Monday, March 9, 2026
Monday, March 9, 2026
Home Blog Page 1531

ರಾಜ್ಯದಲ್ಲಿನ ಆಹಾರ ಪಾರ್ಕ್ ಗಳಪರಿಸ್ಥಿತಿ ವರದಿಗೆ ಬಿ.ಸಿ.ಪಾಟೀಲ್ ಸೂಚನೆ

0

ರಾಜ್ಯದಲ್ಲಿ ಈಗಾಗಲೇ ಸ್ಥಾಪಿನೆಯಾಗಿರುವ ಆಹಾರ ಪಾರ್ಕುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಪಾರ್ಕ್‌ಗಳ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವರದಿ ಮಾಹಿತಿಯನ್ನು
ನಬಾರ್ಡ್ ಸಂಸ್ಥೆಯ ಮೂಲಕ ಕೈಗೊಂಡು ನೀಡುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಕಾಸಸೌಧದಲ್ಲಿ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ಆಹಾರ ಕರ್ನಾಟಕ ನಿಯಮಿತ ಸಂಸ್ಥೆಯ ಆಡಳಿತ ಮಂಡಳಿಯ ಸಭೆ ನಡೆಯಿತು.
ಸಭೆಯಲ್ಲಿ ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳದಲ್ಲಿ ಸ್ಥಾಪಿಸಲಾಗುತ್ತಿರುವ ಆಹಾರ ಪಾರ್ಕಿನಲ್ಲಿ , ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಅನೇಕ ಬೆಳೆಗಳಿಗೆ ಮೌಲ್ಯವರ್ಧನೆ ಹಾಗೂ ಸಂಸ್ಕರಣೆ ಕೈಗೊಳ್ಳಲು ಕೈಗಾರಿಕೆಗಳನ್ನು ಸ್ಥಾಪಿಸಲು ಕೈಗಾರಿಕೆ ನಿವೇಶನಗಳನ್ನು ಕೆಐಎಡಿಬಿ ಅಥವಾ ಸೂಕ್ತ ಸರ್ಕಾರಿ ಸಂಸ್ಥೆಯ ಮುಖಾಂತರ ಅಭಿವೃದ್ಧಿಪಡಿಸಿ ಉದ್ದಿಮೆದಾರರಿಗೆ ಹಂಚಿಕೆ ಮಾಡಲು ತೀರ್ಮಾನಿಸಲಾಯಿತು.

ಅಲ್ಲದೇ ಆಹಾರ ಪಾರ್ಕಿನಲ್ಲಿ ರೈತರಿಗೆ ಮತ್ತು ರೈತ ಉತ್ಪಾದಕ ಸಂಸ್ಥೆಗಳಿಗೆ , ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ಸಾಮಾನ್ಯ ಮೂಲಭೂತ ಸೌಕರ್ಯಗಳಾದ ಶೀತಲಗೃಹಗಳು , ಗೋದಾಮುಗಳು , ಸಂಸ್ಕರಣೆ ಘಟಕಗಳು , ಪ್ಯಾಕಿಂಗ್ ಘಟಕಗಳು , ಪರೀಕ್ಷೆಯ ಲ್ಯಾಬೊರೇಟರಿಗಳು ಹಾಗೂ ಪ್ರಮಾಣೀಕರಣ ಕೇಂದ್ರಗಳನ್ನು ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ತೀರ್ಮಾನಿಸಲಾಯಿತು.

ಆಹಾರ ಕರ್ನಾಟಕ ನಿಯಮಿತ ಸಂಸ್ಥೆಯಿಂದ ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳದಲ್ಲಿ ಸ್ಥಾಪಿಸಲಾಗುತ್ತಿರುವ ಆಹಾರ ಪಾರ್ಕಿನ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಟೆಂಡರ್‌ ಅನುಮೋದನೆ ಮೂಲಕ ಚಾಲನೆ ನೀಡಲಾಯಿತು.

2022-23ರ ಬಜೆಟ್ ಘೋಷಣೆಯಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಿನಿ ಆಹಾರ ಪಾರ್ಕ್‌ಗಳನ್ನು ಸ್ಥಾಪಿಸುವ ಉದ್ದೇಶದಿಂದ ಮೊದಲನೇ ಹಂತದಲ್ಲಿ ಜಮೀನನ್ನು ಗುರುತಿಸಲು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ಈಗಾಗಲೆ ನೀಡಲಾಗಿದೆ. ಸರ್ಕಾರಿ ಜಮೀನು ಲಭ್ಯತೆ ಇಲ್ಲದ ಪಕ್ಷದಲ್ಲಿ ಬಳಕೆಯಾಗದೇ ಇರುವ ಕೃಷಿ ಅಥವಾ ತೋಟಗಾರಿಕೆ ವಿಶ್ವವಿದ್ಯಾನಿಲಯಗಳ , ಕೃಷಿ ಇಲಾಖೆಯ ಫಾರಂಗಳು ಹಾಗೂ ಕರ್ನಾಟಕ ರಾಜ್ಯ ಬೀಜ ನಿಗಮದ ಜಮೀನನ್ನು ಗುರುತಿಸಿ , ಈ ಉದ್ದೇಶಕ್ಕೆ ಬಳಸಿಕೊಳ್ಳಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶಿವಯೋಗಿ ಕಳಸದ, ಕೃಷಿ ಇಲಾಖಾ ಆಯುಕ್ತ ಶರತ್, ನಿರ್ದೇಶಕಿ ನಂದಿನಿ ಕುಮಾರಿ ಸೇರಿದಂತೆ ಇನ್ನೂ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಲು ಫಾರೂಕ್ ಅಬ್ದುಲ್ಲ ನಿರಾಕರಣೆ

0

ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಲು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ನಿರಾಕರಿಸಿದ ಬೆನ್ನಲ್ಲೇ ಇದೀಗ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಕೂಡ ಸ್ಪರ್ಧೆಗಿಳಿಯುವುದಿಲ್ಲ ಎಂದಿದ್ದಾರೆ ಎಂದು ತಿಳಿದುಬಂದಿದೆ.

ಎಲ್ಲರೂ ನನ್ನ ಮೇಲಿಟ್ಟಿರುವ ಪ್ರೀತಿಗೆ ನಾನು ಆಭಾರಿ. ಆದರೆ ನಾನು ಸಕ್ರಿಯ ರಾಜಕೀಯದಲ್ಲಿರಲು ಬಯಸುತ್ತೇನೆ. ನಮ್ಮ ಕೇಂದ್ರಾಡಳಿತ ಪ್ರದೇಶವನ್ನು ಸೂಕ್ತ ಮಾರ್ಗದರ್ಶನದಲ್ಲಿ ನಡೆಸಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.

ವಿಪಕ್ಷಗಳ ಅನೇಕ ನಾಯಕರು ನನಗೆ ಕರೆ ಮಾಡಿ ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗಲು ಕೇಳಿದ್ದಾರೆ ಎಂದಿದ್ದಾರೆ.

ಪ್ರಧಾನಿ ಮೋದಿಯವರು ನವೀನ್ ಕುಟುಂಬಸ್ಥರನ್ನ ಭೇಟಿಯಾಗಲಿದ್ದಾರೆ

0

ವೈದ್ಯಕೀಯ ವಿದ್ಯಾರ್ಥಿ ನವೀನ್​ ಕುಟುಂಬಸ್ಥರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮೃತ ವಿದ್ಯಾರ್ಥಿ​​ ತಂದೆ ಶೇಖರಗೌಡ ಗ್ಯಾನಗೌಡರ ಮಾಹಿತಿ ಹಂಚಿಕೊಂಡಿದ್ದಾರೆ.
ಜೂನ್ 20ರಂದು ಪ್ರಧಾನಿ ಮೋದಿಯವರ ರಾಜ್ಯ ಭೇಟಿ ವೇಳೆ ನವೀನ್​​ ಕುಟುಂಬಸ್ಥರನ್ನು ಪ್ರಧಾನಿ ಆಹ್ವಾನಿಸಿದ್ದಾರೆ. ಎರಡು ದಿನಗಳ ಹಿಂದೆ ಪ್ರಧಾನಿ ಕಚೇರಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಮಾಹಿತಿ ಲಭ್ಯವಾಗಿದೆ. ಪ್ರಧಾನಿ ಭೇಟಿ ಬಗ್ಗೆ ನವೀನ್​​ ತಂದೆಗೆ ಸಿಎಂ ಬಸವರಾಜ ಬೊಮ್ಮಾಯಿ ಕರೆ ಮಾಡಿ ತಿಳಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ಶೇಖರಗೌಡ ಗ್ಯಾನಗೌಡರ ಕುಟುಂಬಸ್ಥರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಅವರ ಜೊತೆಗೆ ಪತ್ನಿ ವಿಜಯಲಕ್ಷ್ಮೀ ಮತ್ತು ನವೀನ್​ ಸಹೋದರ ಹರ್ಷ ಕೂಡ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಪ್ರಧಾನಿ ಭೇಟಿ ಕುರಿತು ಮಾಹಿತಿ ನೀಡಿದ ನವೀನ್​ ತಂದೆ
ಜೂನ್‌ 20ರಂದು ಬೆಂಗಳೂರಿನಲ್ಲಿ ನವೀನ್​ ಕುಟುಂಬದವರನ್ನು ಪ್ರಧಾನಿ ಮೋದಿ ಭೇಟಿ ಮಾಡಲಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಎಂಬಿಬಿಎಸ್ ವಿದ್ಯಾರ್ಥಿ ನವೀನ್​, ಮಾರ್ಚ್ 1ರಂದು ಉಕ್ರೇನ್​ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದರು.

ಟಿಆರ್ ಪಿ ಬೇಕಾಗಿರೋದು ಮಾಧ್ಯಮಗಳಿಗೆ,ನಮಗಲ್ಲ- ಸಿದ್ಧರಾಮಯ್ಯ

0

ನನಗೆ ಪ್ರಚಾರದ ಅವಶ್ಯಕತೆ ಇಲ್ಲ. ಸುದ್ದಿ ಬೇಕೆಂದರೆ ನೀವು ಕಾಯಲೇಬೇಕು ಎಂದು ಮಾಧ್ಯಮಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲಘುವಾಗಿ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು,
ಟಿಆರ್​ಪಿ ಬೇಕಾಗಿರುವುದು ಮಾಧ್ಯಮದವರಿಗೆ ನಮಗಲ್ಲ, ಇವರಿಗೆ ಮಹತ್ವ ಕೊಡಲೇಬಾರದು, ಸುದ್ದಿ ಕೊಡೋರು ನಾವು, ಬೇಕಾಗಿರೋದು ನಿಮಗೆ ಹಾಗಾಗಿ ನೀವು ಕಾಯಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮದವರಿಗೆ ಅಷ್ಟು ಇಂಪಾರ್ಟೆನ್ಸ್​ ಕೊಡಬಾರದು. ನನಗೆ ಪ್ರಚಾರ ಬೇಕಿಲ್ಲ, ಅವಶ್ಯಕತೆಯೂ ಇಲ್ಲ, ಎಂದಿದ್ದಾರೆ.
ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಹಾಗೂ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಬೆಳಗ್ಗೆಯಿಂದ ಮಾಧ್ಯಮಗಳ ಜತೆಗೆ ಮಾತನಾಡಲು ನಿರಾಕರಿಸಿದ ಅವರು, ಮಧ್ಯಾಹ್ನ ಮಾಧ್ಯಮದವರು ಕಾಣುತ್ತಿದ್ದಂತೆ ಈ ಹೇಳಿಕೆ ನೀಡಿದ್ದಾರೆ.

ಭಾರತವನ್ನ ಬಿಟ್ಟರೆ ನಮಗೆ ಒಂಟಿತನ ಕಾಡುತ್ತದೆ-ಬಿಲಾವಲ್ ಬುಟ್ಟೊ

0

ಪಾಕಿಸ್ತಾನ ಈಗಾಗಲೇ ಜಾಗತಿಕವಾಗಿ ಒಬ್ಬಂಟಿಯಾಗಿದೆ. ಹಾಗಾಗಿ ಭಾರತದೊಂದಿಗೆ ನಮ್ಮ ಸ್ನೇಹವನ್ನು ಮತ್ತೆ ಆರಂಭಿಸಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಬುಟ್ಟೋ ಜರ್ಧಾರಿ ಅವರು ತಿಳಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಭಾರತದ ರಾಜಕೀಯ ನೀತಿಗಳು, ಮುಸ್ಲಿಂ ವಿರೋಧಿ ನಿಲುವುಗಳಿಂದ ನಮ್ಮ ಅವರ ಸಂಬಂಧ ಕಠಿಣವಾಗಿದೆ. ಕೆಲವು ವಿಚಾರಗಳಲ್ಲಿ ನಾವು ಅವರಿಗೆ ವಿರೋಧ ವ್ಯಕ್ತಪಡಿಸಿದ್ದೇವೆ. ಆದರೆ ಅವರ ಜೊತೆಗೆ ನಾವು ಮಾತನಾಡದಿದ್ದರೆ ನಮ್ಮ ಆಸಕ್ತಿಗಳನ್ನು ಅವರ ಜೊತೆಗೆ ಹೇಗೆ ಹಂಚಿಕೊಳ್ಳಲು ಸಾಧ್ಯ ಎಂದರು.

ನಾವು ಭಾರತದೊಂದಿಗೆ ಗಂಭೀರವಾದ ಸಮಸ್ಯೆಗಳನ್ನ ಹೊಂದಿದ್ದೇವೆ.
ಇತಿಹಾಸವನ್ನು ತೆಗೆದು ನೋಡಿದರೆ ಅವರ ಜೊತೆಗೆ ಯುದ್ದಗಳೂ ಆಗಿವೆ. ಆದರೆ ಅವರ ಜೊತೆಗೆ ಸಂಬಂಧವನ್ನ ಕಳೆದು ಕೊಳ್ಳಲು ಸಾಧ್ಯವಾಗುತ್ತಾ? ಒಬ್ಬ ವಿದೇಶಾಂಗ ಸಚಿವನಾಗಿ ನಾನು ಅಲ್ಲಿನ ಜನರ ಜೊತೆಗೆ ಮಾತನಾಡದೇ ಅಲ್ಲಿನ ಸರ್ಕಾರದ ಜೊತೆ ಮಾತನಾಡದೇ ನಮ್ಮ ಹಿತಾಸಕ್ತಿಗಳನ್ನು, ನಮ್ಮ ಉದ್ದೇಶಗಳನ್ನು ಹೇಗೆ ಹಂಚಿಕೊಳ್ಳಲು ಆಗುತ್ತದೆ ಎಂದು ಪ್ರಶ್ನಿಸಿದರು.

ಇದಲ್ಲದೇ ಭಾರತದೊಂದಿಗೆ ನಾವು ವ್ಯಾಪಾರ ಮಾಡಲು ಸಾಧ್ಯವಿಲ್ಲ ಎಂದು ಕೆಲವರು ಹೇಳುತ್ತಾರೆ. ನನಗೆ ಆ ರೀತಿಯ ವಿಮರ್ಶೆಗಳೇ ತಪ್ಪು ಎಂದೆನಿಸುತ್ತದೆ ಎಂದು ತಿಳಿಸಿದರು.

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಶಸ್ತಿಯ ಗರಿ

0

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಿತ 2022ರ ಸ್ಕೈಟ್ರಾಕ್ಸ್ ವರ್ಲ್ಡ್ ಏರ್ಪೋರ್ಟ್ ಅವಾರ್ಡ್ಸ್ ಈವೆಂಟ್ ನಲ್ಲಿ ‘ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ’ ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಈ ಸಮಾರಂಭ ಪ್ಯಾರಿಸ್ ನಲ್ಲಿ ನಡೆಯಿತು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (ಬಿಐಎಎಲ್) ಏರ್ಪೋರ್ಟ್ ಆಪರೇಟರ್ನ ಎಂಡಿ ಮತ್ತು ಸಿಇಒ ಹರಿ ಕೆ ಮಾರರ್, ‘ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣವಾಗಿ ಪ್ರಶಸ್ತಿಯನ್ನು ಸ್ವೀಕರಿಸಲು ಇದು ನಮಗೆ ಅಪಾರ ಸಂತೋಷವನ್ನು ತರುತ್ತದೆ.

ವರ್ಷದಿಂದ ವರ್ಷಕ್ಕೆ ನಾವು ಪಡೆಯುವ ಪ್ರಶಸ್ತಿಗಳು ನಾವು ಈ ಹಕ್ಕನ್ನು ಪಡೆಯುವುದನ್ನು ಮುಂದುವರಿಸುತ್ತೇವೆ ಎಂಬ ಅಂಗೀಕಾರವಾಗಿದೆ.

ಜಾಗತಿಕವಾಗಿ ನಡೆಸಲಾದ ಗ್ರಾಹಕರ ಸಮೀಕ್ಷೆಯನ್ನು ಆಧರಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ‘ಚೆಕ್-ಇನ್ ನಿಂದ ಹಿಡಿದು ಆಗಮನ, ವರ್ಗಾವಣೆಗಳು, ಶಾಪಿಂಗ್, ಭದ್ರತೆ, ವಲಸೆ, ಗೇಟ್ ಗಳಲ್ಲಿ ನಿರ್ಗಮನದವರೆಗೆ, ಸಮೀಕ್ಷೆಯು ವಿಮಾನ ನಿಲ್ದಾಣ ಸೇವೆಯಾದ್ಯಂತ ಗ್ರಾಹಕರ ಅನುಭವ ಮತ್ತು ಪ್ರಮುಖ ಕಾರ್ಯಕ್ಷಮತೆಯ ಅಂಶಗಳನ್ನು ಮೌಲ್ಯಮಾಪನ ಮಾಡುತ್ತದೆ’ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ದಿನೇಶ್ ಕಾರ್ತೀಕ್ ಕ್ಷಿಪ್ರಗತಿಯ ಬ್ಯಾಟಿಂಗ್;ಜಯಸಾಧಿಸಿದ ಭಾರತ

0

14ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಯಾನ್ಸನ್ ಎಸೆತವನ್ನು ಪಾಯಿಂಟ್​ ಕಡೆಗೆ ಕಾರ್ತಿಕ್ ಹೊಡೆದರು. ನಂತರ ಕಾರ್ತಿಕ್ ಇದಕ್ಕೆ ಸಿಂಗಲ್ ತೆಗೆದುಕೊಳ್ಳಲು ಬಯಸಿದ್ದರು. ಆದರೆ ಅವರಿಗೆ ಇನ್ನೊಂದು ತುದಿಯಿಂದ ಪಾಂಡ್ಯರ ಬೆಂಬಲ ಸಿಗಲಿಲ್ಲ.

ಐಪಿಎಲ್ ನಲ್ಲಿ ಸೂಪರ್‌ಹಿಟ್ ಪ್ರದರ್ಶನ ನೀಡುವ ಮೂಲಕ ಸುದೀರ್ಘ ಕಾಯುವಿಕೆಯ ನಂತರ ಭಾರತ ತಂಡಕ್ಕೆ ಮರಳಿದ ದಿನೇಶ್ ಕಾರ್ತಿಕ್, ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ 20 ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶಿಸಿದರು.
ತತ್ತರಿಸುತ್ತಿದ್ದ ಟೀಂ ಇಂಡಿಯಾದ ಇನ್ನಿಂಗ್ಸ್‌ ನಿಭಾಯಿಸಿದ ಕಾರ್ತಿಕ್ ಹಾರ್ದಿಕ್ ಪಾಂಡ್ಯ ಎದುರು ದೊಡ್ಡ ಅಬ್ಬರ ಮಾಡಿದರು.
ನಂತರ ಕಾರ್ತಿಕ್ ಇದಕ್ಕೆ ಸಿಂಗಲ್ ತೆಗೆದುಕೊಳ್ಳಲು ಬಯಸಿದ್ದರು.

ಆದರೆ ಅವರಿಗೆ ಇನ್ನೊಂದು ತುದಿಯಿಂದ ಪಾಂಡ್ಯರ ಬೆಂಬಲ ಸಿಗಲಿಲ್ಲ. ಹಾರ್ದಿಕ್​ಗೆ ಸಿಂಗಲ್ ತೆಗೆದುಕೊಳ್ಳುವ ಮೂಡ್ ಇರಲಿಲ್ಲ.
ನಾಯಕ ರಿಷಬ್ ಪಂತ್ ಔಟಾದ ನಂತರ, ಕಾರ್ತಿಕ್ ಕ್ರೀಸ್‌ನಲ್ಲಿ ಪಾಂಡ್ಯಗೆ ಬೆಂಬಲ ನೀಡಲು ಬಂದರು. 14ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಯಾನ್ಸನ್ ಎಸೆತವನ್ನು ಪಾಯಿಂಟ್​ ಕಡೆಗೆ ಕಾರ್ತಿಕ್ ಹೊಡೆದರು.

ಕಾರ್ತಿಕ್ ಬಿರುಗಾಳಿ ಆಟ
ನಾಲ್ಕನೇ ಟಿ20 ಪಂದ್ಯದಲ್ಲಿ ಕಾರ್ತಿಕ್ 27 ಎಸೆತಗಳಲ್ಲಿ 55 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಕಾರ್ತಿಕ್ ತಮ್ಮ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಹೊಡೆದರು.

ಅದೇ ಸಮಯದಲ್ಲಿ, ಪಾಂಡ್ಯ 31 ಎಸೆತಗಳಲ್ಲಿ 46 ರನ್ ಗಳಿಸಿದರು.
ಕೇವಲ 4 ರನ್‌ಗಳಿಂದ ಅರ್ಧಶತಕ ವಂಚಿತರಾದರು. ಕಾರ್ತಿಕ್ ಮತ್ತು ಪಾಂಡ್ಯ ಅವರ ವೇಗದ ಇನ್ನಿಂಗ್ಸ್‌ನ ಆಧಾರದ ಮೇಲೆ ಭಾರತ ನಿಗದಿತ ಓವರ್‌ನಲ್ಲಿ 6 ವಿಕೆಟ್‌ಗೆ 169 ರನ್ ಗಳಿಸಿತು. ಒಂದು ಹಂತದಲ್ಲಿ ಭಾರತ ಕೇವಲ 81 ರನ್‌ಗಳಿಗೆ ತನ್ನ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಭಾರತಕ್ಕೆ ಜಯ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಿಷಬ್ ಪಂತ್ ನೇತೃತ್ವದ ಟೀಂ ಇಂಡಿಯಾ ನಿಗದಿತ ಓವರ್‌ನಲ್ಲಿ 6 ವಿಕೆಟ್‌ಗೆ 169 ರನ್ ಗಳಿಸಿತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 87 ರನ್‌ಗಳಿಗೆ ಕುಸಿಯಿತು. 170 ರನ್​ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಭಾರತದ ಬೌಲರ್​ಗಳ ಎದುರು ನಿಲ್ಲಲು ಸಾಧ್ಯವಾಗಲಿಲ್ಲ. ಅವೇಶ್ ಖಾನ್ ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್​ಗಳಿಗೆ ಸಿಂಹಸ್ವಪ್ನರಾದರು.
ಬೆಂಗಳೂರಿನಲ್ಲಿ ನಡೆಯುವ ಕೊನೆಯ ಪಂದ್ಯ ರೋಚಕ ಫಲಿತಾಂಶ ನೀಡುತ್ತದೆ ಎಂದು ಕ್ರಿಕೆಟ್ ಪ್ರಿಯರು ನಿರೀಕ್ಷಿಸಿದ್ದಾರೆ.

ಉಕ್ರೇನ್ ಯುರೋಪಿಯನ್ ಒಕ್ಕೂಟ ಸೇರ್ಪಡೆಗೆ ರಷ್ಯ ವಿರೋಧವಿಲ್ಲ- ಪುಟಿನ್

0

ಉಕ್ರೇನ್, ಯೂರೋಪಿಯನ್ ಒಕ್ಕೂಟ ಸೇರುತ್ತಿರುವುದಕ್ಕೆ ರಷ್ಯಾ ವಿರೋಧವಿಲ್ಲ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಿಳಿಸಿದ್ದಾರೆ.

27 ಸದಸ್ಯ ರಾಷ್ಟ್ರಗಳ ಯೂರೋಪಿಯನ್ ಒಕ್ಕೂಟದ ಸದಸ್ಯತ್ವಕ್ಕೆ ಯೂರೋಪಿಯನ್ ಕಮಿಷನ್ ಉಕ್ರೇನ್ ಅನ್ನು ಶಿಫಾರಸು ಮಾಡಿದ ಬೆನ್ನಲ್ಲೇ ರಷ್ಯಾದಿಂದ ಈ ಹೇಳಿಕೆ ಹೊರ ಬಂದಿದೆ.

ಅದರ ಬಗ್ಗೆ ನಮ್ಮ ವಿರೋಧವಿಲ್ಲ. ಆರ್ಥಿಕ ಒಕ್ಕೂಟಕ್ಕೆ ಸೇರುವುದು ಅವರ ಪರಮಾಧಿಕಾರವಾಗಿದೆ. ಇದು ಅವರ ಉದ್ಯಮಕ್ಕೆ ಸಂಬಂಧಿಸಿದ ವಿಚಾರ ಎಂದು ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ರಷ್ಯಾದ ವಾರ್ಷಿಕ ಆರ್ಥಿಕ ಸಮ್ಮೇಳನದಲ್ಲಿ ಅವರು ತಿಳಿಸಿದ್ದಾರೆ.

ಉಕ್ರೇನ್, ನ್ಯಾಟೊ ಒಕ್ಕೂಟ ಸೇರಲು ಮುಂದಾಗಿದ್ದನ್ನು ವಿರೋಧಿಸಿ ರಷ್ಯಾ ಫೆಬ್ರುವರಿ 24ರಿಂದ ದಾಳಿ ನಡೆಸುತ್ತಿದೆ. ಉಕ್ರೇನ್ ನ್ಯಾಟೊಗೆ ಸೇರ್ಪಡೆಗೊಳ್ಳುವ ನಿರ್ಧಾರವು ತಮ್ಮ ಭದ್ರತೆಗೆ ಧಕ್ಕೆ ಎಂದು ರಷ್ಯಾ ಭಾವಿಸಿತ್ತು.

ಆದರೆ, ಅವರ ಆರ್ಥಿಕ ಏಕೀಕರಣಕ್ಕೆ ಸಂಬಂಧಿಸಿದ ನಿರ್ಧಾರವು ಅವರ ಆಯ್ಕೆಯಾಗಿದೆ ಎಂದು ಪುಟಿನ್ ಅವರು ಹೇಳಿದ್ದಾರೆ.

ಯೂರೋಪಿಯನ್ ಒಕ್ಕೂಟ ಸೇರುವುದು ಒಂದು ಮಿಲಿಟರಿ ಮೈತ್ರಿ ಅಲ್ಲ. ಅದು ನ್ಯಾಟೊಗಿಂತ ಭಿನ್ನ ಎಂದು ಪುಟಿನ್ ಹೇಳಿದ್ದಾರೆ.

ಉಕ್ರೇನ್, ಯೂರೋಪಿಯನ್ ಒಕ್ಕೂಟ ಸೇರ್ಪಡೆಗೊಳ್ಳಲು ಮುಂದಾದರೆ ಅದು ಪಾಶ್ಚಿಮಾತ್ಯ ದೇಶಗಳ ಅರೆವಸಾಹತು ಪ್ರದೇಶವಾಗಿ ಬದಲಾಗುತ್ತದೆ. ಇದು ನನ್ನ ಅಭಿಪ್ರಾಯ ಎಂದು ಪುಟಿನ್ ಸ್ಪಷ್ಟಪಡಿಸಿದ್ದಾರೆ.

ಅಂಬೆಗಾಲು ಕಿರುಚಿತ್ರ ಸ್ಪರ್ಧೆಗೆ ಆಮಂತ್ರಣ

0

ಶಿವಮೊಗ್ಗ ಬೆಳ್ಳಿ ಮಂಡಲ, ಯುಗಧರ್ಮ ಜಾನಪದ ಸಮಿತಿ ಸಿಹಿಮೊಗೆ, ಶಿವಮೊಗ್ಗ ಚಿತ್ರ ಸಮಾಜಗಳ ಸಂಯುಕ್ತಾಶ್ರಯದಲ್ಲಿ ಅಂಬೇಗಾಲು-5 ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಈ ಬಾರಿ ಹಾಸ್ಯ ಕಥಾನಕ, ಮಕ್ಕಳು ನಿರ್ಮಿಸಿ, ನಿರ್ದೇಶಿಸಿದ, ಮಕ್ಕಳ ಚಿತ್ರಗಳು ಹಾಗೂ ಸೈಬರ್ ಕ್ರೈಮ್ ಅಧಾರಿತ ಕಿರುಚಿತ್ರಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು. ಪ್ರತಿ ಚಿತ್ರ 8 ರಿಂದ 10 ನಿಮಿಷ ಇರಬೇಕು. ಕಿರು ಚಿತ್ರಗಳನ್ನು ಜೂ.10ರ ನಂತರ ಚಿತ್ರೀಕರಿಸಿರಬೇಕು. ಈ ಮೊದಲು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶನವಾಗಿರಬಾರದು. ಸಂಪೂರ್ಣ ಸ್ವತಂತ್ರವಾಗಿರಬೇಕು. ಅನಿಮೇಷನ್‌ಗೆ ಅವಕಾಶವಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.

ಇದಕ್ಕೆ ಸಂಬಂಸಿದಂತೆ ಅರ್ಜಿಗಳನ್ನು ಬಿಹೆಚ್ ರಸ್ತೆಯಲ್ಲಿರುವ ದೀಪಕ್ ಪೆಟ್ರೋಲ್ ಬಂಕ್‌ನಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ 20 ರ ಒಳಗೆ 4 ಹೆಚ್.ಡಿ. ಶ್ರೇಣಿಯ ಡಿವಿಡಿ ಸಹಿತ ಸೆ.20ರ ಒಳಗೆ ಸಲ್ಲಿಸಬೇಕು. ಇದಕ್ಕೆ 500 ರೂ. ಶುಲ್ಕ ನಿಗದಿ ಮಾಡಲಾಗಿದೆ ಎಂದರು.

ಹೆಚ್ಚಿನ ವಿವರಗಳಿಗೆ 9844456505, 8310679925, 944928445,968655950ನ್ನು ಸಂಪರ್ಕಿಸಬಹುದಾಗಿದೆ.

ಡಿ. ಎಸ್. ಅರುಣ್/ವೈದ್ಯ
ಸಂಚಾಲಕರು

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ

0

2021-22ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಭಾರಿ ಶೇ.61.88 ಫಲಿತಾಂಶ ಬಂದಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇಖಡವಾರು ಫಲಿತಾಂಶದಲ್ಲಿ 0.8 ಹೆಚ್ಚಾಗಿದೆ.

ಇಂದು ಬೆಳಗ್ಗೆ 11.30ಕ್ಕೆ ಮಲ್ಲೆಶ್ವರದಲ್ಲಿರುವ ಪದವಿ ಪೂರ್ವ ಶಿಕ್ಷಣ ಮಂಡಳಿ ಕಚೇರಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಫಲಿತಾಂಶ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಸಚಿವರು, ಒಟ್ಟಾರೆ ಫಲಿತಾಂಶ ಕಲಾ ವಿಭಾಗದಲ್ಲಿ ಶೇ.48.71, ವಾಣಿಜ್ಯ ವಿಭಾಗದಲ್ಲಿ ಶೇ.64.97, ವಿಜ್ಞಾನ ವಿಭಾಗದಲ್ಲಿ ಶೇ.72.53 ಬಂದಿದೆ. ಮೂರು ವಿಭಾಗದಲ್ಲಿ ಒಟ್ಟಾರೆ ಶೇ.88.02 ಫಲಿತಾಂಶ ಪಡೆಯುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯು ರಾಜ್ಯಕ್ಕೆ ಟಾಪರ್​ ಆಗಿ ಹೊರ ಹೊಮ್ಮಿದೆ.

ಕೊನೇ ಸ್ಥಾನದಲ್ಲಿರುವ ಚಿತ್ರದುರ್ಗ ಜಿಲ್ಲೆಗೆ ಶೇ.49.31 ಫಲಿತಾಂಶ ಬಂದಿದೆ ಎಂದು ವಿವರಿಸಿದರು.

ಈ ಬಾರಿ ಪರೀಕ್ಷೆಗೆ 6,84,255 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 6,83,563 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ರಾಜ್ಯಾದ್ಯಂತ 1,076 ಕೇಂದ್ರಗಳಲ್ಲಿ ಏ.22ರಿಂದ ಮೇ 18ರ ವರೆಗೆ ಪರೀಕ್ಷೆ ನಡೆದಿತ್ತು. ಮಧ್ಯಾಹ್ನ 12 ಗಂಟೆ ನಂತರ https://pue.karnataka.gov.in/ ವೆಬ್​ಸೈಟ್​ನಲ್ಲಿ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದು. ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿರುವ ಮೊಬೈಲ್​ ಸಂಖ್ಯೆಗೂ ಫಲಿತಾಂಶದ ಸಂದೇಶ ಕಳುಹಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.