Monday, March 9, 2026
Monday, March 9, 2026
Home Blog Page 1530

ಮಾನಸಿಕ ಸ್ವಾಸ್ಥ್ಯಕ್ಕೆ ಯೋಗ ಸಹಕಾರಿ- ವೈಶಾಲಿ

0

ಪ್ರತಿಯೊಬ್ಬರ ಶರೀರ ಹಾಗೂ ಮಾನಸಿಕ ಸ್ವಾಸ್ತ್ಯ ಕಾಪಾಡಿಕೊಳ್ಳಲು ಪ್ರತಿ ನಿತ್ಯ ಯೋಗ ಅಭ್ಯಾಸ ರೂಢಿಸಿಕೊಳುವುದು ಅವಶ್ಯಕ ಎಂದು ಶಿವಮೊಗ್ಗ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಎಂ.ವಿ.ವೈಶಾಲಿ ತಿಳಿಸಿದ್ದಾರೆ.

ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗಳು 8ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಆಯೋಜಿಸಿದ್ದ ಒಂದು ದಿನದ ವಿಶ್ವವಿದ್ಯಾಲಯ ಮಟ್ಟದ ಯೋಗ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.

ಇಂದಿನ ಯುವ ಜನತೆ ಆಧುನಿಕ ತಂತ್ರಜ್ಞಾನ, ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚನ ಸಮಯ ಕಳೆಯುತ್ತಿದ್ದಾರೆ. ಆ ಕಾರಣಕ್ಕೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇದು ಅವರ ಭವಿಶ್ಯದ ಮೇಲೆ ದೀರ್ಘಾವಧಿ ಪರಿಣಾಮ ಬೀರುತ್ತದೆ. 20ರಿಂದ 30ರ ವಯಸ್ಸಿನ ಅವಧಿ ಅತ್ಯಂತ ಪ್ರಮುಖವಾದದ್ದು. ಅನಾರೋಗ್ಯ ಬರದಂತೆ ನೋಡಿಕೊಳ್ಳಲು, ಅದರಿಂದ ಪಾರಾಗಲು ಯೋಗಾಭ್ಯಾಸ ಅನಿಯಾರ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಿವಗಂಗಾ ಯೋಗ ಕೇಂದ್ರದ ಯೋಗ ಗುರುಗಳಾದ ರುದ್ರಾರಾಧ್ಯ ಮಾತನಾಡಿ ಯುವಕರು ಹೊರಗಿನ ಪ್ರಪಂಚಕ್ಕೆ ಮಾರುಹೋಗದೇ ತಮ್ಮ ಒಳ ಮನಸ್ಸಿನ ಪರಿಶುದ್ಧತೆಗೆ ಗಮನ ನೀಡಬೇಕು. ಉತ್ತಮ ಜೀವನ ಶೈಲಿಯತ್ತ ತಮ್ಮ ಚಿತ್ತ ಹರಿಸಬೇಕು. ಅದಕ್ಕೆ ಯೋಗಾಭ್ಯಾಸವೊಂದೇ ದಾರಿ ಎಂದು ಕಿವಿ ಮಾತು ಹೇಳಿದ್ದಾರೆ.

ಪರಿಸರ ನಾಗರಾಜ್, ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ, ಡಿವಿಎಸ್ ಕಾಲೇಜಿನ ಡಾ.ಕೆ.ಜಿ.ವೆಂಕಟೇಶ, ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಎಂ.ಟಿ. ಎಪಿಎಂಸಿ ಮಾಜಿ ಅಧ್ಯಕ್ಷರಾದ ಎಸ್.ಎಸ್.ಜ್ಯೋತಿಪ್ರಕಾಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಮಾನ ಪ್ರಯಾಣ ದರ ಹೆಚ್ವಳ:ಕೇಂದ್ರ ನೌಕರರಿಗೆ ಹೊಸ ನಿರ್ದೇಶನ

0

ಜೆಟ್ ಇಂಧನ ಅಥವಾ ವಾಯುಯಾನ ಟರ್ಬೈನ್ ಇಂಧನದ ಬೆಲೆ ಏರಿಕೆಯಿಂದಾಗಿ ವಿಮಾನಯಾನ ಕಂಪನಿಗಳು ದರಗಳನ್ನು ಹೆಚ್ಚಿಸುತ್ತಿವೆ.

ನಿಸ್ಸಂಶಯವಾಗಿ, ಇದು ವಿಮಾನದಲ್ಲಿ ಪ್ರಯಾಣಿಸುವ ಎಲ್ಲಾ ಜನರ ಮೇಲೆ ಪರಿಣಾಮ ಬೀರುತ್ತಿದೆ. ಅದು ಸಾಮಾನ್ಯ ಜನರಾಗಿರಲಿ ಅಥವಾ ಸರ್ಕಾರಿ ಉದ್ಯೋಗಿಗಳಾಗಿರಲಿ.ಇದನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ತನ್ನ ಬೊಕ್ಕಸದ ಮೇಲಿನ ಹೊರೆ ಹೆಚ್ಚಾಗದಂತೆ ತಡೆಯಲು ಅಗ್ಗದ ಶ್ರೇಣಿಯ ಟಿಕೆಟ್‌ಗಳನ್ನು ಕಾಯ್ದಿರಿಸುವಂತೆ ತನ್ನ ಉದ್ಯೋಗಿಗಳಿಗೆ ಕೇಳಿದೆ.

ವೆಚ್ಚ ಹೆಚ್ಚಳವನ್ನು ತಡೆಯಲು ಸರ್ಕಾರಿ ನೌಕರರು ತಮ್ಮ ವಿಮಾನ ಪ್ರಯಾಣದ ದಿನಾಂಕಕ್ಕಿಂತ ಕನಿಷ್ಠ 3 ವಾರ ಮುಂಚಿತವಾಗಿ ಎಲ್ಟಿಸಿಗೆ ಭೇಟಿ ನೀಡಿ ಟಿಕೆಟ್ ಕಾಯ್ದಿರಿಸುವಂತೆ ಹಣಕಾಸು ಸಚಿವಾಲಯ ಮಾಹಿತಿ ತಿಳಿಸಿದೆ.

ಸಚಿವಾಲಯವು ಸರ್ಕಾರಿ ನೌಕರರಿಗೆ ಅವರು ಅರ್ಹರಾಗಿರುವ ಪ್ರಯಾಣ ವಿಭಾಗದಲ್ಲಿ ಅಗ್ಗದ ಶುಲ್ಕ ವನ್ನು ಆಯ್ಕೆ ಮಾಡುವಂತೆ ಕೇಳಿದೆ. ಈ ವಿಷಯಗಳು ಹಣಕಾಸು ಸಚಿವಾಲಯದ ಅಧೀನದಲ್ಲಿರುವ ವೆಚ್ಚ ವಿಭಾಗದ ಕಚೇರಿ ಪತ್ರದಲ್ಲಿ ಅಂದರೆ ಕಚೇರಿ ಜ್ಞಾಪಕ ಪತ್ರದಲ್ಲಿ ಎಲ್ಲೋ ಹೋಗಿವೆ. ಅದರ ಪ್ರಕಾರ, ಉದ್ಯೋಗಿಗಳು ಪ್ರಯಾಣದ ಪ್ರತಿ ಹಂತಕ್ಕೆ ಕೇವಲ ಒಂದು ಟಿಕೆಟ್ ಮಾತ್ರ ಕಾಯ್ದಿರಿಸಬೇಕು. ಪ್ರಯಾಣ ಕಾರ್ಯಕ್ರಮದ ಅನುಮೋದನೆ ಪಡೆಯುವ ಪ್ರಕ್ರಿಯೆ ಮುಂದುವರಿಯುವಾಗ ಬುಕಿಂಗ್ ಸಹ ಮಾಡಬಹುದು. ಆದರೆ, ಅನಗತ್ಯವಾಗಿ ಟಿಕೆಟ್ ಗಳನ್ನು ರದ್ದುಗೊಳಿಸುವುದನ್ನು ತಪ್ಪಿಸಬೇಕು.

ಹಿಜಾಬ್ ಧಾರಣೆಗೆ ಅನುಮತಿ ನೀಡದ ಕಾಲೇಜಿನಿಂದ ಟೀಸಿ ಪಡೆದ ವಿದ್ಯಾರ್ಥಿನಿಯರು

0

ಹಿಜಾಬ್ ವಿವಾದ ಕಳೆದ 3-4 ತಿಂಗಳಿನಿಂದ ರಾಜ್ಯದಲ್ಲಿ ಸುದ್ದಿಯಾಗಿತ್ತು. ಎಲ್ಲೆಡೆ ಈ ವಿವಾದ ತಣ್ಣಗಾಗಿದೆ. ಆದರೆ, ಮಂಗಳೂರಿನಲ್ಲಿ ಮಾತ್ರ ಈ ವಿವಾದ ಬಗೆ ಹರಿಯುವ ಹಾಗೆ ಕಾಣುತ್ತಿಲ್ಲ.

ಮಂಗಳೂರು ವಿಶ್ವವಿದ್ಯಾಲಯ ಅಧೀನದ ಹಂಪನಕಟ್ಟೆ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ 5 ಮುಸ್ಲಿಂ ವಿದ್ಯಾರ್ಥಿನಿಯರು ಟ್ರಾನ್ಸ್​ಫರ್ ಸರ್ಟಿಫಿಕೇಟ್ ಪಡೆಯಲು ಮುಂದಾಗಿದ್ದಾರೆ.

ಮಂಗಳೂರು ವಿ ವಿ ಕಾಲೇಜಿನಲ್ಲಿ ಇತ್ತೀಚೆಗೆ ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿ ನಿಯಮಾವಳಿಗಳನ್ನು ಮಾಡಲಾಗಿತ್ತು. ಆ ನಂತರ ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್ ವಿಚಾರದಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಗಳು ಕೂಡ ನಡೆದಿದ್ದವು.

ಮಂಗಳೂರು ವಿ ವಿ ಕಾಲೇಜಿನಲ್ಲಿ 44 ಮುಸ್ಲಿಂ ವಿದ್ಯಾರ್ಥಿನಿಯರಿದ್ದು, ಇವರಲ್ಲಿ 15 ಮಂದಿ ಹಿಜಾಬ್ ತೆಗೆದು ಕಾಲೇಜಿಗೆ ಬರಲು‌ ನಿರಾಕರಿಸಿದ್ದರು.

ವಿದ್ಯಾರ್ಥಿನಿಯರು ಬೇರೆ ಕಾಲೇಜಿಗೆ ತೆರಳುವುದಿದ್ದರೆ ಅವರಿಗೆ ವರ್ಗಾವಣೆ ಪಾತ್ರ ನೀಡಲು ವ್ಯವಸ್ಥೆ ಮಾಡಲಾಗುವುದೆಂದು ಮಂಗಳೂರು ವಿವಿ ಕುಲಪತಿ ಸುಬ್ರಹ್ಮಣ್ಯ ಯಡಪಡಿತ್ತಾಯ ತಿಳಿಸಿದ್ದರು.

ಮಂಗಳೂರು ವಿವಿಯ ಹಂಪನಕಟ್ಟೆ ಕಾಲೇಜಿನ 5 ವಿದ್ಯಾರ್ಥಿನಿಯರು ವರ್ಗಾವಣೆ ಪತ್ರ ಪಡೆದು ಬೇರೆ ಕಾಲೇಜಿಗೆ ಹೋಗಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಕ್ರೀಡಾಪ್ರಿಯರ ಮನಗೆದ್ದ ರಾಜ್ಯ ಕ್ರಿಕೆಟ್ ಸಂಸ್ಥೆ

0

ನಿನ್ನೆ ಭಾನುವಾರ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಈ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಅಭಿಮಾನಿಗಳಿಗೆ ಮ್ಯಾಚ್ ನಡೆಯದೇ ಇರುವುದರಿಂದ ಬೇಸರಕ್ಕೆ ಕಾರಣವಾಗಿದೆ.ಈ ಬೇಸರದ ನಡುವೆ ಕರ್ನಾಟಕದ ರಾಜ್ಯ ಕ್ರಿಕೆಟ್ ಸಂಸ್ಥೆ ಬೆಳ್ಳಿ ರೇಖೆ ಮೂಡಿಸಿದೆ.

ಅದೇನು ಅಂದ್ರೇ, ಕೆಎಸ್‌ ಸಿಎ ಅಂಗಳದಲ್ಲಿ ಇದೇ ಪಂದ್ಯ ಇನ್ನೋಮ್ಮೆ ಆಡಲಾಗುತ್ತದೆ ಎಂದು ಯೋಚಿಸಿದ್ದರೆ ಅದು ತಪ್ಪು.

ಕೆಎಸ್ ಸಿಎ ಅಭಿಮಾನಿಗಳಿಗೆ ಟಿಕೆಟ್ ಹಣದ ಶೇ.50 ರಷ್ಟನ್ನು ನೀಡುವುದಾಗಿ ತಿಳಿಸಿದೆ.

ಇನ್ನು ಒಂದೇ ಒಂದು ಎಸೆತ ಆಗದೇ ಇದ್ದಿದ್ದರೆ ಟಿಕೆಟ್ ಹಣ ಸಂಪೂರ್ಣ ನೀಡಲಾಗುತ್ತಿತ್ತು. ಒಂದು ವೇಳೆ ಒಂದೇ ಒಂದು ಎಸೆತ ಎಸೆದರೂ ಹಣ ನೀಡಲಾಗುವುದಿಲ್ಲ ಎಂದು ಮೊದಲೇ ಸೂಚಿಸಲಾಗಿರುತ್ತದೆ.

ಅದರಂತೆ ಭಾನುವಾರ 3.3 ಓವರ್ ಗಳ ಪಂದ್ಯ ನಡೆದಿದೆ.

ನಿಯಮಗಳ ಅನ್ವಯ ಹಣ ಹಿಂತಿರಿಗಿಸುವ ಅಗತ್ಯವಿಲ್ಲ. ಆದರೆ,ರಾಜ್ಯ ಕ್ರಿಕೆಟ್ ಸಂಸ್ಥೆ ಹಣ ಕೊಟ್ಟು ಟಿಕೆಟ್ ಪಡೆದ ಅಭಿಮಾನಿಗಳಿಗೆ ಶೇ.50 ರಷ್ಟು ಹಣವನ್ನು ನೀಡುವುದಾಗಿ ತಿಳಿಸಿದೆ.

Job Alert

0

ಉದ್ಯೋಗಿಗಳ ನಿಯುಕ್ತಿಯಲ್ಲಿದ್ದೇವೆ.

ಬೇಕಾಗಿದ್ದಾರೆ…!

ಜೂನಿಯರ್ ಆರ್ಕಿಟೆಕ್ಟ್ ಹಾಗೂ ಸಿವಿಲ್ ಇಂಜಿನಿಯರ್ಸ್ ಗಳು ನಮ್ಮ ಆಫೀಸ್ ಗೆ ಬೇಕಾಗಿದ್ದಾರೆ.

ಆಫೀಸ್ ವಿಳಾಸ: ಕಲ್ಲಹಳ್ಳಿ ಗಣಪತಿ ದೇವಾಲಯದ ಮುಂಭಾಗ, ಸಜ್ಜನ್ ಸ್ಕ್ವೇರ್, ಶಿವಮೊಗ್ಗ

ಜೂನಿಯರ್ ಆರ್ಕಿಟೆಕ್ಟ್ ( Keen eye for details, working Drawings, 3D modeling)

ಸಿವಿಲ್ ಇಂಜಿನಿಯರ್ಸ್ ( Client Handling, Site Coordination)

ಆಸಕ್ತರು ನಿಮ್ಮ ವಿವರಗಳನ್ನು ಈ ಕೆಳಕಂಡ ವೆಬ್ಸೈಟ್ಗೆ ಕಳುಹಿಸಬಹುದು.
Info@perspectivebysajjan.com

ದೂರವಾಣಿ ಸಂಖ್ಯೆ: 7353533077

ಕೊರೋನ ಸೋಂಕು ಹೆಚ್ಚಳ! ಮಾರ್ಗಸೂಚಿ ಪಾಲಿಸಿ

0

ಭಾರತದಾದ್ಯಂತ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ ನಿನ್ನೆಗಿಂತ ಕೊಂಚ ಕಡಿಮೆ ಪ್ರಮಾಣದಲ್ಲಿ ಪ್ರಕರಣ ದಾಖಲಾಗಿದೆ. 12,781 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.

ಕೊರೋನಾ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. 24 ಗಂಟೆಯಲ್ಲಿ 18 ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 5,24,873 ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ 76,700 ಕೊರೋನಾ ಸಕ್ರಿಯ ಪ್ರಕರಣಗಳಿದೇ24 ಗಂಟೆಯಲ್ಲಿ 8,537 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.

ದೇಶದಲ್ಲಿ ಇದುವರೆಗೆ 4,27,07,900 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.

2,80,136 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ದೇಶದಲ್ಲಿ ಇದುವರೆಗೆ 1,96,18,66,707 ಕೊರೋನಾ ಡೋಸ್ ಲಸಿಕೆ ನೀಡಲಾಗಿದೆ.

ಕೊರೋನ ಸೋಂಕು ಹೆಚ್ಚಳ! ಮಾರ್ಗಸೂಚಿ ಪಾಲಿಸಿ

0

ಭಾರತದಾದ್ಯಂತ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ ನಿನ್ನೆಗಿಂತ ಕೊಂಚ ಕಡಿಮೆ ಪ್ರಮಾಣದಲ್ಲಿ ಪ್ರಕರಣ ದಾಖಲಾಗಿದೆ. 12,781 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.

ಕೊರೋನಾ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. 24 ಗಂಟೆಯಲ್ಲಿ 18 ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 5,24,873 ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ 76,700 ಕೊರೋನಾ ಸಕ್ರಿಯ ಪ್ರಕರಣಗಳಿದೇ24 ಗಂಟೆಯಲ್ಲಿ 8,537 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.

ದೇಶದಲ್ಲಿ ಇದುವರೆಗೆ 4,27,07,900 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.

2,80,136 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ದೇಶದಲ್ಲಿ ಇದುವರೆಗೆ 1,96,18,66,707 ಕೊರೋನಾ ಡೋಸ್ ಲಸಿಕೆ ನೀಡಲಾಗಿದೆ.

ಅಗ್ನಿವೀರರಿಗೆ ಆನಂದ್ ಮಹೀಂದ್ರ ಆಮಂತ್ರಣ

0

ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಅಗ್ನಿಪಥ್ ಯೋಜನೆಯಡಿ ತರಬೇತಿ ಪಡೆದ ಯುವಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ.

ಅಗ್ನಿಪಥ್ ಕಾರ್ಯಕ್ರಮದ ಸುತ್ತ ನಡೆದ ಹಿಂಸಾಚಾರದಿಂದ ಬೇಸರವಾಗಿದೆ.

ಕಳೆದ ವರ್ಷ ಈ ಯೋಜನೆಯನ್ನು ಪ್ರಸ್ತಾಪಿಸಿದಾಗ ನಾನು ಈ ಬಗ್ಗೆ ಹೇಳಿದ್ದೇನೆ. ಮತ್ತೆ ಅದನ್ನು ಪುನರಾವರ್ತಿಸುತ್ತಿದೆ. ಶಿಸ್ತು ಮತ್ತು ಕೌಶಲ್ಯಗಳು ಅಗ್ನಿವೀರರನ್ನು ಅತ್ಯುತ್ತಮವಾಗಿ ಉದ್ಯೋಗಕ್ಕೆ ಒಳಪಡಿಸುತ್ತದೆ. ಅಂತಹ ತರಬೇತಿ ಪಡೆದ, ಸಮರ್ಥ ಯುವಕರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಮಹೀಂದ್ರಾ ಗ್ರೂಪ್ ಸ್ವಾಗತಿಸುತ್ತದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಪ್ರಧಾನಿ ಭೇಟಿ:ಸಂಚಾರಿ ಮಾರ್ಗಸೂಚಿ

0

ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ಜೂ. 20 ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿದೆ. ಬೆಂಗಳೂರಿನಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2 ದಿನಗಳ ಕರ್ನಾಟಕ ಭೇಟಿ ಸಂಚಾರದ ಮೇಲೆ ಪರಿಣಾಮ ಬೀಳಲಿದೆ.

ಜೂ. 20 ರಂದು ಬೆಂಗಳೂರಿನ ಅನೇಕ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಭದ್ರತಾ ದೃಷ್ಟಿಯಿಂದ ಸಂಚಾರದ ಮೇಲೆ ಸಂಚಾರ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಈ ಕುರಿತು ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ಅವರು ಮಾಹಿತಿ ನೀಡಿದ್ದಾರೆ.

ಪ್ರಧಾನಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್‌ಪೋರ್ಟ್ ಎಲಿವೇಟೆಡ್ ರಸ್ತೆ ಮೂಲಕ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೂ ಏರ್ಪೋರ್ಟ್ ಎಲಿವೇಟಡ್ ರಸ್ತೆ ಬಳಸದಂತೆ ವಾಹನ ಸವಾರರಿಗೆ ಬೆಂಗಳೂರು ಪೊಲೀಸರು ಸೂಚನೆ ನೀಡಿದ್ದಾರೆ.

ಈ ರಸ್ತೆಗೆ ಬದಲಿ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ

ಅಪ್ಪನೆಂದರೆ ನನಗೆ ಒಪ್ಪ

0

ಅಪರಿಚಿತವಾದ ಈ ಪ್ರಪಂಚದಲ್ಲಿ ಪರಿಚಿತರಾದ ಮೊದಲ ವ್ಯಕ್ತಿಗಳು ಅಪ್ಪ ಅಮ್ಮ. 9 ತಿಂಗಳು ಕತ್ತಲ ಗೂಡಿನಿಂದ ಹೊರಲೋಕಕ್ಕೆ ಕಾಲಿಟ್ಟಾಗ ಕಂಡ ಪ್ರತ್ಯಕ್ಷ ದೇವರೂ ಹೌದು.

ಬದುಕು ಕೊಟ್ಟಿದ್ದು ಅವಳಾದರೆ, ಬದುಕಲು ಕಲಿಸಿಕೊಟ್ಟಿದ್ದು ನೀನು ಅಪ್ಪ. ಜೀವ ಕೊಟ್ಟಿದ್ದು ಅವಳಾದರೆ ಈ ಜೀವಕ್ಕೆ ಒಂದು ರೂಪ ಕೊಟ್ಟಿದ್ದು ನೀನು. ಕಾಲಿಗೆ ಚಪ್ಪಲಿ ತೊಡಿಸಿದ್ದು ಅವಳಾದರೆ , ಕೈಹಿಡಿದು ನಡಿಗೆ ಕಲಿಸಿದ್ದು ನೀನು. ನಾನು ಬಿದ್ದಾಗ ಅಮ್ಮಾ ಎಂದು ಕೂಗಿದರೂ ಓಡಿಬಂದು ಮುದ್ದು ಮಾಡಿ ಚಾಕ್ಲೆಟ್ ಕೊಡಿಸಿದ್ದು ನೀನು. ಶಾಲೆಗೆ ಹೊರಟಾಗ ಊಟದ ಡಬ್ಬಿ ಪ್ಯಾಕ್ ಮಾಡಿಕೊಟ್ಟಿದ್ದು ಅವಳಾದರೆ, ಸ್ಕೂಲ್ ಗೇಟ್ ವರೆಗೂ ಬಂದು ಕಳುಹಿಸಿದ್ದು ನೀನು. ಮಳೆಗಾಲದಲ್ಲಿ ಬೆಚ್ಚನೆಯ ಮಡಿಲಲ್ಲಿ ಮಲಗಿಸಿದ್ದು ಅವಳಾದರೆ, ಆಚೆ ಆಕಾಶದಲ್ಲಿ ಕಾಮನಬಿಲ್ಲು ತೋರಿಸಿದ್ದು ನೀನು. ಹಬ್ಬಕ್ಕೆ ಹೋಳಿಗೆ ಮಾಡಿದ್ದು ಅವಳಾದರೆ, ಹೊಸ ಬಟ್ಟೆ ತಂದಿದ್ದು ನೀನು. ಸ್ವೆಟರ್ ತೊಡಿಸಿದ್ದು ಅವಳಾದರೆ, ಸ್ವೆಟರ್ ಕೊಡಿಸಿದ್ದು ನೀನು.

ರುಚಿ ರುಚಿಯಾದ ಅಡುಗೆ ತಯಾರಿಸುವುದು ಅವಳಾದರೆ ಹೊತ್ತು ತರುವುದು ನೀನು. ಪರೀಕ್ಷೆಯ ಸಮಯದಲ್ಲಿ ರಾತ್ರಿಯಿಡೀ ಜೊತೆಗಿದ್ದಿದ್ದು ಅವಳಾದರೆ ಮನದ ಭಯವನ್ನು ದೂರ ಮಾಡಿ ದೈರ್ಯ ತುಂಬಿದ್ದು ನೀನು. ಮುದ್ದು ಮಾಡಿದ್ದು ಅವಳಾದರೆ ಬುದ್ಧಿ ಹೇಳಿದ್ದು ನೀನು. ನನ್ನನ್ನ ಕಣ್ಣ ರೆಪ್ಪೆ ತರಹ ಜೊತೆಯಲ್ಲಿ ಇಟ್ಟುಕೊಳ್ಳಬೇಕು ಎಂದುಕೊಂಡಿದ್ದು ಅವಳಾದರೆ, ಹಾಸ್ಟೆಲ್ ನಲ್ಲಿ ಬಿಟ್ಟು ಪ್ರಪಂಚ ತಿಳಿಯುವ ಹಾಗೆ ಮಾಡಿದ್ದು ನೀನು. ಪ್ರತಿ ಹಬ್ಬಕ್ಕೂ ಫೋನ್ ಮಾಡಿ ನೆನಪಿಸುತ್ತಾ ಇದ್ದಿದ್ದು ಅವಳಾದರೆ, ಓಡಿಬಂದು ಮನೆಗೆ ಕರೆಯುತ್ತಿದ್ದದ್ದು ನೀನು.

ಹೊರಗಿನ ತಿಂಡಿ ತಿನ್ನಬೇಡ ಎಂದು ಬೈಯುವುದು ಅವಳಾದರೆ ಅಮ್ಮನಿಗೆ ತಿಳಿಯದ ಹಾಗೆ ನನ್ನ ಇಷ್ಟದ ತಿಂಡಿಗಳನ್ನು ಕೊಡಿಸಿದ್ದು ನೀನು. ಕೆಲಸ ಮಾಡಲಿಲ್ಲವೆಂದರೆ ಗದರುವುದು ಅವಳಾದರೆ ನನ್ನ ಮಗಳು ಇನ್ನೂ ಚಿಕ್ಕವಳು ಎಂದು ನನ್ನ ಪರವಾಗಿ ಅಮ್ಮನ ವಿರುದ್ಧ ಹೋಗಿದ್ದು ನೀನು.
ನಾನು ಅತ್ತಾಗ ಕಣ್ಣೊರೆಸಿದ್ದು ಅವಳಾದರೆ, ನನ್ನ ಮೊಗದಲ್ಲಿ ಮತ್ತೆ ನಗು ತರಿಸುತ್ತಾ ಇದ್ದಿದ್ದು ನೀನು.

ಹತ್ತು ರುಪಾಯಿ ಖರ್ಚು ಮಾಡಬೇಕಾದಾಗ ಹತ್ತು ಸಲ ಯೋಚಿಸುತ್ತಿದ್ದ ನೀನು ಕಷ್ಟವಾದರೂ ಅದನ್ನು ತೋರಿಸಿ ಕೊಳ್ಳದೆ ನನ್ನ ಪ್ರತಿ ಅವಶ್ಯಕತೆಗಳನ್ನ ಪೂರೈಸುತ್ತಿದ್ದುದು ನೀನು. ನಾನು ಕೇಳಿದಷ್ಟು ಹಣ ಕೊಡುತ್ತಿದ್ದೆ. ಕೌನ್ಸಿಲಿಂಗ್ ನಲ್ಲಿ ನೀ ಕೂತು ನೀಡಿದ ಮಾರ್ಗದರ್ಶನ, ಎಲ್ಲ ಪ್ರತಿ ಸೆಮಿಸ್ಟರ್ ನ ಫೀಸ್, ನಾನು ಕೊಂಡ ಪುಸ್ತಕದ ಬೆಲೆ, ನಾನು ಸವೆಸಿದ ಚಪ್ಪಲಿಯ ಹಣ, ನನ್ನ ಬ್ಯಾಗಿಗೋ … ಮೊಬೈಲ್ ಸೆಟ್ಟಿಗೊ, ಅದರ ರಿಚಾರ್ಜ್ ಗೊ ನೀನು ಸುರಿಸಿದ ದುಡ್ಡು, ನನ್ನ ಪ್ರತಿ ಖರ್ಚಿನ ಹಿಂದಿದ್ದ ನಿನ್ನ ಬೆವರಿನ ಹನಿಗಳು.

ಇಂದು ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ನೀನು ಬಾರದ ಲೋಕಕ್ಕೆ ಹೋಗಿದ್ದರೂ, ನನ್ನ ಜೊತೆ ಸದಾ ಇದ್ದು ಆಶೀರ್ವದಿಸಿದಂತೆಯೇ ಭಾಸವಾಗುತ್ತದೆ. ನನ್ನ ಸಂತೋಷಕ್ಕಾಗಿ ಹಗಲು-ರಾತ್ರಿಯೆನ್ನದೆ ದುಡಿದು ಬದುಕಿನ ತೊಂಬತ್ತೊಂಬತ್ತು ಪಾಲು ಕಷ್ಟ ನೋವು ಸಮಸ್ಯೆಗಳ ನಡುವೆ ಒದ್ದಾಡುತ್ತಿದ್ದರೂ ನಿನ್ನ ಮೊಗದಲ್ಲಿದ್ದ ಆ ಮುಗ್ದ ನಗು …ನನ್ನ ಜೀವನಕ್ಕೆ ಸ್ಫೂರ್ತಿ.

ನನಗೊಂದು ಬದುಕು ಕಟ್ಟಿಕೊಡಲು ನೀನು ಸುರಿಸಿದ ಬೆವರು, ಅವಳು ಸುರಿಸಿದ ಕಣ್ಣೀರು….
ಇಷ್ಟೆಲ್ಲಾ ತ್ಯಾಗ ಮಾಡಿದ ಮೇಲೂ ಮತ್ತೆ ಕೇಳುತ್ತಿದ್ದೆ , ಮತ್ತೇನು ಬೇಕೆಂದು?.. ಹಾಗಾಗಿ ನೀನು ನನ್ನ ಆತ್ಮೀಯ ….