ಜೂನ್ 21ರ ಬೆಳಗ್ಗೆ 5.50 ರಿಂದ 8.30 ರವರೆಗೆ ಶುಭಮಂಗಳ ಸಮುದಾಯ ಭವನದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಏರ್ಪಡಿಸಲಾಗಿದೆ.
ಶಿವಮೊಗ್ಗ ನಗರದ ಆರ್ಟ್ ಆಫ್ ಲಿವಿಂಗ್, ಸುಮೇರು ಯೋಗಕೇಂದ್ರ, ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಶನ್, ಅಮೃತ ಯೋಗ ಕೇಂದ್ರ, ಚಿರಂತನ ಯೋಗ ಹಾಗೂ ಸಂಗೀತ ಟ್ರಸ್ಟ್, ನಮ್ಮ ಯೋಗ ಕುಟುಂಬ, ಸಪ್ತ ಬಿಂದು ಯೋಗ ಮಂದಿರ, ನಿಹಾರಿಕಾ ಯೋಗಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಎಂಟನೆಯ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿದೆ. ಯೋಗ ಬಗ್ಗೆ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ಟ್ರಸ್ಟ್, ಪರೋಪಕಾರಂ ಸಂಸ್ಥೆ, ಜೆ. ಸಿ. ಐ, ಶಿವಮೊಗ್ಗ-ಮಲ್ನಾಡ್, ಜೆ. ಸಿ. ಶಿವಮೊಗ್ಗ-ಚಿಂತನ ಹಾಗೂ ಭಜನಾ ಪರಿಷತ್ ಇವರುಗಳ ವಿಶೇಷ ಸಹಕಾರವಿರುತ್ತದೆ.
ಈ ಕಾರ್ಯಕ್ರಮದಲ್ಲಿ ಸಾಮೂಹಿಕ ಯೋಗಾಭ್ಯಾಸ, ಸೂರ್ಯ ನಮಸ್ಕಾರ, ಆಸನ, ಪ್ರಾಣಾಯಾಮ, ಧ್ಯಾನ ನಂತರ ಉಪನ್ಯಾಸ, ಹಾಗೂ ಗುರುವಂದನಾ ಕಾರ್ಯಕ್ರಮ ಜರುಗಲಿದೆ.
ಶಿವಮೊಗ್ಗ ನಗರದ ಪ್ರಸಿದ್ಧ ಮಾನಸಿಕ ಹಾಗೂ ನರರೋಗ ತಜ್ಞರು ಮತ್ತು ಪಾಸಿಟಿವ್ ಮೈಂಡ್ ಹಾಸ್ಪಿಟಲ್ ಹಾಗೂ ಉತ್ತಮ ವಾಗ್ಮಿಗಳು ಆದ ಡಾಕ್ಟರ್ ಅರವಿಂದ್ ಎಸ್. ಟಿ ಇವರಿಂದ ಯೋಗದಿಂದ ಮನಸ್ಪೂರ್ತಿ ಎಂಬ ವಿಷಯವನ್ನು ಕುರಿತು ವಿಶೇಷ ಉಪನ್ಯಾಸವು ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಎಲ್ಲಾ ಯೋಗ ಸಂಸ್ಥೆಗಳ ಮುಖ್ಯಸ್ಥರು, ಆಹ್ವಾನಿತ ಅತಿಥಿಗಳು, ಸಾಮೂಹಿಕ ಯೋಗಾಭ್ಯಾಸ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಕೆಎಸ್ ಈಶ್ವರಪ್ಪನವರು, ಮಾಜಿ ಉಪ ಮುಖ್ಯಮಂತ್ರಿಗಳು, ಮಾಜಿ ಸಚಿವರು ಹಾಗೂ ಹಾಲಿ ಶಾಸಕರು, ಶಿವಮೊಗ್ಗ. ಸನ್ಮಾನ್ಯ ಶ್ರೀ ಕೆ. ಇ. ಕಾಂತೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಬಿಜೆಪಿ ಯುವ ಮುಖಂಡರು ಹಾಗೂ ಸನ್ಮಾನ್ಯ ಶ್ರೀ ರಾಹುಲ್ ಬಿದರೆ, ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರು ಇವರುಗಳು ಭಾಗವಹಿಸಲಿದ್ದಾರೆ.
ಯೋಗಾಸತ್ತರು, ಸಾರ್ವಜನಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿ ಕೊಡಬೇಕಾಗಿ ವಿನಂತಿ.
ಭಾಗವಹಿಸುವ ಪ್ರತಿಯೊಬ್ಬರು ಬಿಳಿ ಉಡುಪು ಧರಿಸಿ, ಜಮಖಾನ (ಯೋಗ ಮ್ಯಾಟ್) ತರತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ. ಶಬರೀಶ್ ಕಣ್ಣನ್-ಮೊಬೈಲ್ ನಂಬರ್. 9964072793, ಅಥವಾ ಯೋಗಾಚಾರ್ಯ ಶ್ರೀ ಅನಿಲ್ ಕುಮಾರ್ ಎಚ್. ಶೆಟ್ಟರ್- ಮೋ. 9886674375 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಶಬರೀಶ್ ಕಣ್ಣನ್, ಶ್ರೀ ಶಶಿಭೂಷಣ ಶಾಸ್ತ್ರಿ, ಶ್ರೀ ಅನಿಲ್ ಕುಮಾರ್ ಎಚ್ ಶೆಟ್ಟರ್, ಶ್ರೀಮತಿ ಸುಧಾ ಮಂಜುನಾಥ್, ಶ್ರೀಮತಿ ಶಾಂತ ಎಸ್ ಶೆಟ್ಟಿ, ಶ್ರೀ ಮೋಹನ್ ಮೂರ್ತಿ, ಶ್ರೀಮತಿ ಮಮತಾ ಚಂದ್ರಶೇಖರ್, ಶ್ರೀಕೆ. ಇ ಕಾಂತೇಶ್ ಶ್ರೀ ಲಕ್ಷ್ಮಿ ನಾರಾಯಣ್ ಕೌಶಿಕ್, ಶ್ರೀಧರ್, ಶ್ರೀ ಪ್ರದೀಪ್ ಕುಮಾರ್ ಮತ್ತಿತರು ಉಪಸ್ಥಿತರಿದ್ದರು.