Saturday, March 7, 2026
Saturday, March 7, 2026
Home Blog Page 1541

ಭಾರತ ತಂಡದ ದಾಖಲೆ ಮೊತ್ತ: ಹಾಗೆಯೇ ರನ್ ಚಚ್ಚಿ ಗೆದ್ದ ದ.ಆಫ್ರಿಕಾ

0

ಭಾರತದ ವಿರುದ್ಧ ದಕ್ಷಿಣ ಆಫ್ರಿಕಾದ ಭರ್ಜರಿ ಜಯ ಗಳಿಸಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ 20 ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ 7 ವಿಕೆಟ್ ಗೆಲುವು.

ಶ್ರೇಷ್ಠ ಬ್ಯಾಟಿಂಗ್ ಹೊರತಾಗಿಯೂ ನಿರಾಶದಾಯಕ ಬೌಲಿಂಗ್ ಹಾಗೂ ಕಳಪೆ ಫೀಲ್ಡಿಂಗ್ ನಿಂದಾಗಿ ರಿಷಬ್ ಪಂತ್ ಸಾರಥ್ಯದ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ ಹೇಳು ವಿಕೆಟ್ ಗಳ ಅಂತರದಿಂದ ಸೋಲು ಕಂಡಿತು. ಇದರೊಂದಿಗೆ ಐದು ಪದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದ ಸೌತ್ ಆಫ್ರಿಕಾ ತಂಡ ಜೂನ್ 12 ರಂದು ಕಟಕ್ ನ ಬರಾಬತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕೆ ಆತ್ಮವಿಶ್ವಾಸ ಗಳಿಸಿಕೊಂಡಿತು.
ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ಟಾಸ್ ಸೋತು ಭಾರತ ಮೊದಲು ಬ್ಯಾಟಿಂಗ್ ಆಹ್ವಾನ ಪಡೆಯಿತು.
ಟೀಮ್ ಇಂಡಿಯಾ 20 ಓವರ್ ಗಳಲ್ಲಿ 4 ವಿಕೆಟ್ ಗೆ 211 ರನ್ ಗಳ ಬೃಹತ್ ಮೊತ್ತ ಗಳಿಸಿತು. ಇದು ದಕ್ಷಿಣ ಆಫ್ರಿಕಾ ವಿರುದ್ಧ ಇಂಡಿಯಾ ದಾಖಲಿಸಿದ ಗರಿಷ್ಠ ಮೊತ್ತ. ರೀತಿಯಾಗಿ ಪ್ರತಿಯಾಗಿ, ದಕ್ಷಿಣ ಆಫ್ರಿಕಾ ತಂಡ 19.1 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಇದರೊಂದಿಗೆ ಗರಿಷ್ಠ ಮೊತ್ತ ಬೆನ್ನಟ್ಟಿದ ಹಿರಿಮೆಗೂ ಭಾಜನವಾಗಿತ್ತು. ಇದೇ ವೇಳೆ, ಸತತ 13 ಪಂದ್ಯ ಗೆದ್ದು ವಿಶ್ವದಾಖಲೆಗೇಯುವ ಭಾರತದ ಕನಸು ಭಗ್ನಗೊಂಡಿತು.

ಗುರಿಯ ಹಾದಿಯಲ್ಲಿ 81 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಹರಿಣ ಪಡೆ, ರಿಸ್ಸಿ ವಾನ್ ಡರ್ ಡೆಸನ್ (75) ಮತ್ತು ಡೇವಿಡ್ ಮಿಲ್ಲರ್ (64) ಅವರ ಸಿಡಿಲಬ್ಬರದ ಆಟದಿಂದ ಚೇತರಿಸಿಕೊಂಡಿತು. ಅತಿಥೇಯ ಬೋಲಿಂಗ್ ಬಳಗವನ್ನು ಮನಬಂದಂತೆ ದಂಡಿಸಿದ ಈ ಜೋಡಿ ಮುರಿಯದೆ ನಾಲ್ಕನೇ ವಿಕೆಟ್ಗೆ ಕೇವಲ 64 ಎಸೆತದಲ್ಲಿ 131ರನ್ ಸಿಡಿಸಿ ಐದು ಎಸೆತಗಳು ಬಾಕಿ ಇರುವಂತೆಯೇ ತಮ್ಮ ತಂಡಕ್ಕೆ ಜಯಗಳಿಸಿತು.
ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಕಿಶನ್ ಕಿಶನ್ ಮತ್ತು ಋತುರಾಜ ಗಾಯಕ್ವಾಡ್ ಜೋಡಿ ಇಂದ ಉತ್ತಮ ಆರಂಭ ದೊರೆಯಿತು. ಎಡಗೈ ಬಲಗೈ ಜೋಡಿ ಆಟಕ್ಕೆ ಪ್ರವಾಸಿ ತಂಡದ ಬೌಲರ್ ಗಳು ಬೆಚ್ಚಿಬಿದ್ದರು. ಅದರಲ್ಲೂ ವಿಶೇಷವಾಗಿ ಎಡಗೈ ದಾಂಡಿಗ ಇಶನ್ ಕಿಶನ್ ಕಡಿವಾಣ ಹಾಕಲು ಹರಿಣ ಪಡೆಗೆ ಸಾಧ್ಯವಾಗಲಿಲ್ಲ. ಋತುರಾಜ (23) ಜೊತೆ ಮೊದಲ ವಿಕೆಟ್ ಗೆ 57 ರನ್ ಕಲೆಹಾಕಿದ ಇಶನ್ ಕಿಶನ್, ಆಬಳಿಕ ಶ್ರೇಯಸ್ ಅಯ್ಯರ್ (36) ಸಂಗಡ ಎರಡನೇ ವಿಕೆಟ್ ಗೆ 80ರ ಕೂಡಿಹಾಕಿದರು.

ಸ್ಮಶಾನಕ್ಕೆ ಸೂಕ್ತಜಾಗ ನೀಡದ ಸರ್ಕಾರದ ಬಗ್ಗೆ ಕೋರ್ಟ್ ಚಾಟಿ

0

ಸ್ಮಶಾನ ಜಾಗದ ಕೊರತೆ ನೀಗಿಸುವ ನಿಟ್ಟಿನಲ್ಲಿ ಕೋರ್ಟ್ ಆದೇಶ ಪಾಲನೆ ಮಾಡದ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಹೈಕೋರ್ಟ್, ಹೆಣಗಳನ್ನು ರಸ್ತೆಯಲ್ಲಿ ಹೂಳಬೇಕೆ? ನಾಚಿಕೆಯಿಲ್ಲದ ಭಂಡಗೆಟ್ಟ ಸರ್ಕಾರಕ್ಕೆ ಬುದ್ದಿಕಲಿಸಬೇಕು ಎಂದು ಎಚ್ಚರಿಕೆ ನೀಡಿದೆ.

ಬೆಂಗಳೂರಿನ ಮಹಮ್ಮದ್ ಇಕ್ಬಾಲ್ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯು ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾ.ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಾಗ ನ್ಯಾಯಪೀಠ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

ಇದಲ್ಲದೆ, ಹೆಣಗಳನ್ನು ರಸ್ತೆಗಳಲ್ಲಿ ಹೂಳಬೇಕಾ ಎಂದು ಪ್ರಶ್ನಿಸಿದೆ. ಸ್ಮಶಾನವಿಲ್ಲದ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸುವ ಕುರಿತ 15 ದಿನಗಳಲ್ಲಿ ಕೋರ್ಟ್ ಆದೇಶ ಪೂರ್ಣ ಪ್ರಮಾಣದಲ್ಲಿ ಪಾಲಿಸದಿದ್ದರೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸಿ ಜೈಲಿಗೆ ಕಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ರಾಜ್ಯದ ಸಹಕಾರಿ ಬ್ಯಾಂಕೊಂದರ ಪರವಾನಗಿ ರದ್ದುಪಡಿಸಿದ ಆರ್ ಬಿಐ

0

ಭಾರತೀಯ ರಿಸರ್ವ್ ಬ್ಯಾಂಕ್ ಕರ್ನಾಟಕದ ಸಹಕಾರಿ ಬ್ಯಾಂಕ್ ವಿರುದ್ಧ ಪ್ರಮುಖ ಕ್ರಮ ಕೈಗೊಂಡಿದೆ.

ಬಾಗಲಕೋಟೆಯಲ್ಲಿರುವ ಮುಧೋಳ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ಪರವಾನಗಿಯನ್ನು ಆರ್‌ಬಿಐ ರದ್ದುಗೊಳಿಸಿದೆ. ಈ ಆದೇಶ ಜೂನ್ 8ರಿಂದ ಜಾರಿಗೆ ಬಂದಿದೆ.
ಆರ್‌ಬಿಐನ ಈ ಕ್ರಮದ ನಂತರ ಮುಧೋಳ ಸಹಕಾರಿ ಬ್ಯಾಂಕ್‌ಗೆ ಠೇವಣಿ ಮರುಪಾವತಿ ಮತ್ತು ನಗದು ತೆಗೆದುಕೊಳ್ಳುವುದನ್ನು ನಿರ್ಬಂಧಿಸಲಾಗಿದೆ.

ಪರವಾನಗಿ ರದ್ದುಗೊಳಿಸುವುದಾಗಿ ಘೋಷಿಸಿರುವ ಆರ್‌ಬಿಐ ಮುಧೋಳ ಕೋ-ಆಪರೇಟಿವ್ ಬ್ಯಾಂಕ್‌ಗೆ ಸಾಕಷ್ಟು ಬಂಡವಾಳ ಮತ್ತು ಆದಾಯದ ನಿರೀಕ್ಷೆಗಳಿಲ್ಲ ಎಂದು ಹೇಳಿದೆ. ಬ್ಯಾಂಕ್ ತನ್ನ ಪ್ರಸ್ತುತ ಹಣಕಾಸಿನ ಸ್ಥಿತಿಯೊಂದಿಗೆ ತನ್ನ ಅಸ್ತಿತ್ವದಲ್ಲಿರುವ ಠೇವಣಿದಾರರಿಗೆ ಪೂರ್ಣಪ್ರಮಾಣದ ಹಣ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ಹೇಳಿದೆ

ಇಂಡಿಗೊ ‌ವಿಮಾನ ಸಂಸ್ಥೆಯಿಂದ ನಟಿ ಪೂಜಾಹೆಗ್ಡೆ ಅವರಲ್ಲಿ ಕ್ಷಮಾಯಾಚನೆ

0

ಸೌತ್ ಇಂಡಿಯಾದ ಫೇಮಸ್ ನಟಿ ಪೂಜಾ ಹೆಗ್ಡೆ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ.

ಆದರೆ ಈ ಭಾರಿ ಮಾತ್ರ ತಮಗೆ ವಿಮಾನಯಾನದ ವೇಳೆ ಉಂಟಾದ ಕೆಟ್ಟ ಅನುಭವವನ್ನು ಶೇರ್ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಫುಲ್ ವೈರಲ್ ಆಗಿದೆ.

ಬಾಲಿವುಡ್ ಸೇರಿದಂತೆ ತಮಿಳು ಹಾಗೂ ತೆಲುಗು ಸಿನಿಮಾ ದಲ್ಲಿ ಸದಾ ಬ್ಯುಸಿಯಾಗಿರರಕ ಪೂಜಾ ಹೆಗ್ಡೆ, ಇತ್ತೀಚಿಗೆ ತಮಗೆ ಮುಂಬೈನಿಂದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುವಾಗ ಕೆಟ್ಟ ಅನುಭವವಾಗಿದೆ ಎಂದು ಆರೋಪಿಸಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ ಪೂಜಾ ಹೆಗ್ಡೆ ಅವರು ತಾವು ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ತಮಗೆ ವಿಮಾನ ಸಿಬ್ಬಂದಿಯಿಂದ ಅವಮಾನವಾಗಿದೆ. ಅತಿರೇಕದ ಹಾಗೂ ಅತ್ಯಂತ ಕಟುವಾದ ವರ್ತನೆ ತೋರಿದರು ಎಂದು ಪೂಜಾ ಹೆಗ್ಡೆ ಇಂಡಿಗೋ ವಿಮಾನದ ವಿರುದ್ಧ ದೂರಿದ್ದಾರೆ.

ಈ ಬಗ್ಗೆ ವಿವರವಾಗಿ ಟ್ವೀಟ್ ಮಾಡಿರುವ ಪೂಜಾ ಹೆಗ್ಡೆ, ವಿಷಾದದಿಂದ ಬರೆಯುತ್ತಿದ್ದೇನೆ. ಇಂಡಿಗೋ ವಿಮಾನದ ಸಿಬ್ಬಂದಿ ಅತ್ಯಂತ ಒರಟುತನದಿಂದ ವರ್ತಿಸಿದರು. ವಿಫುಲ್ ನಕಾಶೆ ಎಂಬ ಸಿಬ್ಬಂದಿ ನನ್ನೊಂದಿಗೆ ಅತ್ಯಂತ ದುರಂಹಕಾರದಿಂದ ನಡೆದುಕೊಂಡರು. ಯಾವುದೇ ಕಾರಣವಿಲ್ಲದೇ ಈ ರೀತಿ ನಡೆದುಕೊಂಡಿದ್ದಾರೆ. ಅವರ ಮಾತು ಬೆದರಿಕೆಯಂತಿತ್ತು.‌ ಸಾಮಾನ್ಯವಾಗಿ‌ ನಾನು ಇಂತಹ ವಿಚಾರಗಳ ಬಗ್ಗೆ ಟ್ವೀಟ್ ಮಾಡೋದಿಲ್ಲ. ಆದರೆ ಈ ಭಾರಿ ಅನಿವಾರ್ಯವಾಗಿದೆ ಎಂದಿದ್ದಾರೆ.

ಈ ಮಧ್ಯೆ ಇಂಡಿಗೋ ವಿಮಾನದಲ್ಲಿ ಪೂಜಾ ಹೆಗ್ಡೆಗೆ ಅವಮಾನವಾಗಿದೆ ಅನ್ನೋ ಸಂಗತಿ ಟ್ವೀಟ್ ನಲ್ಲಿ ಬಹಿರಂಗವಾಗುತ್ತಿದ್ದಂತೆ ಇಂಡಿಗೋ ಸಂಸ್ಥೆ ಟ್ವೀಟರ್ ನಲ್ಲಿ ಪೂಜಾ ಹೆಗ್ಡೆ ಬಳಿ ಕ್ಷಮೆಯಾಚಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಇಂಡಿಗೋ ಸಂಸ್ಥೆ, ದಯಮಾಡಿ ಕ್ಷಮೆ ಇರಲಿ. ನಾವು ನಿಮ್ಮನ್ನು ಶೀಘ್ರದಲ್ಲೇ ಸಂಪರ್ಕ ಮಾಡುತ್ತೇವೆ. ನಿಮ್ಮ ಪಿಎನ್‌ಆರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಕಳುಹಿಸಿಕೊಡಿ ಎಂದು ಸಂಸ್ಥೆ ಕೇಳಿದೆ.

ಒಟ್ಟಿನಲ್ಲಿ ವಿಮಾನಯಾನ ಸಂಸ್ಥೆಗಳ ದುವರ್ತನೆಗೆ ಸೆಲೆಬ್ರಿಟಿಗಳು ಹೊರತಲ್ಲ ಅನ್ನೋದು ಈಗ ಸಾಬೀತಾಗಿದೆ.

ಉಪ್ಪಿನಂಗಡಿ ಕಾಲೇಜಿನಲ್ಲಿ ಹಿಜಾಬ್ ತೆಗೆದು ವಿದ್ಯಾರ್ಥಿನಿಯರು ಹಾಜರು

0

ಮಂಗಳೂರಿನ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದ ತಣ್ಣಗಾಗುವ ಲಕ್ಷಣಗಳು ಕಾಣುತ್ತಿದೆ. ತಮ್ಮ ಪಟ್ಟು ಸಡಿಲಿಸಿ ಕಾಲೇಜಿನ ಸುಮಾರು 46 ವಿದ್ಯಾರ್ಥಿನಿಯರು ಹಿಜಾಬ್ ಕಳಚಿಟ್ಟು ತರಗತಿಗಳಿಗೆ ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟು 101 ಮುಸ್ಲಿಂ ವಿದ್ಯಾರ್ಥಿನಿಯರು ಇರುವ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜು ಇದಾಗಿದ್ದು, ಕಳೆದ ಒಂದು ವಾರದಿಂದ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಸುದ್ದಿಯಾಗಿತ್ತು.

ಈ ವಿವಾದ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜಿನ ಆರು ಮಂದಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ನಮಗೆ ಹಿಜಾಬ್‌ ಬೇಕು ಎಂದು ಹಠ ಹಿಡಿದರು. ಕೊನೆಗೆ ಕಾಲೇಜಿ ಮಂಡಳಿ ಈ ಆರು ವಿದ್ಯಾರ್ಥಿನಿಯರನ್ನು 6 ದಿನಗಳ ಕಾಲ ಅಮಾನತು ಮಾಡಿತ್ತು.

ರಾಜ್ಯದಲ್ಲಿ ಹಿಜಾಬ್ ವಿವಾದ ತಣ್ಣಗಾಗಿದ್ದ ಸಂದರ್ಭದಲ್ಲಿ ಮಂಗಳೂರಿನ ಶ್ವವಿದ್ಯಾಲಯ ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಮತ್ತೆ ಹಿಜಾಬ್ ತೊಡುತ್ತೇವೆ. ವಿಶ್ವವಿದ್ಯಾಲಯದಲ್ಲಿ ನಿಯಮದಲ್ಲಿ ಹಿಜಾಬ್ ತೊಡಲು ಅವಕಾಶ ಇದೆ ಎಂದು ಹೇಳಿ ಮೊದಲು ಹಿಜಾಬ್‌ ವಿವಾದ ಪುನಾರಂಭ ಮಾಡಿದ್ದರು.

ಇದೀಗ ಆರೂ ವಿದ್ಯಾರ್ಥಿನಿಯರು ಕಾಲೇಜಿನ ಸಮವಸ್ತ್ರ ನಿಯಮಾಳಿಗಳನ್ನು ಉಲ್ಲಂಘಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟು ಗುರುವಾರದಿಂದ ಕಾಲೇಜಿಗೆ ಹಾಜರಾಗಿದ್ದಾರೆ.

ನೀವು ಷೇರು ಮಾರುಕಟ್ಟೆಯಲ್ಲಿ ಆಸಕ್ತರೆ ? ಇಲ್ಲಿದೆ ಮಾಹಿತಿ

0

ಹೂಡಿಕೆಗಳ ಜಗದ್ಗುರು ವಾರೆನ್ ಬಫೆಟ್ ಅವರು ಹೇಳುವಂತೆ, ದೀರ್ಘಕಾಲದವರೆಗೆ ಷೇರುಗಳನ್ನು ಇಟ್ಟುಕೊಳ್ಳದ ಹೊರತು ಜನರು ಅವುಗಳನ್ನು ಖರೀದಿಸಬಾರದು ಎನ್ನುತ್ತಾರೆ.

ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ವಾರೆನ್ ಬಫೆಟ್ ಹಂಚಿಕೊಂಡ ವಿಡಿಯೋದಲ್ಲಿ, ಬರ್ಕ್‌ಷೈರ್ ಹ್ಯಾಥ್‌ವೇ ಸಿಇಒ ಹೂಡಿಕೆದಾರರಿಗೆ ಷೇರುಗಳು ಶೇ 50ರಷ್ಟು ಕುಸಿದರೂ ಸಿದ್ಧರಾಗಿರಲು ಸಲಹೆ ನೀಡಿರುವುದು ಕಂಡುಬಂದಿದೆ.

ಹೂಡಿಕೆದಾರರು ಸರಿಯಾದ ಮನಸ್ಥಿತಿ ಹೊಂದಿರಬೇಕು. ಹಾಗೊಂದು ವೇಳೆ ಇಲ್ಲದಿದ್ದಲ್ಲಿ ಬೆಲೆಯ ಏರಿಳಿತಗಳಿಂದ ಅಥವಾ ಇತರರು ಏನು ಹೇಳುತ್ತಾರೆಂದು ಅವಲಂಬಿಸಿ ಕಾರ್ಯನಿರ್ವಹಿಸಬೇಕು ಎಂದುಕೊಂಡು, ತಪ್ಪಾದ ಸಮಯದಲ್ಲಿ ಷೇರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಶುರು ಮಾಡುತ್ತಾರೆ. ಜಮೀನನ್ನು ಇಟ್ಟುಕೊಳ್ಳುವಷ್ಟು ಆರ್ಥಿಕ ಮತ್ತು ಮಾನಸಿಕ ಸಿದ್ಧತೆ ಇದಕ್ಕೆ ಅಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ.

ಬರ್ಕ್‌ಷೈರ್ ಇತಿಹಾಸದಲ್ಲಿ ಮೂರು ಬಾರಿ ಸ್ಟಾಕ್ ಶೇ 50ರಷ್ಟು ಕುಸಿದಿದೆ, ಎಂದು ಅವರು ಹೇಳಿದ್ದಾರೆ. “ಈಗ ನೀವು ಅದನ್ನು ಹೊಂದಿದ್ದಲ್ಲಿ ಅಥವಾ ಹಣವನ್ನು ಸಾಲ ಪಡೆದಿದ್ದರೆ ನಿಮ್ಮನ್ನು ಶುದ್ಧಗೊಳಿಸಬಹುದು.”
ಬರ್ಕ್‌ಷೈರ್ ಷೇರುಗಳು ಕುಸಿದಾಗ ಅದರಲ್ಲಿ ಏನೂ ತಪ್ಪಿಲ್ಲ ಎಂದರು.

“ಮುಂದಿನ ವರ್ಷ ಮಳೆ ಬೀಳಲಿದೆ ಎಂದು ಅವರು ಭಾವಿಸುತ್ತಾರೆಯೇ ಎಂಬುದರ ಆಧಾರದ ಮೇಲೆ ಯಾರೂ ಜಮೀನನ್ನು ಖರೀದಿಸುವುದಿಲ್ಲ” ಎಂದು ಅವರು ಹೇಳಿದ್ದರು.
ಬಫೆಟ್ ಅವರು ಯಾವ ಕಂಪೆನಿಗಳಲ್ಲಿ ಹೂಡಿಕೆ ಮಾಡಬೇಕೆಂದು ನಿರ್ಧರಿಸಲು ಸಹಾಯ ಆಗುವುದಕ್ಕೆ ಮೂರು ನಿಯಮಗಳನ್ನು ಹೊಂದಿದ್ದಾರೆ. “ಮೊದಲನೆಯದಾಗಿ, ಅವರು ತಮ್ಮ ಕಾರ್ಯಾಚರಣೆಯಲ್ಲಿ ಅಗತ್ಯವಿರುವ ನಿವ್ವಳ ಸ್ಪಷ್ಟವಾದ ಬಂಡವಾಳದ ಮೇಲೆ ಉತ್ತಮ ಆದಾಯವನ್ನು ಗಳಿಸಬೇಕು. ಎರಡನೆಯದಾಗಿ, ಅವುಗಳನ್ನು ಸಮರ್ಥ ಮತ್ತು ಪ್ರಾಮಾಣಿಕ ವ್ಯವಸ್ಥಾಪಕರು ನಡೆಸಬೇಕು. ಅಂತಿಮವಾಗಿ, ಷೇರು ಸಮಂಜಸವಾದ ಬೆಲೆಯಲ್ಲಿ ಲಭ್ಯವಿರಬೇಕು,” ಎಂದು ಬಫೆಟ್​ ಅವರು 2019ರಲ್ಲಿ ಬರ್ಕ್‌ಷೈರ್ ಷೇರುದಾರರಿಗೆ ತಿಳಿಸಿದ್ದರು.

ವಿಯಟ್ನಾಂ ಗೆ ಅತಿವೇಗದ ರಕ್ಷಣಾ ಹಡಗುಗಳ ಹಸ್ತಾಂತರ

0

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗ ₹770 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ 12 ಅತಿ ವೇಗದ ರಕ್ಷಣಾ ಹಡಗುಗಳನ್ನು ವಿಯೆಟ್ನಾಂಗೆ ಹಸ್ತಾಂತರ ಮಾಡಿದರು.

ದಕ್ಷಿಣ ಚೀನಾ ಸಮುದ್ರದ ಪ್ರಾಂತ್ಯದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಾಬಲ್ಯವನ್ನು ಎದುರಿಸುವ ನಿಟ್ಟಿನಲ್ಲಿ ಭಾರತ ಮತ್ತು ವಿಯೆಟ್ನಾಂ ದೇಶಗಳ ಭದ್ರತಾ ಸಹಕಾರದ ನಡುವೆ ನಡೆದ ಈ ಬೆಳವಣಿಗೆ ಮಹತ್ವ ಪಡೆದಿದೆ.

ಜೂನ್ 8 ರಿಂದ ವಿಯೆಟ್ನಾಂ ಪ್ರವಾಸ ಕೈಗೊಂಡಿರುವ ರಾಜನಾಥ್ ಸಿಂಗ್ ಅವರು, ಹಾಂಗ್ ಹಾ ಶಿಪ್‌ಯಾರ್ಡ್‌ನಲ್ಲಿ ಈ ಹಡಗುಗಳನ್ನು ಸಾಲದ ರೂಪದ ಯೋಜನೆಯಡಿ ವಿಯೆಟ್ನಾಂಗೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಈ ಯೋಜನೆಯು ವಿಶ್ವಕ್ಕಾಗಿ ಭಾರತದಲ್ಲಿ ನಿರ್ಮಿಸಿ (ಮೇಕ್ ಇನ್ ಇಂಡಿಯಾ- ಮೇಕ್ ಫಾರ್ ದಿ ವರ್ಲ್ಡ್ ಮಿಷನ್) ಎಂಬುದಕ್ಕೆ ಉದಾಹರಣೆಯಾಗಿದೆ ಎಂದರು.

ಭಾರತ ನೀಡಿದ ಸಾಲದ ಯೋಜನೆಯಡಿ 12 ಅತಿವೇಗದ ರಕ್ಷಣಾ ಹಡಗುಗಳ ನಿರ್ಮಾಣ ಯೋಜನೆ ಪೂರ್ಣಗೊಳಿಸಲಾಗಿದೆ. ಮೊದಲ 5 ಹಡಗುಗಳನ್ನು ಭಾರತದಲ್ಲಿ ಎಲ್‌ಅಂಡ್‌ಟಿ ಶಿಪ್‌ಯಾರ್ಡ್‌ನಲ್ಲಿ ನಿರ್ಮಿಸಲಾಗಿತ್ತು.

ಇದೀಗ ಉಳಿದ 7 ಹಡುಗಗಳನ್ನು ಹಾಂಗ್ ಹಾ ಶಿಪ್ ಯಾರ್ಡ್‌ನಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಯು ಉಭಯ ದೇಶಗಳ ನಡುವೆ ಹೆಚ್ಚಿನ ಭದ್ರತಾ ಸಹಕಾರ ಯೋಜನೆಗಳಿಗೆ ಪೂರಕವಾಗಲಿದೆ ಎಂಬ ಭರವಸೆಯಿದೆ ಎಂದರು.

ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣಾ ದಿನಾಂಕ ಘೋಷಣೆ

0

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24ಕ್ಕೆ ಅಂತ್ಯವಾಗಲಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ರಾಷ್ಟ್ರಪತಿ ಚುನಾವಣೆ ದಿನಾಂಕ ಘೋಷಣೆ ಮಾಡಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನವಾಣಾ ಆಯುಕ್ತರು, ಜುಲೈ 24ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧಿಕಾರ ಅವಧಿ ಮುಗಿಯುತ್ತಿದ್ದು, ಜುಲೈ 25ರೊಳಗೆ ನೂತನ ರಾಷ್ರಪತಿ ಪ್ರಮಾಣವಚನ ಸ್ವೀಕರಿಸಬೇಕಿದೆ ಎಂದರು.

ಜೂನ್ 15ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು. ಜೂನ್ 29 ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಎಂದು ತಿಳಿಸಿದರು.
ಜುಲೈ 18ರಂದು ರಾಷ್ಟ್ರಪತಿ ಚುನಾವಣೆಗೆ ದಿನಾಂಕ ನಿಗದಿ ಮಾಡಲಾಗಿದ್ದು, ಜುಲೈ 21ರಂದು ಮತ ಎಣಿಕೆ ನಡೆಯಲಿದೆ. ಜುಲೈ 25ರಂದು ನೂತನ ರಾಷ್ಟ್ರಪತಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದರು.

ಶಿವಮೊಗ್ಗ ಕಸಾಪ ಆಶ್ರಯದಲ್ಲಿ ದತ್ತಿನಿಧಿ ಕಾರ್ಯಕ್ರಮ

0

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಜೊತೆಯಲ್ಲಿ ಜೂನ್ 9 ರಂದು ಸಂಜೆ ಶರಾವತಿನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ದತ್ತಿ ನಿಧಿ ಕಾರ್ಯಕ್ರಮ ನಡೆಯಿತು.

ದತ್ತಿ ದಾನಿಗಳಾದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶಿವಮೊಗ್ಗ ಶಾಖಾ ಮಠವು ನೀಡಿರುವ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಪುರಸ್ಕೃತ ಭೈರವೈಕ್ಯ ಡಾ. ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ದತ್ತಿ ಅಂಗವಾಗಿ ನಿರ್ಮಲ ಧರ್ಮ- ರಾಜ್ಯ ಪಾಲನೆ ವಿಚಾರವಾಗಿ ಸಾಹಿತಿಗಳು, ಕಡೂರು ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ರಾದ ಡಾ. ದೊರೇಶ್ ಅವರು ಮಾತನಾಡಿದರು.

ಸಂಗೀತ ಕ್ಷೇತ್ರಕ್ಕೆ ದೇವಂಗಿ ಟಿ. ಚಂದ್ರಶೇಖರ್ ಕೊಡುಗೆ ವಿಚಾರವಾಗಿ ಡಾ. ಡಿ.ಸಿ. ಚಿತ್ರಾ ಶ್ರೀನಿವಾಸ ಮಾತನಾಡಿದರು. ಗಾಯಕ ಆನಂದಪುರದ ಭದ್ರಪ್ಪಗೌಡ ಅವರು ಹಲವು ಗೀತೆಗಳನ್ನು ಹಾಡಿದರು. ಕಡಿದಾಳು ಮಂಜಪ್ಪ ಅವರನ್ನು ಕುರಿತು ಪ್ರೊ. ಜೆ. ಎಲ್ ಪದ್ಮನಾಭ ಅವರು ಮಾತನಾಡಿದರು.

ಪರಮಪೂಜ್ಯ ಶ್ರೀ ಶ್ರೀ ಪ್ರಸನ್ನನಾಥಸ್ವಾಮೀಜಿ ಅವರು ಗಿಡಕ್ಕೆ ನೀರೆಯುವ ಮೂಲಕ ಉದ್ಘಾಟಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಿ.ಸಿ. ಮೈತ್ರೇಯ ಉಪಸ್ಥಿತರಿದ್ದರು. ಕಸಾಪದ ಮೂವತ್ತು ಕಲಾವಿದರು ಸಾಮೂಹಿಕವಾಗಿ ನಾಡಗೀತೆಯನ್ನು ಹಾಡಿದರು. ತಾ. ಕಸಾಪ ಅಧ್ಯಕ್ಷರಾದ ಮಹಾದೇವಿ ಸ್ವಾಗತಿಸಿದರು.

ಉಪನ್ಯಾಸಕಿ ಸುಜಾತಾ ನಿರೂಪಿಸಿದರು. ಬಿ. ಟಿ. ಅಂಬಿಕಾ ವಂದಿಸಿದರು. ಎಂ. ನವೀನ್ ಕುಮಾರ್, ಡಿ. ಗಣೇಶ್, ಶಿವಪ್ಪಗೌಡ, ಎಂ. ಎಂ. ಸ್ವಾಮಿ ಸೇರಿದಂತೆ ಹಲವರು ವಿವಿಧ ಕಾರ್ಯಗಳನ್ನು ನೆರವೇರಿಸಿದರು.

ಪಿಎಸ್ ಐ ನೇಮಕಾತಿ ಅಕ್ರಮ: ಸಿಐಡಿ ಬಲೆಗೆ ಮತ್ತೆರಡು ವ್ಯಕ್ತಿಗಳು

0

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಸಂಬಂಧ ಸಿಐಡಿ ಅಧಿಕಾರಿಗಳು ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಮಹೇಶ ಹಿರೊಳ್ಳಿ ಹಾಗೂ ಸೈಫನ್ ಕರ್ಜಗಿ ಬಂಧಿತ ಆರೋಪಿಗಳಾಗಿದ್ದಾರೆ. ಪಿಎಸ್‌ಐ ಪರೀಕ್ಷೆ ಬರೆದಿದ್ದ ಇಸ್ಮಾಯಿಲ್ ಖಾದರ್ ಎಂಬಾತ ಪರಾರಿಯಾಗಿದ್ದು, ಆತನ ಬಂಧನಕ್ಕೂ ಬಲೆ ಬೀಸಲಾಗಿದೆ ಎನ್ನಲಾಗಿದೆ.

ಬಂಧಿತ ಆರೋಪಿಗಳ ವಿರುದ್ಧ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಪ್ರಕರಣದಲ್ಲಿ ಈವರೆಗೆ ಬಂಧಿತರ ಸಂಖ್ಯೆ 41ಕ್ಕೆ ಏರಿಕೆ ಆಗಿದೆ.

ಇಸ್ಮಾಯಿಲ್ ಖಾದರ್ ಈಗಾಗಲೇ ಪೊಲೀಸ್ ಇಲಾಖೆಯಲ್ಲಿದ್ದು, ಪಿಎಸ್‌ಐ ಪರೀಕ್ಷೆ ಬರೆದಿದ್ದ. ಆರ್.ಡಿ ಪಾಟೀಲ್ ಸಹಾಯದಿಂದ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದ ಎನ್ನಲಾಗುತ್ತಿದೆ. ಇವರೆಲ್ಲರೂ ಅಫಜಲಪುರ ತಾಲೂಕಿನ ಕರ್ಜಗಿ ಮೂಲದವರಾಗಿದ್ದಾರೆ.

ಬ್ಲೂಟೂತ್ ಕಿಂಗ್ಪಿನ್ ಆರ್. ಡಿ ಪಾಟೀಲ್ಗೆ ಆಪ್ತರಾಗಿದ್ದ ಆರೋಪಿಗಳು, ಆತನ ಜತೆಗೂಡಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ವಿಷಯ ಸಿಐಡಿ ತನಿಖೆಯಲ್ಲಿ ಬಯಲಾಗಿದೆ‌.