ನ್ಯಾಷನಲ್ ಹೆರಾಲ್ಡ್ ಬಿಜೆಪಿಯ ದ್ವೇಷ ರಾಜಕಾರಣದ ಫಲವೇ ಹೊರತು ಅದರಲ್ಲಿ ಸತ್ಯವಿಲ್ಲ ಎಂದು ಅದು ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಈ ವಿಷಯದ ಕುರಿತಾಗಿ ಕಾಂಗ್ರೆಸ್ ಪಕ್ಷವು ಸರಣಿ ಪ್ರಶ್ನೆಗಳನ್ನು ಬಿಜೆಪಿ ಮುಂದೆ ಇಟ್ಟಿದೆ.
ಡಿಮಾನಿಟೈಸೇಷನ್ ಸಮಯದಲ್ಲಿ ಅಮಿತ್ ಶಾ ಅಧ್ಯಕ್ಷತೆಯ ಅಹಮದಾಬಾದ್ ಕೋ ಆಪರೇಟಿವ್ ಬ್ಯಾಂಕ್‍ನಲ್ಲಿ 745 ಕೋಟಿ ರೂ ಗಳ ವ್ಯವಹಾರ ನಡೆಯುತ್ತದೆ.ಡಿಮಾನಿಟೈಸೇಷನ್ ಸಮಯದಲ್ಲಿ ಅಷ್ಟೊಂದು ಮೊತ್ತದ ಹಣ ಎಲ್ಲಿಂದ ಬಂತು?. ಅಮಿತ್ ಶಾ ಪ್ರಕರಣದ ಇಡಿ ತನಿಖೆ ಯಾವಾಗ ಶುರುವಾಗುತ್ತದೆ?.
ವಿರೋಧಪಕ್ಷದಲ್ಲಿದ್ದಾಗ ಇಡಿ ಹೆಸರಲ್ಲಿ ನಿತ್ಯಕಿರುಕುಳ ಅನುಭವಿಸುತ್ತಿದ್ದ ನಾರಾಯಣ ರಾಣೆ,ಮುಕುಲ್ ರಾಯ್ ಅಂಥವರು ಬಿಜೆಪಿ ಸೇರಿದೊಡನೆ ಪರಮಪಾವನರಾಗುತ್ತಾರೆ. ಅವರ, ವಿರುದ್ಧದ ಇಡಿ ಪ್ರಕರಣಗಳೆಲ್ಲ ಧೂಳು ಹಿಡಿಯುತ್ತವೆ.
ಇದು ಬಿಜೆಪಿಯ ಅಸಲಿ ಮನಸ್ಥಿತಿ. ನ್ಯಾಷನಲ್ ಹೆರಾಲ್ಡ್ ಬಿಜೆಪಿಯ ದ್ವೇಷ ರಾಜಕಾರಣದ ಫಲವೇ ಹೊರತು ಅದರಲ್ಲಿ ಸತ್ಯವಿಲ್ಲ ಎಂದು ಕಾಂಗ್ರೆಸ್, ಬಿಜೆಪಿ ವಿರುದ್ಧ ಟೀಕೆಯನ್ನು ತಿಳಿಸಿದ್ದಾರೆ.