Wednesday, March 18, 2026
Wednesday, March 18, 2026
Home Blog Page 1494

ಕಾರ್ಗಿಲ್ ದಿವಸ್- ಭಾರತೀಯ ಸೈನ್ಯಶಕ್ತಿಯ ವಿಜಯ ದ್ಯೋತಕ

0

ಕಾರ್ಗಿಲ್ ವಿಜಯ್ ದಿವಸ್ ಅನ್ನು ಭಾರತದಲ್ಲಿ ಪ್ರತಿ ಜುಲೈ 26 ರಂದು ಸ್ಮರಿಸಲಾಗುತ್ತದೆ. ಕಾರ್ಗಿಲ್ ಯುದ್ಧದ ವೀರರ ಗೌರವಾರ್ಥವಾಗಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಾಗುತ್ತದೆ.

ಈ ದಿನವನ್ನು ಭಾರತದಾದ್ಯಂತ ಹಾಗೂ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಚರಿಸಲಾಗುತ್ತದೆ. ಭಾರತದ ಪ್ರಧಾನ ಮಂತ್ರಿ ಪ್ರತಿ ವರ್ಷ ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯಲ್ಲಿ ಸೈನಿಕರಿಗೆ ಗೌರವ ಸಲ್ಲಿಸುತ್ತಾರೆ.

ಕಾರ್ಗಿಲ್ ವಿಜಯ್ ದಿವಸ್ 1999 ರಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಸೇನೆಯ ವಿರುದ್ಧ ಯುದ್ಧವನ್ನು ಗೆದ್ದ ದಿನವಾಗಿದೆ. ಜುಲೈ 26 ರಂದು ಭಾರತೀಯ ಸೇನೆಯು ಪಾಕಿಸ್ತಾನದ ಸೇನೆಯು ಆಕ್ರಮಿಸಿಕೊಂಡಿದ್ದ ಎಲ್ಲಾ ಭಾರತೀಯ ಪೋಸ್ಟ್‌ಗಳನ್ನು ವಶಪಡಿಸಿಕೊಂಡಿತು. ಈ ದಿನ ಪಾಕಿಸ್ತಾನಿ ನುಸುಳುಕೋರರ ವಿರುದ್ಧ ಭಾರತೀಯ ಸೇನೆಯ ವಿಜಯವನ್ನು ಸೂಚಿಸುತ್ತದೆ.

ಅಂದಿನಿಂದ, ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರ ಶ್ರಮ ಮತ್ತು ತ್ಯಾಗವನ್ನು ಸ್ಮರಿಸಲು ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ.

ಪಾಕಿಸ್ತಾನವು ಭಾರತ ಸೇನೆಯ ಗಮನಕ್ಕೆ ಬರದಂತೆ ರಹಸ್ಯವಾಗಿ ತನ್ನ 5000 ಸೈನಿಕರನ್ನು ಗಡಿಯೊಳಗೆ ನುಗ್ಗಿಸಿತ್ತು. ಇದಕ್ಕೆ ಪಾಕ್‌ನ ಅಂದಿನ ಸೇನಾ ಮುಖ್ಯಸ್ಥ ಪರ್ವೇಜ್‌ ಮುಷರ್ರಫ್‌ ಕುಮ್ಮಕ್ಕು ನೀಡಿದ್ದರು. ಪಾಕ್‌ ಪಡೆಗಳು ದೇಶದ ಗಡಿಯೊಳಗೆ ನುಗ್ಗಿರುವ ಸುಳಿವನ್ನು ಸ್ಥಳೀಯ ಕುರಿಗಾಹಿಗಳು ಭಾರತೀಯ ಸೈನಿಕರಿಗೆ ನೀಡಿದರು. ಈ ಹಿನ್ನೆಲೆಯಲ್ಲಿ ಭಾರತ 5 ಯೋಧರನ್ನು ಗಸ್ತಿಗಾಗಿ ಕಳುಹಿಸಿದಾಗ, ಪಾಕ್‌ ಐವರನ್ನೂ ನಿಷ್ಕರುಣೆಯಿಂದ ಕೊಂದು ಹಾಕಿತು. ಇದರಿಂದ ಕೆರಳಿದ ಭಾರತ ಸರ್ಕಾರ, ಕೂಡಲೇ ಪಾಕಿಸ್ತಾನಿ ನುಸುಳುಕೋರರನ್ನು ದೇಶದ ಸೀಮೆಯಿಂದ ಹೊರಗಟ್ಟಲು 20,000 ಯೋಧರನ್ನು ಸಜ್ಜುಗೊಳಿಸಿತು.
ಈ ಕಾರ್ಯಾಚರಣೆಗೆ ‘ಆಪರೇಶನ್‌ ವಿಜಯ್‌’ ಎಂದು ಹೆಸರಿಡಲಾಯಿತು.
ಆದ್ದರಿಂದ ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಪರೇಷನ್ ವಿಜಯ್ ಎಂದೂ ಕರೆಯಲಾಗುತ್ತದೆ.

ಭಾರತದಲ್ಲಿ ಈ ವರ್ಷ ಕಾರ್ಗಿಲ್ ವಿಜಯ್ ದಿವಸ್‌ನ 23ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಭಾರತೀಯ ಸೇನೆಯು ದೆಹಲಿಯಿಂದ ಕಾರ್ಗಿಲ್ ವಿಜಯ್ ದಿವಸ್ ಮೋಟಾರ್ ಬೈಕ್ ಯಾತ್ರೆಗೆ ಚಾಲನೆ ನೀಡುತ್ತದೆ. ಯುದ್ಧ ಸ್ಮಾರಕದಲ್ಲಿ ಧ್ವಜಾರೋಹಣ ಸಮಾರಂಭಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ವೇಳೆ ಹುತಾತ್ಮ ಯೋಧರ ಕುಟುಂಬಗಳನ್ನು ಆಹ್ವಾನಿಸಲಾಗುತ್ತದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ನೃತ್ಯ ಪ್ರದರ್ಶನ, ದೇಶಭಕ್ತಿ ಗೀತೆ ಮತ್ತು ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತದೆ.

ಇಂದು ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ, ನಮ್ಮ ಕೆಚ್ಚೆದೆಯ ಯೋಧರನ್ನು ಸ್ಮರಿಸುತ್ತಾ, ನಾವು ನಮ್ಮನ್ನು ಮತ್ತು ನಮ್ಮ ಕರ್ತವ್ಯಗಳನ್ನು ರಾಷ್ಟ್ರಕ್ಕಾಗಿ ಸಮರ್ಪಿಸೋಣ.
ಮಳೆ , ಗಾಳಿ ,ಚಳಿ ಎನ್ನದೇ ನಿದ್ರೆ ಮತ್ತು ವಿಶ್ರಾಂತಿ ಇಲ್ಲದೆ ದೇಶವನ್ನು ರಕ್ಷಿಸುವ ಎಲ್ಲಾ ವೀರ ಸೈನಿಕರಿಗೆ ಗೌರವ ಸಲ್ಲಿಸೋಣ.

ಶಂಕಿತ ಉಗ್ರಗಾಮಿ ಬೆಂಗಳೂರಿನಲ್ಲಿ ಸೆರೆ

0

ರಾಜಧಾನಿಯಲ್ಲಿ ನೆಲೆಸಿದ್ದ ಶಂಕಿತ ಉಗ್ರಗಾಮಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಅಖ್ತರ್ ಹುಸೇನ್ ಲಷ್ಕರ್ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಸಿಸಿಬಿಯ 30 ಅಧಿಕಾರಿಗಳ ತಂಡ ತಿಲಕ್ ನಗರದ ಮನೆ ಮೇಲೆ ದಾಳಿ ಮಾಡಿದೆ.

ಫುಡ್ ಡೆಲಿವರಿ ಮಾಡುತ್ತಿದ್ದ ಹುಡುಗನ ಮನೆಯಲ್ಲಿಯೇ ತಂಗಿದ್ದ ಉಗ್ರನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.

ಈ ಸಂಬಂಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಆರೋಪಿಯ ಹಿನ್ನೆಲೆ, ಆತ ಯಾಕೆ ಬೆಂಗಳೂರಿಗೆ ಬಂದಿದ್ದ ಎಂಬುದರ ಬಗ್ಗೆ ಸಿಸಿಬಿ ತನಿಖೆಯಲ್ಲಿ ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

ಬೆಂಗಳೂರಿನ ಶ್ರೀರಾಂಪುರದಲ್ಲಿ ಕೆಲ ದಿನಗಳ ಹಿಂದೆ ಉಗ್ರಗಾಮಿ ಪತ್ತೆಯಾಗಿದ್ದ. ಕಾಶ್ಮೀರ ಮೂಲದ ಉಗ್ರಗಾಮಿ ಬೆಂಗಳೂರಿನ ಮಸೀದಿಯಲ್ಲಿ ತಂಗಿದ್ದ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾಶ್ಮೀರ ಪೊಲೀಸರು ಮತ್ತು ಬೆಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಈ ವೇಳೆ ಹಲವು ಸ್ಫೋಟಕ ಸಂಗತಿಗಳು ಹೊರ ಬಂದಿದ್ದವು. ಇದೀಗ ಮತ್ತೊಬ್ಬ ಉಗ್ರಗಾಮಿ ಬೆಂಗಳೂರಿನ ತಿಲಕ್ ನಗರದಲ್ಲಿ ಪತ್ತೆಯಾಗಿದ್ದು, ಬೆಂಗಳೂರು ಉಗ್ರಗಾಮಿಗಳ ಪಾಲಿಗೆ ಸ್ಲೀಪರ್ ಸೆಲ್ ಅಗಿದೆಯೇ ಎಂಬ ಅನುಮಾನ ಮೂಡಿಸಿದೆ.

ಹೆಣ್ಣುಮಕ್ಕಳು ಯಾರಿಗೂ ಹೊರೆಯಾಗುವುದಿಲ್ಲ-ಸುಪ್ರೀಂ ಕೋರ್ಟ್

0

ತಂದೆಯೊಬ್ಬರು ಮಗಳಿಗೆ ಜೀವನಾಂಶ ನೀಡಿದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೆಣ್ಣುಮಕ್ಕಳು ಯಾರಿಗೂ ಹೊರೆಯಾಗುವುದಿಲ್ಲ ಎಂದು ತಿಳಿಸಿದೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ಪೀಠವು ಶುಕ್ರವಾರ ತಂದೆಯ ಪರ ವಕೀಲರು ಮಹಿಳೆ ಹೊರೆಯಾಗಿದ್ದಾಳೆ ಎಂದು ಹೇಳಿದ ಬಳಿಕ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿ ಚಂದ್ರಚೂಡ್ ಅವರು ಸಂವಿಧಾನದ 14ನೇ ವಿಧಿಯನ್ನು ಉಲ್ಲೇಖಿಸುವಾಗ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ಅನುಚ್ಛೇದವು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಖಾತರಿಪಡಿಸುತ್ತದೆ. ಈ ಪ್ರಕರಣದಲ್ಲಿ, ಸಂಬಂಧಪಟ್ಟ ಮಗಳು ವಕೀಲೆಯಾಗಿದ್ದಾಳೆ. ಅವಳು ನ್ಯಾಯಾಂಗ ಸೇವೆಯ ಪ್ರಾಥಮಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ ಎಂದು ಶುಕ್ರವಾರ ನ್ಯಾಯಪೀಠಕ್ಕೆ ತಿಳಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಮಹಿಳೆ ತನ್ನ ತಂದೆಯ ಮೇಲೆ ಅವಲಂಬಿತವಾಗದಂತೆ ತನ್ನ ಪರೀಕ್ಷೆಯ ಮೇಲೆ ಗಮನ ಹರಿಸಬೇಕು ಎಂದು ಹೇಳಿದೆ.

ಆಗಸ್ಟ್ ವೇಳೆಗೆ ಮಗಳಿಗೆ 50,000 ರೂ.ಗಳನ್ನು ಪಾವತಿಸುವಂತೆ ನ್ಯಾಯಪೀಠವು ತಂದೆಗೆ ಆದೇಶಿಸಿದೆ

ಪ್ರಕೃತಿ ಮಾತೆ ತೀವ್ರ ಸಂಕಷ್ಟದಲ್ಲಿದ್ದಾಳೆ- ರಾಮನಾಥ್ ಕೋವಿಂದ್

0

ಪ್ರಕೃತಿ ಮಾತೆ ತೀವ್ರ ಸಂಕಟದಲ್ಲಿದ್ದಾಳೆ. ಹವಾಮಾನ ಬಿಕ್ಕಟ್ಟು ಈ ಗ್ರಹದ ಭವಿಷ್ಯವನ್ನೇ ಅಪಾಯಕ್ಕೀಡು ಮಾಡಬಹುದು ಎಂದು ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನಿನ್ನೆ ಭಾನುವಾರ ದೇಶವನ್ನು ಉದ್ದೇಶಿಸಿ ವಿದಾಯದ ಭಾಷಣ ಮಾಡಿದ್ದಾರೆ.

ಅವರು ಮುಂದೆ ಬರುವ ಪೀಳಿಗೆಗೆ ಪರಿಸರವನ್ನು ರಕ್ಷಿಸಲು ಎಲ್ಲರಿಗೂ ಮನವಿ ಮಾಡಿಕೊಂಡಿದ್ದಾರೆ.

21 ನೇ ಶತಮಾನವನ್ನು ಭಾರತದ ಶತಮಾನ ಮಾಡಲು ದೇಶವು ಸಜ್ಜಾಗುತ್ತಿದೆ. ಆರ್ಥಿಕ ಸುಧಾರಣೆಗಳ ಜೊತೆಗೆ ನಾಗರಿಕರು ತಮ್ಮ ಸಾಮರ್ಥ್ಯವನ್ನು ಕಂಡುಕೊಳ್ಳುವ ಮೂಲಕ ಸಂತೋಷವನ್ನು ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ಕೋವಿಂದ್ ಅವರು ತಿಳಿಸಿದ್ದಾರೆ.

ರಾಷ್ಟ್ರವನ್ನುದ್ದೇಶಿಸಿ ರಾಮನಾಥ್ ಕೋವಿಂದ್ ಅವರು, ಒಮ್ಮೆ ಶಿಕ್ಷಣ ಹಾಗೂ ಆರೋಗ್ಯವು ಜಾರಿಯಾದರೆ, ಆರ್ಥಿಕ ಸುಧಾರಣೆಗಳು ನಾಗರಿಕರು ತಮ್ಮ ಜೀವನಕ್ಕೆ ಉತ್ತಮ ಮಾರ್ಗವನ್ನು ಕಂಡುಕೊಳ್ಳಲು ಅನುವು ಮಾಡಿಕೊಡುತ್ತದೆ. ನಮ್ಮ ದೇಶವು 21 ನೇ ಶತಮಾನವನ್ನು ಭಾರತದ ಶತಮಾನವನ್ನಾಗಿ ಮಾಡಲು ಸಜ್ಜುಗೊಳ್ಳುತ್ತಿದೆ ಎಂದು ನಾನು ದೃಢವಾಗಿ ನಂಬುತ್ತೇನೆ ಎಂದು ಹೇಳಿದ್ದಾರೆ.

ಪ್ರಕೃತಿ ತಾಯಿಯು ಸಂಕಟದಲ್ಲಿದ್ದಾಳೆ. ನಾವು ನಮ್ಮ ಪರಿಸರ, ನಮ್ಮ ಭೂಮಿ, ಗಾಳಿ ಮತ್ತು ನೀರನ್ನು ನಮ್ಮ ಮಕ್ಕಳ ಸಲುವಾಗಿ ಕಾಳಜಿ ವಹಿಸಬೇಕು. ನಮ್ಮ ದೈನಂದಿನ ಜೀವನದಲ್ಲಿ ಹಾಗೂ ದಿನನಿತ್ಯದ ಆಯ್ಕೆಗಳಲ್ಲಿ, ನಮ್ಮ ಮರಗಳು, ನದಿಗಳು, ಸಮುದ್ರಗಳು ಹಾಗೂ ಪರ್ವತಗಳ ಜೊತೆಗೆ ಇತರ ಎಲ್ಲಾ ಜೀವಿಗಳನ್ನು ರಕ್ಷಿಸಲು ನಾವು ಹೆಚ್ಚು ಜಾಗರೂಕರಾಗಿರಬೇಕು ಎಂದು ತಿಳಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಕ್ರಿಕೆಟ್ ಏಕದಿನ ಸರಣಿಭಾರತದ ಮಡಿಲಿಗೆ

0

ವೆಸ್ಟ್‌ಇಂಡೀಸ್‌ ತಂಡ ನೀಡಿದ ಬೃಹತ್‌ ಗುರಿಯನ್ನ ಬೆನ್ನತ್ತಿ ಎರಡನೇ ಪಂದ್ಯದಲ್ಲಿ ಗೆಲ್ಲುವ ಮುಖಾಂತರ ಭಾರತ ತಂಡ ಸರಣಿಯನ್ನ ಕೈವಶ ಮಾಡಿಕೊಂಡಿದೆ.

ಇದರ ಜೊತೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆಯನ್ನ ಸಾಧಿಸಿದೆ.

ಆತಿಥೇಯರ ವಿರುದ್ಧ ಮೊದಲನೇ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾಸದಲ್ಲಿದ್ದ ಟೀಂ ಇಂಡಿಯಾಗೆ ಕೆರಿಬಿಯನ್ನರು 311 ರನ್‌ಗಳ ಬೃಹತ್‌ ಟಾರ್ಗೆಟ್‌ ನೀಡಿದ್ದರು. ಆದರೆ, ಮೊದಲ ಪಂದ್ಯದಲ್ಲಿ 97 ರನ್‌ ಗಳಿಸಿದ್ದ ನಾಯಕ ಶಿಖರ್‌ ಧವನ್‌ ಇಂದಿನ ಪಂದ್ಯದಲ್ಲಿ ಕೇವಲ 13 ರನ್‌ ಗಳಿಸಿ ಔಟಾಗಿದ್ದರು. ಬಳಿಕ ಬಂದ ಶ್ರೇಯಸ್‌ ಅಯ್ಯರ್‌(63), ಶುಭಮನ್‌ ಗಿಲ್‌(43) ಸಂಜು ಸ್ಯಾಮನ್ಸನ್‌(54), ದೀಪಕ್‌ ಹೂಡಾ(33) ಮತ್ತು ಅಕ್ಸರ್‌ ಪಟೇಲ್‌(64) ಅವರ ಜವಾಬ್ದಾರಿ ಆಟದಿಂದ ಟೀಂ ಇಂಡಿಯಾ ಗೆಲುವನ್ನು ಸಾಧಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ್ದ ವಿಂಡೀಸ್‌ ತಂಡದ ಪರ ಶಾಯ್ ಹೋಪ್‌ ಆಕರ್ಷಕ 115 ರನ್‌ ಗಳಿಸಿ ಶತಕದ ಸಂಭ್ರಮಪಟ್ಟಿದ್ದರು. ಬಳಿಕ ಬಂದ ಶಮರ್ ಬ್ರೂಕ್ಸ್(35), ಕೆ ಮೇಯರ್ಸ್(39) ಹಾಗೂ ಪೂರನ್‌ 75 ರನ್‌ ಸೇರಿದಂತೆ ಉಳಿದ ಆಟಗಾರರು ತಂಡಕ್ಕೆ ನೀಡಿದ ರನ್‌ ಕೊಡುಗೆಯಿಂದ ವಿಂಡೀಸ್‌ ತಂಡ ಅಂತಿಮವಾಗಿ 6 ವಿಕೆಟ್‌ ಕಳೆದುಕೊಂಡು 311 ರನ್‌ಗಳ ಗುರಿಯನ್ನ ಭಾರತಕ್ಕೆ ನೀಡಿತ್ತು.

ಭಾರತದ ಪರ ಶಾರ್ದೂಲ್ ಠಾಕೂರ್‌ 3, ದೀಪಕ್‌ ಹೂಡಾ, ಅಕ್ಸರ್‌ ಪಟೇಲ್‌ ಹಾಗೂ ಯಜುವೇಂದ್ರ ಚಹಾಲ್‌ ತಲಾ ಒಂದು ವಿಕೆಟ್‌ ಕಬಳಿಸಿದ್ದರು. ಇನ್ನು ವಿಂಡೀಸ್‌ ತಂಡದ ಪರ ಅಲ್ಜಾರಿ ಜೋಸೆಫ್(2), ಕೈಲ್ ಮೇಯರ್ಸ್(2) ರೊಮಾರಿಯೋ ಶೆಫರ್ಡ್ ಹಾಗೂ ಕೈಲ್ ಮೇಯರ್ಸ್ ತಲಾ 1 ವಿಕೆಟ್‌ ಪಡೆದು ಸಂಭ್ರಮಿಸಿದರು. 3 ಹಾಗೂ ಅಂತಿಮ ಏಕದಿನ ಪಂದ್ಯ ಜು.27 ರಂದು ಟ್ರಿನಿಡ್ಯಾಡ್‌ನಲ್ಲಿ ನಡೆಯಲಿದೆ.

ಏಷ್ಯ ಸೂಪರ್ ಪವರ್ ಚೀನಾಕ್ಕೆ ರಿಷಿ ಸುನಕ್ ಟಾಂಗ್

0

ಏಷ್ಯಾ ಖಂಡದ ಸೂಪರ್ ಪವರ್ ಆಗಿರುವ ಚೀನಾ, ಬ್ರಿಟನ್ ಸೇರಿದಂತೆ ವಿಶ್ವದ ಸುರಕ್ಷತೆಗೆ ಬಹುದೊಡ್ಡ ಬೆದರಿಕೆ ಎಂದಿರುವ ರಿಷಿ ಸುನಕ್, ಒಂದೊಮ್ಮೆ ತಾವು ಮುಂದಿನ ಬ್ರಿಟನ್ ಪ್ರಧಾನ ಮಂತ್ರಿಯಾದಲ್ಲಿ ಚೀನಾ ವಿರುದ್ಧ ಕಠಿಣ ನಿಲುವು ತಳೆಯುವುದಾಗಿ ತಿಳಿಸಿದ್ದಾರೆ. ಬ್ರಿಟನ್ ಪ್ರಧಾನಿ ಹುದ್ದೆಗೆ ನಡೆಯುತ್ತಿರುವ ಚುನಾವಣೆಯ ಕೊನೆಯ ಎರಡು ಹಂತಗಳಲ್ಲಿ ಅಧಿಕಾರಾರೂಢ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿ ಲಿಜ್ ಟ್ರಸ್ ಮುನ್ನಡೆ ಸಾಧಿಸಿದ್ದಾರೆ. ರಿಷಿ ಸುನಕ್ ಚೀನಾ ಹಾಗೂ ರಷ್ಯಾ ಬಗ್ಗೆ ಮೃದು ನಿಲುವು ಹೊಂದಿದ್ದಾರೆ ಎಂದು ಟ್ರಸ್ ಆರೋಪಿಸಿದ ನಂತರ ಸುನಕ್ ಈ ಬಗ್ಗೆ ತಿರುಗೇಟು ನೀಡಿದ್ದಾರೆ.

ಪ್ರಸಕ್ತ ಬ್ರಿಟನ್ ಚುನಾವಣೆಯಲ್ಲಿ, ಯುಕೆ-ಚೀನಾ ಸಂಬಂಧಗಳನ್ನು ಅಭಿವೃದ್ಧಿಪಡಿಸುವಲ್ಲಿ ಸ್ಪಷ್ಟ ಮತ್ತು ಪ್ರಾಯೋಗಿಕ ದೃಷ್ಟಿಕೋನ ಹೊಂದಿರುವ ಏಕೈಕ ನಾಯಕ ರಿಷಿ ಸುನಕ್ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ​ ಹೊಗಳಿತ್ತು.

ಬ್ರಿಟನ್​ನಲ್ಲಿ ಇರುವ 30 ಕನ್ಫೂಷಿಯಸ್ ಇನ್​ಸ್ಟಿಟ್ಯೂಟ್​ಗಳನ್ನು ಮುಚ್ಚುವುದು ಮತ್ತು ಆ ಮೂಲಕ ಬ್ರಿಟನ್​ನಲ್ಲಿ ಚೀನಾ ಸಂಸ್ಕೃತಿ ಹಾಗೂ ಭಾಷಾ ಕಾರ್ಯಕ್ರಮಗಳ ಮೂಲಕ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುವುದನ್ನು ತಡೆಗಟ್ಟುವ ಪ್ರಸ್ತಾವನೆಗಳನ್ನು ಸುನಕ್ ಮುಂದಿಟ್ಟಿದ್ದಾರೆ. ಚೀನಾ ಕಮ್ಯುನಿಸ್ಟ್ ಪಾರ್ಟಿಯನ್ನು ಬ್ರಿಟನ್​ನ ವಿಶ್ವವಿದ್ಯಾಲಯಗಳಿಂದ ಒದ್ದೋಡಿಸುವುದಾಗಿಯೂ ಸುನಕ್ ಆಶ್ವಾಸನೆ ನೀಡಿದ್ದಾರೆ. ಇದಕ್ಕಾಗಿ 60 ಸಾವಿರ ಡಾಲರ್​ ಮೊತ್ತದ ವಿದೇಶಿ ಫಂಡಿಂಗ್ ಮತ್ತು ಸಂಶೋಧನಾ ಒಡಂಬಡಿಕೆಗಳ ಬಗೆಗಿನ ಮಾಹಿತಿಯನ್ನು ವಿಶ್ವವಿದ್ಯಾಲಯಗಳು ಬಹಿರಂಗಗೊಳಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಚೀನಾದ ಬೇಹುಗಾರಿಕೆಯನ್ನು ತಡೆಗಟ್ಟಲು ಬ್ರಿಟನ್​ನ ಆಂತರಿಕ ಗುಪ್ತಚರ ಸಂಸ್ಥೆ MI5 ನೆರವು ಪಡೆಯುವುದು, ಸೈಬರ್​ ಕ್ಷೇತ್ರದಲ್ಲಿ ಚೀನಾದಿಂದ ಸಂಭಾವ್ಯ ದಾಳಿಗಳನ್ನು ಎದುರಿಸಲು ನ್ಯಾಟೊ ಮಾದರಿಯ ಅಂತಾರಾಷ್ಟ್ರೀಯ ಸಹಕಾರ ಒಕ್ಕೂಟ ಸ್ಥಾಪಿಸುವುದು, ರಕ್ಷಣಾ ದೃಷ್ಟಿಯಿಂದ ಸೂಕ್ಷ್ಮ ತಂತ್ರಜ್ಞಾನ ಸಂಸ್ಥೆಗಳು ಸೇರಿದಂತೆ ಬ್ರಿಟನ್​ನ ಪ್ರಮುಖ ಸಂಸ್ಥೆಗಳನ್ನು ಚೀನಾ ವಶಪಡಿಸಿಕೊಳ್ಳುವುದನ್ನು ತಡೆಗಟ್ಟುವುದು ಇವೇ ಮುಂತಾದ ಕ್ರಮಗಳನ್ನು ತಾವು ಕೈಗೊಳ್ಳುವುದಾಗಿ ಸುನಕ್ ಇಂಗಿತ ವ್ಯಕ್ತಪಡಿಸಿದ್ದಾರೆ.

ಚೀನಾ ನಮ್ಮ ತಂತ್ರಜ್ಞಾನವನ್ನು ಕದಿಯುತ್ತಿದೆ ಮತ್ತು ನಮ್ಮ ವಿಶ್ವವಿದ್ಯಾನಿಲಯಗಳನ್ನು ವಶಪಡಿಸಿಕೊಳ್ಳುತ್ತಿದೆ ಎಂದು ಸುನಕ್ ಪ್ರತಿಪಾದಿಸಿದ್ದಾರೆ.

ರಷ್ಯಾದ ತೈಲವನ್ನು ಖರೀದಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಲಾದಿಮಿರ್ ಪುಟಿನ್ ಅವರನ್ನು ಮೇಲಕ್ಕೆತ್ತಲು ನೋಡುತ್ತಿದೆ. ತೈವಾನ್ ಸೇರಿದಂತೆ ನೆರೆಹೊರೆ ರಾಷ್ಟ್ರಗಳನ್ನು ಬೆದರಿಸಲು ಚೀನಾ ಪ್ರಯತ್ನಿಸುತ್ತಿದೆ ಎಂದು ಸುನಕ್ ಅವರುಹೇಳಿದ್ದಾರೆ.

ಬ್ರಿಟನ್ ಪ್ರಧಾನಿ ಹುದ್ದೆಗೆ ಪೈಪೋಟಿ ಜೋರಾಗಿದ್ದು, ಸೆಪ್ಟೆಂಬರ್ 5 ರಂದು ಅಂತಿಮ ಫಲಿತಾಂಶ ಹೊರಬೀಳಲಿದೆ.

ರಾಷ್ಟ್ರಪತಿ ಹುದ್ದೆ ನನ್ನ ಸಾಧನೆಯಲ್ಲ ಅದು ಭಾರತದ ಬಡವರ ಸಾಧನೆ – ದ್ರೌಪದಿ ಮುರ್ಮು

0

ದೇಶದ 15ನೇ ರಾಷ್ಟ್ರಪತಿಯಾಗಿ, ಅತ್ಯುನ್ನತ ಸಂವಿಧಾನದ ಹುದ್ದೆ ಏರಿದ ಪ್ರಥಮ ಬುಡಕಟ್ಟು ಜನಾಂಗದ ಮಹಿಳೆಯಾಗಿ ಮತ್ತು ರಾಷ್ಟ್ರಪತಿ ಹುದ್ದೆಯ ಸ್ಥಾನಕ್ಕೇರಿದ 2ನೇ ಮಹಿಳೆಯಾಗಿ ಸಂಸತ್ತಿನ ಸೆಂಟ್ರಲ್ ಸಭಾಂಗಣದಲ್ಲಿ ಇಂದು ಪ್ರಮಾಣ ವಚನ ಸ್ವೀಕರಿಸಿದ ನಂತರ ದ್ರೌಪದಿ ಮುರ್ಮು ಐತಿಹಾಸಿಕ ಭಾಷಣ ಮಾಡಿದ್ದಾರೆ.

ಇಂದು ಎಲ್ಲಾ ಭಾರತೀಯರ ನಿರೀಕ್ಷೆಗಳು, ಆಕಾಂಕ್ಷೆಗಳು ಮತ್ತು ಹಕ್ಕುಗಳ ಸಂಕೇತವಾಗಿರುವ ಸಂಸತ್ತಿನಲ್ಲಿ ನಿಂತುಕೊಂಡು ನಾನು ನಿಮ್ಮೆಲ್ಲರಿಗೂ ವಿನಮ್ರವಾಗಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಈ ಹೊಸ ಜವಾಬ್ದಾರಿಯನ್ನು ನಿರ್ವಹಿಸಲು ನಿಮ್ಮ ನಂಬಿಕೆ ಮತ್ತು ಬೆಂಬಲ ನನಗೆ ಪ್ರಮುಖ ಶಕ್ತಿಯಾಗಿದೆ ಎಂದು ಮೊದಲ ನುಡಿಯನ್ನಾಡಿದರು.

ಸ್ವತಂತ್ರ ಭಾರತದಲ್ಲಿ ಜನಿಸಿದ ದೇಶದ ಮೊದಲ ರಾಷ್ಟ್ರಪತಿ ನಾನು. ಸ್ವತಂತ್ರ ಭಾರತದ ನಾಗರಿಕರೊಂದಿಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹೊಂದಿದ್ದ ನಿರೀಕ್ಷೆಗಳನ್ನು ಪೂರೈಸಲು ನಾವು ನಮ್ಮ ಪ್ರಯತ್ನಗಳನ್ನು ವೇಗಗೊಳಿಸಬೇಕಾಗಿದೆ ಎಂದರು.

ರಾಷ್ಟ್ರಪತಿ ಹುದ್ದೆ ತಲುಪಿದ್ದು ನನ್ನ ವೈಯಕ್ತಿಕ ಸಾಧನೆಯಲ್ಲ. ಇದು ಭಾರತದ ಪ್ರತಿಯೊಬ್ಬ ಬಡವರ ಸಾಧನೆ. ನನ್ನ ನಾಮನಿರ್ದೇಶನವು ಭಾರತದಲ್ಲಿನ ಬಡವರ ಕನಸುಗಳನ್ನು ನನಸಾಗಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ವರ್ಷಗಟ್ಟಲೆ ಅಭಿವೃದ್ಧಿ ಕಾಣದ ಬಡವರು, ದಲಿತರು, ಹಿಂದುಳಿದವರು, ಗಿರಿಜನರು- ನನ್ನನ್ನು ತಮ್ಮ ಪ್ರತಿಬಿಂಬವಾಗಿ ನೋಡುತ್ತಾರೆ ಎಂಬ ತೃಪ್ತಿ ನನಗಿದೆ. ನನ್ನ ನಾಮನಿರ್ದೇಶನದ ಹಿಂದೆ ಬಡವರ ಆಶೀರ್ವಾದವಿದೆ, ಇದು ಕೋಟಿಗಟ್ಟಲೆ ಮಹಿಳೆಯರ ಕನಸುಗಳು ಮತ್ತು ಸಾಮರ್ಥ್ಯಗಳ ಪ್ರತಿಬಿಂಬವಾಗಿದೆ ಎಂದು ಕೂಡ ಪ್ರತಿಜ್ಞಾ ವಿಧಿ ಸ್ವೀಕಾರ ನಂತರ ಹೇಳಿದರು.

ಭಾರತದಲ್ಲಿ ಚಿರತೆ ಕುಲ ಚಿಗುರುತ್ತಿದೆ

0

ಚಿರತೆಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಭಾರತದಲ್ಲಿ ವನ್ಯಜೀವಿ ಸಂಪತ್ತಿನ ಅಭಿವೃದ್ಧಿಯಾಗುತ್ತಿದೆ.

ಅಳಿವಿನಂಚಿನ ಪ್ರಾಣಿಗಳು ಎಂದು ಘೋಷಣೆಯಾದ 70 ವರ್ಷಗಳ ನಂತರ ಪ್ರಥಮ ಬಾರಿಗೆ ದೇಶದ ಕಾಡುಗಳು ಚಿರತೆಗಳಿಗೆ ನೆಲೆಯಾಗುತ್ತಿವೆ.

ಅಳಿವಿನಂಚಿಗೆ ತಳ್ಳಲ್ಪಟ್ಟು ಸುಮಾರು 70 ವರ್ಷಗಳ ನಂತರ ಕೇಂದ್ರ ಸರ್ಕಾರವು ಚಿರತೆಯನ್ನು ಮತ್ತೆ ದೇಶದಲ್ಲಿ ಪರಿಚಯಿಸುವ ತನ್ನ ಯೋಜನೆಯನ್ನು ಇತ್ತೀಚೆಗಷ್ಟೇ ಘೋಷಿಸಿತ್ತು.

ಈ ವರ್ಷದ ಆಗಸ್ಟ್ ವೇಳೆಗೆ ಮಧ್ಯಪ್ರದೇಶದ ಕುನೋ-ಪಾಲ್ಪುರ್ ರಾಷ್ಟ್ರೀಯ ಉದ್ಯಾನವನಕ್ಕೆ ದಕ್ಷಿಣ ಆಫ್ರಿಕಾದಿಂದ ಚಿರತೆಗಳನ್ನು ತರಲು ಭಾರತ ಸಜ್ಜಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ತಿಂಗಳ ಹಿಂದೆ ತಿಳಿಸಿತ್ತು.

ವಿಶ್ವದಲ್ಲಿ ಚಿರತೆಗಳ ಅತಿದೊಡ್ಡ ನೆಲೆ
ಪ್ರಸ್ತುತ ಕೇಂದ್ರ ಸರ್ಕಾರದ ಯೋಜನೆ ಸದ್ಯದಲ್ಲಿಯೇ ಸಾಕಾರಗೊಳ್ಳಲಿದೆ. ಅವುಗಳಲ್ಲಿ ಎಂಟು ಚಿರತೆ ಆಗಸ್ಟ್ ನಲ್ಲಿ ಆಫ್ರಿಕಾದ ನಮೀಬಿಯಾದಿಂದ ಬರಲಿವೆ, ನಮೀಬಿಯಾ ವಿಶ್ವದಲ್ಲಿ ಚಿರತೆಗಳ ಅತಿದೊಡ್ಡ ನೆಲೆಯಾಗಿದೆ.

ಮುಖ್ಯಮಂತ್ರಿಗಳ ಸಭೆಯಲ್ಲಿ ಬೊಮ್ಮಾಯಿ ಅವರ ಆಡಳಿತಕ್ಕೆ ಮೆಚ್ಚುಗೆ

0

ಕರ್ನಾಟಕ ಸರ್ಕಾರ ಜಾರಿಗೊಳಿಸಿದ ಹಲವು ಯೋಜನೆ ಗಳ ಬಗ್ಗೆ ಬಿಜೆಪಿ ಮುಖ್ಯಮಂತ್ರಿಗಳ ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಪಕ್ಷದ ಮುಖ್ಯ ಕಚೇರಿಯಲ್ಲಿ ನಿನ್ನೆ ಭಾನುವಾರ ಸಭೆ ನಡೆಸಿದರು.

ಸಭೆಯ ನಂತರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ ಅವರು, ಬಿಜೆಪಿ ಮುಖ್ಯಮಂತ್ರಿಗಳ ಸಭೆ ನಿಯಮಿತವಾಗಿ ನಡೆಯುತ್ತದೆ. ಕೇಂದ್ರ ಸರ್ಕಾರದ ಪ್ರಾಯೋಜಿತ ಕಲ್ಯಾಣ ಯೋಜನೆಗಳ ಕುರಿತು ಚರ್ಚಿಸ ಲಾಗುತ್ತದೆ. ಮುಂದಿನ ಸಭೆ ಅಕ್ಟೋಬರ್‌ನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಕಿಸಾನ್‌ ಸಮ್ಮಾನ್‌ ಯೋಜನೆ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ, ಐಟಿಐ ಮೇಲ್ದರ್ಜೆಗೆ ಏರಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಎಲ್ಲ ಯೋಜನೆಗಳ ಬಗ್ಗೆ ಪ್ರಧಾನಿ ಅವರು ಮಾಹಿತಿ ಪಡೆದರು ಎಂದು ತಿಳಿಸಿದ್ದಾರೆ.

ಕೆಲವು ಔಷಧಗಳ ಬೆಲೆ ಇಳಿಕೆಗೆ ಮುಂದಾದ ಕೇಂದ್ರ ಸರ್ಕಾರ

0

ಭಾರತದಲ್ಲಿ ಸಾಮಾನ್ಯ ಜನರಿಗೆ ಹೆಚ್ಚು ಹೊರೆಯಾಗಿರುವ ವೆಚ್ಚದಲ್ಲಿ ಔಷಧ ಪ್ರಮುಖವಾದದ್ದು. ಆಹಾರದಂತೆ ಔಷಧವೂ ಅಗತ್ಯವಸ್ತುವಾಗಿದೆ. ಸುದೀರ್ಘ ಕಾಲ ಔಷಧ ಸೇವಿಸುವ ರೋಗಿಗಳಿಗೆ ಪ್ರತಿ ತಿಂಗಳು ಹೆಚ್ಚು ಹಣ ಔಷಧಿಗೆಂದು ನೀಡುವುದಕ್ಕೆ ಜನರಿಗೆ ಕಷ್ಟವಾಗುತ್ತಿದೆ.

ಈ ಕಾರಣದಿಂದ ಕೇಂದ್ರ ಸರ್ಕಾರ ಕೆಲವೊಂದು ಪ್ರಮುಖ ಔಷಧಗಳ ಬೆಲೆ ಇಳಿಸಲು ಕ್ರಮವನ್ನು ಕೈಗೊಳ್ಳುವುದಕ್ಕೆ ಮುಂದಾಗಿದೆ.

ಕ್ಯಾನ್ಸರ್, ಡಯಾಬಿಟಿಸ್, ಹೃದ್ರೋಗ ಇನ್ನು ಅನೇಕ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಔಷಧ ಬಿಟ್ಟರೆ ಬೇರೆ ವಿಧಿ ಇಲ್ಲ. ಅಂತಹ ಪ್ರಮುಖ ಔಷಧಗಳ ಬೆಲೆ ಇಳಿಸುವಂತೆ ಸರ್ಕಾರ ಅನೇಕ ಕ್ರಮಗಳನ್ನು ರೂಪಿಸಿದೆ. ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.