Monday, March 9, 2026
Monday, March 9, 2026
Home Blog Page 1533

ನ್ಯಾಷನಲ್ ಹೆರಾಲ್ಡ್ ಪ್ರಕರಣದ ಬಗ್ಗೆ ಬಿಜೆಪಿ ದ್ವೇಷ ರಾಜಕಾರಣ

0

ನ್ಯಾಷನಲ್ ಹೆರಾಲ್ಡ್ ಬಿಜೆಪಿಯ ದ್ವೇಷ ರಾಜಕಾರಣದ ಫಲವೇ ಹೊರತು ಅದರಲ್ಲಿ ಸತ್ಯವಿಲ್ಲ ಎಂದು ಅದು ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

ಈ ವಿಷಯದ ಕುರಿತಾಗಿ ಕಾಂಗ್ರೆಸ್ ಪಕ್ಷವು ಸರಣಿ ಪ್ರಶ್ನೆಗಳನ್ನು ಬಿಜೆಪಿ ಮುಂದೆ ಇಟ್ಟಿದೆ.

ಡಿಮಾನಿಟೈಸೇಷನ್ ಸಮಯದಲ್ಲಿ ಅಮಿತ್ ಶಾ ಅಧ್ಯಕ್ಷತೆಯ ಅಹಮದಾಬಾದ್ ಕೋ ಆಪರೇಟಿವ್ ಬ್ಯಾಂಕ್‍ನಲ್ಲಿ 745 ಕೋಟಿ ರೂ ಗಳ ವ್ಯವಹಾರ ನಡೆಯುತ್ತದೆ.ಡಿಮಾನಿಟೈಸೇಷನ್ ಸಮಯದಲ್ಲಿ ಅಷ್ಟೊಂದು ಮೊತ್ತದ ಹಣ ಎಲ್ಲಿಂದ ಬಂತು?. ಅಮಿತ್ ಶಾ ಪ್ರಕರಣದ ಇಡಿ ತನಿಖೆ ಯಾವಾಗ ಶುರುವಾಗುತ್ತದೆ?.
ವಿರೋಧಪಕ್ಷದಲ್ಲಿದ್ದಾಗ ಇಡಿ ಹೆಸರಲ್ಲಿ ನಿತ್ಯಕಿರುಕುಳ ಅನುಭವಿಸುತ್ತಿದ್ದ ನಾರಾಯಣ ರಾಣೆ,ಮುಕುಲ್ ರಾಯ್ ಅಂಥವರು ಬಿಜೆಪಿ ಸೇರಿದೊಡನೆ ಪರಮಪಾವನರಾಗುತ್ತಾರೆ. ಅವರ, ವಿರುದ್ಧದ ಇಡಿ ಪ್ರಕರಣಗಳೆಲ್ಲ ಧೂಳು ಹಿಡಿಯುತ್ತವೆ.

ಇದು ಬಿಜೆಪಿಯ ಅಸಲಿ ಮನಸ್ಥಿತಿ. ನ್ಯಾಷನಲ್ ಹೆರಾಲ್ಡ್ ಬಿಜೆಪಿಯ ದ್ವೇಷ ರಾಜಕಾರಣದ ಫಲವೇ ಹೊರತು ಅದರಲ್ಲಿ ಸತ್ಯವಿಲ್ಲ ಎಂದು ಕಾಂಗ್ರೆಸ್, ಬಿಜೆಪಿ ವಿರುದ್ಧ ಟೀಕೆಯನ್ನು ತಿಳಿಸಿದ್ದಾರೆ.

ಜೈರಾಮ್ ರಮೇಶ್ ಅವರಿಗೆ ಕಾಂಗ್ರೆಸ್ ನ ಸೋಷಿಯಲ್& ಡಿಜಿಟಲ್ ಮೀಡಿಯ ಹೊಣೆ

0

ಎರಡನೇ ಬಾರಿಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಜೈರಾಮ್ ರಮೇಶ್ ಅವರಿಗೆ ಮಹತ್ವದ ಹುದ್ದೆ ಸಿಕ್ಕಿದೆ.

ಕರ್ನಾಟಕ ಸಂಸದ ಜೈರಾಮ್ ರಮೇಶ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಗುರುವಾರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಎಐಸಿಸಿಯ ಮಾಹಿತಿ, ಸೋಷಿಯಲ್ , ಡಿಜಿಟಲ್ ಮಿಡಿಯಾ ವಿಭಾಗದ ಉಸ್ತುವಾರಿ ಸಹ ಜೈರಾಮ್ ರಮೇಶ್‌ಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ.

ರಣದೀಪ್ ಸಿಂಗ್ ಸುರ್ಜೇವಾಲ ಅವರು ಎಐಸಿಸಿಯ ಮಾಹಿತಿ, ಸೋಷಿಯಲ್ , ಡಿಜಿಟಲ್ ಮಿಡಿಯಾ ವಿಭಾಗದ ಉಸ್ತುವಾರಿಯಾಗಿದ್ದರು. ಈಗ ಅವರನ್ನು ಬದಲಿಸಿ ಜೈರಾಮ್ ರಮೇಶ್ ಅವರನ್ನು ನೇಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸುರ್ಜೇವಾಲ ಕೇವಲ ಕರ್ನಾಟಕ ಉಸ್ತುವಾರಿಯಾಗಿ ಮುಂದುವರಿಯಲಿದ್ದಾರೆ.

ಜೈರಾಮ್ ರಮೇಶ್ ಅವರು 2016ರಲ್ಲಿ ಕರ್ನಾಟಕದಿಂದಲೇ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಈಗ ಮತ್ತೆ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ವಿಶ್ವ ಯೋಗ ದಿನ ಶಿವಮೊಗ್ಗದಲ್ಲಿ ವಿಶೇಷ ಕಾರ್ಯಕ್ರಮಗಳು

0

ಜೂನ್ 21ರ ಬೆಳಗ್ಗೆ 5.50 ರಿಂದ 8.30 ರವರೆಗೆ ಶುಭಮಂಗಳ ಸಮುದಾಯ ಭವನದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಏರ್ಪಡಿಸಲಾಗಿದೆ.

ಶಿವಮೊಗ್ಗ ನಗರದ ಆರ್ಟ್ ಆಫ್ ಲಿವಿಂಗ್, ಸುಮೇರು ಯೋಗಕೇಂದ್ರ, ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಶನ್, ಅಮೃತ ಯೋಗ ಕೇಂದ್ರ, ಚಿರಂತನ ಯೋಗ ಹಾಗೂ ಸಂಗೀತ ಟ್ರಸ್ಟ್, ನಮ್ಮ ಯೋಗ ಕುಟುಂಬ, ಸಪ್ತ ಬಿಂದು ಯೋಗ ಮಂದಿರ, ನಿಹಾರಿಕಾ ಯೋಗಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಎಂಟನೆಯ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿದೆ. ಯೋಗ ಬಗ್ಗೆ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ಟ್ರಸ್ಟ್, ಪರೋಪಕಾರಂ ಸಂಸ್ಥೆ, ಜೆ. ಸಿ. ಐ, ಶಿವಮೊಗ್ಗ-ಮಲ್ನಾಡ್, ಜೆ. ಸಿ. ಶಿವಮೊಗ್ಗ-ಚಿಂತನ ಹಾಗೂ ಭಜನಾ ಪರಿಷತ್ ಇವರುಗಳ ವಿಶೇಷ ಸಹಕಾರವಿರುತ್ತದೆ.

ಈ ಕಾರ್ಯಕ್ರಮದಲ್ಲಿ ಸಾಮೂಹಿಕ ಯೋಗಾಭ್ಯಾಸ, ಸೂರ್ಯ ನಮಸ್ಕಾರ, ಆಸನ, ಪ್ರಾಣಾಯಾಮ, ಧ್ಯಾನ ನಂತರ ಉಪನ್ಯಾಸ, ಹಾಗೂ ಗುರುವಂದನಾ ಕಾರ್ಯಕ್ರಮ ಜರುಗಲಿದೆ.
ಶಿವಮೊಗ್ಗ ನಗರದ ಪ್ರಸಿದ್ಧ ಮಾನಸಿಕ ಹಾಗೂ ನರರೋಗ ತಜ್ಞರು ಮತ್ತು ಪಾಸಿಟಿವ್ ಮೈಂಡ್ ಹಾಸ್ಪಿಟಲ್ ಹಾಗೂ ಉತ್ತಮ ವಾಗ್ಮಿಗಳು ಆದ ಡಾಕ್ಟರ್ ಅರವಿಂದ್ ಎಸ್. ಟಿ ಇವರಿಂದ ಯೋಗದಿಂದ ಮನಸ್ಪೂರ್ತಿ ಎಂಬ ವಿಷಯವನ್ನು ಕುರಿತು ವಿಶೇಷ ಉಪನ್ಯಾಸವು ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಎಲ್ಲಾ ಯೋಗ ಸಂಸ್ಥೆಗಳ ಮುಖ್ಯಸ್ಥರು, ಆಹ್ವಾನಿತ ಅತಿಥಿಗಳು, ಸಾಮೂಹಿಕ ಯೋಗಾಭ್ಯಾಸ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಕೆಎಸ್ ಈಶ್ವರಪ್ಪನವರು, ಮಾಜಿ ಉಪ ಮುಖ್ಯಮಂತ್ರಿಗಳು, ಮಾಜಿ ಸಚಿವರು ಹಾಗೂ ಹಾಲಿ ಶಾಸಕರು, ಶಿವಮೊಗ್ಗ. ಸನ್ಮಾನ್ಯ ಶ್ರೀ ಕೆ. ಇ. ಕಾಂತೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಬಿಜೆಪಿ ಯುವ ಮುಖಂಡರು ಹಾಗೂ ಸನ್ಮಾನ್ಯ ಶ್ರೀ ರಾಹುಲ್ ಬಿದರೆ, ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರು ಇವರುಗಳು ಭಾಗವಹಿಸಲಿದ್ದಾರೆ.

ಯೋಗಾಸತ್ತರು, ಸಾರ್ವಜನಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿ ಕೊಡಬೇಕಾಗಿ ವಿನಂತಿ.

ಭಾಗವಹಿಸುವ ಪ್ರತಿಯೊಬ್ಬರು ಬಿಳಿ ಉಡುಪು ಧರಿಸಿ, ಜಮಖಾನ (ಯೋಗ ಮ್ಯಾಟ್) ತರತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ. ಶಬರೀಶ್ ಕಣ್ಣನ್-ಮೊಬೈಲ್ ನಂಬರ್. 9964072793, ಅಥವಾ ಯೋಗಾಚಾರ್ಯ ಶ್ರೀ ಅನಿಲ್ ಕುಮಾರ್ ಎಚ್. ಶೆಟ್ಟರ್- ಮೋ. 9886674375 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಶಬರೀಶ್ ಕಣ್ಣನ್, ಶ್ರೀ ಶಶಿಭೂಷಣ ಶಾಸ್ತ್ರಿ, ಶ್ರೀ ಅನಿಲ್ ಕುಮಾರ್ ಎಚ್ ಶೆಟ್ಟರ್, ಶ್ರೀಮತಿ ಸುಧಾ ಮಂಜುನಾಥ್, ಶ್ರೀಮತಿ ಶಾಂತ ಎಸ್ ಶೆಟ್ಟಿ, ಶ್ರೀ ಮೋಹನ್ ಮೂರ್ತಿ, ಶ್ರೀಮತಿ ಮಮತಾ ಚಂದ್ರಶೇಖರ್, ಶ್ರೀಕೆ. ಇ ಕಾಂತೇಶ್ ಶ್ರೀ ಲಕ್ಷ್ಮಿ ನಾರಾಯಣ್ ಕೌಶಿಕ್, ಶ್ರೀಧರ್, ಶ್ರೀ ಪ್ರದೀಪ್ ಕುಮಾರ್ ಮತ್ತಿತರು ಉಪಸ್ಥಿತರಿದ್ದರು.

ಗ್ಯಾಸ್ ಸಂಪರ್ಕ ಕಡಿತಮಾಡಿದ ರಷ್ಯದ ಬಗ್ಗೆ ಜರ್ಮನಿ ಪ್ರತಿಕ್ರಿಯೆ

0

ತಾಂತ್ರಿಕ ಕಾರಣಗಳಿಂದ ಯುರೋಪ್‌ಗೆ ಹೋಗುತ್ತಿದ್ದ, ಗ್ಯಾಸ್‌ ಸಪ್ಲೈಯನ್ನು ಬಂದ್‌ ಮಾಡುತ್ತಿದ್ದಿವಿ. ಹೀಗೆಂದು, ರಷ್ಯಾದ ಗ್ಯಾಸ್‌ ಪೂರೈಕೆದಾರ ಕಂಪನಿ ಗ್ಯಾಜ್‌ಪ್ರೋಂ ತಿಳಿಸಿದೆ.

ಈ ವಿಷಯದ ಬಗ್ಗೆ ಹೇಳಿಕೆ ಪ್ರಕಟ ಮಾಡಿದ್ದು ಗ್ಯಾಸ್‌ ಸಪ್ಲೈ ಮಾಡೋ ಕಾಂಪ್ರೆಸರ್‌ ಕೆಟ್ಟೋಗಿದೆ.

ಅದನ್ನು ಸರಿ ಮಾಡುತ್ತಿದ್ದಿವಿ. ಆದ್ದರಿಂದ,ಯುರೋಪ್‌ಗೆ ಹೋಗ್ತಿದ್ದ ಶೇ. 40 ಅನಿಲ ಪೂರೈಕೆ ಬಂದ್‌ ಮಾಡುತ್ತಿದ್ಧೇವೆ ಎಂದು ತಿಳಿಸಿದೆ. ಇದರ ಬೆನ್ನಲ್ಲೇ ಇದಕ್ಕೆ ಜರ್ಮನಿ ಪತ್ರಿಕ್ರಿಯೆ ಇದು ಟೆಕ್ನಿಕಲ್‌ ಕಾರಣಗಳಿಂದ ನಿಂತಿಲ್ಲ. ಪೊಲಿಟಿಕಲ್‌ ಕಾರಣಗಳಿಂದ ನಿಂತಿರೋದು ಅಂತ ಕಿಡಿಕಾರಿದೆ. ಅಂದ್ಹಾಗೆ ನಿನ್ನೆಯಷ್ಟೇ ಯುರೋಪಿಯನ್‌ ಕಮಿಷನ್‌ ರಷ್ಯಾ ನಮಗೆ ಬ್ಲಾಕ್‌ ಮೇಲ್‌ ಮಾಡ್ತಿದೆ. ನಾವು ಇಸ್ರೇಲ್‌ನಿಂದಲೇ ಗ್ಯಾಸ್‌ ತರಿಸಿಕೊಳ್ತೀವಿ ಅಂತ ಹೇಳಿತ್ತು.

ಅಗ್ನಿಪಥ- ಅಗ್ನಿವೀರರ ಭವಿಷ್ಯ?

0

ಅಗ್ನಿಪಥ
,ಸರಿ.ಯುವಜನರಿಗೆ ಉದ್ಯೋಗ ನೀಡಿಕೆ ಯೋಜನೆ ಇದಾಗಿದೆ. ಅಗ್ನಿಪಥ
ಬಿಸಿನೆತ್ತರ ಯುವಜನರ ದಂಡು ಕಟ್ಟುವ ಕೆಲಸ.

ಏನಿದು ಹೊಸ ಯೋಜನೆ? 17.5ರಿಂದ 21 ವರ್ಷದ 46,000 ಯುವಕರನ್ನು 4 ವರ್ಷ ಅವಧಿಗೆ ಅಗ್ನಿವೀರರು ಎಂಬ ಹೆಸರಿನೊಂದಿಗೆ ಸೇನೆಯ 3 ವಿಭಾಗಗಳಿಗೆ ನೇಮಿಸಿಕೊಳ್ಳುವುದು ಅಗ್ನಿಪಥ ಯೋಜನೆಯ ತಿರುಳು. ಇವರಲ್ಲಿ ಶೇ.25ರಷ್ಟು ಜನರನ್ನು ಸೇನಾಪಡೆಗಳ ಪೂರ್ಣಾವಧಿ ಸೇವೆಗೆ ಬಳಸಿಕೊಳ್ಳಲಾಗುತ್ತದೆ. ಇನ್ನುಳಿದವರು 4 ವರ್ಷದ ಬಳಿಕ ನಿವೃತ್ತರಾಗಲಿದ್ದಾರೆ. ಆದರೆ, ಅವರಿಗೆ ಯಾವುದೇ ನಿವೃತ್ತಿ ಸೌಲಭ್ಯಗಳು ಸಿಗುವುದಿಲ್ಲ. ಅವರು ಬೇರೆ ಉದ್ಯೋಗ ಹುಡುಕಿಕೊಳ್ಳಬೇಕು. ವೇತನ ಮತ್ತು ಪಿಂಚಣಿಗಾಗಿ ದೊಡ್ಡ ಪ್ರಮಾಣದಲ್ಲಿ ಹಣ ವೆಚ್ಚವಾಗುವುದನ್ನು ತಡೆದು ಸರ್ಕಾರಿ ಬೊಕ್ಕಸಕ್ಕೆ ಉಳಿತಾಯ ಮಾಡುವುದು ಸರ್ಕಾರದ ಉದ್ದೇಶವಾಗಿದೆ.

ನಮಗೆ ವಿವಾದಗ್ರಸ್ತ ಸಂಗತಿಯೆಂದರೆ‌ 4 ವರ್ಷ ದೇಶ,ದೇಶಭಕ್ತ,ದೇಶಕ್ಕಾಗಿ ಹೋರಾಟ ಎಂಬೆಲ್ಲ ಆದರ್ಶಗಳನ್ನು ಮೈಗೂಡಿಸಿಕೊಂಡ ಯುವಜನ ಕೇವಲ 4 ವರ್ಷಗಳಲ್ಲಿ ಅವುಗಳನ್ನೆಲ್ಲ ಮಣ್ಣುಪಾಲು ಮಾಡಬೇಕೆ? ಮಾನವ ಜೀವಿತದಲ್ಲಿ 17 ರಿಂದ 21 ವಯಸ್ಸು ಅಮೂಲ್ಯವಾದ ಸಮಯ. ಆದರೆ, ಜೀವನದ ಹೊಣೆ ಶುರುವಾಗುದೇ ಭಾರತೀಯ ಕುಟುಂಬಗಳಲ್ಲಿ ಇಪ್ಪತ್ತೊಂದರ ವಯಸ್ಸಿನಲ್ಲಿ.ಇಂತಹ ಸುವರ್ಣ ಘಳಿಗೆಯಲ್ಲಿ ನಿರುದ್ಯೋಗದ ಬೆಂಕಿಗೆ ಬೀಳುವಂತಾದರೆ ಯೋಜನೆಗಳ ಸಾಫಲ್ಯವೇನು? ಎನ್ನುವುದೇ ಪ್ರಶ್ನೆ.

ಸೈನ್ಯದಲ್ಲಿ 4 ವರ್ಷ ಸೇವೆಸಲ್ಲಿಸಿ ಮರಳಿ ಮನೆಯಲ್ಲಿ ಅದೇ ನಿರುದ್ಯೋಗ ಬವಣೆ ಅನುಭವಕ್ಕೆ ಬಿದ್ದರೆ ನಿಜಕ್ಕೂ ಅವರದ್ದು ಶೋಚನೀಯ ಪರಿಸ್ಥಿತಿ.
ಕೇವಲ ಶೇ. 25 ರಷ್ಟು ಮಂದಿಯನ್ನ ಮುಂದಿನ ಸೇವೆಗೆ ಸೇರಿಸಿಕೊಳ್ಳಲಾಗುತ್ತದೆ ಎಂದರೆ ಅದು ಸಮಾಧಾನಕರವಲ್ಲ.ಉಳಿದ ಶೇ. 75 ರಷ್ಟು ಮಂದಿಗೆ ಆಯಾ ರಾಜ್ಯಗಳ ಪೋಲಿಸ್ ಇಲಾಖೆಗೆ ಭರ್ತಿ ಮಾಡಿಕೊಳ್ಳುವ ನೌಕರಿ ಭರವಸೆ ಇದ್ದರೆ ಬಹಳ ಒಳ್ಳೆಯದು.
ಈಗಾಗಲೇ, ಯುವಜನ ರೊಚ್ಚಿಗೆದ್ದಿದ್ದಾರೆ. ಆ ವೇಗವನ್ನ ಶಮನಗೊಳಿಸಲು
ಸದ್ಯ ಕೇಂದ್ರತರ ಸರ್ಕಾರವು ನೌಕರಿಭರವಸೆ ನೀಡಿದರೆ ಯೋಜನೆ ಸಫಲವಾಗುತ್ತದೆ.

ಪಠ್ಯಪರಿಷ್ಕರಣಾ ಸಮಿತಿಯಲ್ಲಿದ್ದ ರೋಹಿತ್ ಅವರನ್ನ ಬಂಧಿಸಬೇಕೆಂದು ಪ್ರತಿಭಟನೆ

0

ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಯ ಕನ್ನಡ ವಿರೋಧಿ ನೀತಿ ಖಂಡಿಸಿ ಹಾಗೂ ನಾಡದ್ರೋಹಿಗಳ ಬಂಧನಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಯಿತು.


ಇತ್ತೀಚಿಗೆ ರಾಜ್ಯಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆಗಾಗಿ ಸಮಿತಿ ರಚನೆ ಮಾಡಿ ಅದರ ನೇತೃತ್ವವನ್ನು ರೋಹಿತ್ ಚಕ್ರತೀರ್ಥ ರವರಿಗೆ ವಹಿಸಿತ್ತು. ಶಾಲಾ ಮಕ್ಕಳಿಗೆ ನಾಡು ನುಡಿಗಾಗಿ ದುಡಿದವರ, ಮಡಿದವರ, ಹಿರಿಮೆಯ ವಾಸ್ತವ ಸಂಗತಿಗಳನ್ನು ತಿಳಿಸಿ ಕೊಡಬೇಕಾಗಿತ್ತು. ದುರಂತವೇನೆಂದರೆ ಈಗಾಗಲೇ ತಮ್ಮ ನಡೆ ನುಡಿಯಲ್ಲಿ ಕನ್ನಡ ವಿರೋಧಿ ತನವನ್ನು ಮೈಗೂಡಿಸಿಕೊಂಡ ವ್ಯಕ್ತಿಗೆ ನೇತೃತ್ವವನ್ನು ನೀಡುವ ಮೂಲಕ ರಾಜ್ಯ ಸರ್ಕಾರ ಎಡವಿತು. ಅದನ್ನ ನಾಡಿನ ಹೆಸರಾಂತ ಲೇಖಕರು, ಬುದ್ಧಿಜೀವಿಗಳು ವಿರೋಧಿಸಿ ಪತ್ರ ಕೂಡ ಬರೆದಿದ್ದರು.

ಎಚ್ಚರಿಕೆಯ ನಂತರವಾದರೂ ತಮ್ಮ ನಡವಳಿಕೆ ತಿದ್ದಿಕೊಳ್ಳಬೇಕಾದ ಚಕ್ರತೀರ್ಥ ಮತ್ತಷ್ಟು ಉದ್ದಟತನದಿಂದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್, ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣ, ರಾಷ್ಟ್ರಕವಿ ಕುವೆಂಪು ರವರನ್ನು ಸೇರಿದಂತೆ ಇನ್ನೂ ಹಲವಾರು ಮಹನೀಯರ ಬಗ್ಗೆ ಅವಹೇಳನ ಮಾಡಿ ಅವರನ್ನು ಅವಮಾನಿಸಿದ್ದಾರೆ ನಾಡಿನ ಜನರ ಭಾವನೆಗೆ ತಂದಿದ್ದಾರೆ. ಈಗಾಗಲೇ ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಂಡು ಸಮಿತಿ ವಿಸರ್ಜಿಸಿದ. ಆದರೆ ನಾಡಿನ ಮಹನೀಯರನ್ನು, ಸಾಧಕರನ್ನು ಅವಮಾನಿಸಿರುವ ಚಕ್ರತೀರ್ಥ ಅವರನ್ನು ಕೇವಲ ಕೈ ಬಿಟ್ಟರೆ ಸಾಲದು ಬದಲಾಗಿ ಅವರನ್ನು ಬಂದಿಸಿ ಶಿಕ್ಷೆ ಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ರವಿಯನ್ನು ಸಲ್ಲಿಸಲಾಗಿತು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಅಂತ ಆರ್ ಮಂಜು ತಾಲೂಕು ಅಧ್ಯಕ್ಷರು ಶೈಲೇಶ್ ರಾಜ್ಯ ಸಂಚಾಲಕರು ಎಸ್ ಮಧು ಪ್ರಧಾನ ಕಾರ್ಯದರ್ಶಿ ಅಂಬರೀಶ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿಜಯ್ ಕುಮಾರ್ ಮತ್ತಿತರು ಉಪಸ್ಥಿತರಿದ್ದರು.

ಪ್ರಯಾಣಿಕರಿಗೆ ಬೋರ್ಡಿಂಗ್ ನಿರಾಕರಿಸಿದರೆ ದಂಡಶುಲ್ಕ

0

ಮಾನ್ಯವಾದ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಬೋರ್ಡಿಂಗ್ ನಿರಾಕರಿಸಿದರೆ ವಿಮಾನಯಾನ ಸಂಸ್ಥೆಗಳು 10,000 ರೂ.ಪರಿಹಾರ ನೀಡಬೇಕು ಎಂಬ ಮಹತ್ವದ ಆದೇಶವನ್ನು ಹೊರಡಿಸಲಾಗಿದೆ.

ಜೂನ್ 14 ರಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮಾನ್ಯ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಬೋರ್ಡಿಂಗ್ ನಿರಾಕರಿಸಿದರೆ ಪ್ರಯಾಣಿಕರಿಗೆ 10,000 ರೂಪಾಯಿಗಳವರೆಗೆ ಪರಿಹಾರವನ್ನು ಪಾವತಿಸಬೇಕು ಎಂಬ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಹೊಸ ಮಾರ್ಗಸೂಚಿಗಳ ಅನ್ವಯ ಭಾರತದ ವಾಯುಯಾನ ನಿಯಂತ್ರಕವು ಮಾನ್ಯವಾದ ಟಿಕೆಟ್ ಹೊಂದಿರುವ ಹಾಗೂ ಸಮಯಕ್ಕೆ ಹಾಜರಾದ ಪ್ರಯಾಣಿಕರಿಗೆ ಬೋರ್ಡಿಂಗ್ ನಿರಾಕರಿಸಿದ ಸಂದರ್ಭದಲ್ಲಿ 10,000 ರೂಪಾಯಿಗಳ ಪರಿಹಾರವನ್ನು ಪ್ರಯಾಣಿಕರಿಗೆ ಪಾವತಿಸಬೇಕು ಎಂದು ಮಾಹಿತಿ ತಿಳಿಸಿದೆ.

ಮುಂದಿನ 24 ಗಂಟೆಯೊಳಗೆ ಪ್ರಯಾಣಿಕರು ಹೇಳಿದ ಸಮಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದರೆ ಏರ್‌ಲೈನ್‌ ಯಾವುದೇ ದಂಡ ಪಾವತಿಸಬೇಕಿಲ್ಲ. ಆದಾಗ್ಯೂ ಯಾವುದೇ ಸೌಲಭ್ಯ ಮಾಡಿಕೊಡದೇ ಇದ್ದು, ಪ್ರಯಾಣಿಕರಿಗೆ ಅಡಚಣೆ ಉಂಟಾದರೆ ದಂಡ ನೀಡಬೇಕು ಎಂದು ಆದೇಶಿಸಿದೆ.

ಕಾರ್ಮಿಕರ ಕಲ್ಯಾಣಕ್ಕೆ ವಿವಿಧ ಯೋಜನೆಗಳು-ಶಿವರಾಮ ಹೆಬ್ಬಾರ್

0

ನಾಡಿನ ಕಾರ್ಮಿಕನ ಮಕ್ಕಳು ಕಾರ್ಮಿಕರಾಗಿಯೇ ಉಳಿಯಬಾರದು ಎಂಬ ಉದ್ದೇಶದಿಂದ ಕಾರ್ಮಿಕ ಸಚಿವರು ಗುರುವಾರ ನಡೆಸಿದ ಸಭೆಯಲ್ಲಿ ರಾಜ್ಯದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಪೈಲಟ್ ತರಬೇತಿ ನೀಡಲಾಗುತ್ತದೆ. ಮಂಡಳಿಯೇ ಈ ತರಬೇತಿಯ ಸಂಪೂರ್ಣ ವೆಚ್ಚವನ್ನು ಭರಿಸಲಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ತಿಳಿಸಿದ್ದಾರೆ.

ಬೆಂಗಳೂರು ನಗರದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಸಭಾಂಗಣದಲ್ಲಿ ಮಂಡಳಿಯ ಸಭೆಯನ್ನು ನಡೆಸಿ ಮಾತನಾಡಿದ ಅವರು, ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ 600 ಕ್ಕಿಂತ ಹೆಚ್ಚು ಅಂಕ ಪಡೆದ ರಾಜ್ಯದ 2,500 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಸದರಿ ನೀಡುತ್ತಿರುವ ಶೈಕ್ಷಣಿಕ ಪ್ರೋತ್ಸಾಹ ಧನದ ಜೊತೆಯಲ್ಲಿ 10 ಸಾವಿರ ರೂಪಾಯಿ ವಿಶೇಷ ಪ್ರೋತ್ಸಾಹ ಧನ ಮತ್ತು ಅಭಿನಂದನಾ ಪತ್ರವನ್ನು ನೀಡಲಾಗುತ್ತದೆ ಎಂದು ಸಭೆಯಲ್ಲಿ ಘೋಷಿಸಿದ್ದಾರೆ.

ಈ ಸಭೆಯಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯ ನಿರ್ವಾಹಣಾಕಾರಿ ಶ್ರೀ ಗುರುಪ್ರಸಾದ ಎಮ್.ಪಿ, ಹಾಗೂ ಮಂಡಳಿಯ ಕಾರ್ಯದರ್ಶಿ ಶ್ರೀ ಮನೋಜ ಜೈನ್ ಹಾಗೂ ಮಂಡಳಿಯ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಕುಮಾರಿ ಅಂಜುಮ್ ಬಷೀರ್ ಸಾಬ್ ಪತ್ರಿಕೋದ್ಯಮ ಎಂ. ಎ ಪ್ರಥಮ ಶ್ರೇಣಿ

0

ಶಿರಸಿ ತಾಲೂಕಿನ ಬನವಾಸಿ ಜನತಾ ಕಾಲೋನಿಯ ನಿವಾಸಿ ಕುಮಾರಿ ಅಂಜುಮ್ ಬಷೀರ್ ಸಾಬ್ ಕುವೆಂಪು ವಿವಿ ಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಗಳಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವದಲ್ಲಿ ಅವರಿಗೆ ರಾಜ್ಯಪಾಲರು, ಕುವೆಂಪು ವಿವಿಯ ಕುಲಾಧಿಪತಿಗಳಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರ ಉಪಸ್ಥಿತಿಯಲ್ಲಿ ಪದವಿ ಪ್ರಮಾಣಪತ್ರ ಹಾಗೂ ಮೂರು ಸುವರ್ಣ ಪದಕಗಳನ್ನು ಸ್ವೀಕರಿಸಿದರು.

ಬನವಾಸಿಯ ಜನತಾ ಕಾಲೋನಿಯ ಬಷೀರ್ ಸಾಬ್ ಹಾಗೂ ಶಾಬೀರ ದಂಪತಿಗಳ ದ್ವಿತೀಯ ಪುತ್ರಿ ಕುಮಾರಿ ಅಂಜುಮ್ ಅವರು ತಮ್ಮ ಸಾಧನೆಗೆ ಪೋಷಕರು ಹಾಗೂ ಪ್ರಾಧ್ಯಾಪಕರು, ಸ್ನೇಹಿತರೆಲ್ಲರೂ ಕಾರಣ ಎಂದು ಸ್ಮರಿಸಿಕೊಂಡಿದ್ದಾರೆ.

ತಾನು ಚೆನ್ನಾಗಿ ಓದಬೇಕು. ಜೀವನದಲ್ಲಿ ಒಳ್ಳೆಯ ಸಾಧನೆ ಮಾಡಬೇಕು ಎಂಬುದು ಅವರ ಕನಸಾಗಿತ್ತು. ತನ್ನ ತಾಯಿಗೆ ತಾನು ಹೆಚ್ಚು ಹೆಚ್ಚು ಓದಬೇಕು. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಆಸೆ ಹೊಂದಿದ್ದರು. ಅದರಂತೆ ನಾನು ಕಷ್ಟಪಟ್ಟು ಓದಿದ್ದೆ. ರಾಂಕ್ ಬರುವ ನಿರೀಕ್ಷೆ ಇರಲಿಲ್ಲ. ಮೂರು ಚಿನ್ನದ ಪದಕ ಗಳಿಸಿರುವುದು ಅತಿ ಹೆಚ್ಚು ಸಂತೋಷವನ್ನು ನನಗೆ ನೀಡಿದೆ ಎಂದು ನಮ್ಮ ಕೆಲೈವ್ ಮಾಧ್ಯಮದೊಂದಿಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ಪ್ರಸ್ತುತ, ಅಂಜುಮ್ ಬಷೀರ್ ಸಾಬ್ ಅವರು ಶಿವಮೊಗ್ಗದ ಕೆ ಲೈವ್ ನ್ಯೂಸ್ ಚಾನೆಲ್ ನಲ್ಲಿ ಉಪಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೆಲೈವ್ ಮಾಧ್ಯಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ರಾಜೇಶ್ ಕಿಳಂಬಿ ಅವರು ಅಂಜುಮ್ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂಜುಮ್ ಅವರು ಮುಂದೆ ಭವಿಷ್ಯದಲ್ಲಿ ಮಾಧ್ಯಮದ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಲಿ ಎಂದು ಹಾರೈಸಿದ್ದಾರೆ.

ಕೆ ಲೈವ್ ಮಾಧ್ಯಮದ ಪ್ರಧಾನ ಸಂಪಾದಕರಾದ ಡಾ. ಸುಧೀಂದ್ರ ಹಾಗೂ ಉಪಸಂಪಾದಕಿ ರಚನಾ. ಕೆ.ಆರ್, ಕ್ಯಾಮೆರಾ ಮ್ಯಾನ್ ರಂಜನ್ .ಕೆ.ಎಸ್, ಅಕೌಂಟೆಂಟ್ ಸಂತೋಷ್ ಶೇಟ್ ಅವರು ಶುಭ ಹಾರೈಸಿದ್ದಾರೆ.

ಫೈಜ್ನಟ್ರಾಜ್ ಅವರ ಕೇಳದೆ ನಿಮಗೀಗ ಕೃತಿಗೆ ಮುಸ್ಲೀಂ ಸಾಹಿತ್ಯ ಪ್ರಶಸ್ತಿ

0

ಕನ್ನಡದಲ್ಲಿ ಪ್ರಕಟಿತ ಮುಸ್ಲಿಂ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಂ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2020ನೇ ಸಾಲಿನ ರಾಜ್ಯ ಮಟ್ಟದ ಮುಸ್ಲಿಂ ಸಾಹಿತ್ಯ ಪ್ರಶಸ್ತಿಗೆ ಸಾಹಿತಿ, ಕವಿ, ಅಧ್ಯಾಪಕ ಸಂತೆಬೆನ್ನೂರು ಫೈಜ್ನಟ್ರಾಜ್ ರವರ ‘ಕೇಳದೆ ನಿಮಗೀಗ ಕೃತಿ ಆಯ್ಕೆಯಾಗಿದೆ.

ಎದೆಯೊಳಗಿನ ತಲ್ಲಣ ಹಾಗೂ ಬುದ್ಧನಾಗ ಹೊರಟು ಕವನ ಸಂಕಲನಗಳು, ಮಂತ್ರದಂಡ ಮಕ್ಕಳ ಕವನ ಸಂಕಲನ, ಸ್ನೇಹದ ಕಡಲಲ್ಲಿ ಮಕ್ಕಳ ಕಥಾ ಸಂಕಲನ, ಹಬ್ಬಿದಾ ಮಲೆ ಮಧ್ಯದೊಳಗೆ ಕಥಾ ಸಂಕಲನ ಮತ್ತು ಲೋಕದ ಡೊಂಕು ಆಧುನಿಕ ವಚನಗಳು ಇವು ಫೈಜ್ನಟ್ರಾಜ್ ರವರ ಇತರ ಪ್ರಕಟಿತ ಕೃತಿಗಳು.

ಸೈಯದ್ ಫೈಜುಲ್ಲಾ ಮೂಲ ಹೆಸರಾದರೂ ಸಾಹಿತ್ಯಿಕ ಸ್ಪೂರ್ತಿ ನೀಡಿದ ಗೆಳೆಯ ನಟರಾಜ್ ರವರ ಹೆಸರನ್ನು ಸೇರಿಸಿಕೊಂಡು ಸಂತೆಬೆನ್ನೂರು ಫೈಜ್ನಟ್ರಾಜ್ ಕಾವ್ಯನಾಮದೊಂದಿಗೆ ಬರೆಯುತ್ತಿರುವ ಇವರು ವೃತ್ತಿಯಲ್ಲಿ ಕನ್ನಡ ಅಧ್ಯಾಪಕರು. ತಮ್ಮ ಶಾಲೆಯಲ್ಲಿ ಅಂಗಳದ ಹೂವುಗಳು ಕೈ ಬರಹದ ಗೋಡೆ ಮಾಸ ಪತ್ರಿಕೆ ಮತ್ತು ಮಕ್ಕಳ ಕನ್ನಡ ಭಾಷಾ ಬಳಗ ಹುಟ್ಟು ಹಾಕುವ ಮೂಲಕ ವಿದ್ಯಾರ್ಥಿಗಳನ್ನು ಕನ್ನಡದ ಕೆಲಸಗಳಿಗೆ ಹಚ್ಚುತ್ತಿದ್ದಾರೆ.

ಸಂಚಯ ಕಾವ್ಯ ಪುರಸ್ಕಾರ, ಹಾಮಾನಾ ಕಥಾ ಪುರಸ್ಕಾರ, ಸ್ನೇಹಶ್ರೀ ಪ್ರಶಸ್ತಿ, ಮತ್ತು ಇತ್ತೀಚೆಗೆ ಬಂದಿರುವ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಇವು ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಫೈಜ್ನಟ್ರಾಜ್ ರಿಗೆ ಸಂದಿರುವ ಗೌರವ ಪುರಸ್ಕಾರಗಳು. ಮಹಾರಾಷ್ಟ್ರದ ಶಿಕ್ಷಣ ಇಲಾಖೆಯ ಪಠ್ಯದಲ್ಲಿ ಇವರ ಕಥೆಯೊಂದು ಪಠ್ಯವಾಗಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಚಾರ.

ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ನೀಡಲಾಗುವ ಈ ಪ್ರಶಸ್ತಿಯು 10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಜುಲೈ 24ರಂದು ದಾವಣಗೆರೆಯಲ್ಲಿ ನಡೆಯಲಿರುವ ಈದ್ ಕಿ ಖುಷಿ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಪ್ರಶಸ್ತಿಗೆ 37 ಕೃತಿಗಳು ಬಂದಿದೆ. ಹಿರಿಯ ಸಾಹಿತಿ ಫಕೀರ್ ಮುಹಮ್ಮದ್ ಕಟ್ಪಾಡಿ, ಪತ್ರಕರ್ತ ಎನ್.ಎ.ಎಂ. ಇಸ್ಮಾಯಿಲ್ ಹಾಗೂ ಸಾಹಿತಿ, ಕವಿ ಡಾ. ಅಮೀರುದ್ದೀನ್ ಖಾಝಿ, ಬಿಜಾಪುರ ತೀರ್ಪುಗಾರರಾಗಿ ಸಹಕರಿಸಿದ್ದಾರೆ ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.