆಯಲ್ಲಿ ಶೇ. 33 ರಷ್ಟು ಎಂದು ಮಾಡಲಾಗಿತ್ತು.

ಈ ಬಗ್ಗೆ ಬಿಬಿಎಂಪಿ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದು ಆಗಿರುವ ಪ್ರಮಾದವನ್ನು ಸರ್ಕಾರದ ಗಮನಕ್ಕೆ ತಂದಿದ್ದರು.

ಇದೀಗ ರಾಜ್ಯ ಸರ್ಕಾರವು 2020 ರ ಬಿಬಿಎಂಪಿ ತಿದ್ದುಪಡಿ ಕಾಯ್ದೆಯಲ್ಲಿ ಶೇ. 33 ಮಿತಿಗೊಳಿಸಿದ್ದ ಬಿಬಿಎಂಪಿ ಚುನಾವಣೆಯ ಮೀಸಲಾತಿಯ ಮಿತಿಯನ್ನು ಶೇ. 50 ಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ದೊರೆತಿದೆ.

ಈ ಮೂಲಕ ಮುಂದಿನ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಆಗುತ್ತಿದ್ದ ಅನ್ಯಾಯವನ್ನು ತಿದ್ದುಪಡಿ ಮೂಲಕ ಸರಿಪಡಿಸಲಾಗಿದೆ.

ಮೋದೀಜಿಯವರ ಚಿಂತನೆಯಿಂದ ವಿದೇಶಾಂಗ ನೀತಿ ಆಕರ್ಷಣೆ ಪಡೆದಿದೆ-ಜೈಶಂಕರ್

0

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಪರಿಣಾಮವಾಗಿ ಕಳೆದ 8 ವರ್ಷಗಳಲ್ಲಿ ಜನಪರ ವಿದೇಶಾಂಗ ನೀತಿಯನ್ನು ಭಾರತ ಅನುಷ್ಠಾನಕ್ಕೆ ತಂದಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ತಿಳಿಸಿದರು.

ಬಿಜೆಪಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘2014ರ ಬಳಿಕ ಭಾರತದ ವಿದೇಶಾಂಗ ನೀತಿ’ ಕುರಿತ ವಿಷಯದ ಮೇಲೆ ಅವರು ಮಾತನಾಡಿದರು.

ಬೆಂಗಳೂರು ನಗರವು ಭಾರತಕ್ಕೆ ಉತ್ತಮ ಹೆಸರು ಮತ್ತು ಬ್ರ್ಯಾಂಡಿಂಗ್‍ನಲ್ಲಿ ಮಹತ್ವದ ಕೊಡುಗೆ ನೀಡಿದೆ ಎಂದು ಸಿಲಿಕಾನ್ ಸಿಟಿಯನ್ನು ಶ್ಲಾಘಿಸಿದರು. ದೇಶದಲ್ಲಿ ಬೇಗನೆ ಪಾಸ್‍ಪೋರ್ಟ್ ಸಿಗುವಂತೆ ಮಾಡಿದ್ದು, ಸೇರಿದಂತೆ ಆದ್ಯತೆಗಳು ಕೂಡ ಬದಲಾಗಿವೆ. ಇದು ಮಹತ್ವದ ಕೊಡುಗೆಯಾಗಿದೆ.

ನೇಪಾಳದಲ್ಲಿ ಭೂಕಂಪ, ಯೆಮನ್‍ನಲ್ಲಿ ಯುದ್ಧ, ಮೊಜಾಂಬಿಕ್‍ನಲ್ಲಿ ನೆರೆ ಸೇರಿದಂತೆ ಹತ್ತಾರು ಸಮಸ್ಯೆಗಳಿಗೆ ಸ್ಪಂದಿಸುವ ಗುಣ ನಮ್ಮದಾಗಿತ್ತು. ಯೋಗವನ್ನು ವಿಶ್ವದಾದ್ಯಂತ ಹಬ್ಬಿಸುವಲ್ಲಿ ಪ್ರಧಾನಿ ಮೋದಿಯವರ ಚಿಂತನೆ ಮಹತ್ವದ ಪಾತ್ರ ವಹಿಸಿದೆ ಎಂದು ಮೆಚ್ಚುಗೆ ಸೂಚಿಸಿದರು. ಭಾರತದಿಂದ ವಿದೇಶಕ್ಕೆ ಪ್ರವಾಸ ಮತ್ತು ಹೊರದೇಶಗಳಿಂದ ಭಾರತಕ್ಕೆ ಬರಲು ಇದ್ದ ನೀತಿಯನ್ನು ಸರಳಗೊಳಿಸಿದ್ದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಲಭಿಸಿದೆ ಎಂದು ವಿವರಿಸಿದರು.

ಹಿಂದೆ ಹಲವು ತಿಂಗಳ ಬಳಿಕ ಪಾಸ್‍ಪೋರ್ಟ್ ಸಿಗುತ್ತಿತ್ತು. ಈಗ ಬೇಗನೇ ಪಾಸ್‍ಪೋರ್ಟ್ ಸಿಗುವಂತಾಗಿದೆ. ಜನರ ನಿಟ್ಟಿನಲ್ಲಿ ನಿಂತು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಧಾನಿ ಇರುವ ಕಾರಣ ಇದೆಲ್ಲ ಸಾಧ್ಯವಾಗಿದೆ ಎಂದು ಜೈ ಶಂಕರ್​ ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಹೊರದೇಶಗಳಿಂದ 70 ಲಕ್ಷ ಜನರನ್ನು ಕರೆತರಲಾಯಿತು. ಮಾಸ್ಕ್, ವೆಂಟಿಲೇಟರ್ ಮತ್ತು ಆಮ್ಲಜನಕ ಕೊರತೆಯ ಸಮಸ್ಯೆಯ ಪರಿಹಾರಕ್ಕೆ ಶ್ರಮಿಸಲಾಯಿತು. ಉಕ್ರೇನ್ ಯುದ್ಧಕಾಲದಲ್ಲಿ ಅಲ್ಲಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರುವುದರಲ್ಲೂ ಜನರ ಬಗೆಗಿನ ಕಳಕಳಿ ಇರುವ ನೀತಿಯನ್ನು ನಾವು ಕಾಣಬಹುದು ಎಂದು ವಿದೇಶಾಂಗ ಸಚಿವರು ವಿಶ್ಲೇಷಿಸಿದರು.

ಭಾರತದ ಏಕತೆ, ಸಮಗ್ರತೆ, ರಕ್ಷಣಾ ಕ್ಷೇತ್ರ ಮತ್ತು ಅಭಿವೃದ್ಧಿ ವಿಚಾರದಲ್ಲಿ ಕಳೆದ 8 ವರ್ಷಗಳಲ್ಲಿ ದೊಡ್ಡ ಸಾಧನೆ ಸಾಧ್ಯವಾಗಿದೆ.

ಜನಕಲ್ಯಾಣ ಮತ್ತು ಜಗಕಲ್ಯಾಣದ ನಿಟ್ಟಿನಲ್ಲಿ ನಮ್ಮ ಪ್ರಧಾನಿ ಮೋದಿಯವರು ಶ್ರಮಿಸಿದ್ದಾರೆ. ದೇಶದ ಪ್ರತಿಷ್ಠೆ, ಹೊರಜಗತ್ತಿನಲ್ಲಿ ಭಾರತಕ್ಕಿರುವ ಸ್ಥಾನ, ನಮ್ಮ ರಾಷ್ಟ್ರಕ್ಕಿರುವ ಪ್ರಭಾವ, ದೇಶದ ಸಾಮರ್ಥ್ಯವು ಕಳೆದ 8 ವರ್ಷಗಳಲ್ಲಿ ಉನ್ನತ ಸ್ಥಾನಕ್ಕೆ ಏರಿದೆ ಎಂದು ವಿವರಿಸಿದರು. ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ್, ಸಂಸದ ಪಿ.ಸಿ.ಮೋಹನ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಜ್ಯದಲ್ಲಿ ಕೋವಿಡ್ ಹೊಸ ಮಾರ್ಗಸೂಚಿ

0

ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದೆ.

ಈ ಕಾರಣದಿಂದಾಗಿ ನಿಯಂತ್ರಣ ಕ್ರಮವಾಗಿ ಹೊಸ ಮಾರ್ಗಸೂಚಿ ಕ್ರಮಗಳನ್ನು ರಾಜ್ಯ ಆರೋಗ್ಯ ಇಲಾಖೆ ಪ್ರಕಟಿಸಿದೆ.

ಈ ಸಂಬಂಧ ಸುತ್ತೋಲೆ ಹೊರಡಿಸಿರುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ರಂದೀಪ್ ಅವರು, ರಾಜ್ಯದಲ್ಲಿ ಕಳೆದ 10 ದಿನಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ನಿಧಾನಗತಿಯಲ್ಲಿ ಏರಿಕೆಯಾಗುತ್ತಿವೆ. ಹೀಗಾಗಿ ಈ ಕೆಳಗಿನ ಮಾರ್ಗಸೂಚಿ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದ್ದಾರೆ.

ಈ ಹೊಸ ಮಾರ್ಗಸೂಚಿಯಂತೆ ರಾಜ್ಯಾದ್ಯಂತ ಮತ್ತೆ ಮಾಸ್ಕ್ ಕಡ್ಡಾಯಗೊಳಿಸಿ ಆದೇಶಿಸಿದೆ. ಜೊತೆಗೆ ಕಡ್ಡಾಯವಾಗಿ ಪಾಲಿಸುವಂತೆ ಖಡಕ್ ಆದೇಶದಲ್ಲಿ ತಿಳಿಸಿದೆ.

ಈ ಹೊಸ ಮಾರ್ಗಸೂಚಿಯಂತೆ ರಾಜ್ಯಾದ್ಯಂತ ಮತ್ತೆ ಮಾಸ್ಕ್ ಕಡ್ಡಾಯಗೊಳಿಸಿ ಆದೇಶಿಸಿದೆ. ಜೊತೆಗೆ ಕಡ್ಡಾಯವಾಗಿ ಪಾಲಿಸುವಂತೆ ಖಡಕ್ ಆದೇಶದಲ್ಲಿ ತಿಳಿಸಿದೆ.

ಕೋವಿಡ್ ನಿಯಂತ್ರಣದ ಹೊಸ ಮಾರ್ಗಸೂಚಿ ಕ್ರಮಗಳು ಇಂತಿವೆ.

ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ
ಮಾಸ್ಕ್ ಧರಿಸದೇ ಇದ್ದರೇ ಮಾರ್ಷಲ್, ಪೊಲೀಸ್ ಸಿಬ್ಬಂದಿಗಳು ದಂಡ ವಿಧಿಸಲು ಸೂಚನೆ
ಮುಚ್ಚಿದ ಕಫೆ ಟೀರಿಯಾ, ಹೋಟೆಲ್, ಶೈಕ್ಷಣಿಕ ಸಂಸ್ಥೆಗಳು, ಮಾಲ್ ಗಳು, ರೆಸ್ಟೋರೆಂಟ್ ಗಳು, ಪಬ್ ಗಳು, ಕಚೇರಿಗಳು, ಕಾರ್ಖಾನೆಗಳಲ್ಲಿ ಜನರು, ಸಿಬ್ಬಂದಿಗಳು ಮಾಸ್ಕ್ ಧರಿಸುವುದು ಕಡ್ಡಾಯ.

ಮಾಸ್ಕ್ ಧರಿಸಿದ ಜನರಿಗೆ ಮಾತ್ರವೇ ಮುಚ್ಚಿದ ಸ್ಥಳಗಳಲ್ಲಿನ ಪ್ರದೇಶಗಳಿಗೆ ಅನುಮತಿ
ಸ್ವಂತ ವಾಹನಗಳು ಹಾಗು ಸಾರ್ವಜನಿಕ ಸಾರಿಗೆಗಳಲ್ಲಿ ( ಬಸ್ ಮತ್ತು ರೈಲು ) ಪ್ರಯಾಣಿಸುವ ಸಂದರ್ಭದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯ
ಐಎಲ್‌ಐ ಮತ್ತು ಸಾರಿ ಲಕ್ಷಣಗಳನ್ನು ಹೊಂದಿರುವವರು, ಹೈರಿಸ್ಕ್ ಗುಂಪಿನವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರೋರು ಆದ್ಯತೆ ಮೇರೆಗೆ ಪರೀಕ್ಷೆ ಒಳಪಡಲು ಸೂಚನೆ
ಅರ್ಹ ಜನರೆಲ್ಲರೂ ಪ್ರಿಕಾಷನರಿ ಡೋಸ್ ಸೇರಿದಂತೆ, ಕೋವಿಡ್ ಲಸಿಕೆ ಪಡೆಯಲು ಸೂಚನೆ
ಈ ಮೇಲ್ಕಂಡ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ತಪ್ಪಿದಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಕ್ರಮಗಳಂತೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದೆ.

ಜೆಡಿಎಸ್ ಶಾಸಕರಿಂದ ಅಡ್ಡಮತದಾನ ಸ್ಪಷ್ಟ

0

ಪಕ್ಷದ ಸೂಚನೆಯನ್ನು ಧಿಕ್ಕರಿಸಿ ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಅವರು ಕಾಂಗ್ರೆಸ್‍ಗೆ ಮತ ಚಲಾಯಿಸಿದ್ದಾರೆ. ಈ ಮೂಲಕ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಅಡ್ಡ ಮತದಾನ ನಡೆಯಬಹುದೆಂಬ ಅನುಮಾನಕ್ಕೆ ಶ್ರೀನಿವಾಸ್ ಗೌಡ ಅವರೇ ಮುನ್ನುಡಿ ಬರೆದಿದ್ದಾರೆ.

ವಿಧಾನಸೌಧಕ್ಕೆ ಆಗಮಿಸಿದ ಅವರು ಕಾಂಗ್ರೆಸ್ ಅಭ್ಯರ್ಥಿಗೆ ತಮ್ಮ ಹಕ್ಕು ಚಲಾಯಿಸಿರುವುದನ್ನು ಶ್ರೀನಿವಾಸ್ ಗೌಡ ಅವರೇ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದರು. ಈ ದಿಢೀರ್ ಬೆಳವಣಿಗೆಯಿಂದಾಗಿ ಜೆಡಿಎಸ್‍ನ ಒಟ್ಟು 32 ಮತಗಳ ಪೈಕಿ 1 ಮತ ಕೈ ಕೊಟ್ಟಿರುವುದು ಸಾಬೀತಾಗಿದೆ. ಕೆಲ ತಿಂಗಳಿಂದ ಶ್ರೀನಿವಾಸ್ ಗೌಡ ಅವರು ಜೆಡಿಎಸ್ ಜೊತೆ ಸಂಬಂಧ ಅಷ್ಟಕಷ್ಟೇ ಎಂಬಂತಿತ್ತು.

ಶಾಸನಸಭೆಯಲ್ಲಿ ನಡೆಯುವ ಮತದಾನದ ವೇಳೆ ಮಾತ್ರ ಇದು ಅನ್ವಯವಾಗುತ್ತದೆ. ಶಾಸನಸಭೆಯಿಂದ ಆಚೆ ನಡೆಯುವ ಯಾವುದೇ ಚುನಾವಣೆಗೂ ಕಾಯ್ದೆಯನ್ನು ಶಾಸಕರ ಮೇಲೆ ಪ್ರಯೋಗಿಸಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.

ಪಕ್ಷದ ಹಿರಿಯರಾದ ನನ್ನನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಹೀಗಾಗಿ ನಾನು ಜೆಡಿಎಸ್‍ಗೆ ಗುಡ್ ಬೈ ಹೇಳುತ್ತೇನೆ ಎಂದು ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ. ಇದಕ್ಕೂ ಮುನ್ನ ಶಾಸಕ ರಮೇಶ್‍ಕುಮಾರ್ ಅವರು ಶ್ರೀನಿವಾಸ್ ಗೌಡ ಅವರನ್ನು ಭೇಟಿಯಾಗಿ ಗೌಪ್ಯವಾಗಿ ಮಾತುಕತೆ ನಡೆಸಿದರು.

ಇದು ಫಲಪ್ರದವಾಗಿದ್ದರಿಂದಲೇ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂದು ತಿಳಿದುಬಂದಿದೆ.