Monday, March 16, 2026
Monday, March 16, 2026
Home Blog Page 1516

ನ್ಯಾಯಾಧೀಶರ ವಿರುದ್ದ ದಾಳಿ ನಡೆಸುವ ಪ್ರಯತ್ನ ಮುಜುಗರವುಂಟುಮಾಡಿದೆ- ಪರ್ದಿವಾಲ

0

ಪ್ರವಾದಿ ಮೊಹಮ್ಮದ್ ಕುರಿತಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಬಿಜೆಪಿಯ ನೂಪುರ್ ಶರ್ಮಾ ಅನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್‌ ಪೀಠದ ಭಾಗವಾಗಿದ್ದ ನ್ಯಾಯಾಧೀಶರು ಈಗ ವೈಯಕ್ತಿಕ ಟೀಕೆಗಳನ್ನು ಎದುರಿಸುವಂತಾಗಿದೆ. ವಿಭಾಗೀಯ ನೀಡಿದ ತೀರ್ಪಿನ ಬಗ್ಗೆ ನ್ಯಾಯಾಧೀಶರ ಮೇಲೆ ವೈಯಕ್ತಿಕವಾಗಿ ದಾಳಿಯ ನಡೆಸುತ್ತಿದ್ದು ತೀವ್ರ ಟೀಕೆಗಳು ಕೇಳಿ ಬರುತ್ತಿವೆ.

ಇಂದು ನ್ಯಾಯಾಧೀಶರ ತೀರ್ಪುಗಳಿಂದ ವೈಯಕ್ತಿಕ ದಾಳಿಗಳು ಎದುರಿಸುತ್ತಿರುವುದು ತೀರಾ ಅಪಾಯಕಾರಿ ಸನ್ನಿವೇಶಕ್ಕೆ ಕಾರಣವಾಗುತ್ತವೆ ಎಂದು ಸುಪ್ರೀಂಕೋರ್ಟ್ ವಿಭಾಗೀಯ ಪೀಠದ ಭಾಗವಾಗಿದ್ದ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಅವರು ತಿಳಿಸಿದ್ದಾರೆ.

ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಅವರ ಮೌಖಿಕ ಹೇಳಿಕೆಗಳ ನಂತರ ನ್ಯಾಯಮೂರ್ತಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಇಬ್ಬರೂ ವೈಯಕ್ತಿಕ ಟೀಕೆಗಳನ್ನು ಎದುರಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧಕ್ಕೆ ಗುರಿಯಾಗಿದ್ದಾರೆ.

ದೇಶಾದ್ಯಂತ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಎಫ್‌ಐಆರ್ ಗಳನ್ನು ಒಟ್ಟುಗೂಡಿಸಿ ದೆಹಲಿಗೆ ವರ್ಗಾಯಿಸಬೇಕು ಎಂದು ಕೋರಿ ನೂಪುರ್ ಶರ್ಮಾ ಸುಪ್ರೀಂಕೋರ್ಟ್‌ನ ಮೊರೆ ಹೋಗಿದ್ದರು. ತನ್ನ ಅರ್ಜಿಯಲ್ಲಿ, ತಾನು ಮತ್ತು ತನ್ನ ಕುಟುಂಬವು ಭದ್ರತಾ ಬೆದರಿಕೆಗಳನ್ನು ಎದುರಿಸುತ್ತಿದೆ. ತಮಗೆ ರಕ್ಷಣೆಯ ಅಗತ್ಯವಿದೆ ಎಂದು ಶರ್ಮಾ ಉಲ್ಲೇಖಿಸಿದ್ದರು.

ಅಗ್ನಿಪಥ್ ಯೋಜನೆ ಪ್ರಶ್ನಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

0

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಸೋಮವಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.

ದೇಶಾದ್ಯಂತ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಉಗ್ರ ಪ್ರತಿಭಟನೆಗಳು ನಡೆದಿವೆ.

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ ಘಟನೆಯೂ ನಡೆದಿದೆ. ಇದರ ಮಧ್ಯೆ ಯಾವುದೇ ಕಾರಣಕ್ಕೆ ಯೋಜನೆಯನ್ನು ವಾಪಸ್ ಪಡೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಕೇಂದ್ರ ಸರ್ಕಾರ ಮತ್ತು ಸೇನಾ ಮುಖ್ಯಸ್ಥರು ಸ್ಪಷ್ಟವಾಗಿ ಹೇಳಿದ್ದಾರೆ

ಕೇಂದ್ರ ಸರ್ಕಾರ ಮತ್ತು ಸೇನೆಯ ಸ್ಪಷ್ಟ ಸಂದೇಶದ ನಡುವೆಯೇ ಅಗ್ನಿಪಥ್ ಯೋಜನೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಅಂಗಳಕ್ಕೆ ಹಲವರು ಮೊರೆ ಹೋಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ಮುಂದಿನ ವಾರ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ಹೇಳಿದೆ.

ಜುಲೈ ತಿಂಗಳೊಳಗೆ ಶಾಲಾ ಶಿಕ್ಷಕರ ನೇಮಕಾತಿ ಪಟ್ಟಿ ಪ್ರಕಟ -ನಾಗೇಶ್

0

ಈ ತಿಂಗಳ ಒಳಗೆ 15,000 ಶಾಲಾ ಶಿಕ್ಷಕರ ನೇಮಕಾತಿ ಆಯ್ಕೆ ಪಟ್ಟಿ ಪ್ರಕಟ ಮಾಡಲಾಗುತ್ತದೆ ಎಂದು ಸಚಿವ ಬಿ.ಸಿ ನಾಗೇಶ್ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ನಡೆದಂತಹ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶವನ್ನು ಜುಲೈ ತಿಂಗಳ ಒಳಗೆ ಪ್ರಕಟಿಸಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಸ್ತುತ, ಎರಡು ಪತ್ರಿಕೆಯ ಮೌಲ್ಯಮಾಪನ ಮುಗಿದಿದೆ. ಜುಲೈ ಕೊನೆಯ ವಾರ ಮೌಲ್ಯಮಾಪನ ಕಾರ್ಯ ಸಂಪೂರ್ಣಗೊಳ್ಳಲಿದೆ. ಶೇಕಡಾವಾರು ಅಂಕ ಪರಿಗಣಿಸಿ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಮೇ.21 ಮತ್ತು 22ರಂದು ನಡೆದಿತ್ತು. ಒಟ್ಟು 10,6,083 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದರು.

ಹಲವು ಔಷಧಿಗಳ ಬೆಲೆ ನಿಗದಿಪಡಿಸಿದಔಷಧ ಬೆಲೆ ಪ್ರಾಧಿಕಾರ

0

ಭಾರತದ ಔಷಧ ಬೆಲೆ ಪ್ರಾಧಿಕಾರವು ವ್ಯಾಪಕವಾಗಿ ಶಿಫಾರಸು ಮಾಡಲಾದ ನೋವು ನಿವಾರಕಗಳು ಮತ್ತು ಪ್ರತಿಜೀವಕಗಳು ಮತ್ತು ಟೈಪ್ -2 ಮಧುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡುವ ಔಷಧಿಗಳನ್ನು ಒಳಗೊಂಡ ಹಲವಾರು ಅಗತ್ಯ ಔಷಧಿಗಳ ಚಿಲ್ಲರೆ ಬೆಲೆಗಳನ್ನು ನಿಗದಿಪಡಿಸಿದೆ.

84 ಔಷಧ ಸೂತ್ರೀಕರಣಗಳ ಚಿಲ್ಲರೆ ಬೆಲೆಯನ್ನು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ಅಡಿಯಲ್ಲಿನ ಅತ್ಯುನ್ನತ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವಾದ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ ನಿಗದಿಪಡಿಸಿದೆ.

ಆಂಟಿ ಟೈಪ್ 2 ಡಯಾಬಿಟಿಕ್ ಔಷಧ ಮೆಟ್ಫಾರ್ಮಿನ್, ನೋವು ನಿವಾರಕಗಳು ಇಬುಪ್ರೊಫೆನ್ ಮತ್ತು ಡೈಕ್ಲೋಫೆನಾಕ್, ಮತ್ತು ಪ್ರತಿಜೀವಕಗಳಾದ ಅಮೋಕ್ಸಿಸಿಲಿನ್ ಮತ್ತು ಸೆಫಿಕ್ಸಿಮ್ ಈ ಔಷಧಿಗಳಲ್ಲಿ ಸೇರಿವೆ. ಕಳೆದ ವಾರ, ಸರ್ಕಾರಿ ಗೆಜೆಟ್ ಬೆಲೆ ನಿಯಂತ್ರಣದ ವಿವರಗಳನ್ನು ಪ್ರಕಟಿಸಿತು.

ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ವೈಯಕ್ತಿಕ ತಯಾರಕ ಅಥವಾ ಮಾರ್ಕೆಟರ್ ಗೆ ಮಾತ್ರ ಬೆಲೆಗಳು ಅನ್ವಯವಾಗುತ್ತವೆ.
ಸನ್ ಫಾರ್ಮಾ, ಆಲ್ಕೆಮ್, ಜೈಡಸ್ ಹೆಲ್ತ್ಕೇರ್, ಅಕಮ್ಸ್ ಡ್ರಗ್ಸ್ ಅಂಡ್ ಫಾರ್ಮಾಸ್ಯುಟಿಕಲ್ಸ್, ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್, ಟೊರೆಂಟ್, ಹೆಟೆರೊ, ಮೈಕ್ರೋ ಲ್ಯಾಬ್ಸ್ ಮತ್ತು ಇತರ ಔಷಧ ತಯಾರಕರು ಔಷಧ ತಯಾರಕರಲ್ಲಿ ಸೇರಿದ್ದಾರೆ.
ಜೂನ್ 28 ರಂದು ನಡೆದ 99 ನೇ ಕಾರ್ಯಕಾರಿ ಸಭೆಯಲ್ಲಿ ಎನ್ಪಿಪಿಎಯ ನಿರ್ಧಾರದ ಪ್ರಕಾರ ಬೆಲೆಗಳನ್ನು ನಿಗದಿಪಡಿಸಲಾಗಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ, ಔಷಧಗಳ ಬೆಲೆ ನಿಯಂತ್ರಕವು ಮಧುಮೇಹವನ್ನು ಎದುರಿಸಲು ಸೂಚಿಸಲಾದ 12 ಔಷಧಿಗಳ ಗರಿಷ್ಠ ಬೆಲೆಗಳನ್ನು ನಿಗದಿಪಡಿಸಿತು.

ದೇಶದಲ್ಲಿ ಕೊರೋನ ಪಾಸಿಟಿವಿಟಿ ದರ ಶೇ 4.85

0

ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಏರಿಳಿತವಾಗುತ್ತಿದೆ. ಇದೀಗ ಕಳೆದ 24 ಗಂಟೆಗಳಲ್ಲಿ 16,135 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದೆ. ಇದರಿಂದ 24 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಇದುವರೆಗೆ,ದೇಶದಲ್ಲಿ ದಾಖಲಾದ ಕೊರೋನಾ ಸೋಂಕಿನ ಪ್ರಕರಣಗಳ ಒಟ್ಟು ಸಂಖ್ಯೆ 4,35,18,564 ರಷ್ಟಾಗಿದೆ. ಮೃತಪಟ್ಟ ಸೋಂಕಿತರ ಸಂಖ್ಯೆ 5,25,223ಕ್ಕೆ ಏರಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 1,13,864ಕ್ಕೆ ಏರಿದೆ. ಪ್ರತಿದಿನದ ಪಾಸಿಟಿವಿಟಿ ದರವು ಶೇ 4.85 ರಷ್ಟಿದೆ.

ದೇಶದ ಅಭ್ಯುದಯದಲ್ಲಿ ವೈದ್ಯರ ಪಾತ್ರ ಗಣನೀಯ

0

ದೇಶದ ಅಭ್ಯುದ್ಯಯಕ್ಕೆ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರು ಮತ್ತು ವೈದ್ಯರು ಅತ್ಯಂತ ಮಹತ್ವದ ಪಾತ್ರ ವಹಿಸುತ್ತಾರೆ. ಇವರನ್ನು ಗೌರವಿಸುವುದು ಸಮಾಜದ ಕರ್ತವ್ಯ ಎಂದು ಮಾಗಡಿ ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಎಚ್‌.ಶಂಕರ್‌ ಅಭಿಪ್ರಾಯಪಟ್ಟರು.

ಮಾಗಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ದಿನದ ಪ್ರಯುಕ್ತ ವೈದ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಕೋವಿಡ್‌ ಸಂದರ್ಭದಲ್ಲಿ ನಾವೆಲ್ಲರೂ ಮನೆಯಿಂದ ಹೊರಗೆ ಬರಲು ಭಯ ಪಡುತ್ತಿದ್ದೇವೆ. ಆದರೆ, ಯಾವುದೇ ಭಯ, ಭೀತಿ, ಆತಂಕವಿಲ್ಲದೆ ವೈದ್ಯರು ಕೋವಿಡ್‌ ಸೋಂಕಿತ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಕೊಟ್ಟು ಅವರನ್ನು ಗುಣಮುಖರಾಗುವಂತೆ ಸೇವೆಯಲ್ಲಿ ನಿರತರಾಗಿದ್ದಾರೆ. ಅವರನ್ನು ಗೌರವಿಸುವುದು ನಾಗರಿಕರಾದ ನಮ್ಮೆಲ್ಲರ ಕರ್ತವ್ಯವಾಗಿದ್ದು, ವೈದ್ಯರ ದಿನದ ಪ್ರಯುಕ್ತ ವೈದ್ಯರೆಲ್ಲರನ್ನು ಸನ್ಮಾನಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.

ವೈದ್ಯೋ ಹರಿ ನಾರಾಯಣ ಎಂಬಂತೆ ವೈದ್ಯರು ರೋಗಿಗಳ ಪಾಲಿಗೆ ದೇವರೇ ಆಗಿರುತ್ತಾರೆ. ಸರ್ಕಾರಿ ಆಸ್ಪತ್ರೆ ಕೇವಲ ಬಡವರಿಗಾಗಿ ಮಾತ್ರವಲ್ಲದೆ, ಶ್ರೀಮಂತರು ಸಹ ತಮ್ಮ ಆರೋಗ್ಯವನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕೆಂಬ ವಾತಾವರಣವನ್ನು ವೈದ್ಯರು ಸೃಷ್ಠಿಸಿದ್ದಾರೆ. ಇಲ್ಲಿನ ವೈದ್ಯರ ಅವಿರತ ನಿಸ್ವಾರ್ಥ ಸೇವೆ ಅನನ್ಯವಾದುದು ಎಂದರು.

ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್‌ ಮಾತನಾಡಿ, ಸರ್ಕಾರ ಸರ್ಕಾರಿ ಆಸ್ಪತ್ರೆಯನ್ನು ಕೇವಲ ಬಡರಿಗೆ ಮಾತ್ರ ತೆರೆದಿಲ್ಲ, ಶ್ರೀಮಂತರೂ ಸಹ ಇಲ್ಲಿನ ಸೇವೆಯನ್ನು ಪಡೆದುಕೊಳ್ಳುವಂತ ವಾತಾವರಣ ಸರ್ಕಾರ ನಿರ್ಮಿಸಿದೆ. ಸರ್ಕಾರ ಆಸ್ಪತ್ರೆಗಳಿಗೆ ಸಾಕಷ್ಟು ಅನುದಾನ ಹಾಗೂ ಸೌಲಭ್ಯಗಳನ್ನು ನೀಡಿದೆ. ಜೊತೆಗೆ ಸಮಾಜ ಸೇವಕರು, ಮುಖಂಡರು ಸಹ ಆಸ್ಪತ್ರೆಯ ಉನ್ನತೀಕರಣಕ್ಕೆ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.

ರೋಟರಿ ಸಂಸ್ಥೆಯ ಕಾರ್ಯದರ್ಶಿ ಮುನಿಯಪ್ಪ, ವೃತ್ತಿಪರ ಸೇವಾ ಅಧ್ಯಕ್ಷ ನರಸಿಂಹಯ್ಯ, ರೋಟರಿಯನ್‌ ಗಳಾದ ವೇಣುಗೋಪಾಲ್‌, ಎಲ್‌.ಪ್ರಭಾಕರ್‌, ಮನು, ದಕ್ಷಿಣಮೂರ್ತಿ, ಗಣೇಶ್‌, ನಾಗೇಶ್‌, ಡಾ, ಮಂಜುನಾಥ್‌, ಆಸ್ಪತ್ರೆಯ ಡಾ. ನಾಗನಾಥ್‌, ಡಾ. ರಾಕೇಶ್‌, ಡಾ.ರಫೀಕ್‌, ಡಾ. ವಿವೇಕಾನಂದ ಡಾ. ಮುದೊಳೆ, ಡಾ. ಚಂದ್ರಲೇಖಾ ಡಾ. ರಶ್ಮಿ,, ಡಾ.ನವೀನ್‌, ನರ್ಸ್‌ ಪದ್ಮಾ, ಗುಣಶೇಖರ್‌ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ಹಾಲಿನ ಉತ್ಪನ್ನಗಳ ಮೇಲೆ ಜಿಎಸ್ ಟಿ ಬಗ್ಗೆ ರೈತರ ಅಸಮಾಧಾನ

0

ಪ್ಯಾಕೇಟ್ ಉತ್ಪನಗಳ ಮೇಲೆ ಜಿಎಸ್‌ಟಿ ವಿಧಿಸಿದ ಪರಿಣಾಮ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಪ್ಯಾಕೇಟ್ ಮಾಡಿದ ತನ್ನ ಉತ್ಪನ್ನಗಳ ಬೆಲೆ ಏರಿಸಲು ಯೋಜಿಸಿದೆ.
ಇದರಿಂದ ರೈತ ಸಮುದಾಯವು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ.

ಕೇಂದ್ರ ಸರ್ಕಾರ ಇತ್ತೀಚೆಗೆ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಪ್ಯಾಕೇಟ್ ಮಾಡಿದ ವಸ್ತುಗಳನ್ನು ಜಿಎಸ್ ಟಿ ವ್ಯಾಪ್ತಿಗೆ ತುರುವುದಾಗಿ ತಿಳಿಸಿತ್ತು. ಪ್ಯಾಕೇಟ್ ಮಾಡಿದ ಆಹಾರಧಾನ್ಯಗಳು ಸೇರಿದಂತೆ ವಿವಿಧ ವಸ್ತುಗಳ ಮೇಲೆ ಶೇ.5ರಷ್ಟು ತೆರಿಗೆ ಹೇರಲಾಗಿದೆ. ಅದರಂತೆ ಪ್ಯಾಕೇಟ್ ಮಾಡಲಾದ ಹಾಲಿನ ಉತ್ಪನ್ನಗಳಾದ ಪನ್ನೀರ್, ಹಾಲು, ಮೊಸಲು, ಲಸ್ಸಿ, ಮಜ್ಜಿಗೆ ಇನ್ನಿತರ ಹೈನುಗಾರಿಕೆ ಆಧಾರಿತ ವಸ್ತುಗಳ ಮೇಲೆ ಶೇ.5ರಷ್ಟು ಅಧಿಕ ತೆರಿಗೆ ಬೀಳಲಿದೆ.

ಕೇಂದ್ರ ಈ ನಿರ್ಧಾರಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ತೆರಿಗೆ ಹೇರಿಕೆ ನಿರ್ಧಾರಿಂದ ರಾಜ್ಯದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಅತೀ ದೊಡ್ಡ ಸಂಸ್ಥೆಯಾಗಿರುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮೊಸರು ದರವನ್ನು ಲೀಟರ್‌ಗೆ 2.2 ರೂ, ಲಸ್ಸಿ ಲೀಟರ್‌ಗೆ 3.75 ರೂ. ಹಾಗೂ ಮಜ್ಜಿಗೆ ಲೀಟರ್‌ಗೆ 3 ರೂ. ಹೆಚ್ಚಿಸಲು ಚಿಂತನೆ ನಡೆಸಿದೆ. ಇನ್ನು ಪನ್ನೀರ್ ಕೇಜಿಗೆ 15 ರೂ. ಹೆಚ್ಚಾಗುವ ಸಾಧ್ಯತೆ ಇದೆ. ಇದು ರೈತರಿಗೆ ಹಾಗೂ ಜನಸಾಮಾನ್ಯರಿಗೆ ಹೊರೆ ಆಗಲಿದೆ ಎಂದು ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ.

ಪ್ರಾಥಮಿಕ ಲೆಕ್ಕಾಚಾರದ ಪ್ರಕಾರ ಕೆಎಂಎಫ್ ನಿತ್ಯ ಮೊಸರು, ಲಸ್ಸಿ, ಮಜ್ಜಿಗೆ ಮತ್ತು ಪನ್ನೀರ್ ಸಂಪೂರ್ಣ ವಹೀವಾಟಿನಲ್ಲಿ ದಿನಕ್ಕೆ ಅಂದಾಜು 22 ಲಕ್ಷ ರು, ಹಣವನ್ನು ಜಿಎಸ್‌ಟಿ ರೂಪದಲ್ಲಿ ಸರ್ಕಾರಕ್ಕೆ ಪಾವತಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಕೆಎಂಎಫ್ ಕೆಎಂಎಫ್ ನಿತ್ಯ ಅಂದಾಜು 5,000 ಕೇಜಿ ಪನ್ನೀರ್, 15,000 ಲೀ. ಮಜ್ಜಿಗೆ, 15,000 ಲೀ. ಲಸ್ಸಿ ಹಾಗೂ 9ಲಕ್ಷ ಲೀ. ಮೊಸರನ್ನು ಮಾರಾಟ ಮಾಡುತ್ತದೆ ಎಂದು ತಿಳಿದು ಬಂದಿದೆ. ದರ ಏರಿಕೆ ಕುರಿತು ಕೆಎಂಎಫ್ ಸ್ಪಷ್ಟ ಮಾಹಿತಿ ನೀಡಬೇಕಿದೆ.

ಪತ್ರಿಕೋದ್ಯಮ ಎಂ ಎ ಪ್ರಥಮ ಶ್ರೇಣಿ & ಚಿನ್ನದ ಪದಕ ಪಡೆದ ಅಂಜುಂ ಗೆ ಸನ್ಮಾನ

0

ಬನವಾಸಿಯ ಜನತಾ ಕಾಲೋನಿಯಲ್ಲಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ 4ನೇ ವಾರ್ಷಿಕೋತ್ಸವವು ವಿಜೃಂಭಣೆಯಿಂದ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳನ್ನು ವೇ: ಶ್ರೀ ಶ್ರೀನಿಧಿ ದತ್ತಾತ್ರೇಯ ಭಟ್ಟ ಮಂಗಳೂರು ಇವರ ಆಚಾರ್ಯತ್ವದಲ್ಲಿ ನಡೆಯಿತು.

ಕಾರ್ಮಿಕ ಇಲಾಖೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶಿವರಾಮ್ ಹೆಬ್ಬಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಇತ್ತೀಚಿಗೆ ಕುವೆಂಪು ವಿಶ್ವವಿದ್ಯಾಲಯದ 31 ಮತ್ತು 32ನೇ ಘಟಿಕೋತ್ಸವದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪ್ರಥಮ ರಾಂಕ್ ನೊಂದಿಗೆ 3 ಚಿನ್ನದ ಪದಕ ಪಡೆದ ಬನವಾಸಿಯ ನಿವಾಸಿ ಕುಮಾರಿ ಅಂಜುಮ್ ಬಷೀರ್ ಸಾಬ್ ಅವರಿಗೆ ಸನ್ಮಾನಿಸಿದರು.
ಪ್ರಸ್ತುತ ಅಂಜುಂ ಅವರು ಶಿವಮೊಗ್ಗ ಕೆಲೈವ್ ಮೀಡಿಯದಲ್ಲಿ ಉಪಸಂಪಾದಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಸಿದ್ಧ ವೀರೇಶ್ ನರೇಗಲ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ತುಳಸಿ ಆರೇರ, ಶ್ರೀ ಮಧುಕೇಶ್ವರ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ಶ್ರೀ ರಾಜಶೇಖರ ಒಡೆಯರ್, ಸಾಮಾಜಿಕ ಕಾರ್ಯಕರ್ತರಾದ ಶಿವಾನಂದ ದೀಕ್ಷಿತ, ರುದ್ರಪ್ಪ ಸಿದ್ದಪ್ಪಗೌಡ, ಗುಣಶೇಖರ ಪಿಳ್ಳೆ, ರಾಮದಾಸ ಚೌಧರಿ, ಚಂದ್ರಪ್ಪ, ಗಣಪತಿ ನಾಯ್ಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು

ನಟಿ ಹರ್ಷಿಕಾಗೆ ಮದರ್ ತೆರೆಸಾಸಮಾಜ ಸೇವಾ ಪ್ರಶಸ್ತಿ

0

ಕೊಡನ ಬೆಡಗಿ ನಟಿ ಹರ್ಷಿಕಾ ಪೂಣಚ್ಚ ಅವರು ಕನ್ನಡ ಮಾತ್ರವಲ್ಲದೇ ಬಹುಭಾಷಾ ಚಿತ್ರಗಳಲ್ಲೂ ಆಕ್ಟೀವ್ ಆಗಿರುವ ನಟಿ. ಸಾಲು ಸಾಲು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಮಿಂಚಿದ್ದಾರೆ. ಸದ್ಯ ಈಗ ನಟಿ ಹರ್ಷಿಕಾ ಪೂಣಚ್ಚ ಅವರು ‘ಮದರ್ ತೆರೇಸಾ ಸ್ಮಾರಕ’ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ನಟಿ ಮಾತ್ರವಲ್ಲದೇ ತೆರೆಯ ಹಿಂದೆಯೂ ಕೂಡ ಸಾಕಷ್ಟು ಸಮಾಜಮುಖಿ ಕೆಲಸ ಮಾಡಿದ್ದಾರೆ. ಭುವನಂ ಸಂಸ್ಥೆಯ ಮೂಲಕ ನಟ ಭುವನ್‌ಗೆ ಹರ್ಷಿಕಾ ಸಾಥ್ ನೀಡಿದ್ದರು. ಬೆಳ್ಳಿಪರದೆಯಲ್ಲಿ ಸ್ಟಾರ್ ಆಗಿ ಮಿಂಚುವ ಅದೆಷ್ಟು ಕಲಾವಿದರು ನಿಜ ಜೀವನದಲ್ಲೂ ಸ್ಟಾರ್ ಆಗಿ ಇನ್ನೊಬ್ಬರ ಕಷ್ಟಕ್ಕೆ ಸಾಥ್ ನೀಡುವುದು ತುಂಬಾ ಕಡಿಮೆ. ಆದರೆ ರಿಯಲ್ ಲೈಫ್‌ನಲ್ಲೂ ತಾವು ಸೂಪರ್​ ಎಂದು ಹರ್ಷಿಕಾ ಪೂಣಚ್ಚ ತೋರಿಸಿ ಕೊಟ್ಟಿದ್ದರು.

ಇವರ ಸಮಾಜಮುಖಿ ಕಾರ್ಯ ಗುರುತಿಸಿ ಭುವನಂ ಸಂಸ್ಥೆಯ ಪರವಾಗಿ ನಟಿ ಹರ್ಷಿಕಾ, ‘ಮದರ್ ತೆರೇಸಾ ಸ್ಮಾರಕ’ ರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ. ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ನಟಿ ಹರ್ಷಿಕಾ ಅವರಿಗೆ ಮದರ್‌ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯಿಂದ ಭುವನಂ ಸಂಸ್ಥೆಯ ಮೂಲಕ ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲು ನಟಿಗೆ ಪ್ರೇರಣೆ ಸಿಕ್ಕಂತಾಗಿದೆ. ಪ್ರಶಸ್ತಿಯ ಕುರಿತು ಹರ್ಷಿಕಾ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಭಿಮಾನಿಗಳು ನಟಿಗೆ ಶುಭಹಾರೈಸಿದ್ದಾರೆ.

ಉಪ ಚುನಾವಣೆಗಳಲ್ಲಿ ಗೆದ್ದಿದ್ದೇವೆ.ಸಮೀಕ್ಷೆ ಕಾಂಗ್ರೆಸ್ ಪರ ಇದೆ- ಶಿವಕುಮಾರ್

0

ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದರು. ಶೃಂಗೇರಿ ಶಾರದಾ ಪೀಠದ ಗುರುಗಳು ನಮ್ಮ ಮನೆಗೆ ಬಂದಿದ್ದರು. ಗುರುವಂದನಾ ಮಾಡುವ ಅವಕಾಶ ಸಿಕ್ಕಿತು. ಕರ್ನಾಟಕ, ಭಾರತದಲ್ಲಿ ಶಂಕರಾಚಾರ್ಯ ಸ್ಥಾಪಿಸಿದ ಈ ಪೀಠ ತನ್ನದೇ ಆದ ಪಾವಿತ್ರತ್ಯೆ ಹೊಂದಿದೆ. ತಾಯಿ ಸರಸ್ವತಿ ಎಲ್ಲರಿಗೂ ಹರಸಲಿ. ನಮ್ಮ ಕುಟುಂಬಕ್ಕೆ, ರಾಜ್ಯಕ್ಕೆ ಒಳ್ಳೆದಾಗಲಿ ಎಂದು ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದರು.

ಇದೇ ಮಾಜಿ ಶಾಸಕ ಕೆಎನ್ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷರು, ಪಕ್ಷಕ್ಕೂ ರಾಜಣ್ಣನವರ ಹೇಳಿಕೆಗೆ ಯಾವುದೇ ಸಂಬಂಧವಿಲ್ಲ. ಕ್ಷಮೆ ಕೇಳಬೇಕು ಎಂದು ವರಿಷ್ಠರು ನಾನು ಸೂಚನೆ ನೀಡಿದ್ದೇನೆ. ರಾಜಣ್ಣನವರು ಗೌರವದಿಂದ ತಪ್ಪಾಯಿತು ಎಂದು ಹೇಳಿದ್ದಾರೆ.

ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಹೆಚ್ಚು ಸೀಟ್ ಗೆಲ್ಲುತ್ತೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್. ಸರ್ಕಾರ ಬರುತ್ತೆ ಅಂತ ಎಲ್ಲರೂ ಮಾತನಾಡಿದ್ದಾರೆ. ಎರಡು ಮೂರು ಸಮೀಕ್ಷೆ ನಾನು ಮಾಡಿಸಿದ್ದೇನೆ, ದೆಹಲಿಯವರು ಮಾಡಿಸಿದ್ದಾರೆ. ಬೈ ಎಲೆಕ್ಷನ್‌ನಲ್ಲಿ ನಾವು ಗೆದ್ದಿದ್ದೇವೆ, ಬಿಜೆಪಿನೂ ಗೆದ್ದಿದೆ. ಎಂಎಲ್ ಸಿ ಎಲೆಕ್ಷನ್‌ನಲ್ಲೂ ಕೂಡ ಸಮಾನವಾಗಿ ಗೆದ್ದಿದ್ದೇವೆ. ಶಿಕ್ಷಕರ ಕ್ಷೇತ್ರದಲ್ಲಿ ಯಾವತ್ತು ಗೆದ್ದಿರಲಿಲ್ಲ, ಇವತ್ತು ಗೆದ್ದಿದ್ದೇವೆ. ಶಿಕ್ಷಕರು, ಪದವೀದರರು ನಮ್ಮನ್ನು ಗೆಲ್ಲಿಸಿದ್ದಾರೆ. ಕಾಂಗ್ರೆಸ್‌ಗೆ ವಿದ್ಯಾವಂತರು, ಪ್ರಜ್ಞಾವಂತರು ಮತ ಹಾಕಿದ್ದಾರೆ ಎಂದರು.