Monday, March 9, 2026
Monday, March 9, 2026
Home Blog Page 1534

ಪಾಕ್ ನಲ್ಲಿ ಚಹಾ ಸೇವನೆ ನಿಯಂತ್ರಿಸಲು ಸರ್ಕಾರದ ಹೆಣಗಾಟ

0

ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ಬಿಗಡಾಯಿಸುತ್ತಾ ಹೋದಂತೆಲ್ಲಾ ಸರ್ಕಾರ ಒಂದೊಂದೇ ರೀತಿಯಲ್ಲಿ ಅಲ್ಲಿನ ಜನರನ್ನು ಕೆಣಕುವ ಕ್ರಮ ತೆಗೆದುಕೊಳ್ಳುವೆ. ಕಳೆದ ಸ್ವಲ್ಪ ದಿನಗಳ ಹಿಂದೆಯಷ್ಟೇ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿ ತೆಗೆದು ಹಾಕಿ ಜನರ ಕೆಂಗಣ್ಣಿಗೆ ಇದು ಕಾರಣವಾಗಿತ್ತು.

ಅಲ್ಲದೆ, ಗ್ಯಾಸ್‌ ಹಾಗೂ ವಿದ್ಯುತ್ ಬೆಲೆಗಳನ್ನ ಶೇ.45 ರಷ್ಟು ಏರಿಕೆ ಮಾಡಿತ್ತು. ಈಗ ಪಾಕಿಸ್ತಾನದ ಜನರ ಹೊಟ್ಟೆಯ ಮೇಲೆ ಕಣ್ಣಾಕಿದ್ದು ಟೀ. ಈಗ ಕುಡಿಯೋದನ್ನ ಕಡಿಮೆ ಮಾಡಿ ಎಂದು ತಿಳಿಸಿದೆ.

ಪಾಕ್‌ನ ಯೋಜನಾ ಸಚಿವ ಅಸಾನ್‌ ಇಕ್ಬಾಲ್‌, ಜನ ದಿನಕ್ಕೆ ಒಂದರಿಂದ 2 ಕಪ್‌ ಚಹಾ ಕುಡಿಯೋದನ್ನ ಕಡಿಮೆ ಮಾಡಬೇಕು. ಇದರಿಂದ ದೇಶದ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನ, ವಿಶ್ವದ ಅತಿದೊಡ್ಡ ಚಹಾ ಆಮದುದಾರ ದೇಶವಾಗಿದೆ. ಇರುವ 22 ಕೋಟಿ ಜನರು ಕೂಡ ಚಹಾ ಪ್ರಿಯರಾಗಿದ್ದಾರೆ. ಆದ್ದರಿಂದ, ವರ್ಷಕ್ಕೆ ಪಾಕಿಸ್ತಾನ 600 ಮಿಲಿಯನ್‌ ಡಾಲರ್‌ ಅಂದರೆ ಸುಮಾರು 4,700 ಕೋಟಿ ರೂಪಾಯಿ ಮೌಲ್ಯದ ಚಹಾವನ್ನು ಆಫ್ರಿಕಾದ ಕೀನ್ಯಾ, ಉಗಾಂಡ, ರವಾಂಡ, ಚೀನಾ, ಬಾಂಗ್ಲಾ ದೇಶಗಳಿಂದ ಆಮದು ಮಾಡಿಕೊಳ್ಳುತ್ತೆ. ಜೊತೆಗೆ ಪಾಕಿಸ್ತಾನದ ಹಣದ ಮೌಲ್ಯ ಆತಂಕಕಾರಿ ರೀತಿಯಲ್ಲಿ ಕುಸಿತ ಕಾಣುತ್ತಿದೆ. ಅಮೆರಿಕದ ಒಂದು ಡಾಲರ್‌ಗೆ ಈಗ ಪಾಕಿಸ್ತಾನ 206 ರೂಪಾಯಿ ಕೊಡಬೇಕು. ಆದ್ದರಿಂದ, ಪಾಕಿಸ್ತಾನ ಸರ್ಕಾರ ಏನಾದ್ರೂ ಮಾಡಿ ಹದಗೆಟ್ಟಿರೋ ಆರ್ಥಿಕತೆಯನ್ನು ಮತ್ತೆ ದಾರಿಗೆ ತರಬೇಕು ಎಂದು ಹರಸಾಹಸ ಪಡುತ್ತಿದೆ.

ಪುಟಿನ್ ಅವರ ದೈಹಿಕ ಆರೋಗ್ಯ ಏರುಪೇರು?

0

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಆರೋಗ್ಯದ ಬಗ್ಗೆ ಪಾಶ್ಚಿಮಾತ್ಯ ಹಾಗೂ ಐರೋಪ್ಯ ಒಕ್ಕೂಟದ ಕೆಲವು ಮಾಧ್ಯಮಗಳಲ್ಲಿ ಸಂಶ ಯಾತ್ಮಕವಾದ ವರದಿಗಳು ಪ್ರಕಟವಾಗುತ್ತಿವೆ.

ಅದಕ್ಕೆ ಸೇರ್ಪಡೆ ಎಂಬಂತೆ ವರದಿಯೊಂದು ಪ್ರಕಟ ವಾಗಿದೆ.

ಅದರ ಪ್ರಕಾರ ಪುಟಿನ್‌ ಅವರಿಗೆ ನಿಂತುಕೊಂಡು ಮಾತನಾಡಲು ಅಸಾಧ್ಯವಾಗುತ್ತಿದೆ. ಕಳೆದ ಭಾನುವಾರ ನಡೆದಿದ್ದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ವೀಡಿಯೋದಲ್ಲಿ ಭಾಷಣ ಮಾಡುತ್ತಿರಬೇಕಾದರೆ, ಅವರ ಕಾಲುಗಳು ನಡುಗುತ್ತಿದ್ದದ್ದು ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಪುಟಿನ್‌ ಅವರಿಗೆ ಹೆಚ್ಚಿನ ಸಮಯದ ವರೆಗೆ ನಿಂತುಕೊಂಡು ಭಾಷಣ ಮಾಡುವ ಕಾರ್ಯಕ್ರಮಗಳಲ್ಲಿ ಮಾತನಾಡುವುದು ಬೇಡ ಎಂದು ವೈದ್ಯರು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಆ ವರದಿಯಲ್ಲಿ ಉಲ್ಲೇಖೀ ಸಲಾಗಿದೆ.

ರಷ್ಯಾ ಸಂಸತ್‌ ಕ್ರೆಮ್ಲಿನ್‌ ವಿರೋಧಿಗಳು ಹೊಂದಿರುವ ಟೆಲಿಗ್ರಾಂ ಚಾನೆಲ್‌ ಮೂಲಕ ಬಂದಿರುವ ವೀಡಿಯೋ ಆಧರಿಸಿ ಈ ಅಂಶವನ್ನು ವರದಿ ಮಾಡಲಾಗಿದೆ. ಫೆ.24ರ ನಂತರ ಉಕ್ರೇನ್‌ ಮೇಲೆ ಯುದ್ಧ ಸಾರಿದ ನಂತರ ರಷ್ಯಾ ಅಧ್ಯಕ್ಷರ ಆರೋಗ್ಯದ ಬಗ್ಗೆ ಹಲವು ರೀತಿಯ ವರದಿಗಳು ಪ್ರಕಟವಾಗಿದೆ. ಈ ಪೈಕಿ ಒಂದರಲ್ಲಿ ಪುಟಿನ್‌ ಅವರಿಗೆ ಈಗಾಗಲೇ ಕ್ಯಾನ್ಸರ್‌ ಇದೆ ಎಂದೂ ಹೇಳಿಕೊಳ್ಳಲಾಗಿತ್ತು. ಆದರೆ, ಈ ಬಗ್ಗೆ ರಷ್ಯಾ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಪ್ರವಾಸಿಗರನ್ನ ರಕ್ಷಿಸಿದ ಭಾರತೀಯ ಸೇನೆ

0

ದುರ್ಗಮ ರಸ್ತೆಗಳಲ್ಲಿ ಚಾಲನೆ ಮಾಡುವುದು ಕೆಲವರಿಗೆ ಗೀಳು. ಇನ್ನೂ ಕೆಲವರಿಗೆ ಸಾಹಸ ಮಾಡುವ ಹುಮ್ಮಸ್ಸು ಇರುತ್ತದೆ.
ಆದರೆ, ಹಲವು ಬಾರಿ ಇಂತಹ ಸಾಹಸ ಮಾಡಲು ಹೋಗಿ ಇಕ್ಕಟ್ಟಿಗೆ ಸಿಲುಕಿ ವಿಲವಿಲನೆ ಒದ್ದಾಡುವಂತಾಗುತ್ತದೆ.

ಸಿಂಧ್ ನದಿಯಲ್ಲಿ ಇಂತಹ ಸಹಾಸ ಮಾಡಲು ಹೋಗಿ ಪ್ರವಾಸಿಗರ ತಂಡವೊಂದು ಸಿಲುಕಿತ್ತು.

ಇವರ ನೆರವಿಗೆ ಧಾವಿಸಿದ್ದು ಭಾರತೀಯ ಸೇನೆ. ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್ ನಲ್ಲಿನ ಸಿಂಧ್ ನದಿ ಉಕ್ಕಿ ಹರಿಯುತ್ತಿತ್ತು. ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಬೇಕಾದ ರಸ್ತೆ ಮೇಲೆ ನದಿ ನೀರು ಧುಮ್ಮಿಕ್ಕಿ ಹರಿಯುತ್ತಿತ್ತು.

ಇಂತಹ ಸಂದರ್ಭದಲ್ಲಿಯೇ ಪ್ರವಾಸಿಗರ ತಂಡ ತಮ್ಮ ಜಿಪ್ಸಿ ವಾಹನದಲ್ಲಿ ರಸ್ತೆಯನ್ನು ದಾಟಲು ಮುಂದಾಗಿದೆ. ಆದರೆ, ನೀರು ಹರಿವು ಹೆಚ್ಚಾಗಿದ್ದರಿಂದ ದಾರಿ ಮಧ್ಯದಲ್ಲಿ ನೀರಿನಲ್ಲಿ ಸಿಲುಕಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು.

ಈ ವಿಷಯ ಅರಿತ ಭಾರತೀಯ ಸೇನೆಯ ಸೈನಿಕರು ತಮ್ಮ ಸೇನಾ ಟ್ರಕ್ ನೊಂದಿಗೆ ಕ್ರೇನ್ ಸ್ಥಳಕ್ಕೆ ತಂದರು. ಈ ಕ್ರೇನ್ ಸಹಾಯದಿಂದ ನೀರಿನಲ್ಲಿ ಸಿಲುಕಿದ್ದ ಜಿಪ್ಸಿ ವಾಹನ ಮತ್ತು ಅದರಲ್ಲಿದ್ದ ಪ್ರವಾಸಿಗರನ್ನು ದಡ ಸೇರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ.ಸೈನಿಕರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ವಿಶ್ವದ ದೊಡ್ಡಣ್ಣನಿಗೀಗ ಹಣದುಬ್ಬರದ ಬಿಸಿ

0

ಅಮೆರಿಕ ಕಳೆದ 4 ದಶಕಗಳಲ್ಲಿ ಹಣದುಬ್ಬರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಫೆಡರಲ್ ರಿಸರ್ವ್ ಬಡ್ಡಿದರವನ್ನು ಶೇ. 75 ಬೇಸಿಸ್ ಪಾಯಿಂಟ್ಸ್ ಗಳಷ್ಟು ಹೆಚ್ಚಳ ಮಾಡಿದೆ. 1994ರ ಬಳಿಕ ಬಡ್ಡಿದರ ಭಾರೀ ಪ್ರಮಾಣದಲ್ಲಿ ಏರಿಸಿದಂತಾಗಿದೆ.

ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು ಏರಿಕೆ ಮಾಡಿರುವುದು ಮತ್ತೊಂದು ಆರ್ಥಿಕ ಕುಸಿತಕ್ಕೆ ಕಾರಣವಾಗಬಹುದು ಎಂದು ವಿಶ್ಲೇಷಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಫೆಡರಲ್ ರಿಸರ್ವ್ ಬಡ್ಡಿದರವನ್ನು ಶೇ.1.5ರಿಂದ ಶೇ.1.75ಕ್ಕೆ ಏರಿಕೆ ಮಾಡಿದೆ. ಹಣದುಬ್ಬರ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದನ್ನು ತಡೆಯಲು ಅಧಿಕಾರಿಗಳು ಪ್ರಯತ್ನಿಸುತ್ತಿರುವುದಾಗಿ ವರದಿ ವಿವರಿಸಿದೆ.

ಅಮೆರಿಕದ ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿದರೆ 2023ರ ಮಧ್ಯಂತರದಲ್ಲಿ ಅಲ್ಪ ಪ್ರಮಾಣದ ಆರ್ಥಿಕ ಹಿಂಜರಿಕೆ ಆರಂಭವಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿರುವುದಾಗಿ ವರದಿ ತಿಳಿಸಿದೆ.

ಕಳೆದ 5 ತಿಂಗಳ ಬಳಿಕ ಪ್ರಥಮ ಬಾರಿಗೆ ಅಮೆರಿಕದಲ್ಲಿ ಚಿಲ್ಲರೆ ಮಾರಾಟ ಕುಸಿತ ಕಂಡಿದೆ. ಅಧಿಕ ಬೆಲೆ ಏರಿಕೆಯ ಪರಿಣಾಮ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಿದೆ. ಇದು ಅಮೆರಿಕದ ಆರ್ಥಿಕ ಕುಸಿತಕ್ಕೆ ಕಾರಣವಾಗಲಿದೆ ಎಂದು ವರದಿ ತಿಳಿಸಿದೆ.

ಏತನ್ಮಧ್ಯೆ ಅಮೆರಿಕದಲ್ಲಿ ನಿರುದ್ಯೋಗ ಪ್ರಮಾಣ ದಾಖಲೆ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ದೇಶದಲ್ಲಿನ ಆರ್ಥಿಕ ಸ್ಥಿತಿ ಕುಸಿಯದಂತೆ ತುಂಬಾ ಸೂಕ್ಷ್ಮವಾಗಿ ನೋಡಿಕೊಳ್ಳಬೇಕಾಗಿದೆ ಎಂದು ವೇಲ್ಸ್ ಫಾರ್ಗೋ ತಿಳಿಸಿದೆ

ರಾಷ್ಟ್ರಪತಿ ಚುನಾವಣೆ:ಅಭ್ಯರ್ಥಿ ಹುಡಾಕಾಟದಲ್ಲಿ ವಿಪಕ್ಷಗಳು

0

ರಾಷ್ಟ್ರಪತಿ ಚುನಾವಣೆಗೆ ದೊಡ್ಡದೊಂದು ತಿರುವು ಸಿಕ್ಕಿದೆ. ಈ ನಡುವೆ ರಾಷ್ಟ್ರಪತಿ ಚುನಾವಣೆ ಕುರಿತು ವಿಪಕ್ಷಗಳಾ ನಾಯಕರುಗಳಾದ ಮಲ್ಲಿಕಾರ್ಜುನ ಖರ್ಗೆ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಜೊತೆ ರಾಜನಾಥ್ ಸಿಂಗ್ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಸಾಮಾನ್ಯ ಅಭ್ಯರ್ಥಿಯ ಬಗ್ಗೆ ಚರ್ಚಿಸಲು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅನೇಕ ವಿರೋಧ ಪಕ್ಷಗಳು ಭಾಗವಹಿಸಿದ್ದವು.

ರಾಷ್ಟ್ರ ರಾಜಧಾನಿಯ ಕಾನ್ ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ಈ ಸಭೆ ನಡೆಯಿತು. ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳು ಮತ್ತೊಮ್ಮೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಹೆಸರನ್ನು ಪ್ರಸ್ತಾಪಿಸಿದವು. ಆದರೆ, ಹಿರಿಯ ನಾಯಕ ಈ ಪ್ರಸ್ತಾಪವನ್ನು ನಿರಾಕರಿಸಿದರು ಎಂದು ವರದಿಯಾಗಿದೆ.

ಇಂದಿನ ವಿರೋಧ ಪಕ್ಷದ ಸಭೆಯಲ್ಲಿ, ಎಲ್ಲಾ ಪಕ್ಷಗಳು ರಾಷ್ಟ್ರಪತಿ ಚುನಾವಣೆಗೆ ಶರದ್ ಪವಾರ್ ಅವರ ಹೆಸರನ್ನು ಪ್ರಸ್ತಾಪಿಸಿದವು. ಆದರೆ, ಅವರ ಆರೋಗ್ಯದ ಕಾರಣದಿಂದಾಗಿ ನನಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ತಮ್ಮ ನಿರ್ಧಾರದ ಬಗ್ಗೆ ಮರುಪರಿಶೀಲಿಸುವಂತೆ ಎಲ್ಲಾ ಪಕ್ಷಗಳು ಅವರನ್ನು ವಿನಂತಿಸಿವೆ ಎಂದು ಸಿಪಿಐ ನಾಯಕ ಬಿನೋಯ್ ವಿಶ್ವಮ್ ಸಭೆಯ ನಂತರ ಮಾಧ್ಯಮ ಮಿತ್ರರೊಂದಿಗೆ ತಿಳಿಸಿದ್ದಾರೆ.

ಈ ನಡುವೆ ಫಾರೂಕ್ ಅಬ್ದುಲ್ಲಾ, ಗೋಪಾಲಕೃಷ್ಣ ಗಾಂಧಿ ಅವರ ಹೆಸರನ್ನು ಮಮತಾ ಬ್ಯಾನರ್ಜಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಸದ್ದಿಲ್ಲದೆ ಬರುವ ಕಾಯಿಲೆ ಏಡ್ಸ್ ಗೆ ಈಗ ವ್ಯಾಕ್ಸಿನ್ ಸಂಶೋಧನೆ

0

ಗುಣಪಡಿಸುವುದಕ್ಕೇ ಅಸಾಧ್ಯ ಎನ್ನಲಾಗುವ ಎಚ್‌ಐವಿ ಏಡ್ಸ್‌ ಕಾಯಿಲೆಯನ್ನು ಗುಣಪಡಿಸಲು ಇದೀಗ ಇಸ್ರೇಲ್‌ನ ವಿಜ್ಞಾನಿಗಳು ಹೊಸದೊಂದು ಲಸಿಕೆ ಕಂಡು ಹಿಡಿದಿದ್ದಾರೆ.

ಅದೇನು ಎಂಬುವುದು ಇಲ್ಲಿದೆ.ಕೇವಲ ಒಂದೇ ಡೋಸ್‌ ಲಸಿಕೆ ಪಡೆದರೆ ಸೋಂಕಿತರು ಸೋಂಕಿನಿಂದ ಚೇತರಿಸಿಕೊಳ್ಳಬಹುದು ಎಂದು ಇಸ್ರೇಲ್‌ನ ಟೆಲ್‌ ಅವೀವ್‌ ವಿಶ್ವವಿದ್ಯಾನಿಲಯದ ಸ್ಕೂಲ್‌ ಆಫ್ ನ್ಯೂರೋ ಬಯಾಲಜಿ, ಬಯೋಕೆಮಿಸ್ಟ್ರಿ ಮತ್ತು ಬಯೋಫಿಸಿಕ್ಸ್‌ನ ವಿಜ್ಞಾನಿಗಳು ತಿಳಿಸಿದ್ದಾರೆ.

ಮನುಷ್ಯನ ಮೂಳೆಗಳಲ್ಲಿರುವ ಅಸ್ಥಿಮಜ್ಜೆಯೊಳಗಿನ ಟೈಪ್‌ ಬಿ ಬಿಳಿರಕ್ತಕಣಗಳನ್ನು ಮಾರ್ಪಾಟುಗೊಳಿಸಿ. ಎಚ್‌ಐವಿ ವೈರಾಣುಗಳು ದೇಹ ಪ್ರವೇಶಿಸುವುದಕ್ಕೆ ತಡೆಯೊಡ್ಡುವಂಥ ಪ್ರತಿಕಾಯಗಳನ್ನು ಸೃಷ್ಟಿಸಿ, ಈ ಲಸಿಕೆಯನ್ನು ತಯಾರಿಸಲಾಗಿದೆ. ಈ ವಿಷಯದ ಕುರಿತು ವರದಿಯನ್ನು ವೈಜ್ಞಾನಿಕ ಸಂಶೋಧನೆಗಳನ್ನು ಪ್ರಕಟಿಸುವ ನೇಚರ್‌ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.

ಟೈಪ್‌ ಬಿ ಬಿಳಿ ರಕ್ತ ಕಣಗಳು ದುಗ್ಧ ನಾಳ, ರಕ್ತ ಸೇರಿ ಹಲವು ಭಾಗಗಳಿಗೆ ತಲುಪುತ್ತದೆ. ಎಚ್‌ಐವಿ ವೈರಸ್‌ನೊಂದಿಗೆ ಹೋರಾಡುವ ಈ ಕಣಗಳು, ವೈರಸ್‌ ಅನ್ನು ತಡೆಯುವಲ್ಲಿ ಯಶಸ್ವಿ ಯಾಗುತ್ತದೆ. ಒಬ್ಬ ಮನುಷ್ಯನಿಗೆ ಈ ಲಸಿಕೆಯ ಒಂದು ಡೋಸ್‌ ಸಾಕು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಈ ಲಸಿಕೆಯು ಕೇವಲ ಎಚ್‌ಐವಿ ಸೋಂಕಿಗೆ ಪರಿಣಾಮಕಾರಿಯಾಗದೆ, ಕ್ಯಾನ್ಸರ್‌ನಂತಹ ಕೆಲವು ದೊಡ್ಡ ಕಾಯಿಲೆ ಹಾಗೂ ಸಾಂಕ್ರಾಮಿಕ ಕಾಯಿಲೆಗಳಿಗೂ ಪರಿಣಾಮಕಾರಿ ಎಂದು ನೇಚರ್‌ನಲ್ಲಿ ಪ್ರಕಟಿಸಲಾಗಿರುವ ವರದಿಯಲ್ಲಿ ತಿಳಿಸಲಾಗಿದೆ.

ಪದವೀಧರರು ದೇಶದ ಹಿತಕ್ಕಾಗಿ ಕೆಲಸಮಾಡಬೇಕು-ತ್ಯಾವರಚಂದ್ ಗೆಹ್ಲೂಟ್

0

ಹೊಸ ಶಿಕ್ಷಣ ನೀತಿಯಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಭಾರತ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಇದು ಪೂರಕವಾಗಿದೆ ಎಂದು ರಾಜ್ಯಪಾಲ ತ್ಯಾವರಚಂದ್ ಗೆಹ್ಲೂಟ್ ಅವರು ಹೇಳಿದ್ದಾರೆ.

ಕುವೆಂಪು ವಿವಿ ಜ್ಞಾನ ಸಹ್ಯಾದ್ರಿಯಲ್ಲಿ ಆಯೋಜಿಸಿದ್ದ 31 ಮತ್ತು 32 ನೇ ಘಟಿಕೋತ್ಸವದಲ್ಲಿ ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರಧಾನ ಮಾಡಿ ಮಾತನಾಡಿದರು.

ಪ್ರಸ್ತುತ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಸಾಧನೆ ತೃಪ್ತಿಕರವಾಗಿಲ್ಲ. ಈ ಬಾರಿ ಒಲಂಪಿಕ್ ಕ್ರೀಡಾಕೂಟದಲ್ಲಿ ಹೆಚ್ಚಿನ ಪದಕಗಳು ಬಂದಿಲ್ಲ. ಆದರೆ, ದಿವ್ಯಾಂಗರ ಒಲಂಪಿಕ್ ನಲ್ಲಿ ಹೆಚ್ಚಿನ ಪದಕಗಳು ಬಂದಿರುವುದು ಶ್ಲಾಘನೀಯ ಎಂದು ತಿಳಿಸಿದ್ದಾರೆ.

ಪದವಿ ಪಡೆದ ವಿದ್ಯಾರ್ಥಿಗಳುಗಳು ದೇಶದ ಹಿತಕ್ಕಾಗಿ ಕೆಲಸ ಮಾಡಬೇಕು. ರಾಷ್ಟ್ರ ಕವಿ ಕುವೆಂಪು ಹೆಸರೇ ವಿವಿ ಗೆ ಪ್ರೇರಣಾದಾಯಕವಾಗಿದೆ. ವಿವಿ ಕೂಡ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವುದರಿಂದ ಇಲ್ಲಿ ಕಲಿಯುವುದೇ ಒಂದು ಹೆಮ್ಮೆ ಎಂದು ಹೇಳಿದ್ದಾರೆ.

ಡಿಗ್ರಿ ಆದ ನಂತರ ಕೇವಲ ಕೆಲಸಕ್ಕಾಗಿ ಹುಡುಕಾಟ ನಡೆಸದೆ ಅಧ್ಯಯನ ನಡೆಸುವ ಮೂಲಕ ದೇಶಕ್ಕೆ ಕೊಡುಗೆ ನೀಡುವಂತಾಗಬೇಕು.ಗುಣಮಟ್ಟದ ನೈತಿಕ ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ. ದೇಶದ ಉಜ್ವಲ ಭವಿಷ್ಯಕ್ಕೆ ಸರ್ಕಾರ ಜಾರಿಗೆ ತರುವ ಯೋಜನೆಗಳಲ್ಲಿ ನಿಮ್ಮ ಸಹಭಾಗಿತ್ವ ಇರಬೇಕು ಎಂದು ತಿಳಿಸಿದ್ದಾರೆ.

ಗೌರವ ಡಾಕ್ಟರೇಟ್ ಪದವಿ ಪಡೆದವರು ಅವರವರ ಕ್ಷೇತ್ರದಲ್ಲಿ ಅತ್ಯುತಮ ಸಾಧನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಾಧನೆ ಮಾದುವಂತಾಗಲಿ. ನಿಮ್ಮ ಜ್ಞಾನ ಯುವ ಪೀಳಿಗೆಗೆ ಹೆಚ್ಚು ಪ್ರೇರಣಾದಾಯಕವಾಗಿರಲಿ ಎಂದು ಹೇಳಿದ್ದಾರೆ.

ಪಠ್ಯ ವಿಸರ್ಜನೆಯಾಗಿದೆ,ಪಠ್ಯ ಪುಸ್ತಕ ವಿಸರ್ಜಿಸಿಲ್ಲ- ಸಿದ್ಧರಾಮಯ್ಯ

0

ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ. ಆದರೆ, ಪಠ್ಯ ಪುಸ್ತಕವನ್ನು ವಿಸರ್ಜನೆ ಮಾಡಿಲ್ಲ. ಈ ಸರ್ಕಾರ ನಮ್ಮ ಮಕ್ಕಳಿಗೆ ವಿಷ ಉಣಿಸುವ ಕೆಲಸ ಮಾಡುತ್ತಿದೆ. ಇದನ್ನು ನಾವು ತಡೆಗಟ್ಟದೇ ಹೋದರೆ ಇಡಿ ಬದುಕನ್ನು ಹಾಳು ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಣೆ ಮಾಡಿರುವ ಪಠ್ಯವನ್ನ ವಜಾಗೊಳಿಸಬೇಕು ಎಂದು ಕುಪ್ಪಳಿಯಿಂದ ತೀರ್ಥಹಳ್ಳಿವರೆಗೆ ನಿನ್ನೆ ಬುಧವಾರ ಪಾದಯಾತ್ರೆ ನಡೆಯಿತು. ಪಾದಯಾತ್ರೆಯ ಸಮಾರೋಪ ಸಮಾರಂಭವನ್ನು ತೀರ್ಥಹಳ್ಳಿಯ ಸಂಸ್ಕೃತಿ ಮಂದಿರದ ಎದುರು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸಾಂಸ್ಕೃತಿಕ ಭಯೋತ್ಪಾದನೆ ನಡೆಯುತ್ತಿದೆ. ಇದರ ವಿರುದ್ಧ ಕನ್ನಡದ ಮನಸುಗಳು ಹೋರಾಟ ಮಾಡಬೇಕಿದೆ. ರಾಜಕೀಯೇತರವಾಗಿ ಈ ಹೋರಾಟ ನಡೆಯಬೇಕಿದೆ. ದೇಶದಲ್ಲಿ ಅನೇಕ ಭಾರೀ ಚರಿತ್ರೆಯನ್ನು ತಿದ್ದಿದ್ದಾರೆ. ಈಗ ಪುನಃ ಚರಿತ್ರೆಯನ್ನು ತಿದ್ದಲು ಮುಂದಾಗಿದ್ದಾರೆ ಎಂದು ಸಿದ್ದರಾಮಯ್ಯ ಅವರು ದೂರಿದ್ದಾರೆ.

ಭಾರತದ ಸಂವಿಧಾನ ಸಮಾನತೆಯನ್ನು ಹೇಳುತ್ತದೆ. ಜಾತ್ಯತೀತ ತತ್ವ ಬೋಧಿಸುತ್ತದೆ. ಇದು ಮನವಾದಿಗಳಿಗೆ ಇಷ್ಟವಾಗುವುದಿಲ್ಲ. ಆರ್‌ಎಸ್‌ಎಸ್ ಹಾಗೂ ಅಂಗ ಸಂಸ್ಥೆಗಳಿಗೆ ಸಂವಿಧಾನದ ಬಗ್ಗೆ ಒಪ್ಪಿಗೆ ಇಲ್ಲ. ಸಾವಿರಾರು ವರ್ಷದಿಂದ ಮೇಲ್ವರ್ಗದ ಜನರು ಕೆಳವರ್ಗದವರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮಾಡಿಕೊಂಡು ಬಂದಿದ್ದಾರೆ. ಇದು ಮುಂದುವರೆಯಬೇಕು ಎಂಬುದು ಮನುವಾದಿಗಳ ಬಯಕೆಯಾಗಿದೆ ಎಂದು ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಜ್ಞಾನವಿಲ್ಲದ ಸಚಿವ. ಪೊಲೀಸ್ ಇಲಾಖೆಯಲ್ಲಿನ ದುಸ್ಥಿತಿ ಗಮನಿಸಿದರೆ ಸಚಿವರಿಗೆ ಜ್ಞಾನವಿಲ್ಲ ಅನ್ನುವುದು ಗೊತ್ತಾಗುತ್ತದೆ. ಇನ್ನು ಶಿಕ್ಷಣ ಸಚಿವ ನಾಗೇಶ್ ಅವರು ಆರ್‌ಎಸ್‌ಎಸ್ ಸೇರಿಕೊಂಡು ಅವರು ಬರೀ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತವರು ಕ್ಷೇತ್ರ ತೀರ್ಥಹಳ್ಳಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರು ತೀರ್ಥಹಳ್ಳಿಯವರು. ಅವರಿಗೆ ಅವಮಾನ ಆದಾಗ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ಕೊಟ್ಟು ಬರಬೇಕಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಅವರನ್ನು ಸೋಲಿಸಿ ಎಂತಹವನ್ನು ಆಯ್ಕೆ ಮಾಡಿದ್ದೀರಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ ಅವರು ಪ್ರಶ್ನಿಸಿದ್ದಾರೆ.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕುಪ್ಪಳಿಯಿಂದ ತೀರ್ಥಹಳ್ಳಿವರೆಗೆ ಬುಧವಾರ ಪಾದಯಾತ್ರೆ ನಡೆಸಲಾಯಿತು. ಸಾಹಿತಿಗಳು, ಪ್ರಗತಿಪರರು, ವಿವಿಧ ಸಂಘಟನೆಗಳ ಪ್ರಮುಖರು, ಸಾರ್ವಜನಿಕರು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್, ವಿಶ್ವಮಾನವ ವೇದಿಕೆಯ ಸಂಚಾಲಕ ಕಡಿದಾಳು ದಯಾನಂದ್, ಡಾ. ನಾ. ಡಿಸೋಜಾ, ಮಾಜಿ ಶಾಸಕ ವೈ. ಎಸ್. ವಿ. ದತ್ತಾ, ರೈತ ಮುಖಂಡರಾದ ಕೆ. ಟಿ. ಗಂಗಾಧರ್ ಹಾಗೂ ಬಸವರಾಜಪ್ಪ, ಶಿಕ್ಷಣ ತಜ್ಞ ನಿರಂಜನ ಆರಾಧ್ಯ, ಎಚ್. ಎಸ್. ಸುಂದರೇಶ್ ಮುಂತಾದವರು ವೇದಿಕೆಯಲ್ಲಿದ್ದರು.

ವಿದ್ಯಾರ್ಥಿಗಳ ಪ್ರವಾಸಕ್ಕೆ ಹಿಂದಿ ಭಾಷೆ ಕಡ್ಡಾಯ ತರವಲ್ಲ- ಕುಮಾರಸ್ವಾಮಿ

0

ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಒಂದು ದೇಶ, ಒಂದು ಭಾಷೆ ಮೂಲಕ ಸಂಚು ರೂಪಿಸಿ ಕನ್ನಡವನ್ನು ನಿರ್ಲಕ್ಷಿಸಿವೆ. ಇದು ಕ್ಷಮಾರ್ಹ ಮತ್ತು ಖಂಡನಾರ್ಹ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಟ್ವೀಟ್‌ರ್ ನಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.

ಭಾರತ ಅಮೃತ ಮಹೋತ್ಸವ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಒಂದು ಭಾರತ ಶ್ರೇಷ್ಠ ಭಾರತ ಪ್ರವಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಅದರಲ್ಲಿ ಕೇವಲ ಹಿಂದಿ ಮಾತನಾಡುವ ಹಿಂದಿ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಹೊರ ರಾಜ್ಯಗಳಿಗೆ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳ ವರದಿ ನೋಡಿ ನಾನು ಗಾಬರಿಯಾಗಿದ್ದೇನೆ. ಬೆಂಗಳೂರು ಡಿಡಿಪಿಐ ಹೊರಡಿಸಿರುವ ಆದೇಶ ಕನ್ನಡವನ್ನು ಕಗ್ಗೊಲೆ ಮಾಡುವ ಆದೇಶ ಎಂದು ಕುಮಾರಸ್ವಾಮಿ ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಕೊರೋನ ಸೋಂಕು ಏರಿಕೆ- ಸಾವಿನ ಸಂಖ್ಯೆ ಇಳಿಕೆ

0

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏಕಾಏಕಿ ಹೆಚ್ಚಳವಾಗಿದೆ. ಕಳೆದ ಒಂದು ದಿನದಲ್ಲಿ 12,213 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.

ಆದರೆ, ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಒಂದೇ ದಿನದಲ್ಲಿ 11ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

ಈ ಮೂಲಕ ದೇಶದಲ್ಲಿ ಈವರೆಗೆ ಕೊರೋನಾಕ್ಕೆ ಸಾವನ್ನಪ್ಪಿದವರ ಸಂಖ್ಯೆ 5,24,803ಕ್ಕೆ ಏರಿಕೆಯಾಗಿದೆ.

ಇನ್ನು ದೇಶದಲ್ಲಿ 58215 ಕೊರೋನಾ ಸಕ್ರಿಯ ಪ್ರಕರಣಗಳಿವೆ. 24 ಗಂಟೆಯಲ್ಲಿ 7624 ಜನರು ಕೊರೋನಾ ದಿಂದ ಗುಣಮುಖರಾಗಿದ್ದಾರೆ.

ನಿನ್ನೆ 15,21,942 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ದೇಶದಲ್ಲಿ ಈವರೆಗೆ 1,95,67,37,014 ಡೋಸ್ ಲಸಿಕೆ ಹಾಕಲಾಗಿದೆ. ನಿನ್ನೆ 5,19,419 ಜನರನ್ನು ಕೊರೋನಾ ಪರೀಕ್ಷೆ ಮಾಡಲಾಗಿದೆ